ವಿಷಯಕ್ಕೆ ಹೋಗು

ಅರಕಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಖೈನ್ ರಾಜ್ಯ
ಅರಕಾನ್ ರಾಜ್ಯ
Myanma transcription(s)
 • Arakanesera-khai-pray-ni
ಬರ್ಮಾದಲ್ಲಿ ರಾಖೈನ್ ರಾಜ್ಯವನ್ನು ಗುರುತಿಸುವ ಭೂಪಟma
ಬರ್ಮಾದಲ್ಲಿ ರಾಖೈನ್ ರಾಜ್ಯವನ್ನು ಗುರುತಿಸುವ ಭೂಪಟma
ದೇಶ ಬರ್ಮಾ
ಪ್ರದೇಶಪಶ್ಚಿಮ ಕರಾವಳಿ
ರಾಜಧಾನಿಸಿಟ್ವೇ (Local voices- Saitwe) (In British Occupied Time- Akyab)
Government
 • ಮುಖ್ಯ ಮಂತ್ರಿHla Maung Tin[] (USDP)
Area
 • Total೩೬,೭೮೦ km (೧೪,೨೦೦ sq mi)
Population
 (2010)
 • Total೩೮,೩೬,೦೦೦
 • Density೧೦೦/km (೨೭೦/sq mi)
Demographics
 • EthnicitiesRakhine, Chin,[] Kaman,
 • ReligionsTheravada Buddhism, Muslim, ಹಿಂದೂ ಧರ್ಮ and others
Time zoneUTC+06:30 (MST)

ಅರಕಾನ್ ಇದು ಮ್ಯಾನ್ಮಾರ್ ದೇಶದ ಒಂದು ರಾಜ್ಯ. ಇದರ ಈಗಿನ ಹೆಸರು ರಾಖೈನ್ ರಾಜ್ಯ ಎಂದಾಗಿದೆ. ಮ್ಯಾನ್ಮಾರ್‌ನ ಪಶ್ಚಿಮ ಕರಾವಳಿಯಲ್ಲಿ ಹರಡಿಕೊಂಡಿದೆ.೩೬,೭೬೦ ಚದರ ಕಿ,ಮೀ ವಿಸ್ತೀರ್ಣವಿದ್ದು,ಸಿಟ್ವೇ ಇದರ ರಾಜಧಾನಿ ಪಟ್ಟಣವಾಗಿದೆ.

ಇತಿಹಾಸ

[ಬದಲಾಯಿಸಿ]
Silver coin of king Nitichandra, Arakan. Brahmi legend "NITI" in front, Shrivatasa symbol on the reverse. 8th century CE.

