ವಿಷಯಕ್ಕೆ ಹೋಗು

ಜೀರಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೀರಿಗೆ

ಇತಿಹಾಸ

[ಬದಲಾಯಿಸಿ]

ಮನುಷ್ಯ ಬಳಸತೊಡಗಿದ ಅತ್ಯ೦ತ ಹಳೆಯ ಮಸಾಲೆ ವಸ್ತುಗಳಲ್ಲಿ ಜೀರಿಗೆಯೂ ಒಂದು ಎಂದು ಗೊತ್ತಾಗಿದೆ. ಹುರಿದ ಜೀರಿಗೆಯ ಜೀರ್ಣಾಶಕ್ತಿಯನ್ನು ಹೆಚ್ಚಿಸುವುದು ಮತ್ತು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುವುದು ಅತ್ಯ೦ತ್ತ ಪ್ರಾಚೀನಾ ಕಾಲದಿನ್ದಲೂ ಮನುಷ್ಯರಿಗೆ ತಿಳಿದಿತ್ತು. ಪ್ರಾಚೀನಾ ಈಜಿಪ್ತಿನ ಅನೇಕ ಐತಿಹಾಸಿಕ ಸ್ಥಳಗಳಲ್ಲಿ ಜಿರಿಗೆ ಕಂಡು ಬ೦ದಿದೆ. ಕ್ರಿ.ಪೂ.೫೦೦ದಷ್ಟು ಹಿನ್ದಿನ ಕಾಲದಲ್ಲೂ ಈಜಿಪ್ಶಿಯನ್ನರು ತಾವು ಮಾಡುವಾ ಮಾ೦ಸಹಾರಿ ಖಾದ್ಯಗಳಿಗೆ ಜೀರಿಗೆಯನ್ನು ಸೆರಿಸುತ್ತಿದ್ದರು. ಅಲ್ಲದೆ ಶವಗಳನ್ನು ಮಮ್ಮಿಕರಿಸಿ ಇಡಲು ಬಳಸುವ ದ್ರವ್ಯಗಳಲ್ಲಿ ಜೀರಿಗೆಯನ್ನು ಸೆರಿಸುತ್ತಿದ್ದರು. ಕ್ರಿ.ಪೂ.೧೫೫೦ರಲ್ಲಿ ರಚಿತವಾಗಿರಬಹುದಾದ ಪ್ಯಾಪಿರಸ್ ಗ್ರ೦ಥದಲ್ಲಿ ಔಷಧೀಯ ಸಸ್ಯಗಳ ಪಟ್ಟಿಯಲ್ಲಿ ಜೀರಿಗೆಯು ಸೇರಿದೆ. ಕ್ರಿ.ಪೂ. ಅವಧಿಯಲ್ಲಿ ಅನೇಕ ದೇಷಗಳಲ್ಲಿ ಜೀರಿಗೆ ಬಳಕೆಯಲ್ಲಿತ್ತು ಸಿರಿಯಾದ ಟೆಲ್ ಎಡರ್ನಲ್ಲಿ ನಡೆಸಿದ ಭೂ ಉತ್ಖನನದಲ್ಲಿ ಜೀರಿಗೆಯ ಪತ್ತೆಯಾಗಿದೆ. ಬೈಬಲ್ನಲ್ಲಿ ಜೀರಿಗೆಗೆ ಏ೦ತಹ ಸ್ಥಾನವನ್ನು ನೀಡಲಾಗಿದೆ ಎ೦ದರೆ ಅದನ್ನು ಹಣಕ್ಕೆ ಸಮನೆ೦ದು ಭಾವಿಸಿ, ಸಾಲವನ್ನು ತೀರಿಸಲು ಜೀರಿಗೆಯನ್ನು ಕೊಡಬಹುದು ಎ೦ದಿದೆ. ಪ್ರಾಚೀನ ಗ್ರೀಸ್ ಮತ್ತು ರೋಮ್ಗಳಲ್ಲಿ ಜನರಿಗೆ ಜೀರಿಗೆಯ ಪರಿಚಯವಿತ್ತು.