ವಿಷಯಕ್ಕೆ ಹೋಗು

ಕಿಶೋರ್ ಕುಮಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಿಶೋರ್ ಕುಮಾರ್

ಕಿಶೋರ್ ಕುಮಾರ್ (ಹಿಂದಿ: किशोर कुमार)

(ಆಗಸ್ಟ್ ೪, ೧೯೨೯ಅಕ್ಟೋಬರ್ ೧೩, ೧೯೮೭)

ಒಬ್ಬ ಭಾರತದ ಚಲನಚಿತ್ರ ಹಿನ್ನೆಲೆ ಗಾಯಕ ಮತ್ತು ನಟ. ಅವರು ಒಬ್ಬ ಗೀತಕಾರ, ಸಂಗೀತರಚನೆಕಾರ, ನಿರ್ಮಾಪಕ, ನಿರ್ದೇಶಕ, ಚಲನಚಿತ್ರ ಬರಹಗಾರ, ಚಿತ್ರಸಾಹಿತ್ಯ ಲೇಖಕರಾಗಿ ಕೂಡ ಗಮನಾರ್ಹವಾದ ಯಶಸ್ಸು ಸಾಧಿಸಿದರು.

ನಟನೆಯನ್ನೂ ಅಭ್ಯಾಸಮಾಡಿದ್ದರು ; ಆದರೆ ಅವರಿಗೆ ಯಶಸ್ಸು ದೊರೆತದ್ದು ಹಿನ್ನೆಲೆ ಗಾಯಕರಾಗಿ

[ಬದಲಾಯಿಸಿ]

ಕಿಶೋರ್ ಕುಮಾರ್ ಒಬ್ಬ ಸಮೃದ್ಧಿಭರಿತ ಗಾಯಕರಾಗಿದ್ದರು ಮತ್ತು ಹಿಂದಿ, ಬಂಗಾಳಿ, ಮರಾಠಿ, ಅಸ್ಸಾಮೀ, ಗುಜರಾತಿ, ಕನ್ನಡ, ಭೋಜ್‌ಪುರಿ, ಮಳಯಾಳಮ್ ಮತ್ತು ಒರಿಯಾ ಸಹಿತ ಹಲವಾರು ಭಾರತೀಯ ಭಾಷೆಗಳಲ್ಲಿ ಹಾಡಿದ್ದರು. ಮೊಹಮ್ಮದ್ ರಫೀ, ಮತ್ತು ಮುಕೇಶ್‌ರೊಂದಿಗೆ, ಅವರು ೧೯೫೦ರ ದಶಕದಿಂದ ೧೯೮೦ರ ದಶಕದ ಮಧ್ಯದವರೆಗೆ ಬಾಲಿವುಡ್‌ನ ಪ್ರಧಾನ ಪುರುಷ ಹಿನ್ನೆಲೆ ಗಾಯಕರಲ್ಲಿ ಒಬ್ಬರಾಗಿದ್ದರು.

ನಾಲ್ಕು ಬಾರಿ ವಿವಾಹಿತ

[ಬದಲಾಯಿಸಿ]

ಅವರು ನಾಲ್ಕು ಬಾರಿ ಮದುವೆಯಾಗಿದ್ದರು ಮತ್ತು ಇಬ್ಬರು ಪುತ್ರರನ್ನು ಅಗಲಿದರು (ಅಮಿತ್ ಕುಮಾರ್, ಇವರು ಕೂಡ ಬಾಲಿವುಡ್ ಮತ್ತು ಬಂಗಾಳಿ ಚಲನಚಿತ್ರಗಳ ಹಿನ್ನೆಲೆ ಗಾಯನದಲ್ಲಿ ವೃತಿನಿರತರಾದರು, ಮತ್ತು ಸುಮಿತ್ ಕುಮಾರ್). ಅವರ ಮೊದಲ ಪತ್ನಿ ರೊಮಾ, ಎರಡನೆಯವಳು ಮುದ್ದು ಮುಖದ ರೋಗಗ್ರಸ್ತೆ ನಟಿ ಮಧುಬಾಲಾ, ಮೂರನೆಯವಳು ಯೋಗೀತಾ ಬಾಲಿ, ನಾಲ್ಕನೆಯ ಕೊನೆ ಪತ್ನಿ ಲೀನಾ ಚಂದಾವರ್ಕರ್.

