ಸದಸ್ಯ:Ruchitha.N/sandbox
ಕಮಲ ಸೊಹೋನಿ | |
---|---|
ಜನನ | ೧೯೧೨ |
ಮರಣ | ೧೯೯೮ |
ರಾಷ್ಟ್ರೀಯತೆ | ಭಾರತ |
ಕಾರ್ಯಕ್ಷೇತ್ರ | ಜೈವಿಕ ರಸಾಯನಶಾಸ್ತ್ರ |
ಅಭ್ಯಸಿಸಿದ ವಿದ್ಯಾಪೀಠ | ಬಾಂಬೆ ವಿಶ್ವವಿದ್ಯಾಲಯ, ಮುಂಬೈ |
ಪ್ರಸಿದ್ಧಿಗೆ ಕಾರಣ | ಮಹಿಳ ವಿಜ್ಞಾನಿ |
ಸಂಗಾತಿ | ಎಂ.ವಿ.ಸೊಹೋನಿ |
ಕಮಲ ಸೊಹೋನಿ ಅವರು ಭಾರತೀಯ ಜೈವಿಕ ರಸಾಯನಶಾಸ್ತ್ರಜ್ಞೆ. ಇವರು ವೈಜ್ಞಾನಿಕ ಶಿಸ್ತಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಭಾರತದ ಪ್ರಥಮ ಮಹಿಳೆ.
ಪ್ರಾರಂಭಿಕ ಜೀವನ
[ಬದಲಾಯಿಸಿ]ಕಮಲ ಸೊಹೋನಿ ೧೯೧೨ರಲ್ಲಿ ಜನಿಸಿದರು. ಅವರ ತಂದೆಯ ಹೆಸರು ನಾರಾಯಣರಾವ್ ಭಾಗವತ್. ಅವರ ತಂದೆ ಒಬ್ಬ ರಸಾಯನಶಾಸ್ತ್ರ್ರಜ್ಞ. ಕಮಲ ಸೊಹೋನಿಯವರು ತಮ್ಮ ಬಿ.ಎಸ್.ಸಿ. ಪದವಿಯನ್ನು ಭೌತಶಾಸ್ತ್ರ ಹಾಗು ರಸಾಯನಶಾಸ್ತ್ರದಲ್ಲಿ ಬಾಂಬೆ ವಿಶ್ವವಿದ್ಯಾಲಯದಿಂದ ಪಡೆದು ಕೊಂಡರು. ಇವರು "ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸಂಶೋಧನೆ ನಡೆಸಲು ಅರ್ಜಿ ಸಲ್ಲಿಸಿದರು. ಆದರೆ ಮಹಿಳೆಯರು ಸಂಶೋಧನೆ ನಡೆಸಲು ಸುಲಭವಲ್ಲ ಎಂಬ ಕಾರಣಕ್ಕೆ ಅವರ ಅರ್ಜಿಯನ್ನು ಸಿ.ವಿ.ರಾಮನ್ ರವರು ತಿರಸ್ಕರಿಸಿದರು. ನಂತರ ಹಲವು ವಾದವಿವಾದಗಳ ನಂತರ ಅವರಿಗೆ ಸಂಶೋಧನೆ ನಡೆಸಲು ಅವಕಾಶ ಮಾಡಿಕೊಡಲಾಯಿತು. ಕಮಲ ಸೊಹೋನಿಯವರಿಗೆ ೧೯೩೦ರಲ್ಲಿ ಸ್ನಾತಕೋತ್ತರ ಪದವಿ ದೊರಕಿತು.
