ವಿಷಯಕ್ಕೆ ಹೋಗು

ಎ‌ಎಮ್‌‍ಡಿ (AMD)

ನಿರ್ದೇಶಾಂಕಗಳು: 37°23′12.016″N 121°59′55.550″W / 37.38667111°N 121.99876389°W / 37.38667111; -121.99876389
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Advanced Micro Devices, Inc.
ಸಂಸ್ಥೆಯ ಪ್ರಕಾರPublic (NYSEAMD)
S&P 500 Component
ಸ್ಥಾಪನೆ1969
ಸಂಸ್ಥಾಪಕ(ರು)W. Jerry Sanders III
Edwin J. Turney
Additional co-founders
ಮುಖ್ಯ ಕಾರ್ಯಾಲಯOne AMD Place,[] Sunnyvale, California, U.S.
ವ್ಯಾಪ್ತಿ ಪ್ರದೇಶWorldwide
ಪ್ರಮುಖ ವ್ಯಕ್ತಿ(ಗಳು)Bruce Claflin
(Executive Chairman)

Derrick R. Meyer
(President) (CEO) (Director)
ಉದ್ಯಮSemiconductors
ಉತ್ಪನ್ನMicroprocessors
Motherboard chipsets
Graphics processors
DTV decoder chips
Handheld media chipsets
ಆದಾಯ US$5.4 billion (FY 2009)
ಆದಾಯ(ಕರ/ತೆರಿಗೆಗೆ ಮುನ್ನ) US$664 million (FY 2009)
ನಿವ್ವಳ ಆದಾಯ US$293 million (FY 2009)
ಒಟ್ಟು ಆಸ್ತಿIncrease US$9.08 billion (FY 2009)
ಒಟ್ಟು ಪಾಲು ಬಂಡವಾಳIncrease US$648 million (FY 2009)
ಉದ್ಯೋಗಿಗಳು10,400 – Jan 2010[]
ಜಾಲತಾಣAMD.com

ಅಡ್ವಾನ್ಸ್‌ಡ್ ಮೈಕ್ರೊ ಡಿವೈಸಸ್, Inc. (ಎ‌ಎಮ್‌‍ಡಿ ) (NYSEAMD) ಸನ್ನಿವೇಲ್, ಕ್ಯಾಲೊಫೋರ್ನಿಯದಲ್ಲಿ ನೆಲೆಸಿದ ಅಮೇರಿಕಾದ ಒಂದು ಬಹುರಾಷ್ಟ್ರೀಯ ಸೆಮಿಕಂಡಕ್ಟರ್‌ ಕಂಪನಿ, ಇದು ಕಂಪ್ಯುಟರ್ ಪ್ರೊಸೆಸರ್‌ಗಳು ಹಾಗೂ ಸಂಬಂಧಿತ ತಂತ್ರಜ್ಞಾನಾದಾರಿತ ಉತ್ಪನ್ನಗಳನ್ನು ವಾಣಿಜ್ಯ ಹಾಗೂ ಗ್ರಾಹಕ ಮಾರುಕಟ್ಟೆಗಳಿಗಾಗಿ ಅಭಿವೃದ್ಧಿಗೊಳಿಸುತ್ತದೆ. ಇದರ ಪ್ರಮುಖ ಉತ್ಪಾದನೆಗಳಲ್ಲಿ ಮೈಕ್ರೊಪ್ರೊಸೆಸರ್‌ಗಳು, ಮದರ್‌ಬೋರ್ಡ್, ಚಿಪ್‌ಸೆಟ್‌ಗಳು, ಎಮ್‌ಬೆಡಡ್ ಪ್ರೊಸೆಸರ್‌ಗಳು ಹಾಗೂ ಗ್ರಾಫಿಕ್ಸ್ ಪ್ರೊಸೆಸರ್‌ಗಳು ಸರ್ವರ್‌ಗಳ, ವರ್ಕಸ್ಟೇಷನ್‌ಗಳ ಹಾಗೂ ಪರ್ಸನಲ್ ಕಂಪ್ಯೂಟರ್‌ಗಳ ಬಳಕೆಯ ಉದ್ದೇಶಕ್ಕೆ ಒಳಗೊಂಡಿವೆ, ಮತ್ತು ಪ್ರೊಸೆಸರ್ ತಂತ್ರಜ್ಞಗಳು ಕೈಯಲ್ಲಿ ಹಿಡಿಯುವ ಸಾಧನೆಗಳ, ಡಿಜಿಟಲ್ ಟೆಲಿವಿಷನ್, ಆಟೊಮೊಬೈಲ್ಸ್, ಗೇಮ್ ಕನ್ಸೋಲ್ಸ್ , ಹಾಗೂ ಇತರ ಪೂರಕ ಸಿಸ್ಟಮ್‌ಗಳ ಬಳಕೆಗೆ ತಯಾರಿಸಲಾಗುತ್ತದೆ.

ಎ‌ಎಮ್‌ಡಿ ವಿಶ್ವದಲ್ಲೆ x86 ರಚನೆಯ ಆಧಾರಿತ ಮೈಕ್ರೊಪ್ರೊಸೆಸರ್‌ಗಳ ಎರಡನೆಯ-ದೊಡ್ಡ ಪೂರೈಕೆದಾರ ಮತ್ತು ಗ್ರಾಫಿಕ್ಸ್ ಪ್ರೊಸೆಸಿಂಗ್ ಘಟಕಗಳ ಒಂದು ದೊಡ್ಡ ಪೂರೈಕೆದಾರ ಕೂಡ. ಸಂಗ್ರಹಿತ ಡಾಟಾವನ್ನು ವಿದ್ಯುತ್ ಸರಬರಾಜು ಇಲ್ಲದಾಗಲೂ ಸಂಗ್ರಹಿಸಿಟ್ಟುಕೊಳ್ಳಬಲ್ಲ ಸಾಮರ್ಥ್ಯದ ಫ್ಲಾಶ್ ಮೆಮೊರಿ ತಯಾರಕ ಸ್ಪ್ಯಾಂಷನ್ ಕಂಪನಿಯಲ್ಲಿ 8.6% ಭಾಗದ ಸ್ವಾಮಿತ್ವವನ್ನು ಅದು ಪಡೆದಿದೆ.[] 2009ರಲ್ಲಿ, ಸೆಮಿಕಂಡಕ್ಟರ್ ಉತ್ಪಾದಕರ ಆದಾಯದ ಸಂಬಂಧವಾಗಿ ಎ‌ಎಮ್‌ಡಿ ಎಂಟನೆಯ ಸ್ಥಾನ ಪಡೆದಿದೆ.[]

ಕಾರ್ಪೊರೇಟ್‌‍ ಇತಿಹಾಸ

[ಬದಲಾಯಿಸಿ]
ಕ್ಯಾಲಿಫೋರ್ನಿಯಾದ ಸನ್ನಿವೆಲ್‌ನಲ್ಲಿರುವ ಎ‌ಎಮ್‌ಡಿ ಮುಖ್ಯ ಕಛೇರಿ
ಮೊದಲು ಎಟಿಐ ಮುಖ್ಯಕಛೇರಿಯಾಗಿದ್ದ ಕೆನಡಾದ ಎ‌ಎಮ್‌ಡಿ ಮರ್ಖಾಮ್
ಟೆಕ್ಸಾಸ್‌ನಲ್ಲಿರುವ ಆ‍ಯ್‌ಸ್ಟಿನ್‌ನಲ್ಲಿರುವ ಎ‌ಎಮ್‌ಡಿಯ ಎಲ್‌ಇಇಡಿ-ಪ್ರಮಾಣೀಕೃತ ಲೋನ್ ಸ್ಟಾರ್ ಕ್ಯಾಂಪಸ್

ಫೇರ್‌‍‌ಚೈಲ್ಡ್ ಸೆಮಿಕಂಡಕ್ಟರ್‌ನ ಮಾಜಿ ಕಾರ್ಯಕಾರಿ ಗುಂಪಿನ ಜೆರಿ ಸ್ಯಾಂಡರ್ಸ್ಸ್ III, ಎಡ್ ಟರ್ನಿ, ಜೊನ್ ಕ್ಯಾರಿ, ಸ್ವೆನ್ ಸಿಂಮೊನ್ಸೆನ್, ಜ್ಯಾಕ್ ಗಿಫೋರ್ಡ್ ಮತ್ತು ಗಿಫೋರ್ಡ್‌ನ ತಂಡದ ಮೂರು ಸದಸ್ಯರಾದ ಫ್ರೆಂಕ್ ಬೊಟ್ಟೆ, ಜಿಮ್ ಗಿಲ್ಸ್, ಹಾಗೂ ಲ್ಯಾರಿ ಸ್ಟೆಂಗರ್ ಇವರುಗಳಿಂದ ಅಡ್ವಾಂನ್ಸಡ್ ಮೈಕ್ರೊ ಡಿವೈಸಸ್ ಕಂಪೆನಿಯನ್ನು ಮೆ 1, 1969ರಂದು ಸ್ಥಾಪಿಸಲಾಯಿತು. ಈ ಕಂಪನಿ ಲೊಜಿಕ್ ಚಿಪ್‌ಗಳ ಉತ್ಪಾದಕವಾಗಿ ಆರಂಭಗೊಂಡಿತು, ನಂತರ 1975ರಲ್ಲಿ RAM ಚಿಪ್‌ಗಳ ವ್ಯಾಪಾರದಲ್ಲಿ ಪ್ರವೇಶಿಸಿತು. ಅದೇ ವರ್ಷ, ಅದು ಇಂಟೆಲ್ 8080 ಮೈಕ್ರೊಪ್ರೊಸೆಸರ್‌ವಿಪರ್ಯಯ-ರಚನೆಯ ತದ್ರೂಪುವನ್ನು ಪರಿಚಯಿಸಿತು. ಈ ಕಾಲದಲ್ಲಿ, ಹಲವು ಮಿನಿಕಂಪ್ಯೂಟರ್‌ಗಳಲ್ಲಿ ಬಳಸಲಾದ ಬಿಟ್-ಸ್ಲೈಸ್ ಪ್ರೊಸೆಸರ್ ಅಂಶಗಳ ಸರಣಿಯನ್ನು (Am2900, Am29116, Am293xx) ಎ‌ಎಮ್‌ಡಿ ವಿನ್ಯಾಸಗೊಳಿಸಿತು ಹಾಗೂ ಉತ್ಪಾದಿಸಿತು.

ಇದೆ ಸಮಯದಲ್ಲಿ, ತನ್ನ ಸ್ವಂತ ಎ‌ಎಮ್‌ಡಿ 29ಕೆ ಪ್ರೊಸೆಸರ್‌1}ನೊಂದಿಗೆ RISC ಅತ್ತ ಗ್ರಹಿತ ಏರಿಕೆಯನ್ನು ಎ‌ಎಮ್‌ಡಿ ಒಳಗೊಳ್ಳಿಸಿಕೊಳ್ಳಲು ಪ್ರಯತ್ನಿಸಿದೆ ಮತ್ತು ಗ್ರಾಫಿಕ್ಸ್ ಹಾಗೂ ಶ್ರವಣ ಸಾಧನಗಳಲ್ಲದೆ EPROM ಮೆಮೊರಿಯಲ್ಲಿಯೂ ಕೂಡ ವೈವಿಧ್ಯತೆಯನ್ನು ಅವರು ಪ್ರಯತ್ನಿಸಿದ್ದಾರೆ. ಎಎಮ್‌ಡಿ7910 ಹಾಗೂ ಎಎಮ್‌ಡಿ7911 "ವಲ್ಡ್ ಚಿಪ್" FSK ಮೊಡೆಮ್ ಬಿಡುಗಡೆ ಮಾಡುವ ಮೂಲಕ 1980ರ ಮಧ್ಯದಲ್ಲಿ ಅದಕ್ಕೆ ಸ್ವಲ್ಪ ಯಶಸ್ಸು ದೊರಕಿತು. ಈ ಮೊಡೆಮ್ Bell ಹಾಗೂ CCITTಗಳ ಸಾಮರ್ಥ್ಯವನ್ನು 1200 ಬೊಡ್ ಹಾಫ್‌ಡ್ಯೂಪ್ಲೆಕ್ಸ್ ಅಥವಾ 300/300 ಫುಲ್‌‍ಡ್ಯೂಪ್ಲೆಕ್ಸ್ ಅನ್ನು ಪಡೆದಿದ್ದ ಮೊದಲ ಬಹುದರ್ಜೆಯ ಸಾಧನಗಳಲ್ಲಿ ಒಂದಾಗಿತ್ತು. ಎ‌ಎಮ್‌ಡಿ 29ಕೆ ಒಂದು ಎಮ್‌ಬೆಡಡ್ ಪ್ರೊಸೆಸರ್ ಆಗಿ ಹೆಸರು ಗಳಿಸಿದೆ ಹಾಗೂ ಎ‌ಎಮ್‌ಡಿ, ಸ್ಫಾನ್ಷನ್ ಸುಪ್ರಸಿದ್ಧ ಫ್ಲಾಶ್ ಮೆಮೊರಿಯಾಗಿ ಮುಂದುವರೆದಿದೆ. ಎ‌ಎಮ್‌ಡಿಯು ಇಂಟೆಲ್‌‍ಗೆ-ಹೊಂದಿಕೆಯಾಗುವ ಮೈಕ್ರೊಪ್ರೊಸೆಸರ್‌ಗಳನ್ನು ಹಾಗೂ ಫ್ಲ್ಯಾಶ್‌‍ ಮೆಮೊರಿಗಳ ತಯಾರಿಕೆಯ ಮೇಲೆ ಕೇಂದ್ರೀಕರಿಸಲು ನಿರ್ಧರಿಸಿತು. x86 ಹೊಂದಾಣಿಕೆಯ ಪ್ರೊಸೆಸರ್‌ಗಳು ಹಾಗೂ ಅದರ ಫ್ಲಾಶ್‌ ಮೆಮೊರಿಯ ಮಾರುಕಟ್ಟೆಗಳಿಗೆ ಇಂಟೆಲ್ ಜೊತೆಗೆ ತಮ್ಮನ್ನು ನೇರವಾಗಿ ಸ್ಪರ್ಧೆಯಲ್ಲಿ ಇರಿಸಿಕೊಂಡಿದೆ.

ಜುಲೈ 24, 2006 ರಂದು ಎ‌ಎಮ್‌ಡಿ ಎಟಿಐ ಟೆಕ್ನಾಲಜಿಸ್ ಜೊತೆಗೆ ಸೇರ್ಪಡೆಗೊಂಡಿರುವುದಾಗಿ ಘೋಷಿಸಿತು. ಒಟ್ಟು US$5.4 ಬಿಲಿಯನ್‌ಗೆ ಎ‌ಎಮ್‌ಡಿ $4.3 ಬಿಲಿಯನ್ ನಗದು ಹಾಗೂ ತನ್ನ ಸ್ಟಾಕ್‌ ಪತ್ರದಲ್ಲಿ 58 ಮಿಲಿಯನ್ ಷೇರುಗಳ ಸಂದಾಯವನ್ನು ಮಾಡಿತು. ಅಕ್ಟೋಬರ್ 25, 2006[] ರಂದು ಸೇರ್ಪಡೆಯ ವಿದಿವಿಧಾನಗಳು ಪೂರ್ಣಗೊಂಡಿತು ಹಾಗೂ ಎಟಿಐ ಈಗ ಎ‌ಎಮ್‌ಡಿಯ ಒಂದು ಭಾಗವಾಗಿದೆ.

ಡಿಸೆಂಬರ್‌ 2006ರಲ್ಲಿನ ವರದಿಯ ಪ್ರಕಾರ ಎಎಮ್‌ಡಿ, ಗ್ರಾಫಿಕ್ ಕಾರ್ಡ್ ಕೈಗಾರಿಕೆಯಲ್ಲಿ ಮುಖ್ಯ ಪ್ರತಿಸ್ಪರ್ಧಿಯಾದ ಎನ್‌ವಿಡಿಯಯೊಂದಿಗೆ ಗ್ರಾಫಿಕ್ ಕಾರ್ಡ್‌‌ಗಳ ಉದ್ಯಮದಲ್ಲಿ ಆಂಟಿಟ್ರಸ್ಟ್ ಉಲ್ಲಂಘನೆಯ ಸಾಧ್ಯತೆಗಾಗಿ ಮತ್ತು ಬೆಲೆಯನ್ನು ನಿಗಧಿಪಡಿಸಿದ್ಹಕ್ಕಾಗಿ ನ್ಯಾಯಾಂಗ ಇಲಾಖೆಯಿಂದ‌‌ ಸಮನ್ಸ್ ಪಡೆಯಿತು.[]

ಅಕ್ಟೋಬರ್‌ 2008ರಲ್ಲಿ ಎಎಮ್‌ಡಿ ತನ್ನ ತಯಾರಿಕಾ ಘಟಕವನ್ನು ಅಬುದಾಬಿಯಲ್ಲಿ ಸರ್ಕಾರದ ಬಂಡವಾಳದೊಂದಿಗೆ ಸ್ಥಾಪನೆಯಾದ ಅಡ್ವಾನ್ಸ್‌ಡ್ ಟೆಕ್ನಾಲಜಿ ಇನ್ವೆಸ್ಟ್‌ಮೆಂಟ್ ಕಂಪನಿಯು ಅನೇಕ ಬಿಲಿಯನ್ ಡಾಲರ್ ಜಂಟೀ ಸಹಭಾಗಿತ್ವದಲ್ಲಿ ಬದಲಾಯಿಸುವ ಘೋಷಣೆ ಮಾಡಿತು. ಇದನ್ನು ಗ್ಲೋಬಲ್‌ಫೌಂಡರೀಸ್ ಇನ್‌ಕಾರ್ಪೊರೇಟೆಡ್‌ ಎಂದು ಕರೆಯಲಾಯಿತು. ಇದು ಎಎಮ್‌ಡಿಯನ್ನು ಚಿಪ್ ವಿನ್ಯಾಸದ ಬಗೆಗೆ ಮಾತ್ರ ಕೇಂದ್ರೀಕರಿಸುವಂತೆ ಮಾಡಿತು.[]

ಪ್ರೊಸೆಸರ್‌ ಮಾರುಕಟ್ಟೆಯ ಇತಿಹಾಸ

[ಬದಲಾಯಿಸಿ]
ಮೊದಲಿನ ಎ‌ಎಮ್‌ಡಿ 8080 ಪ್ರೊಸೆಸರ್‌ (ಎ‌ಎಮ್‌ಡಿ ಎಎಮ್‌9080ADC / C8080A), 1977
ಎ‌ಎಮ್‌ಡಿ D8086.

ಐಬಿಎಮ್‌ ಪಿಸಿ ವತ್ತು x86 ರಚನಾ ವಿನ್ಯಾಸ

[ಬದಲಾಯಿಸಿ]

ಫೆಬ್ರುವರಿ 1982ರಲ್ಲಿ ಎಎಮ್‌ಡಿ ಇಂಟೆಲ್ನೊಂದಿಗೆ ಒಪ್ಪಂದಕ್ಕೆ ಸಹಿಹಾಕಿ 8086 ಮತ್ತು 8088 ಪ್ರೊಸೆಸರ್‌ಗಳ ಪರವಾನಗಿ ಹೊಂದಿದ ಎರಡನೇ ಮೂಲದ ತಯಾರಕರಾದರು. ಐಬಿಎಮ್ ಇಂಟೆಲ್ 8088ನ್ನು ತನ್ನ ಐಬಿಎಮ್‌ ಪಿಸಿ ಬಳಸಲು ಬಯಸಿತು, ಆದರೆ ಐಬಿಎಮ್‌ನ ನಿಯಮವು ತನ್ನ ಚಿಪ್‌ಗಾಗಿ ಕನಿಷ್ಠ ಎರಡು ಮೂಲಗಳನ್ನು ಬಯಸುತಿತ್ತು. ನಂತರ ಎಎಮ್‌ಡಿ ಅದೇ ವಿನ್ಯಾಸದಲ್ಲಿ Am286ಯನ್ನು ತಯಾರಿಸಿತು ಆದರೆ ಇಂಟೆಲ್ 1986ರಲ್ಲಿ ತನ್ನ ಒಪ್ಪಂದವನ್ನು ಮುರಿದುಕೊಂಡಿತು ಮತ್ತು i386 ಭಾಗದ ತಾಂತ್ರಿಕ ಮಾಹಿತಿಯನ್ನೊದಗಿಸಲು ನಿರಾಕರಿಸಿತು. ಎಎಮ್‌ಡಿ ಇಂಟೆಲ್‌‌ನ ಒಂಪ್ಪಂದವನ್ನು ಮುರಿದ ನಿರ್ಧಾರವನ್ನು ಪ್ರಶ್ನಿಸಿತು, ಮತ್ತು ಮಧ್ಯಸ್ಥಿಕೆಯ ಮೂಲಕ ಗೆಲುವನ್ನು ಪಡೆಯಿತು ಆದರೆ ಇಂಟೆಲ್ ಮೊಕದ್ದಮೆ ಹೂಡಿತು. 1994ರಲ್ಲಿ ಕ್ಯಾಲಿಫೋರ್ನಿಯಾದ ಸರ್ವೋಚ್ಚ ನ್ಯಾಯಾಲಯವು ಎಎಮ್‌ಡಿ ಪರವಾದುದರಿಂದ ದೀರ್ಘಕಾಲದ ವರೆಗೆ ಕಾನೂನಿನ ವಿವಾದಗಳು ಮುಂದುವರೆದವು. ಅನಂತರದ ಕನೂನಿನ ವಿವಾದಗಳು ಎಎಮ್‌ಡಿ ಇಂಟೆಲ್‌ನ ಮೈಕ್ರೊಕೇಡ್‌ನ್ನು ಬಳಸಲು ಕನೂನಿನ ಹಕ್ಕನ್ನು ಹೊಂದಿದೆಯೋ ಇಲ್ಲವೊ ಎಂಬ ವಿಷಯವನ್ನು ಕೆಂದ್ರೀಕರಿಸಿದವು. ಅನಿರ್ಧಿಷ್ಟತೆಯಿಂದಾಗಿ ಎಎಮ್‌ಡಿ ಇಂಟೆಲ್ ಸಂಕೇತಗಳನ್ನು ರೂಪಾಂತರಿಸಿ ನಕಲು ವಿನ್ಯಾಸಗಳನ್ನು ತಯಾರಿಸುವ ಒತ್ತಡಕ್ಕೆ ಸಿಲುಕಿತು.

