ಡ್ವೇಯ್ನ್ ಜಾನ್ಸನ್
ಡ್ವೇಯ್ನ್ ಡೌಗ್ಲಾಸ್ ಜಾನ್ಸನ್, "ರಾಕ್" ಎಂಬ ಹೆಸರಿನಿಂದ ಚಿರಪರಿಚಿತರು.ಇವರು ಅಮೆರಿಕ ಮತ್ತು ಕೆನಡಾದ ನಟ, ನಿರ್ಮಾಪಕ ಮತ್ತು ಡಬ್ಲ್ಯೂ.ಡಬ್ಲ್ಯೂ.ಇ ಜೊತೆ ಸಹಿ ಹಾಕಿದ ನಿವೃತ್ತ ವೃತ್ತಿಪರ ಕುಸ್ತಿಪಟುವಾಗಿದ್ದಾರೆ. ಜಾನ್ಸನ್ ೧೯೯೧ ರಲ್ಲಿ ಯುನಿವರ್ಸಿಟಿ ಆಫ್ ಮಿಯಾಮಿ ತಂಡವನ್ನು ಪ್ರತಿನಿಧಿಸಿ ಮಿಯಾಮಿ ಹರಿಕೇನ್ ಫುಟ್ಬಾಲ್ ತಂಡದ ರಾಷ್ಟ್ರೀಯ ಚಾಂಪಿಯನ್ಷಿಪ್ ಗೆದ್ದ ಫುಟ್ಬಾಲ್ ಆಟಗಾರ. ಅವರು ನಂತರ ಕೆನಡಿಯನ್ ಫುಟ್ಬಾಲ್ ಲೀಗ್ನಲ್ಲಿ ಕ್ಯಾಲ್ಗರಿ ಸ್ಟ್ಯಾಂಪೀಡರ್ಸ್ ಗಾಗಿ ಆಡಿದರು. ಈತ ಸಹ ತನ್ನ ಅಜ್ಜ ಪೀಟರ್ ಮೈವಿಯಾ ಹಾಗೂ ತನ್ನ ತಂದೆ ರಾಕಿ ಜಾನ್ಸನ್ ರ ಹಾಗೆ ಒಂದು ವೃತ್ತಿಪರ ಕುಸ್ತಿಪಟುವಾಗಬಯಸಿದ. ಮೂಲತಃ "ರಾಕಿ ಮೈವಿಯಾ"ಎನ್ನಲಾದ ಅವರು ೧೯೯೬-೨೦೦೪ ರ ಸಮಯದಲ್ಲಿ ಡಬ್ಲ್ಯೂ.ಡಬ್ಲ್ಯೂ.ಇ ಯಲ್ಲಿ ಕುಸ್ತಿಪಟುವಾಗಿ ಮುಖ್ಯವಾಹಿನಿಗೆ ಬಂದರು.೨೦೧೧ ರಿಂದ ೨೦೧೩ರವರೆಗೆ ಡಬ್ಲ್ಯೂ.ಡಬ್ಲ್ಯೂ.ಇ.ನಲ್ಲಿ ಅರೆಕಾಲಿಕ ಕುಸ್ತಿಪಟುವಾಗಿ ಮರಳಿದ ನಂತರ ಆಗಾಗ್ಗೆ ಕಂಪನಿಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಜೂನ್ ೨೦೧೬ರವರೆಗೆ ೧೦ ಬಾರಿ ವಿಶ್ವ ಚಾಂಪಿಯನ್ ಪಟ್ಟ, ೮ ಬಾರಿ ಡಬ್ಲ್ಯೂ.ಡಬ್ಲ್ಯೂ.ಇ/ಎಫ್ ಚಾಂಪಿಯನ್ ಪಟ್ಟ, ಎರಡು ಬಾರಿ ಡಬ್ಲ್ಯೂ.ಸಿ.ಡಬ್ಲ್ಯೂ ಚಾಂಪಿಯನ್ ಪಟ್ಟ ಸೇರಿದಂತೆ ಅವರು ೧೭ ಡಬ್ಲ್ಯೂ.ಡಬ್ಲ್ಯೂ.ಇ ಚಾಂಪಿಯನ್ ಶಿಪ್ ಗಳಲ್ಲಿ ಆಧಿಪತ್ಯ ಮೆರೆದಿದ್ದಾರೆ. ಎರಡು ಬಾರಿ ಇಂಟರ್ಕಾಂಟಿನೆಂಟಲ್ ಚಾಂಪಿಯನ್ಷಿಪ್ ಮತ್ತು ಐದು ಬಾರಿ ಡಬ್ಲ್ಯೂ.