ವಿಷಯಕ್ಕೆ ಹೋಗು

ದುಂಡು ಮೇಜಿನ ಸಭೆ(ಭಾರತ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಲೇಖನವು ಆಂಗ್ಲೋ-ಭಾರತೀಯರ ದುಂಡು ಮೇಜಿನ ಸಭೆಯನ್ನು ಕುರಿತದ್ದಾಗಿದೆ. ಡಚ್-ಇಂಡೋನೇಷ್ಯನ್ ದುಂಡು ಮೇಜಿನ ಸಭೆಗಾಗಿ ಡಚ್-ಇಂಡೋನೇಷ್ಯನ್ ದುಂಡು ಮೇಜಿನ ಸಭೆಯನ್ನು ನೋಡಿ. ದುಂಡು ಮೇಜಿನ ಇತರ ಉಪಯೋಗಕ್ಕಾಗಿ,ದುಂಡು ಮೇಜನ್ನು ನೋಡಿ(ಅಸ್ಪಷ್ಟತೆಯ ನಿವಾರಣೆ).

೧೯೩೦-೩೨ ರ ಮೂರು ದುಂಡು ಮೇಜಿನ ಸಭೆ ಯು, ಭಾರತದಲ್ಲಿ ಸಂವಿಧಾನಾತ್ಮಕ ತಿದ್ದುಪಡಿಗಳನ್ನು ಚರ್ಚಿಸಲು ಬ್ರಿಟಿಷ್ ಸರ್ಕಾರ ಏರ್ಪಡಿಸಿದಂತಹ ಸಮಾಲೋಚನೆಗಳ ಸರಣಿಯಾಗಿದೆ. ೧೯೩೦ ರ ಮೇ ಯಲ್ಲಿ ಸೈಮನ್ ಆಯೋಗ ಮಂಡಿಸಿದಂತಹ ವರದಿಯ ಶಿಫಾರಸ್ಸಿನಿಂದಾಗಿ ಇವುಗಳನ್ನು ನಡೆಸಲಾಗಿತ್ತು. ಭಾರತದಲ್ಲಿ ಸ್ವರಾಜ್ ಅಥವಾ ಸ್ವಯಂ-ಆಡಳಿತಕ್ಕೆ ಬೇಡಿಕೆಯು ದಿನದಿಂದ ದಿನಕ್ಕೆ ಪ್ರಬಲವಾಗತೊಡಗಿತ್ತು. ೧೯೩೦ರ ಹೊತ್ತಿಗೆ, ಭಾರತ ಸ್ವತಂತ್ರ ರಾಷ್ಟ್ರ ಸ್ಥಾನಮಾನವನ್ನು ಗಳಿಸುವ ಕಡೆಗೆ ಸಾಗಬೇಕಾದ ಅಗತ್ಯವಿದೆ ಎಂದು ಅನೇಕ ಬ್ರಿಟಿಷ್ ರಾಜಕಾರಣಿಗಳು ನಂಬಿದ್ದರು. ಅದೇನೇ ಆದರೂ ಭಾರತೀಯ ಮತ್ತು ಬ್ರಿಟಿಷ್ ರಾಜಕೀಯ ಪಕ್ಷಗಳ ನಡುವೆ ಸಭೆಯು ಪರಿಹರಿಸದಂತಹ ಅನೇಕ ಗಮನಾರ್ಹ ಭಿನ್ನಾಭಿಪ್ರಾಯಗಳಿದ್ದವು.

ಮೊದಲ ದುಂಡು ಮೇಜಿನ ಸಭೆ(೧೯೩೦ ರ ನವೆಂಬರ್– ೧೯೩೧ ರ ಜನವರಿ)

[ಬದಲಾಯಿಸಿ]