1991ರಲ್ಲಿ, ಎಎಮ್‌ಡಿ ಇಂಟೆಲ್‌ನ 386 ಪ್ರೊಸೆಸರ್‌ನ ತದ್ರೂಪದ Am386ನ್ನು ಬಿಡುಗಡೆಗೊಳಿಸಿತು. ಕಂಪನಿಯು ಮಿಲಿಯನ್ ಘಟಕಗಳನ್ನು ಮಾರಲು ಒಂದು ವರ್ಷಕ್ಕಿಂತ ಕಡಿಮೆ ಸಮಯವನ್ನು ತೆಗೆದುಕೊಂಡಿತು. ನಂತರ Am486ನ್ನು ಕಾಂಪ್ಯಾಕ್‌ ಸೇರಿದಂತೆ ಅನೇಕ ದೊಡ್ಡ ಮೂಲ ಸಾಧನಗಳ ತಯಾರಕರುಗಳು ಬಳಸಿಕೊಂಡರು ಮತ್ತು ಜನಪ್ರಿಯಗೊಳಿಸಿದರು. ಇನ್ನೊಂದು Am486-ಆಧಾರಿತ ಉತ್ಪನ್ನವಾದ Am5x86 ಕಡಿಮೆ ಬೆಲೆಯೊಂದಿಗೆ ಎಎಮ್‌ಡಿಯ ಯಶಸನ್ನು ಮುಂದುವರೆಸಿತು. ಪಿಸಿ ಉದ್ಯಮದಲ್ಲಿ ಉತ್ಪನ್ನಗಳ ಜೀವನಚಕ್ರವು ಕಡಿಮೆ ಇದ್ದರೂ ಇಂಟೆಲ್‌‌ನ ಉತ್ಪನ್ನಗಳ ಹಿಮ್ಮುಖ ಎಂಜನಿಯರಿಂಗ್ ತಂತ್ರಜ್ಞಾನವು ಎಎಮ್‌ಡಿಗೆ ಜೀವಶಕ್ತಿಯಾಯಿತು.

ಕೆ5, ಕೆ6, ಅಥ್ಲಾನ್, ಡುರಾನ್ ಮತ್ತು ಸೆಂಪ್ರಾನ್

[ಬದಲಾಯಿಸಿ]

ಎಎಮ್‌ಡಿಯ ಮೊದಲ ಆಂತರಿಕ x86 ಪ್ರೊಸೆಸರ್‌ ಎಂದರೆ 1996ರಲ್ಲಿ ಬಿಡುಗಡೆ ಮಾಡಲಾದ ಕೆ5.[] "ಕೆ"ಯು ಲೋರ್ ಕಾಮಿಕ್ ಪುಸ್ತಕದಿಂದ ಬಂದ ಸೂಪರ್‌ ಮಾನವನನ್ನು ಹಾನಿಗೊಳಿಸಬಹುದಾದ (ತನ್ನ ಮೂಲಗ್ರಹದ ವಿಕಿರಣಶೀಲ) ವಸ್ತುವಾದ ಕ್ರಿಪ್ಟೊನೈಟ್‌ನ್ನು ಪ್ರತಿನಿಧಿಸುತ್ತದೆ, ಇದನ್ನು ಮಾರುಕಟ್ಟೆಯಲ್ಲಿ ಪ್ರಭಾವ ಬೀರಿ "ಸೂಪರ್‌ಮನ್‌"ನಂತಿದ್ದ ಇಂಟೆಲ್‌ನ್ನು ಹಾನಿಗೊಳಿಸುವುದನ್ನು ಉಲ್ಲೇಖಿಸುತ್ತದೆ.[] ಸಂಖ್ಯೆ "5", ಐದನೇ ಹಂತದ ಪ್ರೊಸೆಸರ್‌ ತಲೆಮಾರನ್ನು ಸೂಚಿಸುತ್ತದೆ. ಇದನ್ನು ಇಂಟೆಲ್ ಪೆಂಟಿಯಮ್ ಎಂದು ಬಳಸಿತು. ಏಕೆಂದರೆ ಯುಎಸ್ ಟ್ರೇಡ್‌ಮಾರ್ಕ್ ಮತ್ತು ಪರವಾನಗಿ ಕಛೇರಿಯು ಸಂಖ್ಯೆಗಳನ್ನ ಸಂಕೆತವಾಗಿ ಬಳಸಬಾರದೆಂದು ನಿಷೇಧ ಹೇರಿತು.

1996ರಲ್ಲಿ ಎಎಮ್‌ಡಿಯು ಎನ್‌ಎಕ್ಸ್ ಸರಣಿಯ x86-ಕಂಪಾಟಿಬಲ್ ಪ್ರೊಸೆಸರ್‌ಗಳ ಹಕ್ಕಿಗಾಗಿ ನೆಕ್ಸ್ಟ್‌‌‍ಜೆನ್ ಅನ್ನು ಖರೀದಿಸಿತು. ಎಎಮ್‌ಡಿ ನೆಕ್ಸ್ಟ್‌‌‍ಜೆನ್ ವಿನ್ಯಾಸಗಾರರ ತಂಡಕ್ಕೆ ಖಾಸಗಿ ಕಟ್ಟಡವನ್ನೊದಗಿಸಿ ಅವರನ್ನು ಉಳಿದ ಕೆಲಸಗಳಿಂದ ಪ್ರತ್ಯೇಕವಾಗಿಟ್ಟು ಅವರಿಗೆ ಹಣ ಮತ್ತು ಸಮಯವನ್ನು ನೀಡಿ Nx686ಯ ಮೇಲೆ ಪುನಃ ಕೆಲಸ ಮಾಡಲು ಅವಕಾಶ ಕಲ್ಪಿಸಿಕೊಟ್ಟಿತು. ಇದರಿಂದಾಗಿ 1997ರಲ್ಲಿ ಕೆ6 ಪ್ರೊಸೆಸರ್‌ಗಳನ್ನು ಬಿಡುಗಡೆ ಮಾಡಿತು. ಕೆ6 ಸಾಕೆಟ್‌ 7ನಾಧರಿಸಿದ್ದರೂ ವೈವಿಧ್ಯವುಳ್ಳ ಕೆ6-2/450ಗಳು ಇಂಟೆಲ್‌ಗಳು ಪೆಂಟಿಯಮ್ II (ಆರನೇ ತಲೆಮಾರಿನ ಪ್ರೊಸೆಸರ್‌) ಹೆಚ್ಚಿನ ವೇಗವನ್ನು ಹೊಂದಿದ್ದವು.

ಕೆ7ಯು ಎಎಮ್‌ಡಿಯ ಏಳನೇ ತಲೆಮಾರಿನ x86 ಪ್ರೊಸೆಸರ್ ಆಗಿದ್ದು ಜೂನ್‌ 23, 1999ರಲ್ಲಿ ಅಥ್ಲಾನ್ ಬ್ರಾಂಡ್‌ ಹೆಸರಿನಡಿ ಪರಿಚಯಿಸಲ್ಪಟ್ಟಿತು. ಮೊದಲಿನ ಎಎಮ್‌ಡಿ ಪ್ರೊಸೆಸರ್‌ಗಳಂತೆ ಇದು ಪರವಾನಗಿಯ ವಿವಾದದಿಂದಾಗಿ ಇಂಟೆಲ್‌ನ ಸ್ಲಾಟ್‌ 1 ಕನೆಕ್ಟರ್‌ನ್ನು ಬಳಸಲಿಲ್ಲ, ಬದಲಾಗಿ ಆಲ್ಫ ಪ್ರೊಸೆಸರ್‌ ಬಸ್‌ನ್ನು ಉಲ್ಲೇಖಿಸಿಸ್ಲಾಟ್‌ ಎಯನ್ನು ಬಳಸಿತು. ಡುರಾನ್ ಅಥ್ಲಾನ್‌ನ (256 ಕಿ.ಬೈ L2 ಕ್ಯಾಶೆಯ ಬದಲಾಗಿ 64ಕಿ.ಬೈ) ಕಡಿಮೆ ಬೆಲೆಯ ಸೀಮಿತ ರೂಪಾಂತರವಗಿದ್ದು 462-ಪಿನ್ ಸಾಕೆಟೆಡ್ ಪಿಜಿಎ‌(ಸಾಕೆಟ್‌ ಎ)ನಲ್ಲಿರಿಸಬಹುದು ಅಥವಾ ಮದರ್‌ಬೋರ್ಡ್‌ಗೆ ನೇರವಾಗಿ ಬೆಸುಗೆ ಹಾಕಬಹುದು. ಸಾಕೆಟ್‌ ಎ ಪಿಜಿಎ‌ ಕಾಲದಲ್ಲಿ ಕಡಿಮೆ ಬೆಲೆಯ ಅಥ್ಲಾನ್ ಎಕ್ಸ್‌ಪಿಯಾಗಿ ಸೆಂಪ್ರಾನ್‌ ಡುರಾನ್‌ ಬದಲಾಗಿ ಬಿಡುಗಡೆಯಾಯಿತು ಮತ್ತು ಹೊಸ ಸಕೆಟ್‌ಗಳಾದ ಎಎಮ್‌3ನಲ್ಲಿಯೂ ಬಳಸಲ್ಪಟ್ಟಿತು.

ಅಕ್ಟೋಬರ್‌ 9, 2001ನಲ್ಲಿ ಅಥ್ಲಾನ್ ಎಕ್ಸ್‌ಪಿಯನ್ನು ಬಿಡುಗಡೆ ಮಾಡಿತು, ಅಥ್ಲಾನ್ ಎಕ್ಸ್‌ಪಿಯ ನಂತರ 512ಕಿ.ಬೈ ಎಲ್‌2 ಕ್ಯಾಶೆಯನ್ನು ಫೆಬ್ರವರಿ 10, 2003ರಂದು ಬಿಡುಗಡೆ ಮಾಡಿತು.[]

ಅಥ್ಲಾನ್ 64, ಆಪ್ಟೆರಾನ್‌ ಮತ್ತು ಫೆನಮ್‌

[ಬದಲಾಯಿಸಿ]

ಕೆ೮ ಇದು ಕೆ7 ವಿನ್ಯಾಸದ ಉತ್ತಮವಾದ ಅಂಶಗಳನ್ನೊಳಗೊಂಡ ಪ್ರಮುಖವಾದ ಪುನರಾವರ್ತನೆಯಾಗಿದ್ದು, 64-ಬಿಟ್‌ನ ವಿಸ್ತರಣಿಕೆಯಾದ ಕ್ಷ86ರ ಕುರಿತಾದ ಸೂಚನೆಗಳನ್ನು (ವ್ಯವಹಾರಿಕವಾಗಿ ಎಎಮ್‌ಡಿ64 ಎಂದು ಕರೆಯುವ) ಹೊಂದಿದೆ, ಇದು ಆನ್‌-ಚಿಪ್ ಮೆಮೊರಿ ನಿಯಂತ್ರಕದ ಒಗ್ಗೂಡಿಕೆಯಾಗಿದೆ ಮತ್ತು ಅತ್ಯಂತ ಹೆಚ್ಚು ಕಾರ್ಯ ನಿರ್ವಹಿಸಬಲ್ಲ ಪಾಯಿಂಟ್-ಟೊ-ಪಾಯಿಂಟ್ ಅಂತರ್‌ಸಂಪರ್ಕವಾದ ಹೈಒಪರ್‌ಟ್ರಾನ್ಸ್‌ಪೋರ್ಟ್‌ನ್ನು ನೇರವಾಗಿ ಸಂಪರ್ಕಿಸಿದ ವಿನ್ಯಾಸದ ಭಾಗವಾಗಿ ಹೊಂದಿದೆ. ಈ ತಂತ್ರಜ್ಞಾನವನ್ನು ಒಪ್ಟೆರಾನ್‌ ಸರ್ವರ್‌- ಸಂಬಂಧಿತ ಪ್ರೊಸೆಸರ್‌‌ನಲ್ಲಿ ಅಳವಡಿಸಲಾಗಿತ್ತು.[೧೦] ಅದರ ನಂತರ ಡೆಸ್ಕ್‌ಟಾಪ್‌ ಪಿಸಿಗಳಲ್ಲಿ, ಅಥ್ಲಾನ್ 64 ಬ್ರಾಂಡಿ‌ನಡಿಯಲ್ಲಿ ಅಳವಡಿಸಲಾಯಿತು.[೧೧]

ಎಎಮ್‌ಡಿ ಮೊದಲ x86-ಆಧರಿಸಿದ ಸರ್ವರ್ ಸಿಪಿಯು ಆದ ಡ್ಯೂಯಲ್ ಕೋರ್ ಒಪ್ಟೆರಾನ್‌ನ್ನು ಎಪ್ರಿಲ್‌ 21, 2005ರಂದು ಬಿಡಗಡೆಗೊಳಿಸಿತು.[೧೨] ಮೊದಲ ಡೆಸ್ಕ್‌ಟಾಪ್ ಆಧಾರಿತ ಡ್ಯೂಯಲ್ ಕೋರ್ ಪ್ರೊಸೆಸರ್‌ ಕುಟುಂಬದ ಅಥ್ಲಾನ್ 64 X2—ಒಂದು ತಿಂಗಳ ನಂತರ ಬಿಡುಗಡೆಯಾಯಿತು.[೧೩] ಮೇ 2007 ಪ್ರಾರಂಭದಲ್ಲಿ ಎಎಮ್‌ಡಿ ಸ್ಟ್ರಿಂಗ್ "64" ತನ್ನ ಡ್ಯೂಯಲ್-ಕೋರ್ ಡೆಸ್ಕ್‌ಟಾಪ್‌ ಉತ್ಪನ್ನದ ಬ್ರಾಂಡ್‌ನಿಂದ ತೆಗೆದು ಹಾಕಿ ಅಥ್ಲಾನ್ X2 ಆಯಿತು, ತನ್ನ ಪ್ರೊಸೆಸರ್‌ಗಳಲ್ಲಿ 64-ಬಿಟ್‌ ಗಣತಿಯ ಪ್ರಾಮುಖ್ಯತೆಯನ್ನು ಕಡಿಮೆಗೊಳಿಸಿತು, ಬಿಡುಗಡೆಯಾದ ಇನ್ನಿತರ ಉತ್ಪನ್ನಗಳು ಸೂಕ್ಮವಿನ್ಯಾಸ(ಮೈಕ್ರೊಆರ್ಕಿಟಕ್ಚರ್‌)ದಿಂದ ಅಬಿವೃದ್ಧಿಗೊಂಡಿತ್ತು, ಮತ್ತು ಮಾರುಕಟ್ಟೆಯ ಬೇಡಿಕೆಯು ಡೆಸ್ಕ್‌ಟಾಪ್‌ ವ್ಯವಸ್ಥೆಯಿಂದ ಡ್ಯೂಯಲ್‌-ಕೋರ್ ಡೆಸ್ಕ್‌ಟಾಪ್‌ ವ್ಯವಸ್ಥೆಗೆ ಬದಲಾಯಿಸಿತ್ತು. 2008 ಪ್ರಾರಂಭದಲ್ಲಿ ಎಎಮ್‌ಡಿಯೂ ಸಹ ಡ್ಯೂಯಲ್‌-ಕೋರ್ ಸೆಂಪ್ರಾನ್‌ ಪ್ರೊಸೆಸರ್‌ಗಳನ್ನು ವಿಶೇಷವಾಗಿ ಚೀನಾದಲ್ಲಿ ಬಿಡುಗಡೆಗೊಳಿಸಿತು, ಕಡಿಮೆ ಹೈಒಪರ್‌ಟ್ರಾನ್ಸ್‌ಪೋರ್ಟ್‌ ವೇಗಮತ್ತು ಎಲ್‌2 ಕ್ಯಾಶೆಯ ಇದನ್ನು ಸೆಂಪ್ರಾನ್‌ 2000 ಸರಣಿಯೆಂದು ಹೆಸರಿಸಿತು, ಹೀಗೆ ಸಂಸ್ಥೆಯು ಡ್ಯೂಯಲ್‌-ಕೋರ್ ಉತ್ಪನ್ನವನ್ನು ಮರುಕಟ್ಟೆಯಪ್ರ್ತಿ ವಿಭಾಗಕ್ಕೂ ಬಿಡುಗಡೆ ಮಾಡಿತು.

ಹೊಚ್ಚ ಹೊಸ ಎಎಮ್‌ಡಿ ಮೈಕ್ರೊಪ್ರೊಸಸರ್ ಕೆ10 ಕೆ8 ಮೈಕ್ರೊಆರ್ಕಿಟೆಕ್ಚರ್‌ನ ನಂತರ ಬಿಡುಗಡೆಯಾಯಿತು. ಒಂಬತ್ತು ಕ್ವಾಡ್‌-ಕೋರನ್ನು ಹೊಂದಿರುವ ಮೂರನೇ ತಲೆಮಾರಿನ ಇಪ್ಟೆರಾನ್‌ ಪ್ರೊಸೆಸರ್‌ಗಳು ಈ ವಿನ್ಯಾಸದ ಮೊದಲ ಪ್ರೊಸೆಸರ್‌ಗಳಾಗಿದ್ದು ಸೆಪ್ಟೆಂಬರ್‌ 10, 2007ರಲ್ಲಿ ಬಿಡುಗಡೆಯಾಯಿತು. ಅದರ ನಂತರ ಡೆಸ್ಕ್‌ಟಾಪ್‌‌ಗಾಗಿ ಫೆನಮ್‌ ಪ್ರೊಸೆಸರ್‌ ಬಂದಿತು. ಕೆ10 ಪ್ರೊಸೆಸರ್‌ಗಳು ಡ್ಯೂಯಲ್‌-ಕೋರ್‌ನೊಂದಿಗೆ ಬಂದವು, ಟ್ರಿಪಲ್-ಕೋರ್‌,[೧೪] ಮತ್ತು ಕ್ವಾಡ್-ಕೋರ್‌ರೂಪಾಂತರದ ಎಲ್ಲಾ ಕೋರ್‌ಗಳೂ ಒಂದೇ ಡೈನಲ್ಲಿದ್ದವು. ಹೊಸ ಫೆನಮ್‌ ಪ್ರೊಸೆಸರ್‌‌ಗಳನ್ನು ಮತ್ತು ಎಎಮ್‌ಡಿ 700 ಚಿಪ್‌ಸೆಟ್‌ ಸರಳಿಗಳ R770 ಜಿಪಿಯು‌ ಮತ್ತು 790 GX/FX ಚಿಪ್‌ಸೆಟ್‌ಗಳನ್ನು ಬಳಸಿಕೊಂಡು ‌"ಸ್ಪೈಡರ್‌" ಎಂಬ ಸಂಕೇತದ ಹೆಸರನ್ನು ಹೊಂದಿರುವ ಹೊಸ ವೇದಿಕೆಯು ಬಿಡುಗಡೆಯಾಯಿತು. ಇದು 65ನ್ಯಾ.ಮೀ.ಇದ್ದು ಇನ್ನೂ ಚಿಕ್ಕದಾದ ಮತ್ತು ಹೆಚ್ಚು ಕಾರ್ಯನಿರ್ವಹಣಾ ಸಾಮರ್ಥ್ಯವುಳ್ಳ 45ನ್ಯಾ.ಮೀ. ನೇಡನ್ನು ಹೊಂದಿದ್ದ ಇಂಟೆಲ್‌ನೊಂದಿಗೆ ಸ್ಪರ್ಧಿಸಲಿಲ್ಲ.

