ವಿಷಯಕ್ಕೆ ಹೋಗು

ಟುವ್ವಿ ಹಕ್ಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟುವ್ವಿ ಹಕ್ಕಿ
Ashy Prinia calling.
Conservation status
Scientific classification e
Unrecognized taxon (fix): Prinia
ಪ್ರಜಾತಿ:
P. socialis
Binomial name
Prinia socialis
(Sykes, 1832)
Distribution of subspecies of Prinia socialis
Synonyms

Burnesia socialis

Ashy prinia
Ashy Prinia calling.
Scientific classification Edit this classification
Kingdom: Animalia
Phylum: Chordata
Class: Aves
Order: Passeriformes
Family: Cisticolidae
Genus: Prinia
Species:
P. socialis
Binomial name
Prinia socialis

(Sykes, 1832)
Distribution of subspecies of Prinia socialis
Synonyms

Burnesia socialis

ಟುವ್ವಿ ಹಕ್ಕಿ ಅಥವಾ ಆಶಿ ಪ್ರಿನಿಯಾ ಅಥವಾ ಆಶಿ ರೆನ್-ವಾರ್ಬ್ಲರ್ ( ಪ್ರಿನಿಯಾ ಸೋಷಿಯಲಿಸ್ ) ಸಿಸ್ಟಿಕೊಲಿಡೆ ಕುಟುಂಬದ ಒಂದು ಸಣ್ಣ ‍ಉಲಿಯಕ್ಕಿ (ವಾರ್ಬ್ಲರ್). [] ಈ ಹಕ್ಕಿಯು ಭಾರತ, ನೇಪಾಳ, ಬಾಂಗ್ಲಾದೇಶ, ಪೂರ್ವ ಪಾಕಿಸ್ತಾನ, ಭೂತಾನ್, ಶ್ರೀಲಂಕಾ ಮತ್ತು ಪಶ್ಚಿಮ ಮ್ಯಾನ್ಮಾರ್‌ನ ಬಹುತೇಕ ಪ್ರದೇಶದಲ್ಲಿ ಹರಡಿದ್ದು ಭಾರತೀಯ ಉಪಖಂಡದಲ್ಲಿ ವಂಶಾಭಿವೃದ್ಧಿ ನಡೆಸುತ್ತದೆ . ಇದು ಭಾರತದೆಲ್ಲೆಡೆ ನಗರ, ತೋಟ ಮತ್ತು ಕೃಷಿಭೂಮಿಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಹಕ್ಕಿಯಾಗಿದೆ. ಸಣ್ಣ ಗಾತ್ರ, ವಿಶಿಷ್ಟ ಬಣ್ಣ ಮತ್ತು ನೇರ ಬಾಲದಿಂದಾಗಿ ಗುರುತಿಸುವುದು ಸುಲಭ. ಉತ್ತರದ ಜೀವಸಂದಣಿ ಕೆಂಗಂದು ಪೃಷ್ಠ ಮತ್ತು ಬೆನ್ನನ್ನು ಹೊಂದಿದ್ದು, ಮತ್ತು ಸಂತಾನ ಸಮಯದಲ್ಲೊಂದು ಹೊರರೂಪ ಮತ್ತು ಸಂತಾನ ಸಮಯವಲ್ಲದಂದು ಹೊರರೂಪ ಹೊಂದಿರುವ ವಿಭಿನ್ನ ತಳಿಯಾಗಿದೆ. ಆದರೆ ಉತ್ತರದ ಜೀವಸಂದಣಿಯನ್ನು ಹೊರತು ಪಡಿಸಿದ ಇನ್ನಿತರ ಪ್ರದೇಶದ ಜೀವಸಂದಣಿ ಅಂತಹ ಹೊರರೂಪದ ವ್ಯತ್ಯಾಸವನ್ನು ಹೊಂದಿರುವುದಿಲ್ಲ.

