ಚರ್ಚೆಪುಟ:ರತನ್‌ಜಿ ಟಾಟಾ
(sunkadavar ೦೯:೪೭, ೧ ಜನವರಿ ೨೦೦೮ (UTC)) ಈ ಕೆಳಗಿನ ನನ್ನ ಹಾಗೂ, ನಾರಾಯಣ್ ರವರ ಅಭಿಪ್ರಾಯಗಳು ಸುಮಾರು, ಒಂದು ವಾರಕ್ಕಿಂತ ಹಳೆಯವು. ನಮ್ಮ ಸಂದೇಹ ನಿವಾರಣೆಯಾಗಿದೆ. ಅದರ ತಥ್ಯ, ಹೀಗಿದೆ.
೧. ಮೊದಲನೆಯದಾಗಿ, ಕೆಳಗಿನ ಮಾತುಕತೆಗಳನ್ನು ಕಡಿದುಹಾಕಿ.
೨. ಟಾಟಾ ಕಂಪೆನಿಯ ಎಲ್ಲ ವಿಭಾಗಗಳೂ, ಮತ್ತು ವ್ಯಕ್ತಿಗಳನ್ನೂ ಟಾಟಾ ಎಂದೆ ಸಂಬೋದಿಸಿ. ಟಾಟ ಸರಿಯಲ್ಲ.
೩. ಶಿರೋನಾಮೆಯಲ್ಲೇ ಸರ್, ಇದ್ದರೆ ಅದನ್ನೂ ಲಗತ್ತಿಸಿ. ನಮಗೆ ಅದನ್ನು ತಿದ್ದುವುದು ಗೊತ್ತಿಲ್ಲ. ನೀವು ತಿಳಿಯಹೇಳಿದರೆ, ನಾವೇ ತಿದ್ದುವ ಕೆಲಸಮಾಡುತ್ತೇವೆ.
ಧನ್ಯವಾದಗಳು. ಹೊಸವರುಷ, ನಮ್ಮಲ್ಲಿ ಬರುವ ವೈಮನಸ್ಯಗಳನ್ನು ತೆಗೆದುಹಾಕಿ, ಬಾಂಧವ್ಯವನ್ನು ಇನ್ನೂ ಹದವಾಗಿ, ಬೆಸೆಯಲಿ !
" ವೈಮನಸ್ಸು ಬರುವುದು ಸಹಜ. ಆದರೆ ಅದನ್ನು ಓಡಿಸುವುದೂ ಸಹಜವೇ "....!
ಟಾಟ ಕುಟುಂಬದವರ ಲೇಖನಗಳ ಶೀರ್ಷಿಕೆಗಳು
[ಬದಲಾಯಿಸಿ]ಟಾಟ, ಪರಿವಾರದ ಪ್ರಮುಖರನ್ನು ನಾನು ಸಂಪೂರ್ಣವಾಗಿ ಪರಿಚಯಿಸಲು ಪ್ರಯತ್ನಿಸುತ್ತಿದ್ದೇನೆ. ನಾನು ಟಾಟರವರ ಸಹೋದರಿಯರ ಪತಿಗಳ, ಬಗ್ಗೆ ಸಾಧ್ಯವಾದರೆ ಪ್ರಕಟಿಸುತ್ತೇನೆ.
ನಾನು ಬರೆಯಲು ಆರಂಭಿಸಿದಾಗ, ಜೆ. ಆರ್. ಡಿ. ಟಾಟಾ, ಲೇಖನ ಇತ್ತು. ನಾನು ಅದರಲ್ಲಿ ಕೆಲವು ಅಂಶಗಳನ್ನು ಸೇರಿಸಿಸಂಪಾದಿಸಿದ್ದೇನೆ. ಅದನ್ನು ಇನ್ನೂ ಪೂರ್ಣವಾಗಿ ಸಂಪಾದಿಸಲು ವಿಶಯ ಸಂಗ್ರಹಿಸುತ್ತಿದ್ದೇನೆ. ಮುಂದಿನ ವಾರದಲ್ಲಿ ಅದು ಸಿದ್ಧವಾಗುತ್ತದೆ. ಇಲ್ಲಿ ಸ್ವಲ್ಪ ತೊಡಕೆಂದರೆ, ಕೆಲವು ಕಡೆ ಬರಿ, ಟಾಟ ಎಂದು ಮಾತ್ರ ಬರೆದಿದ್ದೇನೆ. ಮತ್ತು ಸರ್ ಇತ್ಯಾದಿ ಶಿರೋನಾಮದಲ್ಲಿ ಬಂದಿಲ್ಲ. ಅದನ್ನು ಸರಿಪಡಿಸುವ ಬಗ್ಗೆ ತಿಳಿಸಿ. ದಯಮಾಡಿ,ನೀವೇ ಸರಿಪಡಿಸಿ. ಎಲ್ಲರಿಗೂ ಟಾಟ, ಎಂಬ ಹೆಸರಿರಲಿ. ಟಾಟಾ ಬೇಡ. ರತನ್ ಟಾಟ, ಪದೇ ಪದೇ ರಿಪೀಟ್ ಆಗುತ್ತೆ. ಅದನ್ನು ಸರಿಯಾಗಿ ನಾವು ಧಾಕಲಿಸಬೇಕಾಗುತ್ತೆ. ನನ್ನ ಜೆ. ಆರ್. ಡಿ ಟಾಟಾ ಲೇಖನ ತಯಾರಾಗಿದೆ. ಇದರಲ್ಲಿ ಬಹಳ ಮಾಹಿತಿಗಳನ್ನು ಸೇರಿಸಿದ್ದೇನೆ.
