ಸರ್ ದೊರಾಬ್ ಟಾಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೊರಾಬ್ ಟಾಟಾ
ಚಿತ್ರ:Sir. DorabjiTata1.jpg
ಸರ್ ದೊರಾಬ್ ಟಾಟಾ
ಜನನ(೧೮೫೯-೦೮-೨೭)೨೭ ಆಗಸ್ಟ್ ೧೮೫೯
ಮರಣ3 June 1932(1932-06-03) (aged 72)
ರಾಷ್ಟ್ರೀಯತೆಭಾರತೀಯ
ಶಿಕ್ಷಣ ಸಂಸ್ಥೆGonville and Caius College, Cambridge
ವೃತ್ತಿಬೃಹತ್ ಉದ್ಯೋಗಪತಿ
Known forಟಾಟಾ ಸ್ಟೀಲ್ Tata Steel
ಸಂಸ್ಥಾಪಕ ಟಾಟಾ ಪವರ್
ಟಾಟಾ ಕೆಮಿಕಲ್ಸ್
ಸಂಗಾತಿಮೆಹರ್ ಬಾಯಿ ಟಾಟಾ
ಮಕ್ಕಳುಮಕ್ಕಳಿಲ್ಲ
ಪೋಷಕ ಜಮ್ ಸೆಟ್ಜಿ ಟಾಟಾ ಹಾಗೂ ಹೀರಾಬಾಯಿ ದಂಪತಿಗಳು

(ಆಗಸ್ಟ್, ೨೭, ೧೮೫೯-ಜೂನ್ ೩, ೧೯೩೨)

ಇವರು ಟಾಟಾ ಬೃಹದ್ ಸಂಸ್ಥೆಯ ಮೂಲ ಸ್ಥಾಪಕರಾದ ಜಮ್‍ಸೆಟ್‍ಜಿ ನುಝರ್‍ವಾನ್‍ಜಿ ಟಾಟ ರವರ ಹಿರಿಯ ಮಗ. ಜೆ. ಎನ್.ಟಾಟಾ, ದೊರಾಬ್ ಟಾಟಾ [೧]ಹಾಗೂ ರತನ್ ದಾಧಾಭಾಯಿ ಟಾಟಾ, ಒಟ್ಟಾಗಿ ಟಾಟಾ ಅಂಡ್ ಸನ್ಸ್ ಕಂಪೆನಿಯ ಡೈರೆಕ್ಟರ್ಸ್ ಆಗಿ ಕೆಲಸ ಮಾಡುತ್ತಿದ್ದರು. ತಂದೆಯವರಾದ ಶ್ರೀ ಜಮ್ ಸೆಟ್ ಜಿ ನುಝರ್ ವಾನ್ ಜಿ ಟಾಟಾ ಅವರ ಕನಸುಗಳನ್ನು ನನಸು ಮಾಡಲು ಶ್ರಮಿಸಿ ಅದರಲ್ಲಿ ಯಶಸ್ಸು ಕಂಡರು. ಟಾಟಾ ಸ್ಟೀಲ್, ಟಾಟಾ ಪವರ್ ಮತ್ತು ಟಾಟಾ ಇಸನ್ಸ್ಟಿಟ್ಯೂಟ್ , ಬೆಂಗಳೂರು ಮತ್ತು ಹಲವು ಉದ್ಯಮಗಳನ್ನು ಜಮ್ ಶೆಟ್ ಜಿ ರವರು ಬಹಳವಾಗಿ ಹಚ್ಚಿಕೊಂಡಿದ್ದರು.

ದೊರಾಬ್ ಟಾಟಾರವರ ಬಾಲ್ಯ, ವಿದ್ಯಾಭ್ಯಾಸ, ಹಾಗೂ ಟಾಟಾ ಸಾಮ್ರಾಜ್ಯದ ಗುರುತರ ಜವಾಬ್ದಾರಿ[ಬದಲಾಯಿಸಿ]

