ರತನ್ ನಾವಲ್ ಟಾಟಾ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ರತನ್ ಎನ್. ಟಾಟಾ
Ratan Tata photo.jpg
ಜನನ ಟೆಂಪ್ಲೇಟು:ವಯಸ್ಸು
ಸೂರತ್, ಭಾರತ
ನಿವಾಸ ಕೊಲಾಬಾ, ಮುಂಬಯಿ, ಭಾರತ[೧]
ರಾಷ್ಟ್ರೀಯತೆ ಭಾರತೀಯ
ಜನಾಂಗ ಪಾರ್ಸಿ
ಅಭ್ಯಸಿಸಿದ ವಿದ್ಯಾಪೀಠ ಕಾರ್ನೆಲ್ ವಿಶ್ವವಿದ್ಯಾಲಯ
ವೃತ್ತಿ ಹಿಂದಿನ ಛೇರ್ಮನ್ಟಾಟಾ ಸಮೂಹದ
ಧರ್ಮ ಝೊರಾಸ್ಟ್ರಿಯನ್ ಮತಸ್ಥ
ಸಂಬಂಧಿಗಳು ಜಮ್ಸೆಟ್ಜಿ ಟಾಟಾ (ಮುತ್ತಾತ)
ದೊರಾಬ್ ಟಾಟಾ (ಹಿರಿಯ ಅಂಕಲ್)
ರತಂಜಿ ಟಾಟಾ (ಅಜ್ಜ)
ನಾವಲ್ ಟಾಟಾ (ತಂದೆ)
ಜಿ.ಆರ್. ಡಿ.ಟಾಟಾ (Grand-Uncle)
ಸಿಮಾನ್ ಟಾಟ (ಮಲ ತಾಯಿ)
ನಿಯೋಲ್ ಟಾಟಾ (ಮಲ ಸೋದರ)
ಪ್ರಶಸ್ತಿಗಳು ಪದ್ಮ ವಿಭೂಷಣ (2008)
KBE (2009)
ಹಸ್ತಾಕ್ಷರ Ratan Tata signature


'ರತನ್ ನಾವಲ್ ಟಾಟಾ' (೨೮, ಡಿಸೆಂಬರ್, ೧೯೩೭-)ಅನೇಕ ಪ್ರಮುಖ ಟಾಟಾ ಉದ್ಯಮಗಳಾದ, ಟಾಟಾ ಸ್ಟೀಲ್, ಟಾಟಾ ಮೋಟರ್ಸ್, ಟಾಟಾ ಪವರ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಟೀ, ಟಾಟಾ ತಂತ್ರಜ್ಞಾನ, ಇಂಡಿಯನ್ ಹೋಟೆಲ್ಸ್ ಮತ್ತು ಟಾಟಾ ಟೆಲಿ ಸರ್ವಿಸಸ್ ಮುಂತಾದ ಶ್ರೇಷ್ಟ ವಿಭಾಗಗಳಲ್ಲಿ ಹೊಸದಾಗಿ ಅಳವಡಿಸಿದ ಅತ್ಯಾಧುನಿಕ ತಾಂತ್ರಿಕ ಮತ್ತು ಮುಂದಾಲೋಚನೆಯ ಕ್ರಮಗಳಿಂದಾಗಿ ಅವುಗಳ ಮಟ್ಟವನ್ನು ಉನ್ನತ ಶಿಖರಕ್ಕೇರಿಸಿ, ಕಂಪೆನಿಯ ಲಾಭಾಂಶವನ್ನು ಹೆಚ್ಚಿಸಿದರು.

'ಜೆ,'ಅವರ ಅತ್ಯಂತ ಮೆಚ್ಚಿನ ಶಿಷ್ಯ[ಬದಲಾಯಿಸಿ]

 • ರತನ್ ಟಾಟಾ, ಜೆ. ಆರ್. ಡಿ ರವರ ಅತ್ಯಂತ ನೆಚ್ಚಿನ ಶಿಷ್ಯ ; ಮತ್ತು ಅಜ್ಞಾರಾಧಕ. ಈಗಿನ ಪ್ರಸಕ್ತ, ಟಾಟಾಸನ್ಸ್, ಸಂಸ್ಥೆಯ ಛೇರ್ಮನ್ ಆಗಿರುವ, ರತನ್ ಟಾಟಾ, ಎಲ್ಲಾ ಟಾಟಾ ಸಂಸ್ಥೆಗಳ ವಿಭಾಗಗಳನ್ನೆಲ್ಲಾ ನೋಡಿಕೊಳ್ಳುತ್ತಿರುವ ಮಾತೃಸಂಸ್ಥೆಯಲ್ಲಿ ದುಡಿಯು ತ್ತಿದ್ದಾರೆ.[೨] ಇವರು, ಅನೇಕ ಪ್ರಮುಖ ಟಾಟಾ ಉದ್ಯಮಗಳಾದ, ಟಾಟಾ ಸ್ಟೀಲ್, ಟಾಟಾ ಮೋಟರ್ಸ್, ಟಾಟಾ ಪವರ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಟೀ, ಟಾಟಾ ತಂತ್ರಜ್ಞಾನ, ಇಂಡಿಯನ್ ಹೋಟೆಲ್ಸ್ ಮತ್ತು ಟಾಟಾ ಟೆಲಿ ಸರ್ವಿಸಸ್ ಮುಂತಾದ ಶ್ರೇಷ್ಟ ವಿಭಾಗಗಳಲ್ಲಿ ಹೊಸದಾಗಿ ಅಳವಡಿಸಿದ ಅತ್ಯಾಧುನಿಕ ತಾಂತ್ರಿಕ ಮತ್ತು ಮುಂದಾಲೋಚನೆಯ ಕ್ರಮಗಳಿಂದಾಗಿ ಅವುಗಳ ಮಟ್ಟವನ್ನು ಉನ್ನತ ಶಿಖರಕ್ಕೇರಿಸಿ, ಕಂಪೆನಿಯ ಲಾಭಾಂಶವನ್ನು ಹೆಚ್ಚಿಸಿದರು.
 • ಟಾಟಾ ಉದ್ಯಮ ಪರಿವಾರ, ಯೂರೋಪಿನ, ಕೊರಸ್ ಸ್ಟೀಲ್, ಕಂಪೆನಿಯನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವುದರ ಮೂಲಕ, ಒಂದು ವಿಕ್ರಮವನ್ನೇ ಸ್ಥಾಪಿಸಿದೆ. ರತನ್ ಟಾಟಾ ರವರ ದೂರಾಲೋಚನೆ, ಮನೋಸ್ಥೈರ್ಯ, ಮುಂದಾಳತ್ವ, ಹಾಗೂ ಸರಿಯಾದ ಸಮಯ ದಲ್ಲಿ ಸರಿಯಾದ ತೆಗೆದುಕೊಳ್ಳುವ ತೀರ್ಮಾನಗಳಿಂದ, ಒಬ್ಬ ಅತ್ಯಂತ ಯಶಸ್ವಿ ಹಾಗೂ ಪರಿಣಾಮಕಾರಿಯಾದ ವ್ಯಕ್ತಿಯಾಗಿ ಪರಿಗಣಿಸಲ್ಪಟ್ಟಿದ್ದಾರೆ. ಟಾಟಾ ವಾಣಿಜ್ಯ ಪರಿವಾರ, ಈಗಾಗಲೇ ವಿಶ್ವದ ೫೦ ವಿದೇಶಿ ಸಂಸ್ಥೆಗಳಲ್ಲಿ, ತನ್ನ ಬಂಡವಾಳವನ್ನು ಹಾಕಿ ಯಶಸ್ವಿಯಾಗಿ ವಹಿವಾಟು ನಡೆಸುತ್ತಿದೆ. ಅವುಗಳಲ್ಲಿ ಮುಖ್ಯವಾದ ಕೆಲವು ಕಂಪೆನಿಗಳಲ್ಲಿ, ದಾವೂ ಟ್ರಕ್ಸ್, ಮತ್ತು ಟೆಟ್ಲಿ ಟೀ ಕೂಡ ಸೇರಿವೆ.[೩]

