ವಿಷಯಕ್ಕೆ ಹೋಗು

ಸದಸ್ಯ:Archana 1840568

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

thumb|| name         =ಅರ್ಚನ| gender       =ಹೆಣ್ಣು languages =ಕನ್ನಡ,ಇಂಗ್ಲಿಷ್,ಹಿಂದಿ | birthdate   =೧೭/೦೭/೨೦೦೦ | birthplace   =ಮಂಡ್ಯ | location     =ಬೆಂಗಳೂರು | country     =ಭಾರತ | nationality =ಭಾರತೀಯ | education   =ಪ್ರಥಮ ವರ್ಷದ ಬಿ.ಎಸ್ಸಿ | primaryschool   =ಹಾಸನ್ ಪಬ್ಲಿಕ್ ಶಾಲೆ | intschool   =ಹಾಸನ್ ಪಬ್ಲಿಕ್ ಶಾಲೆ | highschool   =ಹಾಸನ್ ಪಬ್ಲಿಕ್ ಶಾಲೆ | university   =ಕ್ರೈಸ್ಟ್ | college     =ಹೆ.ಚ್.ಕೆ.ಎಸ್ | hobbies =ಗಾಯನ,ಭರತನಾಟ್ಯ,ಕವನ ಲಿಖಿತ | religion     =ಹಿಂದು | books       =ಮಹಾಶ್ವೇತಾ,ಡಾಲರ್ ಸೊಸೆ
ಪರಿಚಯ

ನನ್ನ ಹೆಸರು ಅರ್ಚನ.ನಾನು ೨೭ನೇ ಜುಲೈ೨೦೦೦ರಂದು ಹಾಸನದಲ್ಲಿ ಜನಿಸಿದೆ.ನನ್ನ ತಂದೆ ಬಿ.ಎಸ್.ಮಂಜುನಾಥ್

ಹಾಸನದ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ನನ್ನ ತಾಯಿ ಅನಂತ ಲಕ್ಷ್ಮಿ.ಎಂ.ಪಿ ಆಕೆ ಗೃಹಿಣಿ.ಒಬ್ಬ ಪುಟ್ಟ ತಮ್ಮ, ಸದಾ ಮಾರ್ಗದರ್ಶನದೊಂದಿಗೆ

ಆಶೀರ್ವಾದ ನೀಡುವ ಅಜ್ಜಿ.ನನ್ನದು ಐದು ಜನರುಳ್ಳ ಪುಟ್ಟ ಕುಟುಂಬ.

ಶಿಕ್ಷಣ

ನಾನು ನನ್ನ ಪ್ರಾಥಮಿಕ ಹಾಗು ಹಿರಿಯ ಪ್ರಾಥಮಿಕಶಿಕ್ಷಣವನ್ನು ಹಾಸನಹಾಸನ್ ಪಬ್ಲಿಕ್ ಶಾಲೆಯಲ್ಲಿ

ಹಾಗು ಪದವಿ ಪೂರ್ವ ಶಿಕ್ಷಣವನ್ನು ಹೆಚ್.ಕೆ.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದೆ.

ನಾನು ಪ್ರಥಮ ವರ್ಷದ ಬಿ.ಎಸ್ಸಿ ಪದವಿಯನ್ನು ಬೆಂಗಳೂರಿ

ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ವಾಸಂಗ ಮಾಡುತ್ತಿದ್ದೇನೆ.

ಹವ್ಯಾಸ

ಚಿಕ್ಕ ವಯಸ್ಸಿನಿಂದ ನೃತ್ಯಮಾಡುವುದೆಂದರೆ ನನಗೆ ಬಹಳಾ ಇಷ್ಟ.ಆರನೇ ವರ್ಷಕ್ಕೆ ಪ್ರಾರಂಭವಾದ ನನ್ನ ಭರತನಾಟ್ಯ

ನೃತ್ಯದ ಪಯಣ ನಾನು ಹದಿನಾಲ್ಕನೇ ವಯಸ್ಸಿಗೆ ಬಂದಾಗ ಜೂನಿಯರ್ ಪದವಿ ಪಡೆಯುವುದರೊಂದಿಗೆ ಮುಕ್ತಾಯವಾಯಿತು.