ಜನವರಿ‌ 2009ಯಲ್ಲಿ ಎಎಮ್‌ಡಿಯು ಹೊಸ ಪ್ರೊಸೆಸರ್‌ 45 ನ್ಯಾ.ಮೀ ಪ್ರೊಸೆಸನ್ನು ಬಳಸಿ ಮಾಡಲಾಗಿದ್ದ ಮೂಲ ಫೆನಮ್‌ನ ರೂಪಾಂತರವಾದ ಫೆನಮ್‌ IIನ್ನು ನಕಲು ಮಾಡಿತ್ತು. ಇದು "ಡ್ರಾಗನ್‌" ಎಂಬ ಹೊಸ ಸಂಕೇತದ ಹೆಸರಿನೊಂದಿಗೆ ಫೆನಮ್‌ II ಪ್ರೊಸೆಸರ್‌ನ್ನು ಬಳಸಿಕೊಂಡು R700 ಜಿಪಿಯು‌ ಕುಟುಂಬದ ಎಟಿಐ R770 ಜಿಪಿಯು‌ ನ್ನು ಮತ್ತು ಎಎಮ್‌ಡಿ 700 ಚಿಪ್‌ಸೆಟ್‌ ಸರಣಿಗಳ 790 GX/FX ಚಿಪ್‌ಸೆಟ್‌ ಬಳಸಿಕೊಂಡು ಒಂದು ಹೊಸ ಉತ್ಪನ್ನವನ್ನು ಬಿಡುಗಡೆ ಮಾಡಿತು. ಇದು ಡ್ಯೂಯಲ್‌-ಕೋರ್, ಟ್ರಿಪಲ್-ಕೋರ್, ಕ್ವಾಡ್‌-ಕೋರ್‌ನಲ್ಲಿ ಬಿಡುಗಡೆಯಾಯಿತು, ಎಲ್ಲವೂ ಒಂದೇ ಡೈಯನ್ನು ಹೊಂದಿದ್ದು ಟ್ರಿಪಲ್-ಕೋರ್ ಮತ್ತು ಡ್ಯೂಯಲ್‌-ಕೋರ್ ರೂಪಾಂತರಗಳಲ್ಲಿ ಕೋರನ್ನು ತೆಗೆದು ಹಾಕಲಾಗಿತ್ತು. ಇದು ಮೂಲ ಫೆನಮ್‌ ಒಳಗೊಂಡಿದ್ದ ಕಡಿಮೆ ವೇಗ, ಚಿಕ್ಕ ಎಲ್3 ಕ್ಯಾಶೆ ಮತ್ತು ಕೂಲ್‌ಆ‍ಯ್‌೦ಡ್‌ಕ್ವೈಟ್‌ ಬಗ್‌ಗಳನ್ನು ಹೊಂದಿದ್ದ ಕಡಿಮೆ ಕಾರ್ಯಕ್ಷಮತೆಯ ಸಮಸ್ಯೆಯನ್ನು ಪರಿಹರಿಸಿತು. ಇದು ಇಂಟೆಲ್‌‌ನ ಮಧ್ಯದಿಂದ ಉನ್ನತ ಮಟ್ಟದ ಕೋರ್ 2 ಕ್ವಾಡ್‌‍ಗಳೊಂದಿಗೆ ಬೆಲೆ ಮತ್ತು ಸಾಮರ್ಥ್ಯದೊಂದಿಗೆ ಸ್ಪರ್ಧಿಸಿದವು. ಪ್ರೊಸೆಸರ್‌ ಫೆನಮ್ನ ಮೆಮೊರಿ ನಿಯಂತ್ರಕವನ್ನು ವರ್ಧಿಸಿತು, ಮತ್ತು ಎಎಮ್‌2+ಯೊಂದಿಗೆ ಹಿಮ್ಮೊಗ ಕಂಪ್ಯಾಟೆಬಿಲಿಟಿಯನ್ನು ನಿರ್ವಹಿಸುವಾಗ ಹೊಸ ಎಎಮ್‌3 ಮೂಲ ಸಾಕೆಟ್‌ನಲ್ಲಿ DDR3ಯನ್ನು ಬಳಸಲು ಅವಕಾಶ ನೀಡಿತು,ಫೆನಮ್‌ಗಸಗಿ ಸಾಕೆಟ್‌‌ನ್ನು ಬಳಸಿತು, ಮತ್ತು ವೇದಿಕೆಯೊಂದಿಗೆ DDR2 ಮೆಮೊರಿ ಬಳಕೆಗೆ ಅವಕಾಶ ನೀಡಿತು. 2010ರಲ್ಲಿ "ಥುಬಾನ್" ಹೆಸರಿನ ಹೊಸ ಫೆನಮ್‌ II ಹೆಕ್ಸಾ-ಕೋರ್ ಪ್ರೊಸೆಸರ್‌ಬೆಡುಗಡೆಯಾಯಿತು. ಇದು ಸಂಪೂರ್ಣ ಹೊಸ ಡೈ ಆಧಾರಿತವಾಗಿದ್ದು ಹೆಕ್ಸಾ-ಕೋರ್ "ಇಸ್ತಾಂಬುಲ್" ಇಪ್ಟೆರಾನ್‌ ಪ್ರೊಸೆಸರ್‌ ಆಗಿದೆ. ಇದು ಎಎಮ್‌ಡಿಯ ಹೊಸ ”ಲಿಯೊ" ಸಂಕೇತ ಹೆಸರಿನ Enthusiast ವೇದಿಕೆಯಾಗಿದ್ದು ಫೆನಮ್‌ II ಪ್ರೊಸೆಸರ್‌ನ್ನು ಬಳಸಿಕೊಂಡಿತು, ಎಎಮ್‌ಡಿ 800 ಚಿಪ್‌ಸೆಟ್‌ ಸರಣಿಗಳ ಹೊಸ ಚಿಪ್‌ಸೆಟ್‌ ಮತ್ತು ಎವರ್‌ಗ್ರೀನ್ (ಜಿಪಿಯು‌ ಕುಟುಂಬ) ಜಿಪಿಯು‌ ಸರಣಿಗಳ ಎಟಿಐ "ಸೈಪ್ರೆಸ್" ಜಿಪಿಯು‌ವನ್ನು ಬಳಸಿಕೊಂಡಿತು.

2010ರಲ್ಲಿ ಮಾಗ್ನಿ ಕೌರ್ಸ್ ಮತ್ತು ಲಿಬ್ಸನ್ ಸರ್ವರ್‌ ಭಾಗಗಳು ಬಿಡುಗಡೆಯಾದವು. ಮಾಗ್ನಿ ಕೌರ್ಸ್ ಭಾಗವು 8ರಿಂದ 12 ಕೋರ್‌ಗಳು ಮತ್ತು ಲಿಬ್ಸನ್ ಭಾಗಗಳು 4 ಮತ್ತು 6 ಕೋರ್‌ ಭಾಗಗಳಲ್ಲಿ ಬಂದವು. ಮಾಗ್ನಿ ಕೌರ್ಸ್ ಕಾರ್ಯಕ್ಷಮತೆಯನ್ನು ಕೇಂದ್ರೀಕರಿಸಿದ್ದರೆ, ಲಿಬ್ಸನ್ ಪ್ರತಿ ವ್ಯಾಟ್‌ಗೆ ಹೆಚ್ಚಿನ ಕಾರ್ಯಕ್ಷಮತೆಯನ್ನು ಹೊಂದುವಂತೆ ತಯಾರಿಸಲಾಗಿತ್ತು. ಮಾಗ್ನಿ ಕೌರ್ಸ್ ಇಂದು ಎಮ್‌ಸಿಎಮ್ ಆಗಿದ್ದು (ಮಲ್ಟಿ-ಚಿಪ್ ಮಾಡ್ಯೂಲ್) ಎರಡು ಹೆಕ್ಸಾ-ಕೋರ್ "ಇಸ್ತಾಂಬುಲ್‌" ಇಪ್ಟೆರಾನ್‌ ಭಾಗಗಳನ್ನು ಹೊಂದಿದೆ. ಇದರಲ್ಲಿ ಹೊಸ G34 ಸಾಕೆಟ್‌ ಡ್ಯೂಯಲ್ ಮತ್ತು ಕ್ವಾಡ್ ಸಾಕೆಟ್‌ ಪ್ರೊಸೆಸರ್‌ಗಳನ್ನು ಬಳಸಿದ್ದು ಇಪ್ಟೆರಾನ್ 61xx ಸರಣಿಯ ಪ್ರೊಸೆಸರ್‌ಗಳೆಂದು ಮಾರಟ ಮಾಡಲಾಯಿತು. ಲಿಬ್ಸನ್‌ ಡ್ಯೂಯಲ್ ಸಾಕೆಟ್‌ ಬಳಕೆಗಾಗಿ ಅಥವಾ ಸಾಕೆಟ್‌ ಬಳಕೆಗಾಗಿ ಪ್ರಮಾಣೀಕೃತ C32 ಸಾಕೆಟ್‌ನ್ನು ಬಳಸಿತ್ತು ಮತ್ತು ಇದನ್ನು ಇಪ್ಟೆರಾನ್‌ 41xx ಪ್ರೊಸೆಸರ್‌ಗಳೆಂದು ಮಾರಾಟ ಮಾಡಲಾಯಿತು. ಎರಡನ್ನೂ 45 ನ್ಯಾ.ಮೀ ಎಸ್‌ಒಐ ಪ್ರೊಸೆಸ್‌ಗಾಗಿ ತಯಾರಿಸಲಾಗಿತ್ತು.

ಸಮ್ಮಿಳನ

[ಬದಲಾಯಿಸಿ]

ಎಎಮ್‌ಡಿ ಮತ್ತು ಎಟಿಐಗಳ ಒಂದುಗೂಡುವಿಕೆ ಯ ನಂತರ, ಪ್ರಾರಂಭದ ಸಂಕೇತನಾಮ ಕೊಟ್ಟ ಫ್ಯೂಶನ್ ಸಿಪಿಯು ಮತ್ತು ಜಿಪಿಯುಗಳನ್ನು ಅದರ ಕೆಲವು ಮೂಲ ಹಂತದ ಚಿಪ್‌ಗಳಲ್ಲಿ ಒಂದುಗೂಡಿಸುವುದಾಗಿ ಘೋಷಿಸಲಾಗಿತ್ತು. ಹೊರಗಿನ ಪಿಸಿಐ ಎಕ್ಸ್‌ಪ್ರೆಸ್‌ ಹೊರವಲಯಗಳನ್ನು ಸರಿಹೊಂದಿಸಲು ಕನಿಷ್ಠ 16 ಸಾಲು ಪಿಸಿಐ ಎಕ್ಸ್‌ಪ್ರೆಸ್ ಸಂಪರ್ಕಗಳನ್ನೂ ಒಳಗೊಂಡಿರುತ್ತದೆ. ಇದರಿಂದಾಗಿ ಮದರ್‌ಬೋರ್ಡ್‌ನಲ್ಲಿ ನಾರ್ಥ್‌ಬ್ರಿಡ್ಜ್‌ ಚಿಪ್‌ನ ಅವಶ್ಯಕತೆ ಕಡಿಮೆಯಾಗುತ್ತದೆ. ಇದನ್ನು ತೊಡಗಿಸಿ ಮೂಲವಾಗಿ ಸಿಪಿಯುನ ಮೇಲೆ ಮಾಡಿದ ಕೆಲವು ಪ್ರಕ್ರಿಯೆಗಳು (ಉದಾಹರಣೆಗೆ ಫ್ಲೋಟಿಂಗ್ ಪಾಯಿಂಟ್ ಘಟಕದ ಕಾರ್ಯಾಚರಣೆಗಳು) ಜಿಪಿಯುಗೆ ವರ್ಗಾಯಿಸಲಾಯಿತು, ಇದು ಫ್ಲೋಟಿಂಗ್ ಪಾಯಿಂಟ್ ಯುನಿಟ್‌ ಲೆಖ್ಖಾಚಾರಗಳಿಗೆ ಉತ್ತಮವಾಗಿದೆ. ಇದು ಒಂದು ಎಕ್ಸಲರೇಟೆಡ್ ಪ್ರೊಸೆಸ್ಸಿಂಗ್ ಯುನಿಟ್ (ಎಪಿಯು)ನಂತೆ ಎಂದು ಎಎಮ್‌ಡಿ ಹೇಳಿದೆ.[೧೫] "ಎಮ್-ಸ್ಪೇಸ್ " ಎಂಬ ಹೆಸರಿನ ಒಂದು ಮಾಡ್ಯುಲರ್ ವಿನ್ಯಾಸದ ಪದ್ಧತಿಯಲ್ಲಿ ಎಎಮ್‌ಡಿ ಕಾರ್ಯನಿರ್ವಹಿಸುವುದು, ಅಲ್ಲಿ "ಬುಲ್‌ಡೊಝರ್ " ಮತ್ತು "ಬಾಬ್‌ಕ್ಯಾಟ್ " ಎಂದು ಗುಪ್ತನಾಮಗಳನ್ನು ಹೊಂದಿದ ಎರಡು ಹೊಸ ಕೋರ್‌ಗಳನ್ನು ಬಿಡುಗಡೆ ಮಾಡಲಾಗುವುದು; ಬುಲ್‌ಡೊಝರ್‌ನ್ನು 2011ರ ಕಾಲಾವಧಿಗೆ ಎಂದು ತೀರ್ಮಾನಿಸಲಾಗಿದೆ, ಬಾಬ್‌ಕ್ಯಾಟ್‌ನ್ನು 2010ರ ಕ್ಯು4ರಲ್ಲಿ ನಿರೀಕ್ಷಿಸಲಾಗಿದೆ.[೧೬]

ಎಎಮ್‌ಡಿಯ 2007ರ ತಂತ್ರಜ್ಞಾನ ವಿಶ್ಲೇಷಕ ದಿನದಲ್ಲಿ ಅತಿ ಚಿಕ್ಕದಾದ ಪ್ರಾಸ್ತಾವಿಕ ಮಾಹಿತಿ ಇತ್ತು, ಎರಡೂ ಕೋರ್‌ಗಳನ್ನು ಬುಡದಿಂದಲೇ ನಿರ್ಮಿಸಬೇಕಾಗಿತ್ತು. ಬುಲ್‌ಡೊಜರ್ ‌ ಕೋರ್ 10 ವ್ಯಾಟ್‌ನಿಂದ 100 ವ್ಯಾಟ್‌ ವಸ್ತುಗಳ ಮೇಲೆ ಕೇಂದ್ರೀಕರಿಸುತ್ತದೆ. ಪ್ರತಿ ವ್ಯಾಟ್ ಗುಣಮಟ್ಟದ ಅನುಪಾತಗಳಿಗೆ ಅನುಕೂಲತೆಯ ಜೊತೆ ಮತ್ತು ಎಚ್‌ಪಿಸಿ ಅಪ್ಲಿಕೇಶನ್‌ಗಳು ಮತ್ತು ಹೊಸದಾಗಿ ಘೋಷಿಸಿದ ಎಕ್ಸ್‌ಒಪಿ, ಎಫ್‌ಎಮ್‌ಎ4 ಮತ್ತು ಸಿವಿಟಿ16 ಸೂಚನೆಗಳನ್ನು ಒಳಗೊಂಡಿದೆ,[೧೭] ಬಾಬ್‌ಕ್ಯಾಟ್ ಕೋರ್ 1 ವ್ಯಾಟ್‌ನಿಂದ 10 ವ್ಯಾಟ್ ವಸ್ತುಗಳ ಮೇಲೆ ಕೇಂದ್ರೀಕರಿಸುತ್ತದೆ. ಶಕ್ತಿಯ ಸೆಳೆತವನ್ನು ಕಡಿಮೆ ಮಾಡಲು ಈ ಕೋರ್ ಎಕ್ಸ್‌86 ಕೋರ್‌ನ ಸಂಕ್ಷಿಪ್ತ ರೂಪವಾಗಿದೆ ಎಂದು ಕೊಡಲಾಗಿದೆ. ಫ್ಯೂಶನ್ ಲೇಬಲ್ ಅಡಿಯಲ್ಲಿ ಎರಡೂ ಕೋರ್‌ಗಳು ಪೂರ್ಣ ಡೈರೆಕ್ಟ್‌ಎಕ್ಸ್‌ ಹೊಂದಿಕೆಯಾದ ಜಿಪಿಯು ಕೋರ್(ಗಳನ್ನು)ನ್ನು ಒಳಸೇರಿಸಲು ಸಮರ್ಥವಾಗುವವು, ಅಥವಾ ಸಾಮಾನ್ಯ ಬಳಕೆಯ ಸಿಪಿಯುನಂತೆ ಸ್ವತಂತ್ರವಾದ ವಸ್ತುಗಳಂತೆ ಇರುವವು.

ಲ್ಯಾನೋ ಇದನ್ನು ಎರಡನೇ ಎಪಿಯು ಬಿಡುಗಡೆ ಮಾಡಿತು,[೧೬] ಪ್ರಚಲಿತ ಪ್ರವೃತ್ತಿಯ ಮಾರುಕಟ್ಟೆ ಇದರ ಗುರಿಯಾಗಿದೆ.[೧೫] ಇದು ಸಿಪಿಯು ಮತ್ತು ಜಿಪಿಯುವನ್ನು ಒಂದೇ ಡೈ ಮೇಲೆ ಒಂದಾಗಿಸುವುದು, ನಾರ್ಥ್‌ಬ್ರಿಡ್ಜ್ ಕಾರ್ಯಗಳನ್ನೂ ಸಹ, ಮತ್ತು ಸಾಕೆಟ್‌ "ಎಎಮ್‌3 ಆರ್‌2" ಜೊತೆ ಡಿಡಿಆರ್3 ಮೆಮೊರಿಯಂತೆ ಉಪಯೋಗಿಸಿ ಎಎಮ್‌ಡಿಯ ಹೊಸ ಕಾಲಾವಧಿಯಲ್ಲಿ ಗುರುತಿಸುತ್ತದೆ. ಇದು ಆದರೂ, ಹೊಸ ಬುಲ್‌ಡೊಝರ್ ಕೋರ್‌ನ ಮೇಲೆ ಆಧಾರವಾಗಿರುವುದಿಲ್ಲ ಮತ್ತು ಹೊಸ 32 ನ್ಯಾ.ಮೀ ಭಾಗಗಳ ಬಿಡುಗಡೆಯವರೆಗೆ ಎಎಮ್‌ಡಿಯ ಹೈ-ಎಂಡ್ ಪ್ರೊಸೆಸ್ಸರ್ ಆಗಿದ್ದ ಈಗಿನ ಫೆನೊಮ್ II "ದೆನಬ್‌‍"ನ ಹಾಗೆಯೇ ಇದೆ.

ಪೂರ್ಣ ಸಂಖ್ಯೆಗಳು ಮತ್ತು ಒಂದು ಫ್ಲೋಟಿಂಗ್ ಪಾಯಿಂಟ್ ಯುನಿಟ್‌ಗಳನ್ನು (ಎಫ್‌ಪಿಯು) ಸಂಸ್ಕರಿಸಲು ಸಮರ್ಥವಾಗುವಂತೆ ಬುಲ್‌ಡೊಜರ್‌ ಎರಡು ಪೂರ್ಣಸಂಖ್ಯೆ ಕೋರ್‌ಗಳನ್ನು ಬಹಿರಂಗಪಡಿಸುತ್ತದೆ. ಇದು ಒಎಸ್ ಮೂಲಕ ಎರಡು ಕೋರ್‌ಗಳಂತೆ ಮತ್ತು ಎಎಮ್‌ಡಿಯ 2011ರ ಎಲ್ಲ ಹೊಸತರಂತೆ ಕಾಣುವುದು, 32 ನ್ಯಾ.ಮೀ ಹೈ-ಎಂಡ್ ಡೆಸ್ಕ್‌ಟಾಪ್ ಮತ್ತು ಸರ್ವರ್ ಭಾಗಗಳನ್ನು ಇದರ ಮೇಲೆ ನಿರ್ಮಿಸಲಾಗುವುದು. ಡೆಸ್ಕ್‌ಟಾಪ್‌ಗಳಿಗೆ ಝಂಬೆಜಿ ಮತ್ತು ಒರೊಚಿ ಮತ್ತು ಸರ್ವರ್ ಮಾರುಕಟ್ಟೆಗೆ ಇಂಟರ್‌ಲಾಗೊಸ್ ಮತ್ತು ವಲೆನ್ಸಿಯ.

