ಜಲಾನಯನ ಪ್ರದೇಶ
ಜಲಾನಯನ ಪ್ರದೇಶವು ಅವಕ್ಷೇಪನ ಸಂಗ್ರಹಗೊಂಡು ನದಿ, ಕೊಲ್ಲಿ, ಅಥವಾ ಬೇರೆ ಜಲಸಮೂಹದಂತಹ ಸಾಮಾನ್ಯ ಹೊರಗುಂಡಿಯೊಳಗೆ ಹರಿದು ಹೋಗುವ ಯಾವುದೇ ಭೂಪ್ರದೇಶ. ಜಲಾನಯನ ಪ್ರದೇಶವು ಹಂಚಿಕೊಂಡ ಹೊರಗುಂಡಿಯ ಕಡೆಗೆ ಇಳಿಜಾರಿನಲ್ಲಿ ಚಲಿಸುವ ಹರಿದು ಹೋಗುವ ಮಳೆನೀರು, ಹಿಮಕರಗುವಿಕೆ, ಮತ್ತು ಹತ್ತಿರದ ಹೊಳೆಗಳಿಂದ ಮೇಲ್ಮೈ ನೀರನ್ನು, ಜೊತೆಗೆ ಭೂಮಿಯ ಮೇಲ್ಮೈ ಕೆಳಗಿನ ಅಂತರ್ಜಲವನ್ನು ಒಳಗೊಂಡಿರುತ್ತದೆ.[೧] ಜಲಾನಯನ ಪ್ರದೇಶಗಳು ಕ್ರಮಾನುಗತ ಮಾದರಿಯಲ್ಲಿ ಕಡಿಮೆ ಎತ್ತರದಲ್ಲಿನ ಇತರ ಜಲಾನಯನ ಪ್ರದೇಶಗಳನ್ನು ಕೂಡುತ್ತವೆ.
ಮುಚ್ಚಿದ ಜಲಾನಯನ ಪ್ರದೇಶದಲ್ಲಿ, ನೀರು ಜಲಾನಯನ ಭೂಮಿಯೊಳಗೆ ಒಂದೇ ಬಿಂದುವಿನಲ್ಲಿ ಸೇರುತ್ತದೆ. ಇದನ್ನು ಬತ್ತು ಕುಳಿ ಎಂದು ಕರೆಯಲಾಗುತ್ತದೆ, ಮತ್ತು ಇದು ಶಾಶ್ವತ ಕೆರೆ, ಶುಷ್ಕ ಸರೋರವರ, ಅಥವಾ ಮೇಲ್ಮೈ ನೀರು ನೆಲದಡಿ ಕಳೆದುಹೋಗುವ ಬಿಂದುವಾಗಿರಬಹುದು.
ಜಲಾನಯನ ಪ್ರದೇಶವು ಅದು ಆವರಿಸಿರುವ ಪ್ರದೇಶದಲ್ಲಿನ ಎಲ್ಲ ನೀರನ್ನು ಸಂಗ್ರಹಿಸಿ ಒಂದೇ ಬಿಂದುವಿಗೆ ನಿರ್ದೇಶಿಸುವ ಲಾಳಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಪಕ್ಕದ ಜಲಾನಯನ ಪ್ರದೇಶಗಳಿಂದ ಪ್ರತಿ ಜಲಾನಯನ ಪ್ರದೇಶವನ್ನು ಬಸಿ ವಿಭಾಜಕ ರೇಖೆ ಎಂದು ಕರೆಯಲಾಗುವ ಒಂದು ಪರಿಧಿಯು ಭೌಗೋಳಿಕವಾಗಿ ಪ್ರತ್ಯೇಕಿಸುತ್ತದೆ. ಇದರಲ್ಲಿ ಎತ್ತರದ ಭೌಗೋಳಿಕ ರೂಪವೈಶಿಷ್ಟ್ಯಗಳು (ಉದಾ. ದಿಣ್ಣೆ, ಬೆಟ್ಟ ಅಥವಾ ಪರ್ವತಗಳು) ತಡೆಗೋಡೆಯನ್ನು ರಚಿಸುತ್ತವೆ.
