ವಿಷಯಕ್ಕೆ ಹೋಗು

ಸದಸ್ಯ:Bincy Babu/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                                    ಶಿಳ್ಳೆ ಕಳ್ಳ ಅಥವಾ ಶಬ್ಧ ಕಳ್ಳ

[[೧]]

ಪೀ‍‍‌ಠಿಕೆ

[ಬದಲಾಯಿಸಿ]
      ಜೀವಿಗಳ ಸೃಷ್ಟಿಯ ಜೋತೆಗೆ ಮಾನವರ ಸೃಷ್ಟಿಯೂ ಆಯಿತು. ಆದಿ ಮಾನವನು ಪ್ರಾಣಿಗಳಂತೆಯೇ ಮೊದ ಮೊದಲಿಗೆ ಬೆತ್ತಲೆಯಾಗಿ, ಹಸಿಮಾಂಸ-ಗೆಡ್ಡೆ ಗೆಣಸುಗಳನ್ನು ಹಾಗೆಯೇ ತಿನ್ನುತ್ತಿದ್ದ. ಆತನ ಮೆದುಳಿನ ಬುದ್ಧಿಶಕ್ತಿಯ ಮಟ್ಟ ಹೆಚ್ಚುತ್ತಿದಂತೆ ಆಲೋಚನಾ ಶಕ್ತಿಯೂ ವಿಕಾಸಗೊಳ್ಳುತ್ತಾ ಬೆಂಕಿಯ ಆವಿಷ್ಕಾರ ಹಾಗೂ ಮೈಮುಚಲು ಬಟ್ಟೆಯ ಅವಶ್ಯಕತೆಯ ಅರಿವು ಆಯಿತು. ನಂತರ ಅಲೆಮಾರಿ ಜೀವನವೂ ಸಮಾಪ್ತಿಯಾಗಿ ಒಂದು ಕಡೆ ನೆಲೆ ನಿಲ್ಲುವಂತಾಗಿ ಮನೆ ಎಂಬ ಪರಿಕಲ್ಪನೆಯೂ ಬಂದಿತು. ನಂತರ ಆಹಾರಕ್ಕಾಗಿ ವ್ಯವಸಾಯ ಪ್ರಾರಂಭವಾಗಿ ತನಗೆ ಬೇಕಾದಷ್ಟು ದವಸ ಧಾನ್ಯಗಳನ್ನು ಇಟ್ಟುಕೊಂಡು ಉಳಿದದ್ದನ್ನು ಮಾರಾಟ ಮಾಡುವ ಯೋಜನೆ ಶುರುವಾಯಿತು. ಈ ಯೋಜನೆಯೇ ವ್ಯಾಪಾರವನ್ನು ತೊಡಗಿದರು.

ಮೊದಲಿಗೆ ವ್ಯಾಪಾರಗಳು ಮನೆಮನೆಗೆ, ಹಳ್ಳಿಗೆ, ಪಟ್ಟಣಕ್ಕೆ, ರಾಜ್ಯ, ರಾಷ್ಟ್ರಗಳಿಗೆ ಹೀಗೆ ಬೆಳೆಯುತ್ತಾ ಬಂದಿತು. ಈ ವ್ಯಾಪಾರವು ಅಭಿವೃದ್ದಿ ಹೊಂದಿದಾಗ ಪ್ರತಿಯೊಬ್ಬರ ಹಣಕಾಸಿನ ವ್ಯವಸ್ಥೆಗಳೂ ಪ್ರಗತಿಯಾಯಿತು. ಒಂದಕ್ಕೊಂದುಅವಶ್ಯಕತೆ ಹಾಗು ಪೂರೈಕೆಗಳಿಗೆ ಸರಿಹೊಂದುತ್ತಾ ವ್ಯಾಪಾರ-ವ್ಯವಹಾರಗಳ ಮೇಲೆ ಮನುಷ್ಯ ಹಿಡಿತ ಸಾಧಿಸುತ್ತಾ ಬಂದ ಹಾಗು ರಾಜ್ಯ, ರಾಷ್ಟ್ರಗಳ ಮಧ್ಯೆ ಒಂದುರೀತಿಯ ಬಾಂಧವ್ಯ ಏರ್ಪಟ್ಟಿತ್ತು. ಆದರೆ ಈ ಸೃಷ್ಟಿಯಲ್ಲಿ ಎಲ್ಲರು ಒಳ್ಳೆಯವರೇ ಇರಬೇಕೆಂದೇನು ಇಲ್ಲವಲ್ಲ. ಹೀಗಾಗಿ ವ್ಯಾಪಾರದ ಜೊತೆಗೆ ಮೋಸವೂ ಪ್ರಾರಂಭವಾಯಿತು. "ವ್ಯಾಪಾರಂ ದ್ರೋಹ ಚಿಂತನಂ" ಲೋಕೋಕ್ತಿಯಂತೆ ವ್ಯಾಪಾರ ಮಾಡುವುದು ಕೇವಲ ಅಧಿಕ ಲಾಭ ಹಾಗು ದ್ರೋಹ ಮಾಡಲೆಂದೇ ಎಂಬ ವಿಚಾರ ಜನರ ತಲೆಯಲ್ಲಿ ನಿರ್ಧಾರವಾಗಿ ಕುಳಿತಿತ್ತು. ಅಂತಹ ಸಮಯದಲೇ ಹುಟ್ಟುಕೊಂಡಿದ್ದೇ ಈ ಕಾಳಸಂತೆ ವ್ಯಾಪಾರ, ಶೇರ್ ಮಾರ್ಕೆಟ್ ಅವ್ಯಹಾರ, ಕಂಪನಿಗಳಲ್ಲಿ ಅವ್ಯವಹಾರ ಮುಂತಾದವು, ಅಂತಹ ಅವ್ಯವಹಾರಗಳನ್ನು ತಡೆಯಲೆಂದೇ ಹುಟ್ಟುಕೊಂಡ ಸಂಸ್ಥೆಯೆ ಶಿಳ್ಳೆಕಳ್ಳರ ಚಟುವಟಿಕೆಗಳ ವಿರೋಧಿ ಸಂಸ್ಥೆ.