ದುಂಡು ಮೇಜಿನ ಸಭೆಯನ್ನು ಅಧಿಕೃತವಾಗಿ ಕಿಂಗ್ ಜಾರ್ಜ್-೫ ರವರು ೧೯೩೦ ರ ನವೆಂಬರ್ ೧೨ ರಂದು ಉದ್ಘಾಟಿಸಿದ್ದರು, ಹಾಗು ಬ್ರಿಟಿಷ್ ಪ್ರಧಾನ ಮಂತ್ರಿ ರಾಂಸೆ ಮ್ಯಾಕ್ ಡೊನಾಲ್ಡ್ ಇದರ ಅಧ್ಯಕ್ಷರಾಗಿದ್ದರು. ಹದಿನಾರು ಪ್ರತಿನಿಧಿಗಳು ಮೂರು ಬ್ರಿಟಿಷ್ ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸಿದ್ದರು. ಬ್ರಿಟಿಷ್ ಭಾರತದಿಂದ ಐವತ್ತೇಳು ರಾಜಕೀಯ ನಾಯಕರಿದ್ದರು ಹಾಗು ರಾಜರ ಆಳ್ವಿಕೆಗೆ ಒಳಪಟ್ಟ ರಾಜ್ಯಗಳಿಂದ ಹದಿನಾರು ಪ್ರತಿನಿಧಿಗಳಿದ್ದರು. ಅದೇನೇ ಆದರೂ, ಭಾರತೀಯ ವಾಣಿಜ್ಯ ನಾಯಕರೊಂದಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಸಭೆಯಿಂದ ಹೊರಗುಳಿದಿತ್ತು. ಅವರುಗಳಲ್ಲಿ ಕೆಲವರನ್ನು ನಾಗರಿಕ ನಿಯಮೋಲ್ಲಂಘನೆಗಾಗಿ ಸೆರೆಮನೆಗೆ ತಳ್ಳಲಾಯಿತು.

ಭಾಗವಹಿಸಿದವರು

[ಬದಲಾಯಿಸಿ]
  • ಮುಸ್ಲಿಂ ಲೀಗ್: ಮೊಹಮದ್ ಅಲಿ, ಮೊಹಮದ್ ಷಫಿ, ಆಗ್ ಖಾನ್, ಮೊಹಮದ್ ಅಲಿ ಜಿನ್ನಾ, ಮೊಹಮದ್ ಜಫರುಲ್ಲಾ ಖಾನ್, ಎ.ಕೆ. ಫಜ್ಲುಲ್ ಹುಗ್
  • ಹಿಂದೂ ಮಹಾಸಭಾ: ಬಿ.ಎಸ್. ಮುಂಜೆ ಮತ್ತು ಎಮ್.ಆರ್. ಜಯಕರ್
  • ಲಿಬರಲ್ ಗಳು: ತೇಜ್ ಬಹದ್ದೂರ್ ಸಪ್ರು, ಸಿ. ವೈ. ಚಿಂತಾಮಣಿ ಮತ್ತು ಶ್ರೀನಿವಾಸ ಶಾಸ್ತ್ರೀ
  • ಸಿಖ್: ಸರ್ದಾರ್ ಉಜ್ಜಲ್ ಸಿಂಗ್
  • ದಲಿತವರ್ಗದವರು("ಅಸ್ಪೃಶ್ಯರು"): ಬಿ. ಆರ್. ಅಂಬೇಡ್ಕರ್
  • ರಾಜರ ಆಳ್ವಿಕೆಗೆ ಒಳ್ಳಪಟ್ಟ ರಾಜ್ಯಗಳಿಂದ: ಅಕ್ಬರ್ ಹೈದರಿ (ಹೈದ್ರಾಬಾದ್ ನ ದಿವಾನರು), ಸರ್ ಮಿರ್ಜಾ ಇಸ್ಮಾಯಿಲ್ ಮೈಸೂರ್ ನ ದಿವಾನರು, ಗ್ವಾಲಿಯರ್ ನ ಕೈಲಾಸ್ ನಾರೈನ್ ಹಸ್ಕರ್, ಪಟಿಯಾಲದ ಮಹರಾಜ ಭುಪಿಂದರ್ ಸಿಂಗ್, ಬರೋಡದ ಮಹರಾಜ ಸಯ್ಯಾಜಿರಾಂ ಗಾಯಕ್ ವಾಡ್ III, ಜಮ್ಮು ಮತ್ತು ಕಾಶ್ಮೀರದ ಮಹರಾಜ ಹರಿಸಿಂಗ್, ಬಿಕಾನೆರ್‌ ನ ಮಹರಾಜ ಗಂಗಾ ಸಿಂಗ್, ಭೋಪಾಲ್ ನ ನವಾಬ್ಹಮಿದುಲ್ಲಾ ಖಾನ್, ನವನಗರ್ ನ ಕೆ.ಎಸ್. ರಂಜಿತ್ ಸಿನ್ಜಿ, ಆಳ್ವಾರ್ ನ ಮಹರಾಜ ಜೈ ಸಿಂಗ್ ಪ್ರಭಾಕರ್ ಹಾಗು ಇಂದೋರ್, ರೇವಾ, ಧೋಲ್ಪುರ್, ಕೊರಿಯಾ, ಸಾಂಗ್ಲಿ ಮತ್ತು ಸರಿಲಾದ ರಾಜರು.