ಇತರ ವೇದಿಕೆಗಳು ಮತ್ತು ತಾಂತ್ರಿಕತೆಗಳು

[ಬದಲಾಯಿಸಿ]

ಎಎಮ್‌ಡಿ ಚಿಪ್‌ಸೆಟ್‌ಗಳು

[ಬದಲಾಯಿಸಿ]

2003ರಲ್ಲಿ ಅಥ್ಲಾನ್ 64 ಸಂಸ್ಕಾರಕವನ್ನು ಪ್ರಾರಂಭಿಸುವ ಮೊದಲು ಎಎಮ್‌ಡಿ ಕೆ6 ಮತ್ತು ಕೆ7 ಸಂಸ್ಕಾರಕ ನಿರ್ಮಾಣಗಳಿಗೆ ವಿಸ್ತರಿಸಿರುವ ಅದರ ಸಂಸ್ಕರಣಗಳಿಗೆ ಚಿಪ್‌ಸೆಟ್‌ಗಳನ್ನು ವಿನ್ಯಾಸಗೊಳಿಸಿತು. ಚಿಪ್‌ಸೆಟ್‌ಗಳು ಎಎಮ್‌ಡಿ-640, ಎಎಮ್‌ಡಿ-751 ಮತ್ತು ಎಎಮ್‌ಡಿ-761 ಚಿಪ್‌ಸೆಟ್‌ಗಳನ್ನು ಒಳಗೊಂಡಿದೆ. ಅಥ್ಲಾನ್ 64 ಸಂಸ್ಕಾರಕಗಳ ಬಿಡುಗಡೆಯೊಂದಿಗೆ 2003ರಲ್ಲಿ ಪರಿಸ್ಥಿತಿ ಬದಲಾಯಿತು, ಮತ್ತು ಎಎಮ್‌ಡಿ ಇದರ ಡೆಸ್ಕ್‌ಟಾಪ್‌ ಸಂಸ್ಕಾರಕಗಳಿಗೆ ಇದರ ಸ್ವಂತ ಚಿಪ್‌ಸೆಟ್‌ಗಳನ್ನು ಮುಂದೆ ವಿನ್ಯಾಸಗೊಳಿಸದೆ ಇರಲು ನಿರ್ಧರಿಸಿತು ಆ ಸಮಯದಲ್ಲಿ ಡೆಸ್ಕ್‌ಟಾಪ್‌ ವೇದಿಕೆ ಇತರ ಸಂಸ್ಥೆಗಳಿಗೆ ಚಿಪ್‌ಸೆಟ್‌ಗಳ ವಿನ್ಯಾಸದ ಅವಕಾಶ ಸಿಕ್ಕಿತು. ಇದು "ತೆರೆದ ವೇದಿಕೆ ಎಟಿಆಯ್, ವಿಆಯ್‌ಎ ಮತ್ತು ಎಸ್‌ಆಯ್‌ಎಸ್‌ಗಳು ಅಥ್ಲಾನ್ 64 ಸಂಸ್ಕಾರಕಗಳಿಗೆ ಮತ್ತು ನಂತರ ಅಥ್ಲಾನ್ 64 ಎಕ್ಸ್‌2 ಮತ್ತು ಅಥ್ಲಾನ್ ಎಫ್‌ಎಕ್ಸ್ ಸಂಸ್ಕಾರಕಗಳಿಗೆ, ಎನ್‌ವಿಡಿಯದ ಕ್ವಾಡ್ ಎಫ್‌ಎಕ್ಸ್ ಪ್ಲ್ಯಾಟ್‌ಫಾರ್ಮ್‌ ಚಿಪ್‌ಸೆಟ್‌ಗಳಿಗೆ ತಮ್ಮ ಸ್ವಂತ ಚಿಪ್‌ಸೆಟ್‌ಗಳನ್ನು ಅಭಿವೃದ್ಧಿಪಡಿಸಿದವು.

ಪ್ರಾರಂಭ ಒಪ್ಟರಾನ್ ಸರ್ವರ್ ಪ್ರೊಸೆಸರ್‌ಗಳ ಬಿಡುಗಡೆಯ ಜೊತೆ ಮುಂದೆ ಸಾಗಿತು ಎಎಮ್‌ಡಿ-8111 ಚಿಪ್‌ಸೆಟ್‌ನ ಬಿಡುಗಡೆಯ ನಂತರ 2004ರಲ್ಲಿ ಎಎಮ್‌ಡಿ ಸರ್ವರ್ ಚಿಪ್‌ಸೆಟ್‌ಗಳ ವಿನ್ಯಾಸಗೊಳಿಸುವುದನ್ನು ನಿಲ್ಲಿಸಿತು, ಮತ್ತು ಒಪ್ಟರಾನ್ ಪ್ರೊಸೆಸರ್‌ಗಳಿಗೆ ಚಿಪ್‌ಸೆಟ್‌ಗಳ ನಿರ್ಮಾಣಕ್ಕಾಗಿ ಸಂಸ್ಥೆಗಳಿಗೆ ಸರ್ವರ್ ವೇದಿಕೆಗಳನ್ನು ಮತ್ತೆ ತೆರೆಯಿತು. ಇಂದಿನವರೆಗೆ ಎನ್‌ವಿಡಿಯ ಮತ್ತು ಬ್ರಾಡ್‌ಕಾಮ್‌ಗಳು ಒಪ್ಟರಾನ್ ಪ್ರೊಸೆಸರ್‌ಗಳಿಗೆ ಸರ್ವರ್ ಚಿಪ್‌ಸೆಟ್‌ಗಳನ್ನು ವಿನ್ಯಾಸಗೊಳಿಸುತ್ತಿರುವ ಏಕೈಕ ಸಂಸ್ಥೆಗಳಾಗಿವೆ.

2006ರಲ್ಲಿ ಕಂಪನಿ ಎಟಿಐ ತಾಂತ್ರಿಕತೆಗಳ ಸ್ವಾಧೀನತೆಯನ್ನು ಪೂರ್ಣಗೊಳಿಸಿತು, ಸಂಸ್ಥೆ ಚಿಪ್‌ಸೆಟ್‌ಗಳಿಗೆ ಎಟಿಐ ವಿನ್ಯಾಸದ ಗುಂಪನ್ನು ತನ್ನದಾಗಿಸಿಕೊಂಡಿತು ಇದು ಮೊದಲು ರೆಡಿಯೊನ್ ಎಕ್ಸ್‌ಪ್ರೆಸ್ 200 ಮತ್ತು ರೆಡಿಯೊನ್ ಎಕ್ಸ್‌ಪ್ರೆಸ್ 3200 ಚಿಪ್‌ಸೆಟ್‌ಗಳನ್ನು ವಿನ್ಯಾಸಗೊಳಿಸಿತ್ತು. ಎಎಮ್‌ಡಿ ನಂತರ ಎಎಮ್‌ಡಿ ಪ್ರೊಸೆಸರ್‌ಗಳ ಚಿಪ್‌ಸೆಟ್‌ಗಳಿಗೆ ಎಎಮ್‌ಡಿ ಬ್ರ್ಯಾಂಡಿಂಗ್ ಅಡಿಯಲ್ಲಿ ಮರುನಾಮಕರಣ ಮಾಡಿತು (ಉದಾಹರಣೆಗೆ, ಕ್ರಾಸ್‌ಫೈರ್ ಎಕ್ಸ್‌ಪ್ರೆಸ್ 3200 ಚಿಪ್‌ಸೆಟ್‌ಗೆ ಎಎಮ್‌ಡಿ 580ಎಕ್ಸ್‌ ಕ್ರಾಸ್‌ಫೈರ್‌ ಚಿಪ್‌ಸೆಟ್‌ ಎಂದು ಮರುನಾಮಕರಣ ಮಾಡಲಾಗಿತ್ತು) 2007, ಫೆಬ್ರವರಿಯಲ್ಲಿ, ಎಎಮ್‌ಡಿ ಮೊದಲ ಎಎಮ್‌ಡಿ-ಬ್ರ್ಯಾಂಡ್ ಹೊಂದಿರುವ ಚಿಪ್‌ಸೆಟ್‌ನ್ನು ಘೋಷಿಸಿತು 2004 ರಿಂದ ಎಎಮ್‌ಡಿ 690ಜಿ ಚಿಪ್‌ಸೆಟ್‌ನ ಬಿಡುಗಡೆಯ ಜೊತೆ (ಮೊದಲು ಸಂಕೇತನಾಮ ಆರ್‌ಎಸ್‌690 ಯ ಅಭಿವೃದ್ಧಿಯಲ್ಲಿ), ಮೈನ್‌ಸ್ಟ್ರೀಮ್‌ ಆಯ್‌ಜಿಪಿ ಗಣನೆ ಮಾಡುವುದರ ಗುರಿ ಹೊಂದಿತ್ತು. ಇದು ಮದರ್‌ಬೋರ್ಡ್‌ಗಳ ಮೇಲೆ ಕೈಗಾರಿಕೆಯು ಕಾರ್ಯಗತ ಮಾಡುವ ಮೊದಲ ಎಚ್‌ಡಿಎಮ್‌ಆಯ್‌ 1.2 ಪೋರ್ಟ್ ಆಗಿತ್ತು, ಹತ್ತು ಲಕ್ಷಕ್ಕೂ ಹೆಚ್ಚು ಘಟಕಗಳಿಗೆ ರವಾನಿಸಿತು. ಆ ಸಮಯದಲ್ಲಿ ಎಟಿಆಯ್ ಇಂಟೆಲ್ ಆಯ್‌ಜಿಪಿ ಚಿಪ್‌ಸೆಟ್‌ನ್ನು ಬಿಡುಗಡೆ ಮಾಡುವ ಗುರಿ ಹೊಂದಿತ್ತು, ಯೋಜನೆ ಚೂರಾಯಿತು ಮತ್ತು ರೆಡಿಯೊನ್ ಎಕ್ಸ್‌ಪ್ರೆಸ್ 1250ರ (ಗುಪ್ತನಾಮ ಆರ್‌ಎಸ್‌ 600 , ಎಟಿಆಯ್‌ ಬ್ರ್ಯಾಂಡಿನ ಅಡಿಯಲ್ಲಿ ಮಾರಲಾಯಿತು) ವಿವರಗಳನ್ನು ಎರಡು ಒಇಎಮ್‌ಗಳು, ಅಬಿಟ್ ಮತ್ತು ಎಎಸ್‌ರಾಕ್‌ಗಳಿಗೆ ಮಾರಾಟ ಮಾಡಲಾಯಿತು. ಆದರೂ ಇಂಟೆಲ್ ಚಿಪ್‌ಸೆಟ್‌ಗಳನ್ನು ಸಂಸ್ಥೆ ಇನ್ನುಮುಂದೆ ಉತ್ಪಾದಿಸುತ್ತದೆ ಎಂದು ಎಎಮ್‌ಡಿ ಹೇಳಿದೆ, ಇಂಟೆಲ್1333 MHz ಎಟಿಐಗೆ ಎಫ್‌ಎಸ್‌ಬಿಯ ಪರವಾನಗಿಯನ್ನು ನೀಡಲಿಲ್ಲ.

2007, ನವೆಂಬರ್ 15ರಂದು, ಎಎಮ್‌ಡಿ 7-ಸರಣಿ ಚಿಪ್‌ಸೆಟ್ಸ್ ಎನ್ನುವ ಒಂದು ಹೊಸ ಚಿಪ್‌ಸೆಟ್‌ ಸರಣಿಗಳ ವಿವರವನ್ನು‌ ಎಎಮ್‌ಡಿ ಘೋಷಿಸಿತು. ಹೆಚ್ಚಿನ ಉತ್ಸಾಹದೊಂದಿಗೆ ಬಹು-ಗ್ರಾಫಿಕ್ಸ್ ಭಾಗಗಳಿಂದ ಆಯ್‌ಜಿಪಿ ಭಾಗಗಳವರೆಗೆ ಉತ್ಪಾದನೆಯನ್ನು ಮಾಡಿತು. ಎಎಮ್‌ಡಿ 480/570/580 ಚಿಪ್‌ಸೆಟ್‌ ಮತ್ತು ಎಎಮ್‌ಡಿ 690 ಸರಣಿ ಚಿಪ್‌ಸೆಟ್‌ಗಳನ್ನು ಸ್ಥಳಾಂತರಿಸುವುದು, ಎಎಮ್‌ಡಿಯ ಮೊದಲ ಬಹು-ಗ್ರಾಫಿಕ್ಸ್ ಚಿಪ್‌ಸೆಟ್‌ ಎಂದು ಗುರುತಿಸುವುದನ್ನು ಒಳಗೊಂಡಿದೆ. ಗುಪ್ತನಾಮ ಹೊಂದಿದ ಸ್ಪೈಡರ್ ಡೆಸ್ಕ್‌ಟಾಪ್ ವೇದಿಕೆಯ ಒಂದು ಭಾಗದಂತೆ ಪ್ರತ್ಯೇಕವಾದ ಗ್ರಾಫಿಕ್ಸ್ ಚಿಪ್‌ಸೆಟ್‌ಗಳನ್ನು 2007, ನವೆಂಬರ್ 15ರಂದು ಪ್ರಾರಂಭಿಸಲಾಯಿತು, ಮತ್ತು ಆಯ್‌ಜಿಪಿ ಚಿಪ್‌ಸೆಟ್‌ಗಳನ್ನು ನಂತರ 2008ರ ವಸಂತಕಾಲದಲ್ಲಿ ಕಾರ್ಟ್‌ವೀಲ್ ಸಂಕೇತನಾಮ ಹೊಂದಿದ ವೇದಿಕೆಯ ಭಾಗವಾಗಿ ಪ್ರಾರಂಬಿಸಿತು.

ಮುಂದಿನ-ಉತ್ಪಾದನೆ ಎಎಮ್‌ಡಿ-800ಎಸ್ ಸರಣಿ ಸರ್ವರ್ ‌ಚಿಪ್‌ಸೆಟ್‌ಗಳೊಂದಿಗೆ ಎಎಮ್‌ಡಿ ಸಹ ಸರ್ವರ್ ಚಿಪ್‌ಸೆಟ್‌ಗಳ ಮಾರುಕಟ್ಟೆಗೆ ವಾಪಸ್ ಬರುವದು, 2009ರ ಕಾಲಾವಧಿಯಲ್ಲಿ ಬಿಡುಗಡೆ ಮಾಡಲು ಆಯೋಜಿಸಲಾಗಿದೆ.

ಎಎಮ್‌ಡಿ ಲೈವ್

[ಬದಲಾಯಿಸಿ]

ಎಎಮ್‌ಡಿ ಲೈವ್! ಬಳಕೆದಾರರ ಇಲೆಕ್ಟ್ರಾನಿಕ್ ಭಾಗದ ಮೇಲೆ ಬೆಳಕು ಚೆಲ್ಲುವ ಇದು ಜೊತೆಗೆ ಯುಟ್ಯೂಬ್‌ನಂತಹ ಅಂತರಜಾಲ ವಿಡಿಯೋ ಸೇವೆಗಳಿಂದ ಎಎಮ್‌ಡಿ ಲೈವ್‌ಗೆ ಇಂಟರ್‌ನೆಟ್‌ ವಿಡಿಯೋಗಳನ್ನು ಚಲಿಸಲು ಇತ್ತೀಚಿಗೆ ಕ್ರಿಯಾಶೀಲ ಟಿವಿ ಪ್ರಾರಂಭವನ್ನು ಘೋಷಿಸಿದ ಒಂದು ಮಾರುಕಟ್ಟೆ ಉದ್ಯಮಶೀಲತೆಯ ವೇದಿಕೆಯಾಗಿದೆ!

ವೈಯಕ್ತಿಕ ಕಂಪ್ಯೂಟರ್ ಜೊತೆ ಸಂಪರ್ಕ ಹೊಂದಿದ ಡಿಜಿಟಲ್ ಟಿವಿಗಳು, ಒಟ್ಟಾಗಿ ಎಎಮ್‌ಡಿ ಲೈವ್‌ಗೆ ಹೊರಮೈಗಳನ್ನು ಬಳಕೆದಾರರಿಗೆ ಸುಲಭವಾಗಿ ಗುರುತಿಸಲು ಪ್ರಮಾಣಿತ ಹೊರಮೈಗಳ ಪರಿಸರವ್ಯವಸ್ಥೆಯ ಯೋಜನೆಯಾಗಿತ್ತು! ಡಿಜಿಟಲ್ ಮನೆ ಅನುಭವದ ವ್ಯವಸ್ಥೆಗಳನ್ನು "ಎಎಮ್‌ಡಿ ಲೈವ್! ರೆಡಿ" ಎನ್ನುವರು.[೧೮]

ಎಎಮ್‌ಡಿ ಕ್ವಾಡ್ ಎಫ್‌ಎಕ್ಸ್‌ ವೇದಿಕೆ

[ಬದಲಾಯಿಸಿ]

ಎಎಮ್‌ಡಿ ಕ್ವಾಡ್ ಎಫ್‌ಎಕ್ಸ್‌ ವೇದಿಕೆ, ಅತ್ಯಂತ ಉತ್ಸಾಹಪೂರ್ಣ ವೇದಿಕೆಯಾಗಿದೆ, ಹೈಪರ್‌ಟ್ರಾನ್ಸ್‌ಪೊರ್ಟ್‌ ಮೂಲಕ ಎರಡು ಪ್ರೊಸೆಸರ್‌ಗಳು ಸಂಪರ್ಕ ಹೊಂದಲು ಅವಕಾಶ ಒದಗಿಸುತ್ತದೆ, ಇದು ಉಭಯ-ಪ್ರೊಸೆಸರ್‌ (2ಪಿ) ಸರ್ವರ್‌ಗಳಿಗೆ ಒಂದೇ ರೀತಿಯ ಸೆಟ್‌ಅಪ್ ಆಗಿದೆ, ಬಫರ್ಡ್‌ ಮೆಮೊರಿ/ರಿಜಿಸ್ಟರ್ಡ್ ಮೆಮೊರಿ ಡಿಆಯ್‌ಎಮ್‌ಎಮ್‌ ಮೊಡ್ಯೂಲ್ಸ್, ಮತ್ತು ಸರ್ವರ್ ಮದರ್‌ಬೋರ್ಡ್‌ಗಳ ಬಳಕೆಯ ಹೊರತಾಗಿ, ಎರಡು ಅಥ್ಲಾನ್ 64 ಎಫ್‌ಎಕ್ಸ್‌-70 ಸರಣಿ ಪ್ರೊಸೆಸರ್‌ಗಳು ಮತ್ತು ಒಂದು ವಿಶೇಷ ಮದರ್‌ಬೋರ್ಡ್‌ಗಳನ್ನು ಪ್ರಚಲಿತ setup ಒಳಗೊಂಡಿದೆ. ನಿಜವಾದ ಆಸಕ್ತಿ ಹೊಂದಿರುವವರಿಗೆ ಎಎಮ್‌ಡಿ ಕರೆಯುವ "ಮೆಗಾಟಾಸ್ಕಿಂಗ್‌" ಗೆ ಹೆಚ್ಚಿನ ಬೇಡಿಕೆಗಳಿಗೆ ಎಎಮ್‌ಡಿ ಪ್ಲಾಟ್‌ಫಾರ್ಮ್‌ನ್ನು ನೀಡಿತು,[೧೯] ಒಂದೇ ಸಿಸ್ಟಮ್‌ನಲ್ಲಿ ಹೆಚ್ಚಿನ ಕೆಲಸಗಳನ್ನು ಮಾಡುವ ಸಾಮರ್ಥ್ಯ. "ಎಫ್‌ಎಎಸ್‌ಎನ್‌8" ಸಂಕೇತನಾಮ ಹೊಂದಿದ ಪೆನೋಮ್ ಎಫ್‌ಎಕ್ಸ್‌ ಪ್ರೊಸೆಸರ್‌ಗಳು ಮತ್ತು ಮುಂದಿನ ತಲೆಮಾರಿನ ಆರ್‌ಡಿ790 ಚಿಪ್‌ಸೆಟ್‌ಗಳ ಪರಿಚಯದೊಂದಿಗೆ ವೇದಿಕೆ ಹೊಸತು ಮಾಡುತ್ತದೆ.

ವಾಣಿಜ್ಯದ ವೇದಿಕೆ

[ಬದಲಾಯಿಸಿ]

ಎಟಿಐ ಸ್ವಾಧೀನತೆಯ ನಂತರ ಮೊದಲ ಎಎಮ್‌ಡಿ ಸರ್ವರ್/ವರ್ಕ್‌ಸ್ಟೇಷನ್ ವೇದಿಕೆ 2009ರ ಸಮಯದಲ್ಲಿ ಬಿಡುಗಡೆಯಾಗುವಂತೆ ಆಯೋಜಿಸಲಾಯಿತು.

ಎಟಿಆಯ್‌ ಸ್ವಾಧೀನತೆಯ ನಂತರ ಫಿಯೊರನೊ ಸಂಕೇತನಾಮ ಹೊಂದಿದ ಎಎಮ್‌ಡಿಯ ಮೊದಲ ಬಹು-ಪ್ರೊಸೆಸ್ಸರ್ ಸರ್ವರ್ ವೇದಿಕೆ, ಎಎಮ್‌ಡಿ ಎಸ್‌ಆರ್‌5690 + ಎಸ್‌ಪಿ5100 ಸರ್ವರ್ ಚಿಪ್‌ಸೆಟ್‌ಗಳು, ಬೆಂಬಲಿಸುವ 45 ಎನ್‌ಎಮ್‌, ಸಂಕೇತನಾಮ ಹೊಂದಿದ ಶಾಂಘೈ ಸಾಕೆಟ್ ಎಫ್+ ಪ್ರೊಸೆಸ್ಸರ್‌ಗಳು ಮತ್ತು ರಿಜಿಸ್ಟರ್ಡ್ ಡಿಡಿಆರ್‌2 ಮೆಮೊರಿಗಳನ್ನು ಒಳಗೊಂಡಿದೆ.