ಈ ಎಂಟು ವರ್ಷದ ಅವಧಿಯಲ್ಲಿ ಅನೇಕ ನೃತ್ಯ ಪ್ರದರ್ಶನಗಳನ್ನು ನೀಡಿದ್ದೇನೆ

.ಒಂದೆರೆಡು ಬಹುಮಾನ ಕೂಡ ಲಭಿಸಿದೆ.ನಾನು ಹತ್ತನೆ ತರಗತಿಯಲ್ಲಿರುವಾಗ ನನಗೇ ಅರಿವಿಲ್ಲದಂತೆ ಪುಸ್ತಕಗಳ ಮೇಲಿನ ವ್ಯಾಮೋಹ ಹೆಚ್ಚಾಯಿತು.

ಅಂದು ಹಿಡಿದ ಪುಸ್ತಕದ ಹುಚ್ಚು ಇಂದಿಗೂ ಬಿಟ್ಟಿಲ್ಲ.

ಇನ್ಫೋಸಿಸ್ ನಾರಾಯಣ್ ಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ನನ್ನ ಅಚ್ಚುಮೆಚ್ಚಿನ ಲೇಖಕಿ.

ಸಾಮಾನ್ಯವಾಗಿ ಅವರ ಬರವಣಿಗೆಯಲ್ಲಿ "ಹೆಣ್ಣಿನ" ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ.ಇದು ನನ್ನಂತಹ

ಅನೇಕ ಓದುಗಾರರ ಮನಸ್ಸನ್ನು ಆಕರ್ಷಿಸುತ್ತದೆ.ಹಾಗೆಯೇ ರೋಮಾಂಚನಕಾರಿ ನಿಗೂಢ ಕಥೆಗಳನ್ನು ಓದಲು ಬಹಳಾ ಇಷ್ಟ.

ಸಣ್ಣ ಪುಟ್ಟ ಕವನಗಳನ್ನು ರಚಿಸುವುದು ನನ್ನ ಇನ್ನೊಂದು ಹವ್ಯಾಸ.

ಜೀವನದ ಗುರಿ

ತ್ರೋಬಾಲ್ ಮತ್ತು ಕಬ್ಬಡ್ಡಿ ನನ್ನ ಅಚ್ಚು ಮೆಚ್ಚಿನ ಕ್ರೀಡೆಗಳು.ನನ್ನ ಸಂಪೂರ್ಣ ವಿದ್ಯಾಭ್ಯಾಸ ಮುಗಿದ ನಂತರ ಓರ್ವ ವಿಜ್ಞಾನಿಯಾಗಬೇಕೆಂಬುದು ನನ್ನ ಕನಸು.

ಮಾನವನ ದೇಹದಲ್ಲಿ ಅಧಿಕ ವೇಗದಲ್ಲಿ

ಕೋಶ ವಿಭಜನೆಯಾಗುತ್ತಾ ಆತನನ್ನು ಸಾವಿನೆಡೆಗೆ ನೂಕುವ ಕ್ಯಾನ್ಸರ್ ರೋಗಕ್ಕೆ ಔಷಧಿ ಕಂಡುಹಿಡಿದು ಜನಸಾಮಾನ್ಯನ ಕೈಗೆಟುಕುವ ದರದಲ್ಲಿ

ಅದು ಆತನಿಗೆ ಲಭ್ಯವಾಗುವಂತೆ ಮಾಡುವುದು ನನ್ನ ಜೀವನದ ಮುಖ್ಯ ಧ್ಯೇಯ.

ಅನ್ವಯಿಕ ವಿಜ್ಞಾನದ ಮುಂದೆ ಮೂಲ ವಿಜ್ಞಾನಕ್ಕೆ ಬೆಲೆ ಇಲ್ಲ ಎಂಬ ಜನರ ತಪ್ಪುಕಲ್ಪನೆಯನ್ನು ಹೋಗಲಾಡಿಸಬೇಕಿದೆ.ಏಕೆಂದರೆ "ಬೇರಿಲ್ಲದ ಮರವನ್ನು ಎಂದಾದರು ನೋಡಿದ್ದುಂಟೆ"? ಇದೆಲ್ಲದರ ನಡುವೆ ಪ್ರಪಂಚ ಪರ್ಯಟನೆ

ಮಾಡಬೇಕೆಂಬ ಕನಸು ಮನದಂಚಲ್ಲಿ ಉಳಿದಿದೆ ಆ ಕನಸನ್ನು ನನಸಾಗಿಸುವ ಪ್ರಯತ್ನದತ್ತ ನನ್ನ ಹೆಜ್ಜೆ ಸಾಗಿದೆ.