ವೃತ್ತಿ ಮತ್ತು ಸಂಶೋಧನೆ
[ಬದಲಾಯಿಸಿ]ಕಮಲ ಅವರು ಸಿ.ವಿ.ರಾಮನ್ ಅವರು ಹಾಕಿದ ಶರತ್ತುಗಳನ್ನು ಒಪ್ಪಿಕೊಂಡು ಐ.ಐ.ಎಸ್.ಸಿ.ನಲ್ಲಿ ಸಂಶೋಧನ ಕೆಲಸವನ್ನು ೧೯೩೩ರಲ್ಲಿ ಪ್ರಾರಂಭಿಸಿದರು.ಪ್ರೊ. ಶ್ರಿ.ಶ್ರಿನಿವಾಸಯ್ಯನವರು ಅವರ ಮಾರ್ಗದರ್ಶಕರಾಗಿದ್ದರು. ರಾಮನ್ ರವರು ಅವರ ಕೆಲಸವನ್ನು ಮೆಚ್ಚಿಕೊಂಡು ಮುಂದಿನ ಸಂಶೋಧನೆಯನ್ನು ನಡೆಸಲು ಅನುಮತಿ ನೀಡಿದರು. ಅವರು ಅಹಾರದಲ್ಲಿ ಇರುವ ಪ್ರೋಟೀನ್ಗಳ ಕುರಿತು ತಮ್ಮ ಸಂಶೋಧನೆಯನ್ನು ನಡೆಸಿ ಎಂ.ಎಸ್.ಸಿ ಪದವಿಯನ್ನು ಪಡೆದುಕೊಂಡರು. ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಡಾ.ಡೆರಿಕ್ ರಿಕ್ಟರ್ ಅವರ ಕೆಳಗೆ ಸಂಶೋಧನೆ ನಡೆಸಲು ಆಮಂತ್ರಣ ದೊರೆಯಿತು. ಅವರು ಡಾ. ರಾಬಿನ್ ಹಿಲ್ ಅವರ ಕೆಳಗೆ ಸಂಶೋಧನೆ ನಡೆಸಿ ಸೆಲ್ಯುಲರ್ ಕಿಣ್ವ ಸೈಟೋಕ್ರೋಮ್ ಅನ್ನು ಕಂಡುಹಿಡಿದರು. ಅವರು ಸೈಟೋಕ್ರೋಮ್ ಅನ್ನು ಕುರಿತು ಓದಿ ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದು ಕೊಂಡರು. ಅವರ ಸಂಶೋಧನೆಯ ಫಲಿತಗಳು (research findings) ಬಹಳ ಚಿಕ್ಕದಾಗಿದ್ದು , ಕೇವಲ ೪೦ ಪುಟಗಳನ್ನು ಒಳಗೊಂಡಿತು. ಅವರು ೧೯೩೯ರಲ್ಲಿ ಭಾರತಕ್ಕೆ ಮರಳಿದರು. ಇವರನ್ನು ನವದೆಹಲಿಯ ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜಿನ ಜೈವಿಕ ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥರಾಗಿ ನೇಮರಾದರು. ಆನಂತರ, ಕೋನೂರಿನ ಪೋಷಣೆ ಸಂಶೋಧನಾ ಪ್ರಯೋಗಾಲಯದಲ್ಲಿ ಕೆಲಸ ನಿರ್ವಹಿಸಿದರು. ಎಂ.ವಿ.ಸೊಹೋನಿಯವರ ಜೊತೆ ೧೯೪೭ರಲ್ಲಿ ವಿವಾಹವಾದ ನಂತರ ಮುಂಬೈಗೆ ವಲಸೆ ಹೋದರು. ಮುಂಬೈನ "ವಿಜ್ಞಾನದ ರಾಯಲ್ ಇನ್ಸ್ಟಿಟ್ಯೂಟ್"ನಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸಕ್ಕೆ ಸೇರಿದರು. ಆ ಸಂಸ್ಥೆಯಲ್ಲಿ ಅವರು ದ್ವಿದಳ ಪೋಷಣೆ ಅಂಶವನ್ನು ಕುರಿತು ಕೆಲಸ ನಿರ್ವಹಿಸಿದರು. ಅವರಿಗೆ ಗೌರವ ರಾಷ್ಟ್ರಪತಿ ಪ್ರಶಸ್ತಿ ಲಭಿಸಿದೆ. ಕಮಲ ಸೊಹೋನಿಯವರು "ಇಂಡಿಯನ್ ಕೌನ್ಸಿಲ್ ಅಫ್ ಮೆಡಿಕಲ್ ರಿಸರ್ಚ್"ನ ಗೌರವ ಸಮಾರಂಭದಲ್ಲಿ ಮರಣ ಹೊಂದಿದರು.