ಚರ್ಚೆಪುಟ:ಮಾಸ್ತಿ ವೆಂಕಟೇಶ ಅಯ್ಯಂಗಾರ್
ಈ ಲೇಖನಕ್ಕೆ ಸೇರಿಸಲಾದ ಕೆಲವು ಭಾಗಗಳು ಮಾನ್ಯ ಪವನಜರವರಿಂದ ಬರೆಯಲ್ಪಟ್ಟಿದ್ದು.
ಈ ಬದಲಾವಣೆಯಲ್ಲಿ ಹಾಕಲಾದ ವಾಕ್ಯಗಳು ಬರೆದ ಗೌರವ ಕೆಳಗಿನಂತೆ ಮಾನ್ಯ ಪವನಜರವರಿಗೆ ಸಲ್ಲುತ್ತದೆ:
ಕೃಪೆ - ವಿಶ್ವ ಕನ್ನಡ (ಕನ್ನಡದ ಪ್ರಥಮ ಅಂತರಜಾಲ ಪತ್ರಿಕೆ)
ಯುನಿಕೋಡ್‌ಗೆ ಬದಲಾವಣೆ - ಯು. ಬಿ. ಪವನಜ
--hpnadig ೦೭:೪೦, ೧೩ ನವೆಂಬರ್ ೨೦೦೪ (UTC)
ಲೇಖನದಲ್ಲಿರುವ ಚಿತ್ರದ ಕೆಳಗೆ 'ಅಯ್ಯಂಗಾರ್' ಎಂದಿದೆ. ಲೇಖನದ ಶಿರೋನಾಮೆಯಲ್ಲಿ, ಮತ್ತು ಲೇಖನದ ಇತರ ಕಡೆಗಳಲ್ಲಿ 'ಐಯ್ಯಂಗಾರ್' ಎಂದಿದೆ. ಇದರಲ್ಲಿ ನಿಖರವಾದುದು ಯಾವುದು? ಅಥವಾ ಅಧಿಕೃತವಾಗಿ ಮಾಸ್ತಿಯವರ ಹೆಸರು ಎಲ್ಲಿ ಪಡೆಯಬಹುದು? ಮನ 23:33, ೧೫ March ೨೦೦೬ (UTC)
ಈ ವಿಷಯವಾಗಿ ಕನ್ನಡ ಆಡಿಯೋದಲ್ಲಿ ಒಂದು ಚರ್ಚೆಯನ್ನು ಮನ ಈಗಷ್ಟೆ ನಡೆಸಿ, ಉತ್ತರವನ್ನು ಪಡೆಯಲಾಗಿದೆ. ಸರಿಯಾದ ಹೆಸರು "ಅಯ್ಯಂಗಾರ್".
ಚಿಕವೀರ ರಾಜೇಂದ್ರ ಕಾದಂಬರಿಯ ಎರಡನೆಯ ಪುಟದಿಂದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಎರಡನೆಯ ಐತಿಹಾಸಿಕ ಕಾದಂಬರಿ ಸಂಪೂರ್ಣ ಸ್ವಾಮ್ಯ: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಕಾರ್ಯಾಲಯ ಟ್ರಸ್ಟ್ (ರಿ)
ಬೇಕಿದ್ದರೆ ಈ ಹಾಳೆಯ ನಕಲನ್ನು ಲಗತ್ತಿಸಬಹುದು, ತಿಳಿಸಿ --ಹಂಸವಾಣಿದಾಸ 06:20, ೨೪ March ೨೦೦೬ (UTC)
ಧನ್ಯವಾದಗಳು ಹಂಸವಾಣಿದಾಸ. ಇದಕ್ಕೆ ತಕ್ಕಂತೆ, ಲೇಖನದ ಶೀರ್ಷಿಕೆಯನ್ನು ಬದಲಾಯಿಸಿದ್ದೇನೆ. ಮನ 06:27, ೨೪ March ೨೦೦೬ (UTC)
"ಅಂತರ ಗಂಗೆ" - ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಿರಚಿತ ಗ್ರಂಥ
[ಬದಲಾಯಿಸಿ]ಈ ಕೃತಿಯ ಬಗ್ಗೆ ಎಲ್ಲೂ ಉಲ್ಲೇಖವಾಗದಿರುವುದು ಅಚ್ಚರಿಯಾಗುತ್ತದೆ.