ಅಖಿಲ ಭಾರತೀಯ ಒಕ್ಕೂಟದ ಆಲೋಚನೆಯು ಚರ್ಚೆಯ ಕೇಂದ್ರವಾಯಿತು. ಸಭೆಯಲ್ಲಿ ಪಾಲ್ಗೊಂಡಂತಹ ಎಲ್ಲಾ ಗುಂಪುಗಳು ಈ ಪರಿಕಲ್ಪನೆಗೆ ಬೆಂಬಲವನ್ನು ನೀಡಿದವು. ಶಾಸಕಾಂಗ ಜಾರಿಗೆ ತರುವ ಹೊಣೆಗಾರಿಕೆಯ ವಿಷಯವನ್ನು ಚರ್ಚಿಸಲಾಯಿತು ಹಾಗು ಬಿ.ಆರ್. ಅಂಬೇಡ್ಕರ್, ಅಸ್ಪೃಶ್ಯರಿಗಾಗಿ ಪ್ರತ್ಯೇಕವಾದ ಇಲೆಕ್ಟರನ್ ನ ಬೇಡಿಕೆಯಿಟ್ಟರು.

ಎರಡನೆಯ ದುಂಡು ಮೇಜಿನ ಸಭೆ(೧೯೩೧ ರ ಸೆಪ್ಟೆಂಬರ್ – ಡಿಸೆಂಬರ್)

[ಬದಲಾಯಿಸಿ]
ಎರಡನೆಯ ದುಂಡು ಮೇಜಿನ ಸಭೆ(೧೯೩೧ ರ ಸೆಪ್ಟೆಂಬರ್ – ಡಿಸೆಂಬರ್)

ಎರಡನೆ ಅಧಿವೇಶನವನ್ನು ೧೯೩೧ ರ ಸೆಪ್ಟೆಂಬರ್ ೭ ರಂದು ಉದ್ಘಾಟಿಸಲಾಯಿತು. ಮೊದಲ ಮತ್ತು ಎರಡನೆಯ ದುಂಡು ಮೇಜಿನ ಸಭೆಯ ನಡುವೆ ಮೂರು ಮುಖ್ಯ ಭಿನ್ನತೆಗಳಿವೆ. ಎರಡನೆಯದರಲ್ಲಿ:

  • ಕಾಂಗ್ರೆಸ್ ನ ಪ್ರಾತಿನಿಧ್ಯ — ಗಾಂಧಿ-ಇರ್ವಿನ್ ಒಪ್ಪಂದ ಈ ಸಭೆಯಲ್ಲಿ ಕಾಂಗ್ರೆಸ್ ಪಾಲ್ಗೊಳ್ಳಲು ಹಾದಿಯನ್ನು ಕಲ್ಪಿಸಿಕೊಟ್ಟಿತು. ಭಾರತದಿಂದ ಮಹಾತ್ಮ ಗಾಂಧಿಯವರನ್ನು ಆಹ್ವಾನಿಸಲಾಯಿತು. ಅಲ್ಲದೇ ಅವರು ಸರೋಜಿನಿ ನಾಯ್ಡು, ಮದನ್ ಮೋಹನ್ ಮಾಲ್ವಿಯಾ, ಘನಶ್ಯಾಮ್ ದಾಸ್ ಬಿರ್ಲಾ, ಮೊಹಮದ್ ಇಕ್ಬಾಲ್, ಮೈಸೂರಿನ ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್, ಎಸ್ ಕೆ ದತ್ತ ಮತ್ತು ಸರ್ ಸೈಯ್ಯದ್ ಅಲಿ ಇಮಾಮ್ ರವರ ಜತೆಗೂಡಿ ಕಾಂಗ್ರೆಸ್ ನ ಅಧಿಕೃತ ಏಕಮಾತ್ರ ಪ್ರತಿನಿಧಿಯಾಗಿ ಸಭೆಯಲ್ಲಿ ಪಾಲ್ಗೊಂಡರು. ಗಾಂಧಿ ಭಾರತವನ್ನು ರಾಜಕೀಯವಾಗಿ ಕಾಂಗ್ರೆಸ್ ಮಾತ್ರ ಪ್ರತಿನಿಧಿಸುತ್ತಿದೆ ಎಂದು ಹೇಳಿದರು; ಅಸ್ಪೃಶ್ಯರು ಹಿಂದೂಗಳಾಗಿದ್ದು, ಅವರನ್ನು “ಅಲ್ಪಸಂಖ್ಯಾತ” ರೆಂದು ಭಾವಿಸುವಂತಿಲ್ಲ; ಆದ್ದರಿಂದ ಪ್ರತ್ಯೇಕವಾದ ಇಲೆಕ್ಟರನ್ ನ ಅಗತ್ಯವಿಲ್ಲ ಅಥವಾ ಮುಸ್ಲಿಂ ಅಥವಾ ಇತರ ಅಲ್ಪಸಂಖ್ಯಾತರಿಗೆ ವಿಶೇಷ ರಕ್ಷಣೆಯ ಅಗತ್ಯವಿಲ್ಲ ಎಂಬ ಕೋರಿಕೆಗಳನ್ನಿಟ್ಟರು. ಈ ಕೋರಿಕೆಗಳನ್ನು ಇತರ ಭಾರತೀಯ ಸಹಭಾಗಿಗಳು ನಿರಾಕರಿಸಿದರು. ಈ ಒಪ್ಪಂದ ಪ್ರಕಾರ, ನಾಗರಿಕ ಅಸಹಕಾರ ಚಳುವಳಿಯನ್ನು ಸ್ಥಗಿತಗೊಳಿಸುವಂತೆ ಗಾಂಧಿಯವರನ್ನು ಕೊರಲಾಯಿತು. ಈ ಚಳುವಳಿಯನ್ನು ನಿಲ್ಲಿಸಿದಲ್ಲಿ ಅಪರಾದವೆಸಗಿದ ಖೈದಿಗಳನ್ನು ಹೊರತು ಪಡಿಸಿ ಉಳಿದ ಖೈದಿಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಲಾಯಿತು. ಉದಾಹರಣೆಗೆ, ಬ್ರಿಟಿಷ್ ಅಧಿಕಾರಿಗಳನ್ನು ಕೊಂದವರು. ಅವರು ಫಲಿತಾಂಶದಿಂದ ನಿರಾಶರಾಗಿ ಬರಿಗೈಲಿ ಭಾರತಕ್ಕೆ ಮರಳಿದರು.
  • ರಾಷ್ಟ್ರೀಯ ಸರ್ಕಾರ — ಲಂಡನ್ ನಲ್ಲಿ ಲೇಬರ್ ಸರ್ಕಾರ ಕುಸಿಯುವ ಎರಡುವಾರಗಳ ಮೊದಲು. ರಾಂಸೆ ಮ್ಯಾಕ್ ಡೊನಾಲ್ಡ್ಈ ವೇಳೆಗೆ ಹೆಚ್ಚು ಬಹುಮತಗಳಿಸಿದ ಕನ್ಸರ್ವೇಟಿವ್ ಪಕ್ಷವನ್ನೊಳಗೊಂಡ ರಾಷ್ಟ್ರೀಯ ಸರ್ಕಾರವನ್ನು ನಡೆಸುತ್ತಿದ್ದರು.
  • ಹಣಕಾಸಿನ ಬಿಕ್ಕಟ್ಟು –ಸಭೆಯ ಸಮಯದಲ್ಲಿ, ಬ್ರಿಟನ್ ಸುವರ್ಣಮಾನವನ್ನು ಕಳೆದುಕೊಂಡು ಮುಂದೆ ರಾಷ್ಟ್ರೀಯ ಸರ್ಕಾರವನ್ನು ಗೊಂದಲಕೊಳಪಡಿಸಿತು.

ಸಭೆಯ ಸಮಯದಲ್ಲಿ ಗಾಂಧಿ, ಮುಸ್ಲಿಂ ಪ್ರಾತಿನಿಧ್ಯ ಮತ್ತು ವಿಶೇಷ ರಕ್ಷಣೆಗೆ ಸಂಬಂಧಿಸಿದಂತೆ ಮುಸ್ಲೀಮರೊಂದಿಗೆ ಒಪ್ಪಂದಕ್ಕೆ ಬರಲಾಗಲಿಲ್ಲ. ಸಭೆಯ ಕೊನೆಯಲ್ಲಿ ರಾಂಸೆ ಮ್ಯಾಕ್ ಡೊನಾಲ್ಡ್, ಅಲ್ಪ ಸಂಖ್ಯಾತರ ಪ್ರಾತಿನಿಧ್ಯಕ್ಕಾಗಿ ಕಮ್ಯೂನಲ್ ಅವಾರ್ಡ್(ಮತೀಯ ಸವಲತ್ತು) ಅನ್ನು ಹೊರಡಿಸಿದರು. ಇದರ ಜೊತೆಯಲ್ಲಿ ಪಕ್ಷಗಳ ನಡುವಿನ ಯಾವುದೇ ಸ್ವತಂತ್ರ ಒಪ್ಪಂದವನ್ನು ಅವರ ಸವಲತ್ತಿಗೆ ಪರ್ಯಾಯವಾಗಿಸುವ ಅವಕಾಶವನ್ನು ನೀಡಿದರು.