             ಖಾಸಗಿ ಅಥವ ಸಾರ್ವಜನಿಕ ಸಂಸ್ಥೆಯೊಳಗೆ ಅಕ್ರಮ, ಅಪ್ರಾಮಾಣಿಕ ಚಟುವಟಿಕೆಗಳಲ್ಲಿ ತೊಡಗಿ ಯಾವುದೇ ವ್ಯವಹಾರಗಳನ್ನು ಸರಿಯಾಗಿ ನಿರ್ವಹಿಸದೆ ಮೋಸಮಾಡುವ ವ್ಯಕ್ತಿಯನ್ನು ಇಲ್ಲಿ ನಾವು ಶಿಳ್ಳೆ ಕಳ್ಳ ಎಂದು ಪರಿಗಣಿಸಬಹುದು. ಇಂತಹ ವ್ಯಕ್ತಿಗಳು ಕಂಪನಿವ್ಯವಹಾರದ ನೀತಿ ನಿಯಮಗಳಿಗೆ ವಿರುದ್ದವಾಗಿ ಕಾರ್ಯ ನಿರ್ವಹಿಸುತ್ತಾರೆ. ಅಂದರೆ ಕಂಪನಿಯ ವ್ಯವಹಾರಗಳ ನಿಯಮಾವೆಳಿಗಳನ್ನು ಉಲ್ಲಂಘಿಸುತ್ತಾರೆ. ಇದರಿಂದ ಸಂಸ್ಥೆಗೆ ನಷ್ಟ ಸಂಭವಿಉಸುತ್ತದೆ. ಈ ರೀತಿಯ ಶಿಳ್ಳೆಕಳ್ಳರು ಒಂದು ಸಂಸ್ತೆಯ ರಹಸ್ಯವಾದ ವಿಚಾರಗಳನ್ನು ಮೂರನೆಯ ವ್ಯಕ್ತಿ ಅಥವ ಎದುರಾಳಿ ಸಂಸ್ಥೆಯವರಿಗೆ ಹಣದ ಆಸೆಯಿಂದಲೋ ಯಾವುದೋ ವಯಕ್ತಿಕ ದ್ವೇಷದಿಂದಲೋ ಅವರ ಮುಂದೆ ಬಹಿರಂಗ ಪಡಿಸುತ್ತ ಈ ಸಂಸ್ಥೆಗೆ ದ್ರೋಹ ಬಗೆಯುವ ವ್ಯಕ್ತಿಗಳನ್ನು ನಾವು ಸಮಾಜದಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಾಣುತ್ತಿದ್ದೇವೆ. ಇಂತಹ ವ್ಯಕ್ತಿಗಳು ಎಸಗುವ ದುಷ್ಕ್ರತ್ಯವನ್ನು ಕಂಡುಹಿಡಿದು ಅಂತವರನ್ನು ಪೋಲೀಸ್ ಬಂದನಕ್ಕೋ, ಬೆದರಿಸಿಯೋ ಅಥವಾ ಸಂಸ್ಥೆಯಿಂದ ಹೊರಗೆ ಹಾಕಿಸಿದಾಗ ಅಂತಹ ಪ್ರಾಮಾಣಿಕವ್ಯಕ್ತಿಯನ್ನು ಈ ಶಿಳ್ಳೆಕಳ್ಳರು ದ್ವೇಷದಿಂದ ಯಾವುದಾದರು ಒಂದು ರೀತಿಯಲ್ಲಿ ತೊಂದರೆ ನೀಡಬಹುದು. ಅಥವಾ ಅವರು ಮಾಡುವ ಕೆಲಸದಲ್ಲೇ ಅವರನ್ನು ಕೆಟ್ಟ ರೀತಿಯಲ್ಲಿ ಸಿಕ್ಕಿಹಾಕಿಸಿಕೊಳ್ಳ ಬಹುದು.
     ವ್ಯಾಪಾರದಲ್ಲಿ ನಡೆಯುತ್ತಿದ್ದ ಕಾಳಸಂಕೆ, ಕಳ್ಳ ಸಾಗಣೆ, ವ್ಯಾಪಾರದ ರಹಸ್ಯಗಳ ರವಾನೆ ಮುಂತಾದವುಗಳಿಂದ ಪ್ರತಿಯೊಂದು ವ್ಯಾಪಾರವು ನ್ಯಾಯ ಬದ್ಧವಾದ ರೀತಿಯಲ್ಲಿ ನಡೆಯುತ್ತಿರಲಿಲ್ಲ ಆದ್ದರಿಂದ ಇಂತಹ ಅವ್ಯವಹಾರಗಳನ್ನು ತಡೆಗಟ್ಟಲು ಹುಟ್ಟಿಕೊಂಡಂತಹ ಸಂಸ್ತೆಯೇ 'ವಿಸಿಲ್ ರಕ್ಷಣಾಸಂಸ್ತೆ'. ಈ ಸಂಸ್ತೆಯಲ್ಲಿ ಮೊದಲಿಗೆ ಆರೋಪಿಗಳನ್ನು ಕಾನೂನು ರೀತಿಯಲ್ಲಿ ವಿಚಾರಣೆಗೆ ಒಳಪಡಿಸಿ, ನಂತರ ಅವರ ಕರತೆಗಳೇನು? ಹಾಗು ಅವರು ಏಕೆ ಈ ರೀತಿಯಾಗಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದಾರೆ.ಅವರ ವಯಕ್ತಿಕ ಹಿನ್ನೆಲೆ ಏನು? ಈ ಅರೋಪವನ್ನು ಎಸಗಲು ಅವರಿಗೆ ಪ್ರೋತ್ಸಾಹ ನೀಡುತ್ತಿರುವವರು ಯಾರು? ಹೀಗೆ ಈ ಎಲ್ಲಾ ಪ್ರಶ್ನೆಗಳಿಗೆ ನಿಧಾನವಾಗಿ ಅಪರಾಧಿಗಳಿಂದ ತಿಳಿಯುತ್ತಾ ಹೋಗುತ್ತದೆ.
     ನಂತರ ಅವರನ್ನು ಈ ಅಪರಾಧ ತಾನೇ ಮಾಡಿದ್ದೇನೆ ಎಂಬುದನ್ನು ಅವರಿಂದಲೇ ಹೇಳಿಸಿ ಅವರ ಮನ ಒಲಿಸಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸುತ್ತದೆ. ಹಾಗು ಅವರಿಗೆ ಕಾನೂನಿನ ರೀತಿಯಲ್ಲಿ ಏನು ಸಹಾಯ ಮಾಡಬಹುದೋ ಅದನ್ನು ಮಾಡಿಸುತ್ತಾ ನಂತರ ಈ ಕಾಳಸಂತೆ ಮಾಡದಂತೆ ಅವರ ಮನಸ್ಸನ್ನು ಏಕಾಗ್ರತೆ, ದ್ಯಾನದ ಕಡೆಗೆ ಹರಿಸುತ್ತಾ. ತಮ್ಮ ತಪ್ಪಿಗೆ ಪಶ್ಚಾತಾಪ ಪಡುವಂತೆ ಮಾಡುತ್ತಾರೆ. ಹಾಗು ಅವರಿಗೆ ಕಾನೂನಿನಲ್ಲಿ ಶಿಕ್ಷೆ ಕಡಿಮೆಯಾಗುವಂತೆ ಮಾಡುತ್ತಾರೆ. ಹಾಗೆಯೇ ವ್ಯಾಪಾರದಲ್ಲಿ ಉತ್ತಮ ಮಟ್ಟದ ವ್ಯವಹಾರಗಳನ್ನು ಮಾಡಲು ಅವಕಾಶ ತಂದುಕೊಡುತ್ತಾರೆ. ಹಾಗು ಸಂಸ್ಥೆಗಳ ಅಂದರೆ ಸಾರ್ವಜನಿಕ ಹಾಗು ಖಾಸಗಿ ಸಂಸ್ಥೆಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ.