ವಿವರಣೆ

[ಬದಲಾಯಿಸಿ]
ಟುವ್ವಿ ಹಕ್ಕಿಯ ಕರೆ, ಕೊನೆಯಲ್ಲಿ ಕಿಡಿಯ ಶಬ್ದದಂತೆ
P. s. stewartii ಸ್ಪಷ್ಟ ಹುಬ್ಬು ಇರುವ ಟುವ್ವಿ ( ಹರಿಯಾಣ, ಭಾರತ )

13-14 ಸೆಂ.ಮೀ ಉದ್ದವಿರುವ ಉಲಿಯಕ್ಕಿಗಳು ಸಣ್ಣ, ದುಂಡಗಿನ ರೆಕ್ಕೆಗಳನ್ನು ಹೊಂದಿರುತ್ತವೆ. ಉದ್ದ ಬಾಲ, ಬಾಲದ ತುದಿಯ ಮೊದಲುಕಪ್ಪು ಚುಕ್ಕೆಗಳು, ಉದ್ದವಾದ, ತುದಿಯತ್ತ ಹೋದಂತೆ ಅಗಲವಾಗುವ ಬಾಲ. ಬಾಲವನ್ನು ಸಾಮಾನ್ಯವಾಗಿ ನೇರವಾಗಿ ಹಿಡಿದಿಟ್ಟುಕೊಳ್ಳುತ್ತವೆ. ನೆಲದ ಮೇಲೆ ಓಡಾಡಲು ಮತ್ತು ಜಿಗಿಯಲು ಅವಶ್ಯವಾದ ಬಲವಾದ ಕಾಲುಗಳು. ಸಣ್ಣ ಕಪ್ಪನೆಯ ಕೊಕ್ಕು, ಬೂದು ಕಿರೀಟ, ದೇಹದ ಕೆಳಭಾಗ ತೆಳು ಕೆಂಗಂದು. ಸಂತಾನೋತ್ಪತ್ತಿ ಸಮಯದಲ್ಲಿ ಉತ್ತರದ ವಯಸ್ಕ ಹಕ್ಕಿಗಳ ಮೇಲ್ಭಾಗ ಬೂದು ಬಣ್ಣ, ಕಪ್ಪು ಕಿರೀಟ - ಕೆನ್ನೆ, ತಾಮ್ರ ಕಂದು ರೆಕ್ಕೆಗಳಿರುತ್ತದೆ. ಸಂತಾನೋತ್ಪತ್ತಿಯಲ್ಲದ ಋತುವಿನಲ್ಲಿ, ಚಿಕ್ಕ ಮತ್ತು ಕಿರಿದಾದ ಬಿಳಿ ಹುಬ್ಬಿದ್ದು, ಬಾಲವು ಉದ್ದವಾಗಿರುತ್ತದೆ. [] ಇವು ಗಿಡಪೊದೆಗಳಲ್ಲಿ ಒಂಟಿಯಾಗಿ ಇಲ್ಲವೇ ಜೋಡಿಯಾಗಿ ಕಾಣಸಿಗುತ್ತವೆ ಮತ್ತು ಆಗಾಗ್ಗೆ ನೆಲಕ್ಕಿಳಿದು ಆಹಾರ ಹುಡುಕುತ್ತವೆ. []