ರತನ್ ಟಾಟಾರವರ[೪] ಪರಿವಾರ, ಹಾಗೂ, ವಿದ್ಯಾಭ್ಯಾಸ[ಬದಲಾಯಿಸಿ]

 • ರತನ್, ಶ್ರೀಮತಿ. ಸೂನಿ, ಹಾಗೂ, 'ನಾವಲ್ ಹರ್ಮುಸ್ ಜಿ ಟಾಟಾ', ರವರ ಹಿರಿಯ ಮಗನಾಗಿ, ಬೊಂಬಾಯಿನಲ್ಲಿ ಜನಿಸಿದರು. ಆದರೆ ದುರದೃಷ್ಟವಶಾತ್ ೧೯೪೦ ರಲ್ಲಿ ತಂದೆ-ತಾಯಿಗಳು ವಿವಾಹ ವಿಚ್ಛೇದನ ಮಾಡಿಕೊಂಡಿದ್ದರಿಂದ, ಜೀವನದಲ್ಲಿ ಬಹಳ ನೋವನ್ನು ಅನುಭವಿಸಬೇಕಾಯಿತು. ಆಗ ಅವರ ವಯಸ್ಸು ೭ ವರ್ಷ. ಅವರ ತಮ್ಮ ಜಿಮ್ಮಿಗೆ ೫ ವರ್ಷ. ಈ ಅನಾಥಮಕ್ಕಳನ್ನು ಅವರ ಅಜ್ಜಿ, ನವಾಜ್ ಬಾಯಿ, ಸಾಕಿ- ಸಲಹಿದರು.
 • "ಜೆ" ಯವರು, ರತನ್ ರವರನ್ನು ಭಾರತಕ್ಕೆ ವಾಪಸ್ ಬರಲು ಕರೆದಾಗ, ರತನ್ ಅವರ ಅಜ್ಜಿ, ನವಾಜ್ ಬಾಯಿಯವರು, ಬೊಂಬಾಯಿನಲ್ಲಿ ತೀವ್ರವಾದ, ಕಾಯಿಲೆಯಿಂದ ನರಳುತ್ತಿದ್ದರು. ಅವರಿಗಾಗಿ ರತನ್ ಮತ್ತೆ ಭಾರತಕ್ಕೆ ಬರುವ ಮನಸ್ಸು ಮಾಡಿದರು. ರತನ್, ಕೆಥೆಡ್ರೆಲ್, ಜಾನ್ ಕೆನನ್ ಸ್ಕೂಲ್, ಬೊಂಬಾಯಿನಲ್ಲಿ ಪ್ರಾರಂಭದ ಓದು. ಕಾಲೇಜ್ ನ ದಿನಗಳಲ್ಲಿ, ಸಿಗ್ಮ ಫಿ ಫ್ರೆಟರ್ನಿಟಿ, ಯಲ್ಲಿ ವಾಸ.
 • ೧೯೬೨ ರಲ್ಲಿ ಕಾರ್ನೆಲ್ ನಲ್ಲಿ ಪದವಿ ಪಡೆದರು. ಕನ್ ಸ್ಟ್ರಕ್ ಷನ್ , ಹಾಗೂ ಸ್ಟ್ರಕ್ಚರಲ್ ಎಂಜಿನಿಯರಿಂಗ್ ನಲ್ಲಿ ವಿಶೇಷ ಜ್ಞಾನಾರ್ಜನೆ. ಐ. ಬಿ. ಎಮ್, ನಲ್ಲಿ ಅವರಿಗೆ ಕರೆಬಂದಿತ್ತು. ಆ ಸಮಯಕ್ಕೆ, ಜೆ ಅವರು ರತನ್ ಗೆ ಪತ್ರಬರೆದು ಭಾರತಕ್ಕೆ ಕರೆಸಿಕೊಂಡರು.