ಮೂಲರೂಪ

[ಬದಲಾಯಿಸಿ]
   'ಶಿಳ್ಳೆ ಕಳ್ಳ' ಪದಕ್ಕೆ ಅಕ್ರಮ ಅಥವಾ ಅನ್ಯಾಯ ಎಂಬ ಪದಗಳನ್ನು ಬಹಳ ಬಹುದಾಗಿದೆ. ಅಮೇರಿಕದ ನಾಗರೀಕ ಕಾರ್ಯ ಕರ್ತನಾದ ರಾಲ್ಫ್ ನಾಡರ್ ಎಂಬುವನ್ನು ಈ ನಕಾರಾತ್ಮಕವಾದ ಶಬ್ದವನ್ನು ತಪ್ಪಿಸಲು ಅಕ್ರಮ ಮಾಹಿತಿದಾರರು ಅಥವಾ ಮೋಸಗಾರ ಎಂಬ ಪದವನ್ನು ಬಳಸಿದ್ದಾನೆ ಎಂಬೂದನ್ನು ಇಲ್ಲಿ ಸ್ಮರಿಸಬಹುದು.

ಆಂತರಿಕ ವಿಚಾರಗಳು

[ಬದಲಾಯಿಸಿ]
    ಇಲ್ಲಿ ಶಿಳ್ಳೆ ಕಳ್ಳ ಅಂದರೆ ಒಬ್ಬ ಮೋಸಗಾರನಾದ ಈತನು ತನ್ನ ಸಂಸ್ಥೆಯಲ್ಲಿ ನಡೆಯುವ ಗೌಪ್ಯವಾದ(ರಹಸ್ಯವಾದ) ವಿಚಾರಗಳನ್ನು ಬೇರೊಂದು ಸಂಸ್ತೆಗೆ ರವಾನಿಸಿದಾಗ ಆತನನ್ನು ಕಂಡುಹಿಡಿಯಲು ೩-೪ ಜನರ ಒಂದು ವ್ಯೂಹವನ್ನು ರಚಿಸುತ್ತಾರೆ. ಈ ವ್ಯೂಹದಲ್ಲಿ ಕಳ್ಳರು ತಮಗೇ ತಿಳಿಯದಂತೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಈ ರೀತಿಯ ಉಪಾಯಗಳಿಗೆ ಕಳ್ಳರನ್ನು ಸಿಲುಕಿಸಿ ಅವರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ. ನಂತರ ಅವರೇ ಮುಂದೆ ಬಂದು ತಮ್ಮ ತಪ್ಪನ್ನು ಒಪ್ಪಿಕೊಳ್ಳುವಂತೆ ಈ ತಂಡ ರಚನಾತ್ಮಕವಾದ ಕಾರ್ಯವನ್ನು ನಿರ್ವಹಿಸುತ್ತದೆ. ಹಾಗು ಈ ಸಮಿತಿ ಸಂಸ್ಥಯ ಉಳಿವಿಗೆ ಸಾಕಷ್ಟು ಕಾಳಜಿ ವಹಿಸುತ್ತದೆ.

