ವಿಷಯಕ್ಕೆ ಹೋಗು

ಸದಸ್ಯ:Akashgr

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಆಕಾಶ್.ಜಿ.ಅರ್. ನಾನು ೧೯೯೯ ಮೇ ೨೫ ರಂದು ಬೆಂಗಳೂರಿನಲ್ಲಿ ಜನಿಸಿದೆ. ನನ್ನ ತಂದೆಯವರ ಹೆಸರು ರಾಮಚಂದ್ರ ಮತ್ತು ತಾಯಿಯ ಹೆಸರು ಪವಿತ್ರ. ನನಗೆ ಒಬ್ಬ ಹಿರಿಯ ಸಹೋದರ ಇದ್ದಾನೆ, ಅವನ ಹೆಸರು ರಾಕೇಶ್. ನಾವು ನಾಲ್ಕು ಜನ ಬೆಂಗಳೂರಿನ ಕೃಷ್ಣರಾಜಪುರದಲ್ಲಿ ವಾಸವಗಿದ್ದೇವೆ. Bangalore palace.jpg

ಬೆಂಗಳೂರು ಅರಮನೆ

ಪರಿಚಯ

[ಬದಲಾಯಿಸಿ]

ನಾನು ಬೆಂಗಳೂರಿನ ಮಲ್ಲೇಶ್ವರದಲ್ಲಿ ಜನಿಸಿದೆ. ನನಗೆ ಎರಡು ವರ್ಷವಿರುವಾಗ ನಾವು ಕೃಷ್ಣರಾಜಪುರಕ್ಕೆ ಬಂದೆವು. ಈಗ ನಾವು ಗಾಯತ್ರಿ ಬಡಾವಣೆಯಲ್ಲಿ ವಾಸವಗಿದ್ದೇವೆ. ನಮ್ಮ ತಂದೆಯವರ ಕೆಲಸಕ್ಕೆ ಹತ್ತಿರವಾಗುತ್ತದೆ ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡೆವು.ನನ್ನ ಮಾತೃ ಭಾಷೆ ಕನ್ನಡ. ನಾವು ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ನಮ್ಮ ತಂದೆಯವರು ಬಿ.ಎಂ.ಟಿ.ಸಿ ನಿರ್ವಾಹಕರಾಗಿ ಇಂದಿರಾನಗರ ಘಟಕದಲ್ಲಿ ಸೇವೆ ಸಲ್ಲಿಸುತ್ತಿದಾರೆ. ನಮ್ಮ ತಂದೆಯವರು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯವರು.ಅವರೇ ನನ್ನ ಕನ್ನಡ ಗುರು. ನಾನು ಚಿಕ್ಕವನಾಗಿದ್ದಾಗ ನನಗೆ ಪ್ರತಿನಿತ್ಯ ಕನ್ನಡ ದಿನಪತ್ರಿಕೆ ಓದಿಸುತ್ತ ಕನ್ನಡ ಹೇಳಿಕೊಡುತ್ತಿದ್ದರು. ನನ್ನ ತಾಯಿ ಗೃಹಿಣಿ. ನಾನು ಶಾಲೆಯಲ್ಲಿರುವಾಗ ನನಗೆ ಓದುವುದರಲಲ್ಲಿ ಸಹಾಯ ಮಾಡುತ್ತಿದ್ದರು. ನನ್ನ ಅಣ್ಣ ಕೆಲವು ಸಮಯದ ಹಿಂದೆ ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಹೋಗುತ್ತಿದ್ದಾನೆ.

ಶಿಕ್ಷಣ

[ಬದಲಾಯಿಸಿ]