ಉದಾ :
೧. ಜಮ್ ಸೆಟ್ ಜಿ ನುಝರ್ ವಾನ್ ಜಿ ಟಾಟ. ಶೀರ್ಷಿಕೆ ಸರಿಯಾಗಿದೆ.
೨. ರತನ್ ಜಿ ದಾದಾಭಾಯ್ ಟಾಟ.(ಆರ್. ಡಿ ಟಾಟ). ಸರಿಯಾಗಿದೆ.
೩. ಸರ್ ದೊರಾಬ್ ಟಾಟ.ಇದರಲ್ಲಿ ಶಿರೋನಾಮದಲ್ಲಿ ಸರ್ ಬಂದಿಲ್ಲ.
೪. ಸರ್ ರತನ್ ಟಾಟ, ಅಂತ ಇರಬೇಕು
೫. ಜೆ.ಆರ್. ಡಿ. ಟಾಟಾ- ಇದನ್ನು ಟಾಟ ಅಂದರೆ ಸಾಲದೇ ?
೬. ರತನ್ ನಾವಲ್ ಟಾಟ.ಶಿರೋನಾಮದಲ್ಲಿ ಬರಲಿ.
ಇದು. ನನಗನ್ನಿಸಿದ ಬದಲಾವಣೆ. ದಯಮಾಡಿ ಸ್ಪಂದಿಸಿ. ಮತ್ತು ಸರಿಪಡಿಸಿ. (sunkadavar ೦೩:೩೫, ೧೮ ಡಿಸೆಂಬರ್ ೨೦೦೭ (UTC))
- ಕನ್ನಡದಲ್ಲಿ ಟಾಟಾ ಎಂಬ ಹೆಸರು ಬಳಕೆಯಲ್ಲಿದೆ, ಟಾಟ ಅಲ್ಲ. ವಿಕಿಪೀಡಿಯಾದಲ್ಲಿ ಈ ಬಗ್ಯೆ ಹುಡುಕುವವರು ಕೂಡಾ ಟಾಟಾ ಎಂಬ ಸರ್ಚ್ ಪದ ಹಾಕುವ ಸಂಭವ ಹೆಚ್ಚಿದೆ. ಆದ್ದರಿಂದ ಎಲ್ಲಾ ಕಡೆಗಳಲ್ಲಿಯೂ ಟಾಟಾ (ಟಾಟ ಅಲ್ಲ) ಎಂದೇ ಬರೆಯುವುದು ಸಮಂಜಸ ಎಂದು ನನ್ನ ಅಭಿಪ್ರಾಯ. --ನಾರಾಯಣ
ನಾರಾಯಣ ಅವರ commentಗೆ ಮೊದಲು ನಾನು ಜೆ.ಆರ್.ಡಿ. ಟಾಟ ಲೇಖನವನ್ನು ಸ್ಥಳಾಂತರಿಸಿದ್ದೆ. ಇದರ ಬಗ್ಗೆ ಒಮ್ಮತ ಬಂದ ಮೇಲೆ ಮುಂದಿನ ಶೀರ್ಷಿಕೆ ಬದಲಾವಣೆಗಳನ್ನು ತರೋಣ. ಸಾಮಾನ್ಯವಾಗಿ ಯಾವ ಹೆಸರು ಉಪಯೋಗಿಸಲಾಗುತ್ತದೆ ಎಂದು ನನಗೆ ತಿಳಿದಿಲ್ಲ. ಶುಶ್ರುತ \ಮಾತು \ಕತೆ ೦೪:೧೪, ೨೦ ಡಿಸೆಂಬರ್ ೨೦೦೭ (UTC)
(sunkadavar ೦೪:೨೭, ೨೦ ಡಿಸೆಂಬರ್ ೨೦೦೭ (UTC)) ಸರಿ. ನನ್ನ ಒಪ್ಪಿಗೆ ಇದೆ. ಒಟ್ಟಿನಲ್ಲಿ ಅದನ್ನು ಚರ್ಚಿಸಿ, ಒಮ್ಮತ ಬಂದಮೇಲೆ ಏಕರೀತಿಯಲ್ಲಿ ಬರೆಯಲು ಪ್ರಯತ್ನಿಸೋಣ. ಕನ್ನಡದಲ್ಲಿ ನಾವು, ತಾತಾ ಇನ್ಸ್ಟಿಟ್ಯೂಟ್ ಅಂತ ನಾವು ಕರೆತಿದ್ವಿ. ಮುಂಬೈನಲ್ಲಿ ಟಾಟ ಅಂತ ಕರೆಯುವುದನ್ನು ಗಮನಿಸಿದ್ದೆ.