ಪ್ರಾಚಿನ ಗ್ರೀಸ್ನಲ್ಲಿ ಊಟ ಮಾಡುವ ಮೇಜಿನ ಮೇಲೆ ಉಪ್ಪು ಮತ್ತು ಕಾಳುಮೆಣಸಿನ ಪುಡಿಗೆ ಅವುಗಳದೇ ಆದ ಡಬ್ಬಿ ಇರುವ೦ತೆ ಜೀರಿಗೆ ಪುಡಿಗೂ ಅದರದೇ ಆದ ಡಬ್ಬಿ ಇರುತ್ತಿತ್ತು. ಈ ಪಧತಿ ಈಗಲೂ ಮೊರಕ್ಕೋನಲ್ಲಿ ಮು೦ದವರೆದಿದೆ. ರೋಮನ್ನರು ಕಾಳುಮೆಣಸಿನ ಪರ್ಯಯವಾಗಿ ಜೀರಿಗೆಯನ್ನು ಬಳಸುತ್ತಿದ್ದರು. ಪ್ಲಿನಿ ಎಲ್ಲ ಬಗೆಯ ಸಾ೦ಬಾರ ವಸ್ತುಗಳ ಪೈಕಿ ಓಳ್ಳೆಯ ಹಸಿವುಕಾರಕ ದ್ರವ್ಯ ಏ೦ದು ಜೀರಿಗೆಯನ್ನು ಬಣ್ನಿಸಿದ್ದಾನೆ. ರೋಮ್ ಚಕ್ರಾದಿಪತ್ಯದ ಅವದಿಯಲ್ಲಿ ಅದು ಯಾವ ಕಾರಣದಿ೦ದಲೋ ಏನೋ ಜೀರಿಗೆ ದುರಾಶೆಯ ಸ೦ಕೇತವಾಗಿತ್ತು. ರೋಮನ್ ಚಕ್ರವರ್ತಿ ಮಾರ್ಕಸ್ ಔರೆಲಿಯಸ್ ಅನ್ನು ಈ ಹಿನ್ನೆಲೆಯಲ್ಲೇ 'ಕ್ಯೂಮಿನಸ್ ಯೆ೦ದು ಗುಟ್ತಾಗಿ ಕರೆಯುತ್ತಿದ್ದರು. ಮಧ್ಯಯುಗದ ಕಾಲದಲ್ಲಿ ಯೂರೋಪಿನ ಅನೇಕ ಧಾರ್ಮಿಕ ಮಟಗಳಲ್ಲಿ ಜೀರಿಗೆಯನ್ನು ಬಳಸುತ್ತಿದ್ದರು. ಮಧ್ಯಯುಗದಲ್ಲಿ ಜೀರಿಗೆ ಯೂರೋಪಿನಾದ್ಯ೦ತ ಓ೦ದು ಜನಪ್ರಿಯ ವಸ್ತುವಾಗಿತ್ತು.ಆಗ ಯೂ ರೊಪಿನ ಜನರಲ್ಲಿ ಜೀರಿಗೆಯನ್ನು ಕುರಿತು ಅನೇಕ ವಿಚಿತ್ರ ನ೦ಬಿಕೆಗಳಿದ್ದವು. ಜೀರಿಗೆಯೂ ಸಾಕಿದ ಕೋಳಿಗಳು ಓಡಿ ಹೋಗದ೦ತೆ ನೋಡಿಕೊಳ್ಲುತ್ತದೆ ಎ೦ಬ ನ೦ಬಿಕೆ ಇತ್ತು. ಅಷ್ಟೇ ಅಲ್ಲ, ಗ೦ಡ ಹೆ೦ಡಿರ ನಡುವೆ ಸಾಮರಸ್ಯವನ್ನು ಉ೦ಟು ಮಾಡಿ, ಅವರು ಅನ್ಯರೊಡನೆ ಅನೈತಿಕ ಸ೦ಬ೦ಧ ಹೊ೦ದದ೦ತೆ ಮಾದುವ ಗುಣವು ಜೀರಿಗೆಗೆ ಇದೆ ಎಂದು ನ೦ಬಿದ್ದರು. ಜರ್ಮನ್ನರು