ವಿಷಯಕ್ಕೆ ಹೋಗು

ಬೃಹದೀಶ್ವರ ದೇವಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Brihadeeswarar Temple

ಹೆಸರು: Brihadeeswarar Temple
ನಿರ್ಮಾತೃ: Raja Raja Chola I
ಕಟ್ಟಿದ ದಿನ/ವರ್ಷ: 10th century AD
ವಾಸ್ತುಶಿಲ್ಪ: Tamil Architecture
ಸ್ಥಳ: Thanjavur

ಇದನ್ನು ಪೆರುವುದೈಯರ್ ಕೊವಿಲ್ ಅಥವಾ ಬೃಹದೀಶ್ವರ್ ಟೆಂಪಲ್ Tamilபெருவுடையார் கோவில், peruvuḍaiyār kōvil ?ಅಲ್ಲದೇ ಇದನ್ನು ರಾಜರಾಜೇಶ್ವರಮ್ [] ಎಂದೂ ಕರೆಯುತ್ತಾರೆ.ಭಾರತದ ರಾಜ್ಯ ತಮಿಳುನಾಡಿನಲ್ಲಿರುವ ತಂಜಾವೂರ್ ನಲ್ಲಿ ಈ ದೇವಾಲಯವಿದೆ.ವಿಶ್ವದಲ್ಲೇ ಸಂಪೂರ್ಣವಾಗಿ ಬೆಣಚು ಶಿಲೆ ಅಥವಾ ಗ್ರ್ಯಾನೈಟ್ ನಲ್ಲಿ ನಿರ್ಮಿತ ಏಕೈಕ ದೇವಾಲಯವಾಗಿದೆ.[] ಆಗಿನ ಚೋಳರ ಕಾಲದ ಅರಸರ ಆಳ್ವಿಕೆ ಸಮಯದಲ್ಲಿ ವಿಶ್ವಕರ್ಮರಿಂದ ನಿರ್ಮಿತ ಅತ್ಯಂತ ಸೂಕ್ಷ್ಮ ಕಲಾಪ್ರಕಾರವಾಗಿದೆ.ವಿಶ್ವದಲ್ಲಿಯೇ ಇದು ತನ್ನ ಸುಂದರ ಶಿಲ್ಪಕಲೆ ಗೆ ಹೆಸರಾಗಿದೆ. ಇದರ ನಿರ್ಮಾಣವು ಅದರ ಪೋಷಕ ಅರಸು ರಾಜಾರಾಜಾ ಚೋಳ I ಈತನ ಸ್ಮರಣಾರ್ಥ ಕಟ್ಟಿದ ಒಂದು ಪ್ರತಿಬಿಂಬವೆನಿಸಿದೆ.ಭಾರತದ ಹಲವಾರು ವಾಸ್ತುಶಿಲ್ಪ ಕಲೆಗಳಲ್ಲಿ ಅತ್ಯಂತ ವೈಭಯುತವಾದ ಕಟ್ಟಡವಾಗಿದೆ.[] ಈ ದೇವಾಲಯವು UNESCOವಿಶ್ವ ಪರಂಪರೆ ಸ್ಥಳಗಳಲ್ಲೊಂದಾಗಿದೆ.ಇದನ್ನು "ಗ್ರೇಟ್ ಲಿವಿಂಗ್ ಚೋಳ ಟೆಂಪಲ್ಸ್" ಎಂದೂ ಬಣ್ಣಿಸಲಾಗಿದೆ.

ಈ ದೇವಾಲಯವು ಭಾರತ ದೇಶದಲ್ಲಿನ ಅತ್ಯಮೌಲ್ಯವಾದ ವಾಸ್ತುಶಿಲ್ಪದ ಕಲಾತಾಣವಾಗಿದೆ. ಅತ್ಯಂತ ಬಲಯುತವಾದ ಗೋಡೆಗಳ ಮಧ್ಯದಲ್ಲಿ ಇದನ್ನು ನಿರ್ಮಿಸಲಾಗಿದ್ದು ಬಹುಶಃ ೧೬ ನೆಯ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ. ದೇವಾಲಯದ 'ವಿಮಾನ'ಅಥವಾ ಗೋಪುರವು ವಿಶ್ವದಲ್ಲಿನ ಎಲ್ಲಾ ದೇವಾಲಯಗಳಿಗಿಂತ ಹೆಚ್ಚು 216 ft (66 m)ಎತ್ತರದ [][] ಕಳಶಪ್ರಾಯವಾಗಿದೆ. ಇಲ್ಲಿರುವ ಕಳಶ ಅಥವಾ 'ಚಿಖರಾಮ್'(ಅಗ್ರಸ್ಥಾನದಲ್ಲಿರುವ ಮೇಲ್ತುದಿಯನ್ನು)ಅಖಂಡ ಗ್ರ್ಯಾನೈಟ್ ಕಲ್ಲಿನಲ್ಲಿ ಕೆತ್ತಲಾಗಿದೆ ಎಂದು ಎಲ್ಲರೂ ನಂಬುತ್ತಾರೆ. ದೇವಾಲಯದ ಪ್ರವೇಶ ದ್ವಾರದಲ್ಲಿ ನಂದಿ (ಪವಿತ್ರ ಗೂಳಿ) ಮೂರ್ತಿಯನ್ನು ಒಂದೇ ಒಂದು ಬಂಡೆಗಲ್ಲಿನಲ್ಲಿ ಕೆತ್ತಲಾಗಿದೆ.ಇದು ಸುಮಾರು ೧೬ ಅಡಿ ಉದ್ದ ಮತ್ತು ೧೩ ಅಡಿ ಎತ್ತರವಾಗಿದೆ.[] ಇಡೀ ದೇವಾಲಯವವನ್ನು ಗಡುಸಾದ ಅಪರೂಪವೆನ್ನಲಾದ ಗ್ರ್ಯಾನೈಟ್ ನ್ನು ಬಳಸಿ ನಿರ್ಮಿಸಲಾಗಿದೆ.ಸದ್ಯ ತಂಜಾವೂರ್ ನಲ್ಲಿನ ಈ ಸ್ಥಳದಲ್ಲಿ ಈ ಕಲ್ಲು ದೊರೆಯುವುದು ವಿರಳವಾಗಿದೆ.
ಇದನ್ನು ಚೋಳರ ಅರಸನಾದ ರಾಜಾ ರಾಜಾ ೧೦೧೦ AD ನಲ್ಲಿ ನಿರ್ಮಿಸಿದ.ತಂಜಾವೂರ್ ನಲ್ಲಿನ ಈ ಬೃಹದೀಶ್ವರ ದೇವಾಲಯವನ್ನು ಜನಪ್ರಿಯವಾಗಿ 'ದೊಡ್ಡ ದೇವಾಲಯ' ಎಂದು ಕರೆಯುತ್ತಾರೆ.ಇದು ೨೦೧೦ ಹೊತ್ತಿಗೆ ೧೦೦೦ ವರ್ಷ ಪೂರೈಸಿದೆ.