ಮೂರನೇ ಹಂತದ ಅಪರಾಧ ನಿಯಂತ್ರಣಾ ಸಮಿತಿ

[ಬದಲಾಯಿಸಿ]
    ಈ ಮೂರನೇ ಹಂತದಲ್ಲಿ ಶಿಳ್ಳೆಕಳ್ಳರೆಂದು ಪರಿಗಣಿಸಿದ ಮೇಲೆ ಅವರ ಹೆಸರನ್ನು ಅಥವ ಆ ವ್ಯಕ್ತಿಯನ್ನು ಬಹಿರಂಗ ಪಡಿಸದೆ ಗೌಪ್ಯವಾಗಿಡುವುದು. ಅಂದರೆ ಅನುಚಿತ ಸಾಂಸ್ಥಿಕ ಪಿರಮಿಡ್ನ ಉತ್ತುಂಗದಲ್ಲಿರುವ ವ್ಯಕ್ತಿಗಳು ಬಾಹ್ಯ ಅಥವಾ ಹೊರಗಿರುವ ಪತ್ತೇದಾರರನ್ನು ಬಳಸಿಕೊಂಡು ಅಪರಾಧವನ್ನು ಪತ್ತೆ ಹಚ್ಚುವುದು. ಇದನ್ನೆ ಅಂತರ ರಾಷ್ಟ್ರೀಯ ಶಿಳ್ಳೆಕಳ್ಳರ ನಿಯಂತ್ರಣಾ ಸಂಸ್ಥೆ ಎಂದು ಕರೆಯಲಾಗುತ್ತದೆ.

ಸಾರ್ವಜನಿಕ ವಲಯದಲ್ಲಿ ನಡೆಯುವ ಅವ್ಯವಹಾರ ಹಾಗೂ ಲೈಂಗಿಕ ಶಿರುಕುಳ ನಿಯಂತ್ರಣ ಸಮಿತಿ

[ಬದಲಾಯಿಸಿ]
    ಈ ಮೇಲೆ ನಾವೆಲ್ಲಾ ತಿಳಿದ ವಿಚಾರವೇನೆಂದರೆ, ಶಿಳ್ಳೆಕಳ್ಳ ಒಂದು ಸಂಸ್ಥೆಯ ಒಳಗಿದ್ದು ಆಸಂಸ್ಥೆಯ ಬೆಳವಣಿಗೆಗೆ ಮೂರಕವಾಗಿದ್ದು ಎಲ್ಲಾರೀತಿಯಲ್ಲೂ ತೊಂದರೆಗಳನ್ನು ತಂದೊಡ್ಡುತ್ತಾನೆ ಎಂಬುದನ್ನು ತಿಳಿದಿದ್ದೆವು.

ಆದರೆ ಈಗ ಈ ಒಂದು ಹಂತದಲ್ಲಿ ನಾವು ತಿಳಿಯುವುದು ಏನೆಂದರೆ, ಸಾರ್ವಜನಿಕ ವಲಯದಲ್ಲಿ ಇಂತಹ ಚಟುವಟಿಕೆಗಳು ಹೇಗಲ್ಲಾ ನಡೆಯುತ್ತವೆ ಎಂಬುದನ್ನು. 'ವಿಷಯ ವಿಶ್ಲೇಷಣೆ'

    ಸಾರ್ವಜನಿಕ ಸಂಸ್ಥೆ ಅಥವ ಸರ್ಕಾರಿ ಕಛೇರಿಗಳಲ್ಲಿ ಅನೇಕ ರೀತಿಯಲ್ಲಿ ಜನ ಕಿರುಕುಳಕ್ಕೆ ಒಳಗಾಗುತ್ತಾರೆ.

ಮೊದಲನೆಯದಾಗಿ:

    ಅಧಿಕಾರಿಗೆ ಕೆಳಹಂತದಲ್ಲಿರುವ ನೌಕರನ ಮೇಲೆ ವಯಕ್ತಿಕ ದ್ವೇಷವಿದ್ದಾಗ ಆತನಿಗೆ ಮಾನಸಿಕವಾಗಿ ಹಿಂಸಿಸುತ್ತಾನೆ. 

ಉದಾ: ಆತ ಮಾಡಿದ ಕೆಲಸಗಳಲ್ಲಿ ಬೇಕೆಂದು ತಪ್ಪುಗಳನ್ನು ಕಂಡುಹಿಡಿದು ಆರೋಪಿಸಿ ಚಿತ್ರ ಹಿಂಸೆ ನೀಡುವುದು. ಎರಡನೆಯದು:

    ಅಧಿಕಾರದ ಮದದಿಂದ ತಾನೇ ದೊಡ್ಡವನೆಂದು, ತಾನೇ ಸರ್ವಜ್ಞನೆಂದು ತಿಳಿದು ಬೇರೆಯವರ ಅಭಿಪ್ರಾಯಗಳಿಗೆ ಗೌರವ ನೀಡದೆ ಬೇರೆಯವರ ಅಸಮಾಧಾನಕ್ಕೆ ಗುರಿಯಾಗುವವರಿದ್ದಾರೆ.

ಮೂರನೆಯದಾಗಿ

    ಮಹಿಳಾ ಕೆಲಸಗಾರರಿಗೆ ಲೈಂಗಿಕವಾಗಿ ಕಿರುಕಳ ನೀಡುವಂತಹ ಅಧಿಕಾರಿ ಅಥವ ಕೆಲಸಗಾರರು.