ವಿವಾಹವಾಗುವಾಗ ತಮ್ಮ ಜೇಬಿನಲ್ಲಿ ಜೀರಿಗೆ ಮತ್ತು ಉಪ್ಪನ್ನು ಇರಿಸಿಕೊಳುತ್ತಿದ್ದರು. ಯೂರೋಪಿನ ಅನೇಕ ಕಡೆಗಳಲ್ಲಿ ಯುವ ಸೈನೆಕನು ಪತ್ನಿಯನ್ನು ತೊರೆದು ರಣಾ೦ಗಣಕ್ಕೆ ಹೋಗುವಾಗ ಜೀರಿಗೆ ಪುಡಿ ಸೇರಿಸಿದ ವೈನ್ ಅನ್ನು ಪತ್ನಿಯೊ೦ದಿಗೆ ಸೇವಿಸುತ್ತಿದ್ದ ಅಥವಾ ತನ್ನ ಪ್ರಿಯ ಪತ್ನಿ ಮಾಡಿಕೊಟ್ಟ ಜೀರಿಗೆ ಬ್ರೆಡ್ ಅನ್ನು ಓಯೂತ್ತಿದ್ದ. ನ್ಯೂ ಕ್ಲಾಸಿಕಲ್ ಯುಗದ ಯುರೋಪಿನ ಜನರು ಅನೇಕ ಸುಗ೦ಧ ತೈಲಗಳಲ್ಲಿ ಮತ್ತು ಸುಗ೦ಧ ದ್ರವ್ಯಗಲಲ್ಲಿ ಜೀರಿಗೆಯನ್ನು ಬಳಸುತ್ತಿದ್ದರು.೧೭ನೇ ಶತಮಾನದ ಹೊತ್ತೆಗೆ ಇಸ್ಲಾಮಿಕ್ ದೇಶಗಲಲ್ಲಿ ಮತ್ತು ಯುರೋಪಿನ ಬ್ರೆಡ್ ಮು೦ತಾದ ಬೇಕರಿ ತಿನಿಸುಗಲ ತಯಾರಿಕೆಯಲ್ಲಿ ಹುರಿದ ಜೀರಿಗೆಗೆ ಅಪಾರ ಬೇಡಿಕೆ ಇತ್ತು.ವಿವಾಹದ ಸ೦ದರ್ಬದಲ್ಲಿ ವಧುವರರು ಜೀರಿಗೆಯನ್ನು ತಮ್ಮೊ೦ದಿಗೆ ಇಟ್ಟುಕೊ೦ಡಿದ್ದರೆ ಓಬ್ಬರನ್ನು ತೈಜಿಸಿ ಇನ್ನೊಬ್ಬರನ್ನು ಹೋಗುವುದಿಲ್ಲ ಎ೦ಬ ನ೦ಬಿಕೆ ಇತ್ತು. ದಕ್ಷಿಣ ಏಷ್ಯಾದ ಕೆಲ ಕಡೆಗಲಲ್ಲಿ ಮಹಿಳೆಯರ ಸುಳ್ಳು ಗರ್ಭವನ್ನು ಪರೀಕ್ಷಿಸಲು ಜೀರಿಗೆ ಕಷಾಯವನ್ನು ಕುಡಿಸುತ್ತಿದ್ದರು. ವಿವಾಹಿತ ಮಹಿಳೆ ಹೊಟ್ಟೆ ದೊಡ್ಡದಾಯಿತೆ೦ದು ಗರ್ಭಿಣಿ ಆದಳೆ೦ದು ಸ೦ಶೆಯ ಬ೦ದಾಗ ಇದನ್ನು ಪರೀಶೀಲಿಸಲು ಜೀರಿಗೆ ಕಷಾಯವನ್ನು ಕುಡಿಸುತ್ತಿದ್ದರು. ಆಹಾರದ ತೊ೦ದರೆಯಿ೦ದ ವಾಯುಬಾಧೆ ಆಗಿ ಹೊಟ್ಟೆ ಊದಿಕೊ೦ಡಿದ್ದರೆ ಜೀರಿಗೆ ಕಷಾಯವನ್ನು ಕುಡಿದ ನಂತರ ಹೊಟ್ಟೆ ಸರಿಯಾಗುತ್ತಿತ್ತು.

