ವಿಷಯಕ್ಕೆ ಹೋಗು

ಯೋಗೇಶ್ವರ್ ದತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Yogeshwar Dutt
ಯೋಗೇಶ್ವರ್ ದತ್
ವೈಯುಕ್ತಿಕ ಮಾಹಿತಿ
ಸ್ಥಳೀಯ ಹೆಸರುयोगेश्वर दत्त
ಅಡ್ಡ ಹೆಸರು(ಗಳು)Yogi, Pahalwan Ji[]
ರಾಷ್ರೀಯತೆIndian
ಜನನ (1982-11-02) ೨ ನವೆಂಬರ್ ೧೯೮೨ (ವಯಸ್ಸು ೪೨)
Bhainswal Kalan, Sonipat district, ಹರಿಯಾಣ[]
ನಿವಾಸಹರಿಯಾಣ
ಎತ್ತರ5 ft 6 in (1.68 m)
Sport
ದೇಶಭಾರತ
ಕ್ರೀಡೆWrestling
  • ಯೋಗೇಶ್ವರ್ ದತ್ (ಜನನ: 2ನವೆಂಬರ್ 1982) ಒಬ್ಬ ಭಾರತೀಯ ಫ್ರೀಸ್ಟೈಲ್ ಕುಸ್ತಿಪಟು. 2012 ಬೇಸಿಗೆ ಒಲಿಂಪಿಕ್ಸ್, ಅವರು 60 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಕೊನೆಯಲ್ಲಿ ಃesiಞ ಏuಜuಞhov Wಂಆಂ ಬೆಸಿಕ್ ಕುಡುಕೊವ್ ನಡೆಸಿದ ಪರೀಕ್ಷೆಯಲ್ಲಿ ನಿಷೇಧಿತ ವಸ್ತು ಬಳಸಿದ್ದಾರೆ ಕಂಡುಬಂದ ನಂತರ ಅವರ ಪದಕವನ್ನು ಬೆಳ್ಳಿ ಪದಕಕ್ಕೆ [3] ಮೇಲ್ದರ್ಜೆಗೇರಿಸಲಾಯಿತು. ಆಗಸ್ಟ್ 2016, 31 ರ ಅವರ ಟ್ವೀಟ್ ಮೂಲಕ ದತ್ ದೃಢಪಡಿಸಿದರು. [4] ಇವರಿಗೆ 2013ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಭಾರತ ಸರ್ಕಾರದಿಂದ ನೀಡಲಾಯಿತು. ನೀಡಲಾಯಿತು.. 2014 ರಲ್ಲಿ ಕಾಮನ್ವೆಲ್ತ್ ಗೇಮ್ಸ್ [5] ನಲ್ಲಿ ಅವರು ಚಿನ್ನದ ಪದಕ ಗಳಿಸಿದರು. []

[] [] [] []