ದೊರಾಬ್ ಟಾಟಾ ರವರು ಭಾರತದ ಪ್ರಪ್ರಥಮ ಬೃಹತ್ ಕೈಗಾರಿಕಾ ಔದ್ಯೋಗಿಕ ಮಹಾಶಿಲ್ಪಿಯಾದ ಜಮ್ ಸೆಟ್ ಜಿ ನುಝುರ್ ವಾನ್ ಜಿ ಟಾಟಾ ಹಾಗೂ ಅವರ ಪತ್ನಿ ಲೇಡಿ ಹೀರಬಾಯಿ ಯವರ ಚೊಚ್ಚಲ ಮಗನಾಗಿ ೧೮೫೯ ರಲ್ಲಿ ಜನಿಸಿದರು. ಅವರ ಪ್ರಾಧಮಿಕ ವಿದ್ಯಾಭ್ಯಾಸ ಬೊಂಬಾಯಿನ ಪ್ರೊಪ್ರೈಟರಿ ಶಾಲೆಯಲ್ಲಿ ಜರುಗಿತು. ೧೮೭೫ ರಲ್ಲಿ ಅವರು ಇಂಗ್ಲೆಂಡ್ ಗೆ ಹೋಗಿ ಅಲ್ಲಿ, ಖಾಸಗಿ ಶಿಕ್ಷಕರ ಸಹಾಯದಿಂದ ವಿದ್ಯಾಜ್ಞಾನವನ್ನು ಹೊಂದಿದರು. ೧೮೭೯ ರಲ್ಲಿ ಕೆಂಬ್ರಿಡ್ಜ್ ನ ಗೊನ್ವಿಲ್ಲೆ ಕೆಯಸ್ ಕಾಲೇಜ್ನಲ್ಲಿ ೨ ವರ್ಷ ಶಿಕ್ಷಣ ಮುಂದುವರೆಸಿದರು. ಅಲ್ಲಿಂದ ಅವರು ಭಾರತಕ್ಕೆ ಬಂದು ಬೊಂಬಾಯಿನ ಸೇಂಟ್ ವ್ಝೇವಿಯರ್ಸ್ ಕಾಲೇಜ್ನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ ೧೮೮೨ ರಲ್ಲಿ, ಬಿ.ಎ. ಪದವಿಯನ್ನು ಸಂಪಾದಿಸಿದರು. ಪದವಿಯ ನಂತರ ಅವರು ೨ ವರ್ಷಗಳ ಕಾಲ ಆಗಿನ ಕಾಲದ ಹೆಸರುವಾಸಿಯಾಗಿದ್ದ, "ಬಾಂಬೆ ಗೆಝೆಟ್ " ಪತ್ರಿಕೆಯಲ್ಲಿ ದುಡಿದರು. ೧೮೮೪ ರಲ್ಲಿ ಅವರ ತಂದೆಯವರ ಆಶೆಯಂತೆ ದಕ್ಷಿಣ ಭಾರತದ ಪಾಂಡುಚೆರಿ ಗೆ ಹೋಗಿ ಹತ್ತಿ ಗಿರಣಿಗಳನ್ನು ಸ್ಥಾಪಿಸುವ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಿದರು. ಅಲ್ಲಿಂದ ನಾಗ್ ಪುರ್ ಗೆ ಬಂದು ಜಮ್ ಶೆಟ್ ಜಿ ರವರು ೧೮೭೭ ರಲ್ಲಿ ಪ್ರಾರಂಭಿಸಿದ್ದ ಎಂಪ್ರೆಸ್ ಮಿಲ್ಸ್ನಲ್ಲಿ ಕೆಲಸ ನೋಡಿಕೊಂಡರು. ಹತ್ತಿ ಉದ್ಯಮದ ಹಲವು ಮಜಲುಗಳನ್ನು ಕಣ್ಣಾರೆ ಕಾಣುವ ಅವಕಾಶ ಅವರಿಗೆ ಅಲ್ಲಿ ದೊರೆಯಿತು. ಸೆಟ್ ಜಿ ಅವರನ್ನು ಮೈಸೂರಿಗೆ ಕಳಿಸಿಕೊಟ್ಟರು. ಅಲ್ಲಿ ಪ್ರಥಮ ಇನ್ ಸ್ಪೆಕ್ಟರ್ ಜನರಲ್ ಆಫ್ ಎಜುಕೇಷನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಶ್ರೀ. ಹೆಚ್. ಜೆ. ಬಾಬ ರ ಸಂಪರ್ಕ ಬೆಳೆಯಿತು. ಅಲ್ಲಿದ್ದಾಗ ಅವರ ೧೮ ವರ್ಷದ ಮಗಳು, ಮೆಹರ್ ಬಾಯಿಯವರ ಜೊತೆ ಸ್ನೇಹ ಬೆಳೆದು ೧೮೯೭ ರಲ್ಲಿ, ಅವರನ್ನು ವಿವಾಹವಾದರು. ಆಗ ದೊರಾಬ್ ಗೆ ೩೮ ವರ್ಷ ವಯಸ್ಸು. ೧೮೯೬ ರಲ್ಲಿ ಜಮ್ ಸೆಟ್ ಜಿ ಅವರ ಜೊತೆಗೆ ರತನ್ ದಾದಾಭಾಯ್ ಟಾಟಾ ಸೇರಿದಂತೆ ದೊರಾಬ್ ಅವರೂ "ಟಾಟಾ ಮತ್ತು ಮಕ್ಕಳು ಕಂ"ಕಂಪನಿಯ ಪಾಲುದಾರರಾಗಿ ತಮ್ಮನ್ನು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು.