ಅಸ್ಪೃಶ್ಯರನ್ನು ಅಲ್ಪಸಂಖ್ಯಾತರಾಗಿ ಹಿಂದು ಸಮಾಜದಿಂದ ಪ್ರತ್ಯೇಕಿಸುವುದಕ್ಕೆ ಗಾಂಧಿ ತೀವ್ರವಾದ ಆಕ್ಷೇಪ ವ್ಯಕ್ತಪಡಿಸಿದರು. ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಅಸ್ಪೃಶ್ಯ ಸಮೂಹದ ನಾಯಕ ಬಿ. ಆರ್.ಅಂಬೇಡ್ಕರ್ ರವರೊಂದಿಗೆ ಹೋರಾಡಿದರು: ಅಂತಿಮವಾಗಿ ಇಬ್ಬರು ಈ ಪರಿಸ್ಥಿತಿಯನ್ನು ೧೯೩೨ ರ ಪುಣೆ ಒಪ್ಪಂದದೊಂದಿಗೆ ಪರಿಹರಿಸಿಕೊಂಡರು.

ಮೂರನೆಯ ದುಂಡು ಮೇಜಿನ ಸಭೆ(೧೯೩೨ ರ ನವೆಂಬರ್ – ಡಿಸೆಂಬರ್)

[ಬದಲಾಯಿಸಿ]

ಮೂರನೆಯ ಮತ್ತು ಅಂತಿನ ಸಭೆಯನ್ನು ೧೯೩೨ ರ ನವೆಂಬರ್ ೧೭ ರಂದು ಸೇರಿಸಲಾಯಿತು. ಭಾರತದ ಬಹುಪಾಲು ಪ್ರಮುಖ ರಾಜಕೀಯ ವ್ಯಕ್ತಿಗಳು ಇದರಲ್ಲಿ ಪಾಲ್ಗೊಳ್ಳಲಿಲ್ಲ. ಕೇವಲ ನಲ್ವತ್ತಾರು ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಬ್ರಿಟನ್ ನಿಂದ ಲೇಬರ್ ಪಕ್ಷ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಇದರಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದವು.

ಈ ಸಭೆಯಲ್ಲಿ, ಕಾಲೇಜು ವಿದ್ಯಾರ್ಥಿ ಚೌಧರಿ ರಹಮತ್ ಅಲಿ, "ಪಾಕಿಸ್ತಾನ"(ಇದು "ಪರಿಶುದ್ಧವಾದ ಭೂಮಿ" ಎಂಬ ಅರ್ಥವನ್ನು ನೀಡುತ್ತದೆ)ಎಂಬ ಹೆಸರನ್ನು ರಚಿಸಿದರು. ಇದು ವಿಭಜಿಸಲಾದ ಭಾರತದ ಮುಸ್ಲಿಂ ಭಾಗಕ್ಕಾಗಿ ರಚಿಸಿದಂತಹ ಹೆಸರಾಗಿದೆ. ಅವರು ಪಂಜಾಬ್ ನಿಂದ "ಪಿ"ಯನ್ನು, ಅಫ್ಘಾನ್ ನಿಂದ "ಎ"ಯನ್ನು , ಕಾಶ್ಮೀರದಿಂದ "ಕೀ"ಯನ್ನು ಸಿಂಧ್ ನಿಂದ "ಎಸ್" ಮತ್ತು "ತಾನ್"ಅನ್ನು ಬಲೂಚಿಸ್ಥಾನ್ ನಿಂದ ತೆಗೆದುಕೊಂಡರು.

೧೯೩೧ ರ ಸೆಪ್ಟೆಂಬರ್ ನಿಂದ ೧೯೩೩ ರ ಮಾರ್ಚ್ ವರೆಗೆ, ಸ್ಯಾಮ್ಯೂಲ್ ಹೋರೆಯವರ ಮೇಲ್ವಿಚಾರಣೆಯಡಿಯಲ್ಲಿ, ಪ್ರಸ್ತಾಪಿಸಲಾದ ಸುಧಾರಣೆಗಳು ೧೯೩೫ರ ಭಾರತ ಸರ್ಕಾರ ಕಾಯ್ದೆಯಲ್ಲಿ ಪ್ರತಿಫಲಿಸಿದವು.

ಉಲ್ಲೇಖಗಳು

[ಬದಲಾಯಿಸಿ]