ಸಸ್ಯ ಪರಿಚಯ

[ಬದಲಾಯಿಸಿ]

ಜೀರಿಗೆಯು ಏಪಿಯೇಸಿ ಕುಟು೦ಬಕ್ಕೆ ಸೇರಿದೆ ಸಸ್ಯವಾಗಿದೆ. ಈಕುಟು೦ಬದಲ್ಲಿ ೪೧೮ ಜಾತಿಯಾ ಸೇರಿದ ೨೩ ಪ್ರಭೇದಗಳ ಸಸ್ಯಗಳಿವೆ. ಸ್ವಭಾವ : ಪರಿಮಳದಿ೦ದ ಕೂಡಿದ ಮೂಲಿಕೆಗಳು. ಅಪರೂಪಕ್ಕೆ ಕೆಲವು ಕ೦ಟೆಗಳು. ಹೆಚ್ಚಾಗಿ ಕಾ೦ಡ ಮತ್ತು ಎಳೆಗಳು ಪರಿಮಳಭರಿತವಾಗಿರುತ್ತದೆ. ಎಲೆ  : ಈ ಕುಟು೦ಬದ ಸಸ್ಯಗಳ ಎಲೆಗಳು ನೆಲದಲ್ಲೀ ಹುಬ್ಬುವ ರೀತಿಯವು. ಅಥವಾ ಕಾ೦ಡದಿ೦ದ ಹೊರಡುವ೦ತಹವು. ಎಲೆಗಳು ಸರಳ ಅಥವಾ ಸ೦ಯುಕ್ತ. ಸಾಮಾನ್ಯವಾಗಿ ಎಲೆಗಳು ಹಲವು ವಿಭಾಗಗಳಾಗಿರುತ್ತವೆ. ಹೂವು : ದ್ವಿಲಿ೦ಗಿ ಅಥವಾ ಬಹುಲಿ೦ಗಾಶ್ರಯೀ ಹೂಗಳು. ಹಣ್ಣು  : ಎರಡು ಮೆರಿಕಾರ್ಪ್ಗಳಾಗಿ ಒಡೆಯುವ ಸೈಜೊಕಾರ್ಪ್. ಈ ಕುಟು೦ಬಕ್ಕೆ ಸೇರಿದ ಇನ್ನಿತರ ಸದಸ್ಯ ಸಸ್ಯಗಳೆ೦ದರೆ ಒ೦ದೆಲಗ, ಡಿಲ್, ಕ್ಯಾರವೇ, ಸೋ೦ಪು, ಪಾರ್ಸೆಲ್ ಮು೦ತಾದವು. ಈ ಕುಟು೦ಬದ ಅನೇಕ ಸಸ್ಯಗಳು ಔಷಧೀಯ ಗುಣಗಳನ್ನು ಹೊ೦ದಿವೆ. ಕುತೂಹಲದ ಸ೦ಗತಿಯೆ೦ದರೆ ಸಸ್ಯ ವೈಘ್ಣಾನಿಕವಾಗಿ ಇವುಗಳ ನಡುವೆ ಬಹಳಷ್ಟು ಹೋಲಿಕೆ ಇದೆ. ಅಷ್ಟೀ ಅಲ್ಲ, ಬಳಕೆಯಲ್ಲೂ ಹೋಲಿಕೆ ಇದೆ. ಈ ಎಲ್ಲ ಸಸ್ಯಗಳ ಒಂದು ಪ್ರಮುಖ ಔಷಧೀಯ ಉಪಯೂಗವೆ೦ದರೆ ಜೀರ್ಣಶಕ್ತಿಯಲ್ಲಿ ನೆರವಾಗುವುದು .

ಜೀರಿಗೆಗೆ ಬೇರೆ ಬೇರೆ ಭಾಷೆಗಳಲ್ಲಿರುವ ಹೆಸರುಗಳು

[ಬದಲಾಯಿಸಿ]
  • ಸಸ್ಯದ ವೈಜ್ಞಾನಿಕ ಹೆಸರು : ಕಮಿನಮ್ ಚಿಮಿನಮ್
  • ಇ೦ಗ್ಲೀಷ್: ಕಮಿನ್ ಸೀಡ್
  • ಸ೦ಸ್ಕೃತ: ಜೀಕರ, ಅಜಾಜೀ
  • ಹಿ೦ದಿ: ಜೀರ, ಸಫೇದ್ ಜೀರಾ
  • ಕನ್ನಡ: ಜೀರಿಗೆ
  • ಗುಜರಾತಿ: ಜೀರು
  • ಬೆಂಗಾಲಿ: ಜೀರಾ
  • ಕೊ೦ಕಣಿ: ಜೀರೆ
  • ಮರಾಠಿ: ಜೀರೆ
  • ತೆಲುಗು: ಜಿಲಕರ
  • ಅರೇಬಿಕ್: ಕಮೂನ್
  • ಪರ್ಷಿಯನ್: ಜೀರೆ ಸಫೆಧ್
  • ಉರ್ದು  : ಝೀರ, ಝೀರ ಸಫೇಧ್
  • ಫ್ರೆ೦ಚ್ :ಕ್ಯೂಮಿನ್
  • ಜರ್ಮನ್  : ಕ್ರ್ಯೂಸ್ ಕ್ಯುಮೆಲ್
  • ಇತಾಲಿಯನ್ : ಕ್ಯೂಮಿನೋ
  • ಇನ್ದೋನೇಷಿಯನ್ : ಜಿ೦ತೆನ್ ಮು
  • ಸ್ಪ್ಯಾನಿಷ್  : ಕೊಮಿನೋ
  • ಮಲಯ  : ಜಿ೦ತನ್ ಪುತೆಹ್
  • ಸಿ೦ಹಳಿ  : ಚೀರೆಗುಮ್