ರತನ್ ಟಾಟಾ, ಒಳ್ಳೆಯ ಮುಂದಾಳು, ಹಾಗೂ ಸಂಘಟಕ[ಬದಲಾಯಿಸಿ]

 • ಇದುವರೆಗಿನ ಕಾರ್ಯನಿರ್ವಹಿಸಿದ, ಬೃಹತ್ ಟಾಟಾ ಉದ್ಯಮದ ನಿರ್ದೇಶಕರಲ್ಲಿ, ರತನ್ ಒಬ್ಬರೇ ಅತ್ಯಂತ ಹೆಚ್ಚು ಓದಿಕೊಂಡಿರುವವರು. ಜೆ. ಆರ್. ಡಿ ಯವರು ತಮಗೆ ಕಾಲೇಜ್ ಶಿಕ್ಷಣ ದೊರೆಯದಿದ್ದಕ್ಕಾಗಿ, ಕ್ಲೇಶಗೊಂಡು, ತಮ್ಮ ಜೀವನದುದ್ದಕ್ಕೂ ಕಳವಳವನ್ನು ವ್ಯಕ್ತಪಡಿಸುತ್ತಲೇ ಇದ್ದರು. ರತನ್ ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ, ಬಿ.ಎಸ್ಸಿ ಆರ್ಕಿಟೆಕ್ಚರ್, ವಿಷಯವನ್ನು ತೆಗೆದುಕೊಂಡು, ೧೯೬೨ ರಲ್ಲಿ ಪಾಸ್ ಮಾಡಿದರು.
 • ಆಮೇಲೆ, ಭಾರತಕ್ಕೆ ವಾಪಸ್ಸಾಗುವ ಮೊದಲು, 'ಮೆಸರ್ಸ್. ಜೋನ್ಸ್ ಅಂಡ್ ಎಮ್ಮನ್ಸ್, ಕಂ', ಲಾಸ್ ಎಂಜಲೀಸ್, ಕ್ಯಾಲಿಫೋರ್ನಿಯದಲ್ಲಿ ಸ್ವಲ್ಪಕಾಲ ಕೆಲಸ ಮಾಡಿದರು. ಭಾರತಕ್ಕೆ ಬಂದ ಕೂಡಲೇ ಟಾಟಾ ಪಂಗಡದ, ಹಲವಾರು ಪ್ರತಿಶ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿ, ಕೊನೆಯಲ್ಲಿ, 'ಎನ್. ಇ.ಎಲ್ ಕಂಪೆನಿ'ಯ, ಇನ್-ಛಾರ್ಜ್ ಮತ್ತು ಛೇರ್ಮನ್ ಆಗಿ, ಸೇರಿಕೊಂಡರು. ೧೯೮೧ ರಲ್ಲಿ, ಹೈಟೆಕ್ ವಿಭಾಗದಲ್ಲಿ ಹಲವಾರು ಹೊಸ -ಹೊಸ, ತಂತ್ರಜ್ಞಾನಗಳಿಗೆ ನಾಂದಿಹಾಕಿ, ಅವನ್ನು ಬೆಳೆಸಿದರು.[೫]

ದೇಸೀ ಕಾರಿನ ನಿರ್ಮಾಣದಲ್ಲಿ ತೀವ್ರ ಆಸಕ್ತಿ[ಬದಲಾಯಿಸಿ]