(59.184.27.33 ೦೬:೨೮, ೨೦ ಡಿಸೆಂಬರ್ ೨೦೦೭ (UTC)) ಈಗ ತಾನೆ ನಾನು ಹುಡುಕಿದ ಪ್ರಕಾರ, ಇಂಗ್ಲೀಷ್ ನಲ್ಲಿ ಗೂಗಲ್ ನಲ್ಲಿ ಹುಡುಕಲು ನಾವು, Tata, ಹಾಗೂ TaTa, ಬರೆಯುತ್ತೇವೆ.TATA ಪದ ಅವರ ಕಂಪೆನಿಯ ಲೋಗೊದಲ್ಲಿದೆ. ಚಿಕ್ಕ ಅಕ್ಷರ a. ಬರಿತಿವಿ. ಗುಜರಾತಿಯಲ್ಲಿ : ટાટા , ಮರಾಠಿಯಲ್ಲಿ : टाटा ಅಥವ ಹಿಂದಿಯಲ್ಲಿ ಬರೆಯುವ ಕ್ರಮ : टाटा, ಕನ್ನಡದಲ್ಲಿ ಟಾಟ. ನಮ್ಮಲ್ಲಿ ಅರ್ಥ ಅಕ್ಷರಗಳಿಲ್ಲ. ಹಿಂದಿಯಲ್ಲಿ, ಮರಾಠಿ, ಗುಜರಾತಿಯಲ್ಲಿ, ಅರ್ಧ ಅಕ್ಷರಗಳಿವೆ. ક્-ಕ್ ಇದೆ. ટ્ ಇದೆ. ಹಿಂದಿ ಗುಜರಾತಿಯಲ್ಲಿ ट्-ಟ್ ಇದೆ. ಕನ್ನಡದಲ್ಲಿ ಕ್ ಇಲ್ಲ. ಟ್ ಇಲ್ಲ. ಅವೆಲ್ಲ ಕ. ಅಥವ ಟ ಎಂದೆ ಹೇಳಲ್ಪಡುತ್ತವೆ. ಅದರಿಂದ ಟಾಟ, ಸರಿಯಾದ ಪದವೆಂದು ನನ್ನ ಅಭಿಮತ.
- ಗೂಗಲ್ ನಲ್ಲಿ ಟಾಟಾ ಎಂದು ಹುಡುಕುಪದ ಹಾಕಿದಾಗ 25,600 ಫಲಿತಾಂಶಗಳು ಬಂದವು. ಇವುಗಳಲ್ಲಿ ಕೆಲವು ಟಾಟಾ, ಬೈಬೈ ಎಂಬ ಅರ್ಥದಲ್ಲಿ ಉಪಯೋಗಿಸಲಾಗಿದ್ದರೂ , ಬಹುತೇಕ ರೆಫೆರೆನ್ಸುಗಳು ಟಾಟಾ ಉದ್ಯೋಗಸಮೂಹವನ್ನು ಉದ್ದೇಶಿಸಿದ್ದಾಗಿದೆ.
- ಅದೇ ಟಾಟ ಎಂದು ಹಾಕಿದಾಗ ಕೇವಲ 447 ಬಂದವು. ಇವುಗಳಲ್ಲಿಯೂ ಕೆಲವು ಟಾಟಾ ,,ಬೈಬೈ ಎಂಬರ್ಥದ್ದು , ಕೆಲವು ಕನ್ನಡ ವಿಕಿಪೀಡಿಯಾದ ಇವೇ ಲೇಖನಗಳ ಟಾಟ ಶಬ್ದವನ್ನು ತೋರಿಸುವಂಥದ್ದು . ಇನ್ನುಳಿದ ಕೆಲವೇ ಕೆಲವು ಟಾಟಾ ಸಮೂಹವನ್ನು ಉದ್ದೇಶಿಸಿ ಬರೆದವು. ಇವುಗಳಲ್ಲಿಯೂ ಕೆಲವು ಲೇಖನಗಳ ಶೀರ್ಷಿಕೆ ಟಾಟಾ ಎಂದೇ ಇದೆ.
