ವಿಷಯಕ್ಕೆ ಹೋಗು

ಬಿತ್ತನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೈಯಿಂದ ರೈತರು ಬೀಜಗಳನ್ನು ಬಿತ್ತುತ್ತಿರುವುದು

ಬಿತ್ತನೆ ಎಂದರೆ ನೆಡುವ ಪ್ರಕ್ರಿಯೆ. ಒಂದು ಪ್ರದೇಶದಲ್ಲಿ ಬೀಜಗಳನ್ನು ನೆಡಲಾದಾಗ ಅದು ಬಿತ್ತಲಾಗಿದೆ ಎಂದು ವರ್ಣಿಸಲ್ಪಡುತ್ತದೆ.

ಪ್ರಮುಖ ಕ್ಷೇತ್ರ ಬೆಳೆಗಳಲ್ಲಿ ತೋಕೆ ಗೋಧಿ, ಗೋಧಿ, ಮತ್ತು ಸಣ್ಣಗೋದಿಯನ್ನು ಬಿತ್ತಲಾಗುತ್ತದೆ, ಹುಲ್ಲುಗಳು ಹಾಗೂ ದ್ವಿದಳಧಾನ್ಯಗಳನ್ನು ಬಿತ್ತಲಾಗುತ್ತದೆ ಮತ್ತು ಮೆಕ್ಕೆ ಜೋಳ ಹಾಗೂ ಸೋಯಾ ಅವರೆಯನ್ನು ನೆಡಲಾಗುತ್ತದೆ. ನೆಡುವಾಗ, ಹೆಚ್ಚು ಅಗಲವಾದ ಸಾಲುಗಳನ್ನು (ಸಾಮಾನ್ಯವಾಗಿ ೭೫ ಸೆ.ಮಿ. ಅಥವಾ ಹೆಚ್ಚು) ಬಳಸಲಾಗುತ್ತದೆ, ಮತ್ತು ಇದರ ಉದ್ದೇಶ ನಿಖರವಾಗಿರುವುದು; ಸಾಲಿನಲ್ಲಿನ ಪ್ರತ್ಯೇಕ ಬೀಜಗಳ ನಡುವಿನ ಸ್ಥಳದ ಮೇಲೆ ಕೂಡ ಗಮನ ಹರಿಸುವುದು, ನಿಖರವಾದ ಅಂತರಗಳಲ್ಲಿ ಪ್ರತ್ಯೇಕ ಬೀಜಗಳ ಸಂಖ್ಯೆಯಿಡಲು ವಿವಿಧ ವಿಧಾನಗಳನ್ನು ರೂಪಿಸಲಾಗಿದೆ.

ಬಿತ್ತುವಾಗ, ಹಾಕಿದರೆ ಬೀಜಗಳ ಮೇಲೆ ಬಹಳ ಕಡಿಮೆ ಮಣ್ಣನ್ನು ಹಾಕಲಾಗುತ್ತದೆ, ಏಕೆಂದರೆ ಸಾಮಾನ್ಯವಾಗಿ ಬೀಜದ ಗಾತ್ರದ ಸುಮಾರು ೨-೩ ಪಟ್ಟು ನೆಡುವ ಆಳವನ್ನು ಕಾಪಾಡುವ ಮೂಲಕ ಮಣ್ಣಿನಲ್ಲಿ ಬೀಜಗಳನ್ನು ಬಿತ್ತಬಹುದು.

ಕೈಯಿಂದ ಬಿತ್ತುವುದೆಂದರೆ ಸಿದ್ಧಗೊಳಿಸಿದ ನೆಲದ ಮೇಲೆ ಕೈತುಂಬ ಬೀಜಗಳನ್ನು ತೆಗೆದುಕೊಂಡು ಎಸೆಯುವ ವಿಧಾನ ಅಥವಾ ಪ್ರಸಾರ. ಸಾಮಾನ್ಯವಾಗಿ, ಬೀಜವನ್ನು ಮಣ್ಣಿನಲ್ಲಿ ಸೇರಿಸಲು ಕುಂಟೆ ಅಥವಾ ಹಲುಬೆಯನ್ನು ಬಳಸಲಾಗುತ್ತದೆ. ಚಿಕ್ಕ ಪ್ರದೇಶಗಳನ್ನು ಹೊರತುಪಡಿಸಿದರೆ ಶ್ರಮಿಕ ಪ್ರಧಾನವಾದರೂ, ಈ ವಿಧಾನವನ್ನು ಈಗಲೂ ಕೆಲವು ಸಂದರ್ಭಗಳಲ್ಲಿ ಬಳಸಲಾಗುತ್ತಿದೆ. ಸಮವಾಗಿ ಮತ್ತು ಅಪೇಕ್ಷಿತ ಪ್ರಮಾಣದಲ್ಲಿ ಬಿತ್ತಲು ಅಭ್ಯಾಸ ಬೇಕಾಗುತ್ತದೆ. ಕೈ ಬಳಕೆಯ ಬಿತ್ತನೆ ಸಾಧನವನ್ನು ಬಳಸಬಹುದು, ಆದರೆ ಹುಲ್ಲುಗಳು ಮತ್ತು ದ್ವಿದಳಧಾನ್ಯಗಳ ಹೆಚ್ಚು ಚಿಕ್ಕ ಬೀಜಗಳಿಗೆ ಇದು ಕಡಿಮೆ ಸಹಾಯಕವಾಗಿದೆ.

