ವಿಷಯಕ್ಕೆ ಹೋಗು

ಧಾರವಾಡ ಪೇಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಧಾರವಾಡ ಪೇಡ
ಧಾರವಾಡ ಪೇಡ
ಮೂಲ
ಮೂಲ ಸ್ಥಳಭಾರತ
ಪ್ರಾಂತ್ಯ ಅಥವಾ ರಾಜ್ಯಧಾರವಾಡ, ಕರ್ನಾಟಕ
ವಿವರಗಳು
ಸೇವನಾ ಸಮಯಸಿಹಿ ತಿಂಡಿ
ಮುಖ್ಯ ಘಟಕಾಂಶ(ಗಳು)ಹಾಲು, ಗಟ್ಟಿಗೊಳಿಸಿದ ಹಾಲು, ಸಕ್ಕರೆ
ಪ್ರಭೇದಗಳುಜಮಖಂಡಿ ಪೇಡ
ಪೋಷಕಾಂಶಗಳು115 mg []
ಇತರೆ ವಿವರಗಳುGI number: 85

ಧಾರವಾಡ ಪೇಡ ಕರ್ನಾಟಕ ರಾಜ್ಯದ ಹುಬ್ಬಳ್ಳಿ-ಧಾರವಾಡಗಳಲ್ಲಿ ಪ್ರಸಿದ್ಧವಾದ ಸಿಹಿ ತಿಂಡಿಯಾಗಿದೆ. ಈ ಪೇಡದ ಹೆಸರಲ್ಲಿ ಧಾರವಾಡ ಎಂಬ ಸ್ಥಳನಾಮವಿದೆ. ಹಾಗಾಗಿ ಇದು ಉತ್ತರ ಕರ್ನಾಟಕದ ಧಾರವಾಡ ಸ್ಥಳದಲ್ಲಿನ ಉತ್ಪಾದನೆಯಾಗಿದೆ. ಈ ಪೇಡವು ದೇಶಾದ್ಯಂತ ಪ್ರಸಿದ್ಧವಾಗಿದೆ. ಹುಬ್ಬಳ್ಳಿಯಲ್ಲಿ ಈ ಸಿಹಿಯು ಉತ್ತಮ ದರ್ಜೆಯಲ್ಲಿ ಠಾಕೂರರ ಪೇಡೆ ಅಂಗಡಿಯಲ್ಲಿ ದೊರೆಯುತ್ತದೆ. ಈ ಸಿಹಿಯು ಸುಮಾರು ೧೭೫ ವರ್ಷಗಳಷ್ಟು ಹಿಂದಿನಿಂದ ಬಳಕೆಗೆ ಬಂದಿದೆ. ಧಾರವಾಡ ಫೇಡವು ಭಾರತದ ಭೌಗೋಳಿಕ ಚಿಹ್ನೆಗಳಲ್ಲಿ ಒಂದಾಗಿದೆ.[] ಇದರ GI ಟ್ಯಾಗ್ ಸಂಖ್ಯೆಯು ೮೫ ಆಗಿದೆ.[]

