ವಿಷಯಕ್ಕೆ ಹೋಗು

ಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾಗ್ಯಲಕ್ಷ್ಮೀ[] ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದೆ. ಅಕ್ಟೋಬರ್ ೧೦, ೨೦೨೨ ರಿಂದ ಆರಂಭವಾದ ಈ ಧಾರಾವಾಹಿಯು ಸೋಮವಾರದಿಂದ ಶನಿವಾರದವರೆಗೆ ರಾತ್ರಿ ೭:೦೦ ಗಂಟೆಗೆ ಪ್ರಸಾರವಾಗುತ್ತಿದೆ. ಹಲವಾರು ಯಶಸ್ವಿ ಧಾರಾವಾಹಿಗಳನ್ನು ನಿರ್ಮಾಣ ಮಾಡಿರುವ ಜೈ ಮಾತಾ ಕಂಬೈನ್ಸ್ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ಮಂಗಳ ಗೌರಿ ಮದುವೆ ಧಾರಾವಾಹಿಯು ಮುಗಿದ ನಂತರ ಆರಂಭವಾಗಿದೆ.

ಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)
ಶೈಲಿದೈನಂದಿನ ಧಾರಾವಾಹಿ
ಬರೆದವರುಜಯ ಆಳ್ವಾ
ನಿರ್ದೇಶಕರುಯಶವಂತ್ ಪಾಂಡು[] , ಗೌಡು ದರ್ಶನ್ []
ದೇಶಭಾರತ
ಭಾಷೆ(ಗಳು)ಕನ್ನಡ
ನಿರ್ಮಾಣ
ನಿರ್ಮಾಪಕ(ರು)ಜೈ ಮಾತಾ ಕಂಬೈನ್ಸ್
ಸಮಯ20-22 ನಿಮಿಷಗಳು
ಪ್ರಸಾರಣೆ
ಮೂಲ ವಾಹಿನಿಕಲರ್ಸ್ ಕನ್ನಡ (ವಿಯಾಕಾಂ 18)
ಮೂಲ ಪ್ರಸಾರಣಾ ಸಮಯ10 ಅಕ್ಟೋಬರ್ 2022 – ಪ್ರಸ್ತುತ
ಕಾಲಕ್ರಮ
ಸಂಬಂಧಿತ ಪ್ರದರ್ಶನಗಳುಲಕ್ಷ್ಮೀಬಾರಮ್ಮ-2


ಅಷ್ಟಅಲ್ಲದೇ, ಸುಮಾರು ಹತ್ತು ವರ್ಷಗಳ ನಂತರ ಮತ್ತೆ ನಾಯಕಿಯಾಗಿ ಸುಷ್ಮಾ ಕೆ. ರಾವ್‌ ಈ ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳಿದ್ದಾರೆ.[]

