ಪಡುಬಿದ್ರಿ
ಪಡುಬಿದ್ರಿ ಅಥವಾ ಪಡುಬಿದ್ರೆ ಎಂದು ಕರೆಯುವ ಸಣ್ಣ ಪಟ್ಟಣವು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕರಾವಳಿ ತೀರದಲ್ಲಿದೆ. ತುಳುವಿನಲ್ಲಿ ಪಡುಬೆದ್ರೆ ಎಂದು ಕರೆಯುತ್ತಾರೆ. ಪಡುಬಿದ್ರಿಯು ಉಡುಪಿಯಿಂದ ಮಂಗಳೂರಿಗೆ ಹೋಗುವ ದಾರಿಯಲ್ಲಿದೆ. ರಾಷ್ಟ್ರೀಯ ಹೆದ್ಧಾರಿ ೬೬ ಪಡುಬಿದ್ರಿ ಆಗಿ ಹಾದು ಹೋಗುತ್ತದೆ.ಪಡುಬಿದ್ರಿಯು ಢಕ್ಕೆಬಲಿ ಆಚರಣೆಗೆ ಪ್ರಸಿದ್ಧವಾಗಿದೆ. ಈ ಆಚರಣೆಯನ್ನು ಪ್ರತಿ ಎರಡು ವರ್ಷಕ್ಕೊಮ್ಮೆ ಮಾಡುತ್ತಾರೆ. ನಂದಿಕೂರ್ ಉಷ್ಣ ವಿದ್ಯುತ್ ಸ‍್ಥಾವರವು ಪಡುಬಿದ್ರಿಗೆ ಹತ್ತಿರದಲ್ಲಿದೆ. ಪಡುಬಿದ್ರಿ ಬೀಚ್ ಇಲ್ಲಿನ ಆಕರ್ಷಣೀಯ ಸ್ಥಳವಾಗಿದೆ.[೧]
ಪ್ರಾದೇಶಿಕ ಭಾಷೆ
[ಬದಲಾಯಿಸಿ]ಪಡುಬಿದ್ರಿಯ ಜನರು ಸಾಮಾನ್ಯವಾಗಿ ತುಳು ಮಾತನಾಡುತ್ತಾರೆ. ಪಡುಬಿದ್ರಿಯಲ್ಲಿ ತುಳು ಭಾಷೆಯ ಜೊತೆ ಕನ್ನಡ,ಕೊಂಕಣಿ,ಬ್ಯಾರಿ ಭಾಷೆ ಮಾತನಾಡುವ ಜನರು ಇದ್ಧಾರೆ.[೨]
ಸಾರಿಗೆ
[ಬದಲಾಯಿಸಿ]ಎಲ್ಲಾ ಬಸ್ಸುಗಳು ಮಂಗಳೂರಿನಿಂದ ಉಡುಪಿಗೆ ಹೋಗುವಾಗ ಪಡುಬಿದ್ರಿಯನ್ನು ಹಾದು ಹೋಗುತ್ತದೆ.ಬಜ್ಪೆಯು ಹತ್ತಿರದ ವಿಮಾನ ನಿಲ್ಧಾಣವಾಗಿದ್ಧು ಕೇವಲ ೪೫ ನಿಮಿಷದ ದಾರಿಯಾಗಿದೆ. ಪಡುಬಿದ್ರಿಯಲ್ಲಿ ಕೊಂಕನ್ ರೈಲ್ವೇ ಮಾರ್ಗದಲ್ಲಿ ರೈಲ್ವೆ ಸ್ಟೇಷನ್ ಇದೆ.[೩]
ಪ್ರೇಕ್ಷಣಿಯ ಸ್ಥಳಗಳು
[ಬದಲಾಯಿಸಿ]- ಪಡುಬಿದ್ರಿ ಬ್ರಹ್ಮಸ್ಥಾನ
- ಪಡುಬಿದ್ರಿ ಬಾಲ ಗಣಪತಿ ದೇವಸ್ಥಾನ
- ಶ‍್ರೀ ಸುಬ್ರಹ್ಮಣ್ಯ ದೇವಸ್ಥಾನ,ಸಂತೂರು
- ಕಾಪು ಬೀಚ್
- ಪಡುಬಿದ್ರಿ ಬೀಚ್
- ಪಡುಬಿದ್ರಿ ಅಂತಿಮ ಹಂತ
- ಪಡುಬಿದ್ರಿ ಉಷ್ಣ ವಿದ್ಯುತ್ ಸ್ಥಾವರ
- ಸಂತೂರ್ ಸುಬ್ರಹ್ಮಣ್ಯ ದೇವಸ್ಥಾನ[೪][೫]
ಉಲ್ಲೇಖ
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2019-07-13. Retrieved 2018-09-15.
- ↑ "ಆರ್ಕೈವ್ ನಕಲು". Archived from the original on 2019-07-07. Retrieved 2018-09-15.
- ↑ https://www.makemytrip.com/routeplanner/padubidri-udupi.html
- ↑ "ಆರ್ಕೈವ್ ನಕಲು". Archived from the original on 2019-07-20. Retrieved 2018-09-15.
- ↑ https://www.justdial.com/Udupi/Tourist-Attraction-in-Padubidri-Udupi/nct-10596038