ಥೈರಾಯ್ಡ್ ಗ್ರಂಥಿಗಳು
ಗೋಚರ
ಸ್ಥಾನ
[ಬದಲಾಯಿಸಿ]- ಇದು ಗಂಟಲುನಾಳದ ಆರಂಭದಲ್ಲಿ ಅದರ ಎರಡೂಕಡೆ ಇರುವ ಒಂದು ಜೊತೆ ಗ್ರಂಥಿಗಳು. ಇದರ ಚಟುವಟಿಕೆ ರಸಗುಳ್ಳೆಗಳು ಒಸರುವ (ಪ್ರೇರಕ ದ್ರವ್ಯ (ಹಾರ್ಮೋನ್) ದಲ್ಲಿ ಥೈರೋಗ್ಲೊಬ್ಯುಲಿನ್ (thyroglobulin) ಎಂಬ ಸಂಯುಕ್ತ ರಸಾಯನಿಕ ಇದೆ. ಇದು ಗೈಕೋಪ್ರೋಟೀನ್ ಎಂಬ ಪ್ರೇರಕದ್ರವ್ಯ. ಥೈರಾಯ್ಡ್ ಒಂದು ಕಿರುಚೀಲಗಳಂತೆ ಇರುವ ಈ ಗ್ರಂಥಿಯಿಂದ ಗೈಕೋಪ್ರೋಟೀನ್ ಎಂಬ ಥೈರಾಯ್ಡ್ ಹಾರ್ಮೋನ್ ಒಸರುವುದು.
ಪ್ರೇರಕದ್ರವ್ಯ ಅಥವಾ ಹಾರ್ಮೋನುಗಳು
[ಬದಲಾಯಿಸಿ]- ಥೈರಾಯ್ಡ್ ಹಾರ್ಮೋನ್‍ನಲ್ಲಿ ಥೈರಾಕ್ಸಿನ್ (T4)) ಮತ್ತು ಟ್ರಿಯೋಡೊಥೈರೋನೈನ್ (T3) ಗಳು ಸೆಲ್ಯುಲರ್ (ಜೀವ ಕೋಶಗಳ) ಚಯಾಪಚಯದ ದರವನ್ನು ಹೆಚ್ಚಿಸುವುದು ಪರಿಣಾಮವಾಗಿ, ಅದರಿಂದ ಆಮ್ಲಜನಕ ಬಳಕೆ ಹೆಚ್ಚುವುದು ಮತ್ತು ಶಾಖ ಉತ್ಪಾದನೆಯ ಏರಿಕೆಯನ್ನೂ ತರುತ್ತದೆ.
- ಥೈರಾಯಿಡ್ ಹಾರ್ಮೋನು ಟಿಎಸ್ಎಚ್$ ನಿಂದ ಪ್ರೇರಿತವಾಗಿದೆ. ಜೀವಕೋಶಗಳಿಂದ ಸ್ರವಿಸುವಿಕೆಯನ್ನು ಖಾಲಿ ಕುಳಿ ಸಂಗ್ರಹಿಸುತ್ತದೆ ಮತ್ತು ಇದರಿಂದ ಥೈರಾಯ್ಡ್ ಹಾರ್ಮೋನ್ ಮಟ್ಟಗಳು ಏರುವುದು. ಈ ಹಾರ್ಮೋನುಗಳು ಪ್ರತಿರೋಧಕ್ಕೆ ಮೆದುಳಿನ ಹೈಪೋಥೈಲಮಸಗೆ ಮತ್ತು ಪಿಟ್ಯುಟರಿಗೆ ಪುನಃಗ್ರಹಿಕೆಯನ್ನು ಒದಗಿಸುವುದು.