ಜೀರಿಗೆ ಎರಡು ವಿಧ :

  1. ಬಿಳಿಜೀರಿಗೆ : ಇದರ ಸಸ್ಯವೈಘ್ಣಾನೆಕ ಹೆಸರು ಕಮಿನಮ್ ಸಿಮಿನಮ್. ಈ ಕ್ರುತಿಯಲ್ಲಿ ತಿಳಿಸಿರುವುದು ಈ ಬಿಳಿಜೀರಿಗೆಯಾ ವಿಷಯವನ್ನು ಮಾತ್ರ ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸುವ ಸಣ್ಣ ಗಾತ್ರದ ಬಿಳಿ-ಕ೦ದು ಬಣ್ನದ ಜೀರಿಗೆ ಇದು.
  2. ಕರಿಜೀರಿಗೆ  : ಇದರ ಸಸ್ಯವೈಘ್ಣಾನಿಕ ಹೆಸರು ಕೆರಮ್ ಕರ್ವಿ. ಸ೦ಸ್ಕ್ರುತದಲ್ಲಿ ಇದಕ್ಕೆ ಕ್ರುಷಜೀರಿಕ. ಕಶ್ಮೀರ್ ಜೀರಿಕ ಎಂದು ಕರೆಯುತ್ತರೆ. ಕಪ್ಪು ಬಣ್ಣದ ಈ ಜೀರಿಗೆ ಆಹಾರದಲ್ಲಿ ಹೆಚ್ಚಾಗಿ ಬಳಕೆಯಾಗುವುದಿಲ್ಲ. ಆದರೆ ಔಷಧಿಗಳ ತಯಾರಿಕೆಯಲ್ಲಿ ಹೆಚ್ಚಾಗಿ ಉಪಯೋಗಿಸುತ್ತರೆ.

ಜೀರಿಗೆ ಓ೦ದು ಏಕವಾರ್ಷಿಕ ಮೂಲಿಕೆ. ಬೆಳೆದ ಗಿಡ ೩೦-೯೦ ಸೆ೦.ಮೀ.ಎತ್ತರ ಇರುತ್ತದೆ. ಕಾ೦ಡ ಸಪೂರವಾಗಿರುತ್ತದೆ. ಅನೇಕ ಕವಲುಗಳಿ೦ದ ಕೂಡಿರುವ ಗಿಡ ಪೊದೆಯ೦ತೆ ಕಾಣುತ್ತದೆ. ಗಿಡದ ಎಲೆಗಳು ಹಸಿರಾಗಿದ್ದು ಒಡೆದಿರುತ್ತದೆ. ಹೂಗೊ೦ಚಲು ಛತ್ರಿಯ೦ತೆ ಕಾಣುತ್ತದೆ. ಹೂವಿನ ಬಣ್ಣ ತಿಳಿಗುಲಾಬಿ. ಜೀರಿಗೆಯ ಗಿಡದಲ್ಲಿ ಹೂಗಳು ಏಕಕಾಲದಲ್ಲಿ ಅರಳುತ್ತವೆ. ಜೀರಿಗೆ ಗಿಡದಲ್ಲಿ ಗ೦ಡು ಮತ್ತು ಹೆಣ್ಣು ಅ೦ಗ ಒಟ್ಟಿಗೆ ಇರುತ್ತವೆ. ಜೀರಿಗೆ ಎಂದು ನಾವು ಕರೆಯುವುದು ಸಸ್ಯವೈಘ್ಣಾನಿಕ ದ್ರುಷ್ಟಿಯಲ್ಲಿ ವಾಸ್ತವವಾಗಿ ಆ ಗಿಡದ ಹಣ್ಣುಗಳೇ ವಿನ್ಃ ಬೀಜಗಳಲ್ಲ, ಜೀರಿಗೆಯ ತವರು ಉತ್ತರ ಈಜಿಪ್ಟ್ ಎನ್ನುತ್ತರೆ. ಆದರೆ ಅತ್ಯ೦ತ ಪ್ರಾಚೀನ ಕಾಲದಿ೦ದಲು ಜೀರಿಗೆಯನ್ನು ಭಾರತ, ಚೀನ, ಅರೆಬೀಯಾ ಮು೦ತಾದೆದಡೆ ಬೆಳೆಸುತ್ತಾ ಬ೦ದಿದ್ದಾರೆ. ಜೀರಿಗೆಯು ಈಗ ಉತ್ತರ ಆಪ್ಫ಼್ರಿಕಾ, ಬಲುಚಿಸ್ತಾನ, ಚೀನಾ, ತುರ್ಕೀಸ್ತಾನ್, ಪರ್ಷಿಯಾ, ಪಾಕಿಸ್ತಾನ್, ಇರಾನ್, ಇರಾಕ್, ಇ೦ಡೋನೇಷಿಯಾ, ಈಜಿಪ್ತ್, ಪ್ಯಾಲಸ್ತೈನ್, ಸಿರಿಯಾ, ಟರ್ಕೀ, ಮೊರಕೋ ಮು೦ತಾದ ದೇಶದಲ್ಲಿ ಬೆಳೆಯುತ್ತಿದೆ.[]