ಅಕ್ಕ ತಂಗಿಯ ಬಾಂಧ್ಯವದ ಕಥೆಯ ಹಂದರವಾಗಿದೆ. ಭಾಗ್ಯ (ಸುಷ್ಮಾ ಕೆ. ರಾವ್‌) ಕಥೆಯ ನಾಯಕಿಯಾಗಿದ್ದು, ಜೀವನದಲ್ಲಿ ಏನೇ ಬಂದರೂ ಅದನ್ನು ಖುಷಿಯಿಂದ ಸ್ವಾಗತಿಸಿ, ಮನೆಯ ಜವಬ್ದಾರಿಯನ್ನು ಹೊತ್ತು ಇಡೀ ಜೀವನವನ್ನು ತನ್ನ ಸಂಸಾರಕ್ಕಾಗಿ ಮುಡಿಪಾಗಿಟ್ಟಿರುವ ಹೆಣ್ಣಾಗಿರುತ್ತಾಳೆ. ಬಾಲ್ಯದಲ್ಲೇ ತಂದೆ-ತಾಯಿಯನ್ನು ಕಳೆದು ಕೊಂಡ ಲಕ್ಷ್ಮೀಯನ್ನು (ಭೂಮಿಕಾ) ತನ್ನ ಮಗಳಂತೆ ಸಾಕಿದ್ದಾಳೆ. ಲಕ್ಷ್ಮೀಗೆ ಒಳ್ಳೆಯ ವರನ್ನು ಹುಡುಕಿ ಅವಳ ಮದುವೆ ಮಾಡುವ ಜವಬ್ಬಾರಿಯನ್ನು ಭಾಗ್ಯ ಹೊತ್ತಿದ್ದಾಳೆ. ಲಕ್ಷ್ಮೀ ಭಾಗ್ಯಳ ಚಿಕ್ಕಪ್ಪನ ಮಗಳಾಗಿದ್ದಾಳೆ. ಭಾಗ್ಯ ತನ್ನ ಗಂಡನಿಂದ ನಿಂದನೆಗೆ ಒಳಾಗಾಗುತ್ತಿರುತ್ತಾಳೆ. ಆದರೂ, ಈ ವಿಷಯವನ್ನು ಎಲ್ಲೂ ತೋರಿಸದೇ ನಗು ಮುಖದಿಂದ ಜೀವನವನ್ನು ನಿರ್ವಹಿಸುತ್ತ ಇರುತ್ತಾಳೆ.

ಈ ಧಾರಾವಾಹಿಯು ನಂತರ 'ಭಾಗ್ಯಲಕ್ಷ್ಮಿ' ಮತ್ತು 'ಲಕ್ಷ್ಮಿ ಬಾರಮ್ಮ' ಎಂಬ ಎರಡು ಧಾರಾವಾಹಿಗಳಾಗಿ ವಿಭಜನೆಯಾಯಿತು. ಈಗ, ಈ ಕಥೆಯು ಭಾಗ್ಯಾಳ ಜೀವನದ ಮೇಲೆ, ಪತಿ ಮತ್ತು ಮಗಳ ಕಾರಣದಿಂದಾಗಿ ಅತ್ತೆ ಮಾವಂದಿರು ಎದುರಿಸುತ್ತಿರುವ ತೊಂದರೆಗಳು, ಹೇಗೆ ಭಾಗ್ಯಳ ಅತ್ತೆ ಭಾಗ್ಯಳ ಹಕ್ಕುಗಳಿಗಾಗಿ ಅವಳಿಗೆ ಶಕ್ತಿಯನ್ನು ನೀಡುತ್ತಾಳೆ. ಮತ್ತೆ ಭಾಗ್ಯಳ ಶಿಕ್ಷಣವನ್ನು ಪೂರ್ಣಗೊಳಿಸುವಂತೆ ಉತ್ತೇಜಿಸುತ್ತಾಳೆ ಎಂಬುವುದರ ಮೇಲೆ ಕೇಂದ್ರಕೃತವಾಗಿದೆ.

ಕಲಾವಿದರು

[ಬದಲಾಯಿಸಿ]

ಮುಖ್ಯ ಪಾತ್ರಗಳು

[ಬದಲಾಯಿಸಿ]
  • ಸುಷ್ಮಾ ಕೆ. ರಾವ್ : ಭಾಗ್ಯ ಆಗಿ; ತಾಂಡವ್ ಹೆಂಡತಿ.
  • ಪದ್ಮಜಾ ರಾವ್‌':[] ಕುಸುಮ ಆಗಿ; ತಾಂಡವ್ ತಾಯಿ, ಭಾಗ್ಯಳ ಅತ್ತೆ, ಕಾವೇರಿಯ ಅಕ್ಕ.
  • ಸುದರ್ಶನ್‌ ರಂಗಪ್ರಸಾದ್‌:[] [] ತಾಂಡವ್ ಆಗಿ; ಕುಸುಮಾಳ ಮಗ, ಭಾಗ್ಯಳ ಗಂಡ.