 • ನಮ್ಮ ಭಾರತದಲ್ಲೇ ಪೂರ್ಣ ತಯಾರಿಸಿದ ದೇಸೀಕಾರನ್ನು ಗ್ರಾಹಕರಿಗೆ ಕಡಿಮೆದರದಲ್ಲಿ ಒದಗಿಸುವ ಗೀಳು ಅವರಿಗೆ ಬಹಳವಾಗಿತ್ತು. ಜೆ. ಆರ್.ಡಿ.ಟಾಟಾ ರವರು, ತಮ್ಮ ಛೇರ್ಮನ ಹುದ್ದೆಯನ್ನು ರತನ್ ರವರಿಗೆ, ೧೯೯೧ ರಲ್ಲಿ ಒಪ್ಪಿಸಿ, ಅವರಿಗೆ ಟಾಟಾ ಉದ್ಯಮದ ಸರ್ವಾಧಿಕಾರವನ್ನು ಕೊಟ್ಟರು. ರತನ್ ಅಧಿಕಾರಕ್ಕೆ ಬಂದ ಸ್ವಲ್ಪ ಸಮಯದಲ್ಲೇ, ಟಿ.ಸಿ ಎಸ್ ಕಂಪೆನಿಯನ್ನು ಪಬ್ಲಿಕ್ ಶೇರ್ ಕಂಪೆನಿಯಾಗಿ ಪರಿವರ್ತಿಸಿದರು. ಟಾಟಾ ಮೋಟರ್ ನ್ಯೂಯಾರ್ಕ್ ಸ್ಟಾಕ್ ಎಕ್ಸ್ ಛೇಂಜ್ ನಲ್ಲಿ, ಸೇರ್ಪಡೆಯಾಯಿತು.
 • ರತನ್ ಟಾಟಾರವರಿಗೆ, ದೇಸಿ ಕಾರೊಂದನ್ನು ಟಾಟಾ ಕಂಪೆನಿ ತಯಾರಿಸಿ ದೇಶಕ್ಕೆ ಒಪ್ಪಿಸಬೇಕೆಂಬ ಆಕಾಂಕ್ಷೆ ಬಹಳ ಸಮಯದಿಂದ ಇತ್ತು. ಟಾಟಾಇಂಡಿಕ, ತಯಾರಿಕೆಯಿಂದಾಗಿ ಆ ಕನಸು ಸಾಕಾರವಾಯಿತು. ಸಿಂಗೂರ್, ನಲ್ಲಿ ಒಂದು ಚಿಕ್ಕ-ಕಾರ್, ಅನ್ನು ತಯಾರುಮಾಡುವ ಕಾರ್ಖಾನೆಯನ್ನು ಸ್ಥಾಪಿಸಿದ್ದಾರೆ. ರತನ್, ಅಂದಾಜಿನ ಪ್ರಕಾರ, ೨೦೦೮ ರ ಮಧ್ಯಭಾಗದಲ್ಲಿ, ಇದು ಕಾರ್ಯಾರಂಭಮಾಡುವ ಸಾಧ್ಯತೆಗಳಿವೆಯೆಂದು ಅಭಿಪ್ರಾಯಪಡುತ್ತಾರೆ.[೬]

ನ್ಯಾನೋ ಕಾರ್ ಪ್ರದರ್ಶನ[ಬದಲಾಯಿಸಿ]

 • ಟಾಟಾ ಗ್ರೂಪ್ ಛೇರ್ ಮನ್, ಶ್ರೀ. ರತನ್ ಟಾಟಾರವರು, ” ೯ ನೆಯ, ಆಟೊ ಎಕ್ಸ್ ಪೊ ’ ದೆಹಲಿ, ಯಲ್ಲಿ " ನ್ಯಾನೋ," ಕಾರನ್ನು ಪ್ರದರ್ಶಿಸಿದರು. Tata Group ಛೇರ್ ಮನ್, ಶ್ರೀ.ರತನ್ ಟಾಟಾರವರು, ೧೦, ಗುರುವಾರ, ಜನವರಿ, ೨೦೦೮ ರಂದು, ದೆಹಲಿಯಲ್ಲಿ ಹಮ್ಮಿಕೊಂಡ ೯ ನೆಯ Auto Expo in New Delhi, ನಲ್ಲಿ ತಮ್ಮ ಕನಸಿನ ಕೂಸಾದ ಚಿಕ್ಕ ಕಾರನ್ನು, ಪ್ರಪ್ರಥಮವಾಗಿ ಭಾರತದ ಹಾಗೂ ವಿಶ್ವದ ಮೋಟಾರ್ ಪ್ರದರ್ಶವನ್ನು ವೀಕ್ಷಿಸಲು ಬಂದ ಗಣ್ಯರಿಗೆ ತೋರಿಸಿ ವಿವರಿಸಿದರು.