ಇದೊಂದು ಅಪರೂಪದ, ಬಹುಮೌಲ್ಯದ ಕೃತಿ. ಮಾಸ್ತಿಯವರು ತಮ್ಮ 20ನೇ ವಯಸ್ಸಿನಲ್ಲಿ ಚಿಂತನೆಗೆ ಶುರುಮಾಡಿ, ಅದು ಜೀವನಾನುಭವದಿಂದ ಪಕ್ವವಾಗುತ್ತಾ 65 ವರ್ಷಗಳ ನಂತರ - ಅಂದರೆ 1982ರಲ್ಲಿ - ಪ್ರಕಟವಾದ ಗ್ರಂಥ ಇದು. ವೇದ, ಉಪನಿಷತ್ತುಗಳು, ಸೂತ್ರಗಳು, ಸ್ಮೃತಿಗಳು, ರಾಮಾಯಣ, ಮಹಾಭಾರತ, ಪುರಾಣಗಳು, ಇತಿಹಾಸ, ಭಕ್ತಿಪಂಥ, ಕಾವ್ಯಗಳು, ಸಿದ್ದಾಂತಗಳು, ಇಸ್ಮಾಂ, ಕ್ರೈಸ್ತ ಮತಗಳು, ಸಮಾಜ ಸುಧಾರಕರು, ಆಧುನಿಕ ಋಷಿತುಲ್ಯರು, ಹಿಂದೂ ಜೀವನಕ್ರಮ..... ಹೀಗೆ ಎಲ್ಲವನ್ನೂ ಅಡಕಗೊಂಡ ಭಾರತೀಯ ಸಂಸ್ಕೃತಿಯ ಪಾಂಡಿತ್ಯಪೂರ್ಣ ಅಧ್ಯಯನದ ಪೂರ್ಣರೂಪ ಇದು. ತಮ್ಮ ಇಳಿವಯಸ್ಸಿನಲ್ಲಿ ಈ ಗ್ರಂಥವನ್ನು ಅವರೇ ಸ್ವಹಸ್ತದಿಂದ ಲೋಕಾರ್ಪಣೆ ಮಾಡಿದ್ದರು. ಎಂ.ವಿ.ಜೆ.ಕೆ.ಟ್ರಸ್ಟ್ ನಿಂದಲೇ ಪ್ರಕಟವಾದ ಪುಸ್ತಕ ಇದು.
ವಿಕಿಪೀಡಿಯಾದಲ್ಲಿ ಇದನ್ನು ಸೇರಿಸಬೇಕೆಂದು ವಿನಂತಿ.
- ಸು. ನಾಗರಾಜ್
ಬಸವೇಶ್ವರ ನಗರ , ಬೆಂಗಳೂರು \ ಚರವಾಣಿ ; 8971236895 49.205.133.84 ೧೨:೩೪, ೨೫ ಮೇ ೨೦೨೪ (IST)
ತಿದ್ದುಪಡಿ
[ಬದಲಾಯಿಸಿ]ಮಾಸ್ತಿಯವರ ಕಾವ್ಯನಾಮ ಶ್ರೀನಿವಾಸ್ ಅಲ್ಲ, ಶ್ರೀನಿವಾಸ ಎಂದಿರಬೇಕು.
ಅವರ ಜನ್ಮಸ್ಥಳ ಹೊಂಗೆನಹಳ್ಳಿ, ಹುಂಗೇನಹಳ್ಳಿ, ಹೊಂಗೇನಳ್ಳಿ ಎಂದು ಬೇರೆ ಬೇರೆ ರೀತಿಯಲ್ಲಿ ಬರೆಯಲಾಗಿದೆ. ಇದನ್ನು ಸರಿಪಡಿಸಿ.
ಚಿಕವೀರ ರಾಜೇಂದ್ರ ಪುಟದಲ್ಲಿ ಇರುವ ಮಾಸ್ತಿಯವರ ಚಿತ್ರವನ್ನು ಈ ಪುಟದಲ್ಲೂ ಹಾಕಿ. Karthikhs (ಚರ್ಚೆ) ೨೧:೩೯, ೨೦ ನವೆಂಬರ್ ೨೦೨೪ (IST)