ಚಳಿಗಾಲದಲ್ಲಿ, ಉತ್ತರದ ಉಪಜಾತಿಗಳು, P. s. stewartii Blyth, 1847, ತೆಳುಕಂದು ಬಣ್ಣದ ಮೇಲ್ಭಾಗ ಮತ್ತು ಉದ್ದವಾದ ಬಾಲವನ್ನು ಹೊಂದಿರುತ್ತವೆ. ಇತರೆ ಪ್ರದೇಶದ ಜನಾಂಗ ವರ್ಷಪೂರ್ತಿ ಬೇಸಿಗೆಯಲ್ಲಿರುವಂತಹ ಹೊರರೂಪವನ್ನು ಉಳಿಸಿಕೊಳ್ಳುತ್ತವೆ. ಪಶ್ಚಿಮ ಬಂಗಾಳ ಮತ್ತದರ ಪೂರ್ವದಲ್ಲಿರುವ inglisi Whistler & Kinnear, 1933, ಗಳು ಪರ್ಯಾಯದ್ವೀಪದ ಹಕ್ಕಿಗಳಿಗಿಂತ ಗಾಢ ಬಣ್ಣವಿದ್ದು, ಚಿಕ್ಕ ಮತ್ತು ಸಪೂರ ಕೊಕ್ಕನ್ನು ಹೊಂದಿದ್ದು, ಪಾರ್ಶ್ವಗಳಲ್ಲಿ ಗಾಢ ಕೆಂಗಂದು ಬಣ್ಣವಿರುತ್ತದೆ. ಶ್ರೀಲಂಕಾದಲ್ಲಿ ವಿಶಿಷ್ಟವಾದ ಸ್ಥಳ ಸೀಮಿತ ಜನಾಂಗ, P. s. brevicauda Legge, 1879, ಪುಟ್ಟ ಬಾಲವನ್ನು ಹೊಂದಿದೆ ಮತ್ತು ಅವಯಸ್ಕ ಹಕ್ಕಿಗಳಿಗೆ ಹಳದಿ ಕೆಳಭಾಗವಿದ್ದು, ವಿಶಿಷ್ಟವಾದ ಕರೆಯನ್ನು ಹೊರಡಿಸುತ್ತವೆ. []

ವಿತರಣೆ ಮತ್ತು ಆವಾಸಸ್ಥಾನ

[ಬದಲಾಯಿಸಿ]

ಈ ಪ್ಯಾಸರಿನ್ ಪಕ್ಷಿಯು ಹಸುರು ಕಡಿಮೆ ಇರುವ ತೆರೆದ ಹುಲ್ಲುಗಾವಲು, ತೆರೆದ ಕಾಡುಪ್ರದೇಶ, ಗಿಡಪೊದೆ ಮತ್ತು ನಗರಗಳ ಮನೆಯ ತೋಟಗಳಲ್ಲಿ ಕಾಣಸಿಗುತ್ತವೆ. ಈ ಹಕ್ಕಿಗಳ ಉತ್ತರದ ಮಿತಿ - ಹಿಮಾಲಯದ ತಪ್ಪಲಿನ ಸಿಂಧೂ ನದಿಯ ಮೇಲ್ಭಾಗದ ಜಲಾನಯನದ ಪ್ರದೇಶದವರೆಗೂ ವಿಸ್ತರಿಸಿದೆ. ಈ ಪ್ರಭೇದವು ಭಾರತದ ಪಶ್ಚಿಮದ ಒಣ ಮರುಭೂಮಿ ಪ್ರದೇಶದಲ್ಲಿ ವಾಸ್ತವ್ಯವಿಲ್ಲ, ಪೂರ್ವಕ್ಕೆ ಬರ್ಮಾದವರೆಗೆ ಹರಡಿವೆ. ಶ್ರೀಲಂಕಾದ ಜನಸಂಖ್ಯೆಯು ಪ್ರಮುಖವಾಗಿ ತಗ್ಗು ಪ್ರದೇಶಗಳಲ್ಲಿ ಹಾಗೂ ಸುಮಾರು 1600 ಮೀ ವರೆಗಿನ ಎತ್ತರದ ಬೆಟ್ಟಗಳಲ್ಲಿವೆ. []

ನಡವಳಿಕೆ ಮತ್ತು ಪರಿಸರ ವಿಜ್ಞಾನ

[ಬದಲಾಯಿಸಿ]