ಬಾಲ್ಯ

[ಬದಲಾಯಿಸಿ]

ಕಿಶೋರ್ ಕುಮಾರ್ (ಮೊದಲಿನ ಹೆಸರು ಆಭಾಸ್ ಕುಮಾರ್ ಗಾಂಗೂಲಿ) (ಬಂಗಾಳಿ :আভাষ কুমার গাঙ্গুলি) ಕೇಂದ್ರೀಯ ಪ್ರಾಂತಗಳು ಮತ್ತು ಬೇರಾರ್, ಬ್ರಿಟಿಷರ ಆಳ್ವಿಕೆಯ ಭಾರತದ (ಈಗಿನ ಮಧ್ಯ ಪ್ರದೇಶ ರಾಜ್ಯದಲ್ಲಿ) ಖಾಂಡ್ವಾ ಪಟ್ಟಣದ ಒಂದು ಬಂಗಾಳಿ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಕುಂಜಲಾಲ್ ಗಾಂಗೂಲಿ ವಕೀಲರಾಗಿದ್ದರು, ಮತ್ತು ಅವರ ತಾಯಿ ಗೌರಿ ದೇವಿ ಒಂದು ಶ್ರೀಮಂತ ಮನೆತನದಿಂದ ಬಂದವರು. ಆಭಾಸ್ ಕುಮಾರ್ ನಾಲ್ಕು ಮಕ್ಕಳ ಪೈಕಿ ಮೂರನೇಯವರು (ಅಶೋಕ್ ಕುಮಾರ್ (ಹಿರಿಯ ಪುತ್ರ), ಸತೀ ದೇವಿ, ಮತ್ತು ಅನೂಪ್ ಕುಮಾರ್ ಇತರ ಮೂರು ಮಕ್ಕಳು).

ಮನೆಯ ವಾತಾವರಣ ನಟನ-ಕಲೆಗೆ ಸಹಕಾರಿಯಾಗಿತ್ತು

[ಬದಲಾಯಿಸಿ]

ಆಭಾಸ್ ಗಾಂಗೂಲಿ ಇನ್ನೂ ಮಗುವಾಗಿದ್ದಾಗ, ಅಶೋಕ್ ಕುಮಾರ್ ಒಬ್ಬ ಜನಪ್ರಿಯ ಬಾಲಿವುಡ್ ನಟರಾದರು. ನಂತರ, ಅನೂಪ್ ಕುಮಾರ್ ಕೂಡ ಅಶೋಕ್ ಕುಮಾರ್ ಸಹಾಯದಿಂದ ಚಲನಚಿತ್ರದಲ್ಲಿ ಪ್ರವೇಶಿಸಿದರು. ತನ್ನ ಸಹೋದರರೊಂದಿಗೆ ಸಮಯ ಕಳೆಯುತ್ತ, ಆಭಾಸ್ ಕುಮಾರ್ ಕೂಡ ಚಲನಚಿತ್ರ ಮತ್ತು ಸಂಗೀತದಲ್ಲಿ ಬಹಳ ಆಸಕ್ತಿ ವಹಿಸಲು ಆರಂಭಿಸಿದನು. ಅವನು ಗಾಯಕ-ನಟ ಕುಂದನ್ ಲಾಲ್ ಸೈಗಲ್‌ರ ಅಭಿಮಾನಿಯಾದನು (ಸೈಗಲ್‌ರನ್ನು ತನ್ನ ಗುರುವೆಂದು ಭಾವಿಸಿದ್ದನು).

ಹಿಂದಿ ಚಲನಚಿತ್ರದಲ್ಲಿ ಆರಂಭದ ದಿನಗಳು

[ಬದಲಾಯಿಸಿ]