" ಸರ್ ದೊರಾಬ್ ಟಾಟಾ, ಟ್ರಸ್ಟ್ " ನ ವತಿಯಿಂದ ಧನ-ಸಹಾಯಗಳಿಸಿದ ಸಂಸ್ಥೆಗಳು[ಬದಲಾಯಿಸಿ]

 • Indian Institute of Science, Bangalore.
 • TATA Cancer Research Centre, Bombay.
 • TATA Institute of Social Sciences (TISS), Bombay.[೨]
 • TATA Blood Bank, Bombay.
 • National Centre for Performing Arts (NCPA),Bombay.
 • Institute of Population Study, Bombay.

ಸರ್ ದೊರಾಬ್ ಟಾಟ ಬಹಳ ಗುರುತರ ಜವಾಬ್ದಾರಿ ಹೊತ್ತರು[ಬದಲಾಯಿಸಿ]

೧೯೦೪ ರಲ್ಲಿ ಜಮ್ ಶೆಟ್ ಜಿ ಮರಣ ಹೊಂದಿದಾಗ ದೊರಾಬ್ ಟಾಟಾ ಅತ್ಯಂತ ಜವಾಬ್ದಾರಿಯುತವಾದ ಹುದ್ದೆಯನ್ನು ನಿಭಾಯಿಸಬೇಕಾಯಿತು. ಅವರ ತಮ್ಮ ರತನ್ ೧೨ ವರ್ಷ ಚಿಕ್ಕವರು. ಟಾಟಾ ಸಾಮ್ರಾಜ್ಯದ ಕಾರ್ಯಭಾರವೆಲ್ಲಾ ಹಿರಿಯಮಗಾದ ದೊರಬ್ ಅವರ ಮೇಲೆ ಬಿತ್ತು. ದೊರಾಬ್ ರಿಗೆ ಭುಜಕ್ಕೆ ಭುಜ ಕೊಟ್ಟು ಸಹಾಯ ಮಾಡಿದ ದಾದಾಭಾಯ್ ಭಾಯಿರತನ್ ಭಾಯಿ ಯವರು ನಿಜಕ್ಕೂ ಅಭಿನಂದನಾರ್ಹರು. ಸಾಯುವ ಮೊದಲು ಜಮ್ ಸೆಟ್ ಜಿ ಅವರು ಮಗನನ್ನು ಮತ್ತು ರತನ್ ರವರನ್ನೂ ಒಟ್ಟಿಗೆ ಕೂಡಿಸಿಕೊಂಡು ಟಾಟಾ ಸಾಮ್ರಾಜ್ಯವನ್ನು ಚೆನ್ನಾಗಿ ವೃದ್ಧಿಪಡಿಸಿ, ಇನ್ನೂ ಹೆಚ್ಚು ಹೆಚ್ಚು ಪ್ರಗತಿಪರ, ಉದ್ಯೋಗ ಗಳಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುವಂತೆ ಮತ್ತು ಭಾರತದ ಸಂಪತ್ತನ್ನು ಹೆಚ್ಚಿಸಲು ಸಹಾಯಕವಾಗುವ ಮೂಲಭೂತ ಸೌಕರ್ಯಗಳನ್ನೊದಗಿಸುವ ಹಲವಾರು ಕಂಪೆನಿಗಳನ್ನು ಶುರುಮಾಡಲು ಪ್ರೋತ್ಸಾಹಿಸಿದ್ದರು.