ಕೈ ಬಿತ್ತನೆಯನ್ನು ಬೀಜದ ತಟ್ಟೆಗಳಲ್ಲಿ ಬಿತ್ತನಾಪೂರ್ವ ಕ್ರಿಯೆಯೊಂದಿಗೆ ಜತೆಗೂಡಿಸಬಹುದು. ಇದರಿಂದ ಸಸ್ಯಗಳಿಗೆ ತಂಪು ಅವಧಿಗಳಲ್ಲಿ ಒಳಾಂಗಣದಲ್ಲಿ ಬಲಶಾಲಿಯಾಗಲು ಅವಕಾಶ ಸಿಗುತ್ತದೆ (ಉದಾ. ಸಮಶೀತೋಷ್ಣ ದೇಶಗಳಲ್ಲಿ ವಸಂತ ಋತುವಿನಲ್ಲಿ).

ಬೇಸಾಯದಲ್ಲಿ, ಈಗ ಬಹುತೇಕ ಬೀಜಗಳನ್ನು ಕೂರಿಗೆ ಬಳಸಿ ಬಿತ್ತಲಾಗುತ್ತದೆ. ಇದು ಹೆಚ್ಚು ನಿಖರತೆಯನ್ನು ಒದಗಿಸುತ್ತದೆ; ಬೀಜದ ಬಿತ್ತನೆ ಸಮನಾಗಿ ಮತ್ತು ಅಪೇಕ್ಷಿತ ಪ್ರಮಾಣದಲ್ಲಿ ಆಗುತ್ತದೆ. ಕೂರಿಗೆಯು ಬೀಜವನ್ನು ನೆಲದ ಕೆಳಗೆ ಅಳತೆಮಾಡಿದ ದೂರದಲ್ಲಿ ಕೂಡ ನೆಡುತ್ತದೆ, ಹಾಗಾಗಿ ಕಡಿಮೆ ಬೀಜಗಳು ಬೇಕಾಗುತ್ತವೆ. ಪ್ರಮಾಣಕ ವಿನ್ಯಾಸವು ನಾಳಗಳುಳ್ಳ ಊಡಿಕೆ ಮಾಪಕ ವ್ಯವಸ್ಥೆಯನ್ನು ಬಳಸುತ್ತದೆ, ಮತ್ತು ಇದು ಸ್ವರೂಪದಲ್ಲಿ ಪರಿಮಾಣವನ್ನು ಅವಲಂಬಿಸಿರುತ್ತದೆ; ಪ್ರತ್ಯೇಕ ಬೀಜಗಳ ಎಣಿಕೆಯಾಗುವುದಿಲ್ಲ. ಬೆಳೆಯ ಪ್ರಜಾತಿಗಳು ಮತ್ತು ಬೆಳೆಯುವ ಪರಿಸ್ಥಿತಿಗಳನ್ನು ಅವಲಂಬಿಸಿ, ಸಾಮಾನ್ಯವಾಗಿ ಸಾಲುಗಳು ಸುಮಾರು ೧೦-೩೦ ಸೆ.ಮಿ. ಅಂತರ ಹೊಂದಿರುತ್ತವೆ. ಮಣ್ಣಿನ ಬಗೆ ಮತ್ತು ಸ್ಥಳೀಯ ಸಂಪ್ರದಾಯವನ್ನು ಆಧರಿಸಿ ಹಲವಾರು ಸಾಲು ತೆರೆ ಪ್ರಕಾರಗಳನ್ನು ಬಳಸಲಾಗುತ್ತದೆ. ಧಾನ್ಯ ಕೂರಿಗೆಗಳನ್ನು ಬಹುತೇಕ ವೇಳೆ ಟ್ರ್ಯಾಕ್ಟರ್‌ಗಳು ಎಳೆಯುತ್ತವೆ, ಆದರೆ ಕುದುರೆಗಳೂ ಎಳೆಯಬಹುದು.

"https://kn.wikipedia.org/w/index.php?title=ಬಿತ್ತನೆ&oldid=834809" ಇಂದ ಪಡೆಯಲ್ಪಟ್ಟಿದೆ