ಅಶೋಕ್ ಕುಮಾರ್ ಒಬ್ಬ ಬಾಲಿವುಡ್ ಮುಖ್ಯನಟನಾದ ಬಳಿಕ, ಗಾಂಗೂಲಿ ಕುಟುಂಬ ಮುಂಬೈಗೆ ನಿಯಮಿತವಾಗಿ ಭೇಟಿ ನೀಡತೊಡಗಿತು. ಆಭಾಸ್ ಕುಮಾರ್ ತನ್ನ ಹೆಸರನ್ನು ಕಿಶೋರ್ ಕುಮಾರ್ ಎಂದು ಬದಲಾಯಿಸಿಕೊಂಡನು ಮತ್ತು ಅವನ ಸಹೋದರ ಕೆಲಸ ಮಾಡುತ್ತಿದ್ದ ಬಾಂಬೆ ಟಾಕೀಸ್‌ನಲ್ಲಿ ವೃಂದಗಾಯಕನಾಗಿ ತನ್ನ ಚಲನಚಿತ್ರ ವೃತ್ತಿಯನ್ನು ಆರಂಭಿಸಿದನು. ನಟನಾಗಿ ಅವರ ಮೊದಲ ಚಿತ್ರ, ಅಶೋಕ್ ಕುಮಾರ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದ, ಶಿಕಾರಿ (೧೯೪೬). ಸಂಗೀತ ನಿರ್ದೇಶಕ ಖೇಮ್‌ಚಂದ್ ಪ್ರಕಾಶ್ ಇವರಿಗೆ ಚಿತ್ರ ಜಿದ್ದಿಯಲ್ಲಿ (೧೯೪೮) ಮರ್‌ನೇ ಕಿ ದುಆಯೇಂ ಕ್ಯೂ ಮಾಂಗು ಹಾಡು ಹಾಡಲು ಅವಕಾಶ ಕೊಟ್ಟರು. ಇದರ ನಂತರ, ಕಿಶೋರ್ ಕುಮಾರ್‌ರಿಗೆ ಹಲವು ಕೆಲಸಗಳು ದೊರೆತವು, ಆದರೆ ಅವರು ಚಲನಚಿತ್ರ ವೃತ್ತಿಯ ಬಗ್ಗೆ ಬಹಳ ಗಂಭೀರವಾಗಿರಲಿಲ್ಲ. ೧೯೪೯ರಲ್ಲಿ, ಅವರು ಮುಂಬೈಯಲ್ಲಿ ನೆಲೆಸಲು ನಿರ್ಧರಿಸಿದರು.

ಕಿಶೋರ್ ಚಿತ್ರಗಳು

[ಬದಲಾಯಿಸಿ]

ನಟನಾಗಿ

[ಬದಲಾಯಿಸಿ]

ಕಿಶೋರ್ ಕುಮಾರ್ 88 ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.