ಹೀಗೆಲ್ಲಾ ಸಾರ್ವಜನಿಕವಲಯದಲ್ಲಿ ಅನೇಕ ರೀತಿಯ ಉಪಬಳವನ್ನು ತಪ್ಪಿಸಲು ಹುಟ್ಟಿಕೊಂಡ ಸಂಸ್ಥೆಯೇ ಸಾರ್ವಜನಿಕ ವಲಯದಲ್ಲಿ ನೆಡೆಯುವ ಅವ್ಯವಹಾರ ಹಾಗು ಲೈಂಗಿಕ ಕಿರುಕಳ ನಿಯಂತ್ರಣಾ ಸಂಸ್ಥೆಯಾಗಿದೆ.

ಇದರ ಉಪಯೋಗಗಳು

[ಬದಲಾಯಿಸಿ]

೧) ಈ ಸಂಸ್ಥೆಯು ನೀಡುವ ರಕ್ಷಣೆಯಿಂದ ಮಹಿಳೆಯರಲ್ಲಿ ಮಾನಸಿಕ ಧೈರ್ಯ ಹೆಚ್ಚಾಗುತ್ತದೆ. ೨) ಅಧಿಕಾರಿಗಳ ಕಿರುಕಳ ಇಲ್ಲದ್ದರಿಂದ ಪ್ರತಿಯೊಬ್ಬರೂ ನೆಮ್ಮದಿ ಹಾಗು ಸಮಾಧಾನದಿಂದ ಕೆಲಸ ಮಾಡುತ್ತಾರೆ. ೩) ಈ ರೀತಿಯ ಶಾಂತಿ ನೆಮ್ಮದಿಯಿಂದ ಕೆಲಸ ಮಾಡಿದರೆ ಉತ್ಪಾದನ ಅಭಿವೃದ್ದಿಮಟ್ಟ ಹೆಚ್ಚಾಗುತ್ತದೆ. ೪) ಸಾರ್ವಜನಿಕ ವಲಯದ ಮೇಲೆ ಪ್ರತಿಯೊಬ್ಬರಿಗೂ ವಿಶ್ವಾಸ ಹಾಗು ಗೌರವ ಹೆಚ್ಚುತ್ತದೆ. ೫) ಪ್ರತಿಯೊಂದು ಸಮಸ್ಯೆಯನ್ನು ಒಟ್ಟಾಗಿ ವಿಶ್ಲೇಷಿಸಿ ಸಾಮೂಹಿಕವಾಗಿ ಪರಿಹಾರಿಸುತ್ತಾರೆ. ಹೀಗಾಗಿ ಪ್ರತಿಯೊಬ್ಬರೂ ಧೈರ್ಯವಾಗಿ ಪರಿಸ್ಥಿತಿಯನ್ನು ಎದುರಿಸುತ್ತಾರೆ. ೬) ಖಾಸಗಿ ಹಾಗು ಸಾರ್ವಜನಿಕವಲಯಗಳಲ್ಲಿ ಪ್ರತಿ ಕಾರ್ಮಿಕರಿಗೂ ನೈರ್ತಿಕವಾದ ವಾತಾವರಣ ಸೃಷ್ಟಿಯಾಗಿ ನೆಮ್ಮದಿ ನೆಲೆಸುತ್ತದೆ. ಹೀಗೆ ಈ ಸಂಸ್ಥೆಯಿಂದ ಎಲ್ಲಾರೀತಿಯಲ್ಲೂ ಸಹಕಾರ ಹಾಗೂ ಅಭಿವೃದ್ದಿ ನೆಮ್ಮದಿಯನ್ನು ಕಾಣಬಹುದಾಗಿದೆ. ೭) ಸಾರ್ವಜನಿಕ ವಲಯದಲ್ಲಿ ಅಕ್ರಮಚಟುವಟಿಕೆಗಳನ್ನು ತಡೆದು ಕಾಳಜಿ ನೀಡುವ ಸಂಸ್ಥೆ:

     ಸಾರ್ವಜನಿಕ ಸಂಸ್ಥೆಗಳಲ್ಲಿ ನಡಯುವ ತಪ್ಪು ಅಥವಾ ಅಕ್ರಮಚಟುವಟಿಕೆಗಳನ್ನು ತಪ್ಪಿಸುವುದಕ್ಕೆ ೫೦ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಂಸ್ಥೆ ಈ ಮೇಲಿನ ಸಂಸ್ಥೆಯಾಗಿದೆ. ಈ ಸಂಸ್ಥೆಯ ಸಾರ್ವಜನಿಕ ವಲಯದಲ್ಲಿ ನಡೆಯುವ ಭ್ರಷ್ಟಾಚಾರ ಅಕ್ರಮ ಅವ್ಯವಹಾರಗಳನ್ನು ತಡೆಗಟ್ಟುವ ಒಂದು ಪರಿಣಾಮ ಕಾರಿಯಾದಂತ ನೀತಿ ನಿಯಮಾವಳಿಗಳು ಜಾರಿಗೆ ಬಂದಿದೆ. ಈ ಒಂದು ಸಂಸ್ಥೆಯಿಂದ ಸಾರ್ವಜನಿಕ ಕ್ಷೇತ್ರದಲ್ಲಿ ನೀತಿ, ಸತ್ಯ, ಪ್ರಾಮಾಣಿಕತ್ತೆಗಳು ಸೃಷ್ಟಿಯಾಗುತ್ತದೆ. ಸಾರ್ವಜನಿಕ ವಲಯದಲ್ಲಿ ಅಂದರೆ ಸರ್ಕಾರಿ ಕಛೇರಿಗಳಲ್ಲಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲು ಜನಸಾಮಾನ್ಯರು ತುಂಬಾ ಕಷ್ಟ ಪಡುತಿರುತ್ತಾರೆ.