 1. ಸ್ಟೀಲ್,
 1. ವಿದ್ಯುಚ್ಛಕ್ತಿ,
 1. ಇಂಟೆಗ್ರೇಟೆಡ್ ಸ್ಟೀಲ್ ಪ್ಲಾಂಟ್,
 1. ೩ ಹೈಡ್ರೋ ಎಲೆಕ್ಟ್ರಿಕ್ ಪವರ್ ಕಂಪೆನಿಗಳು,
 1. ೨ ಸಿಮೆಂಟ್ ಕಂಪೆನಿಗಳು,
 1. ದೊಡ್ಡ ಅಡುಗೆ ಎಣ್ಣೆತಯಾರಿಸುವ ಕಾರ್ಖಾನೆಗಳು,
 1. ಸಾಬೂನು ತಯಾರಿಸುವ ಕಾರ್ಖಾನೆಗಳು,
 1. ಭಾರಿ ಇನ್ಶೂರೆನ್ಸ್ ಕಂಪೆನಿ.
 1. "ಬೆಂಗಳೂರಿನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಅಫ್ ಸೈನ್ಸ್," ಇತ್ಯಾದಿ.

ಸರ್ ದೊರಾಬ್ ಟಾಟಾ, ಮತ್ತು ಸರ್ ರತನ್ ಟಾಟಾ ಹಾಗೂ ಆರ್.ಡಿ. ಟಾಟಾ, ಜಮ್ ಸೆಟ್ ಜಿಯವರ ಕನಸನ್ನು ನನಸು ಮಾಡಿದರು

ದೊರಾಬ್ ಟಾಟಾರವರ ವ್ಯಕ್ತಿತ್ವ[ಬದಲಾಯಿಸಿ]