ಇತಿಹಾಸ

[ಬದಲಾಯಿಸಿ]

ದೇವಾಲಯದ ಶಂಕುಸ್ಥಾಪನೆಯು ತಮಿಳು ಚಕ್ರವರ್ತಿ ಅರುಲಮೊಳಿವರ್ಮನ್ ಮಾಡಿದ್ದಾನೆ;ಈತನನ್ನು ರಾಜಾ ರಾಜಾ ಚೋಳ I ಎಂದೂ ಕರೆಯಲಾಗುತ್ತಿತ್ತು.ಆಗ ೧೦೦೨ CE ರಲ್ಲಿನ ಅತ್ಯಂತ ಉನ್ನತ ಶ್ರೇಣಿಯ ಮೊದಲ ತಮಿಳಿನಾಡಿನ ಚೋಳರ ಕಾಲದ ದೊಡ್ಡ ದೇವಾಲಯವೆನ್ನಲಾಗುತ್ತಿತ್ತು.Tamilஇராஜராஜ சோழன், Rājarāja Choļan ? [] ಈ ದೇವಾಲಯವನ್ನು ರಾಜಾರಾಜಾ ಚೋಳನು, ಈತ ತಮಿಳುನಾಡಿನ ದೊಡ್ಡ ಚೋಳ ಅರಸಲ್ಲೊಬ್ಬನಾಗಿದ್ದನು.ಈ ಅರಸನಿಗೆ ಕನಸಿನಲ್ಲಿ ಈ ದೇವಾಲಯ ನಿರ್ಮಿಸುವಂತೆ ಆದೇಶ ದೊರೆಯಿತಂತೆ.[] ಇದರ ವೈಭವ ಮತ್ತು ಅದ್ಭುತ ಶೈಲಿಯು ಚೋಳರ ಸಾಂಪ್ರದಾಯವನ್ನು ಪ್ರತಿಬಿಂಬಿಸುತ್ತದೆ.[] ಒಂದು ಅಕ್ಷೀಯ ಮತ್ತು ಸುಸಾಂಗತ್ಯ ಯುಳ್ಳ ರೇಖಾಗಣಿತ ದ ಮೇಲೆ ಇದರ ನಿರ್ಮಾಣ ಅದ್ಭುತವಾಗಿದೆ.[] ಈ ಕಾಲ ಮತ್ತು ಅನಂತರದ ಎರಡು ಶತಮಾನದ ವರೆಗೂ ನಿರ್ಮಿಸಿದ ಈ ದೇವಾಲಯಗಳು ತಮಿಳ(ಚೋಳರ) ಸಂಪತ್ತು,ಅಧಿಕಾರ ಮತ್ತು ಕಲಾತ್ಮಕ ಅಭಿವ್ಯಕ್ತಿಯಾಗಿವೆ. ಇಂತಹ ಗುಣಲಕ್ಷಣಗಳಾದ ಬಹು ಮುಖಜದ ಹಂತಗಳ ಬಿಡಿ ನಿರ್ಮಾಣವನ್ನು ಅದು ಚೌಕಾಕಾರದ ಪ್ರಧಾನಗಳಲ್ಲಿ ಸಾಂಕೇತಿಕ ರೀತಿಯಲ್ಲಿ ನಿರ್ಮಿಸಲಾಗಿದೆ.ಈ ಶೈಲಿ ಮತ್ತು ಅದರ ನವೀನ ಚೋಳಾ ಅರಸರ ಆಳ್ವಿಕೆಗೆ ಹಿಡಿದ ಕನ್ನಡಿಯಾಗಿದೆ.[೧೦]

ಚಕ್ರವರ್ತಿಯ ಶಕ್ತಿ ಮತ್ತು ಆತ ಪರಿಸರದೊಂದಿಗಿಟ್ಟಿರುವ ಸಂಬಂಧವನ್ನು ಸೂಚಿಸಲು ಬೃಹದೀಶ್ವರ ದೇವಾಲಯವನ್ನು ಆತ ನಿರ್ಮಿಸಿಬಹುದೆಂಬ ಬಲವಾದ ನಂಬಿಕೆ ಜನರಲ್ಲಿದೆ. ಈ ದೇವಾಲಯವು ರಾಜಮನೆತನದ ಹಲವು ಸಾಂದರ್ಭಿಕ ಸಮಾರಂಭಗಳಿಗೆ ಸಾಕ್ಷಿಯಾಗಿದೆ.ರಾಜರ ಸಿಂಹಾಸನ ಏರುವ ಕಾರ್ಯಕ್ರಮಗಳಿಗೂ ಈ ದೇವಾಲಯದ ಅರ್ಚಿತ ವಿಗ್ರಹ ಶಿವ ನನ್ನು ದಿನವೂ ರಾಜರ ಎದುರಲ್ಲೇ ಪೂಜೆ ಮಾಡಲಾಗುತ್ತಿತ್ತು. ದೇವಾಲಯದ ಮೇಲ್ವಿಚಾರಣೆ ಮತ್ತು ಇನ್ನಿತರ ಸೇವಾ ಕೈಂಕರ್ಯಗಳಿಗೆ ಸುಮಾರು ೬೦೦ ಸಿಬ್ಬಂದಿ ಇಲ್ಲಿ ನೇಮಕವಾಗಿದ್ದರು.[ಸೂಕ್ತ ಉಲ್ಲೇಖನ ಬೇಕು] ಬ್ರಾಹ್ಮಣರ ಅರ್ಚನೆ ವ್ಯವಸ್ಥೆಯೊಂದಿಗೆ ಅಲ್ಲಿ ಅತ್ಯುತ್ತಮ ಸಂಗೀತ ಕಲಾವಿದರು,ಪ್ರತಿಭಾನ್ವಿತರು,ವಿದ್ವಾಂಸರು ಅಲ್ಲದೇ ಪ್ರತಿಯೊಂದರಲ್ಲಿಯೂ ಪರಿಣತಿ ಪಡೆದ ಜನಸಮೂಹ ಸೇವೆಗಿತ್ತು.ಆ ಕಾಲದಲ್ಲಿ ಈ ದೇವಾಲಯವು ವಿವಿಧ ವ್ಯಾಪಾರ ಚಟುವಟಿಕೆಳಿಗೆ ಪ್ರಮುಖ ತಾಣವಾಗಿತ್ತು.ಹೂವಿನ ವ್ಯಾಪಾರಿಗಳು,ಹಾಲು ಮಾರಾಟಗಾರರು,ತೈಲ ವ್ಯಾಪಾರಿಗಳು,ತುಪ್ಪದ ವ್ಯಾಪಾರಿಗಳು ಅಲ್ಲದೇ ನಿರಂತರವಾಗಿ ಪೂರೈಕೆಯನ್ನು ದೇವಾಲಯದ ಪೂಜೆ-ಪುನಸ್ಕಾರಗಳಿಗೆ ಮಾಡುತ್ತಿದ್ದರು.ಹಬ್ಬ-ಹರಿದಿನಗಳಲ್ಲಿ ಎಲ್ಲ ರೀತಿಯ ಸರಕು-ಪೂಜಾ ಸಾಮಗ್ರಿಗಳನ್ನು ಅವರು ಒದಗಿಸುತ್ತಿದ್ದರು.ಈ ದೇವಾಲಯದ ಪ್ರಾಂಗಣ ಗೋಡೆಯ ಪ್ರಾಕಾರದಲ್ಲಿ ಹಲವು ಬರಹಗಳಲ್ಲಿ ಆಗ ಭರತ ನಾಟ್ಯದಂತಹ ನೃತ್ಯ ಸಮಾರಂಭಗಳು ನಡೆಯುತ್ತಿದ್ದವು ಎಂಬುದನ್ನು ಸೂಚಿಸುತ್ತವೆ.ಇದು ಸಾಂಪ್ರದಾಯಿಕವಾಗಿ ಸಂಗೀತ-ನೃತ್ಯ ಕಲಾವಿದರಿಗೆ ವೇದಿಕೆಯಾಗಿತ್ತು. ಇಂದೂ ಕೂಡಾ ಬೃಹದೀಶ್ವರ ದೇವಾಲಯವು ಭಾರತದಲ್ಲಿಯೇ ಕಲಾವಿದರಿಗೆ ಅತಿ ದೊಡ್ಡ ವೇದಿಕೆಯಾಗಿದೆ.[೧೧]