- ನೀವೇ ಮಾಡಿ ನೋಡಿ. ಟಾಟಾ ಮತ್ತು ಟಾಟ ಎಂದು ಕನ್ನಡ ಲಿಪಿಯಲ್ಲಿ ಟೈಪಿಸಿ. Narayana ೧೬:೪೦, ೨೦ ಡಿಸೆಂಬರ್ ೨೦೦೭ (UTC)
(sunkadavar ೧೭:೨೧, ೨೦ ಡಿಸೆಂಬರ್ ೨೦೦೭ (UTC)) ನನ್ನದು ಮುಕ್ತಮನಸ್ಸು. ವಿವಾದ ಸೃಷ್ಟಿಮಾಡುವುದಲ್ಲ. ರಾಮ, ಎಂದು ಬರೆಯಲು ಹಿಂದಿ ಗುಜರಾತಿಯಲ್ಲಿ, ಅವರು राम्,રામ્ ಹೀಗೆ ಬರಿಯಬೇಕು. ಅವರು ರಾಮ್ ಎನ್ನುತ್ತಾರೆ. ರಾಮ ಎನ್ನಲು, ಅವರು ಹೀಗೆ ಬರೆಯಬೇಕಾಗುತ್ತೆ.રામ્, રામ. ಒಟ್ಟಿನಲ್ಲಿ ಗೂಗಲ್ ಹುಡುಕು, ಪ್ರಕಾರ, ಅದು, ಟಾಟಾ, ಎಂದೇ ಇರಲಿ. ನನ್ನ ಒಪ್ಪಿಗೆ ಇದೆ. ಶ್ರೀ. ಶುಶೃತರು, ತಮ್ಮ ಕೆಲಸವನ್ನು ಮುಂದುವರೆಸಬಹುದು. ಇದು ನಿರ್ಧಾರವಾದ ವಿಷಯ. ಧನ್ಯವಾದಗಳು.
(sunkadavar ೦೧:೨೦, ೩೦ ಡಿಸೆಂಬರ್ ೨೦೦೭ (UTC)) ರತನ್ ನಾವಲ್ ಟಾಟಾ, ಬೇರೆ. ಸರ್ ರತನ್ ಟಾಟಾ , ಬೇರೆ. ನಾನು ಹೇಳಿದ್ದು. ಶೀರ್ಶಿಕೆಯಲ್ಲಿ, ಸರ್ ರತನ್ ಟಾಟಾ ಎಂದಿರಲಿ ಅಂತ.
- ಸರಿ. ಈಗ ಸರ್ ರತನ್ ಟಾಟಾ ಮತ್ತು ರತನ್ ಟಾಟ ಪುಟಗಳೆರಡೂ ಈ ಪುಟಕ್ಕೆ ರೀಡೈರೆಕ್ಟ್ ಆಗುತ್ತದೆ. ರತನ್ ನಾವಲ್ ಟಾಟಾ ಬೇರೆ ಪುಟವಾಗಿದೆ. ಈ ಪುಟದ ಪ್ರಾರಂಭದಲ್ಲಿ ದ್ವಂದ್ವನಿವಾರಣೆಗೆ ಮಾಹಿತಿಯನ್ನು ನೀಡಲಾಗಿದೆ. ಈ ವ್ಯವಸ್ಥೆ ಸರಿಯೇ? ಶುಶ್ರುತ \ಮಾತು \ಕತೆ ೧೯:೩೯, ೩೦ ಡಿಸೆಂಬರ್ ೨೦೦೭ (UTC)
(sunkadavar ೦೨:೨೨, ೧ ಜನವರಿ ೨೦೦೮ (UTC)) ಈ ವ್ಯವಸ್ಥೆ ಸರಿಯಿಲ್ಲ. ಏನುಮಾಡೋದು ? ಮೊದಲು ಕೆಲವು ಅನುಮಾನಗಳನ್ನು ನಾನು ತಿಳಿಸಿದ್ದೆ. ಅದನ್ನು ನಮ್ಮ ಮಾನ್ಯ ನಾರಾರಾಯಣರು ತಮ್ಮ ಅಭಿಪ್ರಾಯವನ್ನು ಸೂಚಿಸಿದರು. ಸರಿಯಾದದ್ದನ್ನು ನಾವು ಇಬ್ಬರು ವಿಕಿಪೀಡಿಯದ ಓದುಗರ ಹಿತದಿಂದ ಒಪ್ಪಿದೆವು. ಇದು ಅನಿನಿವಾರ್ಯ ಅಲ್ಲವೇ ? ನೀವೇನ್ ಹೇಳ್ತಿರಿ ?