ವಿಷಯಕ್ಕೆ ಹೋಗು

ನೀಲ್ಸ್ ಹೆನ್ರಿಕ್ ಡೇವಿಡ್ ಬೋರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನೀಲ್ಸ್ ಹೆನ್ರಿಕ್ ಡೇವಿಡ್ ಬೋರ್

ನೀಲ್ಸ್ ಹೆನ್ರಿಕ್ ಡೇವಿಡ್ ಬೋರ್

ಪ್ರಖ್ಯಾತ ಭೌತವಿಜ್ಞಾನಿ ನೀಲ್ಸ್ ಬೋರ್ ಅವರ ಪೂರ್ಣ ಹೆಸರು ನೀಲ್ಸ್ ಹೆನ್ರಿಕ್ ಡೇವಿಡ್ ಬೋರ್. ಇವರು ಕ್ರಿ.ಶ ೧೮೮೫ ರ ಅಕ್ಟೋಬರ್ ೭ ರಂದು ಡೆನ್ಮಾರ್ಕ್ ನ ಕೋಪನ್ಹೇಗನ್ ನಲ್ಲಿ ಜನಿಸಿದರು. ಇವರ ತಂದೆ ಕೋಪನ್ಹೇಗನ್ ವಿಶ್ವವಿದ್ಯಾಲಯದಲ್ಲಿ ಶರೀರ ವಿಜ್ಞಾನದ ಪ್ರಾಧ್ಯಾಪಕರಾಗಿದ್ದರು. ನೀಲ್ಸ್ ತಮ್ಮ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲೇ ಮುಗಿಸಿದರು. ಇವರು ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಅಧ್ಯಯನ ಮಾಡುತ್ತಿದ್ದ ಸಮಯದಲ್ಲಿ ಪ್ರಯೋಗಗಳಿಗೆ ಅಗತ್ಯವಿದ್ದಷ್ಟು ಸೌಲಭ್ಯಗಳಿರಲಿಲ್ಲ . ಹೀಗಾಗಿ ತಂದೆಯ ಪ್ರಯೋಗಾಲಯದಲ್ಲೇ ತಮ್ಮ ಹೆಚ್ಚು ಸಮಯವನ್ನು ಕಳೆಯುತ್ತಿದ್ದರು.[]

ಬಾಲ್ಯ ದಿನಗಳು

[ಬದಲಾಯಿಸಿ]

ಇವರು ತಮ್ಮ ತಂದೆ ತಾಯಿಯ ಹದಿಮೂರು ಮಕ್ಕಳಲ್ಲಿ ಎರಡನೆಯವರು. ಆ ಕಾಲದಲ್ಲಿಯೇ ಒಂದು ಒಳ್ಳೆಯ ಸಂಪತ್ತುಳ್ಳ ಮನೆತನದಿಂದ ಬಂದವರು. ಡ್ಯಾನಿಷ್ ದೇಶದ ಯಹೂದಿ ಮನೆತನದಿಂದ ಬಂದು ಅವರ ಮನೆಯವರು ಬ್ಯಾಕಿಂಗ್ ಮತ್ತು ಪಾರ್ಲಿಮೆಂಟಿನ ಕೆಲಸದಲ್ಲಿ ತೊಡಗಿದ್ದವರು. ಇವರ ಹಿರಿಯ ಅಕ್ಕ ಜೆನ್ಸಿ, ಮತ್ತು ಕಿರಿಯ ತಮ್ಮ ಹೆರಾಲ್ದ್. ಜೆನ್ಸಿಯವರು ಉಪಾದ್ಯಾಯಕಿಯಾದರು, ಮತ್ತು ಹೆಲಾಲ್ದ್ ಗಣಿತದಲ್ಲಿ ಉತ್ತೀರ್ಣರಾದರು. ಅಷ್ಟೇ ಅಲ್ಲದೇ ಕಾಲು ಚೆಂಡುವಿನ ಆಟದಲ್ಲಿ ಹೆಸರು ಮಾಡಿದ್ದರು. ಅವರು ತಮ್ಮ ರಾಷ್ಟ್ರ ತಂಡದಲ್ಲಿ ಭಾಗಿಯಾಗಿ ೧೯೦೮ ಬೇಸಿಗೆ ಒಲೆಂಪಿಕ್ಸ್ ಲಂಡನ್ನಲ್ಲಿ ಆಟವಾಡಿದ್ದರು. ಬೋರ್ ರವರು ಕೂಡ ಒಳ್ಳೆಯ ಕಾಲುಚೆಂಡುವಿನ ಆಟಗಾರರಾಗಿದ್ದರು. ಇವರು ತಮ್ಮ ಡಿಗ್ರಿ ಪದವಿಯನ್ನು ಕೋಫೆನ್ ಜೆನ್ ವಿಶ್ವವಿದ್ಯಾನೆಲಯದಲ್ಲಿ ಪಡೆದರು.