ಮರನೆಲೋ ವೇದಿಕೆ ಬೆಂಬಲಿಸುವ 45 ನ್ಯಾ.ಮೀ, ಸಂಕೇತನಾಮ ಹೊಂದಿದ ಇಸ್ತಾಂಬುಲ್ , ಡಿಡಿಆರ್3 ಮೆಮೊರಿ ಜೊತೆ ಸಾಕೆಟ್ ಜಿ34 ಪ್ರೊಸೆಸರ್‌ಗಳನ್ನು ಮುಂದಿನ ಅಪ್‌ಡೇಟ್‌ ಒಳಗೊಂಡಿದೆ. ಏಕ-ಪ್ರೊಸೆಸರ್‌ ವೇದಿಕೆಯಲ್ಲಿ, ಕೆಟಲುನ್ಯ ಸಂಕೇತನಾಮ ಹೊಂದಿದ ವೇದಿಕೆ, ಸಂಕೇತನಾಮ ಹೊಂದಿದ ಸುಝುಕ 45 ಎನ್‌ಎಮ್ ಕ್ವಾಡ್-ಕೋರ್ ಪ್ರೊಸೆಸ್ಸರ್ ಜೊತೆಗೆ ಎಎಮ್‌ಡಿ ಎಸ್‌ಆರ್5580 + ಎಸ್‌ಪಿ5100 ಚಿಪ್‌ಸೆಟ್‌ ಮತ್ತು ಡಿಡಿಆರ್‌3 ಸಪೊರ್ಟ್‌ನ್ನು ಒಳಗೊಂಡಿದೆ.[೨೦]

64-ಬಿಟ್‌ x86 ವಿನ್ಯಾಸಕ್ಕೆ ಎಎಮ್‌ಡಿಯ x86 ವರ್ಚುವಲೈಜೆಶನ್ ವಿಸ್ತರಣೆಗೆ ಎಎಮ್‌ಡಿ ವರ್ಚುವಲೈಜೆಶನ್ ಎಂದು ಹೆಸರು, ಸಂಕ್ಷೇಪಣ ಎಎಮ್‌ಡಿ-ವಿ ಎಂದೂ ಸಹ ಕರೆಯುವರು, ಮತ್ತು ಕೆಲವೊಮ್ಮೆ "ಪೆಸಿಫಿಕ" ಎನ್ನುವ ಸಂಕೇತ ನಾಮದ ಮೂಲಕ ಗುರುತಿಸಲಾಗುತ್ತದೆ. ಎಎಮ್‌ಡಿ ಪ್ರೊಸೆಸರ್‌ಗಳು ಬಳಸುತ್ತಿರುವ ಸಾಕೆಟ್ ಎಮ್‌2, ಸಾಕೆಟ್ ಎಸ್‌1, ಮತ್ತು ಸಾಕೆಟ್ ಎಫ್‌ಗಳು ಎಎಮ್‌ಡಿ ವರ್ಚುವಲೈಜೆಶನ್ ಬೆಂಬಲವನ್ನು ಒಳಗೊಂಡಿವೆ. ಒಪ್ಟರಾನ್ ಪ್ರೊಸೆಸರ್‌ಗಳ ಎರಡು (8200, 2200 ಮತ್ತು 1200 ಸರಣಿ) ಬಿಡುಗಡೆಯ ಮೂಲಕ ಸಹ ಎಎಮ್‌ಡಿ ವರ್ಚುವಲೈಜೆಶನ್ ಬೆಂಬಲಿಸುತ್ತದೆ. ಒಪ್ಟರಾನ್ ಪ್ರೊಸೆಸರ್‌ಗಳ ಮೂರನೇ ನಿರ್ಮಾಣ (8300 ಮತ್ತು 2300 ಸರಣಿ) ವರ್ಚುವಲೈಜೆಶನ್ ತಾಂತ್ರಿಕತೆಯಲ್ಲಿ ಉನ್ನತಿ ಕಾಣಲಿದೆ. ನಿರ್ದಿಷ್ಟವಾಗಿ ರಾಪಿಡ್ ವರ್ಚುವಲೈಜೆಶನ್ ಇಂಡೆಕ್ಸಿಂಗ್ (ನೆಸ್ಟೆಡ್‌ ಪೇಜ್ ಟೇಬಲ್ಸ್ ಎನ್ನುವ ಅಭಿವೃದ್ಧಿ ಹೆಸರಿನ ಮೂಲಕ ಸಹ ಕರೆಯಲಾಗುತ್ತದೆ), ಜೊತೆಗೆ ಟ್ಯಾಗ್ಡ್ ಟಿಎಲ್‌ಬಿ ಮತ್ತು ಡಿವೈಸ್ ಎಕ್ಸ್‌ಕ್ಲುಸಿವ್ ವೆಕ್ಟರ್(ಡಿಇವಿ).

ಆಯ್/ಒ ವರ್ಚುವಲೈಜೆಶನ್‌ಗೆ "ಎಎಮ್‌ಡಿ ಆಯ್/ಒ ವರ್ಚುವಲೈಜೆಶನ್ ಟೆಕ್ನಾಲಜಿ"ಯನ್ನೂ (ಆಯ್‌ಒಎಮ್‌ಎಮ್‌ಯು ಎಂದೂ ಸಹ ಕರೆಯುವರು) ಸಹ ಎಎಮ್‌ಡಿ ಪ್ರೋತ್ಸಾಹಿಸುತ್ತದೆ.[೨೧] 1.2 ಆವೃತ್ತಿಯಲ್ಲಿ ಎಎಮ್‌ಡಿ ವಿವರವನ್ನು ನವೀಕರಿಸಲಾಗಿದೆ.[೨೨] ವಿವರ ಹೈಪರ್‌ಟ್ರಾನ್ಸ್‌ಪೊರ್ಟ್ ವಿನ್ಯಾಸದ ಉಪಯೋಗವನ್ನು ವಿವರಿಸುತ್ತದೆ.

ಎಎಮ್‌ಡಿಯ ವಾಣಿಜ್ಯ ಪ್ರಾರಂಭಗಳು ಕೆಳಗಿನವುಗಳನ್ನು ಒಳಗೊಂಡಿವೆ:

  • ವರ್ಚುವಲೈಜೆಶನ್, ಸುರಕ್ಷತೆ ಮತ್ತು ನಿರ್ವಹಣೆಗಳಿಗೆ ಎಎಮ್‌ಡಿ ಟ್ರಿನಿಟಿ ಬೆಂಬಲವನ್ನು ಒದಗಿಸುತ್ತದೆ. ಎಎಮ್‌ಡಿ-ವಿ ತಾಂತ್ರಿಕತೆ, ಸಂಕೇತ ನಾಮ ಹೊಂದಿದ ಪ್ರೆಸಿಡಿಯೋ ಟ್ರಸ್ಟೆಡ್ ಕಂಪ್ಯೂಟಿಂಗ್ ವೇದಿಕೆ ತಂತ್ರಜ್ಞಾನ, ಆಯ್/ಒ ವರ್ಚುವಲೈಜೆಶನ್ ಮತ್ತು ಓಪನ್ ಮ್ಯಾನೇಜ್‌ಮೆಂಟ್ ಪಾರ್ಟಿಶನ್‌ಗಳು ಮುಖ್ಯವಾದ ಭಾಗಗಳಾಗಿವೆ.[೨೩]
  • ಎಎಮ್‌ಡಿ ರೈಡನ್, ಜಾಕ್ ಪಿಸಿಯಂತಹ ಮುಂದಿನ ಗ್ರಾಹಕರು[೨೪] ಕೇಂದ್ರ ನಿರ್ವಹಣೆಗೆ ಸಂಕೀರ್ಣ ವ್ಯವಸ್ಥೆಯ ಮೂಲಕ ಬ್ಲೇಡ್ ಸರ್ವರ್‌ಗೆ ಸಂಪರ್ಕ ಹೊಂದಿದ್ದು, ಎಎಮ್‌ಡಿ ಟ್ರಿನಿಟಿ ಲಕ್ಷಣದ ಜೊತೆ ಕ್ಲೈಂಟ್ ಫಾರ್ಮ್ ಫ್ಯಾಕ್ಟರ್ ಪ್ರಮಾಣಗಳನ್ನು ಕಡಿಮೆ ಮಾಡುತ್ತದೆ.
  • ಟೊರೆಂಜಾ, ಕೋಪ್ರೊಸೆಸ್ಸರ್‌ಗಳು ಹೈಪರ್‌ಟ್ರಾನ್ಸ್‌ಪೋರ್ಟ್‌‌ನ ಮೂಲಕ ಪರಸ್ಪರ ಜೊತೆಸೇರುತ್ತವೆ ಮತ್ತು ಪಿಸಿಐಎಕ್ಸ್‌ಪ್ರೆಸ್ (ಹೆಚ್ಚಿನ ಗಮನ ಹೈಪರ್‌ಟ್ರಾನ್ಸ್‍ಪೋರ್ಟ್ ಇರುವ ಕೊಪ್ರೊಸೆಸ್ಸರ್‌ಗಳ ಮೇಲೆ ಇದೆ) ಅಲ್ಲದೆ ಪ್ರೊಸೆಸರ್ ಸಾಕೆಟ್ ವಿನ್ಯಾಸವನ್ನು ಇತರೆ ತಯಾರಕರಿಗೆ ನೀಡುವಲ್ಲಿ ಇದು ಕಾರ್ಯ ನಿರತವಾಗಿತ್ತು.ಸನ್ ಮತ್ತು ಐಬಿಎಮ್ ಉಳಿದ ಸಹಕಾರಿ ಕಂಪೆನಿಗಳಾಗಿವೆ. ಇವು ಪವರ್ 7 ಪ್ರೊಸೆಸರ್‌ಗಳ ಸಾಕೆಟ್‌ ಕಂಪ್ಯಾಟಿಬಲ್ ಆಗಿದ್ದು ಮುಂದಿನ ಇಪ್ಟೆರಾನ್ ಪ್ರೊಸೆಸರ್‌‌ಗಳಿಗೆ ಹೊಂದಿಕೊಳ್ಳುವಂತಿರುತ್ತವೆ. ಈ ನಡೆಗೆ ಪ್ರತಿಸ್ಪರ್ಧಿ ಕಂಪೆನಿ ಇಂಟೆಲ್ ಫ್ರಂಟ್‌ ಸೈಡ್‌ ಬಸ್‌ (FSB) ವಿನ್ಯಾಸವನ್ನು ಬಿಡುಗಡೆ ಮಾಡುವ ಮೂಲಕ ಅಲ್ಲದೆ ಐಬಿಎಮ್‌ ಜೊತೆಗೆ ಪಿಸಿಆಯ್‌ ಎಕ್ಸ್‌ಪ್ರೆಸ್‌ ಮೂಲಕ ಕೊಪ್ರೊಸೆಸ್ಸರ್‌ ಅನ್ನು ಜೋಡಿಸುವ ಇನ್ನೊಂದು ಪ್ರೊಜೆಕ್ಟ್‌ ಜೆನೆಸೊ ಅನ್ನು ಪ್ರಾರಂಭಿಸಿತು.[೨೫]
  • ಸಿಸ್ಟಮ್‌ಗಳ ವಿವಿಧ ಪ್ರಮಾಣಿತ ಪ್ರೊಗ್ರಾಮ್‌ಗಳು ಮತ್ತು ಪ್ಲ್ಯಾಟ್‌ಫಾರ್ಮ್‌ಗಳು: ಎಎಮ್‌ಡಿ ಕಮರ್ಶಿಯಲ್ ಸ್ಟೇಬಲ್ ಇಮೇಜ್ ಪ್ಲ್ಯಾಟ್‌ಫಾರ್ಮ್ (ಸಿಎಸ್‌ಆಯ್‌ಪಿ), ಜೊತೆಗೆ ಎಎಮ್‌ಡಿ ವ್ಯಾಲಿಡೇಟೆಡ್ ಸರ್ವರ್ ಪ್ರೊಗ್ರಾಮ್, ಎಎಮ್‌ಡಿ ಟ್ರು ಸರ್ವರ್ ಸೊಲ್ಯುಷನ್ಸ್, ಎಎಮ್‌ಡಿ ಥರ್ಮಲಿ ಟೆಸ್ಟೆಡ್ ಬೇರ್‌ಬೋನ್ಸ್ ಪ್ಲ್ಯಾಟ್‌ಫಾರ್ಮ್ ಮತ್ತು ಎಎಮ್‌ಡಿ ವ್ಯಾಲಿಡೇಟೆಡ್ ಸರ್ವರ್ ಪ್ರೊಗ್ರಾಮ್, ಎಎಮ್‌ಡಿಯಿಂದ ಬಿಸಿನೆಸ್‌ಗೆ ಪ್ರಮಾಣಿತ ಸಿಸ್ಟಮ್‌ಗಳನ್ನು ಒದಗಿಸುವುದು.

ಡೆಸ್ಕ್‌ಟಾಪ್‌ ಫ್ಲಾಟ್‌ಫಾರ್ಮ್ಸ್‌

[ಬದಲಾಯಿಸಿ]

ಇಂಟೆಲ್‌ನ ನಂತರ ಎ‌ಎಮ್‌ಡಿ 2007ದಿಂದ ತನ್ನ ಡೆಸ್ಕ್‌ಟಾಪ್‌‌ಗಳಿಗೆ ತನ್ನ ಫ್ಲಾಟ್‌ಫಾರ್ಮ್‌ಗಳಾದ ಸ್ಪೈಡರ್ ಅಥವಾ ಡ್ರಾಗನ್ ‌ಗಳಲ್ಲಿ ಸಂಕೇತದ ಹೆಸರುಗಳನ್ನು ನೀಡಲಾರಂಭಿಸಿದರು. ಇಂಟೆಲ್‌ಗಳಂತಲ್ಲದೆ ಇವು ಪ್ರತಿವರ್ಷವೂ ಹೊಸ ವೇದಿಕೆಗಳನ್ನುಸಿದ್ಧಪಡಿಸುತ್ತಿದ್ದರು ಮತ್ತು ಅದರ ವಿಶೇಷವಾಗಿ ಅದರ ಮೇಲೆ ಕೆಂದ್ರೀಕರಿಸುತ್ತಿದ್ದರು. ಫ್ಲಾಟ್‌ಫಾರ್ಮ್‌ ಘಟಕಗಳಾದ ಎ‌ಎಮ್‌ಡಿ ಪ್ರೊಸೆಸರ್ಸ್, ಚಿಪ್‌ಸೆಟ್ಸ್, ಎಟಿಐ ಗ್ರಾಫಿಕ್‌ಗಳು ಮತ್ತು ಇನ್ನಿತರ ವೈಶಿಷ್ಟ್ಯಗಳನ್ನು ಹೊಂದಿದೆ ಆದರೆ ಫ್ಲಾಟ್‌ಫಾರ್ಮ್ ನಿರ್ಮಿಸುವುದನ್ನು ಮುಂದುವರೆಸಿದರು ಮತ್ತು ಇನ್ನಿತರ ವ್ಯಾಪಾರಿಗಳ ವಿಐಎ, ಸಿಸ್‌‍ ಮತ್ತು ಎನ್‌ವಿಡಿಯ ವಸ್ತುಗಳನ್ನು ಮತ್ತು ಇನ್ನಿತರ ನಿಸ್ತಂತು ಮಾರಾಟಗಾರರ ಘಟಕಗಳನ್ನು ಸ್ವಾಗತಿಸಿದರು.

ವೇದಿಕೆಯ ಆಧುನೀಕಣಗಳೆಂದರೆ 2009ರಲ್ಲಿನ 45 ನ್ಯಾ.ಮೀ ಮಾದರಿಯ ಪ್ರೊಸೆಸರ್‌ನೊಂದಿಗೆ ಐಒಎಮ್‌ಎಮ್‌ಯು I/O ವರ್ಚುಯಲೈಸೇಶನ್ ಅಳವಡಿಕೆಗಳು ಮತ್ತು ಎ‌ಎಮ್‌ಡಿ 800 ಚಿಪ್‌ಸೆಟ್‌ ಸಣಿಗಳು.[೨೬]

ಅಂತರ್ಗತ ವ್ಯವಸ್ಥೆಗಳು

[ಬದಲಾಯಿಸಿ]

ಕೈಯಲ್ಲಿ ಬಳಸಬಹುದಾದ ಮತ್ತು ಚಲಿಸವಲ್ಲ ಮೀಡಿಯಾ ಪ್ಲೇಯರ್ ಮಾರುಕಟ್ಟೆಗಾಗಿ ಫೆಬ್ರವರಿ 2002ರಲ್ಲಿ, ಎ‌ಎಮ್‌ಡಿ ತನ್ನ ಆಲ್ಕೆಮಿ ಸಾಲಿನ ಎಮ್‌ಐಪಿಎಸ್‌ ಪ್ರೊಸೆಸರ್‌ಗಳಿಗಾಗಿ ಆಲ್ಕೆಮಿ ಸೆಮಿಕಂಡಕ್ಟ‌ರ್‌ಗಳನ್ನು ತಯಾರಿಸಿದರು. ಜೂನ್‌ 13, 2006ರಲ್ಲಿ ಎ‌ಎಮ್‌ಡಿ ಅಂತರ್ಗತ ಅನ್ವಯಿಕಗಳಿಗಾಗಿ ಎಮ್‌ಐಪಿಎಸ್‌ ಪ್ರೊಸೆಸರ್‌ಗಳ ವಿನ್ಯಾಸಗಳನ್ನೊಳಗೊಂಡಂತೆ ಲೈನನ್ನು ರಾಜ ಮೈಕ್ರೊ ಎಲೆಕ್ಟ್ರಾನಿಕ್ಸ್‌ಗೆ ವರ್ಗಾಯಿಸುವುದಾಗಿ ವ್ಯವಹಾರಿಕವಾಗಿ ಘೋಷಿಸಿತು.[೨೭]

ಆಗಸ್ಟ್‌ 2003ರಲ್ಲಿ ಎ‌ಎಮ್‌ಡಿ ನ್ಯಾಶನಲ್ ಸೆಮಿಕಂಡಕ್ಟರ್‌‌ನಿಂದ ತನ್ನ ಅಂತರ್ಗತx86 ಪ್ರೊಸೆಸರ್ ಉತ್ಪನ್ನಗಳನ್ನು ವೃದ್ಧಿಸಲು ಮೊದಲು ಸೈರಿಕ್ಸ್ ಮೀಡಿಯಾGX ಆಗಿದ್ದ ಜಿಯೋಡ್‌ನ್ನು ಖರೀದಿಸಿದರು. 2004ರ ಎರಡನೇ ತ್ರೈಮಾಸಿಕದಲ್ಲಿ, ಇದು ಥೊರಫ್‌ಬ್ರೆಡ್‌ ಕೆ7 ವಿನ್ಯಾಸವನ್ನು ಆಧರಿಸಿದ ಟಿಡಿಪಿ 25 Wನ ಫ್ಯಾನಿಲ್ಲದ ಪ್ರೊಸೆಸರ್‌ಗಳ ವೇಗದ 667 MHzಮತ್ತು 1 GHz ಮತ್ತು 1.4 GHz ಫ್ಯಾನ್‌ಹೊಂದಿದ ಪ್ರೊಸೆಸರ್‌ ಕಡಿಮೆ ಶಕ್ತಿಯ ಜಿಯೊಡ್‌ NX ಪ್ರೊಸೆಸರ್‌ಗಳು ಪ್ರಸ್ತುತ ಪಡಿಸಿತು. ಈ ತಂತ್ರಜ್ಞಾನವನ್ನು ವಿವಿಧ ಅಂತರ್ಗತ ವ್ಯವಸ್ಥೆಗಳಲ್ಲಿ ಬಳಸುತ್ತಾರೆ (ಉದಾಹರಣೆಗೆ ಕ್ಯಾಸಿನೊ ಸ್ಲಾಟ್ ಯಂತ್ರಗಳು ಮತ್ತು ಕಿಯೋಸ್ಕ್‌ಗಳು), ಅವೆಂದರೆ ಎಷ್ಯಾ ಮಾರುಕಟ್ಟೆಯಲ್ಲಿ ಅನೇಕ ಯುಪಿಎಮ್‌ಸಿ ವಿನ್ಯಾಸಗಳು, ಅದರೊಂದಿಗೆ ಒಎಲ್‌ಪಿಸಿ ಪ್ರಪಂಚದಾದ್ಯಂತ ಅಭಿವೃದ್ಧಿ ಹೊಂದುತ್ತಿರುವ ದೇಶದ ಮಕ್ಕಳಿಗೆ ವಿತರಿಸುವ ದುಬಾರಿಯಲ್ಲದ ಲ್ಯಾಪ್‌ಟಾಪ್‌ ಕಂಪ್ಯೂಟರ್‌ಗಳಾದ XO-1 ಕಂಪ್ಯೂಟರ್‌.

