ನಿರ್ನಾಳ ಗ್ರಂಥಿಗಳು ಮತ್ತು ರೋಗಗಳು
ನಿರ್ನಾಳ ಗ್ರಂಥಿಗಳು ಮತ್ತು ರೋಗಗಳು
[ಬದಲಾಯಿಸಿ]ಪ್ರತಿಯೊಂದು ನಿರ್ನಾಳ ಗ್ರಂಥಿಗಳ ಅಸ್ತವ್ಯಸ್ಥತೆಯಲ್ಲಿ ಎರಡು ಬದಲಾವಣೆಗಳು ಹಾರ್ಮೋನು ಉತ್ಪತಿ ಕ್ರಿಯೆಯಲ್ಲಿ ಕೆಲವು ಬದಲಾವಣೆಗಳಿಗಾಗಿ ಕೆಲವು ಗುರುತುಗಳು ತೋರುತ್ತವೆ.
ರಚನೆ ಮತ್ತು ಗಾತ್ರದಲ್ಲಿ ಬದಲಾವಣೆ
ಕಾಯಿಲೆಗಳ ಪರಿಣಾಮವಾಗಿ ಈ ಗ್ರಂಥಿ ರಚನೆ ಬದಲಾಗುತ್ತದೆ ಇಲ್ಲವೆ ಗಾತ್ರ ಸಣ್ಣದಾಗುತ್ತದೆ ಅಥವಾ ಸಹಜವಾದುದಕಿಂತಲು ದಪ್ಪವಾಗುತ್ತದೆ ಚರ್ಮದ ತಳದಲ್ಲೇ ನೆಲೆಗೊಂಡ ಗ್ರಂಥಿಗಳಾದ ಥೈರಾಯಿಡ್ ಮತ್ತು ಟೆಸ್ಟಿಸ್(ವೃಷಣ) ಗಳ ಗಾತ್ರದಲ್ಲುಂಟಾಗುವ ಬದಲಾವಣೆಗಳನ್ನು ಪರೀಕ್ಷಿಸಿ ಸುಲುಭವಾಗಿ ಈ ರೋಗಗಳನ್ನು ಗುರುತಿಸಬಹುದು. ಥೈರಾಯಿಡ್ ಊತವನ್ನು ಜನ ಸಾಮಾನ್ಯರು ಗುರುತಿಸಬಹುದು ಕಂಠದ ಮುಂದೆ ಇರುವ ಊತವನ್ನು ಯಾರಲ್ಲಾದರೂ ನೀವು ನೋಡಿರಬಹುದು. ಇದು ಅಹಾರವನ್ನು ನುಂಗಿದಾಗ ಮೇಲಕ್ಕೆ ಸರಿದಾಡುತ್ತದೆ ಥೈರಾಯಿಡ್ ಗ್ರಂಥಿಯ ಇಂಥ: ಪರಿಚಿತ ಗಡ್ಡೆಯನ್ನು 'ಗಾಯಿಟರ್' ಎನ್ನಲಾಗುತ್ತದೆ ಪಿಟುಟರಿ ಗ್ರಥಿಯ ಪ್ರಕರಣದಲ್ಲಿ ಇದು ದಪ್ಪವಾಗಿ ಎರೆಡು ಕಡೆಯ ಜಾಕ್ಷಸ ನರಗಳು ಒಂದನ್ನೋಂದು ದಾಟುವ ಸ್ಥಳದಲ್ಲಿ ಒತ್ತಡ ಉಂಟಾಗುತ್ತದೆ ಇದರ ಪಲಿತಾಂಶ ದೃಷ್ಟಿ ದೋಷ ದಪ್ಪವಾಗಿರುವ ಪಿಟುಟರಿ ಗ್ರಂಥಿ ಮೆದುಳಿನ ಗಡ್ಡೆಯಂತೆ ತಲೆ ಬುರುಡೆಯೊಳಗೆ ಒತ್ತಡವನ್ನು ಹೆಚ್ಚಿಸಿ ತಲೆ ನೋವು ಮತ್ತು ವಾಂತಿಗಳನ್ನು ಉಂಟುಮಾಡುತ್ತದೆ ಹೀಗೆ ಇದು ಆಳವಾದ ಜಾಗದಲ್ಲಿ ಕುಳಿತಿದ್ದರೂ ಇದರ ಗಾತ್ರ ದಪ್ಪವಾಗಿರುವುದನ್ನು ಗುರುತಿಸಲು ಶಖ್ಯವಿದೆ. ಅಡ್ರಿನಲ್ ಗ್ರಂಥಿಗಳಂತಹ ಇತರ ಗ್ರಂಥಿಳಲ್ಲಿ ಇಂತಹ ಬದಲಾವಣೆಗಳನ್ನು ವಿಶಿಷ್ಟವಾದ ಎಕ್ಸ್ -ರೇ ಪರೀಕ್ಷೆಗಳು ಹಾಗೂ ಕೆಲವು ವಿಶಿಷ್ಟ ತಂತ್ರಗಾರಿಕೆಯಿಂದ ಕಂಡು ಹಿಡಿಯಬಹುದು
ಗ್ರಥಿಯ ಕ್ರಿಯೆಯಲ್ಲಿ ಬದಲಾವಣೆ ಕಾಯಿಲೆ ಇರುವ ಗ್ರಂಥಿಗಳು ಸೃವಿಸಿದ ಹಾರ್ಮೋನುಗಳು ಹಲವು ರೀತಿಯಲ್ಲಿ ಬದಲಾಗುತ್ತವೆ ಮೊದಲನೆಯದು ಅದರ ಪ್ರಮಾಣಕ್ಕೆ ಸಂಬದಿಸಿದುದು ಇದು ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು ಮೊದಲಿನ ಪ್ರಸಂಗ' ಅತಿರೇಕದ ಚಟುವಟಿಕೆ 'ಎರೆಡನೆ ಪ್ರಸಂಗದಲ್ಲೂ ಅತಿ ಕಡಿಮೆ ಚಟುವಟಿಕೆ ಉಂಟಾಗುತ್ತದೆ ಹೀಗೆ ಪಿಟುಟರಿ ಕಾಯಿಲೆಯಲ್ಲಿ 'ಹೈಪರ್ ಪಿಟುಟರಿ (ಅತಿರೇಕದ ಚಟುವಟಿಕೆ )ಅಥವಾ 'ಹೈಪೋ ಪಿಟುಟರಿ'(ಪಿಟುಟರಿ ಕಡಿಮೆ ಚಟುವಟಿಕೆ)ಗಳು ಉಂಟಾಗುತ್ತವೆ ಇದರಿಂದ ವ್ಯಕ್ತಿ ಅಸಮಾನ್ಯ ಎತ್ತರ ಬೆಳೆದು ದೈತ್ಯಕಾರ ತಾಳುತ್ತಾನೆ ಅಥವಾ ದೈತ್ಯನಾಗಿ ಕುಬ್ಜನಾಗುತ್ತಾನೆ ರೋಗ ಗ್ರಸ್ತ ಗ್ರಂಥಿಯಿಂದ ಹಾರ್ಮೋನಿನ ಗುಣದಲ್ಲಿ ಬದಲಾವಣೆಯಾಗುವುದೂ ಇದೆ ಅಂದರೆ ಸಹಜವಾಗಿ ಗ್ರಹಿಸುವ ಹಾರ್ಮೋನಿಗಿಂತ ಭಿನ್ನವಾದ ಹಾರ್ಮೋನನ್ನು ಸೃವಿಸುತ್ತದೆ.