ಉದಾರಣೆಗೆ: ಸರ್ಕಾರಿ ನೌಕರಿಯ ಸೇವೆಯಲ್ಲಿರುವಾಗಲೇ ನೌಕರ ಮರಣ ಹೊಂದಿದಾಗ ಆತನ ಕುಟುಂಬಕ್ಕೆ ನೀಡಬೇಕಾದ ಪರಿಹಾರ ವಿಮೆ ಮುಂತಾದವುಗಳು ಸರಿಯಾದ ಸಮಯಕ್ಕೆ ಸಿಗದಿದ್ದಾಗ ಅಂತಹವರ ಕಷ್ಟಗಳನ್ನು ವಿಚಾರಿಸಿ ನ್ಯಾಯ ಒದಗಿಸುವುದು. ಯಾವುದೇ ಸಂಸ್ಥೆಯಿಂದ ತೊಂದರೆ ಅನುಭವಿಸಿ ಅದನ್ನು ಬಹಿರಂಗ ಪಡಿಸಿದಾಗ ಮಾಲಿಕ ಅಥವಾ ಮೇಲಧಿಕಾರಿಗಳು ಇವರಿಗೆ ಮಾನಸಿಕ ಅಥವಾ ದೈಹಿಕ ಹಿಂಸೆ ನೀದಿದಾಗ ಅಂತಹವರ ವಿರುದ್ದ ಈ ಸಂಸ್ಥೆ ಸರಿಯಾದ ಕ್ರಮ ಕೈಗೊಳ್ಳುತ್ತದೆ.

ವಿಭಿನ್ನ ಅನಿಕೆಗಳು

[ಬದಲಾಯಿಸಿ]
    ಈ ಒಂದು ಶಿಳ್ಳೆಕಳ್ಳ ನಿಯಂತ್ರಣಾ ಸಂಸ್ಥೆಯ ಬಗ್ಗೆ ಅನೇಕ ಭಿನ್ನಾಭಿಪ್ರಾಯಗಳಿವೆ. ಶೈಕ್ಷಣಿಕ ವ್ಯಾಪಾರ ಅಥವಾ ಸರ್ಕಾರದ ನೌಕರರ ರಕ್ಷಣೆಗೂ ಸಹ ಈ ಒಂದು ಸಂಸ್ಥೆಯಿದೆ. ಅದು ಹೇಗೆಂದರೆ.

ಉದಾರಣೆ: ಸರ್ಕಾರೀ ನೌಕರರ ಆರೋಗ್ಯಕ್ಕೆ ಸಂಬಂದಿಸಿದಂತೆ ವಿಮ ಆರೋಗ್ಯವಿಮಗಳನ್ನು ಹಾಗು ಅದರ ಅನುಕೂಲಗಳನ್ನು ಬಳಸಿಕೊಳುವಂತೆ ಮಾಡುವುದು. ವಿಜ್ಞಾನ ಕ್ಷೇತ್ರಗಳಲ್ಲಿ ನುರಿತ ವಿಜ್ಞಾನಿಗಳು ಹೊಸ ಅಥವ ಯುವ ವಿಜ್ಞಾನಿಗಳಿಗೆ ಕಿರುಕಳ ಕೊಡುವುದನ್ನು ತಪ್ಪಿಸುವುದು. ಹಾಗೆಯೇ ಅಮೇರಿಕಾ ದೇಶದಲ್ಲಿ ಈ ವಿಸಿಲ್ ಸಂಸ್ಥೆಯು ಮಾಲಿಕರ ಅಥವ ಅನುಭವಿ ಅಧಿಕಾರಿಕಳು ಪ್ರತಿಕಾರ ತೀರಿಸಿಕೊಳುವಾಗ ನಿರಪರಾಧಿಗಳು ಅನುಭವಿಸುವ ಹಿಂಸೆ, ಯಾತನೆ, ನೋವು, ಮಾನಹಾನಿ, ಪ್ರತಿಕಾರ ಮುಂತಾದವುಗಳಿಂದ ಮಾನಸಿಕ ಭಿನ್ನತೆಗೆ ಒಳಗಾಗಿರುವವರಿಗೆ ಮಾನಸಿಕವಾಗಿ ದೃಢವಾಗುವಂತೆ ಮಾಡುವುದು. ಅವರಿಗೆ ಬೆಂಬಲ ನೀಡಲು ಪ್ರತ್ಯೇಕ ಗುಂಪುಗಳನ್ನು ಮಾಡಿಕೊಂಡು ಎಲ್ಲಾ ರೀತಿಯಲ್ಲೂ ಸಂಘಟನೆಯಾಗುವುದು ಈ ಗುಂಪುಗಳು.

       ೧) ಯುನೈಟೆಡ್ ಕಿಂಗ್ ಡಮ್
       ೨) ಯುನೈಟೆಡ್ ಸ್ಟೈಟ್ ರಾಷ್ಟ್ರೀಯ ವಿಸಿಲ್ ಕಾರ್ಯಕ್ಷೇತ್ರ
       ೩) ವಿಸಿಲ್ ಯು.ಕೆ
       ೪) ಪಿ.ಸಿ.ಎ.ಡಬ್ಲಿಯೋ ಸಾರ್ವಜನಿಕ ಹಿತಾಶಕ್ತಿ

ಹೀಗೆ ಈ ಎಲ್ಲಾ ಗುಂಪುಗಳು ಬಹಳ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿವೆ.