ಈ ದೇವಾಲಯವು ಸಂಪೂರ್ಣವಾದ ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ಪ್ರದರ್ಶಿಸುತ್ತದೆ.ಚೋಳ ಸಾಮ್ರಾಜ್ಯದ ತತ್ವಸಿದ್ದಾಂತಗಳಿಗೆ ಅಲ್ಲದೇ ತಮಿಳುನಾಡಿನ ನಾಗರಿಕತೆಯನ್ನು ದಕ್ಷಿಣ ಭಾರತದಲ್ಲಿ ಮೆರೆಯುವಂತೆ ಮಾಡಲು ಕಾರಣವೆನಿಸಿದೆ. ಈ ದೇವಾಲಯಗಳು "ಚೋಳ ಸಾಮ್ರಾಜ್ಯದ ವಾಸ್ತುಶಿಲ್ಪಕಲೆಗಳ ಸಾಕ್ಷಿಯಾಗಿವೆ."ಅದರ ವಿನ್ಯಾಸ,ತಂತ್ರಗಾರಿಕೆ,ಚಿತ್ರಕಲೆ ಮತ್ತು ಸತುವಿನ ಮಿಶ್ರಣದ ಭಿತ್ತಿಗಳು ಅದರ ಪ್ರಮುಖ ಹೆಗ್ಗುರುತಾಗಿವೆ."[೧೨] ರಾಜಾರಾಜಾ ಚೋಳ ಅರಸನು ತಂಜಾವೂರ್ ನಲ್ಲಿ ಈ ದೊಡ್ಡ ಬೃಹದೀಶ್ವರ ದೇವಾಲಯವನ್ನು ನಿರ್ಮಿಸಿ ಇಂದೂ ಕೂಡಾ ಅತಿ ದೊಡ್ಡದಲ್ಲದೇ ೧೦೦೦ ವರ್ಷದ ಹಿಂದಿನದಾಗಿದೆ.

ದೇವಾಲಯದ ಸಂಕೀರ್ಣ

[ಬದಲಾಯಿಸಿ]
ದೇವಾಲಯದ ಪೂರ್ಣ ನೋಟ

ನದಿ ದಂಡೆಯೊಂದರ ಮೇಲಿರುವ ಅದು ಸುತ್ತಲೂ ಸುರಕ್ಷಿತವಾಗಿ ಕೋಟೆ ನಿರ್ಮಿಸಿಕೊಂಡಿದೆ ಎನ್ನುವಂತೆ ಕಾಣುತ್ತದೆ.ಇದರ ಗೋಡೆಗಳನ್ನು ಕೋಟೆಯ ಸುತ್ತಣ ಪ್ರಾಕಾರದಂತೆಯೇ ನಿರ್ಮಾಣ ಮಾಡಲಾಗಿದೆ. ಇದರ ಸಂಕೀರ್ಣದಲ್ಲಿ ಹಲವು ಅಕ್ಷೀಯ ರೇಖೆಯಲ್ಲಿ ಇದು ಎದ್ದು ನಿಂತಿದೆ. ಈ ಸಂಕೀರ್ಣಕ್ಕೆ ಹೋಗಲು ಐದು ಮಹಡಿಯ ಅಕ್ಷೀಯದೊಳಗಡೆ ಹಾಯ್ದು ಸಲೀಸಾಗಿ ಹೋಗಬಹುದು.ಗೋಪುರದ ಮೇಲ್ಭಾಗಕ್ಕೆ ನೇರವಾದ ಸಂಪರ್ಕ ಸಾಧಿಸುವ ಅನುಕೂಲವೊದಗಿಸಲಾಗಿದೆ.ಗೋಪುರದಲ್ಲಿ ಆರಾಮವಾಗಿ ನಿಂತು ನೀವು ಎಲ್ಲವನ್ನೂ ವೀಕ್ಷಿಸಬಹುದಾಗಿದೆ. ದೊಡ್ಡ ಗಾತ್ರದ ಅದರ ಶಿಖರ (ಇದು ಒಳಭಾಗದಲ್ಲಿ ಟೊಳ್ಳಾಗಿದ್ದು ಅಲ್ಲಿ ಏನನ್ನೂ ಅಳವಡಿಸಲಾಗದು)ಇದು ೬೩ ಮೀಟರ್ ಎತ್ತರ,ಒಟ್ಟು ೧೬ ಮಡಿಕೆಯುಳ್ಳ ಸೂಕ್ಷ್ಮ ಕೆತ್ತನೆಯ ಮಹಡಿ ವಿನ್ಯಾಸವಿದೆ.ಇದು ಪ್ರಧಾನವಾಗಿ ಚತುಷ್ಕೋನೀಯ ಭಾಗವನ್ನು ಒಳಗೊಂಡಿದೆ. ಗೋಡೆಯಿಂದ ಹೊರಚಾಚಿದ ಭಾಗ, ಅಟ್ಟಳಿಗೆಗಳು, ಮತ್ತು ಹೊಂದಿಕೊಂಡ ಹಂತಗಳು ಮೂಲೆಯ ಅಂಚುಗಳಾಗಿ ಮಾಡಿದ್ದು ಅದನ್ನು ಶಿಖರಕ್ಕೆ ಪೂರಕವಾಗಿ ನಿರ್ಮಿಸಲಾಗಿದೆ.[೧೧]

ಪ್ರಧಾನ ದೇವಾಲಯ

[ಬದಲಾಯಿಸಿ]
ಗೋಪುರದ ಅಗ್ರ ಸ್ಥಾನವು ಒಂದೇ ಕಲ್ಲಿನಲ್ಲಿ ಅಷ್ಟಕೋನದಲ್ಲಿ ಕೆತ್ತನೆ ಮಾಡಲಾಗಿದೆ.81.25 ಟನ್ನ [೧೦]
ದೇವಾಲಯದ ಮಹಾದ್ವಾರ