ದೊರಾಬ್ ಒಳ್ಳೆಯ ಧೃಢಕಾಯದ ಆರೋಗ್ಯವಂತ ಆಟಗಾರ. ಕುದುರೆಸವಾರಿ ಅವರಿಗೆ ಬಲು ಪ್ರಿಯ. ಬಾಂಬೆಯಿಂದ ೧೧೦ ಮೈಲಿ ದೂರದಲ್ಲಿದ ಖಿರ್ಕಿ ಗೆ ತಮ್ಮ ಕುದುರೆಯ ಮೇಲೆ ಕುಳಿತು ಒಂಬತ್ತೂವರೆ ಗಂಟೆಗಳಲ್ಲಿ ತಲುಪುತ್ತಿದ್ದರು. ಭಾರತದ ಉತ್ತಮ ಕ್ರೀಡಾ ಪಟುಗಳು ಒಲಂಪಿಕ್ ಆಟಗಳಲ್ಲಿ ಭಾಗವಹಿಸುವ ಏರ್ಪಾಡನ್ನು ಮಾಡಿದರು. ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ ನ ಅಧ್ಯಕ್ಷರಾಗಿದ್ದ ಅವರು ೧೯೨೪ ರಲ್ಲಿ ಪ್ಯಾರಿಸ್ ನಲ್ಲಿ ನಡೆದ ಒಲಂಪಿಯನಲ್ಲಿ ಭಾಗವಹಿಸಲು ಭಾರತದಿಂದ ಕೆಲವು ಆಟಗಾರರನ್ನು ತಮ್ಮ ಸ್ವಂತ ಖರ್ಚಿನಲ್ಲಿ ಕಳಿಸಿಕೊಟ್ಟಿದ್ದರು. ಅವರ ಪತ್ನಿ, ಲೇಡಿ ಮೆಹರ್ ಬಾಯಿ ೧೯೩೧ ರಲ್ಲಿ ತಮ್ಮ ೫೨ ನೆಯ ವಯಸ್ಸಿನಲ್ಲಿ ಲ್ಯುಕೊಮಿಯದಿಂದ ನರಳಿ ಮೃತರಾದರು. ಪತ್ನಿಯನ್ನು ಅತ್ಯಂತ ಗಾಢವಾಗಿ ಪ್ರೀತಿಸುತ್ತಿದ್ದ ದೊರಾಬ್ ಆಕೆಯ ನೆನಪಿನಲ್ಲಿ ೧೧ನೇ ಮಾರ್ಚ್ ೧೯೩೧ ರಲ್ಲಿ ಲೇಡಿ ಟಾಟಾಟ್ರಸ್ಟ್ಟನ್ನು ಸ್ಥಾಪಿಸಿದರು. ಕ್ಯಾನ್ಸರ್ ಕಾಯಿಲೆಯ ಇಲಾಜುಮಾಡಲು ರೆಡಿಯಮ್ ಬಳಕೆ ಅನಿವಾರ್ಯವಾಗಿತ್ತು. ಅದಕ್ಕಾಗಿ " ರೇಡಿಯಮ್ ಇನ್ಸ್ಟಿಟ್ಯೂಟ್ ಸ್ಥಾಪನೆ ಅವರ ಗುರಿಯಾಗಿತ್ತು. ಅಂತಹ ಟ್ರಸ್ಟ್ ಶುರುಮಾಡಲು ಹಣದ ಆವಶ್ಯಕತೆ ಇತ್ತು. ತಮ್ಮ ಆಸ್ತಿಯನ್ನೆಲ್ಲಾ ಒಟ್ಟುಗೂಡಿಸಿದರು. ತಮ್ಮ ಬಳಿಯಿದ್ದ ಅತ್ಯಂತ ಬೆಲೆಬಾಳುವ ೨೪೫ ಕ್ಯಾರೆಟ್ ವಜ್ರವನ್ನು ಮಾರಿದರು. ತಮ್ಮ ಬಳಿಯಲ್ಲಿದ್ದ ಸಂಪತ್ತನ್ನೆಲ್ಲಾ ಸಂಗ್ರಹಿಸಿದ ಹಣದ ಒಟ್ಟು ಮೊತ್ತ ೧.೧ ಮಿಲಿಯ ರೂಪಾಯಿಗಳು. ಅಷ್ಟನ್ನೂ ಬಡಬಗ್ಗರಿಗೆ, ದೀನ ದಲಿತರಿಗೆ, ಆಸ್ಪತ್ರೆಯ ಖರ್ಚನ್ನು ನಿಭಾಯಿಸಲು ಆಗದ ಬಡವರಿಗೆ, ವಿಜ್ಞಾನ ಸಂಶೋಧನೆ, ವಿದ್ಯಾಭ್ಯಾಸಕ್ಕೆ, ಮತ್ತು ಸಾಮಾಜಿಕ ಸಂಸ್ಥೆಗಳಿಗೆ ತಮ್ಮ ಸಮಾಜಸೇವೆಯನ್ನು ಮಾಡಲು ಅನುವಾಗುವಂತೆ ಧನಸಹಾಯ ಮಾಡಲು ವಿನಿಯೋಗಿಸಬೇಕೆಂದು ತಮ್ಮ ಉಯಿಲಿನಲ್ಲಿ ನಮೂದಿಸಿದರು. Lady Tata memorial trust Archived 2014-05-17 ವೇಬ್ಯಾಕ್ ಮೆಷಿನ್ ನಲ್ಲಿ. ಕಷ್ಟಪಟ್ಟು ದುಡಿದು ಸಂಗ್ರಹಿಸಿದ ಹಣದ ರಾಶಿಯನ್ನು ಭಾರತದ ಜನತೆಯ ಏಳಿಗೆಗಾಗಿ ಸಮರ್ಪಿಸಿದ ಖ್ಯಾತಿ ಟಾಟಾ ಪರಿವಾರದವರಿಗೆ ಸಲ್ಲಬೇಕು. ಜಮ್ ಸೆಟ್ ಜಿ ಯವರಿಂದ ಮೊದಲುಗೊಂಡು ಪರಿವಾರದ ಎಲ್ಲಾ ಸದಸ್ಯರೂ ಇದನ್ನೇ ತಮ್ಮ ಜೀವನದ ಟಾಟಾ ಪರಿವಾರದ ಮೂಲಮಂತ್ರವನ್ನಾಗಿ ಆರಿಸಿಕೊಂಡರು. ಹೆಚ್ಚಿನ ಪಾಲು ಜನ ಭಾರತದಲ್ಲಿ ತಮ್ಮ ಅಮೋಘ ಸೇವೆ ಸಲ್ಲಿಸಿ, ಭಾರತದ ಸಂಪನ್ನು ಹೆಚ್ಚಿಸಿ, ಭಾರತೀಯರ ಜೀವನದಲ್ಲಿ ಆಶಾಕಿರಣಗಳನ್ನು ಬೆಳಗಿ, ಯೂರೋಪ್ ನಲ್ಲಿ ಮೃತರಾಗಿರುವುದನ್ನು ನಾವು ಗಮನಿಸಬಹುದಾಗಿದೆ.