ಡಬ್ಲ್ಯೂ.ಎಫ್ ಟ್ಯಾಗ್ ಟೀಮ್ ಚಾಂಪಿಯನ್ಷಿಪ್ ಗೆದ್ದಿದ್ದಾರೆ. ಅವರು ಡಬ್ಲ್ಯೂ.ಡಬ್ಲ್ಯೂ.ಇ ಆರನೇ ಟ್ರಿಪಲ್ ಕ್ರೌನ್ ಚಾಂಪಿಯನ್ ಮತ್ತು ೨೦೦೦ನೇ ಇಸವಿಯ ರಾಯಲ್ ರಂಬಲ್ ಜಯಿಸಿದ್ದಾರೆ.ರಾಕ್ ಡಬ್ಲ್ಯೂ.ಡಬ್ಲ್ಯೂ.ಇ ಯ ಜೀವಂತ ದಂಕತೆ ಎಂದು ಅನೇಕರು ಪರಿಗಣಿಸಿದ್ದಾರೆ ಹಾಗೂ ಡಬ್ಲ್ಯೂ.ಡಬ್ಲ್ಯೂ.ಇ ಯಲ್ಲಿ ದುಬಾರಿ ಕುಸ್ತಿಪಟುವೆಂದು ಹೆಸರುಗಳಿಸಿದ್ದಾರೆ. ಇವರು ಡಬ್ಲ್ಯೂ.ಡಬ್ಲ್ಯೂ.ಇಯ ಮೊಟ್ಟಮೊದಲ ಆಫ್ರಿಕನ್-ಅಮೆರಿಕನ್ ಚಾಂಪಿಯನ್ ಆಗಿದ್ದಾರೆ. ಜಾನ್ಸನ್ ಜೋ ಲೇಡೆನ್ ರ ಜೊತೆಗೂಡಿ ೨೦೦೦ನೇ ಇಸವಿಯಲ್ಲಿ "ದ ರಾಕ್ ಸೇಸ್..." ಹೆಸರಿನ ಆತ್ಮಚರಿತ್ರೆಯನ್ನು ಪ್ರಕಟಿಸಿದರು, ಇದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಉತ್ತಮ ಪುಸ್ತಕಗಳಪಟ್ಟಿಯಲ್ಲಿ ನಂ ೧ ಸ್ಥಾನ ಪಡೆಯಿತು, ಜಾನ್ಸನ್ ೨೦೦೦ದಲ್ಲಿ ಸ್ಕಾರ್ಪಿಯನ್ ಕಿಂಗ್ ಚಿತ್ರದಲ್ಲಿ ಮೊದಲ ಬಾರಿಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು[೧].ತಮ್ಮ ಮೊದಲ ಚಿತ್ರಕ್ಕಾಗಿ ಅವರು ೫.೫ ಮಿಲಿಯನ್ ಅಮೆರಿಕನ್ ಡಾಲರ್ ಸಂಭಾವನೆ ಪಡೆದು ಈ ಸಾಧನೆ ಮಾಡಿದ ಮೊದಲಿಗರೆನಿಸಿದರು.ಅವರ ಅಭಿನಯ ಜೀವನದಲ್ಲಿ ಫಾಸ್ಟ್ ಅಂಡ್ ಫ್ಯೂರಿಯಸ್ ಅತ್ಯಂತ ಯಶಸ್ಸು ಕಂಡ ಚಿತ್ರವಾಗಿದೆ.ಫೋರ್ಬ್ಸ್ ೨೦೧೩ರ ವಿಶ್ವದ ೧೦೦ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ೨೫ನೇ ಸ್ಥಾನ ಪಡೆದಿದ್ದರು[೨].