ಹೆಚ್ಚಿನ ಉಲಿಯಕ್ಕಿಗಳಂತೆ, ಟುವ್ವಿ ಹಕ್ಕಿಯು ಕೀಟಾಹಾರಿ. ಹಾಡು ಪುನರಾವರ್ತಿತ tchup, tchup, tchup ಅಥವಾ zeet-zeet-zeet ನಂತಿರುತ್ತದೆ. ಮತ್ತೊಂದು ಕರೆ ಮೂಗಿನಿಂದ ಹೊರಟಂತೆ tee-tee-tee . ಇದು ತನ್ನ ಬೀಸು ಹಾರಾಟದಲ್ಲಿ ವಿದ್ಯುತ್‌ ಕಿಡಿ ಯಂತಹ ‍ (ಎಲೆಕ್ಟ್ರಿಕ್ ಸ್ಪಾರ್ಕ್ಸ್) ಶಬ್ದವನ್ನು ಮಾಡುತ್ತದೆ, ಇದು ರೆಕ್ಕೆಗಳಿಂದ ಉತ್ಪತ್ತಿಯಾಗುತ್ತದೆ ಎಂದು ಭಾವಿಸಲಾಗಿದೆ, ಆದರೆ ಇದನ್ನು ಕೊಕ್ಕಿನಿಂದ ಹೊರಡಿಸುತ್ತವೆ ಎಂದು ಒಂದು ಲೇಖನ ಸೂಚಿಸುತ್ತದೆ. [] []


ಹಾರಾಟದ ಸಮಯದ ವಿಶಿಷ್ಟ ಶಬ್ದ ಹೇಗೆ ಉತ್ಪತ್ತಿಯಾಗುತ್ತದೆಂದು ನಮಗೆ ಖಚಿತವಾಗಿ ತಿಳಿದಿಲ್ಲ. ರೀಡ್‌ ಅವರು ಉದುರಿದ ಬಾಲದಿಂದಾಗಿ ಈ ರೀತಿಯ ಶಬ್ದ ಹೊರಡುತ್ತದೆ ಎನ್ನುತ್ತಾರೆ, ಆದರೆ ನನಗಿನ್ನೂ ನಿಖರವಾಗಿ ಅರ್ಥವಾಗಿಲ್ಲ. ಹಕ್ಕಿಯ ದವಡೆಯಿಂದ ಧ್ವನಿ ಉತ್ಪತ್ತಿಯಾಗುತ್ತದೆ ಎಂದು ನಂಬಿದ್ದಾರೆ ಜೆಸ್ಸಿ. ಸಾಕಷ್ಟು ಸಮಯವನ್ನು ಈ ಹಕ್ಕಿಯ ಚಟುವಟಿಕೆಯನ್ನು ಅಭ್ಯಸಿಸುತ್ತಾ ಕಳೆದಿರುವುದರಿಂದ ಬಾಲದ ಮೇಲೆ ರೆಕ್ಕೆಯನ್ನು ಬಡಿಯುವುದರಿಂದ ಈ ಶಬ್ದ ಉಂಟಾಗುತ್ತದೆ ಎಂದೇ ನನ್ನ ಒಲವು. ಹಾರುವ ಮುಂಚಿನ ಕ್ಷಣದವರೆಗೂ ಬಾಲವನ್ನು ಮೇಲೆ ಕೆಳಗೆ ಅಕ್ಕಪಕ್ಕ ಅಲ್ಲಾಡಿಸುತ್ತಿದ್ದು, ಚಿಮ್ಮಿದಾಗ ಶಬ್ದ ಉಂಟಾಗಿ ಮುಂದುವರೆಯುತ್ತದೆ. ಹಾರುವಾಗ ಬೆಳವನ ಹಕ್ಕಿ ಮತ್ತು ಪಾರಿವಾಳಗಳ ರೆಕ್ಕೆಗಳು ಒಂದಕ್ಕೊಂದು ಮುಟ್ವುವುದರಿಂದ ಶಬ್ದ ಉಂಟಾಗುವುದು ಗೊತ್ತಿದೆ. ಹೀಗಾಗಿ ಅದೇ ರೀತಿ ಟುವ್ವಿ ಹಕ್ಕಿಗಳು ಹಾರು ರೆಕ್ಕೆಗಳಿಂದ ಶಬ್ದ ಉಂಟಾಗುತ್ತದೆಂದು ನಾನು ಭಾವಿಸುತ್ತೇನೆ - ಡಗ್ಲಾಸ್‌ ದೇವರ್[]