ಪ್ರಧಾನ ದೇವಾಲಯವು ಅತ್ಯಂತ ವಿಶಾಲವಾದ ಪೂಜಾಗೃಹವನ್ನೊಳಗೊಂಡಿದೆ.ಇದರಲ್ಲಿ ಒಂದು ನಂದಿ,ಕಂಬದ ಆಸರೆಯಲ್ಲಿ ನಿಂತಿರುವ ವಿಶಾಲ ಸಭಾಭವನ (ಮಂಡಪಗಳು)ಅಲ್ಲದೇ ಹಲವು ಉಪದೇಗುಲಗಳ ಮಾದರಿಯಲ್ಲಿ ನಿರ್ಮಿಸಲಾಗಿದೆ. ಅತ್ಯಂತ ಮಹತ್ವದ ಭಾಗವೆಂದರೆ ಒಳಭಾಗದಲಿರುವ ಮಂಡಪ ಭಾಗವು ದೊಡ್ಡ ದೊಡ್ಡ ಗೋಡೆಗಳಿಂದ ಆವರಿಸಲ್ಪಟ್ಟಿದೆ.ಅತ್ಯಂತ ಮೊನಚಾಗಿ ಕೆತ್ತಲ್ಪಟ್ಟ ಗೋಡೆಗಳ ಮೇಲಿನ ಕಲಾಕೃತಿಗಳು ಆಳವಾದ ವಿಚಾರಕ್ಕೆ ತಳ್ಳುವ ಭಾವಾನಾ ಸ್ಪರ್ಶಗಳನ್ನು ಹೊಂದಿದೆ. ಈ ಪೂಜಾ ಗೃಹದ ಪ್ರಾಕಾರದ ಎರಡೂ ಬದಿಗೆ ಪ್ರಮುಖ ಸಂಸ್ಕೃತಿಯ ನೆನಪನ್ನು ತರುವಂತಹ ಕಲಾಪ್ರಕಾರಗಳಿವೆ.[] ಕರುವರೈ ಒಂದು ತಮಿಳಿನ ಶಬ್ದವಾಗಿದ್ದು ಅದೆಂದರೆ ದೇವರ ಗರ್ಭಗುಡಿಯ ಆಂತರಿಕ ರಚನೆಯಾಗಿದೆ.ಆಂತರಿಕವಾಗಿರುವ ಪೂಜಾ ಮಂದಿರವು ಒಳಗಡೆ ಮುಖ್ಯ ದೇವರೆನಿಸಿದ ಶಿವನ ಮೂರ್ತಿ ಪ್ರತಿಷ್ಟಾಪನೆಯನ್ನು ಗಮನಿಸಬಹುದು. ಒಳಭಾಗದಲ್ಲಿ ಶಿಲ್ಪದ ಲಿಂಗ ಪ್ರತಿಷ್ಟಾಪನೆಯಾಗಿದೆ.ಕುರುವರೈ ಅಂದರೆ "ಭ್ರೂಣಾವಸ್ಥೆಯ ಒಳಭಾಗ" ಇದನ್ನು ತಮಿಳು ಶಬ್ದ ಕರು ವಿನಿಂದ ತೆಗೆದುಕೊಳ್ಳಲಾಗಿದ್ದು ಅದು ಭ್ರೂಣವೆಂದೇ ಅರ್ಥ ನೀಡುತ್ತದೆ. ಕೇವಲ ಅರ್ಚಕರು ಮಾತ್ರ ಈ ಗರ್ಭಗುಡಿಯ ಪ್ರಾಕಾರಕ್ಕೆ ಪ್ರವೇಶ ಪಡೆದಿರುತ್ತಾರೆ.[೧೩] ದ್ರಾವಿಡರ ಶೈಲಿಯಲ್ಲಿ ಕುರುವರೈ ವಿಮಾನದ ಪ್ರತಿಕೃತಿಯಾಗಿ ಇದನ್ನು ಇನ್ನಿತರ ಭಾಗಗಳೊಂದಿಗೆ ಸೇರ್ಪಡೆ ಮಾಡಲಾಗುತ್ತದೆ.ಒಳಭಾಗದ ಗರ್ಭಗುಡಿಯು ತನ್ನ ಸುತ್ತಲೂ ಪ್ರದಕ್ಷಿಣಾಯಾಗುವಂತೆ ಕಮಾನುಗಳನ್ನು ರಚಿಸಲಾಗಿದೆ.ಬಳಸು ಸುತ್ತಿನ ಮೂಲಕ ದೇವರಿಗಾಗಿ ಸುತ್ತು ಸೇವಾ ಕೆಲಸ ಮಾಡಲು ಅನುಕೂಲ ಕಲ್ಪಿಸಿಲಾಗಿದೆ.(ಪ್ರದಕ್ಷಿಣಾನೆರವೇರಿಸಲು ಅನುಕೂಲ ಮಾಡಿಕೊಡಲಾಗಿದೆ) ಪ್ರವೇಶದ್ವಾರವನ್ನು ಅತ್ಯಂತ ಸುಂದರವಾಗಿ ಅಲಂಕಾರಿಕವಾಗಿರುತ್ತದೆ. ಒಳಭಾಗದಲ್ಲಿ ಪೂಜಾ ಕೊಠಡಿಯಲ್ಲಿ ದೇವರ ಪ್ರತಿಬಿಂಬವು ಗರ್ಭಗುಡಿ ಮತ್ತು ಗರ್ಭಗೃಹ ಇತ್ಯಾದಿಗಳನ್ನು ಬರುವಂತೆ ಇಡಲಾಗಿದೆ.[೧೦] ಈ ಗರ್ಭಗೃಹವು ಚತುರ್ಭುಜದ್ದಾಗಿದ್ದು ಎರಡು ಭಿತ್ತಿ ಕಂಬಗಳ ಮೇಲೆ ನಿಂತಿರುತ್ತದೆ.ಒಟ್ಟಾರೆ ಇದರ ಸಮಭುಜ ಆಧಾರವು ಎಲ್ಲಾ ಪ್ರಾಕಾರ ಗೋಡೆಗಳಿಗೆ ಮೂಲವಾಗಿದೆ.ಸಮಾಜದ ಸಂಕೀರ್ಣದ ಸಮಷ್ಟಿಯಾಗಿರುವ ಇದು ಬ್ರಹ್ಮಾಂಡವನ್ನು ಪ್ರತಿನಿಧಿಸುತ್ತದೆ. ಮಧ್ಯಭಾಗದ ಕೇಂದ್ರೀಕೃತ ಜಾಗೆಯಲ್ಲಿ ವಿಗ್ರಹದ ಪ್ರತಿಷ್ಟಾಪನೆ ಮಾಡಲಾಗಿದೆ.[] ದೇವಾಲಯದ ಹಿಂಭಾಗದ ಮೈದಾನವು ರಾಜಮನೆತನದವರು ಸ್ನಾನಗೃಹವನ್ನಾಗಿ ಬಳಸುವ ಇದು ವಿಶಾಲ ಸ್ನಾನದ ಮನೆಯಾಗಿತ್ತು.ಇರುಮುಡಿ ಸೊರನ್ ಹಾಲ್ ನ ಪೂರ್ವದಲ್ಲಿ ಹಲವು ಕಾಣಿಕೆಗಳನ್ನು ಪ್ರದರ್ಶಿಸುವ ಜಾಗೆಯಾಗಿದೆ.

ಎಲ್ಲೆಡೆಯಿಂದಲೂ ಸುತ್ತುವರೆದು ಬರುವ ಪ್ರದಕ್ಷಿಣಾ ಗಾಳಿಯು ಬೃಹತ ಲಿಂಗಂವನ್ನು ಆವರಿಸಿ-ನೇವರಿಸುವಂತಿರುತ್ತದೆ.ಗರ್ಭಗೃಹದಲ್ಲಿನ ಇದು ಅರಸರ ನಿವಾಸದ ಹತ್ತಿರದಲ್ಲಿದೆ.ಆಗಿನ ಚೋಳ ಅರಸರು ಹೇಗೆ ದೈವಭಕ್ತಿ ತೋರುತ್ತಿದ್ದರೆಂಬುದನ್ನು ಇದರಿಂದ ತಿಳಿಯಬಹುದಾಗಿದೆ.[೧೧]

ಒಳಗಿನ ಮಂಡಪವು ಹೊರಭಾಗದ ಆಯತಾಕಾರದ ಮಂಡಪಕ್ಕೆ ಪೂರಕವಾಗಿ ದಾರಿ ಮಾಡಿಕೊಡುತ್ತದೆ.ಅಲ್ಲಿ ಇಪ್ಪತ್ತು ಕಾಲಮ್ ನ ಒಂದು ಪ್ರವೇಶದ್ವಾರ ಮಂಟಪದ ಆವರಣವು ಮೂರು ಮೆಟ್ಟಲು ಹತ್ತುವ ರಚನೆಯ ಜಾಗೆಯು ಕೆಳಕ್ಕೆ ಕೊಡೊಯ್ಯುತ್ತದೆ. ಅದೇ ಕಲ್ಲಿನಲ್ಲಿ ಮಾಡಿದ ಕಂಬದ ಆಧಾರದ ಮೇಲ್ಮುಖ ಭಾಗವು ಸಣ್ಣದಾಗಿದ್ದು ಈ ಅಮಂಡಪವನ್ನು ನಂದಿಗಾಗಿ ವಿಸ್ತರಿಸಲಾಗಿದೆ.ಇದು ಶಿವನ ಪವಿತ್ರ ಎತ್ತು ಅಥವಾ ಗೂಳಿ ಎಂದೂ ಹೇಳಲಾಗುತ್ತದೆ.[]