ಜನಸಾಮಾನ್ಯರಿಗೆ ಕಾರಿನ ವಿವರ[ಬದಲಾಯಿಸಿ]

Ratan Tata, ತಮ್ಮ ಕಾರ್ Nano, ಬಗ್ಗೆ ಹೇಳುತ್ತಾ : " ಈಗ ಬೇಕಾಗಿರುವ ಎಲ್ಲಾ safety norms and all emission criteria ಗಳನ್ನು ಹಾಗೂ pollution ಬಗ್ಗೆಯೂ, ಸಾಕಷ್ಟು ಗಮನ ಕೊಟ್ಟಿದೆ, ಎಂದರು. ೨-wheelers, ಗಿಂತಲೂ ಪಲ್ಯೂಶನ್ ಕಡಿಮೆ. "

 • ೧. ನ್ಯಾನೊ car, ಮಾರುತಿಕಾರ್ ಗಿಂತ ೨೧ % ಹೆಚ್ಚು ಜಾಗಹೊಂದಿದೆ.
 • ೨. ಕಾರಿನ dealer ಬೆಲೆ, ೧ ಲಕ್ಷ ರೂಪಾಯಿಗಳು. ಹಾಗೂ value-added tax (VAT), plus transport ಚಾರ್ಜ್ ಗಳೂ ಸೇರಿದಂತೆ. ೧ ಲಕ್ಷಕ್ಕಿಂತ ಸ್ವಲ್ಪ ಹೆಚ್ಚಾಗುವುದು ಸ್ವಾಭಾವಿಕ.

ನ್ಯಾನೊ ಕಾರ್ ಕೊಡುವ ಸೌಲಭ್ಯಗಳು[ಬದಲಾಯಿಸಿ]

 • ೧. ೬೨೪-ಸಿ.ಸಿ. ಪೆಟ್ರೋಲ್ ಎಂಜಿನ್ ೩೩ ಬಿ ಎಚ್ ಪಿ, ಪವರ್ ನ್ನು ಒದಗಿಸುತ್ತದೆ.
 • ೨. It will sport a ೩೦-litre fuel tank and ೪-speed manual gearshift. ೪೪. The car will come with :
 • ೩. airconditioning, but will have no power steering.
 • ೪. It will have front disk and rear drum brakes.
 • ೫. The company claims mileage of ೨೩ ಕಿ. ಮೀ./ಲೀಟರ್.
 • ೬. The car's dashboard features just a speedometer, fuel gauge, and oil light. The car does not have reclining seats or radio. The shock absorbers are basic.

'ರತನ್ ಟಾಟಾ'ರವರ ಉತ್ತರಾಧಿಕಾರಿ[ಬದಲಾಯಿಸಿ]