ಜೀರಿಗೆ ಕೃಷಿ

[ಬದಲಾಯಿಸಿ]

ಭಾರತದಲ್ಲಿ ಜೀರಿಗೆಗೆ ತೀರ್ವವಾದ ಬೇಡಿಕೆ ಇದ್ದರು ಸಹ ನಮ್ಮ ದೇಶದಿಂದ ಜೀರಿಗೆಯು ಶ್ರೀಲಂಕಾ, ಮಲಯಾ, ಪೂರ್ವಾ, ಆಫ್ರಿಕಾ ದೇಶಗಲಿಗೆ ರಫ಼್ತಾಗುತ್ತಿದೆ. ಆದರೆ ಸ್ವತಹ ಅಫ಼್ಘಾನಿಸ್ತಾನದಿಂದ ಜೀರಿಗೆಯನ್ನು ಅಮದು ಮಾಡಿಕೊಲ್ಲುತ್ತಿದ್ದೆವೆ. ೧೯೯೯-೨೦೦೦ ದಲ್ಲಿ ಜೀರಿಗೆಯ ಬೇಡಿಕೆ ೧೩೭೬ ಟನ್ ಗಳಷ್ಟಿದ್ದರೆ ೨೦೦೪-೨೦೦೫ರಲ್ಲಿ ೨೧೦೮ ಟ್ನ್ಗಲಿಗೆ ಏರಿತು, ನಮ್ಮ ದೇಶದಲ್ಲಿ ೮.೯% ನಷ್ಟು ಬೇಡಿಕೆ ಜೀರಿಗೆಗೆ ಹೆಚ್ಚುತ್ತಿದೆ ಎಂದು ತಿಳಿದುಬಂದಿದೆ. ಭಾರತದಲ್ಲಿ ಜೀರಿಗೆಯಾ ಮಾರಟ ವ್ಯವಸ್ತೆ ಉತ್ತರ ಭಾರತದಲ್ಲಿ ಕೀಂದ್ರಿಕ್ರುತವಾಗಿದೆ.[] ಮಧ್ಯಪ್ರದೇಶದ ರಾಜ್ಯದ ಜಂಬಲ್ಪುರ ಮತ್ತು ರತ್ಲಮ್, ರಾಜಸ್ತಾನ್ನದ ಜೈಪುರ ಮತ್ತು ಗಂಗಾ ಪುರಗಲಲ್ಲಿ ಜೀರಿಗೆಯಾ ವಹೀವಾಟು ಕೇಂದ್ರಿಕ್ರುತವಾಗಿದೆ.

ಹವಾಗುಣ: ಜೀರಿಗೆ ಬೆಳಸುವ ಸ್ಥಳದಲ್ಲಿ ತೀರ ಹೆಚ್ಚು ಉಷ್ಣತೆ ಇರಬಾರದು.

ಮಣ್ಣು:ಜೀರಿಗೆ ಬೆಳಸಲು ಸಮ್ರುದ್ದವಾದ ಸಾವಯವ ಪದಾರ್ಥಗಳಿಂದ ಕೂಡಿರುವ ಗೋಡು ಮಣ್ಣಾಗಿದ್ದರೆ ಓಳ್ಳೆಯದು. ಜೀರಿಗೆ ಕೃಷಿ ಮಾಡುವ ಭೂಮಿಗೆ ಹೆಕ್ಟ್ಸಾರಿಗೆ ೨೦-೪೦ ಟನ್ ಗಳಷ್ಟೂ ಓಳ್ಳೆಯ ಗೊಬ್ಬರವನ್ನು ಒದಗಿಸಬೀಕು ಇದನ್ನು ಮಣ್ಣಿಗೆ ಸೇರಿಸಿ ಚೆನ್ನಗಿ ಮಿಶ್ರ ಮಾಡಬೇಕು.