ಒಂದಕ್ಕೊಂದು ಹತ್ತಿಕೊಂಡಿರುವ ಕಟ್ಟಡ ರಚನೆಗಳು

[ಬದಲಾಯಿಸಿ]
ಗಣಪತಿ ದೇಗುಲ

ದೇವಾಲಯದ ಸುತ್ತಲೂ ರಕ್ಷಣಾ ಕವಚಗಳಂತೆ ಎರಡು ಗೋಡೆಯಿಂದ ನಿರ್ಮಿತ ಹೊದಿಕೆಗಳಿವೆ. ಹೊರಭಾಗದ ಗೋಡೆಯು ಎತ್ತರವಾಗಿದ್ದು ಅದರ ಮೂಲಕ ದೇವಾಲಯದ ಸಂಕೀರ್ಣದ ಪ್ರಾಕಾರವನ್ನು ಗುರುತಿಸಬಹುದು. ಇಲ್ಲಿಯೇ ದೊಡ್ಡದಾದ ಗೋಪುರ ಅಥವಾ ಮೇಲೆ ತಿಳಿಸಿದಂತೆ ಪ್ರವೇಶ ದ್ವಾರವಿದೆ. ಇದರೊಳಗೇ ಒಂದು ಮೊಗಸಾಲೆಯಿದ್ದು ಬ್ಯಾರೆಲ್ ನಂತಹ ಕಮಾನಿರುವ ಗೋಪುರವು ಸುಮಾರು೪೦೦ ಆಧಾರಸ್ತಂಭಗಳಿಂದ ನಿರ್ಮಿತವಾದದ್ದು ಕಾಣಿಸುತ್ತದೆ.ಅದರ ಎತ್ತರದ ಗೋಡೆಯಿಂದಾಗಿ ದೊಡ್ಡ ಗೋಪುರ ಕಟ್ಟಡಕ್ಕೆ ಅಕ್ಷೀಯವಾಗಿ ರಕ್ಷಣೆಗಿರುವಂತೆ ಕಾಣುತ್ತದೆ.ಪ್ರಧಾನ ದೇವಾಲಯಕ್ಕೆ ಇಲ್ಲಿಂದ ದ್ವಾರ ಮಂಟಪವೂ ನಿರ್ಮಾಣಗೊಂಡಿದೆ.

ಇದರ ಮೂಲ ವಿಚಾರದ ತಳಪಾಯ

[ಬದಲಾಯಿಸಿ]

ಇಂತಹ ಬೃಹತ್ ಗಾತ್ರದ ದೇವಾಲಯವೊಂದನ್ನು ನಿರ್ಮಿಸಬೇಕೆಂದು ರಾಜಾ ರಾಜಾ ಅರಸು ಆಗ ಈಳಮ್ (ஈழம்)(ಇಂದಿನ ಶ್ರೀಲಂಕಾ)ದ ಸಾಮ್ರಾಟನಾಗಿದ್ದಾಗ ಈ ವಿಚಾರದ ಮೊಳಕೆಯೊಡೆಯಿತು.

ಇನ್ನಿತರ

[ಬದಲಾಯಿಸಿ]

ಈ ದೇವಾಲಯವೊಂದೇ ಬೃಹತ್ ಗಾತ್ರದಲ್ಲ;ಇದರ "ಮೂಲವರ್"(ಪ್ರಧಾನ ವಿಗ್ರಹ ಮೂರ್ತಿ ಶಿವ)ಅಲ್ಲದೇ ಇನ್ನಿತರ ದೇವತಾ ವಿಗ್ರಹಗಳು ಗಾತ್ರದಲ್ಲಿ ದೊಡ್ಡವೇ ಆಗಿವೆ.(ಕೋಷ್ಟ ಮೂರ್ತಿಗಳ್)ಉದಾಹರಣೆಗೆ ಅಲ್ಲಿ ಪ್ರತಿಷ್ಟಾಪಿಸಲ್ಪಟ್ಟಿರುವ ದಕ್ಷಿಣಾಮೂರ್ತಿ,ಸೂರಿಯನ್ (ಸೂರ್ಯ)ಚಂದ್ರನ್ (ಚಂದ್ರ)ಭಾರಿ ಗಾತ್ರದ್ದವೇ ಆಗಿವೆ. ಬಹುಮುಖ್ಯವಾಗಿ ಬೃಹದೀಶ್ವರ ದೇವಾಲಯದಲ್ಲಿ ಮಾತ್ರ "ಅಷ್ಟ ದಿಕ್ ಪಾಲಕರ" ವಿಗ್ರಹಗಳಿವೆ.(ಎಲ್ಲಾ ಎಂಟು ದಿಕ್ಕುಗಳ ಒಡೆಯರು)[ಇಂದ್ರ,ವರುಣ,ಅಗ್ನಿ,ಈಸಾನಾ,ವಾಯು,ನಿರುತಿ,ಯಮ,ಕುಬೇರ]ಇವರೆಲ್ಲರ ವಿಗ್ರಹಗಳು ಸುಮಾರು ೬ ಅಡಿಗಿಂತ ಎತ್ತರವಾಗಿದ್ದನ್ನು ಕಾಣಬಹುದು.

ವಿಶಿಷ್ಟ ಲಕ್ಷಣಗಳು

[ಬದಲಾಯಿಸಿ]

ಸುಮಾರು ೧೩೦,೦೦೦ ಟನ್ನಗಳಷ್ಟು ಗ್ರ್ಯಾನೈಟ್ ಬಳಕೆಯಿಂದ ಈ ದೇವಾಲಯ ನಿರ್ಮಾಣವಾಗಿದೆ. ಸುಮಾರು ೬೦-ಮೀಟರ್ ಎತ್ತರದ ವಿಮಾನದ ಕಟ್ಟಡದ ಶಿಲ್ಪವು ಇಡೀ ದಕ್ಷಿಣ ಭಾರತದಲ್ಲಿಯೇ ಸರಿಸಾಟಿಯಿಲ್ಲದಂತಿದೆ. ಈ ವಿಮಾನ ಇಮಾರತಿಯಲ್ಲಿ ಯುರೊಪಿಯನ್ ರ ಕಟ್ಟಡದಂತೆ ತಿರುವುಗಳನ್ನು ನಿರ್ಮಿಸಿದ್ದು ಕಾಣುತ್ತದೆ.ಬರುವ ಬ್ರಿಟಿಶ್ ರಿಗೆ ಇದೊಂದು ತೆರನಾದ ಎಚ್ಚರಿಕೆ ಎಂದೂ ಹೇಳಲಾಗುತ್ತದೆ.ಆದರೆ ಪುರಾತತ್ವ ಇಲಾಖೆ ಇದರ ಬಗ್ಗೆ ಸೂಕ್ತ ದಾಖಲೆಗಳಿಲ್ಲ ಇದೊಂದು ವದಂತಿ,ಎನ್ನುತ್ತದೆ.ಈ ಕಟ್ಟಡದ ಅತ್ಯಂತ ಮಹತ್ವದ ಅಂಶವೆಂದರೆ ಈ ಗೋಪುರದ ನೆರಳು ಇದರ ಆವರಣದಲ್ಲಿ ಕಾಣಿಸುವುದಿಲ್ಲ,ಅಲ್ಲದೇ ನೆಲಕ್ಕೆ ಬೀಳುವುದಿಲ್ಲ ಎಂದು ನಂಬಲಾಗಿದೆ.[೧೪] [೧೫][೧೬]

ಪ್ರವಾಸದ ಮಾಹಿತಿ

[ಬದಲಾಯಿಸಿ]

