ಧಾರವಾಡ ಪೇಡ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
'ತಾಜಾ ಧಾರವಾಡದ ಫೇಡೆ'

ಧಾರವಾಡ ಪೇಡೆ (ಅಥವ ಧಾರವಾಡ ಫೇಡ) ಧಾರವಾಡ ನಗರದ ಸ್ವಾದಿಷ್ಟ ಸಿಹಿತಿಂಡಿ. ಇದನ್ನು ಧಾರವಾಡದ ಒಂದು ಭಾಗವಾಗಿಯೇ ಪರಿಗಣಿಸಲಾಗುತ್ತಿದೆ. ಧಾರವಾಡ ಅಂದರೆ ಪೇಡ, ಪೇಡ ಅಂದರೆ ಧಾರವಾಡ ಅನ್ನುವ ರೀತಿ ಇದು ಖ್ಯಾತಿಯನ್ನು ಪಡೆದಿದೆ. "ಠಾಕೂರ ಪೇಡಾ' ಎಂದು ಮೊದಲು ಕರೆಯಲ್ಪಡುತ್ತಿದ್ದ ಧಾರವಾಡದ ಫೆಡೆಗೆ ಸುಮಾರು ಒಂದೂವರೆ ಶತಮಾನದಷ್ಟು ಸುದೀರ್ಘ ಇತಿಹಾಸವಿದೆ. ಬೇರೆ ಫೇಡಾಗಳಿಗೆ ಹೋಲಿಸಿದರೆ ಇದು ತೀರ ಭಿನ್ನ. ಆದರೆ ತನ್ನದೇ ಆದ ವಿಶಿಷ್ಠ ರುಚಿ ಮತ್ತು ಗುಣಕ್ಕೆ ಹೆಸರುಗಳಿಸಿದೆ. ಶತಮಾನಗಳ ಹಿಂದೆ ಉತ್ತರ ಭಾರತದ ಲಖ್ನೋ ನಗರದಿಂದ ವಲಸೆಬಂದ 'ಥಾಕೂರ್ ಪರಿವಾರ', ಜೀವನೋಪಾಯಕ್ಕಾಗಿ ಪಾರಂಪರಿಕವಾಗಿ ಚಾಲ್ತಿಯಲ್ಲಿದ್ದ 'ಫೇಡಾ' ತಯಾರಿಕೆಯನ್ನು ಧಾರವಾಡದಲ್ಲೂ ಮುಂದುವರೆಸಿದರು. ಮೊದಲು 'ಥಾಕೂರ್ ಫೇಡ' ಎಂದು ಹೇಳಿ ಮಾರುತ್ತಿದ್ದ ಸಿಹಿತಿನಿಸು, ಕಾಲಕ್ರಮೇಣದಲ್ಲಿ 'ಧಾರವಾಡ್ ಪೇಡ' ಎಂಬ ಹೆಸರಿನಿಂದ ಜನಪ್ರಿಯಗೊಂಡಿತು. ಕೇವಲ ಅತ್ಯುತ್ತಮ ರುಚಿ ಮತ್ತು ಗುಣಮಟ್ಟವನ್ನು ಕಾಯ್ದುಕೊಂಡು ಬಂದು, ಈಗ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ವಲಯದಲ್ಲೂ ಹೆಸರುಗಳಿಸಿತು. ಥಾಕುರ್ ಕುಟುಂಬ ಅತಿ ಶ್ರದ್ಧೆ ಮತ್ತು ಸಂಯಮದಿಂದ ಸಿಹಿತಿಂಡಿ ತಿನಸುಗಳನ್ನು ತಯಾರಿಸುತ್ತಾ ಬಂದಿದೆ. ಅದರಲ್ಲಿ ಪೇಡಕ್ಕೆ ವಿಶೇಷ ಸ್ಥಾನವಿದೆ.ಕೃತಕಬಣ್ಣ ಇಲ್ಲವೇ ರಾಸಾಯನಿಕಗಳ ಬಳಕೆ ಇಲ್ಲದ ಶುದ್ಧಹಾಲು, ಸಕ್ಕರೆ ಹದವಾದ ಮಿಶ್ರಣದಿಂದ 'ಸ್ವತಃ ಕೈ'ನಿಂದ ತಯಾರಿಸಲ್ಪಡುವ ತನ್ನದೇ ಆದ 'ಸ್ವಾಭಾವಿಕ ಬಣ್ಣ' ಹೊಂದಿದೆ. ಇದರ ಗುಣಮಟ್ಟವನ್ನು ಅತಿ ಎಚ್ಚರಿಕೆಯಿಂದ ಕಾಯ್ದುಕೊಂಡು ಬಂದಿದ್ದಾರೆ ಸೀಮಿತ ಪ್ರಮಾಣದಲ್ಲಿ 'ಪ್ರತಿದಿನವೂ ತಾಜ' ತಯಾರಾಗುವ ಈ ಫೇಡ ಕೊಳ್ಳಲು ಗ್ರಾಹಕರು ಸರತಿಯಲ್ಲಿ ಕಾಯಬೇಕು. 'ಧಾರವಾಡ ಫೇಡಾಕ್ಕೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭ್ಯವಿವೆ :

ಪ್ರಶಸ್ತಿ ಪುರಸ್ಕಾರಗಳು[ಬದಲಾಯಿಸಿ]

  • ಸನ್. ೧೯೧೩ ರಲ್ಲಿ 'ಲಾರ್ಡ್ ವಿಲಿಂಗ್ಟನ್ ಮೆಡಲ್',
  • ಸನ್. ೧೯೯೯ ರಲ್ಲಿ 'ಕರ್ನಾಟಕ ಸರ್ಕಾರ ಪ್ರಶಸ್ತಿ'
  • ಸನ್. ೨೦೦೧ ರಲ್ಲಿ 'ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ'
  • ಸನ್. ೨೦೦೨ ರಲ್ಲಿ 'ರಾಜೀವ್ ಗಾಂಧಿ ಎಕ್ಸಲೆನ್ಸಿ ಪ್ರಶಸ್ತಿ' ಮುಂತಾದವುಗಳು.

ತಯಾರಿಸುವ ವಿಧಾನ[ಬದಲಾಯಿಸಿ]

ಇದನ್ನು ಹಾಲಿನಿಂದ ತಯಾರಿಸಲಾಗುತ್ತದೆ. ಹಾಲನ್ನು ಕುದಿಸಿ, ಅದರಲ್ಲಿರುವ ನೀರಿನಂಶವನ್ನು ಪೂರ್ಣವಾಗಿ ತೆಗೆಯಲಾಗುತ್ತದೆ. ನಂತರ ಸಕ್ಕರೆ ಬೆರೆಸಿ ಈ ಸಿಹಿ ತಿಂಡಿಯನ್ನು ತಯಾರಿಸಲಾಗುತ್ತದೆ.

ಇವನ್ನೂ ನೋಡಿ[ಬದಲಾಯಿಸಿ]