ವಲಸೆಯಲ್ಲಿ ಪಾಲ್ಗೊಳ್ಳದ ಟುವ್ವಿ ಹಕ್ಕಿಗಳು ವರುಷಕ್ಕೆ ಎರಡು ಬಾರಿ ಗರಿಗಳನ್ನು ಪುನರ್ನವಿಕರಿಸುತ್ತವೆ(ಮೌಲ್ಟ್ ), ಇದು ಪ್ಯಾಸರೀನ್‌ ಗುಂಪಿನ ಹಕ್ಕಿಗಳಲ್ಲಿ ಅಪರೂಪವೆನ್ನಬಹುದು. ಒಂದು ಪುನರ್ನವಿಕರಣ ವಸಂತಕಾಲದಲ್ಲಿ (ಏಪ್ರಿಲ್ ನಿಂದ ಮೇ) ಮತ್ತೊಂದು ಶರತ್ಕಾಲದಲ್ಲಿ (ಅಕ್ಟೋಬರ್ ನಿಂದ ನವೆಂಬರ್) ಸಂಭವಿಸುತ್ತದೆ. ಹೊರಪರಾವಲಂಬಿಗಳು (ಎಕ್ಟೋಪರಾಸೈಟ್) ದೇಹಕ್ಕೆ ಹೆಚ್ಚು ಅಂಟಿಕೊಂಡು ತೊಂದರೆ ಕೊಡುವುದರಿಂದ ದ್ವೈವಾರ್ಷಿಕ ಪುನರ್ನವಿಕರಣದತ್ತ ಒಲವು ಎಂದೆನ್ನಲಾಗಿದೆಯಾದರೂ ಯಾವುದೇ ಪ್ರಯೋಗಗಳನ್ನು ಮಾಡಲಾಗಿಲ್ಲ. ಟುವ್ವಿ ಹಕ್ಕಿ ವರ್ಷಕ್ಕೆ ಎರಡು ಬಾರಿ ಕೆಲವು ಹಾರುಗರಿಗಳನ್ನು ಪುನರ್ನವಿಕರಿಸುತ್ತವೆ ಮತ್ತು ಇದನ್ನು ಭಾಗಶಃ ದ್ವೈವಾರ್ಷಿಕ ಪುನರ್ನವಿಕರಣ ಎಂದು ಕರೆಯಲಾಗುತ್ತದೆ; [] ಆದರೆ, ಕೆಲವು ಲೇಖಕರು P. socialis socialis ಎರಡು ಬಾರಿ ಸಂಪೂರ್ಣ ಪುನರ್ನವಿಕರಣ ಹೊಂದುತ್ತವೆಂದು ವಿವರಿಸಿದ್ದಾರೆ. []

ಪಕ್ಷಿಗಳು ದಿನವಿಡೀ ಜೋಡಿಯಾಗಿದ್ದರೂ ವಿಶ್ರಾಂತಿಯ ವೇಳೆ ಒಂಟಿಯಾಗಿ ಸಣ್ಣ ಮರ ಅಥವಾ ಪೊದೆಗಳ ಕೊಂಬೆಯ ಮೇಲೆ ತಂಗುತ್ತವೆ. []

ಸಂತಾನೋತ್ಪತ್ತಿ

[ಬದಲಾಯಿಸಿ]