ಕನ್ನಡ ಅನುವಾದ

ವರ್ಷ ಚಲನಚಿತ್ರ ಪಾತ್ರ ಟಿಪ್ಪಣಿಗಳು
1946 ಬೇಟೆಗಾರ
1947 ಶೆಹನಾಯಿ ಪೊಲೀಸ್ ಇನ್ಸ್‌ಪೆಕ್ಟರ್
1948 ಸತಿ ವಿಜಯ್
1950 ಮುಕದ್ದರ್
1951 ಚಳುವಳಿ
1952 ಛಂ ಛಮ ಛಂ
ತಮಾಶಾ ರಾಜು ಬಾಂಬೆ ಟಾಕೀಸ್ ನಿಂದ ವರ್ಷದ ಬಿಗ್ ಹಿಟ್
1953 ಫರೆಬ್
ಹುಡುಗಿಯರು ಕಿಶೋರ್
ಲಹರೆನ್
1954 ಅಧಿಕಾರ ಶೇಖರ್
ಧೋಬಿ ಡಾಕ್ಟರ್
ಆರೋಪ ರಾಜನ್
ಮಾಲಾ ಸುಂದರಿ ದೇವ್
ಕೆಲಸ ರತನ್ ಕುಮಾರ್ ಚೌಧರಿ
ಪೆಹಲಿ ಝಲಕ್ ರಾಜನ್
1955 ಬಾಪ್ ರೀ ಬಾಪ್ ಅಶೋಕ್ ಸಾಗರ್
ಚಾರ್ ಪೈಸೆ
ಮದ್ಭಾರೆ ನಾಯ್ನ್ ಶ್ಯಾಮ್
ರುಖ್ಸಾನಾ
1956 ಅಬ್ರೂ
ಭಾಗಂ ಭಾಗ್ ಕಿಶೋರ್ / ಕೃಷ್ಣಸ್ವಾಮಿ
ಭಾಯಿ-ಭಾಯ್ ರಾಜ್ ಕುಮಾರ್ (ರಾಜ)
dhke ಕಿ ಮಲಾಲ್ Jeeva ಅವರ ಭಾವಿ ಪತ್ನಿ ಮಧುಬಾಲಾ ಎದುರು ಮೊದಲ ಚಿತ್ರ
ಮೆಮ್ ಸಾಹಿಬ್ ಸುಂದರ್
ನಯಾ ಅಂದಾಜ್ ಚಂದ್
ನವ ದೆಹಲಿ ಆನಂದ್ ಡಿ. ಖನ್ನಾ / ಆನಂದ್ ಕುಮಾರ್ ಸ್ವಾಮಿ
ಮನಿ ಹಾಯ್ ಮನಿ ಕಿಶೋರ್
ಪರಿವಾರ ವಿಶೇಷ ಗೋಚರತೆ
1957 ಬೂದಿ ಕಿಶೋರ್
ಇತರರು ಮಾಧವ್
ಮುಗ್ಧ
ಮಿಸ್ ಮೇರಿ ರಾಜು
ಪ್ರಯಾಣಿಕ ಭಾನು ಹೃಷಿಕೇಶ್ ಮುಖರ್ಜಿಯವರ ಚೊಚ್ಚಲ ನಿರ್ದೇಶನ
1958 ಚಂದನ್ ಚಂದನ್
ಚಲ್ತಿ ಕಾ ನಾಮ್ ಗಾಡಿ ಮನಮೋಹನ್ "ಮನು" ಶರ್ಮಾ
ಡಿಲ್ಲಿ ದಿ ಥಗ್ ಕಿಶೋರ್ ಕುಮಾರ್ ಶರ್ಮಾ
ಕೆಲವೊಮ್ಮೆ ಕತ್ತಲು, ಕೆಲವೊಮ್ಮೆ ಬೆಳಕು
ರಾಗಿಣಿ ರಾಜನ್
ಲುಕೋಚುರಿ ಕುಮಾರ್ / ಶಂಕರ್
1959 ಚಾಚಾ ಜಿಂದಾಬಾದ್ ವಿನೋದ್
ಜಲ್ಸಾಜ್ ಕುಂದನ್ ಲಾಲ್
ಶರರತ್ ಚಂದನ್ / ದೀಪಕ್
1960 ನನ್ನ ಕೈ ಜಗನ್ನಾಥ ಮದನ್ ಮಲ್ಹೋತ್ರಾ
ಬೆವಕೂಫ್ ಕಿಶೋರ್ ಕುಮಾರ್
ಗೆಳತಿ
ಮೆಹ್ಲೋನ್ ಅವರ ಕನಸು ರಾಜನ್
1961 ಜುಮ್ರೂ ಜುಮ್ರೂ
ಕೋಟ್ಯಾಧಿಪತಿ ಕಿಶನ್ ಲಾಲ್ / ರಾಮ್
1962 ಬಾಂಬೆ ಕಾ ಚೋರ್ ರಣಧೀರ್
ಹಾಫ್ ಟಿಕೆಟ್ ವಿಜಯಚಂದ್ ವಾಲ್ಡ್ ಲಾಲಚಂದ್ ವಾಲ್ಡ್ ಧ್ಯಾನಚಂದ್ ವಾಲ್ಡ್ ಹುಕುಮ್ಚಂದ್ ಅಲಿಯಾಸ್ ಮುನ್ನಾ / ವಿಜಯ್ ಅವರ ತಾಯಿ
ಮನ್-ಮೌಜಿ ರಾಜ / ರಾಜ ಲಾಲ್ ಬಹದ್ದೂರ್
ನಾಟಿ ಹುಡುಗ ಪ್ರೀತಂ
ರಂಗೋಲಿ ಕಿಶೋರ್ ಕುಮಾರ್ ಶಾಸ್ತ್ರಿ
1963 ಒಂದು ರಹಸ್ಯ ಕಿಶೋರ್ ಕುಮಾರ್ ವರ್ಮಾ / ಅರುಣ್ / ಪೇಶಾವರಿಮಲ್
1964 ಬಾಘಿ ಶೆಹಜಾದಾ ಫಿರೋಜ್
ದಾಲ್ ಮೇ ಕಲಾ ರಾಜೇಂದ್ರ ಕುಮಾರ್ / ರಾಜು