ತಂಜಾವೂರ್ ಗೆ ಸುಲಭವಾಗಿ ರಸ್ತೆ,ರೈಲ್ವೆ ಮತ್ತು ವಿಮಾನಯಾನದ ಮೂಲಕ ತಲುಪಬಹುದಾಗಿದೆ. ತಮಿಳುನಾಡು ಸರ್ಕಾರವು ನಿರಂತರವಾಗಿ ಸಾರ್ವಜನಿಕ ಬಸ್ಸುಗಳನ್ನು ಓಡಿಸುತ್ತದೆ,ಅವುಗಳೆಲ್ಲ ಹತ್ತಿರದ ತ್ರಿಚಿ, ಚೆನ್ನೈ, ಕುಂಭಕೋಣಂ, ಪುದುಕೊಟ್ಟೈ, ಪಟ್ಟುಕೊಟ್ಟೈ, ತಿರುನೆಲವೇಲಿ, ಕರೂರ್, ನಾಗಪಟ್ಟಿನಮ್, ಕೊಯಿಮತ್ತೂರು ಅಲ್ಲದೇ ರಾಜ್ಯದ ವಿವೆಧೆಡೆಗಳಿಂದ ಬಸ್ ಸಂಚಾರ ಸೇವೆ ಒದಗಿಸುತ್ತದೆ.ಸಾಮಾನ್ಯವಾಗಿ ರಾಜ್ಯದ ರಾಜಧಾನಿ ಚೆನ್ನೈನ ರಾಷ್ಟ್ರೀಯ ಹೆದ್ದಾರಿ (NH ೪೫-A)ಇದು ಚೆನ್ನೈನಿಂದ ಚಿದಂಬರಮ್,ಮಾಯಾವರಮ್,ಕುಂಭಕೋಣಂ,ತಂಜಾವೂರ್ ಮತ್ತು ನಾಗಪಟ್ಟಿನಮ್ ಗೆ ನೇರ ಸಂಪರ್ಕ ಒದಗಿಸುತ್ತದೆ.ಇದು ವಿದೇಶೀಯರಿಗೆ ತಂಜಾವೂರ್ ಮತ್ತಿತರೆಡೆ ಸಂಚರಿಸಲು ಸೂಕ್ತ ಮಾರ್ಗವಾಗಿದೆ.ಇಷ್ಟೇ ಸಂಖ್ಯೆಯಲ್ಲಿ ಖಾಸಗಿ ಬಸ್ಸಗಳ ಸಂಚಾರವೂ ಇದೆ.
ರೈಲ್ವೆ ಸೇವೆಗಳನ್ನು ಭಾರತೀಯ ರೈಲ್ವೆಸ್ ಭಾರತದಾದ್ಯಂತದ ಹಲವು ನಗರಗಳಿಂದ ಒದಗಿಸುತ್ತದೆ.ಹತ್ತಿರದ ಚೆನ್ನೈ,ತ್ರಿಚಿ,ತಿರುನೆಲವೇಲಿ,ಮಧುರೈ ಮತ್ತು ನಾಗೊರ್ ಗಳಿಂದ ಈ ಸೌಲಭ್ಯ ಇದೆ. "ತಂಜಾವೂರ್ ಜಂಕ್ಷನ್"ಈ ಸ್ಥಳನಾಮವಾಗಿದೆ.
ಹತ್ತಿರದ ವಿಮಾನ ನಿಲ್ದಾಣವೆಂದರೆ ತಿರುಚಿರಾಪಲ್ಲಿ ಏರ್ ಪೊರ್ಟ್ ತ್ರಿಚಿ ಸುಮಾರು ೬೫ ಕಿ.ಮೀ ದೂರವಿದೆ.

ಸಹಸ್ರಮಾನದ ಹಬ್ಬಾಚರಣೆಗಳು

[ಬದಲಾಯಿಸಿ]

ತಂಜಾವೂರ್ ನ ಅರಸು ರಾಜಾ ರಾಜಾ ಚೋಳನು ೧೦೧೦ AD ನಲ್ಲಿ ಇದನ್ನು ನಿರ್ಮಿಸಿದನು.ಬೃಹದೀಶ್ವರ ದೇವಾಲಯ "ದೊಡ್ಡ ದೇವಾಲಯ"ಎಂದು ಜನಪ್ರಿಯ ಹೆಸರು ಪಡೆದಿದೆ.ನಿರ್ಮಾಣವಾಗಿ ೧೦೦೦ ವರ್ಷ ಕಳೆದಿರುವ ಅದೀಗ ೧೦೦೦ನೆಯ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದೆ.ಅದರ ಅಸ್ತಿತ್ವ,ಅದರ ಭವ್ಯ ರಚನೆ ಇನ್ನೂ ಹೊಚ್ಚ ಹೊಸದಾಗಿದೆ.ರಾಜ್ಯಸರ್ಕಾರವು ಅಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ರಾಜಾ ರಾಜಾ ಚೋಳ ಅರಸನು (ಆಳ್ವಿಕೆ ೯೮೫-೧೦೧೪ A.D)ತಾನು ಗದ್ದುಗೆಯೇರಿದ ೨೭೫ ದಿನ ಮತ್ತು ೨೫ ವರ್ಷ ಆಡಳಿತದ ಕುರುಹು ಆಗಿ(೧೦೧೦ A.D)ಆಗ ಗೋಪುರದ ಮೇಲ್ಭಾಗದ ವಿಮಾನದ ಹೊದಿಕೆಗೆ ಕಳಶಮ್ವನ್ನು(ತಾಮ್ರದ ಕೊಡ ಅಥವಾ ಕಳಸ) ಆತ ನೀಡಿದ್ದ.ದೇವಾಲಯ ಪೂರ್ಣಗೊಂಡ ಅನಂತರ ಆತ ಈ ವಿಮಾನಕ್ಕೆ ಕಿರೀಟ ತೊಡಿಸಿದ್ದ.(ಇದು ಗರ್ಭಗುಡಿಯಿಂದ ೫೯.೮೨ ಮೀಟರ್ ಎತ್ತರದಲ್ಲಿದೆ.)[೧೭][೧೮][೧೯]

ಭರತನಾಟ್ಯಂ ಯಜ್ಞ

[ಬದಲಾಯಿಸಿ]