ಗಂಡು ಬಾಲವನ್ನು ಮೇಲಕ್ಕೆತ್ತಿ ಪ್ರಣಯ ಪ್ರದರ್ಶನದ ಹಾರಾಟ ನಡೆಸುತ್ತದೆ ಹಾಗೂ ಪೊದೆಯ ಮೇಲಿಂದ ಪ್ರಣಯಕ್ಕೆ ಆಹ್ವಾನಿಸಿ ಹಾಡುತ್ತವೆ. ಪೊದೆ ಅಥವಾ ಎತ್ತರದ ಹುಲ್ಲಿನಲ್ಲಿ, ನೆಲಕ್ಕೆ ಸಮೀಪವಾಗಿ ಗೂಡನ್ನು ನಿರ್ಮಿಸುತ್ತವೆ. ಟುವ್ವಿ ಹಕ್ಕಿ ಹಲವಾರು ರೀತಿಯ ಗೂಡುಗಳನ್ನು ನಿರ್ಮಿಸುವುದು ತಿಳಿದಿದೆ, ಇದರಲ್ಲಿ ದೊಡ್ಡ ಎಲೆಗಳನ್ನು ಸೇರಿಸಿ ಹೊಲೆದು ಮಾಡಿದ ಸಡಿಲ ಬಟ್ಟಲಾಕಾರದ್ದು ಒಂದಾದರೆ, ಮಗದೊಂದು ಪರ್ಸ್‌ನಂತಿದ್ದು ಅದರೊಳಗೆ ಹುಲ್ಲನ್ನು ಹೊದಿಸಿದ್ದು ಉದ್ದವಾದ ಚೀಲದಂತಹ ರಚನೆ, ಇನ್ನೊಂದು ಹುಲ್ಲಿನಿಂದಾದ ತೆಳುವಾದ ಚೆಂಡಿನಾಕೃತಿಯದು. [] [] ಸಾಮಾನ್ಯವಾಗಿ ಕಾಣಸಿಗುವ ಗೂಡು, ಕೆಳ ಪೊದೆಯಲ್ಲಿ ನಿರ್ಮಿಸಿದ್ದು, ಜೇಡರಬಲೆಯನ್ನು ದಾರವನ್ನಾಗಿಸಿ ಹೊಲೆದಿದ್ದು, ಗೂಡಿನ ಒಳಭಾಗವನ್ನು ಕೂದಲಿನಿಂದ ಆವರಿಸಿ, ಬದಿಯಲ್ಲಿ ಪ್ರವೇಶದ್ವಾರವಿರುತ್ತದೆ. [೧೦] ಇವು 3 ರಿಂದ 5 ಹೊಳಪು, ಅಲ್ಪ ಅಂಡಾಕಾರದ ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಯು ಇಟ್ಟಿಗೆ-ಕೆಂಪು ಬಣ್ಣದಿಂದ ಕೆಂಗಂದಿನವರೆಗಿರುತ್ತದೆ. ವಿಶಾಲವಾದ ತುದಿಯ ಮೊಟ್ಟೆಯ ಬಣ್ಣ ಉಳಿದ ಭಾಗಕ್ಕಿಂತ ಗಾಢವಾಗಿರುತ್ತದೆ . ಮೊಟ್ಟೆಗಳು 15 ರಿಂದ 17 ಮಿ.ಮೀ (0. 6 ರಿಂದ 0.7 ಇಂಚು) ಉದ್ದ, ಮತ್ತು 11 ರಿಂದ 13 ಮಿಮೀ (0.4 ರಿಂದ 0.5 ಇಂಚು) ಅಗಲವಿರುತ್ತವೆ. [೧೧] ಅವು ಸುಮಾರು 12 ದಿನಗಳಲ್ಲಿ ಮರಿ ಮೊಟ್ಟೆಯಿಂದ ಹೊರಬರುತ್ತವೆ. [೧೨]