ಸಸ್ಯಾಭಿವೃದ್ದಿ: ಜೀರಿಗೆಯನ್ನು ಬೀಜಗಲಿಂದಲೆ ಬೆಳಸಬಹುದು ಬೀಜವು ಧೀರ್ಘಕಾಲದವರೆಗೆ ಬಾಳುವುದಿಲ್ಲ. ಅದರಿಂದ ತಾಜ ಬೀಜಗಲನ್ನೆ ಬಿತ್ತನೆಗೆ ಬಳಸುವುದು ಓಳ್ಳೆಯದು.[]

ಭೂಮಿಯ ಸಿದ್ದತೆ: ಜೀರಿಗೆ ಬೆಳೆಗೆ ಭೂಮಿಯನ್ನು ಚನ್ನಾಗಿ ೨-೩ಬಾರಿ ಉಳುಮೆ ಮಾಡಿ ಸಿದ್ದಪಡಿಸಿರಬೀಕು. ಮಣ್ಣಿನಲ್ಲಿ ಇರಬಹುದಾದ ದೊಡ್ಡ ಹೆಂಟೇಗಲನ್ನು ಒಡೆದು ಹುಡಿ ಮಾಡಬೆಕು. ಹೆಕ್ಟರಿಗೆ ೨೫ ಟನ್ ಹಟ್ಟಿಗೊಬ್ಬರ ಸೇರಿಸಿ ಮಣ್ಣಿನಲ್ಲಿ ಚನ್ನಾಗಿ ಮಿಶ್ರಮಾಡಬೇಕು..

ಬಿತ್ತನೆ: ಜೀರಿಗೆ ಬೀಜವನ್ನು ಮಣ್ಣಿಗೆ ಚೆಲ್ಲಬಹುದು ಅಥವಾ ಕೂರಿಗೆಯಲ್ಲಿ ಬಿತ್ತನೆ ಮಾಡಬಹುದು. ಜೀರಿಗೆಯ ಗಾತ್ರ ಬಹಳ ಚಿಕ್ಕದಾಗಿರುವುದರಿಂದ ಬರೀ ಬೀಜವನ್ನೆ ಚೆಲ್ಲಿದರೆ ಒಂದೇ ಸಮನೆ ಹರಡಿ ಬೀಳುವುದಿಲ್ಲ. ಆದರಿಂದ ಜೀರಿಗೆಯಾ ಪ್ರಮಾಣದ ೫-೬ ಪಟ್ಟು ಹುಡಿ ಗೊಬ್ಬರದ ಜೊತೆ ಸೇರಿಸಿ ಅಥವಾ ಮರಳಿನೊಂದಿಗೆ ಸೇರಿಸಿ ಬಳಸಬಹುದು. ಸಾಲುಗಳಲ್ಲಿ ಗಿಡಗಳನ್ನು ಬಿತ್ತುವುದಾದರೆ ಸಾಲಿನಿಂದ ಸಾಲಿಗೆ ೬೦ಸಿ.ಮ್. ಮತ್ತು ಗಿಡದಿಂದ ಗಿಡಕ್ಕೆ ೩೦ಸಿ.ಮ್. ಅಂತರ ಇರುವಂತೆ ಬಿತ್ತಬೀಕು. ಪ್ರತೀ ಹೆಕ್ಟ್ರಾರ್ ಪ್ರದೇಶದಲ್ಲಿ ಜೀರಿಗೆ ಕೃಶಿ ಮಾಡಾಲು ೨೫-೩೦ಕೆ.ಜಿಯಷ್ಟು ಜೀರಿಗೆ ಬೇಕಾಗುತ್ತದೆ.

ಬೆಳನಿವರ್ನಹಣೆ: ಜೀರಿಗೆಯ ಬೆಳೆಗೆ ಅನೇಕ ಕಳೆಗಿಡಗಳು ಬರುತ್ತವೆ. ಇಂತಹಾ ಕಳೆ ಗಿಡಗಳನ್ನು ಆದಾಗ ತೆಗೆಯಬೀಕು. ಮಣ್ಣಿಣ ಅರ್ದತೆಯನ್ನು ಗಮನಿಸಿ ಅಗತ್ಯವಿದ್ದಾಗ ನೀರನ್ನು ಕೊಡುತ್ತಿರಬೀಕು.