ಕಳೆದ ಹಲವು ವರ್ಷಗಳಲ್ಲಿ ಎ‌ಎಮ್‌ಡಿ ಎ‌ಎಮ್‌ಡಿ ಒಪ್ಟೆರಾನ್‌ ಪ್ರೊಸೆಸರ್‌ನೊಂದಿಗೆ ಪ್ರಾರಂಭವಾಗಿ ತನ್ನ ಅಂತರ್ಗತ ಉತ್ಪನ್ನಗಳ ಸಾಲಿ‌ನ ಮೂಲಕ 64-ಬಿಟ್‌ ಪ್ರೊಸೆಸರ್‌ಗಳನ್ನು ಬಿಡುಗಡೆ ಮಾಡಿತು. ಸನ್ನೆ ಬಳಸಿದ ಎತ್ತರದ ಥ್ರೊಪುಟ್‌ ಮೂಲಕ ಹೈಪರ್‌ಟ್ರಾನ್ಸ್‌ಪೊರ್ಟ್‌ ಮತ್ತು ನೇರವಾಗಿ ಸಂಪರ್ಕಿಸಿದ ವಿನ್ಯಾಸಗಳಂತಹ ಸರ್ವರ್‌ ಶ್ರೇಣಿಯ ಪ್ರೊಸೆಸರ್‌ಗಳನ್ನು ಮೇಲಿನ ಸ್ಥರದ ಟೆಲಿಕಾಂ ಮತ್ತು ಸಂಗ್ರಹ ಅನ್ವಯಿಕಗಳಿಗೆ ಗುರಿಯಾಗಿಸಲಾಗಿದೆ. 2006ರಲ್ಲಿ ಎ‌ಎಮ್‌ಡಿ ಅದರ ಅಂತರ್ಗತ ಉತ್ಪನ್ನದ ಸಾಲಿಗೆ ಎ‌ಎಮ್‌ಡಿ ಅಥ್ಲಾನ್‌, ಎ‌ಎಮ್‌ಡಿ ಟುರಿಯಾನ್ ಮೊಬೈಲ್, ಎ‌ಎಮ್‌ಡಿ ಸೆಂಪ್ರಾನ್ ಪ್ರೊಸೆಸರ್‌ಗಳನ್ನು ಸೇರಿಸಿತು. ಎ‌ಎಮ್‌ಡಿ ಒಪ್ಟರಾನ್‌ನಂತೆ 64-ಬಿಟ್‌ ಸೂಚನಾ ಪೆಟ್ಟಿಗೆ ಮತ್ತು ನೇರವಾಗಿ ಸಂಪರ್ಕಿಸಿದ ವಿನ್ಯಾಸವನ್ನು ಆದರೆ ಕಡಿಮೆ ಶಕ್ತಿಯ ಹಂತಗಳಲ್ಲಿ ಸನ್ನೆ ಬಳಸಲಾಗಿದೆ, ಈ ಸೆಸ್ಸರ್‌ಗಳು ವಿವಿಧ ಸಾಂಪ್ರದಾಯಿಕ ಅಂತರ್ಗತ ಅನ್ವಯಿಕಗಳಿಗೆ ಹೆಚ್ಚು ಸೂಕ್ತವಾಗಿದೆ. ಪೂರ್ಣ 2007 ಮತ್ತು 2008ರಲ್ಲಿ ಎ‌ಎಮ್‌ಡಿ ತನ್ನ ಅಂತರ್ಗತ ಉತ್ಪನ್ನಗಳ ಸಾಲಿನಲ್ಲಿ ಸಿಂಗಲ್-ಕೋರ್ ಮೊಬೈಲ್ ಎ‌ಎಮ್‌ಡಿ ಸೆಂಪ್ರಾನ್ ಮತ್ತು ಎ‌ಎಮ್‌ಡಿ ಅಥ್ಲಾನ್ ಪ್ರೊಸೆಸರ್‌ಗಳು ಮತ್ತು ಡ್ಯೂಯಲ್-ಕೋರ್ ಎ‌ಎಮ್‌ಡಿ ಅಥ್ಲಾನ್ X2 ಮತ್ತು ಎ‌ಎಮ್‌ಡಿ ಟುರಿಯಾನ್‌ ಪ್ರೊಸೆಸರ್‌ಗಳನ್ನು ಸೇರಿಸಿತು ಮತ್ತು ಈಗ 8W ಟಿಡಿಪಿ ಮೊಬೈಲ್ ಎ‌ಎಮ್‌ಡಿ ಸೆಂಪ್ರಾನ್ ಮತ್ತು ಎ‌ಎಮ್‌ಡಿ ಅಥ್ಲಾನ್ ಪ್ರೊಸೆಸರ್‌ಗಳನ್ನೊಳಗೊಂಡ ಅಂತರ್ಗತ 64-ಬಿಟ್‌ ಪರಿಹಾರಗಳನ್ನು ಲಭ್ಯವಿರುವುದಕ್ಕಿಂತ ಉತ್ತಮವಾಗಿ ಬೆಂಬಲಿಸುವ ಮಲ್ಟಿ ಪ್ರೊಸೆಸರ್ ವ್ಯವಸ್ಥೆಯ ಸನ್ನೆ ಬಳಸಿದ ಮಲ್ಟಿ-ಕೋರ್ ಎ‌ಎಮ್‌ಡಿ ಒಪ್ಟರಾನ್ ಪ್ರೊಸೆಸರ್‌ಗಳಿಗಾಗಿ ಬಿಡುಗಡೆ ಮಾಡಿತು.[೨೮]

ಎಪ್ರಿಲ್‌ 2007, ಎ‌ಎಮ್‌ಡಿ ಅಂತರ್ಗತ ವಿನ್ಯಾಸಕ್ಕಾಗಿ M690T ಒಗ್ಗೂಡಿದ ರೇಖನಗಳ ಚಿಪ್‌ಸೆಟ್‌ನ್ನು ಬಿಡುಗಡೆ ಮಾಡಿತು. ಹೆಚ್ಚಿನ ಕಾರ್ಯ ನಿರ್ವಹಣೆಯ 3D ಮತ್ತು ವೀಡಿಯೋಗಳಂತಹ ಬೇಡಿಕೆಯ ಅಂಕೀಯ ಸಂಕೇತಗಳು, ಕಿಯೊಸ್ಕ್ ಮತ್ತು ಪಾಯಿಂಟ್ ಆಫ್ ಸೇಲ್ ಅನ್ವಯಿಕಗಳನ್ನು ಬಯಸುವ ಅಂತರ್ಗತ ಅನ್ವಯಿಕಗಳನ್ನು ಗುರಿಯಾಗಿರಿಸಿಕೊಂಡು ಎ‌ಎಮ್‌ಡಿ ಪೂರ್ಣ ಪ್ರೊಸೆಸರ್‌ ಮತ್ತು ಚಿಪ್‌ಸೆಟ್‌ ಪರಿಹಾರಗಳನ್ನು ನಿರ್ಮಿಸಿತು. M690Eಯ ನಂತರದ ಅಂತರ್ಗತ ಅನ್ವಯಿಕಗಳಿಗಾಗಿ ತಯಾರಿಸಿದ M690T ಒಐಎಮ್‌ಗಳಿಗಾಗಿ ಅನುಮತಿಸುವ ಮೈಕ್ರೊವಿಶನ್‌ನನ್ನು ಬಯಸುವ ಟಿವಿಯ ಔಟ್‌ಪುಟ್‌ನ್ನು ತೆಗೆದುಹಾಕಿತು, ಮತ್ತು ಇಬ್ಬಗೆಯ ಸ್ವತಂತ್ರ ಡಿವಿಐ ಅಂತರ ಸಂಪರ್ಕ ಸಾಧನಗಳನ್ನು ಸಾಧ್ಯವಾಗಿಸುವ ಇಬ್ಬಗೆಯ ಟಿಎಮ್‌ಡಿಎಸ್ ಔಟ್‌ಪುಟ್‌ನ್ನು ಸ್ಥಾನಿಕವಾಗಿ ಬೆಂಬಲಿಸುವಂತೆ ಮಾಡಿತು.

ಫ್ಲಾಶ್‌ ತಂತ್ರಜ್ಞಾನ

[ಬದಲಾಯಿಸಿ]

ಫ್ಲ್ಯಾಶ್‌‍ ಮೆಮೊರಿ ತಯಾರಿಕೆಯಲ್ಲಿ ಜಗತ್‌ಪ್ರಸಿದ್ಧವಾಗಿದ್ದ ಎಎಮ್‌ಡಿಯು ಸಿಪಿಯು ನಿರ್ಮಾಣ ಕಾರ್ಯದಲ್ಲಿಯೂ ಸಹ ತನ್ನನ್ನು ತೊಡಗಿಸಿಕೊಂಡಿದೆ ಎಂಬುದು ಜನಸಾಮಾನ್ಯರಿಗೆ ಗೊತ್ತಿಲ್ಲ. 1993ರಲ್ಲಿ, ಎ‌ಎಮ್‌ಡಿ ಎಫ್‌ಎಎಸ್‌ಎಲ್ ಎಂದು ಕರೆಯಲಾಗುವ ಫುಜಿಸುನೊಂದಿಗೆ 50-50 ಸಹಭಾಗಿತ್ವವನ್ನು ಹೊಂದಿತು, ಮತ್ತು 2003ರಲ್ಲಿ ಎಫ್‌ಎಎಸ್‌ಎಲ್ ಎಲ್‌ಎಲ್‍ಸಿ ಎಂಬ ಹೊಸ ಕಂಪನಿಯಾಯಿತು. ಡಿಸೆಂಬರ್‌ 2005ರಲ್ಲಿ ಎಸ್‌ಪಿಎಸ್‌ಎನ್‌ ಎನ್ನುವ ಟಿಕ್ಕರ್ ಸಂಕೇತದಡಿಯಲ್ಲಿ ಜಂಟಿ ಸಹಭಾಗಿತ್ವವನ್ನು ಹೊಂದಿತು, ಎ‌ಎಮ್‌ಡಿ ಷೇರುಗಳು 37%ಗಳಷ್ಟು ಕುಸಿಯಿತು.

ಎ‌ಎಮ್‌ಡಿ ಫ್ಲಾಶ್‌ ಮೆಮೊರಿ ಸಾಧನಗಳ ಮಾರುಕಟ್ಟೆಯಲ್ಲಿ ನೇರವಾಗಿ ಪಾಲ್ಗೊಳ್ಳುವುದಿಲ್ಲ. ಈಗ ಫುಜಿಸು ಮತ್ತು ಸ್ಪ್ಯಾನ್ಶನ್‌ನೊಂದಿಗೆ ಡಿಸೆಂಬರ್‌ 21, 2005ರಂತೆ ಎ‌ಎಮ್‌ಡಿ ಸ್ಪರ್ಧಿಸದ ಒಪ್ಪಂದದೊಂದಿಗೆ ಪ್ರವೇಶಿಸಿದೆ. ಅದು ಫ್ಲಾಶ್ ಮೆಮೊರಿ ಮಾತ್ರ ಹೊಂದಿರುವ ಸೆಮಿಕಂಡಕ್ಟರ್‌ ಸಾಧನಗಳನ್ನು ಪರೋಕ್ಷ ಅಥವಾ ಅಪರೋಕ್ಷವಾಗಿ ಸ್ವತಂತ್ರವಾಗಿ ತಯಾರಿಸುವ ಅಥವಾ ವಿತರಿಸುವ ವ್ಯವಹಾರದಲ್ಲಿ ತೊಡಗುವುದಿಲ್ಲವೆಂದು ಒಪ್ಪಿಕೊಂಡಿದೆ (ಒಂದು ಚಿಪ್, ಬಹುರೀತಿಯ ಚಿಪ್ ಅಥವಾ ವ್ಯವಸ್ಥೆಯ ಸಾಧನಗಳನ್ನೂ ಸೇರಿಸಿ).[೨೯]

ಮೊಬೈಲ್ ಫ್ಲಾಟ್‌ಫಾರ್ಮ್ಸ್‌‌

[ಬದಲಾಯಿಸಿ]
ಚಿತ್ರ:Better by Design Sticker -1.png

ಎ‌ಎಮ್‌ಡಿ 2003ರಲ್ಲಿ ಚಲಿಸಬಹುದಾದ ಗಣನೆಯ ಫ್ಲಾಟ್‍ಫಾರ್ಮ್ ತಯಾರಿಸಲು ಆರಂಭಿಸಿತು, ಆದರೆ ಕೆಲವು ಜಾಹಿರಾತು ಮತ್ತು ಪ್ರಚಾರದಿಂದಾಗಿ ಹಲವರಿಗೆ ತಿಳಿಯಲಿಲ್ಲ. ವೇದಿಕೆಯು ಮೊಬೈಲ್ ಅಥ್ಲಾನ್ 64 ಅಥವಾ ಮೊಬೈಲ್ ಸೆಂಪ್ರಾನ್ ಪ್ರೊಸೆಸರ್‌ಗಳನ್ನು ಬಳಸಿತು.

"ವಿನ್ಯಾಸದಲ್ಲಿ ಉತ್ತಮಗೊಳಿಸುವಿಕೆಯ" ಭಾಗವಾಗಿ ತೆರೆದ ಚಲಿಸಬಲ್ಲ ವೇದಿಕೆಯು ಫೆಬ್ರವರಿ 2007ರಲ್ಲಿ ಮೇ 2007ದೊಳಗಾಗಿ 65 ನ್ಯಾ.ಮೀ ತಯಾರಿಸುವಿಕೆಯ ವಿಧಾನದ ಟುರಿಯಾನ್‌ 64 X2ದೊಂದಿಗೆ ಸಾಮಾನ್ಯವಾಗಿ ಲಭ್ಯವಾಗುವ ಘೋಷಣೆಯನ್ನು ಮಾಡಿತು, ಮತ್ತು ಮೂರು ಪ್ರಮುಖ ಭಾಗಗಳನ್ನು ಹೊಂದಿತ್ತು: ಎ‌ಎಮ್‌ಡಿ ಪ್ರೊಸೆಸರ್‌, ಒಗ್ಗೊಡಿದ ರೇಖನಗಳನ್ನು ಹೊಂದಿದ ಎನ್‌ವಿಡಿಯಾ ಅಥವಾ ಎಟಿಐ ಟೆಕ್ನಾಲಜೀಸ್‌ಗಳಿಂದ ರೇಖನಗಳು(ಐಜಿಪಿ), ಮತ್ತು ಅಥೆರೊಸ್, ಬ್ರಾಡ್‌‍ ಕಾಮ್, ಮಾರ್ವೆಲ್, ಕ್ವಾಲ್‌‍ ಕಾಮ್‌ ಅಥವಾ ರಿಯಲ್ಟೆಕ್‌ನಿಂದ ನಿಸ್ತಂತು ಸಂಪರ್ಕ ಪರಿಹಾರಗಳು.

ಪುಮ ವೇದಿಕೆ ಮತ್ತು ಟುರಿಯಾನ್‌ ಅಲ್ಟ್ರಾ ಪ್ರೊಸೆಸರ್‌ ಜೂನ್‌ 4, 2008ರಲ್ಲಿ ಬಿಡುಗಡೆಯಾಯಿತು. ಭವಿಷ್ಯದಲ್ಲಿ ಎ‌ಎಮ್‌ಡಿ ಸೇಬೈನ್/ಫ್ಯೂಶನ್ ವೇದಿಕೆಯಲ್ಲಿ 3D ರೇಖನ ಸಾಮರ್ಥ್ಯದ (ಫೂಶನ್ ) ಕ್ವಾಡ್-ಕೋರ್ ಪ್ರೊಸೆಸರ್‌ಗಳನ್ನು 2011ರೊಳಗೆ ಪ್ರಾರಂಭಿಸುವ ಯೋಜನೆಯನ್ನು ಹಾಕುತ್ತಿದೆ.

ಇತರೆ ತಯಾರಿಕೆಗಳು

[ಬದಲಾಯಿಸಿ]
  • 2015ರೊಳಗೆ ಪ್ರಪಂಚದ ಅರ್ಧದಷ್ಟು ಜನತೆ ಕೊಳ್ಳಬಹುದಾದ ಕಂಪ್ಯೂಟರ್‌ಗಳಲ್ಲಿ ಅಂತರಜಾಲದಿಂದ ಅಂಕೀಯ ಅಂತರ್ವೇಶನವನ್ನು ಸಂಪರ್ಕಿಸುವ ಗುರಿಯನ್ನು ಹೊಂದಿದ 50x15ನ್ನು ಪ್ರಾರಂಭಿಸಿತು.
  • ಐಬಿಎಮ್, ಸನ್ ಮತ್ತು ಮೈಕ್ರೊಸಾಫ್ಟ್‌ನೊಂದಿಗೆ ಎ‌ಎಮ್‌ಡಿ ಕಡಿಮೆ ಶಕ್ತಿಯನ್ನು ಬಳಸುವ ಗ್ರಿಡ್‌ಗಳಿಗಾಗಿ ದಿ ಗ್ರೀನ್ ಗ್ರಿಡ್‌ನ್ನು [೩೦] ಸ್ಥಾಪಿಸಿತು. ಇಂಟೆಲ್ ಸ್ಥಾಪಿಸಿದಾಗ ಇಂತಹ ಒಕ್ಕೂಟಗಳಿಂದ ದೂರವಿತ್ತು ಮತ್ತು 2007ರ ಪ್ರಾರಂಭದಲ್ಲಿ ಸೇರಿತು.[೩೧]
  • ಎಸ್‌ಐಎಮ್ಎಫ್‌ಐಆರ್‌ಇ ಎನ್ನುವ ಸಂಕೇತ ಹೆಸರನ್ನು ಹೊಂದಿದ ಇಂಟೆರೊಪೆರಾಬಿಲಿಟಿ ಪರಿಕ್ಷಾ ಸಾಧನವನ್ನು ಡೆಸ್ಕ್‌ಟಾಪ್‌ ಮತ್ತು ಮೊಬೈಲ್ ಆರ್ಕಿಟೆಕ್ಚರ್ ಫಾರ್ ಸಿಸ್ಟಮ್ ಹಾರ್ಡ್‌ವೇರ್‌(ಡಿಎಎಸ್‌ಹೆಚ್‌)ನ ತೆರೆದ ವಿನ್ಯಾಸಕ್ಕಾಗಿ ತಯಾರಿಸಿತು.

ಸಾಫ್ಟ್‌ವೇರ್‌‍

[ಬದಲಾಯಿಸಿ]
  • ಎಕ್ಸ್‌ಟೆಕ್ಶನ್ ಫಾರ್ ಸಾಫ್ಟ್‌ವೇರ್ ಪ್ಯಾರಲಲಿಸಮ್(xSP), ಮಲ್ಟಿ-ಥ್ರೆಡೆಡ್ ಮತ್ತು ಮಲ್ಟಿ-ಕೋರ್ ಪ್ರೊಸೆಸಿಂಗ್‌‌ನ ಪ್ರೊಗ್ರಾಮ್‌ಗಳ ವೇಗವನ್ನು ಹೆಚ್ಚಿಸುವ ಗುರಿಯನ್ನು ಹೊಂದಿ ಟೆಕ್ನಾಲಜಿ ಅನಾಲಿಸ್ಟ್ ಡೆ 2007ರಲ್ಲಿ ಘೋಷಿಸಿತು. ಆಗಸ್ಟ್‌ 2007ರಿಂದ ಚರ್ಚಿಸಲಾಗಿದ್ದ ಲೈಟ್ ಬೈಟ್ ಪ್ರೊಫೈಲಿಂಗ್(LWP)ನ್ನು ರನ್‌ಟೈಮಿನೊಂದಿಗೆ ಹಾರ್ಡ್‌ವೇರನ್ನು ಪರಿಶೀಲಿಸುವ ಆಂತರಿಕತೆಯನ್ನೊದಗಿಸಿ ಮಾಹಿತಿಯ ಪರಿಶೀಲನೆಯ ಕುರಿತಾದ ವಿಧಾನಗಳನ್ನು ನಿರ್ವಹಿಸಲು ಮತ್ತು ಸಾಫ್ಟ್‌ವೇರನ್ನು ಮರು-ವಿನ್ಯಾಸಗೊಳಿಸಲು ಮಲ್ಟಿ-ಕೋರ್ ಮತ್ತು ಮಲ್ಟಿ-ಥ್ರೆಡೆಡ್ ಪ್ರೊಗ್ರಾಮ್‌ಗಳನ್ನೊ ಸಹ ಅತ್ಯುತ್ತಮವಾಗಿಸಬೇಕಾಗುತ್ತದೆ. ಮತ್ತೊಂದೆಂದರೆ ಸ್ಟ್ರೀಮಿಂಗ್ ಎಸ್‌ಐ‌ಎಮ್‌ಡಿ ಎಕ್ಸ್‌ಟೆಕ್ಶನ್‌(SSE) ಸೂಚನಾ ಪೆಟ್ಟಿಗೆಯ ವಿಸ್ತರಣಿಕೆಯಾದ SSE5.
  • ಎ‌ಎಮ್‌ಡಿ ವೇದಿಕೆಯಲ್ಲಿ ಒಪನ್‌ಸೆಲಾರೀಸ್ ಮತ್ತು ಸನ್ xVMನ್ನು ವರ್ಧಿಸಲು ಸನ್ ಮೈಕ್ರೊಸಿಸ್ಟಮ್ಸ್‌ನೊಂದಿಗೆ ಕೆಲಸ ಮಾಡುವುದನ್ನೂ ಸೇರಿದಂತೆ ಎ‌ಎಮ್‌ಡಿ ತೆರೆದ ಮೂಲದ ಯೋಜನೆಗಳಿಗೆ ನೆರವಾಯಿತು.[೩೨] ಎ‌ಎಮ್‌ಡಿಯೂ ಸಹ ತನ್ನದೇ ಆದ Open64 ಸಂಕಲಕ ವಿತರಣೆ ಮತ್ತು ಇದರ ಸಮುದಾಯದ ಬದಲಾವಣೆಗಳಿಗೆ ಮರಳುವುದಕ್ಕೆ ನೆರವಾಯಿತು.[೩೩]
  • 2008ರಲ್ಲಿ ಎ‌ಎಮ್‌ಡಿ ಲೊಲೆವೆಲ್ ಪ್ರೊಗ್ರಾಮಿಂಗ್ ಸ್ಪೆಸಿಫಿಕೇಶನ್‌ಗಳನ್ನು ತನ್ನ ಜಿಪಿಯುಗಳಿಗಾಗಿ ಮತ್ತು ಎ‌ಎಮ್‌ಡಿ ರೇಖನಗಳ ಕಾರ್ಡ್‌ಗಳಿಗೆ ಡ್ರೈವರ್‌ಗಳನ್ನು ಅಭಿವೃದ್ಧಿ ಪಡಿಸಲು X.ಆರ್ಗ್ ಫೌಂಡೇಶನ್ನೊಂದಿಗೆ ಕೆಲಸ ಮಾಡಲು ಬಿಡುಗಡೆ ಮಾಡಿತು.[೩೪][೩೫]
  • ಇತರೆ ಎ‌ಎಮ್‌ಡಿ ತೆರೆದ ಮೂಲಗಳ ಯೋಜನೆಗಳೆಂದರೆ ಎ‌ಎಮ್‌ಡಿ ಪರ್ಫಾರ್ಮೆನ್ಸ್ ಲೈಬ್ರರಿ ಮತ್ತು ಎ‌ಎಮ್‌ಡಿ ಕೋರ್ ಮ್ಯಾತ್ ಲೈಬ್ರರಿ.