ಇಂಗ್ಲಿಷ್ ಭಾಷೆಯಲ್ಲಿ Pheda/Pedha ಎಂಬ ಪದ ಬಳಕೆಯಲ್ಲಿದೆ. ಆಡುಭಾಷೆಯಲ್ಲಿ ಧಾರವಾಡ ಫೇಡೆ ಅಥವಾ ಧಾರವಾಡ ಪೇಢೆ ಎಂದು ಕರೆಯುವ ಧಾರವಾಡ ನಗರದ ಸ್ವಾದಿಷ್ಟ ಸಿಹಿತಿಂಡಿ. ಇದನ್ನು ಧಾರವಾಡದ ಒಂದು ಭಾಗವಾಗಿಯೇ ಪರಿಗಣಿಸಲಾಗುತ್ತಿದೆ. ಧಾರವಾಡ ಅಂದರೆ ಪೇಡ, ಪೇಡ ಅಂದರೆ ಧಾರವಾಡ ಅನ್ನುವ ರೀತಿ ಇದು ಖ್ಯಾತಿಯನ್ನು ಪಡೆದಿದೆ. "ಠಾಕೂರ ಪೇಡಾ'' ಎಂದು ಮೊದಲು ಕರೆಯಲ್ಪಡುತ್ತಿದ್ದ ಧಾರವಾಡದ ಪೇಡಕ್ಕೆ ಸುಮಾರು ಒಂದೂವರೆ ಶತಮಾನದಷ್ಟು ಸುದೀರ್ಘ ಇತಿಹಾಸವಿದೆ. ಬೇರೆ ಪೇಡಾಗಳಿಗೆ ಹೋಲಿಸಿದರೆ ಇದು ತೀರ ಭಿನ್ನ. ಆದರೆ ತನ್ನದೇ ಆದ ವಿಶಿಷ್ಠ ರುಚಿ ಮತ್ತು ಗುಣಕ್ಕೆ ಹೆಸರುಗಳಿಸಿದೆ. ಶತಮಾನಗಳ ಹಿಂದೆ ಉತ್ತರ ಭಾರತದ ಲಖ್ನೋ ನಗರದಿಂದ ವಲಸೆಬಂದ 'ಥಾಕೂರ್ ಪರಿವಾರ', ಜೀವನೋಪಾಯಕ್ಕಾಗಿ ಪಾರಂಪರಿಕವಾಗಿ ಚಾಲ್ತಿಯಲ್ಲಿದ್ದ 'ಪೇಡಾ' ತಯಾರಿಕೆಯನ್ನು ಧಾರವಾಡದಲ್ಲೂ ಮುಂದುವರೆಸಿದರು. ಮೊದಲು 'ಥಾಕೂರ್ ಫೇಡ' ಎಂದು ಹೇಳಿ ಮಾರುತ್ತಿದ್ದ ಸಿಹಿತಿನಿಸು, ಕಾಲಕ್ರಮೇಣದಲ್ಲಿ 'ಧಾರವಾಡ್ ಪೇಡ' ಎಂಬ ಹೆಸರಿನಿಂದ ಜನಪ್ರಿಯಗೊಂಡಿತು. ಕೇವಲ ಅತ್ಯುತ್ತಮ ರುಚಿ ಮತ್ತು ಗುಣಮಟ್ಟವನ್ನು ಕಾಯ್ದುಕೊಂಡು ಬಂದು ಈಗ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ವಲಯದಲ್ಲೂ ಹೆಸರುಗಳಿಸಿದೆ. ಥಾಕುರ್ ಕುಟುಂಬ ಅತಿ ಶ್ರದ್ಧೆ ಮತ್ತು ಸಂಯಮದಿಂದ ಸಿಹಿತಿಂಡಿ ತಿನಸುಗಳನ್ನು ತಯಾರಿಸುತ್ತಾ ಬಂದಿದೆ. ಅದರಲ್ಲಿ ಪೇಡಕ್ಕೆ ವಿಶೇಷ ಸ್ಥಾನವಿದೆ. ಕೃತಕಬಣ್ಣ ಇಲ್ಲವೇ ರಾಸಾಯನಿಕಗಳ ಬಳಕೆ ಇಲ್ಲದ ಶುದ್ಧವಾದ ಹಾಲು, ಸಕ್ಕರೆಗಳ ಹದವಾದ ಮಿಶ್ರಣದಿಂದ 'ಸ್ವತಃ ಕೈ'ನಿಂದ ತಯಾರಿಸಲ್ಪಡುವ ತನ್ನದೇ ಆದ 'ಸ್ವಾಭಾವಿಕ ಬಣ್ಣ' ಹೊಂದಿದೆ. ಇದರ ಗುಣಮಟ್ಟವನ್ನು ಅತಿ ಎಚ್ಚರಿಕೆಯಿಂದ ಕಾಯ್ದುಕೊಂಡು ಬಂದಿದ್ದಾರೆ ಸೀಮಿತ ಪ್ರಮಾಣದಲ್ಲಿ 'ಪ್ರತಿದಿನವೂ ತಾಜ' ತಯಾರಾಗುವ ಈ ಪೇಡ ಕೊಳ್ಳಲು ಗ್ರಾಹಕರು ಸರತಿಯಲ್ಲಿ ಕಾಯಬೇಕು. 'ಧಾರವಾಡ ಪೇಡಾ'ಕ್ಕೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.[]

ಪ್ರಶಸ್ತಿ ಪುರಸ್ಕಾರಗಳು

[ಬದಲಾಯಿಸಿ]
  • ಸನ್. ೧೯೧೩ ರಲ್ಲಿ 'ಲಾರ್ಡ್ ವಿಲಿಂಗ್ಟನ್ ಮೆಡಲ್',
  • ಸನ್. ೧೯೯೯ ರಲ್ಲಿ 'ಕರ್ನಾಟಕ ಸರ್ಕಾರ ಪ್ರಶಸ್ತಿ'
  • ಸನ್. ೨೦೦೧ ರಲ್ಲಿ 'ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ'[]
  • ಸನ್. ೨೦೦೨ ರಲ್ಲಿ 'ರಾಜೀವ್ ಗಾಂಧಿ ಎಕ್ಸಲೆನ್ಸಿ ಪ್ರಶಸ್ತಿ' ಮುಂತಾದವುಗಳು.

ತಯಾರಿಸುವ ವಿಧಾನ

[ಬದಲಾಯಿಸಿ]

ಇದನ್ನು ಹಾಲಿನಿಂದ ತಯಾರಿಸಲಾಗುತ್ತದೆ. ಹಾಲನ್ನು ಕುದಿಸಿ, ಅದರಲ್ಲಿರುವ ನೀರಿನಂಶವನ್ನು ಪೂರ್ಣವಾಗಿ ತೆಗೆಯಲಾಗುತ್ತದೆ. ನಂತರ ಸಕ್ಕರೆ ಬೆರೆಸಿ ಈ ಸಿಹಿ ತಿಂಡಿಯನ್ನು ತಯಾರಿಸಲಾಗುತ್ತದೆ.[]

ಇವನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2023-10-04. Retrieved 2016-01-25.
  2. http://www.business-standard.com/article/economy-policy/k-taka-gets-highest-number-of-gi-tags-108041101071_1.html
  3. https://en.wikipedia.org/wiki/List_of_Geographical_Indications_in_India
  4. "ಆರ್ಕೈವ್ ನಕಲು". Archived from the original on 2016-02-07. Retrieved 2016-01-25.
  5. http://dharwadapedha.blogspot.in/
  6. http://kannada.boldsky.com/recipes/sweet/0120-doodh-peda.html