ಇತರೆ ಪಾತ್ರಗಳು

[ಬದಲಾಯಿಸಿ]
  • ಗೌತಮಿ ಗೌಡ: ಶ್ರೇಷ್ಠ ಆಗಿ; ಭಾಗ್ಯಳ ಗಂಡ. ತಾಂಡವ್ ಪ್ರೇಯಸಿ.
    • ಕಾವ್ಯ ಗೌಡ ಪಾತ್ರ ಬದಲವಾಣೆಯ ನಂತರ.
  • ಅಮೃತ ಗೌಡ: ತನ್ವಿ ಆಗಿ; ಭಾಗ್ಯ ಮತ್ತು ತಾಂಡವ್ ಮಗಳು.
  • ನಿಹಾರ್‌ ಗೌಡ: ತನ್ಮಯ್ ಆಗಿ; ಭಾಗ್ಯ ಮತ್ತು ತಾಂಡವ್‌ ಮಗ.
  • ಸುನೀತಾ ಶೆಟ್ಟಿ: ಸುನಂದಾ ಆಗಿ; ಭಾಗ್ಯಳ ತಾಯಿ.
  • ಆಶಾ ಅಯ್ಯನರ್: ಪೂಜಾ ಆಗಿ; ಭಾಗ್ಯಳ ಸ್ವಂತ ತಂಗಿ.
  • ಭೂಮಿಕಾ‌ ರಮೇಶ್:[] ಲಕ್ಷ್ಮೀ ಆಗಿ; ಭಾಗ್ಯಳ ಚಿಕ್ಕಪ್ಪನ ಮಗಳು, ವೈಷ್ಣವ್ ಹೆಂಡತಿ.
  • ಶಮಂತ್‌ ಗೌಡ ಆಲಿಯಾಸ ಬ್ರೋ ಗೌಡ: ವೈಷ್ಣವ್ ಆಗಿ; ಕಾವೇರಿಯ ಮಗ, ತಾಂಡವ್ ತಮ್ಮ, ಲಕ್ಷ್ಮಿಯ ಗಂಡ.
  • ತನ್ವಿ ರಾವ್:[] ಕೀರ್ತಿಯಾಗಿ; ವೈಷ್ಣವ್ ಮಾಜಿ ಪ್ರೇಯಸಿ.
  • ಸುಷ್ಮಾ ನಾಣಯ್ಯ: ಕಾವೇರಿ ಆಗಿ; ವೈಷ್ಣವ್ ತಾಯಿ‌, ಕುಸುಮಾಳ ತಂಗಿ.
  • ಸುರೇಶ್ ರೈ: ಕೃಷ್ಣಕಾಂತ್ ಆಗಿ; ವೈಷ್ಣವ್ ತಂದೆ,‌ ಕಾವೇರಿಯ ಗಂಡ.
  • ರಜನಿ ಪ್ರವೀಣ್: ಸುಪ್ರೀತಾ ಆಗಿ; ವೈಷ್ಣವ್ ಸೋದರ ಅತ್ತೆ.
  • ಲಾವಣ್ಯ ಹಿರೇಮಠ್ : ವಿಧಿ ಆಗಿ; ವೈಷ್ಣವ್ ತಂಗಿ.