ಚಿಹ್ನೆಗಳು ಹಾಗು ರೋಗ-ಲಕ್ಷಣಗಳು
[ಬದಲಾಯಿಸಿ]ಶರೀರದ ಇತರ ಅವಯವಗಳಂತೆ ನಿರ್ನಾಳ ಗ್ರಂಥಿಗಳು ವಿವಿಧ ಬಗೆಯ ರೋಗಗಳಿಗೆ ಪೀಠವಾಗಬಹುದು ಇವುಗಳು ಬೆಳವಣಿಗೆಯಲ್ಲಿ ದೋಷ, ಏಟು, ಉರಿಯೂತ ,ಸೋಂಕು ,ಸವಕಳಿ ಮತ್ತು ಗಡ್ಡೆಗಳಾಗಿರಬಹುದು ಈ ಕಾಯಿಲೆಗಳ ಪರಿಣಾಮವಾಗಿ ಸಹಜ ಕ್ರಿಯೆಯಾದ ಹಾರ್ಮೋನ್ ನ ಉತ್ಪತ್ತಿ ಅಸ್ತವ್ಯಸ್ತಗೊಳಿಸುವುದು ಸ್ವಾಭಾವಿಕ . ಶರೀರದಲ್ಲಿ ನಾನಾ ಬಗೆಯ ಬದಲಾವಣೆಗಳು ಪ್ರಕಟವಾಗುತ್ತದೆ ನಿರ್ನಾಳ ಗ್ರಂಥಿಗಳ ರೋಗ ಹಾಗೂ ಅವುಗಳ ಲಕ್ಷಣಗಳನ್ನು ಎಂಡೋಕ್ರೈನೋಪತಿ ಎನ್ನಲಾಗುತ್ತದೆ........... ಉದಾ:- ಕಾಯಿಲೆಗೊಳಗಾದ ಅಂಡಾಶಯ ಸಹಜವಾಗಿ ಸೃವಿಸುತ್ತಿದ್ದ ಸ್ತ್ರೀ ಹಾರ್ಮೊನಿಗೆ ಬದಲಾಗಿ ಪುರುಷ ಹಾರ್ಮೋನನ್ನು ಸೃವಿಸಲಾರಂಬಿಸುತ್ತದೆ ಇದು ಪುರುಷ ಲಕ್ಷಣಗಳಾದ ಗಡ್ದ ಮತ್ತು ಮೀಸೆಗಳು ಸ್ತ್ರೀಯರಲ್ಲಿ ಬೆಳೆಯುವಂತೆ ಮಾಡುತ್ತದೆ ಈ ಒಂದು ಪ್ರತಿ ಕ್ರಿಯೆಯನ್ನು ವಿರಿಲೇಜೇಶನ್ (Virlization ) ಅಥವಾ ಮಾಸ್ಕಲೈಜೇಶನ್ ಎನ್ನಲಾಗುತ್ತದೆ ಇದನ್ನು ವಿವಿಧ ಬಗೆಯ ಅಂಡಾಶಯದ ಗಡ್ಡೆಗಳಲ್ಲಿ ಕಾಣಬಹುದು ಅಂತೆಯೇ ಪುರುಷರಲ್ಲಿ ಅಸ್ವಭಾವಿಕ ರೀತಿಯಲ್ಲಿ ವೃಷಣಗಳು ವರ್ತಿಸಿದಾಗ ಸ್ತ್ರೀ ಲಕ್ಷಣಗಳಾದ ಸ್ವರಗಳ ಬೆಳವಣಿಗೆ ಉಂಟಾಗುತ್ತದೆ ಇದನ್ನು ಫೇಮಿನೈಜೇಶನ್ (Feminisation ) ಎನ್ನಲಾಗುತ್ತದೆ ಸಂಪೂರ್ಣ ದಹಿಕ ಪರೀಕ್ಷೆಗಳು ಜೊತೆಗೆ ವಾಡಿಕೆಯಾದ ರಕ್ತ ಮತ್ತು ಮೂತ್ರ ಪರೀಕ್ಷೆಗಳು ಎಕ್ಸ್-ರೇ ಪರೀಕ್ಷೆಗಳು ಇಸಿಜಿಗಳು ಹಾರ್ಮೋನು ಸೃವಿಕೆಯ ಗುಣಮಟ್ಟ ಮತ್ತು ಪ್ರಮಾಣದಲ್ಲಿನ ಬದಲಾವಣೆಗಳನ್ನು ತೋರಿಸುತ್ತವೆ ಸೃವಿಕೆ ಅಧಿಕವಾಗಿದೆ ಕಡಿಮೆಯಾಗಿ ಅದರ ಗುಣಮಟ್ಟ ಬದಲಾಗಿದೆ ಎಂದು ಸಾಬೀತು