ರತನ್ ಟಾಟಾ,[೭] ಮುಂಬಯಿನ ಕೊಲಾಬಾದ ತಮ್ಮ ವಿಲ್ಲಾದಲ್ಲಿ, ಇಂದಿಗೂ ಯಾವ ಹೆಚ್ಚಿನ ಸದ್ದು-ಗದ್ದಲವಿಲ್ಲದೆ, ವಾಸಿಸುತ್ತಿದ್ದಾರೆ. ಆ ಪರಿಸರದಲ್ಲೇ ಅವರು ತಮ್ಮ ಬಾಲ್ಯದ ಹೆಚ್ಚು ಸಮಯವನ್ನು ಕಳೆದರು. ಅನಂತರ ಪಕ್ಕದಲ್ಲಿ ಡಚ್ ಬ್ಯಾಂಕ್ ಹಾಗೂ, ಸ್ಟರ್ಲಿಂಗ್ ಸಿನೆಮಾ ಗಳು ತಲೆಯೆತ್ತಿದವು. ಇವೆಲ್ಲಾ ಬದಲಾವಣೆಗಳು ಅನಿವಾರ್ಯ. "ಪರಿಸ್ಥಿಯ ಜೊತೆಗೆ ಒಪ್ಪಂದ ಮಾಡಿಕೊಳ್ಳದೆ ವಿಧಿಯಿಲ್ಲ", ಎನ್ನುತ್ತಾರೆ ಅವರು. ರತನ್ ಟಾಟಾ ಮದುವೆ ಮಾಡಿಕೊಂಡಿಲ್ಲ. ಟಾಟಾ ಕಂಪೆನಿಯ ಅಧಿಕಾರವನ್ನು ಯಾರಿಗೆ ಒಪ್ಪಿಸುವರೋ, ಇನ್ನೂ ಬಹಿರಂಗವಾಗಿ ತಿಳಿಸಿರಲಿಲ್ಲ.

೭೫ ನೆಯ ಹುಟ್ಟುಹಬ್ಬದ ದಿನ[ಬದಲಾಯಿಸಿ]

೨೦೧೨ ರ ಡಿಸೆಂಬರ್, ೨೮ ರಂದು ತಮ್ಮ ೭೫ ನೆಯ ಹುಟ್ಟುಹಬ್ಬದ ಶುಭದಿನದಂದು ರತನ್ ಟಾಟಾ [೮] ತಮ್ಮ ನಿವ್ರುತ್ತಿಯನು ಘೊಶಿಸಿದರು. ಆದಿನ ತಮ್ಮ ಕಾರ್ಯಭಾರಕ್ಕೆ ಅಂತಿಮ ವಿದಾಯ ಹೇಳಿ, ತಮ್ಮ ಎಲ್ಲಾ ಜವಾಬ್ದಾರಿಯನ್ನೂ ೪೪ ವರ್ಷದ ಸೈರಸ್ ಮಿಸ್ತ್ರಿಯವರಿಗೆ ವಹಿಸಿಕೊಟ್ಟರು. ಸೈರಸ್ ಮಿಸ್ತ್ರಿಯವರು ಶಾಪುರ್ಜಿ ಪಲ್ಲೊಂಜಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆದ ಪಲ್ಲೊಂಜಿ ಮಿಸ್ತ್ರಿಯವರ ಮಗ. ಸೈರಸ್ ಮಿಸ್ತ್ರಿಯವರು ಟಾಟಾ ಸನ್ಸ್ ನ ಎಮಿರಿಟಸ್ ಚೇರ್ಮನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಟಾಟ ಮೋಟಾರ್ಸ್ ಟಾಟಾ ಸ್ಟೀಲ್ ಮತ್ತಿತರ ಟಾಟಾ ಸಮೂಹದ ಕಂಪೆನಿಯ ಡೈರೆಕ್ಟರ್ ಆಗಿದ್ದಾರೆ. ಟಾಟಾ ಸಂಸ್ಥೆಯ ಪ್ರಮುಖ ಟ್ರಸ್ಟ್ ಗಳಾದ ಸರ್ ದೊರಾಬ್ಜಿ ಟಾಟಾ ಟ್ರಸ್ಟ್, ಆಲೀಡ್ ಟ್ರಸ್ಟ್ಸ ಮತ್ತು ಸರ್ ರತನ್ ಟಾಟಾ ಟ್ರಸ್ಟ್ ಈ ಕಂಪೆನಿಗಳು ತಾತಾ ಸಂಸ್ ಸಮೂಹದ ೫೫% ಶೇರ್ ಗಳನ್ನೂ ಹೊಂದಿವೆ.[೯]