ಬೇಸಿಗೆ ಒಲಿಂಪಿಕ್ಸ್ 2012 ರಲ್ಲಿ ಬೆಳ್ಳಿ

[ಬದಲಾಯಿಸಿ]
  • ಭಾರತದ ಪೈಲ್ವಾನ್‌ ಯೋಗೇಶ್ವರ್‌ ದತ್ ಅವರು 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪಡೆದ ಗೌರವಕ್ಕೆ ಪಾತ್ರರಾಗಿದ್ದಾರೆ.
  • ಈ ಕೂಟದ ಪುರುಷರ 60 ಕೆ.ಜಿ. ಫ್ರೀಸ್ಟೈಲ್‌ನಲ್ಲಿ ಯೋಗೇಶ್ವರ್‌ ದತ್‌ ಕಂಚು ಗೆದ್ದಿದ್ದರು. ಆದರೆ ಎರಡನೇ ಸ್ಥಾನಗಳಿಸಿದ್ದ ರಷ್ಯಾದ ಪೈಲ್ವಾನ್‌ ಬೆಸಿಕ್‌ ಕುದುಕೊವ್‌ ಅವರು ಉದ್ದೀಪನಾ ಮದ್ದು ಸೇವಿಸಿದ್ದು ಸಾಬೀತಾಗಿರುವ ಕಾರಣ ಭಾರತದ ಕುಸ್ತಿಪಟುವಿಗೆ ಎರಡನೇ ಸ್ಥಾನಕ್ಕೆ ಬಡ್ತಿ ನೀಡಲು ಪರಿಗಣಿಸಲಾಗಿದೆ. ಇದರೊಂದಿಗೆ ಯೋಗೇಶ್ವರ್‌ ಅವರು ಸುಶೀಲ್‌ ಕುಮಾರ್‌ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ. ಇದೇ ಕೂಟದಲ್ಲಿ ಸುಶೀಲ್‌ ಕೂಡ ಬೆಳ್ಳಿ ಜಯಿಸಿದ್ದರು. ಲಂಡನ್‌ ಒಲಿಂಪಿಕ್ಸ್‌ನ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಯೋಗೇಶ್ವರ್‌ ಅವರು ಕುದುಕೊವ್‌ ವಿರುದ್ಧ ಸೋಲು ಕಂಡಿದ್ದರು.
  • ಆದರೆ ರಷ್ಯಾದ ಪೈಲ್ವಾನ್‌ ಫೈನಲ್‌ ಪ್ರವೇಶಿಸಿದ್ದರಿಂದ ಭಾರತದ ಕುಸ್ತಿಪಟುಗೆ ‘ರೆಪೆಚೇಜ್‌’ ಸುತ್ತಿನಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಇದನ್ನು ಸದು ಪಯೋಗಪಡಿಸಿಕೊಂಡಿದ್ದ ಯೋಗೇಶ್ವರ್ ಕಂಚಿಗೆ ಮುತ್ತಿಕ್ಕಿದ್ದರು. ನಾಲ್ಕು ಬಾರಿಯ ವಿಶ್ವ ಚಾಂಪಿಯನ್‌ ಮತ್ತು ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಕುದುಕೊವ್‌ ಅವರು 2013ರಲ್ಲಿ ನಡೆದ ಕಾರು ಅಪ ಘಾತದಲ್ಲಿ ನಿಧನ ರಾಗಿದ್ದರು. ಒಲಿಂಪಿಕ್ಸ್‌ ಬಳಿಕ ಅವರ ಮೂತ್ರದ ಮಾದರಿಯನ್ನು ಸಂಗ್ರಹಿಸಿದ್ದ ವಿಶ್ವ ಉದ್ದೀಪನಾ ಮದ್ದು ತಡೆ ಘಟಕ (ವಾಡಾ) ಅದನ್ನು ಪರೀಕ್ಷೆಗೆ ಒಳಪಡಿಸಿತ್ತು. ಪರೀಕ್ಷೆಯ ವೇಳೆ ರಷ್ಯಾದ ಕುಸ್ತಿಪಟುವಿನ ಮೂತ್ರದ ಮಾದರಿಯಲ್ಲಿ ನಿಷೇಧಿತ ಉದ್ದೀಪನಾ ಮದ್ದಿನ ಅಂಶ ಪತ್ತೆಯಾಗಿತ್ತು. ಹೀಗಾಗಿ ಅವರು ಗೆದ್ದ ಪದಕವನ್ನು ಹಿಂದಕ್ಕೆ ಪಡೆಯಲಾಗಿದೆ.
  • ಯುನೈಟೆಡ್‌ ವರ್ಲ್ಡ್‌ ರೆಸ್ಲಿಂಗ್‌ (ಯುಡಬ್ಲ್ಯುಡಬ್ಲ್ಯು) ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿಯಿಂದ ಈ ಕುರಿತು ಅಂತಿಮ ಪ್ರಕಟಣೆ ಹೊರಬೀಳಬೇಕಿದೆ. ಈ ಸಂಬಂಧ ಯುನೈಟೆಡ್‌ ವರ್ಲ್ಡ್‌ ರೆಸ್ಲಿಂಗ್‌ (ಯುಡಬ್ಲ್ಯುಡಬ್ಲ್ಯು) ಭಾರತ ಕುಸ್ತಿ ಫೆಡರೇಷನ್‌ಗೆ (ಡಬ್ಲ್ಯುಎಫ್‌ಐ) ಲಿಖಿತ ಪತ್ರ ಬರೆದು ತಿಳಿಸಿದ ಮೇಲೆ ಯೋಗೇಶ್ವರ್‌್ ಬೆಳ್ಳಿ ಪಡೆಯುವುದು ಖಚಿತವಾಗಲಿದೆ.[]

ಪ್ರಶಸ್ತಿ ಮತ್ತು ಕೊಡಿಗೆ

[ಬದಲಾಯಿಸಿ]
  • 2012 ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ;
  • ಹರಿಯಾನಾ ಸರ್ಕಾರದಿಂದ 1 ಕೋಟಿ ರೂ ಕೊಡಿಗೆ;
  • ರಾಜಸ್ಥಾನ ಸರ್ಕಾರದಿಂದ 50 ಲಕ್ಷ ರೂ.ಬಹುಮಾನ.