ವಿದ್ಯಾಭ್ಯಾಸ
[ಬದಲಾಯಿಸಿ]ಜಾನ್ಸನ್ ಕೆಲ ಕಾಲ ನ್ಯೂಜಿಲ್ಯಾಂಡ್ ನ ಆಕ್ಲೆಂಡ್ ನ ಗ್ರೇ ಲಿನ್ ಉಪನಗರದಲ್ಲಿ ತನ್ನ ತಾಯಿಯ ಕುಟುಂಬದ ಜೊತೆ ವಾಸಿಸುತ್ತಿದ್ದರು. ಅವರ ಪೋಷಕರು ಅಮೇರಿಕಕ್ಕೆ ವಾಪಸಾಗುವ ಮೊದಲು ರಿಚ್ಮಂಡ್ ರಸ್ತೆಯ ಪ್ರಾಥಮಿಕ ಶಾಲೆ ಓದುತ್ತಿದ್ದರು[೩].ಜಾನ್ಸನ್ ೧೦ನೇ ತರಗತಿಯನ್ನು ಹವಾಯಿಯ ಹೊನಲುಲುವಿನ ಪ್ರೆಸಿಡೆಂಟ್ ವಿಲಿಯಂ ಮೆಕ್ಕಿನ್ಲೆ ಹೈ ಸ್ಕೂಲ್ ನಲ್ಲಿ ಓದಿದರು. ಅವರು ೧೧ನೇ ತರಗತಿ ಪ್ರವೇಶಿಸುತ್ತಿದ್ದಂತೆ ಅವನ ತಂದೆಯ ಕೆಲಸದ ನಿಮಿತ್ತ ಪೆನ್ಸಿಲ್ವೇನಿಯಾದ ಬೆಥ್ ಲೆಹೆಮ್ ಗೆ ತೆರಳಿದರು. ಅವರು ಈಸ್ಟ್ ಪೆನ್ ಕಾನ್ಫರೆನ್ಸ್ನಲ್ಲಿ ಫ್ರೀಡಮ್ ಪ್ರೌಢಶಾಲೆಯ ಪರ ಫುಟ್ಬಾಲ್ ಆಡಲು ಪ್ರಾರಂಭಿಸಿದರು. ಅವರು ಶಾಲಾ ತಂಡದ ಅಥ್ಲೆಟಿಕ್ ಮತ್ತು ಕುಸ್ತಿ ತಂಡಗಳ ಸದಸ್ಯರಾಗಿದ್ದರು. ಜಾನ್ಸನ್ ಭರವಸೆಯ ಫುಟ್ಬಾಲ್ ಆಟಗಾರರೆನಿಸಿದ್ದರು. ೧೯೯೧ರಲ್ಲಿ ಅವರು ಮಿಯಾಮಿ ಹರಿಕೇನ್ 'ರಾಷ್ಟ್ರೀಯ ಚಾಂಪಿಯನ್ಷಿಪ್ ಗುಂಪಿನಲ್ಲಿದ್ದರು. ಮಿಯಾಮಿಯಲ್ಲಿ ಓದುತ್ತಿದ್ದಾಗ ಜಾನ್ಸನ್ ಅವರು ಅದೇ ವಿಶ್ವವಿದ್ಯಾಲಯದಿಂದ ೧೯೯೨ರಲ್ಲಿ ಪದವಿ ಪಡೆದು ಅಲ್ಲಿಯೇ ಬೋರ್ಡ್ ಆಫ್ ಟ್ರಸ್ಟೀಸ್ ಸದಸ್ಯರಾಗಿದ್ದ ಡ್ಯಾನಿ ಗಾರ್ಸಿಯಾ ಅವರನ್ನು ಇಷ್ಟಪಟ್ಟರು. ೨೦೦೬ರಲ್ಲಿ ಈ ಜೋಡಿ ವಿಶ್ವವಿದ್ಯಾಲಯದ ನ್ಯೂಮನ್ ಅಲುಮ್ನಿ ಸೆಂಟರ್ ಒಂದು ಕೋಣೆಯನ್ನು ನಿರ್ಮಿಸಲು 2 ಮಿಲಿಯನ್ ಡಾಲರ್ ದೇಣಿಗೆ ನೀಡಿದರು.ಜಾನ್ಸನ್ ೧೯೯೫ರಲ್ಲಿ ಅಪರಾಧ ಮತ್ತು ಶರೀರಶಾಸ್ತ್ರ ವಿಭಾಗದಿಂದ ಪದವಿ ಪಡೆದರು[೪]. ಜಾನ್ಸನ್ ನವೆಂಬರ್ ೧೦ ೨೦೦೭ರಂದು ಮಿಯಾಮಿ ಆರೆಂಜ್ ಬೌಲ್ ಕ್ರೀಡಾಂಗಣದಲ್ಲಿ ಮಿಯಾಮಿ ವಿಶ್ವವಿದ್ಯಾಲಯದ ಕೊನೆಯ ಫುಟ್ಬಾಲ್ ಉತ್ಸವಗಳಲ್ಲಿ ಭಾಗವಹಿಸಲು ಮರಳಿದರು[೫].