ಸಿಂಗಪುರದಿಂದ ಹೊಸ ಏರ್ ಲೈನ್(ವಿಸ್ತಾರ),ಪ್ರಾರಂಭ[ಬದಲಾಯಿಸಿ]

[೧೦]

ಬಹುಮುಖ್ಯ ಪ್ರಶಸ್ತಿಗಳು, ಹಾಗೂ ಸನ್ಮಾನಗಳು[ಬದಲಾಯಿಸಿ]

 • 'ಸನ್ ೨೦೦೦ ದಲ್ಲಿ, ಭಾರತಸರ್ಕಾರದ ಮೇರು ಪ್ರಶಸ್ತಿ, 'ಪದ್ಮ ಭೂಷಣ' ಸಿಕ್ಕಿತು.
 • 'ಡಾಕ್ಟೊರೇಟ್ ಇನ್ ಬಿಸಿನೆಸ್ ಅಡ್ಮಿನಿಸ್ಟ್ರೇಶನ್', ಅಮೆರಿಕದ 'ಒಹೈ', ವಿಶ್ವವಿದ್ಯಾಲಯದಿಂದ.
 • 'ಡಾಕ್ಟೊರೇಟ್ ಇನ್ ಸೈನ್ಸ್','ಏಶ್ಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲೊಜಿ', 'ಬ್ಯಾಂಕಾಕ್'
 • 'ಡಾಕ್ಟೊರೇಟ್ ಇನ್ ಸೈನ್ಸ್', 'ವಾರ್ವಿಕ್', ವಿಶ್ವವಿದ್ಯಾಲಯದಿಂದ
 • 'ಲಂಡನ್ ಸ್ಕೂಲ್ ಆಫ್ ಎಕೊನೊಮಿಕ್ಸ್', ರತನ್ ರವರಿಗೆ 'ಗೌರವ ಡಾಕ್ಟೊರೇಟ್' ಸಲ್ಲಿಸಿ, ಗೌರವಿಸಿದೆ.

ಉಲ್ಲೇಖಗಳು[ಬದಲಾಯಿಸಿ]

<References / > ಬಿಝಿನೆಸ್ ಸಾಮ್ರಾಜ್ಯವನ್ನು ವಿಸ್ತರಿಸಿದರು.

ರತನ್ ರವರ ಜೀವನ ಚರಿತ್ರೆ< />

 1. The amazing story of how Ratan Tata built an empire. Rediff (21 October 2010)
 2. http://www.rediff.com/money/slide-show/slide-show-1-tata-special-amazing-story-of-how-
 3. http://business.mapsofindia.com/business-leaders/ratan-naval-tata.html
 4. http://vijaykarnataka.indiatimes.com/articleshow/30173185.cms
 5. ratan-tata-built-an-empire/ 20121228.htm
 6. http://www.factsninfo.com/2013/03/ratan-tata-biography-facts-personal-life.html
 7. http://pvhome.yodasoft.com/article/%E0%B2%85%E0%B2%A7%E0%B3%8D%E0%B2%AF%E0%B2%95%E0%B3%8D%E0%B2%B7-%E0%B2%B9%E0%B3%81%E0%B2%A6%E0%B3%8D%E0%B2%A6%E0%B3%86%E0%B2%97%E0%B3%86-%E0%B2%B0%E0%B2%A4%E0%B2%A8%E0%B3%8D-%E0%B2%9F%E0%B2%BE%E0%B2%9F%E0%B2%BE
 8. 'ರತನ್ ಟಾಟ ತಮ್ಮ ನಿವೃತ್ತಿಯ ಘೋಷಣೆ ಮಾಡಿದರು'
 9. http://news.webindia123.com/news/articles/Business/20121228/2127971.html
 10. 'Economic Times', ೧೦, ಜನವರಿ, ೨೦೧೫, ಪುಟ-೯ 'Tata's Vistara takes to the skies, with first Delhi-Mumbai with president pranabFlight','Tata's Aviation History'