- ($:pituitary gland (located at the base of the brain) to release thyroid stimulating hormone (TSH). TSH stimulates the thyroid gland to release more T4)೨
ಇತಿಹಾಸ
[ಬದಲಾಯಿಸಿ]- ಕಳೆದ ಶತಮಾನದಲ್ಲಿ ಸ್ವಿಟ್ಜರ್ಲೆಂಡಿನಲ್ಲಿ, ಗಳಗಂಡಬೇನೆಗೆ ಗುರಿಯಾದ ಇಬ್ಬರು ರೋಗಿಗಳಮೇಲೆ ಅಲ್ಲಿನ ವೈದ್ಯರೊಬ್ಬೆರು ಶಸ್ತ್ರ ಚಿಕಿತ್ಸೆ ನಡೆಸಿದರು. ಅವರು ಅತಿಯಾಗಿಬೆಳೆದ ಆ ಗ್ರಂಥಿಯನ್ನೇ ಕತ್ತರಿಸಿ ತೆಗೆದರು. ಇದರಿಂದ ರೋಗ ಕಡಿಮೆಯಾದಂತೆ ಕಂಡರೂ ಕೆಲವು ಸಮಯದ ಬಳಿಕ ಅವರ ಚರ್ಮವು ನಿರಿಗಟ್ಟ ತೊಡಗಿತು, ರೂಪ ವಿಕಾರಗೊಂಡಿತು. ಇದರಿಂದ ಥೈರಾಯಿಡ್ ಗ್ರಂಥಿ ಇಲ್ಲದಿದ್ದರೆ ಜೀವಕ್ಕೆ ಅಪಾಯ ಎಂಬ ತಿಳುವಳಿಕೆ ಬಂತು. ಅದಕ್ಕಾಗಿ ಆ ಗ್ರಂಥಿಯಲ್ಲಿರುವ ದ್ರವ್ಯ ಯಾವುದು ಎಂದು ಸಂಶೋಧಿಸಿದರು. ಅದು ಅಯೋಡಿನ್ ಧಾತುವಿನ ಸಂಯುಕ್ದದ ದ್ರವ- ಥೈರಾಯಿಡ್ ದ್ರವ ಎಂದು ತಿಳಿಯಿತು. ಅದನ್ನು ಥೈರಾಕ್ಷಿನ್ ದ್ರವ ಎಂದು ಕರೆಯುತ್ತಾರೆ.
ಥೈರಾಕ್ಷಿನ್ ದ್ರವದ ಪ್ರಭಾವ
[ಬದಲಾಯಿಸಿ]- ಈ ದ್ರವ ಕಡಿಮೆ ಉತ್ಪನ್ನವಾದರೆ ಮುಖ ಒರಟಾಗುವುದು, ಚರ್ಮ ನಿರಿಗಟ್ಟುವುದು; ಮುಪ್ಪು ಬಂದಂತೆ ಆಗುವುದು, ಹಸ್ತ ಬೆರಳು ದಪ್ಪವಾಗುತ್ತವೆ, ತಲೆಗೂದಲೂ ಹುಬ್ಬೂ ಉದುರತೊಡಗುತ್ತವೆ. ಚಟುವಟಿಕೆ ಕಡಿಮೆಯಾಗುವುದು; ದೇಹದ ಬೆಳವಣಿಗೆ ಕುಂದುವುದು. ಬುದ್ಧಿ ಮಂದವಾಗುತ್ತದೆ; ಲೈಂಗಿಕ ಚಟುವಟಿಕೆಯನ್ನು ತಗ್ಗಿಸುತ್ತದೆ. ಶರೀರವು ವ್ಯವಸ್ಥಿತವಾಗಿ ಬೆಳೆಯುವುದಕ್ಕೂ ಲೈಂಗಿಕ ಚಟುವಟಿಕೆಗೂ ಈ ಗ್ರಂಥಿ ಅವಶ್ಯಕ ಎಂಬುದು ತಿಳಿಯಿತು.
- ಈ ಗ್ರಂಥಿಯ ಚಟುವಟಿಕೆ ಹೆಚ್ಚಾದರೆ ಅಪಾಯವೂ ಇದೆ. ಮನಸ್ಸಿನ ಭಾವೋದ್ವೇಗ ಹೆಚ್ಚುತ್ತದೆ ರಕ್ತ ಸಂಚಾರದ ವೇಗ ಹೆಚ್ಚುತ್ತದೆ. ಅದು ಅತಿಯಾಗಿ ಬೆಳೆದರೆ ಗಂಟಲು ಗುಳ್ಳೆಯಾಗಬಹುದು (ಗಳಗಂಡ). ಅದು ದೊಡ್ಡದಾಗಿ ಬೆಳೆದರೆ ಹೆಚ್ಚು ಬೆಳೆದ ಭಾಗವನ್ನು ಕತ್ತರಿಸಿ ತೆಗೆಯುವರು.
- ಸ್ತ್ರೀಯರು ಗರ್ಭಿಣಿಯರಾದಾಗ ಬಾಣಂತಿಯರಲ್ಲಿ ಹಾಲುತುಂಬಿದಾಗ, ಋತುಮತಿಯಾದಾಗ ಈ ಗ್ರಂಥಿಯ ಚಟುವಟಿಕೆ ಹೆಚ್ಚಿ ಥೈರಾಯಿಡ್ ಒಸರುವಿಕೆ ಹೆಚ್ಚುತ್ತದೆ. ಇದರಿಂದ ಮನಸ್ಸಿನ ಆತುರ ಕಾತುರ ಹೆಚ್ಚುತ್ತದೆ. [೧]
ಥೈರಾಯಿಡ್ ಗ್ರಂಥಿಯ ಸಮಸ್ಯೆ
[ಬದಲಾಯಿಸಿ]- ಥೈರಾಯಿಡ್ ಗ್ರಂಥಿಯ ಪ್ರಧಾನ ಸಮಸ್ಯೆಯು ಥೈರಾಯಿಡ್ ಗ್ರಂಥಿಯು ಸಮರ್ಪಕವಾಗಿ ಕಾರ್ಯನಿರ್ವಹಿಸದಿದ್ದರೆ ಅದು ಅನೇಕ ಆರೋಗ್ಯ ಸಮಸ್ಸೆಗಳಿಗೆ ಕಾರಣವಾಗುತ್ತದೆ. ಎಲ್ಲಾ ಸಮಸ್ಯೆಗಳನ್ನು ಒಟ್ಟಾಗಿ ಸೇರಿಸಿ ಅದನ್ನು ಥೈರಾಯಿಡ್ ಅವ್ಯವಸ್ಥೆ ಎನ್ನುವರು ಅಥವಾ ಥೈರಾಯಿಡ್ ಕಾರ್ಯದಲ್ಲಿ ಕ್ರಮ ತಪ್ಪುವುದು ಎಂದೂ ಕರೆಯಬಹುದು.
- ಥೈರಾಯಿಡ್ ಗ್ರಂಥಿಯ ಏರುಪೇರು ಆಗಿ ಅತಿಚಟುವಟಿಕೆಯಿಂದ ಹೆಚ್ಚು ಥೈರಾಕ್ಷಿನ್ ಬಿಡುಗಡೆಯಾದರೆ ಥೈರಾಯಿಡ್ ಗ್ರಂಥಿ ದೊಡ್ಡದಾಗಲು ಕಾರಣವಾಗಬಹುದು. ಅದನ್ನು ಗಳಗಂಡವೆನ್ನುತ್ತಾರೆ(Goiter). ಇದರಲ್ಲಿ ೪ ಪ್ರಧಾನ ಸಮಸ್ಸೆಗಳನ್ನು ಗುರುತಿಸಬಹುದು:
- ಥೈರಾಯಿಡ್ ಗ್ರಂಥಿಯ ಅತಿಯಾದ ಕ್ರಿಯೆ ಹೈಪರ್ - ಥೈರಾಯಿಡಿಸಮ್
- ಥೈರಾಯಿಡ್ ಗ್ರಂಥಿಯ ಅತ್ಯಂತ ಕಡಿಮೆ ಕ್ರಿಯೆ ಹೈಪೋಥೈರಾಯಿಡಿಸಮ್
- ಥೈರಾಯಿಡ್ ಗ್ರಂಥಿಯ ಗಂಟುಗಳು (Nodule): ಥೈರಾಯಿಡ್ ನಾಡಬಲ್ (ಕ್ಯಾನ್ಸರ್ ರಹಿತದ ಗಂಟು)
- ಥೈರಾಯಿಡ್ ಗ್ರಂಥಿಯ ಕ್ಯಾನ್ಸರ್ (Thyroid Cancer )
- ಈ ಯಾವುದೇ ಸಮಸ್ಯೆ ಗಳಗಂಡಕ್ಕೆ (Goiter ) ಅಂದರೆ ಥೈರಾಯಿಡ್ ಗ್ರಂಥಿ ದೊಡ್ಡದಾಗುವುದಕ್ಕೆ ಕಾರಣವಾಗಬಹುದು.[೨]
ನೋಡಿ
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ ವಿಜ್ಞಾನ ಪ್ರಪಂಚ: ಭಾಗ ೨: ಜೀವ ಜೀವನ: ಲೇಖಕ-ಶಿವರಾಮ ಕಾರಂತ: ಹರ್ಷ ಪ್ರಕಟನಾಲಯ, ಪುತ್ತೂರು, ದ.ಕ.:೧೯೬೦.
- ↑ Thyroid DisordersMedical Author: Melissa Conrad Stöppler, MD Medical Editor: Robert Ferry Jr., M