'ಹುಮತ', 'ಹುಕ್ತ', 'ಹ್ವರ್ ಶ್ತ'-’ದೊರಾಬ್,’ ಮತ್ತು ’ಮೆಹ್ರಿ,’[ಬದಲಾಯಿಸಿ]

ಈ ವಾಕ್ಯಗಳು ಟಾಟ ಪರಿವಾರದ ಎಲ್ಲಾ ಸದಸ್ಯರೂ ಚೆನ್ನಾಗಿ ಪಾಲಿಸಿಕೊಂಡು ಬಂದರು.ಮುಂದಿನ ವರ್ಷಗಳಲ್ಲಿ ಸಹಾಯಧನದ ಮೊತ್ತವನ್ನು ಹೆಚ್ಚಿಸಿ 'ಸರ್ ದೊರಾಬ್ ಟಾಟಾ ಟ್ರಸ್ಟ್' ಪ್ರಾರಂಭಿಸಿದರು.

ನಿಧನ[ಬದಲಾಯಿಸಿ]

ದೊರಾಬ್ ಟಾಟರವರು, ೩ನೇ ಜೂನ್ ೧೯೩೨ ರಂದು ತಮ್ಮ ೭೩ ನೆಯ ವಯಸ್ಸಿನಲ್ಲಿ ಜರ್ಮನಿಯ ಬ್ಯಾಡ್ ಕಿಸೆಂಗಿನ್ ಎಂಬಲ್ಲಿ ಮರಣ ಹೊಂದಿದರು. [೩] ಅವರ ಪಾರ್ಥಿವ ಶರೀರವನ್ನು ತಮ್ಮ ಪ್ರೀತಿಯ ಮಡದಿಯವರ ಸಮಾಧಿಯ ಪಕ್ಕದಲ್ಲಿ, ಬ್ರೂಕ್ ವುಡ್ ಸಿಮೆಟ್ರಿನಲ್ಲಿ ದಫನಾಯಿಸಲಾಯಿತು. ಅವರಿಗೆ ಮಕ್ಕಳಿರಲಿಲ್ಲ. ಸಮಾಧಿಯ ಮೇಲೆ ಕೆತ್ತಿರುವ ಸಾಲುಗಳು, ಹುಮತ, ಹುಕ್ತ, ಹ್ವರ್ ಶ್ತ-ದೊರಾಬ್, ಮೆಹ್ರಿ. ಅಂದರೆ, ಸದ್ವಿಚಾರ, ಸದ್ವಾಣಿ ಮತ್ತು ಸತ್ಕಾರ್ಯ (Good Thoughts, Good Words, ಹಾಗೂ Good Deeds). ಇವು ಪಾರ್ಸಿ ಸಂತ ಝರತುಷ್ಟ್ರರ ಹಿತೋಕ್ತಿಗಳು. ಇವೇ ಸಮಸ್ತ ಟಾಟ ಪರಿವಾರದ ದಿವ್ಯ ಧ್ಯೇಯಗಳು. ಜೆ. ಆರ್. ಡಿ ಒಮ್ಮೆ ಹೇಳಿದಂತೆ, " ಭಾರತದ ಬೆಳವಣಿಗೆಗೆ ಬೇಕಾದ ಉದ್ಯೋಗಗಳೆ ನಮಗೂ ಬೇಕಾದವುಗಳು. ಹಣ ಮಾಡುವುದು ಮುಖ್ಯವಲ್ಲ. ಆ ಉದ್ಯೋಗಗಳು ಭಾರತದ ಸಾಮಾನ್ಯರಲ್ಲಿ, ಸಾಮಾನ್ಯರಿಗೂ ಸಾಧ್ಯವಾದಷ್ಟು ಉದ್ಯೋಗಾವಕಾಶ ಸಿಕ್ಕು, ಅವರ ಜೀವನದಲ್ಲಿ ಶಾಂತಿ, ನೆಮ್ಮದಿ ನೆಲೆಸಬೇಕು. ನಮಗೆ ಮುಖ್ಯವಾಗಿ ಬೇಕಾದದ್ದು ಅದು ". ಸರ್ ರತನ್ ಟಾಟಾ ರಂತೆ ಈಗಿನ, ರತನ್ ನಾವಲ್ ಟಾಟಾ ಕೂಡ ಇದೇ ಆದರ್ಶಮಾರ್ಗದಲ್ಲಿ ಮುಂದುವರೆದಿದ್ದಾರೆ.

ಬಾಹ್ಯಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

<References / >

 1. http://www.indiacsr.in/en/?p=7648 Tata Steel Celebrated the 153rd Birth Anniversary of Sir Dorabji Tata
 2. "Sir Dorabji Tata memorial library". Archived from the original on 2014-05-13. Retrieved 2014-05-14.
 3. "Sir Dorabji remembered". Archived from the original on 2016-03-05. Retrieved 2014-05-14.