ಪದಕ ಸಾಧನೆ

[ಬದಲಾಯಿಸಿ]
ಕೂಟ ವರ್ಷ ಸ್ಥಳ ವಿಭಾಗ ಪದಕ
ಒಲಂಪಿಕ್ಸ್ 2012 ಲಂಡನ್ 60ಕಜಿ ಫ್ರೀ ಸ್ಟೈಲ್ ಬೆಳ್ಳಿ
ಏಷಿಯನ್ ಗೇಮ್ಸ್ 2014 ಇಂಚೆನ್ 65 ಕಜಿ ಫ್ರೀ ಸ್ಟೈಲ್ ಚಿನ್ನ
2006 ದೋಹಾ 60ಕಜಿ ಫ್ರೀ ಸ್ಟೈಲ್ ಕಂಚು
ಏಷಿಯನ್ ಛಾಂ.ಷಿಪ್ 2012 ಗುಮಿ 60ಕಜಿ ಫ್ರೀ ಸ್ಟೈಲ್ ಚಿನ್ನ
ಕಾಮನ್ ವೆಲ್ತ್ 2010 ದೆಹಲಿ 60ಕಜಿ ಫ್ರೀ ಸ್ಟೈಲ್ ಚಿನ್ನ
2014 ಗ್ಲಾಸ್ಕೊ 65ಕಜಿ ಫ್ರೀ ಸ್ಟೈಲ್ ಚಿನ್ನ
ಕಾಮನ್ ವೆಲ್ತ್ ಕುಸ್ತಿ 2007 ಲಂಡನ್ 60ಕಜಿ ಫ್ರೀ ಸ್ಟೈಲ್ ಚಿನ್ನ
2005 ಕೇಪ್ ಟೌನ್ 60ಕಜಿ ಫ್ರೀ ಸ್ಟೈಲ್ ಚಿನ್ನ
2003 ಲಂಡನ್ 60ಕಜಿ ಫ್ರೀ ಸ್ಟೈಲ್ ಚಿನ್ನ
2007 ಲಂಡನ್ 60ಕೆಜಿಗ್ರೀಕ್ ರೋಮನ್ ಬೆಳ್ಳಿ
2005 ಕೇಪ್ ಟೌನ್ 60ಕೆಜಿಗ್ರೀಕ್ ರೋಮನ್ ಬೆಳ್ಳಿ

[]


ಯೋಗೇಶ್ವರ್ ದತ್‍ಗೆ ಮದುವೆ

[ಬದಲಾಯಿಸಿ]
  • ಜನವರಿ 15, 2017
  • ಕುಸ್ತಿಪಟು ಯೋಗೇಶ್ವರ್ ದತ್ ಕುಸ್ತಿವಿಜೇತ, ವರದಕ್ಷಿಣೆ ವಿರೋಧಿ ಅಭಿಯಾನದಲ್ಲಿ , ಕೇವಲ 1 ರುಪಾಯಿ ವರದಕ್ಷಿಣೆ ತೆಗೆದುಕೊಂಡಿದ್ದಾರೆ.
  • ದತ್, ಎರಡು ಬಾರಿ ಏಷ್ಯನ್ ಗೇಮ್ಸ್ ಪದಕ ಪಡೆದವರು; ತನ್ನ ಮದುವೆಯ ವಧುವಿನ ಕುಟುಂಬದಿಂದ ರೂ.1 ಮಾತ್ರ 'ಒಂದು ಟೋಕನ್' ಆಗಿ ವರದಕ್ಷಿಣೆ ಪಡೆಯಲು ಇಷ್ಟಪಟ್ಟರು. ಅವರು- ಹರಿಯಾಣ ಕಾಂಗ್ರೆಸ್ ನಾಯಕ ಜಯಭಗವಾನ್ /Jaibhagwan ಶರ್ಮಾ ಅವರ ಮಗಳು ಶೀತಲ್ ಶರ್ಮಾರನ್ನು ವಿವಾಹವಾಗಿದ್ದಾರೆ.[೧೦]

ಪದಕ ಸಾಧನೆ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]