ವಿಮರ್ಷೆ

[ಬದಲಾಯಿಸಿ]
    ಈ ವಿಸಿಲ್ ಸಂಸ್ಥೆಯು ಕೈಗೊಳುವ ರಕ್ಷಣಾ ಕಾರ್ಯವು ಎಷ್ಟರ ಮಟ್ಟಿಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಗಮನಿಸುತ್ತಿರುವಾಗ ಕೆಲವರು ಅನುಮಾನ ಹಾಗು ವಿಮರ್ಷೆಗಳ ಟೀಕೆಗಳು ಉದ್ಭವಿಸುತ್ತವೆ. ಅವೇನಂದರೆ.
       ೧) ಈ ಸಂಸ್ಥೆಯು ನೀಡಿದ ರಕ್ಷಣೆ ಕೇವಲ ತಾತ್ಕಾಲಿಕವಾಗಿದೆ.
       ೨) ಕಾರ್ಮಿಕರ ಹಾಗು ಮಾಲಿಕರ ನಡುವಿನಲ್ಲಿ ಅಂತರವೇರ್ಪಟ್ಟಿರುವುದು.
       ೩) ಈ ಸಂಸ್ಥೆ ಕೆಲವೊಮ್ಮೆ ಅನುಮಾನಸ್ಪದವಾಗಿ ಗೌಪ್ಯವಾಗಿದಂತೆ ತೋರುತ್ತದೆ.
       ೪) ಇವರು ನೀಡುವ ರಕ್ಷಣೆ, ಕೊಡುವ ಭರವಸೆಗಳು ಕಾರ್ಮಿಕರು ಹಾಗು ಮಾಲಿಕರ ನಡುವೆ ಗೋಡೆಯಂತೆಯೇ ಇದೆ.
       ೫) ಈ ಸಂಸ್ಥೆಯು ಒಂದು ಸಂಸ್ಥೆಯೊಳಗೆ ಬಂದಮೇಲೆ ಶೋಶಣೆಗೆ ಒಳಗಾದ ವ್ಯಕ್ತಿಯು ಇವರ ರಕ್ಷಣೆಸಿಕ್ಕಿದಾಗ ಮಾಲೀಕರ ಸಹೋದ್ಯೋಗಿ ಮಿತ್ರರಿಂದ           
           ದೂರ ಉಳಿಯುತ್ತಾರೆ. 
       ೬) ಅಂತಹವರು ತೀವ್ರ ಆತಂಕ, ಭ್ರಮೆ ಹಾಗು ಗೊಂದಲಮಯಗಳಿಗೆ ಒಳಗಾಗುತ್ತಾರೆ ಎನ್ನುವ ಊಹಾಪೋಹಗಳಿವೆ.
       ೭) ಈ ರೀತಿಯ ಶೋಶಣೆಗೊಳಗಾದವರನ್ನು ಸಂಸ್ಥೆ ರಕ್ಷಣೆ ನೀಡಿದಾಗ ಅಂತಹವರು ಎಲ್ಲರಿಂದ ದೂರವಾಗಿ ಆತ್ಮಹತ್ಯೆಯ ಆಲೋಚನೆಯನ್ನು ಮಾಡುವ
           ಸಂಭವ ಶೇಕಡಾ ೧೦ ರಷ್ಟು ಇದೆ.
       ೮) ಇಂತಹವರು ಮಾನಸಿಕ ಹಾಗೂ ದೈಹಿಕ ಅಸ್ವಸ್ಥತೆಯನ್ನು ಹೊಂದುವರು.
       ೯) ಈ ವಿಸಿಲ್ ಸಂಸ್ಥೆಯು ರಕ್ಷಣೆ ನೀಡಿದ ವ್ಯಕ್ತಿಯು ತಾನು ಮಾಲೀಕ ಅಥವಾ ಅಧಿಕಾರಿಯ ವಿರುದ್ಧ ಮಾತನಾಡಿದಾಗ ಅಥವಾ ಮಾತನಾಡಲು ಹೋದರೆ 
           ಏನು ಸಂಭವಿಸುತ್ತದೋ ಎಂದು ಹೆದರುತ್ತಿದ್ದರು.

ಕಪ್ಪು ಪಟ್ಟಿಯಲ್ಲಿನ ಉದ್ಯೋಗ ಜೀವನಾಧಾರ, (ಮತ್ತು ಕೆಲವೊಮ್ಮೆ ಪಿಂಚಣಿ) ಮತ್ತು ಪರಿವಾರದ ದಣಿವಿನ ನಷ್ಟದಿಂದ ತಪ್ಪು ಚಟುವಟಿಕೆಗಳ ಬಗ್ಗೆ ಕಾಳಂಜಿವಹಿಸಿ ಸಾಮಾಜಿಕ ಪ್ರಭಾವವನ್ನು ಸಹ ವಿಸಿಲ್ ಮಾನಸಿಕ ಆರೋಗ್ಯದ ಮೇಲೆ ಪ್ರಭಾವಬೀರಿ, ವಿಸಿಲ್ ಸಂಸ್ಥೆ ನೀಡುವ ಅಪೂರ್ಣ ಸಹಕಾರಗಳು. ಉದಾರಣೆ: ಈ ಸಂಸ್ಥೆಯು ಒಬ್ಬ ವ್ಯಕ್ತಿಗೆ ಆರಂಭದಲ್ಲಿ ಜೊತೆಸೇರಿ ನಂತರ ಅವನಕಡೆ ಗಮನ ಹರಿಸದೇ ಇರುವುದು. ಹಾಗು ಆತನ ವಿಚಾರಕ್ಕೆ ನ್ಯಾಯಲಯ ಕಾನೂನಿನ ಮೊರೆ ಹೋಗಿ ಅವನನ್ನು ಅರ್ಧದಲ್ಲೇ ಬಿಟ್ಟು ಹೋಗುವ ಸಂಭವ ಹೆಚ್ಚಾಗಿ ಕಂಡುಬರುತ್ತಿದೆ.