ಎಟಿಐಯಿಂದ ತಂತ್ರಜ್ಞಾನ

[ಬದಲಾಯಿಸಿ]

ಎಟಿಐಯನ್ನು ಆಕ್ರಮಿಸಿದ ನಂತರ ಎ‌ಎಮ್‌ಡಿ ಕೆಲವು ಎರಡೂ ಕಂಪನಿಯ ಉತ್ಪನ್ನಗಳನ್ನು ಪುನಃ ರಚಿಸಿತು. ಎ‌ಎಮ್‌ಡಿ ಬ್ರಾಂಡಿನಡಿಯಲ್ಲಿ ಕೆಲವು ಉತ್ಪನ್ನಗಳನ್ನು ಪುನಃ ತಯಾರಿಸಲಾಯಿತು, ಮೊಬೈಲ್ ಫೋನ್‌ಗಳಿಗಾಗಿ ಇಮ್ಯಾಜ್ಯೋನ್ಮತ್ತು ಹ್ಯಾಂಡ್‌ಹೆಲ್ಡ್ ಸಾಧನಗಳು, ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್‌ಗಳಿಗಾಗಿ ಕ್ಸಿಲ್ಲೆಯಾನ್ (ಅಂಕೀಯ ಟಿವಿ ಸೆಟ್‌ಗಳು), (ಎ‌ಎಮ್‌ಡಿ ಚಿಪ್‌ಸೆಟ್‌ಗಳಿಗೆ) ಎ‌ಎಮ್‌ಡಿ ಪ್ರೊಸೆಸರ್‌ಗಳ ವೇದಿಕೆಗಾಗಿ ಮತ್ತು ಹಿಂದೆ ಎ‌ಎಮ್‌ಡಿ ಸ್ಟ್ರೀಮ್ ಪ್ರೊಸೆಸರ್‌ ಎಂದು ಕರೆಯಲಾಗುತ್ತಿದ್ದ ಜಿಪಿಜಿಪಿಯು ಗಣಕೀಕೃತ ಲೈ‌ನ್‌ಅಪ್‌ ಫೈರ್‌‌ಸ್ಟ್ರೀಮ್‌ಗಳಿಗಾಗಿ ಎಟಿಐ ಎಕ್ಸ್‌ಪ್ರೆಸ್ ಚಿಪ್‌ಸೆಟ್‌ಗಳು. ಇನ್ನೊ ಕೆಲವರು ಎಟಿಐ ಬ್ರಾಂಡಿಗ್‌ನ ಬಳಕೆಯನ್ನು ತಡೆಹಿಡಿದರು, ಅವೆಂದರೆ ರೇಖನಗಳ ರಡೆಯಾನ್, ಮತ್ತು ಇಂಟೆಲ್ ಪ್ರೊಸೆಸರ್‌ಗಳ ಚಿಪ್‌ಸೆಟ್.

ಉತ್ಪಾದನೆ ಮತ್ತು ತಯಾರಿಕೆ

[ಬದಲಾಯಿಸಿ]

2009ರ ಪ್ರಾರಂಭದಲ್ಲಿ ಎ‌ಎಮ್‌ಡಿಯ ತಯಾರಿಕಾ ಘಟಕವನ್ನು ಬದಲಾಯಿಸಿದ ನಂತರ, ಗ್ಲೋಬಲ್‌ಫೌಂಡರೀಸ್ ಎ‌ಎಮ್‌ಡಿಯ ಪ್ರೊಸೆಸರ್‌ಗಳ ತಯಾರಿಕೆಯ ಹೊಣೆಯನ್ನು ಹೊತ್ತುಕೊಂಡಿತು.

ಗ್ಲೋಬಲ್‌ಫೌಂಡರೀಸ್‌ನ ಮುಖ್ಯ ಮೈಕ್ರೊಪ್ರೊಸೆಸರ್ ತಯಾರಿಕೆಯನ್ನು ಜರ್ಮನಿಯ ಡ್ರೆಸ್ಡೆನ್‌ಗೆ ಸ್ಥಳಾಂತರಿಸಲಾಯಿತು. ಅದಲ್ಲದೆ ಹೆಚ್ಚು ಒಗ್ಗೂಡಿಸಲ್ಪಟ್ಟ ಮೈಕ್ರೊಪ್ರೊಸೆಸರ್‌ಗಳನ್ನು ಎ‌ಎಮ್‌ಡಿಯ ಪರವಾನಗಿ ಪಡೆದ ಬೇರೊಬ್ಬ ತಯಾರಕರು ಥೈವಾನಿನಲ್ಲಿ ತಯಾರಿಸಲಾರಭಿಸಿದರು. 2003ರಿಂದ 2005ರವರೆಗೆ ಅದೇ ಸಂಕೀರ್ಣದಲ್ಲಿ ಚಿಪ್‌ಗಳ ಉತ್ಪಾದನಾ ಸಂಖ್ಯೆಯನ್ನು ಹೆಚ್ಚಿಸಲು ಎರಡನೇ ತಯಾರಿಕಾ ಘಟಕವನ್ನು ನಿರ್ಮಿಸಿದರು (300 mm 90 ನ್ಯಾ.ಮೀ ವಿಧಾನಎಸ್‌ಒಐ), ಹೀಗಾಗಿ ಇಂಟೆಲ್‌ನೊಂದಿಗೆ ಹೆಚ್ಚು ಸ್ಪರ್ಧಿಸುವಂತಾಯಿತು. ಎ‌ಎಮ್‌ಡಿಯ 36 ವರ್ಷಗಳ ಕಾರ್ಯಾಚರಣೆಯನ್ನು ಗುರುತಿನೊಂದಿಗೆ ಹೊಸ ತಯಾರಿಕಾ ಘಟಕವನ್ನು "ಫ್ಯಾಬ್ 36" ಆರಂಭಿಸಿತು, ಮತ್ತು 2007ರ ಮಧ್ಯದಲ್ಲಿ ಪೂರ್ಣ ತಯಾರಿಕೆಯನ್ನು ಆರಂಭಿಸಿತು. ಫ್ಯಾಬ್‌ 36ನ್ನು ಫ್ಯಾಬ್ 1 ಎಂದು ಹೆಸರು ಬದಲಿಸಲಾಯಿತು, ಗ್ಲೊಬಲ್‌ಫೌಂಡರೀಸ್‌ನ ನಿರ್ಮಾಣದ ಸಮಯದಲ್ಲಿ ಎ‌ಎಮ್‌ಡಿಯ ತಯಾರಿಕಾ ಘಟಕವನ್ನು ಬದಲಾಯಿಸಲಾಯಿತು. ಜುಲೈ 2007ರಲ್ಲಿ ಎ‌ಎಮ್‌ಡಿ ಫ್ಯಾಬ್ 1 ಮಾಡ್ಯೂಲ್ 1ರಿಂದ 90 nmಯ 65 ನ್ಯಾ.ಮೀ ಬದಲಾವಣೆಯನ್ನು ಪೂರ್ಣಗೊಳಿಸಿದರು. ನಂತರ ಅವರು ಅವರ ಗಮನವನ್ನು 45 ನ್ಯಾ.ಮೀ ಪರಿವರ್ತನೆಯೆಡೆಗೆ ಹರಿಸಿದರು.[೩೬]

ಕಾರ್ಪೋರೇಟ್ ವ್ಯವಹಾರಗಳು

[ಬದಲಾಯಿಸಿ]

ಸಹಭಾಗಿತ್ವಗಳು

[ಬದಲಾಯಿಸಿ]

ಎ‌ಎಮ್‌ಡಿ ತಂತ್ರದ ಕೈಗಾರಿಕೆಯ ಸಹಭಾಗಿತ್ವವನ್ನು ಅದರ ವ್ಯವಹಾರದಲ್ಲೂ ಮತ್ತು ಇಂಟೆಲ್‌ನ ಪ್ರಾಭಲ್ಯ ಮತ್ತು ಸಂಪನ್ಮೂಲಗಳನ್ನು ನಿಭಾಯಿಸಲು ಬಳಸಿಕೊಂಡಿತು.

ಅಭಿವೃದ್ಧಿಗೊಂಡ ಹೈಪರ್‌ಟ್ರಾನ್ಸ್‌ಪೋರ್ಟ್‌ಗಳನ್ನೊಳಗೊಂಡಂತೆ ಎ‌ಎಮ್‌ಡಿ ಮತ್ತು ಅಲ್ಫಾ ಪ್ರೊಸೆಸರ್‌‌ನ ನಡುವಿನ ಸಹಭಾಗಿತ್ವವು ಪಾಯಿಂಟ್-ಟು-ಪಾಯಿಂಟ್ ಅಂತರ್‌ಸಂಪರ್ಕ ಗುಣಮಟ್ಟವನ್ನು ಅಂತಿಮಗೊಳಿಸಲು ಕೈಗಾರಿಕಾ ಗುಣಮಟ್ಟದ ಮಂಡಳಿಯನ್ನು ಹೊಸದಾಗಿ ಪ್ರಾರಂಭಿಸಿತು. ಇದನ್ನು ಈಗ ಆಧುನಿಕ ಎ‌ಎಮ್‌ಡಿ ಪ್ರೊಸೆಸರ್‌ ಸ್ಪರ್ಧಾತ್ಮಕ ಮದರ್‌ಬೋರ್ಡ್‌ಗಳಲ್ಲಿ ಬಳಸಲಾಗುತ್ತಿದೆ.

ಎ‌ಎಮ್‌ಡಿ ಐಬಿಎಮ್‌ನೊಂದಿಗೆ ತಂತ್ರಾಧಾರಿತ ಸಹಭಾಗಿತ್ವವನ್ನು ಮಾಡಿದರು, ಇದರಡಿಯಲ್ಲಿ ಎ‌ಎಮ್‌ಡಿಯು ಸಿಲಿಕಾನ್ ಆನ್ ಇನ್ಸುಲೇಟರ್ (ಎಸ್‌ಒಐ) ತಯಾರಿಕಾ ತಂತ್ರಜ್ಞಾನವನ್ನು ಮತ್ತು 90 ನ್ಯಾ.ಮೀ ಅಳವಡಿಕೆಯ ಮೇಲಿನ ವಿವರವಾದ ಸಲಹೆಗಳನ್ನು ಪಡೆದರು. ಎ‌ಎಮ್‌ಡಿಯು 32 ನ್ಯಾ.ಮೀ ಮತ್ತು 22 ನ್ಯಾ.ಮೀ ತಯಾರಿಕೆಯ ಸಂಬಂಧಿತ ತಂತ್ರಜ್ಞಾನದ ಸಹಭಾಗಿತ್ವವು 2011ರವರೆಗೆ ಮುಂದುವರೆಯಿತು.[೩೭] ಇದಲ್ಲದೆ ಎ‌ಎಮ್‌ಡಿಯು ಹೆಚ್‌ಪಿ, ಕಾಂಪ್ಯಾಕ್, ಎಎಸ್‌ಯುಎಸ್, ಅಲಿಯೆನ್‌ವೇರ್, ಏಸರ್, ಇವೆಶ್ಯಾಮ್‌ ಟೆಕ್ನಾಲಜಿ, ಡೆಲ್ ಮತ್ತು ಇನ್ನಿತರ ಕಂಪನಿಗಳೊಂದಿಗೆ ಪ್ರೊಸೆಸರ್‌ ವಿತರಣೆ ಮತ್ತು ಮಾರಾಟದ ಸೌಲಭ್ಯಕ್ಕಾಗಿ ಲಘು ಸಹಬಾಗಿತ್ವವನ್ನು ಮಾಡಿಕೊಂಡಿತು.

ಮೇ 18, 2006ರ ವರ್ಷಾಂತ್ಯದಲ್ಲಿ ಡೆಲ್ ಎ‌ಎಮ್‌ಡಿಯ ಒಪ್ಟರಾನ್ ಚಿಪ್‌ಗಳ ಆಧಾರದ ಹೊಸ ಸರ್ವರ್‌ಗಳನ್ನು ಬಳಕೆಗೆ ತಂದಿತು, ಹೀಗೆ ಇಂಟೆಲ್‌ನೊಂದಿಗಿನ ಪ್ರತ್ಯೇಕವಾದ ಸಹಭಾಗಿತ್ವವು ಕೊನೆಗೊಂಡಿತು. ಸೆಪ್ಟೆಂಬರ್‌ 2006ರಲ್ಲಿ ಡೆಲ್ ತನ್ನ ಡೆಸ್ಕ್‌ಟಾಪ್‌ ಲೈನ್-ಅಪ್‌ಗೆ ಎ‌ಎಮ್‌ಡಿ ಅಥ್ಲಾನ್ X2ಗಳನ್ನೊದಗಿಸಲು ಆರಂಭಿಸಿತು.

ಎ‌ಎಮ್‌ಡಿಯೂ ಸಹ ಸ್ಕುಡೆರಿಯಾ ಫೆರಾರಿ ಮರ್ಲ್‌ಬೊರೊ F1 ಟೀಮ್‌ಗೆ 2002ರಿಂದ ಮತ್ತು ಡಿಸ್ಕವರಿ ಚಾನಲ್ ಪ್ರೊ ಸೈಕ್ಲಿಂಗ್ ಟೀಮ್‌ಗೆ 2004ರಿಂದ ಅನುದಾನ ನೀಡಲು ಆರಂಭಿಸಿತು ಮತ್ತು 2009ರಲ್ಲಿ ಎ‌ಎಮ್‌ಡಿ ಯುಎಸ್‌ಎಲ್‌ ವಿಸ್ತರಣಾ ತಂಡ ಆಸ್ಟಿನ್ ಅಜೆದ್ ಎಫ್‌ಸಿಯ ಜೆರ್ಸಿ ಅನುದಾನವನ್ನೂ ನೀಡಿತು.

ಇಂಟೆಲ್‌ನೊಂದಿಗಿನ ಮೊಕದ್ದಮೆ

[ಬದಲಾಯಿಸಿ]

ಎ‌ಎಮ್‌ಡಿಯು ದೀರ್ಘ ಕಾಲದಿಂದ ತನ್ನ ಮಾಜಿ ಪಾಲುದಾರ ಮತ್ತು x86 ತಯಾರಕಇಂಟೆಲ್‌ನೊಂದಿಗೆ ಮೊಕದ್ದಮೆಯನ್ನೆದುರಿಸುತಿತ್ತು.[೩೮][೩೯][೪೦]

  • 1986ರಲ್ಲಿ ಇಂಟೆಲ್ ಎ‌ಎಮ್‌ಡಿನೊಂದಿಗೆ ಐಬಿಎಮ್‌ಗಾಗಿ ಇಂಟೆಲ್‌ಗಳ ಮೈಕ್ರೊ-ಚಿಪ್‌ಗಳನ್ನು ತಯಾರಿಸುವ ಒಪ್ಪಂದವನ್ನು ಮುರಿದಿತ್ತು; 1987ರಲ್ಲಿ ಎ‌ಎಮ್‌ಡಿಯು ದಾವೆ ಹೂಡಿತು ಮತ್ತು ಎ‌ಎಮ್‌ಡಿಯ ಪರವಾಗಿ 1992ರಲ್ಲಿ ತೀರ್ಮಾನವಾಗುತ್ತದೆ. ಇಂಟೆಲ್ ಮರುಅರ್ಜಿ ಸಲ್ಲಿಸಿದಾಗ ಕ್ಯಾಲಿಫೋರ್ನಿಯಾ ಸರ್ವೊಚ್ಚ ನ್ಯಾಯಾಲಯದಲ್ಲಿ ಕೊನೆಗೊಂಡಿತು. 1994ರಲ್ಲಿ ತೀರ್ಪನ್ನು ಎತ್ತಿ ಹಿಡಿಯಿತು ಮತ್ತು ಕರಾರು ಭಂಗದ ಹಾನಿಯನ್ನು ಭರಿಸುವಂತೆ ಆದೇಶಿಸಿತು.
  • 1990ರಲ್ಲಿ ಇಂಟೆಲ್ ತನ್ನ 287 ಮೈಕ್ರೊಕೋಡನ್ನು ಅಕ್ರಮವಾಗಿ ಬಳಸುವ ವಿರುದ್ಧ ಕೃತಿಸ್ವಾಮ್ಯವನ್ನು ಪಡೆದುಕೊಂಡಿತು. 1994ರಲ್ಲಿ ಈ ಮೊಕದ್ದಮೆಯು ನ್ಯಾಯಾದೀಶ ಎ‌ಎಮ್‌ಡಿಯ ಇಂಟೆಲ್‌ನ ಮೈಕ್ರೊಕೋಡನ್ನು 486 ತಲೆಮಾರಿನಾದ್ಯಂತ ತನ್ನ ಮೈಕ್ರೊಪ್ರೊಸೆಸರ್‌ನಲ್ಲಿ ಬಳಸುವ ಹಕ್ಕನ್ನು ಪ್ರತಿಪಾದಿಸಿದರು.
  • 1997ರಲ್ಲಿ, ಇಂಟೆಲ್ ಎ‌ಎಮ್‌ಡಿ ಮತ್ತು ಸೈರಿಕ್ಸ್ ಕಾರ್ಪೊರೇಶನ್ ವಿರುದ್ಧ ಎಮ್‌ಎಮ್‌ಎಕ್ಸ್‌ನ್ನು ಬಳಸಿದ್ದಕ್ಕಾಗಿ ಮೊಕದ್ದಮೆಯನ್ನು ಹೂಡಿತು. ಎ‌ಎಮ್‌ಡಿ ಮತ್ತು ಇಂಟೆಲ್‌ನೊಂದಿಗೆ ಎ‌ಎಮ್‌ಡಿ ಎಮ್‌ಎಮ್‌ಎಕ್ಸ್‌ ಇಂಟೆಲ್‌ನ ಗುರುತನ್ನು ಹೊಂದುವುದನ್ನು ಅಂಗೀಕರಿಸಿ, ಮತ್ತು ಇಂಟೆಲ್ ಎ‌ಎಮ್‌ಡಿಗೆ ಎ‌ಎಮ್‌ಡಿ ಕೆ6 ಎಮ್‌ಎಮ್‌ಎಕ್ಸ್‌ ಪ್ರೊಸೆಸರ್‌ಗಳನ್ನು ಮಾರುವ ಹಕ್ಕನ್ನು ನೀಡಿ ಪರಿಹರಿಸಿಕೊಂಡಿತು‌.
  • 2005ರಲ್ಲಿನ ತನಿಖೆಯ ನಂತರ ಜಪಾನ್ ಫೆಡರಲ್ ಟ್ರೇಡ್ ಕಮಿಶನ್ ಇಂಟೆಲ್‌ನ ಮೇಲೆ ಅನೇಕ ಅಪಾದನೆಗಳನ್ನು ಹೊರಿಸಿತು. ಜೂನ್‌ 27, 2005ರಲ್ಲಿ ಎ‌ಎಮ್‌ಡಿ ಜಪಾನಿನಲ್ಲಿ ಇಂಟೆಲ್‌ನ ವಿರುದ್ಧವಾದ ಟ್ರಸ್ಟ್ ವಿರೋಧಿ ದಾವೆಯನ್ನು ಗೆದ್ದಿತು ಮತ್ತು ಅದೇ ದಿನ, ಎ‌ಎಮ್‌ಡಿ ಇಂಟೆಲ್‌ನ ವಿರುದ್ಧವಾಗಿ ಬ್ರಾಡ್ ಟ್ರಸ್ಟ್ ಆಂಟಿಟ್ರಸ್ಟ್‌ ಮೊಕದ್ದಮೆಯನ್ನು ಡೆಲವೈ‌ರ್‌ನ ಯು.ಎಸ್. ಫೆಡರಲ್ ಜಿಲ್ಲಾ ನ್ಯಾಯಾಲಯದಲ್ಲಿ ಹೂಡಿತು. ಮೊಕದ್ದಮೆಯು ವಿಶ್ವ ಮಾರುಕಟ್ಟೆಯಲ್ಲಿ ರಹಸ್ಯ ರಿಯಾಯಿತಿಗಳನ್ನು ವ್ಯವಸ್ಥಿತವಾಗಿ, ವಿಶೇಷ ರಿಯಾಯಿತಿಯನ್ನು, ಮತ್ತು ಇನ್ನಿತರ ಇಂಟೆಲ್ ಯೋಜನೆಗಳನ್ನು ಎ‌ಎಮ್‌ಡಿ ಪ್ರೊಸೆಸರ್‌ಗಳ ವಿರುದ್ದ ಬಳಸಿದೆ ಎಂದು ಆರೋಪಿಸಿತು. ಇದರಿಂದಾಗಿ ನ್ಯಾಯಾಲಯವು ಪ್ರಮುಖ ಕಂಪ್ಯೂಟರ್ ತಯಾರಿಕಾ ಕಂಪನಿಗಳಾದ ಏಸರ್‌, ಡೆಲ್, ಲೆನೊವೊ, ಹೆಚ್‌ಪಿ ಮತ್ತು ತೋಷಿಬಾ ಕಂಪನಿಗಳಿಗೆ ಆಜ್ಞಾ ಪತ್ರಗಳನ್ನು ಜಾರಿಮಾಡಿತು.
  • ನವೆಂಬರ್‌ 2009ರಲ್ಲಿ ಇಂಟೆಲ್ ಎ‌ಎಮ್‌ಡಿ $1.25 ಬಿಲಿಯನ್‌ ಪಾವತಿಸಲು ಒಪ್ಪಿತು ಮತ್ತು ಐದು ವರ್ಷಗಳ ಪರವಾನಗಿ ಕ್ರಾಸ್-ಲೈಸೆನ್ಸಿಂಗ್ ಒಪ್ಪಂದವನ್ನು ಅಂಗೀಕರಿಸಿ ತಮ್ಮ ನಡುವಿನ ಎಲ್ಲಾ ಮೊಕದ್ದಮೆಗಳನ್ನು ಪರಿಹರಿಸಿಕೊಂಡವು.[೪೧]