ಸಂತಾನ ಸಮಯ ಸ್ಥಳೀಯ ಪ್ರದೇಶದ ಋತುಮಾನವನ್ನು ಅವಲಂಬಿಸಿರುತ್ತದೆ ಮತ್ತು ವರ್ಷವಿಡೀ ಸಂತಾನ ಚಟುವಟಿಕೆಯ ಸಾಧ್ಯತೆಯೂ ಇದೆ, ಆದರೆ ಮುಂಗಾರಿನ ನಂತರದಲ್ಲಿ ಸಂತಾನ ಚಟುವಟಿಕೆ ಹೆಚ್ಚಿರುತ್ತದೆ . [೧೩] ಉತ್ತರ ಭಾರತದಲ್ಲಿ ಇದು ಮುಖ್ಯವಾಗಿ ಜೂನ್ ನಿಂದ ಸೆಪ್ಟೆಂಬರ್ ಮತ್ತು ಶ್ರೀಲಂಕಾದಲ್ಲಿ ಮುಖ್ಯವಾಗಿ ಡಿಸೆಂಬರ್ ನಿಂದ ಮಾರ್ಚ್ ಅಥವಾ ಆಗಸ್ಟ್ ನಿಂದ ಅಕ್ಟೋಬರ್. [] ನೀಲಗಿರಿಯಲ್ಲಿ ಸಂತಾನೋತ್ಪತ್ತಿಯ ಕಾಲ - ಮೇ ನಿಂದ ಜೂನ್ ಅವಧಿಯಲ್ಲಿ. [೧೧] ಏಕಪತ್ನಿವ್ರತಸ್ಥ ಎಂದು ನಂಬಲಾಗಿದೆ, ಮತ್ತು ಜೋಡಿಹಕ್ಕಿಗಳೆರಡೂ ಕಾವು ಕೊಡುವುದರಿಂದ ಹಿಡಿದು ಮತ್ತು ಆಹಾರವನ್ನರಸಿ ತಿನಿಸುವವರೆಗಿನ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತವೆ, ಭಿನ್ನ ಪ್ರಮಾಣದಲ್ಲಿ. [೧೪] ಪಾಲಕರು ಚಳಿಗಾಲದಲ್ಲಿ ಹೆಚ್ಚು ಸಮಯವನ್ನು ಗೂಡಿನಲ್ಲಿ ಕಳೆಯುವ ಸಾಧ್ಯಯತೆಯಿದೆ. [೧೫] [೧೬] 12 ದಿನಗಳಲ್ಲಿ ಮರಿ ಮೊಟ್ಟೆಯಿಂದ ಹೊರಬರುತ್ತವೆ. [೧೩] ಪ್ಲೇನ್ಟೀವ್‌ (Plaintive) ಮತ್ತು ಬೂದು ಕೋಗಿಲೆಗಳು (grey-bellied cuckoos) ಟುವ್ವಿ ಹಕ್ಕಿಯ ಪರಾವಲಂಬಿಗಳು ಎಂದು ತಿಳಿದುಬಂದಿದೆ. [೧೭] ಬೆಕ್ಕುಗಳಂತಹ ಪರಭಕ್ಷಕಗಳಿಂದ ಅಪಾಯ ಉಂಟಾಗುವ ಸಾಧ್ಯತೆ ಇರುವಾಗ, ಟುವ್ವಿಹಕ್ಕಿಗಳು ಅಂಗ ಊನವಾದಂತೆ ನಟಿಸಿ ಬೇಟೆಗಾಗಿ ಬಂದ ಜೀವಗಳನ್ನು ದಾರಿ ತಪ್ಪಿಸಿ ಗೂಡನ್ನು ಮರಿಯನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡುತ್ತವೆ . [೧೨]