ಪಡಿಸಲು ಹರ್ಮೋನನ್ನು ಅಳೆಯಬೇಕು ಅಥವಾ ಅದರ ವಿಭಜನೆಗೊಂಡ ವಸ್ತುಗಳನ್ನು ರಕ್ತದಲ್ಲಿ ಶರೀರದ ದ್ರವಗಳಲ್ಲಿ ಮೂತ್ರದಲ್ಲಿ ಅಳೆಯುವುದು ಅಗತ್ಯ ಈ ವಿಧಾನಕ್ಕೆ ಹಾರ್ಮೋನು ಅಸೆಸ್ ಎನ್ನುತ್ತಾರೆ ಇವುಗಳಲ್ಲಿ ರಸಾಯನಿಕ ಜೈವಿಕ ಪ್ರಾಣಿಗಳ ಮೇಲಣ ಅಧಾಯನ ಎಂಬ ಎರೆಡು ವಿಧಗಳಿವೆ ಯಾವ ಅಂಶಗಳು ನಿರ್ನಾಳ ಗ್ರಥಿಗಳ ರೋಗ ಉಂಟುಮಾಡುತ್ತವೆ ಎಂದು ತಿಳಿದ ನಂತರ ನಿರ್ನಾಳ ಗ್ರಥಿಗಳ ವ್ಯೂಹದ ಹಲವಾರು ಕಾಯಿಲೆ ಗಳನ್ನು ಅರ್ಥಮಾಡಿಕೊಳ್ಳಬಹುದು ಈ ಮುಂದೆ ಕೊಡಲಾದ ಕೋಷ್ಟಕದ ಅವಲೋಕನವು ಪ್ರತೀ ಅಂತ:ಸ್ರಾವಿ ಗ್ರಥಿಗಳ ಬಗ್ಗೆ ತಿಳಿಸುತ್ತದೆ ಅವುಗಳ ಮಿತಿಮೀರಿದ ಕೆಲಸದ ಕೊರತೆ. ಅಸಹಜ ಕೆಲಸಗಳಿಂದುಂಟಾಗುವ ಕಾಯಿಲೆಗಳು ಮತ್ತು ರೋಗಗಳ ಮುಖ್ಯ ಗುರುತುಗಳನ್ನು ತಿಳಿಸುತ್ತದೆ. ಥೈರಾಯಿಡ್ ಕುರಿತಂತೆ ಅಸ್ವಭಾವಿಕವಾದ ಊತ ಕ್ರಿಯೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲದೆ ಕಾಣಿಸಿಕೊಳ್ಳಬಹುದು ಇಂತಹ ಪ್ರಕರಣಗಳನ್ನು ಸರಳ ಗಾಯಿಟರ್ ಎನ್ನುವರು ಅದ್ಯಾಗು ಎಚ್ಚರಿಕೆಯಿಂದ ಒಂದು ಮಾತು ಇಲ್ಲಿ ಅಗತ್ಯ . ಇಂತಹ ಗುಣಲಕ್ಷಣಗಳು ಇದ್ದಕೂಡಲೇ ಯಾರು ಕಾಯಿಲೆ ಇದೆ ಎಂದು ಒಮ್ಮೇಲೆ ನಿರ್ಧಾರ ಮಾಡಿಬಿಡಬಾರದು ಇದಕ್ಕೆ ಒಂದು ಉತ್ತಮ ಉದಾಹರಣೆ ಕುಬ್ಜರಾಗುವುದು ಕುಬ್ಜರಾಗಿ ಇರುವುದಕ್ಕೆ ನಿರ್ನಾಳ ಗ್ರಥಿಗಳ ರೋಗಗಳಲ್ಲದೆ ಅನುವಂಶಿಯ ಅಥವಾ ಕೌಟಂಭಿಕ ಅಥವಾ ಅಪೌಷ್ಟಿಕತೆ ಶ್ವಾಸಕೋಶದ ಹೃದಯದ ಮತ್ತು ಯಕೃತ್ತಿನ ನಿದಾನಗತಿಯ ಕಾಯಿಲೆಗಳಿರಬಹುದು .ಕುಲಂಕುಶವಾದ ರೋಗ ವಿವರ ಮತ್ತು ದೇಹ ಪರೀಕ್ಷೆಗಳಿಂದ ವೈದ್ಯರು ಸ್ಪಷ್ಟ ಕಾರಣಗಳನ್ನು ಖಚಿತಪಡಿಸಬಹುದು ಹಾಗೂ ತೃಪ್ತಿಕರವಾದ ಚಿಕಿತ್ಸೆ ಮಾಡಬಹುದು.