ಜಲಾನಯನ ಪ್ರದೇಶಗಳು ಜಲವೈಜ್ಞಾನಿಕ ಘಟಕಗಳನ್ನು ಹೋಲುತ್ತವೆ ಆದರೆ ಇವೆರಡೂ ಒಂದೇ ಅಲ್ಲ. ಜಲವೈಜ್ಞಾನಿಕ ಘಟಕಗಳು ಬಹು-ಮಟ್ಟದ ಕ್ರಮಾನುಗತ ಬಸಿ ವ್ಯವಸ್ಥೆಯೊಳಗೆ ಅಡಕವಾಗುವಂತೆ ಚಿತ್ರಿಸಲಾದ ಬಸಿ ಪ್ರದೇಶಗಳಾಗಿವೆ. ಬಹು ಪ್ರವೇಶದ್ವಾರಗಳು, ಹೊರಗುಂಡಿಗಳು, ಅಥವಾ ಬತ್ತು ಕುಳಿಗಳನ್ನು ಅನುಮತಿಸುವಂತೆ ಜಲವೈಜ್ಞಾನಿಕ ಘಟಕಗಳನ್ನು ವ್ಯಾಖ್ಯಾನಿಸಲಾಗುತ್ತದೆ. ಕಟ್ಟುನಿಟ್ಟಾದ ಅರ್ಥದಲ್ಲಿ, ಎಲ್ಲ ಜಲಾನಯನ ಪ್ರದೇಶಗಳು ಜಲವೈಜ್ಞಾನಿಕಘಟಕಗಳಾಗಿವೆ, ಆದರೆ ಎಲ್ಲ ಜಲವೈಜ್ಞಾನಿಕ ಘಟಕಗಳು ಜಲಾನಯನ ಪ್ರದೇಶಗಳಲ್ಲ.
ಜಲವಿಜ್ಞಾನದಲ್ಲಿ, ಜಲಾನಯನ ಪ್ರದೇಶವು ಜಲ ಚಕ್ರದಲ್ಲಿ ನೀರಿನ ಚಲನೆಯನ್ನು ಅಧ್ಯಯನಿಸಲು ಗಮನದ ತಾರ್ಕಿಕ ಘಟಕವಾಗಿದೆ, ಏಕೆಂದರೆ ಜಲಾನಯನ ಭೂಮಿಯ ಹೊರಗುಂಡಿಯಿಂದ ವಿಸರ್ಜನೆಗೊಂಡ ಬಹುತೇಕ ನೀರು ಜಲಾನಯನ ಪ್ರದೇಶದ ಮೇಲೆ ಬಿದ್ದ ಅವಕ್ಷೇಪನದಿಂದ ಉತ್ಪನ್ನವಾಯಿತು. ಜಲಾನಯನ ಪ್ರದೇಶದ ಕೆಳಗಿರುವ ಅಂತರ್ಜಲ ವ್ಯವಸ್ಥೆಯನ್ನು ಪ್ರವೇಶಿಸುವ ನೀರಿನ ಭಾಗವು ಮತ್ತೊಂದು ಜಲಾನಯನ ಪ್ರದೇಶದ ಹೊರಗುಂಡಿಯತ್ತ ಹರಿಯಬಹುದು ಏಕೆಂದರೆ ಅಂತರ್ಜಲ ಹರಿವಿನ ದಿಕ್ಕುಗಳು ತಮ್ಮ ಮೇಲಿರುವ ಬಸಿ ಜಾಲದ ದಿಕ್ಕುಗಳಿಗೆ ಯಾವಾಗಲೂ ಸರಿಸಮವಾಗಿರುವುದಿಲ್ಲ. ಜಲಾನಯನ ಭೂಮಿಯಿಂದ ವಿಸರ್ಜನೆಗೊಳ್ಳುವ ನೀರಿನ ಮಾಪನವನ್ನು ಜಲಾನಯನ ಭೂಮಿಯ ಹೊರಗುಂಡಿಯಲ್ಲಿ ಸ್ಥಿತವಾಗಿರುವ ಪ್ರವಾಹ ಮಾಪಕದಿಂದ ಮಾಡಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ "drainage basin". The Physical Environment. University of Wisconsin–Stevens Point. Archived from the original on March 21, 2004.