ಆಕಾಶದ ಆಸೆಯ ಬಾಗಿಲು ಶಂಕರ್
ಗಂಗೆಯ ಅಲೆಗಳು ಕಿಶೋರ್
ಬಾಂಬೆಯಲ್ಲಿ ಮಿಸ್ಟರ್ ಎಕ್ಸ್ ಕವಿ ಸುದರ್ಶನ್
1965 ನಾವೆಲ್ಲರೂ ಮಾಸ್ಟರ್ಸ್ ಕಿಶೋರ್
ಶ್ರೀಮನ್ ಫಂಟೂಶ್ ಕಿಶೋರ್/ಫಂಟೂಶ್
1966 ಅಕಲ್ಮಂಡ್
ಲಡ್ಕಾ ಲಡ್ಕಿ
ಪ್ಯಾರ್ ಕಿಯೇ ಜಾ ಶ್ಯಾಮ್ / ರಾಯ್ ಬಹದ್ದೂರ್ ಗಂಗಾ ಪ್ರಸಾದ್
1967 ಅಲ್ಬೆಲಾ ಮಸ್ತಾನಾ ದಯಾಳ್ ವರ್ಮಾ
ಜಗತ್ತು ನೃತ್ಯ ಮಾಡುತ್ತದೆ
ಹಮ್ ದೋ ಡಾಕು ಕಿಶೋರ್ ಕುಮಾರ್ ಕೂಡ ನಿರ್ದೇಶನ ಮಾಡಿದ್ದಾರೆ
1968 ದೋನಿ ಚಾರ್ ಮಾಡಿ ಸಂದೀಪ್ ದ್ವಿಪಾತ್ರ
ಹೇ ನನ್ನ ಹೃದಯ ವೇದ್-ಮದನ್
ನೆರೆಯ ವಿದ್ಯಾಪತಿ / ಗುರು (ಭೋಲಾ ಸ್ನೇಹಿತ)
ಪಾಯಲ್ ಕಿ ಜಾಂಕರ್ ಶ್ಯಾಮ್ 'ಶಮ್ಮಿ'
ಸಾಧು ಮತ್ತು ಶೈತಾನ್ ಪಂಡಿತ್ ದೀನಾನಾಥ್ ಶಾಸ್ತ್ರಿ / ಯಮರಾಜ್ (ಆಟದಲ್ಲಿ)
ಶ್ರೀಮಾನ್ಜಿ ಕಿಶೋರ್ ಎಂ. ಗುಪ್ತಾ/ ಮಿಸ್ ಫ್ರಾಂಕೋ||
1970 ಕಣ್ಣೀರು ಮತ್ತು ನಗು ಪಂಡಿತ್
1971 ಡೋರ್ ರೇಂಜ್ ಪ್ರಶಾಂತ್
ಹಂಗಾಮ ಗರೀಬಚಂದ್
1972 ಬಾಂಬೆ ಟು ಗೋವಾ
ಪ್ಯಾರ್ ದಿವಾನಾ ಸುನಿಲ್
1974 ಬದ್ಧಿಯ ಹೆಸರು ದಾಧಿ
1978 ಏಕ್ ಬಾಪ್ ಛೇ ಬೇತೆ
1979 ಶಭಾಷ್ ಡ್ಯಾಡಿ ಕಿಶೋರ್ ಕುಮಾರ್ ಕೂಡ ನಿರ್ದೇಶನ ಮಾಡಿದ್ದಾರೆ
1980 ಪ್ರೀತಿ ಅಪರಿಚಿತ
1981 ಚಲ್ತಿ ಕಾ ನಾಮ್ ಜಿಂದಗಿ
1982 ಕಣಿವೆಯಲ್ಲಿ ಬಾಗಿಲು
1987 ಯಾರು ಗೆಲ್ಲುತ್ತಾರೆ ಮತ್ತು ಯಾರು ಕಳೆದುಕೊಳ್ಳುತ್ತಾರೆ
1989 ನನ್ನ ತಾಯಿಯ ಆಸೆ ಕಿಶೋರ್ ಈ ಚಿತ್ರವನ್ನು ನಿರ್ದೇಶಿಸಿದರು, ಆದರೆ 1987 ರಲ್ಲಿ ನಿಧನರಾದರು ಮತ್ತು 1989 ರಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಅಮಿತ್ ಕುಮಾರ್‌ಗೆ ರಾಜೇಶ್ ಖನ್ನಾ ಸಹಾಯ ಮಾಡಿದರು .
2013 ಬಾಂಬೆಯಲ್ಲಿ ಪ್ರೀತಿ ಈ ಚಲನಚಿತ್ರವನ್ನು ಮೂಲತಃ 1971 ರಲ್ಲಿ ನಿರ್ಮಿಸಲಾಯಿತು

ಕಿಶೋರ್ ಕುಮಾರ್ ಗಾಯಕರಾಗಿ

[ಬದಲಾಯಿಸಿ]

ಇಲ್ಲಿ ಅವರ ಹಾಡಿದ ಗೀತಗಳ ಪಟ್ಟಿ ಇಂಗ್ಲೀಷ್ ವಿಕಿ ಪುಟದಲ್ಲಿದೆ, ಗಮನಿಸಿ

ಕನ್ನಡ ಚಿತ್ರ "ಕುಳ್ಳ ಏಜೆಂಟ್ 000" ನಲ್ಲಿ ದ್ವಾರಕೀಶ್ ಅವರ್ ಹಿನ್ನೆಲೆಯಾಗಿ ಆಡೂ ಆಟಾ ಆಡು ಹಾಡಿದ್ದಾರೆ. ಯೂಟ್ಯೂಬಿನಲ್ಲಿದೆ

ಕಿಶೋರ್ ಕುಮಾರ್, ಅಕ್ಟೋಬರ್ ೧೯೮೭ರಲ್ಲಿ, ತೀವ್ರ ಹೃದಯಾಘಾತದಿಂದ ನಿಧನರಾದರು.