ಥೈರಾಯಿಡ್ ಗ್ರಂಥಿಯ ಸಮಸ್ಸೆ
[ಬದಲಾಯಿಸಿ]ಥೈರಾಯಿಡ್ ಗ್ರಂಥಿಯ ಪ್ರಧಾನ ಸಮಸ್ಸೆ
ಥೈರಾಯಿಡ್ ಗ್ರಂಥಿಯ ಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ಅದು ಅನೇಕ ಆರೋಗ್ಯ ಸಮಸ್ಸೆಗಳಿಗೆ ಕಾರಣವಾಗುತ್ತದೆ ಎಲ್ಲಾ ಸಮಸ್ಸೆಗಳನ್ನು ಒಟ್ಟಾಗಿ ಸೇರಿಸಿ ಅದನ್ನು ಥೈರಾಯಿಡ್ ಗಲಿಬಿಲಿ ಅಥವಾ ಕ್ರಮ ತಪ್ಪುವುದು ಎಂದು ಕರೆಯಬಹುದು. ಥೈರಾಯಿಡ್ ನ ಗಲಿಬಿಲಿ
- A ಆರೋಗ್ಯದ ಸಮಸ್ಸೆಗಳು ಎಲ್ಲವೂ ಥೈರಾಯಿಡ್ ದೊಡ್ಡದಾಗಲು ಕಾರಣವಾಗಬಹುದು (Goiter)ಇದರಲ್ಲಿ ೪ ಪ್ರಧಾನ ಸಮಸ್ಸೆಗಳನ್ನು ಗುರುತಿಸಬಹುದು.
- ೧) ಥೈರಾಯಿಡ್ ಗ್ರಂಥಿಯ ಅತಿಯಾದ ಕ್ರಿಯೆ ಹೈಪೋಥೈರಾಯಿಡಿಸಮ್
- ೨) ಥೈರಾಯಿಡ್ ಗ್ರಂಥಿಯ ಅತ್ಯಂತ ಕಡಿಮೆ ಕ್ರಿಯೆ ಹೈಪೋಥೈರಾಯಿಡಿಸಮ್
- ೩) ಥೈರಾಯಿಡ್ ಗ್ರಂಥಿಯ ಗಂಟುಗಳು Nodule: ಥೈರಾಯಿಡ್ ನಾಡಬಲ್ (ಕ್ಯಾನ್ಸರ್ ರಹಿತದ ಗಂಟು)
- ೪) ಥೈರಾಯಿಡ್ ಗ್ರಂಥಿಯ ಕ್ಯಾನ್ಸರ್ (Thyroid Cancer ) ಈ ಎಲ್ಲಾ ಸಮಸ್ಸೆಗಳು ಗಳಗಂಡಕ್ಕೆ (Goiter ) ಅಂದರೆ ಥೈರಾಯಿಡ್ ಗ್ರಂಥಿ ದೊಡ್ಡದಾಗುವುದಕ್ಕೆ ಕಾರಣವಾಗಬಹುದು.