ವ್ಯಕ್ತಿಗತ ಕಡತ
[ಬದಲಾಯಿಸಿ]ಜಾನ್ಸನ್ ಕ್ಯಾಲಿಫೋರ್ನಿಯಾದ ಹೇವಾರ್ಡ್ ನಲ್ಲಿ ಅತಾ ಜಾನ್ಸನ್ (ನೀ ಮೈವಿಯಾ) ಮತ್ತು ವೃತ್ತಿಪರ ಕುಸ್ತಿಪಟು ರಾಕಿ ಜಾನ್ಸನ್ ರ ಮಗನಾಗಿ ಜನಿಸಿದರು. ಆತನ ಅಜ್ಜ ಪೀಟರ್ ಮೈವಿಯಾ ಸಹ ಕುಸ್ತಿಪಟುವಾಗಿದ್ದರು. ಆತನ ಅಜ್ಜಿ ಲಿಯಾ ಮೈವಿಯಾ, ಕುಸ್ತಿಯ ಕೆಲವೇ ವೃತ್ತಿಪರ ಮಹಿಳಾ ಪ್ರವರ್ತಕರಲ್ಲಿ ಒಬ್ಬರಾಗಿದ್ದರು.ಅವರ ಸೋದರಸಂಬಂಧಿ ಸ್ಯಾವೆಲಿನ ಫೆನೀನ್ ಸಹ ಪ್ರಸ್ತುತ ಡಬ್ಲ್ಯೂ.ಡಬ್ಲ್ಯೂ.ಇ ಕುಸ್ತಿಪಟುವಾಗಿದ್ದಾರೆ.ಜಾನ್ಸನ್ ಮೇ ೩ ೧೯೯೭ರಂದು ಡ್ಯಾನಿ ಗಾರ್ಸಿಯಾರವರನ್ನು ಮದುವೆಯಾದರು,
ಆಕೆ ಆಗಸ್ಟ್ ೧೪ ೨೦೦೧ರಂದು ಸಿಮೋನೆ ಅಲೆಕ್ಸಾಂಡ್ರಾಗೆ ಜನ್ಮ ನೀಡಿದರು.[೬] ೨೦೦೭ರ ಜೂನ್ 1 ರಂದು ಅವರು ವಿಚ್ಛೇದ ಪಡೆಯುತ್ತಿರುವುದಾಗಿಯೂ ಹಾಗೂ ನಂತರದ ದಿನಗಳಲ್ಲಿ ಸ್ನೇಹಿತರಾಗಿರುತ್ತಾರೆಂದು ಘೋಷಿಸಿದರು. ವಿಚ್ಛೇದನದ ನಂತರ ಜಾನ್ಸನ್ ಬೋಸ್ಟನ್ ಡ್ರಮ್ಮರ್ ಸಿಬ್ ಹಶಿಯನ್ ರ ಮಗಳು ಲಾರೆನ್ ಹಶಿಯನ್ ರನ್ನು ಡೇಟ್ ಮಾಡತೊಡಗಿದರು,ಆಕೆಯನ್ನು ಜಾನ್ಸನ್ ಮೊದಲಬಾರಿಗೆ ೨೦೦೬ರಲ್ಲಿ ಅವರ ಸಿನಿಮಾ 'ದ ಗೇಮ್ ಪ್ಲ್ಯಾನ್' ಚಿತ್ರೀಕರಣದ ವೇಳೆ ಭೇಟಿಯಾಗಿದ್ದರು.೨೦೧೫ರ ಸೆಪ್ಟೆಂಬರ್ ನಲ್ಲಿ ಜಾನ್ಸನ್ ಹಾಗೂ ಲಾರೆನ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿದರು. ಜಾನ್ಸನ್ ನಟ ಮತ್ತು ಕ್ಯಾಲಿಫೋರ್ನಿಯಾದ ಮಾಜಿ ಗವರ್ನರ್ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ರವರ ಒಳ್ಳೆಯ ಸ್ನೇಹಿತರು.ಮಲಿಯೆಟೊವ ತನುಮಫಿಲಿ II ರವರು ಜಾನ್ಸನ್ ಸಮೋವನ್ ಜನರಿಗೆ ಮಾಡಿರುವ ಸೇವೆಯನ್ನು ಹಾಗೂ ಅವರ ತಾಯಿ ಅತಾ ಫಿತಿಸೆಮನು ಮೈವಿಯಾ ಸಮೋವನ್ ಮುಖ್ಯಸ್ಥರ ವಂಶಸ್ಥರು ಎಂದನ್ನು ಗಮನದಲ್ಲಿಟ್ಟುಕೊಂಡು ಜಾನ್ಸನ್ ೨೦೦೪ರ ಜುಲೈಯಲ್ಲಿ ಅಲ್ಲಿಗೆ ಭೇಟಿ ನೀಡಿದಾಗ ಅವರ ಉದಾತ್ತ ಶೀರ್ಷಿಕೆಯಾದ ಸಿಯುಲಿ(Seiuli)ಯನ್ನು ಪ್ರಧಾನ ಮಾಡಿದರು [೭]. ೨೦೦೬ರಲ್ಲಿ ಜಾನ್ಸನ್ ಅಪಾಯದಲ್ಲಿರುವ ಮತ್ತು ಮಾರಕವಾಗಿ ಅನಾರೋಗ್ಯಕ್ಕೆ ತುತ್ತಾಗಿರುವ ಮಕ್ಕಳ ಏಳಿಗೆಗಾಗಿ 'ಡ್ವೇಯ್ನ್ ಜಾನ್ಸನ್ ರಾಕ್ ಫೌಂಡೇಶನ್' ಎಂಬ ಧರ್ಮಾರ್ಥ ಸಂಸ್ಥೆಯನ್ನು ಕಟ್ಟಿದರು.