ನನಗೆ ಮೂರು ವರ್ಷ ಆದ ಮೇಲೆ ನನ್ನ ಪೋಷಕರು ನನ್ನನ್ನು ಶಾಲೆಗೆ ಸೇರಿಸಿದರು. ನಾನು ಓದಿದ ಶಾಲೆಯ ಹೆಸರು ನವದೀಪ ಪ್ರಾಥಮಿಕ ಮತ್ತು ಹಿರಿಯ ಶಾಲೆ. ನನ್ನ ಶಾಲೆ ನನ್ನ ಮನೆಗೆ ಬಹಳ ಹತ್ತಿರವಿತ್ತು. ನಾನು ನರ್ಸರಿಯಿಂದ ಹಿಡಿದು ೧೦ನೇ ತರಗತಿಯವರೆಗೂ ಅದೇ ಶಾಲೆಯಲ್ಲಿ ವ್ಯಾಸಂಗ ಮಾಡಿದೆ. ಆದ್ದರಿಂದ ನನಗೆ ಶಾಲೆಗೇ ಹೋಗಲು ಎಂದು ಬೇಸರವಾಗಲೇ ಇಲ್ಲ. ನನ್ನ ಶಾಲೆಯಲ್ಲಿ ನನಗೆ ಬಹಳ ಒಳ್ಳೆಯ ಸ್ನೇಹಿತರಿದ್ದರು. ಅದರಲ್ಲಿ ಮಂಜುನಾಥ್, ವಿಶ್ವಾಸ್, ಗೋವರ್ಧನ್, ರಾಕೇಶ್ ನನಗೆ ಉತ್ತಮ ಗೆಳಯರಾಗಿದ್ದರು ಮತ್ತು ನನಗೆ ಎಲ್ಲ ಕಷ್ಟಗಳಲ್ಲೂ ನನಗೆ ಸಹಾಯ ಮಾಡುತ್ತಿದ್ದರು. ನಾನು ನನ್ನ ಶಾಲೆಯ ದಿನಗಳಲ್ಲಿ ಓದುವದರಲ್ಲಿ ಮತ್ತು ಕ್ರೀಡೆಯಲ್ಲಿ ಬಹಳ ಮುಂದಿದ್ದೆ. ನಾನು ಯಾವಾಗಲು ಉತ್ತಮ ಅಂಕ ಪಡಿಯುತ್ತಿದ್ದೆ. ಹಾಗೆಯೇ ಆಟವಾಡುವುದರಲ್ಲಿ ಮುಂದಿದ್ದೆ. ನನಗೆ ಕ್ರಿಕೆಟ್, ಕಬಡ್ಡಿ, ಕಾಲ್ಚೆಂಡು ನೆಚ್ಚಿನ ಕ್ರೀಡೆಗಳು. ನಾನು ಶಾಲೆಯಲ್ಲಿ ಕಳೆದ ಎಲ್ಲ ಕ್ಷಣಗಳು ಉತ್ತಮವಾದ ಕ್ಷಣಗಳು. ನಾನು ಹತ್ತನೇ ತರಗತಿಯಲ್ಲಿ ಶೇಕಡ ೯೧ ರಷ್ಟು ಅಂಕ ಪಡೆದು ಉತ್ತೀರ್ಣನಾದೆ. ನಂತರ ಮುಂದಿನ ವಿದ್ಯಾಭ್ಯಾಸಕ್ಕೆ ರೆಸಿಡೆನ್ಸಿ ರಸ್ತೆಯಲ್ಲಿರುವ ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿಗೆ ಸೇರಿಕೊಂಡೆ. ನಾನು ಕಾಲೇಜಿನಲ್ಲಿ ವಾಣಿಜ್ಯ ವಿಭಾಗವನ್ನು ಆರಿಸಿಕೊಂಡೆ. ನಾನು ಓದಿದ್ದು ಬಾಲಕರ ಕಾಲೇಜಿನಲ್ಲಿ. ಅದು ಬೆಂಗಳೂರಿನಲ್ಲಿ ಉತ್ತಮ ಕಾಲೇಜುಗಳಲ್ಲಿ ಒಂದಾಗಿದೆ. ಬಹಳಷ್ಟು ಚಟುವಟಿಕೆಗಳಲ್ಲಿ ಸಂತ ಜೋಸೆಫರ ಕಾಲೇಜ್ ಮುಂದಿತ್ತು. ಅಲ್ಲಿಯೂ ಸಹ ಉತ್ತಮವಾದ ಎರಡು ವರ್ಷವನ್ನು ಮುಗಿಸಿದೆ. ಒಳ್ಳೆಯ ಗೆಳೆಯರನ್ನು ಸಂಪಾದಿಸಿದೆ. ಕಾಲೇಜಿನಲ್ಲಿಯು ಓದುವುದರಲ್ಲಿ ಬಹಳ ಮುಂದಿದ್ದೆ. ದ್ವಿತೀಯ ಪಿ.ಯು.ಸಿಯಲ್ಲಿ ಶೇಕಡ ೮೯ ರಷ್ಟು ಅಂಕ ಪಡೆದು ಉತ್ತೀರ್ಣನಾದೆ. ನಾನು ಕಾಲೇಜಿಗೆ ಸೇರಿದ ಮೇಲೆ ಟೇಬಲ್ ಟೆನ್ನಿಸ್ ಮತ್ತು ಇತರ ಆಟವನ್ನು ಆಡಲು ಕಲಿತೆ. ಪ್ರಸಕ್ತ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ ಪ್ರಥಮ ವರ್ಷ ವ್ಯಾಸಂಗ ಮಾಡುತಿದ್ದೇನೆ.

Christ University Auditorium.jpg
ಕ್ರೈಸ್ಟ್ ವಿಶ್ವವಿದ್ಯಾಲಯ

ಆಸಕ್ತಿ

[ಬದಲಾಯಿಸಿ]

ನನಗೆ ಬಹಳಷ್ಟು ವಿಷಯದಲ್ಲಿ ಆಸಕ್ತಿ ಇದೆ. ನನಗೆ ಕ್ರಿಕೆಟ್ ಆಟವೆಂದರೆ ಬಹಳ ಅಚ್ಚುಮೆಚ್ಚು. ಕ್ರಿಕೆಟ್ ಆಡುವುದು ಇಷ್ಟ, ದೂರದರ್ಶನದಲ್ಲಿ ನೋಡುವುದು ಇಷ್ಟ. ರಜಾ ಸಿಕ್ಕರೆ ಗೆಳೆಯರೊಡನೆ ಆಟವಾಡಲು ಬಯಸುತ್ತೇನೆ. ಇತರ ಆಸಕ್ತಿಗಳೆಂದರೆ ದೂರದರ್ಶನ ನೋಡುವುದು, ಗೆಳೆಯರ ಜೊತೆ ಸಿನಿಮಾ ಮಂದಿರಕ್ಕೆ ಹೋಗಿ ಸಿನಿಮಾ ನೋಡುವುದು, ಹಾಡು ಕೇಳುವುದು ಬಹಳ ಇಷ್ಟ. ಅದರಲ್ಲಿಯೂ ಸಿನಿಮಾ ನೋಡುವುದೆಂದರೆ ಬಹಳ ಇಷ್ಟ. ನನಗೆ ಸ್ನೇಹಿತರ ಜೊತೆಗೆ ಹೊರಗೆ ಹೋಗುವುದು ಬಹಳ ಇಷ್ಟ. ಹಸಿರಿನಿಂದ ತುಂಬಿದ ಜಾಗಕ್ಕೆ ಹೋಗುವುದು ನನಗೆ ಬಹಳ ಇಷ್ಟ.