ಚಿಕಿತ್ಸೆ
[ಬದಲಾಯಿಸಿ]- ಕರಾರುವಕ್ಕಾಗಿ ರೋಗ ಪತ್ತೆ ಮಾಡಿದ ನಂತರವೇ ಒಂದು ನಿರ್ದಿಷ್ಟ ಗ್ರಂಥಿ ಅಧಿಕ ಚಟುವಟಿಕೆ ಕಡಿಮೆ ಚಟುವಟಿಕೆ ಹೊಂದಿದೆಯೇ ಎನ್ನುವುದಕ್ಕೆ ಅನುಸಾರವಾಗಿ ಚಿಕಿತ್ಸೆ ನೆಡಸಲಾಗುತ್ತದೆ
- ಹೈಪೋ ಪಂಕ್ಷನ್ :- ಚಟುವಟಿಕೆ ಕಡಿಮೆಯಾದಾಗ ಒಂದು ಗ್ರಂಥಿ ಸೃವಿಸಿದ ಹಾರ್ಮೋನು ಕಡಿಮೆಯಾಗಿದ್ದಲ್ಲಿ ಅಥವಾ ನಿಂತು ಹೊಗಿದ್ದಲ್ಲಿ ಮಾಡಬೇಕಾದ ಚಿಕಿತ್ಸೆ ಎಂದರೆ ಇಂತ ಹಾರ್ಮೋನುಗಳನ್ನು ರೋಗಿಗಳಿಗೆ ಬಾಯಿಯಿಂದ ಅಥವಾ ಇಂಜೆಕ್ಷನ್ ರೂಪದಲ್ಲಿ ಕೊಡುವುದು ಇದನ್ನು ಮರು ಭರ್ತಿ ಮಾಡುವ ಚಿಕಿತ್ಸೆ ಎನ್ನುವರು ಇಂತ ಕೆಲವು ಹಾರ್ಮೋನುಗಳು ಪ್ರಾಣಿ ಮೂಲದಿಂದ ತಯಾರಿಸಿದವು ಮತ್ತು ಬಹಳ ದುಬಾರಿ ಲಿಂಗ ಹಾರ್ಮೋನು ಮತ್ತು ಥೈರಾಯಿಡ್ ಹಾರ್ಮೋನುಗಳನ್ನು ಬಾಯಿಯಿಂದ ಕೊಡಬಹುದಾದರೆ ಇನ್ಸುಲಿನ್ಎಸಿ ಟಿ ಎಚ್ (A C T H ) ಮುಂತಾದವುಗಳನ್ನು ಇಂಜೆಕ್ಷನ್ ಮೂಲಕ ಕೊಡಬೇಕಾಗುತ್ತದೆ ಬಾಯಿಯಿಂದ ಇವುಗಳ ಸೇವನೆಯಾದರೆ ಜೀರ್ಣನಾಳದಲ್ಲಿ ಇವುಗಳ ನಾಶವಾಗುತ್ತದೆ ಕೆಲವು ಪ್ರಸಂಗಗಳಲ್ಲಿ ಮರು ಭರ್ತಿ ಮಾಡುವ ಚಿಕಿತ್ಸೆ ಧೀರ್ಘ ಕಾಲ ಜೀವನ ಪರಿಯಂತ ನೆಡಸಬೇಕಾಗುತ್ತದೆ ಅಥೈರಾಮಿಟಿಕ್ ಕ್ರಿಟಿನಿಸಂ ( Athyrmtic Cretinism ) ಇಂತ ಒಂದು ಸ್ಥಿತಿ ಭ್ರೂಣವಸ್ಥೆಯಲ್ಲಿ ಥೈರಾಯಿಡ್ ಬೆಳೆಯುವಲ್ಲಿ ಪೂರ್ಣ ವೈಪಲ್ಯ ವಿರುತ್ತದೆ ಈ ಪ್ರಸಂಗಗಳಲ್ಲಿ ಥೈರಾಕ್ಸಿನ್ ಅನ್ನು ಜೀವನ ಪರಿಯಂತ ಕೊಡಬೇಕು ಈ ಹಾರ್ಮೋನನ್ನು ಬಾಯಿಯ ಮೂಲಕ ಕೊಡಬಹುದಾದ್ದರಿಂದ ಇದು ಕಷ್ಟವೇನಲ್ಲ ಇಂಜೆಕ್ಷನ್ ಮೂಲಕವೇ ಹಾರ್ಮೋನುಗಳನ್ನು ಕೊಡಬೇಕಾದ ಪ್ರಸಂಗದಲ್ಲಿ ಪ್ರತೀ ದಿನ ತೆಗೆದುಕೊಳ್ಳುವುದು ಕಷ್ಟಕರ ಉದಾಹರಣೆಗೆ ಮಧುಮೇಹ ರೋಗವುಳ್ಳವರು ಇನ್ಸುಲಿನ್ ಇಂಜೆಕ್ಷನ್ ಪ್ರತೀ ದಿನ ತೆಗೆದುಕೊಳ್ಳಬೇಕು
ಹೈಪೋಥೈರಾಯ್ಡ್
[ಬದಲಾಯಿಸಿ]- ಥೈರಾಯ್ಡ್ ಹಾರ್ಮೋನ್ ಸಂಯೋಜನಗಳ ಹುಟ್ಟಿನಿಂದ ಬಂದ ದೋಷಗಳು ಆಜನ್ಮ (ಜನ್ಮಜಾತ) ಹೈಪೋಥೈರಾಯ್ಡಿಸಮ್ ಅನ್ನು ಉಂಟುಮಾಡುತ್ತವೆ (E೦೩.೦)
- ಔಷಧ ವೈಜ್ಞಾನಿಕ ಚಿಕಿತ್ಸೆಗಳ ಅಡ್ಡ-ಪರಿಣಾಮಗಳು (E೦೩.೨)
ಹೈಪರ್ ಥೈರಾಯ್ಡ್
[ಬದಲಾಯಿಸಿ]- ಗ್ರೇವ್ಸ್ನ ಕಾಯಿಲೆಗಳು (E೦೫.೦)
- ಥೈರಾಯ್ಡಿಟಿಸ್ (ತೀವ್ರ ಅಥವಾ ತೀಕ್ಷಣವಾದ) (E೦೬)
- ಥೈರಾಯ್ಡ್ ಕ್ಯಾನ್ಸರ್
ಕಾರಣಗಳು
[ಬದಲಾಯಿಸಿ]ಜಗತ್ತಿನಾದ್ಯಂತ,ನಿರ್ನಾಳ ಗ್ರಂಥಿಗಳು ಮತ್ತು ರೋಗಗಳು ರೋಗದ ಪ್ರಮುಖ ಕಾರಣವೆಂದರೆ ಅಯೋಡಿನ್ ಕೊರತೆ. ಅಯೋಡೀಕರಣಗೊಳಿಸಿದ ಉಪ್ಪನ್ನು ಬಳಸುವ ದೇಶಗಳಲ್ಲಿ, ಹಾಷಿಮೋಟೋನ ಥೈರೋಡಿಟಿಸ್ ಇದು ಹೆಚ್ಚು ಸಾಮಾನ್ಯವಾದ ಕಾರಣವಾಗಿದೆ. [೨]
ಬಾಹ್ಯ ಕೊಂಡಿಗಳು
[ಬದಲಾಯಿಸಿ]ನೋಡಿ
[ಬದಲಾಯಿಸಿ]- ಅಂತಃಸ್ರಾವ ಶಾಸ್ತ್ರ
- ನಿರ್ನಾಳ ಗ್ರಂಥಿಗಳ ರೋಗಗಳು
- ದುಗ್ಧರಸ ಗ್ರಂಥಿ (Lymph Node) en:Lymphatic system
- ನಿರ್ನಾಳ ಗ್ರಂಥಿಗಳು ಮತ್ತು ರೋಗಗಳು
- ಮಾನವರಲ್ಲಿ ನಿರ್ನಾಳ ಗ್ರಂಥಿಗಳು
ಉಲ್ಲೇಖ
[ಬದಲಾಯಿಸಿ]??