ಈ ಸಮಾರಂಭದ ದ್ಯೋತಕವಾಗಿ ರಾಜ್ಯ ಸರ್ಕಾರವು ಭರತನಾಟ್ಯಂ ಯಜ್ಞವನ್ನು ಆಯೋಜಿಸಿದೆ.ಭಾರತೀಯ ಈ ಶಾಸ್ತ್ರೀಯ ನೃತ್ಯ ಕಾರ್ಯಕ್ರಮವನ್ನು ಪದ್ಮಾ ಸುಬ್ರಹ್ಮಣ್ಯ ನಡೆಸುತ್ತಾರೆ. ಇದನ್ನು ಜಂಟಿಯಾಗಿ ಅಸೊಶಿಯೇಶನ್ ಆಫ್ ಭರತನಾಟ್ಯಂ ಆರ್ಟಿಸ್ಟ್ಸ್ ಆಫ್ ಇಂಡಿಯಾ (ABHAI)ಮತ್ತು ಬೃಹನ್ ನಾಟ್ಯಾಂಜಲಿ ಟ್ರಸ್ಟ,ತಂಜಾವೂರ್ ಇವು ನಡೆಸಿಕೊಡುತ್ತಿವೆ. ಈ ಬೃಹತ್ ಕಟ್ಟಡದ ೧೦೦೦ನೆಯ ವರ್ಷದಂಗವಾಗಿ ವಿವಿಧೆಡೆಗಳಿಂದ ಸುಮಾರು ೧೦೦೦ ನೃತ್ಯಗಾರರು ಬರಲಿದ್ದಾರೆ,ನವದೆಹಲಿ, ಮುಂಬಯಿ, ಪುಣೆ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಕೇರಳ, ಸಿಂಗಾಪೂರ್, ಮಲೆಷ್ಯ ಮತ್ತು U.Sನಿಂದ ನೃತ್ಯ ಕಲಾವಿದರು ಬಂದು ತಮ್ಮ ಸೇವೆ ಸಲ್ಲಿಸಲಿದ್ದಾರೆ.ಈ ಶಾಸ್ತ್ರೀಯ ನಾಟ್ಯಶಾಸ್ತ್ರದ ಸುಮಾರು ೧೧ ದಾಖಲಿತ ಆವೃತ್ತಿಗಳನ್ನು ಪ್ರದರ್ಶಿಸಿ ಅದರಲ್ಲೂ ಸಂಗೀತ ಸಾಮ್ರಾಜ್ಞಿ ತಿರುವಿಚಯಪ್ಪಾ (ಒಂಬತ್ತನೆಯ ಥಿರುಮುರೈ) ಅವರ ರಚನೆಗಳನ್ನು ಪ್ರದರ್ಶಿಸಲಿದ್ದಾರೆ,ಕರೂರ್ ಥೆವರ್ ಇವುಗಳಿಗೆ ರಚನಕಾರರೆನಿಸಿದ್ದಾರೆ.(ರಾಜಾ ರಾಜಾ ಚೋಳರ ಗುರು ಅವರ ರಚನೆಗಳು) ಇವರನ್ನು ತಿರುವಿಚಯಪ್ಪಾ ಎಂದು ಕರೆಯಲಾಗುತ್ತಿತ್ತು. ಈ ಸಣ್ಣ ಪಟ್ಟಣವು ಇಂತಹ ಸಂದರ್ಭಗಳಲ್ಲಿ ಸಾಂಸ್ಕೃತಿಕ ಕೇಂದ್ರವಾಗಿ ಮಾರ್ಪಡುತ್ತದೆ.ಈ ಕಾರ್ಯಕ್ರಮವು ಸೆಪ್ಟೆಂಬರ್ ೨೬,೨೦೧೦ ರಲ್ಲಿ ಎರಡು ದಿನಗಳ ಕಾಲ ಆಯೋಜನ ಕಂಡಿದೆ.ಈ ನೃತ್ಯ ಕಲಾವಿದರು ಪಟ್ಟಣದ ಹಲವೆಡೆ ತಮ್ಮ ಕಲಾಪ್ರದರ್ಶನ ಕೈಗೊಳ್ಳುವರು.[೨೦][೨೧]

ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯ

[ಬದಲಾಯಿಸಿ]
ಚಿತ್ರ:Brahadeeswarar Temple Millennium Year - Commemorative Coin.jpg
[46] ಚೋಳರ ಆಳ್ವಿಕೆಗಾರ ರಾಜಾ ರಾಜಾ ಚೋಳ I ನಿರ್ಮಿಸಿದ ಈ ದೇವಾಲಯದ ಸಹಸ್ರ ವರ್ಷಾಚರಣೆಯ ದ್ಯೋತಕ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ 5 ವಿಶೇಷ ನಾಣ್ಯಗಳನ್ನು ಹೊರತಂದಿತ್ತು.

ಅದೇ ೨೬ ಸೆಪ್ಟೆಂಬರ್ ೨೦೧೦ ರಂದು (ದೊಡ್ಡ ದೇವಾಲಯದ ಸಹಸ್ರಮಾನದ ದಿನಾಚರಣೆಯ ಐದನೆಯ ದಿನದಂದು)ಈ ದೇಶದ ಸಾಂಸ್ಕೃತಿಕ ಲೋಕಕ್ಕೆ ನೀಡಿದ ಸುಂದರ ವಾಸ್ತುಶಿಲ್ಪದ ನೆನಪನ್ನು ಸ್ಮರಿಸಲಾಯಿತು. ಪುರಾತತ್ವ ಲೋಕದ ಹೆಗ್ಗುರುತಾಗಿರುವ ಇದರ ವಿಶೇಷ ೫ ಅಂಚೆ ಚೀಟಿ ಯಲ್ಲಿ ೨೧೬-ಅಡಿ ಎತ್ತರದ ಬೃಹತ ರಾಜಾ ಗೋಪುರಂನ ಚಿತ್ರವನ್ನು ಭಾರತೀಯ ಅಂಚೆ ಇಲಾಖೆ ಬಿಡುಗಡೆ ಮಾಡಿತು.ಅದೇ ರೀತಿ ೫ ನಾಣ್ಯದ ಗುರುತುಳ್ಳ ಆಧುನಿಕ ದೇವಾಲಯದ ಚಿತ್ರವಿರುವ ಈ ನಾಣ್ಯವನ್ನು ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊರತಂದಿತು.[೨೨][೨೩] ಕೇಂದ್ರ ಸಂಪರ್ಕ ಮತ್ತು ಪ್ರಸಾರ ತಂತ್ರಜ್ಞಾನದ ಸಂಪುಟ ಸಚಿವ ಎ ರಾಜಾ ಅವರು ಘನತೆಯುಳ್ಳ ಬೃಹದೀಶ್ವರ ಟೆಂಪಲ್ ಸ್ಪೆಸಿಯಲ್ ಸ್ಟ್ಯಾಂಪ್ ಬಿಡುಗಡೆ ಮಾಡಿದರು.ಮೊದಲ ಬಾರಿಗೆ ಇದನ್ನು ಕೇಂದ್ರ ಹಡಗು ಖಾತೆ ಸಂಪುಟ ಸಚಿವ ಜಿ.ಕೆ ವಾಸನ್ ಇದನ್ನು ಸ್ವೀಕರಿಸಿದರು.

ಚಿತ್ರ:1000 Rupee Indian Currency Note - Tanjai.jpg
[53]ಆಗ 01 ಏಪ್ರಿಲ್ 1954 ರಲ್ಲಿ ರಿಜರ್ವ ಬ್ಯಾಂಕ್ ಆಫ್ ಇಂಡಿಯಾವು ಯುನೆಸ್ಕೊದ ವಿಶ್ವ ಪರಂಪರೆಗೆ ಸೇರಿದ ನೆನಪಿಗಾಗಿ ಮತ್ತು ಐತಿಹಾಸಿಕ ಪ್ರಸಿದ್ದ ಬೃಹದೀಶ್ವರ ದೇವಾಲಯವನ್ನು ನಿರ್ಮಿಸಿಲಾಗಿದೆ.