ಅರಕಾನ್ ಅಥವಾ ರಾಖೈನ್‍ನ ಇತಿಹಾಸ ಸುಮಾರು ಐದು ಸಾವಿರ ವರ್ಷಗಳಷ್ಟು ಹಳೆಯದೆಂದು ಹೇಳಲಾಗಿದ್ದರೂ,ಪುರಾವೆಗಳು ದೊರೆಯುವುದು ಪ್ರ.ಶ.ಪೂ.೩೪ನೆಯ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದ 'ಧನ್ಯವತಿ'(ಧಾನ್ಯವಡಿ) ಸಾಮ್ರಾಜ್ಯದಿಂದ.ಈ ಸಾಮ್ರ್ಯಾಜ್ಯ ಪ್ರ.ಶ.೩೨೭ರಲ್ಲಿ ಅವನತಿ ಹೊಂದಿದ ನಂತರ ಅಧಿಕಾರಕೇಂದ್ರ ಹತ್ತಿರದಲ್ಲೇ ಪ್ರವರ್ಧಮಾನಕ್ಕೆ ಬಂದ ವೈಥಾಲಿ ಪಟ್ಟಣದ ಸಾಮ್ಯಾಜ್ಯಕ್ಕೆ ಸೇರಿತು.ಇವರು ಪ್ರ.ಶ.೮೧೮ರವರೆಗೆ ಆಳಿದರು. ಈ ಕಾಲವು ಈ ಪ್ರಾಂತ್ಯದ ಸುವರ್ಣಯುಗವೆಂದು ಹೇಳಬಹುದು.ಸಂಸ್ಕೃತಿ, ಶಿಲ್ಪಶಾಸ್ತ್ರ ಮತ್ತು ಬೌದ್ಧ ಧರ್ಮ ಮೂರೂ ಉಚ್ಛ್ರಾಯ ಸ್ಥಿತಿಯನ್ನು ಮುಟ್ಟಿತ್ತು.ಅನಂತರ ಈ ಸಾಮ್ರಾಜ್ಯವು ಅಳಿದು ಲೆಮ್ರೋ ಸಾಮ್ರ್ಯಾಜ್ಯದ ಕಾಲದಲ್ಲಿ ನಾಲ್ಕು ಅಧಿಕಾರ ಕೇಂದ್ರಗಳಾಗಿ ಪ್ರ.ಶ.೧೪೩೦ರ ವರೇಗೆ ಆಳಲ್ಪಟ್ಟಿತು. ಕೊನೆಯದಾಗಿ ಮಿನ್ ಸಾ ಮೋನ್ ಎಂಬವ 'ಮ್ರಾಕ್ ಉ ' ಸಾಮ್ರಾಜ್ಯವನ್ನು ಸ್ಥಾಪಿಸಿದ.ಇವನ ಕಾಲದಲ್ಲಿ ಪುನಃ ವ್ಯಾಪಾರ ವಹಿವಾಟು ವೃದ್ಧಿಯಾಗಿ ಈ ಪ್ರಾಂತ್ಯವು ಶ್ರೀಮಂತವಾಯಿತು.೧೬೬೬ರಲ್ಲಿ ಚಿತ್ತಗಾಂಗ್ ಬಂದರನ್ನು ಮೊಘಲರಿಗೆ ಸೋತನಂತರ ಈ ಸಾಮ್ರಾಜ್ಯದ ಅಳಿವು ಪ್ರಾರಂಭವಾಗಿ ೧೭೮೪ರಲ್ಲಿ ಬರ್ಮಾದ ಸೇನೆಗೆ ಸೋಲುವುದರೊಂದಿಗೆ ಸಾಮ್ರಾಜ್ಯದ ಅಂತ್ಯವಾಯಿತು.ಈ ಬೆಳವಣಿಗೆ ಬರ್ಮಾವನ್ನು ಬ್ರಿಟಿಷ್ ಸಾಮ್ರಾಜ್ಯದ ಹೊಸ್ತಿಲಲ್ಲಿ ನಿಲ್ಲಿಸಿತು.ಹಲವಾರು ಭೌಗೋಳಿಕ ವಿಷಯಗಳಿಂದಾಗಿ ೧೮೨೪ರಿಂದ ೧೮೨೬ರ ವರೆಗೆ ಮೊದಲ ಬರ್ಮಾ ಯುದ್ಧ ನಡೆಯಿತು.ಬರ್ಮಾ ಸಾಮ್ರಾಜ್ಯ ಅರಕಾನ್ ಪ್ರಾಂತ್ಯವನ್ನು ಬ್ರಿಟಿಷರಿಗೆ ಬಿಟ್ಟು ಕೊಟ್ಟುದದರಿಂದ ಇದು 'ಬರ್ಮಾ ಬ್ರಿಟಿಷ ಸಾಮ್ರಾಜ್ಯ'ದಲ್ಲಿ ಒಂದು ಪ್ರತ್ಯೇಕ ಪ್ರಾಂತವಾಗಿ ಗುರುತಿಸಲ್ಪಟ್ಟಿತು. ಎರಡನೆಯ ಮಹಾಯುದ್ಧ ದ ಸಮಯದಲ್ಲಿ ಈ ಪ್ರಾಂತ್ಯದಲ್ಲಿ ಹಲವಾರು ಯುದ್ಧಗಳಾದವು.೧೯೭೪ರಲ್ಲಿ ಮ್ಯಾನ್ಮಾರ್‍ನ ಮಿಲಿಟರಿ ಆಡಳಿತ ಅರಕಾನ್ ಪ್ರದೇಶದ ಜನರ ಸ್ವಾತಂತ್ರ್ಯದ ಕೂಗನ್ನು ಹತ್ತಿಕ್ಕಲು ಈ ಪ್ರಾಂತ್ಯವನ್ನು ವಿಭಜಿಸಿ ರಾಖೈನ್ ರಾಜ್ಯವನ್ನಾಗಿ ರೂಪಿಸಿತು.

ಉಲ್ಲೇಖಗಳು

[ಬದಲಾಯಿಸಿ]

.

  1. "Division and State Administrations". Alternative Asean Network on Burma. 8 July 2011. Archived from the original on 25 ಡಿಸೆಂಬರ್ 2018. Retrieved 21 August 2011.
  2. http://www.standnow.org2013. {{cite web}}: Check |url= value (help); Missing or empty |title= (help)


"https://kn.wikipedia.org/w/index.php?title=ಅರಕಾನ್&oldid=1052981" ಇಂದ ಪಡೆಯಲ್ಪಟ್ಟಿದೆ