ಬರಹ (ತಂತ್ರಾಂಶ)
ಬರಹ - ಗಣಕಯಂತ್ರದ ಕಡತಗಳಲ್ಲಿ ಭಾರತೀಯ ಭಾಷೆಗಳ ಅಕ್ಷರಗಳನ್ನು ಮೂಡಿಸಲು ಮತ್ತು ಪದ ಸಂಸ್ಕಾರಕವಾಗಿ ಉಪಯೋಗಿಸಬಹುದಾದ ಒಂದು ತಂತ್ರಾಂಶ. ಬರಹ ತಂತ್ರಾಂಶವನ್ನು ತಯಾರಿಸಿದವರು ಶೇಷಾದ್ರಿ ವಾಸು. ಬರಹದ ಮೊಟ್ಟ ಮೊದಲ ಆವೃತ್ತಿ ಜನಬಳಕೆಗೆ ಬಿಡುಗಡೆಯಾದ ದಿನಾಂಕ ೧ ಜನವರಿ ೧೯೯೮. ಬರಹದ ಅತ್ಯಂತ ನವೀನ ಆವೃತ್ತಿ ಎಂದರೆ ಬರಹ ೧೦.೦. ಇದು ಬೆಂಬಲಿಸುವ ಲಿಪಿಗಳು ಮತ್ತು ಭಾಷೆಗಳು ಕೆಳಗಿನಂತಿವೆ. ಬರಹ ತಂತ್ರಾಂಶದ ಪ್ರಾಯೋಗಿಕ ಆವೃತ್ತಿ ಉಚಿತವಾಗಿದ್ದು ಹಲವು ಪರಿಕರಗಳೊಂದಿಗೆ ಪೂರ್ಣ ಆವೃತ್ತಿಯನ್ನು ಹಣಪಾವತಿಸಿ ಪಡೆಯಬಹುದಾಗಿದೆ.
ಲಿಪಿ | ಭಾಷೆಗಳು |
---|---|
ಕನ್ನಡ | ಕನ್ನಡ, ಕೊಂಕಣಿ, ತುಳು, ಕೊಡವ |
ದೇವನಾಗರಿ | ಹಿಂದಿ, ಮರಾಠಿ, ಸಂಸ್ಕೃತ, ನೇಪಾಳಿ, ಕೊಂಕಣಿ, ಕಾಶ್ಮೀರಿ, ಸಿಂಧಿ |
ತಮಿಳು | ತಮಿಳು |
ತೆಲುಗು | ತೆಲುಗು |
ಮಲಯಾಳಂ | ಮಲಯಾಳಂ |
ಗುಜರಾತಿ | ಗುಜರಾತಿ |
ಗುರುಮುಖಿ | ಪಂಜಾಬಿ |
ಬಂಗಾಳಿ | ಬಂಗಾಳಿ, ಅಸ್ಸಾಮಿ, ಮಣಿಪುರಿ |
ಒರಿಯಾ | ಒರಿಯಾ |
ಬರಹ ವಿಂಡೋಸ್ ಆಪರೇಟಿಂಗ್ ಸಿಸ್ಟಂನಲ್ಲಿ ಮಾತ್ರ ಕೆಲಸ ಮಾಡುತ್ತದೆ. ಆದರೂ, ಬರಹದಲ್ಲಿ ಉಳಿಸಿದ ಕಡತಗಳು ಯೂನಿಕೋಡ್ ಮಾದರಿಯಲ್ಲಿದ್ದರೆ, ಅದನ್ನು ಬೇರೆ ಆಪರೇಟಿಂಗ್ ಸಿಸ್ಟಂಗಳಲ್ಲೂ ಕೂಡ ತೆರೆಯಬಹುದು (ಉದಾ: ಯುನಿಕ್ಸ್, ಏ.ಐ.ಎಕ್ಸ್).
ಬರಹ ತಂತ್ರಾಂಶದ ಇತರ ಪರಿಕರಗಳು ಮತ್ತು ಸಂಪಾದಕಗಳು
[ಬದಲಾಯಿಸಿ]ಬರಹ ತಂತ್ರಾಂಶದಲ್ಲಿ ಹಲವು ಉಪಯುಕ್ತ ಪರಿಕರಗಳಾದ ಬರಹ ಐ ಎಂ ಇ , ಬರಹ ಪ್ಯಾಡ್ ಮತ್ತು ಟೂಲ್ಸ್ ಪಡೆಯಬಹುದಾಗಿದೆ. ಇವನ್ನು ಯುನಿಕೋಡ್, ಆಸ್ಕಿ ಬರವಣಿಗೆ ಮತ್ತು ಪರಿವರ್ತಕಗಳಾಗಿಯೂ ಉಪಯೋಗಿಸಬಹುದು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ಬರಹ.ಕಾಂ - ಅಧಿಕೃತ ಅಂತರಜಾಲ ತಾಣ
- ಬರಹ ತಂತ್ರಾಂಶ ರೂಪಿಸಿದ್ದು ಏಕೆ ಮತ್ತು ಹೇಗೆ? Archived 2006-05-29 ವೇಬ್ಯಾಕ್ ಮೆಷಿನ್ ನಲ್ಲಿ.[ಮಡಿದ ಕೊಂಡಿ]
- ಕನ್ನಡದಲ್ಲಿ ಈ-ಮೈಲ್ ಕಳಿಸುವುದು : ಬರಹದಲ್ಲಿ ಹೇಗೆ? Archived 2006-06-17 ವೇಬ್ಯಾಕ್ ಮೆಷಿನ್ ನಲ್ಲಿ.[ಮಡಿದ ಕೊಂಡಿ]