ಈಗಾಗಲೇ ರಿಜರ್ವ ಬ್ಯಾಂಕ್ ಆಫ್ ಇಂಡಿಯಾವು ೧ ಏಪ್ರಿಲ್ ೧೯೫೪ ರಲ್ಲಿ ೧೦೦೦ ರೂಪಾಯಿಯ ಕರೆನ್ಸಿ ನೋಟುಗಳನ್ನು ಬೃಹದೀಶ್ವರ ದೇವಾಲಯದ ಪಕ್ಷಿನೋಟ ನೀಡುವ ಚಿತ್ರವನ್ನು ಅದರಲ್ಲಿ ಮುದ್ರಿಸಿತ್ತು.ಈ ದೇವಾಲಯ ಸಾಂಸ್ಕೃತಿಕ ಮತ್ತು ಪರಂಪರೆಗೆ ನೀಡಿರುವ ಕೊಡುಗೆ ಗಮನಿಸಿ ಸರ್ಕಾರ ಈ ಗೌರವ ನೀಡಿದೆ. ಆದರೆ ೧೯೭೫ ರ ಸುಮಾರಿಗೆ ಆಗ ದಿವಂಗತ ಇಂದಿರಾ ಗಾಂಧಿಯವರ ನೇತೃತ್ವದ ಸರ್ಕಾರವು ಕಪ್ಪು ಹಣದ ಹತೋಟಿಗಾಗಿ ೧,೦೦೦ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಿತು.[೨೪]

ತಮಿಳುನಾಡಿನ ಮುಖ್ಯಮಂತ್ರಿ ಎಂ.ಕರುಣಾನಿಧಿ ಸೆಮ್ಮೈ ಭತ್ತವನ್ನು ಒಂದು ವಿಶೇಷ ತಳಿಯ ಭತ್ತವೆಂದೂ ರಾಜಾ ರಾಜನ್-೧೦೦೦ ಎಂದು ಆ ತಳಿಗೆ ಮರು ನಾಮಕರಣ ಮಾಡಿದ್ದಾರೆ.ಈ ಬೃಹದೀಶ್ವರ ದೇವಾಲಯದ ನಿರ್ಮಾತೃ ರಾಜಾ ರಾಜಾ ಚೋಳನ್ ನ ನೆನಪಿಗಾಗಿ ಈ ಹೆಸರಿನ್ನಡಲಾಗಿದೆ.[೨೫]

ಐತಿಹಾಸಿಕ ಕಾದಂಬರಿಗಳಲ್ಲಿ ಬೃಹದೀಶ್ವರ ದೇವಾಲಾಯದ ಪ್ರಸ್ತಾಪ

[ಬದಲಾಯಿಸಿ]
  1. ಬಾಲ್ ಕುಮಾರನ್ ಅವರು ಉದೈಯರ್ ಎಂಬ ಕಥಾನಕವನ್ನು ರಾಜಾ ರಾಜಾ ಚೋಳ Iಅರಸನ ಮೇಲೆ ಬರೆದಿದ್ದಾರೆ.ಆತನ ಕಟ್ಟಡ ಕಟ್ಟುವ ಆಸಕ್ತಿಗಳು ಮತ್ತು ಬೃಹದೀಶ್ವರ ದೇವಾಲಯದ ಸುತ್ತಮುತ್ತಲಿನ ಆತನ ಬದುಕಿನ ವೃತ್ತಾಂತವನ್ನು ಬರೆದಿದ್ದಾರೆ.

ಚಿತ್ರಗಳ ಗ್ಯಾಲರಿ

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಅಡಿ ಟಿಪ್ಪಣಿಗಳು

[ಬದಲಾಯಿಸಿ]
  1. ಸೌತ್ ಇಂಡಿಯನ್ ಇನ್ ಸ್ಕ್ರಿಪ್ಶನ್ಸ್- VolII, Part I& II
  2. "ಆರ್ಕೈವ್ ನಕಲು". Archived from the original on 2011-07-21. Retrieved 2011-02-09.
  3. ಅಟ್ಲಾಸ್ ಆಫ್ ದಿ ಇಯರ್ ೧೦೦೦ - ಪೇಜ್ ೧೦೫ ಬೈ ಜಾನ್ ಮ್ಯಾನ್
  4. ಮಿಡಲ್ ಚೋಳಾ ಟೆಂಪಲ್ಸ್, ಎಸ್.ಆರ್.ಸುಬ್ಱಮಣ್ಯಮ
  5. CBSE ಟೆಕ್ಸ್ಟ್ ಬುಕ್ಸ್ ಆನ್ ಸೊಸಿಯಲ್ ಸ್ಟಡೀಸ್ ಕ್ಲಾಸ್ ೧೦
  6. ೬.೦ ೬.೧ ಎನ್ ಸೈಕ್ಲೊಪಿಡಿಯಾ ಆಫ್ ಪಾಲಿಟಿಕಲ್ ಪಾರ್ಟೀಸ್ ಬೈ ರಲ್ಹಾನ್, ಒ. ಪಿ.
  7. "The Chola Dynasty 300 B.C. to 1250 A.D." kamat.com. Retrieved 2008-01-22.
  8. "Dr. Vaidyanathan Ganapati Sthapati..." ponniyinselvan.in. Archived from the original on 2010-07-14. Retrieved 2010-10-21.
  9. ೯.೦ ೯.೧ ೯.೨ ೯.೩ Thapar, Binda (2004). Introduction to Indian Architecture. Singapore: Periplus Editions. pp. 43, 52–53. ISBN 0-7946-0011-5.
  10. ೧೦.೦ ೧೦.೧ ೧೦.೨ Mitchell, George (1988). The Hindu Temple. Chicago: University of Chicago Press. pp. 145–148. ISBN 0-266-53230-5. {{cite book}}: Check |isbn= value: checksum (help)
  11. ೧೧.೦ ೧೧.೧ ೧೧.೨ Ching, Francis D.K.; et al. (2007). A Global History of Architecture. New York: John Wiley and Sons. pp. 338–339. ISBN 0-471-82451-3. {{cite book}}: Explicit use of et al. in: |last= (help)
  12. "Great Living Chola Temples". UNESCO.org. Retrieved 2008-01-21.
  13. "Architecture of the Indian Subcontinent - Glossary". Archived from the original on 2012-03-06. Retrieved 2007-01-24.
  14. "ಆರ್ಕೈವ್ ನಕಲು". Archived from the original on 2011-08-26. Retrieved 2011-02-09.
  15. http://www.varalaaru.com/images/May06/nizhal.jpg
  16. http://www.varalaaru.com/images/May06/thiruchutru.jpg
  17. BBC News (25 September 2010). "India's Big Temple marks 1,000th birthday". Retrieved 25 September 2010.{{cite web}}: CS1 maint: numeric names: authors list (link)
  18. PS. R. Balasubrahmanyam (1971), Orient Longman Publications. "Early Chola temples:Parantaka I to Rajaraja I, 907-985 A.D". {{cite web}}: |access-date= requires |url= (help); Missing or empty |url= (help)CS1 maint: numeric names: authors list (link)
  19. Ananthacharya Indological Research Institute (1984). "Rāja Rāja, the great:seminar proceedings". {{cite web}}: |access-date= requires |url= (help); Missing or empty |url= (help)CS1 maint: numeric names: authors list (link)
  20. Rediff News (16 August 2010). "India's Biggest Temple turns 1000-years". Retrieved 20 August 2010.{{cite web}}: CS1 maint: numeric names: authors list (link)
  21. The Hindu (01 August 2010). "A grand dance spectacle at the Thanjavur Big Temple". Archived from the original on 4 ಆಗಸ್ಟ್ 2010. Retrieved 20 August 2010.{{cite web}}: CS1 maint: numeric names: authors list (link)
  22. Deccan Herald (26 September 2010). "Stamp, coin release mark 1,000 years of Big Temple". Retrieved 26 September 2010.{{cite web}}: CS1 maint: numeric names: authors list (link)
  23. The Hindu (27 September 2010). "Release of a special postal stamp and a five- rupee coin". Archived from the original on 29 ಸೆಪ್ಟೆಂಬರ್ 2010. Retrieved 27 September 2010.{{cite web}}: CS1 maint: numeric names: authors list (link)
  24. Express Buzz, The Indian Express (೨೬ September ೨೦೧೦). " ೧೦೦೦ note of ೧೯೫೪ popular in Tanjavur". Retrieved ೨೭ September ೨೦೧೦. {{cite web}}: Check date values in: |accessdate= (help)CS1 maint: numeric names: authors list (link)[permanent dead link]
  25. MSN News (26 September 2010). "Semmai Paddy as "Raja Rajan-1000"". Retrieved 27 September 2010.{{cite web}}: CS1 maint: numeric names: authors list (link)[permanent dead link]