ಹಕ್ಕಿಗಳು ಹೊಸ ಗೂಡು ಕಟ್ಟಲು, ಹಳೆಯ ಗೂಡನ್ನು ಮರುಬಳಕೆ ಮಾಡಿದ ಅಪರೂಪದ ಪ್ರಕರಣಗಳನ್ನು ದಾಖಲಿಸಲಾಗಿದೆ. [೧೩]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ BirdLife International (2016). "Prinia socialis". IUCN Red List of Threatened Species. 2016: e.T22713604A94382336. doi:10.2305/IUCN.UK.2016-3.RLTS.T22713604A94382336.en. Retrieved 19 November 2021. ಉಲ್ಲೇಖ ದೋಷ: Invalid <ref> tag; name "iucn status 19 November 2021" defined multiple times with different content
  2. Alström, Per; Ericson, Per G.P.; Olsson, Urban; Sundberg, Per (Feb 2006). "Phylogeny and classiWcation of the avian superfamily Sylvioidea". Molecular Phylogenetics and Evolution. 38 (2): 381–397. doi:10.1016/j.ympev.2005.05.015. ISSN 1055-7903. PMID 16054402.
  3. ೩.೦ ೩.೧ ೩.೨ ೩.೩ Rasmussen, P. C.; Anderton, J. (2005). Birds of South Asia: The Ripley Guide. Smithsonian Institution & Lynx Edicions. ISBN 8487334679.
  4. ೪.೦ ೪.೧ ೪.೨ ೪.೩ Ali, S.; Ripley, S. D. (1997). Handbook of the Birds of India and Pakistan. Volume 8 (2nd ed.). New Delhi: Oxford University Press. pp. 55–60.
  5. Uttangi, J. C. (1991). ""Electric sparks" from Ashy Wren Warbler". Newsletter for Birdwatchers. 31 (7&8): 14.
  6. Dewar, Douglas (1908). Birds of the Plains. p. 222.
  7. Hall, KSS; Tullberg, BS (2004). "Phylogenetic analyses of the diversity of moult strategies in Sylviidae in relation to migration" (PDF). Evolutionary Ecology. 18: 85–105. doi:10.1023/B:EVEC.0000017848.20735.8b. Archived from the original (PDF) on 2021-08-29. Retrieved 2023-06-14.
  8. Hemanth, J. (1990). "On the roosting of the Ashy Wren-Warbler". Newsletter for Birdwatchers. 30 (5&6): 15.
  9. Ramanan, R. V. (1995). "The nest of Ashy Wren Warbler Prinia socialis". Newsletter for Birdwatchers. 35 (1): 17.
  10. Bhambral, R. (1966). "Dog's hair used for nest by Ashy Wren Warblers". Newsletter for Birdwatchers. 6 (8): 7.
  11. ೧೧.೦ ೧೧.೧ Oates, E. W. (1905). Catalogue of the collection of birds' eggs in the British Museum. British Museum.
  12. ೧೨.೦ ೧೨.೧ Chakravarthy, AK; Subramanya, S; Nagarajan, S (1980). "The nesting of the Ashy Wren-Warbler Prinia socialis, Sykes in Bangalore". Newsletter for Birdwatchers. 20 (4): 8–9.
  13. ೧೩.೦ ೧೩.೧ ೧೩.೨ George, J. C. (1962). "Nest-shifting behaviour of the Ashy Wren-Warbler" (PDF). The Auk. 78 (3): 435–6. doi:10.2307/4082287. JSTOR 4082287. Archived from the original (PDF) on 2021-03-01. Retrieved 2023-06-14.
  14. Karthikeyan, S (1993). "Monogamy in Ashywren Warbler Prinia socialis: How much do sexes share domestic duties". In Verghese, A; Sridhar, S; Chakravarthy, AK (eds.). Bird Conservation: Strategies for the Nineties and Beyond. Ornithological Society of India, Bangalore. pp. 200–201.
  15. Wesley, H. D. (1994). "Nest-temperature regulation during incubation in Ashy Wren-Warbler". Newsletter for Birdwatchers. 34 (2): 29–31.
  16. Desai, R N (1993). "Atmospheric temperature and the incubation pattern in the Ashy Wren-Warbler Prinia socialis". In Verghese, A; Sridhar, S; Chakravarthy, AK (eds.). Bird Conservation: Strategies for the Nineties and Beyond. Bangalore: Ornithological Society of India. p. 176.
  17. Lowther, Peter E. (2012). "Host list of Avian brood parasites – 2" (PDF). Chicago, IL, USA: Field Museum of Natural History. Archived from the original (PDF) on 11 ಸೆಪ್ಟೆಂಬರ್ 2021. Retrieved 16 April 2020.


ಇತರ ಮೂಲಗಳು

[ಬದಲಾಯಿಸಿ]