ಅವರು ಮತ್ತು ಅವರ ಮಾಜಿ ಪತ್ನಿ ಮಿಯಾಮಿ ವಿಶ್ವವಿದ್ಯಾಲಯದ ಫುಟ್ಬಾಲ್ ಸೌಲಭ್ಯಗಳನ್ನು ನವೀಕರಿಸಲು ೨೦೦೭ರ ಅಕ್ಟೋಬರ್ ೨ರಂದು ೧ ಮಿಲಿಯನ್ ಡಾಲರ್ ದೇಣಿಗೆ ನೀಡಿದರು;ಇದು ಇದುವರೆಗೆ ಮಾಜಿ ವಿದ್ಯಾರ್ಥಿಗಳಿಂದ ವಿಶ್ವವಿದ್ಯಾನಿಲಯದ ಅಥ್ಲೆಟಿಕ್ಸ್ ಇಲಾಖೆಗೆ ಬಂದ ದೊಡ್ಡ ಕೊಡುಗೆ ಎಂಬುದನ್ನು ಗಮನಿಸಿದರು. ಮಿಯಾಮಿ ವಿಶ್ವವಿದ್ಯಾಲಯ ಜಾನ್ಸನ್ ರ ಗೌರವಾರ್ಥವಾಗಿ ಹರ್ರಿಕೇನ್ಸ್ ಲಾಕರ್ ಕೋಣೆಯನ್ನು ಮರುನಾಮಕರಣ ಮಾಡಿದರು.
ಪ್ರಶಸ್ತಿಗಳು
[ಬದಲಾಯಿಸಿ]೧೯೯೧:ಎನ್.ಸಿ.ಎ.ಎ ನ್ಯಾಷನಲ್ ಚಾಂಪಿಯನ್ಷಿಪ್
೨೦೧೨:ಸಿನಿಮಾಕಾನ್ ಆಕ್ಷನ್ ಸ್ಟಾರ್ ಆಪ್ ದ ಇಯರ್
೨೦೧೩:ಕಿಡ್ಸ್ ಚಾಯ್ಸ್ ಅವಾರ್ಡ್ಸ್- ಫೇವರೇಟ್ ಮೇಲ್ ಬಟ್ ಕಿಕ್ಕರ್
ಎರಡು ಬಾರಿ ಇಂಟರ್ ಕಾಂಟಿನೆಂಟಲ್ ಚಾಂಪಿಯನ್
ಎಂಟು ಬಾರಿ ಡಬ್ಲ್ಯೂ.ಡಬ್ಲ್ಯೂ.ಇ/ಎಫ್ ಚಾಂಪಿಯನ್
ಉಲ್ಲೇಖಗಳು
[ಬದಲಾಯಿಸಿ]- ↑ https://www.nytimes.com/books/00/02/13/bsp/nonfictioncompare.html
- ↑ http://www.ibtimes.com/forbes-lists-top-100-most-powerful-celebrities-2013-oprah-winfrey-takes-number-one-spot-full-list
- ↑ "ಆರ್ಕೈವ್ ನಕಲು". Archived from the original on 2008-05-14. Retrieved 2016-11-10.
- ↑ http://www6.miami.edu/miami-magazine/alumnidigest/alumnistory1.html
- ↑ "ಆರ್ಕೈವ್ ನಕಲು". Archived from the original on 2020-09-26. Retrieved 2016-11-10.
- ↑ http://people.com/celebrity/dwayne-the-rock-johnson-wife-split-up/
- ↑ "ಆರ್ಕೈವ್ ನಕಲು". Archived from the original on 2007-09-27. Retrieved 2016-11-10.