ವಿಷಯಕ್ಕೆ ಹೋಗು

ಕಾಮಧೇನು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಪುರಾಣಗಳಲ್ಲಿ ಕಾಮಧೇನು ಎಂಬ ಹಸುವಿನ ಬಗೆಗೆ ತಿಳಿಸಲಾಗಿದೆ. ಸಮುದ್ರ ಮಂಥನ ಕಾಲದಲ್ಲಿ ಕ್ಷೀರಸಮುದ್ರದಲ್ಲಿ ಹುಟ್ಟಿದ ಕಲ್ಪವೃಕ್ಷವೇ ಮೊದಲಾದ ಹದಿನಾಲ್ಕು ಸುವಸ್ತುಗಳಲ್ಲಿ ಕಾಮಧೇನುವೂ ಒಂದು. ಕಾಮಧೇನು ಎಂದರೆ ಕಾಮಿಸಿದ್ದನ್ನು ನೀಡುವ ಧೇನು, ಅಂದರೆ ಬೇಡಿದ್ದನ್ನು ನೀಡುವ ಹಸು. ಈ ಹಸುವನ್ನು ದೇವತೆಗಳ ರಾಜನಾದ ಇಂದ್ರನಿಗೆ ಲೋಕಕಲ್ಯಾಣಾರ್ಥವಾಗಿ ನೀಡಲಾಯಿತು.

ಈ ಕಾಮಧೇನುವಿನ ಮಗಳು ನಂದಿನಿ. ಇದು ವಸಿಷ್ಠ ಋಷಿಯ ಆಶ್ರಮದಲ್ಲಿದ್ದ ಹಸು.

"https://kn.wikipedia.org/w/index.php?title=ಕಾಮಧೇನು&oldid=1047189" ಇಂದ ಪಡೆಯಲ್ಪಟ್ಟಿದೆ