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

[ಬದಲಾಯಿಸಿ]
ವರ್ಷ ವರ್ಗ ಫಲಿತಾಂಶ ಇತರೆ ಟಿಪ್ಪಣಿ Refs
ಅನುಬಂಧ ಅವಾರ್ಡ್ಸ್ 2023 ಜನಮೆಚ್ಚಿದ ಜೋಡಿ Nominated ಭಾಗ್ಯ-ತಾಂಡವ್
ಜನಮೆಚ್ಚಿದ ಡಿಜಿಟಲ್ ಜೋಡಿ Nominated ಭಾಗ್ಯ-ತಾಂಡವ್
ಜನಮೆಚ್ಚಿದ ಮಂಥರೆ Nominated ಶ್ರೇಷ್ಠ
ಜನಮೆಚ್ಚಿದ ಶಕುನಿ ವಿಜೇತ ತಾಂಡವ್
ಜನಮೆಚ್ಚಿದ ನಾಯಕಿ Nominated ಭಾಗ್ಯ
ಜನಮೆಚ್ಚಿದ ಸ್ಟೈಲ್ ಐಕಾನ್ ಮಹಿಳೆ Nominated ಶ್ರೇಷ್ಠ
ಜನಮೆಚ್ಚಿದ ಯೂತ್ ಐಕಾನ್ Nominated ಭಾಗ್ಯ
ಜನಮೆಚ್ಚಿದ ಸಂಸಾರ Nominated
ಜನಮೆಚ್ಚಿದ ಹೊಸ ಪರಿಚಯ (ಫಿಕ್ಷನ್) Nominated ತಾಂಡವ್
ಮನೆಮೆಚ್ಚಿದ ಅತ್ತೆ ವಿಜೇತ ಕುಸುಮಾ
ಮನೆಮೆಚ್ಚಿದ ಸೊಸೆ ವಿಜೇತ ಭಾಗ್ಯ
ಉತ್ತಮ ನಿರ್ದೇಶನ ವಿಜೇತ ದರ್ಶನ್
ಉತ್ತಮ ರೇಟೆಡ್ ಫಿಕ್ಷನ್ ಶೋ ವಿಜೇತ
ಅನುಬಂಧ ಅವಾರ್ಡ್ಸ್ 2024 ಜನಮೆಚ್ಚಿದ ಜೋಡಿ Nominated ಭಾಗ್ಯ-ತಾಂಡವ್
ಜನಮೆಚ್ಚಿದ ಡಿಜಿಟಲ್ ಜೋಡಿ Nominated ಭಾಗ್ಯ-ತಾಂಡವ್
ಜನಮೆಚ್ಚಿದ ಮಂಥರೆ Nominated ಶ್ರೇಷ್ಠ
ಜನಮೆಚ್ಚಿದ ಶಕುನಿ ವಿಜೇತ ತಾಂಡವ್
ಜನಮೆಚ್ಚಿದ ನಾಯಕಿ ವಿಜೇತ ಭಾಗ್ಯ
ಜನಮೆಚ್ಚಿದ ಸ್ಟೈಲ್ ಐಕಾನ್ ಮಹಿಳೆ Nominated ಶ್ರೇಷ್ಠ
ಜನಮೆಚ್ಚಿದ ಸಂಸಾರ Nominated
ಮನೆಮೆಚ್ಚಿದ ಅತ್ತೆ ವಿಜೇತ ಕುಸುಮಾ
ಮನೆಮೆಚ್ಚಿದ ಸೊಸೆ ವಿಜೇತ ಭಾಗ್ಯ
ಮನೆಮೆಚ್ಚಿದ ಸಹೋದರಿ ವಿಜೇತ ಪೂಜಾ
ಉತ್ತಮ ರೇಟೆಡ್ ಫಿಕ್ಷನ್ ಶೋ ವಿಜೇತ

ರೂಪಾಂತರಗಳು

[ಬದಲಾಯಿಸಿ]
ಭಾಷೆ ಶ್ರೀರ್ಷಿಕೆ ಮೂಲ ಬಿಡುಗಡೆ ವಾಹಿನಿ(ಗಳು) ಕೊನೆಯ ಪ್ರಸಾರ ಟಿಪ್ಪಣಿಗಳು
ಕನ್ನಡ Bhagyalakshmi
ಭಾಗ್ಯಲಕ್ಷ್ಮಿ
10 ಅಕ್ಟೋಬರ್ 2022 ಕಲರ್ಸ್ ಕನ್ನಡ ಪ್ರಸಾರವಾಗುತ್ತಿದೆ ಮೂಲ
ತಮಿಳು ಅರ್ಚನೈ ಪೋಕಲ್ 3 ಜುಲೈ 2023 ಕಲರ್ಸ್ ತಮಿಳು ಕನ್ನಡದಿಂದ ಡಬ್ಬ್ ಮಾಡಲಾಗಿದೆ
ಮರಾಠಿ ಕಾವ್ಯಂಜಲಿ- ಸಖಿ ಸಾವಲಿ
काव्यांजली - सखी सावली
29 ಮೇ 2023 ಕಲರ್ಸ್ ಮರಾಠಿ ರೀಮೆಕ್
ಹಿಂದಿ ಮಂಗಳ ಲಕ್ಷ್ಮೀ
मंगल लक्ष्मी
27 ಫೆಬ್ರವರಿ 2024 ಕಲರ್ಸ್ ಟಿವಿ