ಸಂಶೋಧನೆ

[ಬದಲಾಯಿಸಿ]

ಇವರು ೧೯೦೯ ರಲ್ಲಿ ಭೌತಶಾಸ್ತ್ರದ ಸ್ನಾತಕೋತ್ತರ ಪದವಿ ಹಾಗು ೧೯೧೧ ರಲ್ಲಿ ಡಾಕ್ಟರೆಟ್ ಪದವಿಯನ್ನು ಪಡೆದರು. ನೀಲ್ಸ್ ಹೆನ್ರಿಕ್ ಡೇವಿಡ್ ಬೋರ್ ರವರು ಪರಮಾಣುವಿಗೆ ನಿಖರ ಭೌತರೂಪ ನೀಡಿ, ಪರಮಾಣು ಜಗತ್ತಿಗೆ ವೈಜ್ಞಾನಿಕ ತಳಪಾಯ ಹಾಕಿದರು. ಇವರು ಪರಮಾಣು ಕುರಿತು ಮಾಡಿದ ಸಂಶೋಧನೆಗಳು ಜಗತ್ಪ್ರಸಿದ್ಧಿ ಪಡೆದವು. ನೀಲ್ಸ್ ಹೆನ್ರಿಕ್ ಡೇವಿಡ್ ಬೋರ್, ಪರಮಾಣು ಕುರಿತು ಮಾಡಿದ ಸಂಶೋಧನೆಗಾಗಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನ ಪಡೆದರು.[]

ಇವರು ೧೯೬೨ ರ ನವೆಂಬರ್ ೧೮ ರಂದು ವಿಧಿವಶರಾದರು.

ಇವರ ಆಸಕ್ತಿ

[ಬದಲಾಯಿಸಿ]