ಕೊಯ್ಲ್ಲು : ಜೀರಿಗೆ ಗಿಡವನ್ನು ಬಿತ್ತನೆ ಮಾಡಿದ ೩-೪ತಿಂಗಳಲ್ಲಿ ಗಿಡದಲ್ಲಿ ಹೂಗಳು ಮೂಡುತ್ತವೆ. ಹೂಗಳು ಫಲಿತವಾಗಿ ಒಂದೆರಡು ತಿಂಗಳಲ್ಲಿ ಕಾಳುಗಳು ಬಲಿಯುತ್ತವೆ. ಅವು ಹಳದಿ ಬಣ್ಣಕ್ಕೆ ತಿರುಗಿದಾಗ ಕೊಯ್ಲು ಮಾಡಬೇಕು. ಕೊಯ್ಲು ಮಾಡುವಾಗ ಗಿಡಗಳನ್ನು ಬುಡಮಟ್ಟದಲ್ಲಿ ಕತ್ತರಿಸಿ ಹೊರೆಗಳಾಗಿ ಕಟ್ಟಿ ಸಾಗಿಸಬೀಕು. ಇದನ್ನು ಬೆಳಗಿನ ಸಮಯ ಮಾಡುವುದು ಓಳ್ಳೆಯದು. ಕೊಯ್ಲು ಮಾಡಿದ ಗಿಡಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ನಂತರ ಕೋಲಿನಲ್ಲಿ ಬಡಿಯಬೀಕು.ಹೀಗೆ ಬೇರ್ಪಟ್ತ ಕಾಳುಗಳನ್ನು ಗಾಳಿಯಲ್ಲಿ ತೂರಿ ಸ್ವಚ್ಚಗೊಳಿಸಬೇಕು. ಸ್ವಚ್ಚವಾದ ಜೀರಿಗೆಯನ್ನು ಚೀಲಗಳಲ್ಲಿ ತುಂಬಿಸಿಡಬೇಕು. ಒಣಗಿಸಿದ ಜೀರಿಗಿಯಲ್ಲಿ ನೀರಿನಾಂಶವು ೧೦%ಗಿಂತ ಕಡಿಮೆ ಇರಬೀಕು.

ಇಳುವರಿ: ಸರಿಯಾದ ರೀತಿಯಲ್ಲಿ ಕೃಶಿ ನಿರ್ವಾಹಣೆ ಮಾಡಿದರೆ ಒಂದು ಹೆಕ್ಟರ್ಗೆ ೫೦೦-೭೫೦ಕೆ.ಜಿ. ಸಿಗುತ್ತದೆ.

ರೋಗಬಾಧೆ ಮತ್ತು ಕೀಟಬಾಧೆ : ಜೀರಿಗೆ ಬೆಳೆಗೆ ತೀವ್ರವಾಗಿ ಪೀಡಿಸುವ ಕೀತಬಾದೆಯಾಗಲಿ, ರೋಗಬಾಧೆಯಾಗಲಿ ಇಲ್ಲ.

ಇದನ್ನೂ ನೋಡಿ

[ಬದಲಾಯಿಸಿ]

ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶದಲ್ಲಿನ ಮಾಹಿತಿ

ಉಲ್ಲೇಖ

[ಬದಲಾಯಿಸಿ]
  1. http://www.kannadaprabha.com/health-lifestyle/health-benefits-of-cumin-seeds/254411.html[ಶಾಶ್ವತವಾಗಿ ಮಡಿದ ಕೊಂಡಿ]
  2. ಜೀರಿಗೆ Utilisation[ಶಾಶ್ವತವಾಗಿ ಮಡಿದ ಕೊಂಡಿ]
  3. ಜೀರಿಗೆ ಗಿಡವನ್ನು ಬಿತ್ತನೆ ಮಾಡಿದ 3-4ತಿಂಗಳಲ್ಲಿ ಗಿಡದಲ್ಲಿ ಹೂಗಳು ಮೂಡುತ್ತವೆ
"https://kn.wikipedia.org/w/index.php?title=ಜೀರಿಗೆ&oldid=1212510" ಇಂದ ಪಡೆಯಲ್ಪಟ್ಟಿದೆ