ಉಲ್ಲೇಖಗಳು

[ಬದಲಾಯಿಸಿ]
  1. "ಹೊಸ ಧಾರಾವಾಹಿ, ಭಾಗ್ಯಲಕ್ಷ್ಮೀಯಾಗಿ ಬಾಗಿಲು ತೆರೆಯಲಿದ್ದಾಳೆ". ಪ್ರಜಾವಾಣಿ. Retrieved 7 ಅಕ್ಟೋಬರ್ 2022.
  2. "ಭಾಗ್ಯಲಕ್ಷ್ಮಿ ಧಾರಾವಾಹಿ ಹಿಂದಿಗೆ ಡಬ್ ಆಗುತ್ತಿದೆ". Retrieved February 15, 2023.
  3. "ಭಾಗ್ಯಲಕ್ಷ್ಮೀ ನಿರ್ದೇಶನ ಮಾಡುತ್ತಿದ್ದಾರೆ ಗೌಡು ದರ್ಶನ್". ವಿಜಯ ಕರ್ನಾಟಕ. Retrieved 16 April 2023.
  4. "Bhagyalakshmi: 10 ವರ್ಷಗಳ ನಂತರ ನಾಯಕಿಯಾಗಿ 'ಭಾಗ್ಯಲಕ್ಷ್ಮೀ' ಮೂಲಕ ತೆರೆ ಮೇಲೆ ನಟಿ ಸುಷ್ಮಾ ರಾವ್". Vijaya Karnataka. Retrieved 5 Oct 2022.
  5. "ನನ್ನದು ಗಟ್ಟಿಗಿತ್ತಿ ಅತ್ತೆಯ ಪಾತ್ರ". Retrieved October 4, 2022.
  6. "ಭಾಗ್ಯಲಕ್ಷ್ಮಿ ಧಾರಾವಾಹಿಯ ತಾಂಡವ್‍ನ ನಿಜವಾದ ಪತ್ನಿ ಯಾರು". Retrieved November 4, 2022.
  7. "ಮಹೇಶನ ಕೈಯಲ್ಲಿ ಚಿತ್ರಾನ್ನ ಆಯ್ತು ತಾಂಡವ್ ಲೈಫು!". ಸುವರ್ಣ ನ್ಯೂಸ್. Retrieved 24 August 2023.
  8. "ಮೆಡಿಕಲ್ ಓದ್ಬೇಕಿದ್ದ ಭಾಗ್ಯಲಕ್ಷ್ಮಿ ನಟಿ ಭೂಮಿಕಾ ನಟನಾ ಜಗತ್ತಿಗೆ ಎಂಟ್ರಿ ಕೊಟ್ಟಿದ್ದು ಹೇಗೆ?". Retrieved Jan 5, 2023.
  9. "ಭಾಗ್ಯಲಕ್ಷ್ಮಿ ಧಾರಾವಾಹಿ ಕೀರ್ತಿ ಬಗ್ಗೆ ನಿಮಗೆ ಗೊತ್ತಾ? ತನ್ವಿ ರಾವ್ ಅವರ ರಿಯಲ್ ಸ್ಟೋರಿ". Retrieved March 1, 2023.