ಇವರ ಪ್ರಮುಖ ವಿಷಯ ಭೌತಶಾಸ್ತ್ರ ಆಗಿತ್ತು. ಈ ವಿಷಯವನ್ನು ಇವರು ಪ್ರೊ. ಕ್ರಿಸ್ಟಿಯನ್ಸೆನ್ ರವರ ಬಳಿ ಕಲೆತರು. ಬೋರ್ ರವರು ಪರಮಾಣುವಿನ ನಮೂನೆಯನ್ನು ತಯಾರಿಸಿದರು. ಅಲ್ಲಿ ಇವರು ಹೇಳಿದ್ದೇನೆಂದರೆ, "energy levels of electrons are discrete and that the electrons revolve in the stable orbits around the atomic nucleus". ಎಲೆಕ್ಟ್ರಾನ್ಗ್ಸಳು ತಮ್ಮದೇ ಆದ ಒಂದು ನಿರ್ಧಿಷ್ಟ ಸ್ತಾನದಲ್ಲಿ ನ್ಯುಕ್ಲಿಯಸ್ ಸುತ್ತಲೂ ಸುತ್ತುತ್ತದೆ, ಆದ ಕಾರಣ ಶಕ್ತಿ ಬಿಡುಗಡೆಯಾಗುತ್ತದ್ದೆ. ಆ ಎಲೆಕ್ಟ್ರಾನ್ಗಳು ಒಂದು ಆರ್ಬಿಟ್ ಪಟ್ಟಿಯಿಂದ ಇನ್ನೊಂದು ಪಟ್ಟಿಗೆ ಹೋಗುತ್ತದೆ. ಆದ್ದರಿಂದ ಶಕ್ತಿಯು ಬಿಡುಗಡೆಯಾಗುತ್ತದೆ. ಬೋರ್ ರವರು ಹ್ಯಾಗನ್ ವಿಶ್ವವಿದ್ಯಾಲಯದಲ್ಲಿ ಸೈದ್ಧಾಂತಿಕ ಭೌತಶಾಸ್ತ್ರದ ಇನ್ಸ್ಟಿಟ್ಯೂಟ್ ಎಂಬುದನ್ನು ಕಂಡು ಹಿಡಿದರು. ಈಗ ಇದನ್ನು" ನೀಲ್ಸ್ ಬೋರ್ ರ್ಇನ್ಸ್ಟಿಟ್ಯೂಟ್" ಎಂದು ಕರೆಯಲಾಗುತ್ತದೆ. ಇದು ಸುಮಾರು ೧೯೨೦ ರಲ್ಲಿ ತೆರೆಯಲಾಗಿತ್ತು. ಬೋರ್ ರವರು ಅಷ್ಟೇ ಅಲ್ಲದೆ ಇತರ ಭೌತವಿಘ್ನಾನಿಗಳ ಜೊತೆ ಕೈಜೋಡಿಸಿದರು. ಉದಾ; ಹಸ್ಸ್ ಕ್ರಾಮರ್ಸ್, ಆಸ್ಕರ್ ಕ್ಲೀನ್ ಜೀಯಾರ್ಜ್, ಡಿ ಹಾವೆಸಿ ಮತ್ತು ವರ್ನರ್ ಹೀಸೆನ್ಬರ್ಗ್. ಬೋರ್ ರವರು ಜರ್ಕೋನಿಯಮ್ ಎಂಬ ರಾಸಾಯನಿಕ ಅಂಶವೊಂದು ಇದೆ ಎಂಡೂ ಊಹಿಸಿದ್ದರು. ತದನಂತರ ಅದನ್ನು ಹಾಫ್ನಿಯಮ್ ಎಂದು ಕರೆಯಲಾಗಿತ್ತು. ಕೊನೆಯದಾಗಿ ಅದನ್ನು ಬೋರಿಯಮ್ ಎಂದೇ ಪ್ರಸಿದ್ದವಾಯಿತು ಅವರ ಹೆಸರಂತೆ. ಸುಮಾರು ಒಂದು ೧೯೩೦ರಲ್ಲಿ, ಬೋರ್ ರವರು ನಾಸಿಸ್ಮ್ ನಿರಾಶ್ರಿತರು ರವರಿಗೆ ಸಹಾಯ ಮಾಡಿದರು.ಯಾವಾಗ ಡೆನ್ಮಾರ್ಕ್ ಎಂಬ ದೇಶ ಜರ್ಮನಿ ದೇಶವು ವಶಪಡಿಸಿಕೊಂಡಿತೋ ಆಗ ಬೋರ್ ರವರು ಹೆಸೆನ್ಬೆರ್ಗ್ ಅಲ್ಲಿ ಖುದ್ದಾಗಿ ಚರ್ಚೆ ಮಾಡಲಾಯಿತು. ತದನಂತರ ಇವರು ಜರ್ಮನ್ ಪರಮಾಣುವಿನ ವೆಪನ್ ನಮೂನೆಗೆ ಅಧಿಕಾರಿಯಾದರು. ಸೆಪ್ಟೆಂಬರ್ ೧೯೪೩ರಲ್ಲಿ ಯಾವಾಗ ಅವರು ಪೋಲಿಸ್ರ್ ವಶವಾಗುತ್ತಾರೋ ಎಂಬುದು ತಿಳಿಯಿತೋ ಆಗ ಸ್ವೀಡೆನ್ ರಾಷ್ಟ್ರಕ್ಕೆ ಹಾರಿ ಹೋದರು. ಅಲ್ಲಿಂದ ಅವರು ಬ್ರಿಟೆನ್ಗೆ ಹೋದರು, ಅಲ್ಲಿ ಅವರು ಬ್ರಿಟ್ನ್ ಕೊಳವೆ ಅಲೋಯ್ಸ್ ಪರಮಾಣುವಿನ ಶಸ್ತ್ರಾಸ್ತ್ರಗಳ ನಮೂನೆಗೆ ಸೇರಿದರು, ಮತ್ತು ಅಷ್ಟೇ ಅಲ್ಲದೆ ಬ್ರಿಟಿಷ್ ಮಿಷನ್ ಮನ್ಹಟ್ಟ್ನ್ ನಮೂನೆಗೆ ಸದಸ್ಯರಾದರು. ಬೋರ್ ರವರು ಸಿ,ಇ,ಆರ್,ಎನ್. ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಅಲ್ಲಿಂದ ಅವರು ಪ್ರಥಮ ಚೇರ್ ಮೆನಾಗಿ ನಾರಡಿಕ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದರು. ಅಷ್ಟೇ ಅಲ್ಲದೆ ಇವರು ಖಗೋಳ ಮತ್ತು ಗಣಿತವನ್ನು ಪ್ರೊ. ತೊರ್ವೇಡ್ ಥೀಲೆವರ್ ರವರ ಬಳಿ ಕಲಿತು ಮತ್ತು ತತ್ವಶಾಸ್ತ್ರವನ್ನು ಪ್ರೊ. ಹೆರಾಲ್ದ್ ಹಾಫೊಡಿಂಗ್ ರವರ ಬಳಿ ಕಲಿತರು. ಬೋರ್ ರವರು ತಮ್ಮ ಎರಡು ಸಹೋದರ ನಡುವೆಯಲ್ಲಿ ಇವರು ಮೊದಲಿಗರಾಗಿ ಮಾಸ್ಟರ್ ಪದವಿಯನ್ನು ಗಳಿಸಿಕೊಂಡರು, ಇದನ್ನು ಪಡೆದದ್ದು ಗಣಿತ ವಿಷಯದಲ್ಲಿ.

ಉಲ್ಲೇಖಗಳು

[ಬದಲಾಯಿಸಿ]
  1. https://www.nobelprize.org/nobel_prizes/physics/laureates/1922/bohr-bio.html
  2. http://www.jewishvirtuallibrary.org/jsource/biography/Bohr.html