ಘಟನೆಗಳು ಮತ್ತು ಪ್ರಕಟಣೆಗಳು

[ಬದಲಾಯಿಸಿ]

ಎ‌ಎಮ್‌ಡಿ ತನ್ನ ಮುಂಬರುವ ಉತ್ಪನ್ನಗಳು ಮತ್ತು ಯೋಜನೆಗಳ ಬಗೆಗಿನ ಮಾಹಿತಿಗಳನ್ನು ನೀಡಲು ನಿರಾಕರಿಸಿದರೂ, ವಾರ್ಷಿಕ ಅನಾಲಿಸ್ಟ್‌ ದಿನವನ್ನಾಚರಿಸಿ ತನ್ನ ಪ್ರಮುಖ ಭವಿಷ್ಯತ್ತಿನ ತಂತ್ರಜ್ಞಾನಗಳ ವಿವರಣೆಯನ್ನು ನೀಡಿತು ಮತ್ತು ವ್ಯವಹಾರಿಕ ತಂತ್ರಜ್ಞಾನದ ಮಾರ್ಗದರ್ಶನಗಳನ್ನು ಪ್ರದರ್ಶಿಸಿತು. ವರ್ಷದ ಮದ್ಯಭಾಗದಲ್ಲಿ ನಡೆದ "ಟೆಕ್ನಾಲಜಿ ಅನಾಲಿಸ್ಟ್ ಡೇ" ಕಾರ್ಯಕ್ರಮದಲ್ಲಿ ಇದು ಮುಂಬರುವ ತಂತ್ರಜ್ಞಾನ ಮತ್ತು ಶೈಲಿಯೆಡೆಗೆ ಮುಖ್ಯವಾಗಿ ಗಮನ ಕೆಂದ್ರೀಕರಿಸಿತು. ವರ್ಷಾಂತ್ಯದಲ್ಲಿ ನಡೆದ "ಟೆಕ್ನಾಲಜಿ ಅನಾಲಿಸ್ಟ್ ಡೇ"ಯಲ್ಲಿ ಕಂಪನಿಯ ಹಿಂದಿನ ವರ್ಷದ ಆರ್ಥಿಕ ಕಾರ್ಯನಿರ್ವಹಣೆಯ ಬಗೆಗೆ ಗಮನ ಹರಿಸಿತು.[೪೨]

ಇದಲ್ಲದೆ ಈ ಕಾರ್ಯಕ್ರಮಗಳಲ್ಲಿ ಎ‌ಎಮ್‌ಡಿಯು ಲಿಖಿತ ಹಸ್ತಪ್ರತಿಗಳನ್ನೂ ಪ್ರಕಟಿಸಿತು. ಎ‌ಎಮ್‌ಡಿ ಆಕ್ಸಲರೇಟ್ ಮತ್ತು ಸ್ಥಗಿತಗೊಂಡಿದ್ದ ಎಎಮ್‌ಡಿಎಡ್ಜ್‌ಗಳನ್ನೂ ಪ್ರಕಟಿಸಿತು‌. ಎ‌ಎಮ್‌ಡಿ ಆಕ್ಸಲರೇಟ್ ನಿಯತಕಾಲಿಕವು ಜಿಫ್ ಡೆವಿಸ್ ಮೀಡಿಯಾದ ಮೂಲಕ ಪ್ರಕಟಗೊಳ್ಳುತಿತ್ತು. ಇದು ಎಸ್‌ಎಮ್‌ಇ ವ್ಯವಹಾರಿಕ ಅನ್ವಯಿಕಗಳ ಮೇಲೆ ಬೆಳೆಕು ಚೆಲ್ಲುತಿತ್ತು. ಹಾಗೆಯೇ ಎ‌ಎಮ್‌ಡಿ ಎಡ್ಜ್‌ ಎ‌ಎಮ್‌ಡಿಯ ತಂತ್ರಜ್ಞಾನದ ಮೇಲೆ ಬೆಳಕು ಚೆಲ್ಲುತಿತ್ತು. ಜಿಫ್ ಡೆವಿಸ್ ಮೀಡಿಯಾ ಚಾಪ್ಟರ್ 11ನಲ್ಲಿ ದಿವಾಳಿತನದ ವಿರುದ್ಧ ರಕ್ಷಣೆಯನ್ನು ಕೋರಿತು. ಎ‌ಎಮ್‌ಡಿ ಆಕ್ಸಲರೇಟ್ ನಿಯತಕಾಲಿಕೆಯು ಐಡಿಜಿಯ ಮೂಲಕ ಪ್ರಕಟಣೆಯಾಯಿತು. ಎ‌ಎಮ್‌ಡಿ ಸರ್ವರ್ ಪರವಾದ ಒಪ್ಟರಾನ್ ಪ್ರೊಸೆಸರ್‌ಗಳು ಮತ್ತು ಅದಕ್ಕೆ ಸಂಬಂಧಿತ ವ್ಯವಹಾರದ ಪರಿಹಾರಗಳಿಗೆ ಪ್ರಚಾರ ನೀಡಲು ವಿದ್ಯುಜ್ಜನಿತ ನ್ಯೂಸ್‌ಲೆಟರ್‌ಗಳನ್ನೂ ಹೊಂದಿದೆ.

ಇವನ್ನೂ ನೋಡಿ

[ಬದಲಾಯಿಸಿ]

ಟೆಂಪ್ಲೇಟು:Portal box

ಉಲ್ಲೇಖಗಳು

[ಬದಲಾಯಿಸಿ]
  1. AMD Headquarters, Retrieved July 26, 2010.
  2. ೨.೦ ೨.೧ "AMD 10k sec filing". AMD. ಫೆಬ್ರವರಿ 19, 2010. Archived from the original on ಮೇ 22, 2013. Retrieved ನವೆಂಬರ್ 15, 2010.
  3. "Semiconductor market declines less than expected". iSuppli. ನವೆಂಬರ್ 23, 2009.
  4. "AMD Completes ATI Acquisition and Creates Processing Powerhouse". NewsWire. ಅಕ್ಟೋಬರ್ 25, 2006. Archived from the original on ಆಗಸ್ಟ್ 23, 2011. Retrieved ನವೆಂಬರ್ 15, 2010.
  5. "Justice Dept. subpoenas AMD, NVIDIA". New York Times. ಡಿಸೆಂಬರ್ 1, 2006. Archived from the original on ಜನವರಿ 25, 2008. Retrieved ನವೆಂಬರ್ 15, 2010.
  6. Vance, Ashlee (ಅಕ್ಟೋಬರ್ 7, 2008). "A.M.D. to Split Into Two Operations". The New York Times. Retrieved ಮಾರ್ಚ್ 26, 2010.
  7. "AMD K5". CPU-INFO.COM. Archived from the original on ಆಗಸ್ಟ್ 18, 2007. Retrieved ಜುಲೈ 11, 2007.
  8. Hesseldahl, Arik (ಜುಲೈ 6, 2000). "Why Cool Chip Code Names Die". Forbes Inc. Retrieved ಜುಲೈ 14, 2007. {{cite news}}: Cite has empty unknown parameter: |coauthors= (help)
  9. Huynh, Jack (ಫೆಬ್ರವರಿ 10, 2003). "The AMD Athlon XP Processor with 512KB L2 Cache" (PDF). amd.com. AMD. Archived from the original (PDF) on ಏಪ್ರಿಲ್ 14, 2004. Retrieved ಅಕ್ಟೋಬರ್ 2, 2007. {{cite news}}: Cite has empty unknown parameter: |coauthors= (help)
  10. ಸ್ಕಾಟ್ ವಾಸನ್. "ವರ್ಕ್‌ಸ್ಟೇಶನ್ ಪ್ಲಾಟಫಾರ್ಮ್ಸ್ ಕಂಪೇರ್ಡ್ Archived November 27, 2006[Date mismatch], ವೇಬ್ಯಾಕ್ ಮೆಷಿನ್ ನಲ್ಲಿ.", techreport.com , ದಿ ಟೆಕ್ ರಿಪೋರ್ಟ್, ಎಲ್‌ಎಲ್‌ಸಿ., 2003-09-15, ಜುಲೈ 29, 2007ರಂದು ಮರುಸಂಪಾದಿಸಲಾಗಿದೆ.
  11. ಸ್ಕಾಟ್ ವಾಸನ್. "ಎ‌ಎಮ್‌ಡಿಯ ಅಥ್ಲಾನ್ 64 ಪ್ರೊಸೆಸರ್‌ Archived November 27, 2006[Date mismatch], ವೇಬ್ಯಾಕ್ ಮೆಷಿನ್ ನಲ್ಲಿ.", techreport.com , ದಿ ಟೆಕ್ ರಿಪೋರ್ಟ್, ಎಲ್‌ಎಲ್‌ಸಿ., ಸೆಪ್ಟೆಂಬರ್‌ 23, 2003. ಜುಲೈ 13, 2007ರಂದು ಮರುಸಂಪಾದಿಸಲಾಗಿದೆ.
  12. ಸ್ಕಾಟ್ ವಾಸನ್. "ಎ‌ಎಮ್‌ಡಿಯ ಡ್ಯೂಯಲ್-ಕೋರ್ ಆಪ್ಟರಾನ್‌ ಪ್ರೊಸೆಸರ್‌ಗಳು Archived July 2, 2007[Date mismatch], ವೇಬ್ಯಾಕ್ ಮೆಷಿನ್ ನಲ್ಲಿ.", techreport.com , ದಿ ಟೆಕ್ ರಿಪೋರ್ಟ್, ಎಲ್‌ಎಲ್‌ಸಿ., ಎಪ್ರಿಲ್‌ 21, 2005. ಜುಲೈ 13, 2007ರಂದು ಮರುಸಂಪಾದಿಸಲಾಗಿದೆ.
  13. ಸ್ಕಾಟ್ ವಾಸನ್. "ಎ‌ಎಮ್‌ಡಿ's ಅಥ್ಲಾನ್ 64 X2 ಪ್ರೊಸೆಸರ್‌ಗಳು Archived July 8, 2007[Date mismatch], ವೇಬ್ಯಾಕ್ ಮೆಷಿನ್ ನಲ್ಲಿ.", techreport.com , ದಿ ಟೆಕ್ ರಿಪೋರ್ಟ್, ಎಲ್‌ಎಲ್‌ಸಿ., ಮೇ 9, 2005. ಜುಲೈ 13, 2007ರಂದು ಮರುಸಂಪಾದಿಸಲಾಗಿದೆ.
  14. ಎ‌ಎಮ್‌ಡಿ ಅನೌನ್ಸ್‌ಮೆಂಟ್‌, ಸೆಪ್ಟೆಂಬರ್‌ 17, 2007ರಂದು ಮರುಸಂಪಾದಿಸಲಾಗಿದೆ
  15. ೧೫.೦ ೧೫.೧ Stokes, Jon (ಫೆಬ್ರವರಿ 8, 2010). "AMD reveals Fusion CPU+GPU, to challege Intel in laptops". Ars Technica. Retrieved ಫೆಬ್ರವರಿ 9, 2010.
  16. ೧೬.೦ ೧೬.೧ Hruska, Joel (ಜುಲೈ 16, 2010). "AMD Flip-Flops: Llano Later, Bobcat Bounding Forward". HotHardware.
  17. "AMD64 Architecture Programmer's Manual Volume 6: 128-Bit and 256-Bit XOP, FMA4 and CVT16 Instructions" (PDF). AMD. ಮೇ 1, 2009.
  18. ಅಫಿಶಿಯಲ್ ಪ್ರೆಸ್ ರಿಲೀಸ್‌ (ಎ‌ಎಮ್‌ಡಿ ಲೈವ್‌! ರೆಡಿ ಆ‍ಯ್‌೦ಡ್ ಆ‍ಯ್‌ಕ್ಟೀವ್ ಇನಿಶಿಯೇಟಿವ್‌)
  19. ಅಫಿಶಿಯಲ್ ಪ್ರೆಸ್ ರಿಲೀಸ್‌ (ಎ‌ಎಮ್‌ಡಿ ಕ್ವಾಡ್ FX ವೇದಿಕೆಯೊಂದಿಗಿನ ಡ್ಯೂಯಲ್ ಸಾಕೆಟ್ ನೇರವಾಗಿ ಸಂಪರ್ಕಿಸಿದ ವಿನ್ಯಾಸ ರಿಡಿಫೈನ್ಸ್ ಹೈ ಎಂಡ್ ಕಂಪ್ಯೂಟಿಂಗ್ ಫಾರ್ ಮೆಗಾಟಾಸ್ಕಿಂಗ್ ಎಂಥೂಸಿಯಾಸ್ಟ್)
  20. ಎ‌ಎಮ್‌ಡಿ ಸರ್ವರ್/ವರ್ಕ್‌ಸ್ಟೇಶನ್ ಪ್ಲಾಟ್‌ಫಾರ್ಮ್ ರೋಡ್‌ಮ್ಯಾಪ್, ಅಕ್ಟೋಬರ್‌ 4, 2008ರಂದು ಮರುಸಂಪಾದಿಸಲಾಗಿದೆ
  21. "AMD press release".
  22. "AMD IOMMU specification 1.2" (PDF). Archived from the original (PDF) on ಫೆಬ್ರವರಿ 11, 2006.
  23. ಎ‌ಎಮ್‌ಡಿ ಅನಾಲಿಸ್ಟ್ ಡೇ ಪ್ರಸಂಟೇಶನ್, ಪುಟ 24, ಜುಲೈ 14, 2007ರಂದು ಮರುಸಂಪಾದಿಸಲಾಗಿದೆ
  24. "Jack PC page". Archived from the original on ನವೆಂಬರ್ 22, 2010. Retrieved ನವೆಂಬರ್ 15, 2010.
  25. "Intel Geneseo press release".
  26. ಮಾರಿಯೋ ರಿವಾಸ್‌ ಪ್ರಸ್ತುತ ಪಡಿಸಿದ ಎ‌ಎಮ್‌ಡಿ ಫಿನಾನ್ಶಿಯಲ್ ಅನಾಲಿಸ್ಟ್ ಡೇ 2007 ಪ್ರಸಂಟೇಶನ್,ಪುಟ 24ರಿಂದ 28ರವರೆಗೆ. 2007ರ ಡಿಸೆಂಬರ್ 1ರಂದು ಮರುಸಂಪಾದಿಸಲಾಯಿತು.
  27. "AMD Alchemy processor product line acquired by Raza Microelectronics". TechNews. technologynewsdaily.com. ಜೂನ್ 14, 2006. Archived from the original on ಜನವರಿ 2, 2007. Retrieved ಜುಲೈ 11, 2007. {{cite news}}: Cite has empty unknown parameter: |coauthors= (help)
  28. http://www.ಎಎಮ್ಡಿ.com/us/products/embedded/Pages/embedded.aspx
  29. "Press release".
  30. "The Green Grid website".
  31. "Intel set to join AMD-backed Green Grid".
  32. "AMD Expands Charter for the OpenSolaris OS and Sun xVM at the AMD Operating System Research Center" (Press release). AMD. ಮೇ 5, 2008.
  33. "x86 Open64 Compiler Suite". AMD. ಏಪ್ರಿಲ್ 20, 2009.
  34. "AMD Details Strategic Open Source Graphics Driver Development Initiative" (Press release). AMD. ಸೆಪ್ಟೆಂಬರ್ 7, 2007.
  35. "Index of /docs/AMD". x.org.
  36. ರಿಕ್ ಸಿ. ಹಾಡ್ಗಿನ್‌. ಎ‌ಎಮ್‌ಡಿ 45 ನ್ಯಾ.ಮೀ.ನ ಮುನ್ನಡೆಯಲ್ಲಿದ್ದಾಗ, ಅದರ ವೈರಿ ಇಂಟೆಲ್ ಕಾರ್ಪೋರೇಶನ್ ಒಂದು ವಷ ಮುಂದಿತ್ತು ಮತ್ತು ತನ್ನ 32 ನ್ಯಾ.ಮೀ ತಂತ್ರಜ್ಞಾನವನ್ನು ಬಿಡುಗಡೆಗೊಳಿಸಿತು (ಇಂಟೆಲ್ "ಟಿಕ್-ಟಾಕ್" ಅಡ್ವಾನ್ಸ್‌ಮೆಂಟ್ ರೋಡ್‌ಮ್ಯಾಪ್)"ರ್ಯಾಪ್-ಆನ್: ಎ‌ಎಮ್‌ಡಿ ಔಟ್‌ಲೈನ್ಸ್ ಅ ಬ್ರೈಟ್ ಫ್ಯೂಚರ್ ಎಟ್ ಟೆಕ್ನಾಲಜಿ ಅನಾಲಿಸ್ಟ್ ಡೇ Archived April 24, 2008[Date mismatch], ವೇಬ್ಯಾಕ್ ಮೆಷಿನ್ ನಲ್ಲಿ.", tgdaily.com , ಟೈಗರ್‌ವಿಶನ್ ಮೀಡಿಯಾ, 2007-07-26, ಪುಟ.4. ಜುಲೈ 13, 2007ರಂದು ಮರುಸಂಪಾದಿಸಲಾಗಿದೆ.
  37. ಎ‌ಎಮ್‌ಡಿ ಅನಾಲಿಸ್ಟ್ ಡೇ ಜೂನ್‌ 2006 ಪ್ರಸಂಟೇಶನ್‌[೧], ಸ್ಲೈಡ್ 10
  38. "AMD-INTEL LITIGATION HISTORY" (PDF). AMD. Archived from the original (PDF) on ಜನವರಿ 8, 2007. Retrieved ಜನವರಿ 12, 2007.
  39. "Summary U.S. antitrust complaint against Intel" (PDF). Archived from the original (PDF) on ಸೆಪ್ಟೆಂಬರ್ 21, 2005.
  40. "Full text of U.S. antitrust complaint against Intel" (PDF). Archived from the original (PDF) on ಜುಲೈ 2, 2005.
  41. ಇಂಟೆಲ್, ಎ‌ಎಮ್‌ಡಿ ಸೆಟ್ಲ್‌ ಲೀಗಲ್ ಡಿಸ್ಪ್ಯೂಟ್ಸ್. "[೨]"
  42. ಎ‌ಎಮ್‌ಡಿ ಫಿನಾನ್ಶಿಯಲ್ ಅನಾಲಿಸ್ಟ್ ಡೇ 2007 page, ಡಿಸೆಂಬರ್‌ 14, 2007ರಂದು ಮರುಸಂಪಾದಿಸಲಾಗಿದೆ


ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಟೆಂಪ್ಲೇಟು:ATI

37°23′12.016″N 121°59′55.550″W / 37.38667111°N 121.99876389°W / 37.38667111; -121.99876389