ವಿಷಯಕ್ಕೆ ಹೋಗು

ಬರಹ (ತಂತ್ರಾಂಶ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬರಹ ತಂತ್ರಾಂಶದ ಗುರುತು

ಬರಹ - ಗಣಕಯಂತ್ರದ ಕಡತಗಳಲ್ಲಿ ಭಾರತೀಯ ಭಾಷೆಗಳ ಅಕ್ಷರಗಳನ್ನು ಮೂಡಿಸಲು ಮತ್ತು ಪದ ಸಂಸ್ಕಾರಕವಾಗಿ ಉಪಯೋಗಿಸಬಹುದಾದ ಒಂದು ತಂತ್ರಾಂಶ. ಬರಹ ತಂತ್ರಾಂಶವನ್ನು ತಯಾರಿಸಿದವರು ಶೇಷಾದ್ರಿ ವಾಸು. ಬರಹದ ಮೊಟ್ಟ ಮೊದಲ ಆವೃತ್ತಿ ಜನಬಳಕೆಗೆ ಬಿಡುಗಡೆಯಾದ ದಿನಾಂಕ ೧ ಜನವರಿ ೧೯೯೮. ಬರಹದ ಅತ್ಯಂತ ನವೀನ ಆವೃತ್ತಿ ಎಂದರೆ ಬರಹ ೧೦.೦. ಇದು ಬೆಂಬಲಿಸುವ ಲಿಪಿಗಳು ಮತ್ತು ಭಾಷೆಗಳು ಕೆಳಗಿನಂತಿವೆ. ಬರಹ ತಂತ್ರಾಂಶದ ಪ್ರಾಯೋಗಿಕ ಆವೃತ್ತಿ ಉಚಿತವಾಗಿದ್ದು ಹಲವು ಪರಿಕರಗಳೊಂದಿಗೆ ಪೂರ್ಣ ಆವೃತ್ತಿಯನ್ನು ಹಣಪಾವತಿಸಿ ಪಡೆಯಬಹುದಾಗಿದೆ.

ಲಿಪಿ ಭಾಷೆಗಳು
ಕನ್ನಡ ಕನ್ನಡ, ಕೊಂಕಣಿ, ತುಳು, ಕೊಡವ
ದೇವನಾಗರಿ ಹಿಂದಿ, ಮರಾಠಿ, ಸಂಸ್ಕೃತ, ನೇಪಾಳಿ, ಕೊಂಕಣಿ, ಕಾಶ್ಮೀರಿ, ಸಿಂಧಿ
ತಮಿಳು ತಮಿಳು
ತೆಲುಗು ತೆಲುಗು
ಮಲಯಾಳಂ ಮಲಯಾಳಂ
ಗುಜರಾತಿ ಗುಜರಾತಿ
ಗುರುಮುಖಿ ಪಂಜಾಬಿ
ಬಂಗಾಳಿ ಬಂಗಾಳಿ, ಅಸ್ಸಾಮಿ, ಮಣಿಪುರಿ
ಒರಿಯಾ ಒರಿಯಾ

ಬರಹ ವಿಂಡೋಸ್ ಆಪರೇಟಿಂಗ್ ಸಿಸ್ಟಂನಲ್ಲಿ ಮಾತ್ರ ಕೆಲಸ ಮಾಡುತ್ತದೆ. ಆದರೂ, ಬರಹದಲ್ಲಿ ಉಳಿಸಿದ ಕಡತಗಳು ಯೂನಿಕೋಡ್ ಮಾದರಿಯಲ್ಲಿದ್ದರೆ, ಅದನ್ನು ಬೇರೆ ಆಪರೇಟಿಂಗ್ ಸಿಸ್ಟಂಗಳಲ್ಲೂ ಕೂಡ ತೆರೆಯಬಹುದು (ಉದಾ: ಯುನಿಕ್ಸ್, ಏ.ಐ.ಎಕ್ಸ್).

ಬರಹ ತಂತ್ರಾಂಶದ ಇತರ ಪರಿಕರಗಳು ಮತ್ತು ಸಂಪಾದಕಗಳು

[ಬದಲಾಯಿಸಿ]

ಬರಹ ತಂತ್ರಾಂಶದಲ್ಲಿ ಹಲವು ಉಪಯುಕ್ತ ಪರಿಕರಗಳಾದ ಬರಹ ಐ ಎಂ ಇ , ಬರಹ ಪ್ಯಾಡ್ ಮತ್ತು ಟೂಲ್ಸ್ ಪಡೆಯಬಹುದಾಗಿದೆ. ಇವನ್ನು ಯುನಿಕೋಡ್, ಆಸ್ಕಿ ಬರವಣಿಗೆ ಮತ್ತು ಪರಿವರ್ತಕಗಳಾಗಿಯೂ ಉಪಯೋಗಿಸಬಹುದು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]