ವಿಷಯಕ್ಕೆ ಹೋಗು

ಮಿರ್ಚಿ ಭಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
'ಮಿರ್ಚಿ ಭಜಿ'
ಮಿರ್ಚಿ ಭಜಿ
ಚಿತ್ರ:MirchiBada.jpg
ಮೂಲ
ಪರ್ಯಾಯ ಹೆಸರು(ಗಳು)Mirchi bajji, mirchi bhaje, mirchi bhajia, mirapakay bajji
ಮೂಲ ಸ್ಥಳIndia
ಪ್ರಾಂತ್ಯ ಅಥವಾ ರಾಜ್ಯRajasthan and Guntur
ವಿವರಗಳು
ಮುಖ್ಯ ಘಟಕಾಂಶ(ಗಳು)Green chillies, gram flour, potatoes

ಮಿರ್ಚಿ ಭಜಿ ಯನ್ನು ಸಾಮಾನ್ಯ ಭಜಿಯ ಹಾಗೆಯೇ ಎಣ್ಣೆಯಲ್ಲಿ ಕರಿದು ತಯಾರಿಸಲಾಗುತ್ತದೆ. ಆದರೆ ವಿಶೇಷತೆಯೆಂದರೆ ಅದರೊಳಗಿರುವ ಖಾರವಾದ ಮಿರ್ಚಿ ಅಂದರೆ ಹಸಿಮೆಣಸಿನಕಾಯಿ. ಇದು ಭಜಿಗೆ ಬೇಕಾದ ರುಚಿಯನ್ನು ನೀಡುತ್ತದೆ.

ಉತ್ತರ ಕರ್ನಾಟಕ ಹೆಮ್ಮೆಯ ತಿನಸುಗಳಲ್ಲೊಂದು

[ಬದಲಾಯಿಸಿ]

ಭಜಿಯು ಒಂದು ವಿಶಿಷ್ಟ ಖಾದ್ಯ. ಸಾಮಾನ್ಯವಾಗಿ ಮಿರ್ಚಿಯನ್ನು ಹಸಿಮೆಣಸಿನಕಾಯಿಯನ್ನು ಉಪಯೋಗಿಸಿ ಮಾಡುತ್ತಾರಾದರೂ ಈಗೀಗ ಬದನೆಕಾಯಿಯ ಎರಡು ಅಗಲವಾದ ತೆಳು ಹೋಳುಗಳ ಮಧ್ಯೆ ಹಸಿ ಚಟ್ನಿ ಹಚ್ಚಿ ಮಿರ್ಚಿ ಕರಿದು ಕೊಡುವದೂ ಉಂಟು. ಇದೂ ಕೂಡ ಇತ್ತೀಚೆಗೆ ಜನಪ್ರಿಯವಾಗುತ್ತಿದೆ. ಒಟ್ಟಿನಲ್ಲಿ ಮಿರ್ಚಿಭಜಿ ಉತ್ತರ ಕರ್ನಾಟಕದ ಹೆಮ್ಮೆ.

ಭಜಿ ಮಾಡಲು ಬೇಕಾಗುವ ಸಾಮಗ್ರಿಗಳು

[ಬದಲಾಯಿಸಿ]
  1. ಕಡಲೆ ಹಿಟ್ಟು
  2. ಹಸಿ ಮೆಣಸಿನಕಾಯಿ
  3. ಕಾರದ ಪುಡಿ
  4. ಉಪ್ಪು
  5. ಸೊಡಾ
  6. ಎಣ್ಣೆ

ಮಾಡುವ ವಿಧಾನ

[ಬದಲಾಯಿಸಿ]

ಕಪ್ ಕಡಲೆ ಹಿಟ್ಟನ್ನು ತೆಗೆದುಕೊಳ್ಳಬೇಕು. ಅದರಲ್ಲಿ ಸ್ವಲ್ಪ ಖಾರದ ಪುಡಿ ಮತ್ತು ೧ ಚಿಟಿಗೆ ಸೋಡಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಸ್ವಲ್ಪ ನೀರನ್ನು ಹಾಕಿ ಕಲಸಿಕೊಳ್ಳಬೇಕು. ಹೆಚ್ಚು ನೀರನ್ನು ಹಾಕಬಾರದು. ೧೦ ನಿಮಿಷದ ನಂತರ ೨ ಕಪ್ ಎಣ್ಣೆಯನ್ನು ಕಾಯಿಸಲು ಇಡಬೇಕು. ಎಣ್ಣೆ ಕಾದ ನಂತರ ಉದ್ದ ಮತ್ತು ದಪ್ಪ ಹಸಿ ಮೆಣಸಿನಕಾಯಿಯನ್ನು ಕಲಸಿದ ಕಡಲೆ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಬಿಡಬೇಕು. ಅದು ಕಂದು ಬಣ್ಣಕ್ಕೆ ಬಂದ ನಂತರ ತೆಗೆಯಬೇಕು. ಈಗ ನಿಮ್ಮ ಬಿಸಿ ಬಿಸಿ ಮೆಣಸಿನಕಾಯಿ ಬಜ್ಜಿ ತಿನ್ನಲು ರೆಡಿ.


ಇವನ್ನೂ ನೋಡಿ

[ಬದಲಾಯಿಸಿ]