ಭಾರತದಲ್ಲಿ ವಿಸಿಲ್ ರಕ್ಷಣೆಯ ಬಗ್ಗೆ ಮುಖ್ಯ ಲೇಖನ

[ಬದಲಾಯಿಸಿ]
        ಭಾರತ ಸರ್ಕಾರವು ಹಲವಾರು ವರ್ಷಗಳಿಂದ ವಿಸಿಲ್ ರಕ್ಷಣಾ ಕಾನೂನನ್ನು ಅಳವಡಿಸಿಕೊಂಡು ಬಂದಿದೆ. ಅವು ಯಾವುವೆಂದರೆ ೨೦೦೩ರಲ್ಲಿ ಭಾರತ ಕಾನೂನು ಆಯೋಗ. 
         ೨೦೧೦ರ ಆಗಸ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕಟಣೆದತ್ತು ಕಾಯಿದೆ. ೨೦೦೨ ಅಭಿವ್ಯಕ್ತಿ ಬಿಲ್ ಮೇಕಿಂಗ್ ಪ್ರಕಟಣೆ ಮತ್ತು ರಕ್ಷಣೆ. ೨೦೧೦, ೨೦೧೧ ರಲ್ಲಿ ಈ ಅಭಿವ್ಯಕ್ತಿ ಬಿಲ್ ಮೇಕಿಂಗ್ ಪ್ರಕಟಣೆ ಹಾಗು ರಕ್ಷಣಾ ಸಮಿತಿಯನ್ನು ಕ್ಯಾಬಿನೆಟ್ ಅಂಗೀಕರಿಸಿತು. ಹಾಗೂ ಕಾನೂನು ಮತ್ತು ನ್ಯಾಯದ ಮೂಲಕ ೨೮ ಡಿಸೆಂಬರ್ನ ನಲ್ಲಿ ಲೋಕಸಬಯು ಅಂಗೀಕರಿಸಿತು. ಈ ಅಂಗೀಕಾರವನ್ನು ಭಾರತ ಸರ್ಕಾರ ಸಚೀವಾಲಯ ಮೇ ೨೦೧೪ ರಲ್ಲಿ ಭಾರತ ಸರ್ಕಾರದ ಅಧಿಕೃತ ಗೆಝೆಟ್ ನಲ್ಲಿ ಪ್ರಕಟಿಸಲಾಗಿದೆ.

ಸಮಾರೋಪ

[ಬದಲಾಯಿಸಿ]
        ಶಿಳ್ಳೆ ಕಳ್ಳ ಅಥವಾ ಶಬ್ದಕಳ್ಳ ಎನ್ನುವ ಪರಿಶಿಲ್ಪನೆಯು ವಿಕೃತಮನಸ್ಸು ಅನುಭವಿಸುವ ವಿಚಿತ್ರ ಮನೋವ್ಯಾಪಾರವಾಗಿದೆ. ಇಂತಹ ಮನಸ್ಥಿತಿ ಇರುವ ಮನುಷ್ಯರು ಇನ್ನು ಮುಂದಾದರೂ ತಮ್ಮ ವರ್ತನೆಗಳಲ್ಲಿ ಬದಲಾವಣೆ ಮಾಡಿಕೊಳ್ಳ ಬೇಕೆಂಬದು ಎಲ್ಲಾ ನಾಗರಿಕರ ಮನವಿಯಾಗಿದೆ. ಏಕೆಂದರೆ ವ್ಯಾಪಾರ ಹೇಗೆ ಪ್ರಾರಂಭವಾಯಿತೋ ಅದೇ ಸಮಯದಲ್ಲಿ ಮೊಸ ಮಾಡುವುದು ಪ್ರಾರಂಭವಾಗಿ ಆಂತರಿಕ ಹಾಗು ಬಾಹ್ಯ ಪ್ರಪಂಚದಲ್ಲಿ ಅಲ್ಲೋಲಕಲ್ಲೋಲವೇರ್ಪಟ್ಟಿದೆ. ಸರ್ಕಾರ, ರಕ್ಷಣಾ ಸಮಿತಿ, ಕಾನೂನುಗಳು ಏನೇನೇ ಮುನ್ನೆಚ್ಚರಿಕೆ ರಕ್ಷಣೆ ಕೈಗೊಂಡರೂ ಮನುಷ್ಯರ ಆತ್ಮಸಾಕ್ಷಿಗಳು, ಮನಸ್ಸು ಮುಂತಾದವುಗಳು ಜಾಗೃತಗೊಂಡು ಪ್ರತಿಯೊಬ್ಬರಲ್ಲೂ ಸಮಾನತೆ, ಒಳ್ಳೆಯ ನಡವಳಿಕೆ ಬಂದಾಗ ಇಡೀ ಪ್ರಪಂಚವೇ ದೋಷ ಮುಕ್ತ, ಅನ್ಯಾಯ ಮುಕ್ತ, ಹಾಗು ಶಾಂತಿಯುತ, ಸೌಹಾರ್ದಯುತವಾದ ಹೊಸ ಪ್ರಪಂ‍ಚ ಸೃಷ್ಟಿಯಾಗುತ್ತದೆಂಬುದರಲ್ಲಿ ಸಂದೇಹವೇ ಇಲ್ಲ.

ಹೀಗಾಗಿ ಬನ್ನಿ ಪ್ರತಿಯೊಬ್ಬರೂ ಅಂದರೆ ಅದರಲ್ಲೂ ವಿಶೇಷವಾಗಿ ಯುವ ಪೀಳಿಗೆ ಇದರ ಬಗ್ಗೆ ಯೋಚಿಸುತ್ತಾ ಪ್ರಪಂಚವನ್ನು ಬದಲಾಯಿಸೋಣ.

                                           "ಸರ್ವಜನೋ ಸುಖಿನೋ ಭವಂತು"


[] []

  1. https://en.wikipedia.org/wiki/Whistleblower
  2. https://en.wikipedia.org/wiki/Whistleblower_Protection_Act