ವಿಷಯಕ್ಕೆ ಹೋಗು

2013ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

2013ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ

[ಬದಲಾಯಿಸಿ]
ನಿಖಿಲ್ ಮಂಜು, ನಿವೇದಿತ ಅತ್ಯುತ್ತಮ ನಟ-ನಟಿ
ಶ್ರೀನಾಥ್‌ಗೆ ಡಾ.ರಾಜಕುಮಾರ್, ನಿರ್ದೇಶಕ ಪಿ.ಎಚ್.ವಿಶ್ವನಾಥ್‌ಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ
  • 2013ನೇ ಸಾಲಿನ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅತ್ಯುತ್ತಮ ನಟ ಪ್ರಶಸ್ತಿಗೆ 'ಹಜ್' ಚಿತ್ರದ ನಟ ನಿಖಿಲ್ ಮಂಜೂ ಹಾಗೂ ಅತ್ಯುತ್ತಮ ನಟಿ ಪ್ರಶಸ್ತಿಗೆ 'ಡಿಸೆಂಬರ್-1' ಚಿತ್ರದ ನಟಿ ನಿವೇದಿತಾ ಆಯ್ಕೆಯಾಗಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಅಪೂರ್ವ ಕೊಡುಗೆ ನೀಡಿದವರಿಗೆ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜ್‌ಕುಮಾರ್ ಪ್ರಶಸ್ತಿಗೆ ಹಿರಿಯ ನಟ ಶ್ರೀನಾಥ್, ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಚಲನಚಿತ್ರ ನಿರ್ದೇಶಕ ಪಿ.ಎಚ್. ವಿಶ್ವನಾಥ್ ಹಾಗೂ ಡಾ. ವಿಷ್ಣುವರ್ಧನ್ ಪ್ರಶಸ್ತಿಗೆ ಚಲನಚಿತ್ರ ವಿತರಕ ಹಾಗೂ ನಿರ್ಮಾಪಕ ಕೆ.ವಿ. ಗುಪ್ತ ಆಯ್ಕೆಯಾಗಿದ್ದಾರೆ.
ಜೀವಮಾನ ಸಾಧನೆಗೆ ನೀಡುವ ಪ್ರಶಸ್ತಿಯು ತಲಾ ಎರಡು ಲಕ್ಷ ರೂಪಾಯಿ ನಗದು ಹಾಗೂ ಚಿನ್ನದ ಪದಕ ಒಳಗೊಂಡಿದೆ. ಮೈಸೂರಿನಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ 2012 ಹಾಗೂ 2013ನೇ ಸಾಲಿನ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.
ಪ್ರಶಸ್ತಿಗೆ ಅರ್ಹರನ್ನು ಗುರುತಿಸುವಲ್ಲಿ ಸಮಿತಿಯು ಪ್ರಾಮಾಣಿಕ ಹಾಗೂ ಅತ್ಯಂತ ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಿದೆ, ಎಂದು 2013ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ :ಜಿ.ಕೆ. ಗೋವಿಂದರಾವ್ ಸ್ಪಷ್ಟಪಡಿಸಿದರು. ಪ್ರಶಸ್ತಿ ಆಯ್ಕೆಗಾಗಿ ಒಟ್ಟು 69 ಚಿತ್ರಗಳನ್ನು ವೀಕ್ಷಿಸಲಾಗಿದೆ. ವೀಕ್ಷಣೆ ಮಾಡಿದ ಏಳು ಮಕ್ಕಳ ಚಲನಚಿತ್ರಗಳ ಪೈಕಿ ಒಂದಕ್ಕೆ ಪ್ರಶಸ್ತಿ ಲಭ್ಯವಾಗಿದೆ ಎಂದು ಅವರು ತಿಳಿಸಿದರು.

ಹಜ್ ಅತ್ಯುತ್ತಮ ಚಿತ್ರ

[ಬದಲಾಯಿಸಿ]
  • ಈ ಬಾರಿ ಮೂರು ಚಲನಚಿತ್ರಗಳಿಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ ನೀಡಲಾಗಿದ್ದು, ನಿಖಿಲ್ ಮಂಜೂ ನಿರ್ದೇಶನದ 'ಹಜ್' ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಬಿ.ಎಂ. ಗಿರಿರಾಜ್ ನಿರ್ದೇಶನದ 'ಜಟ್ಟ' ದ್ವಿತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಹಾಗೂ ನಿರ್ದೇಶಕ ಪಂಚಾಕ್ಷರಿ ನಿರ್ದೇಶನದ 'ಪ್ರಕೃತಿ'ಗೆ ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ದಕ್ಕಿದೆ. ವಿಶೇಷ ಸಾಮಾಜಿಕ ಕಾಳಜಿಯ ಚಿತ್ರಕ್ಕಾಗಿ ವಿಶಾಲ್‌ರಾಜ್ ನಿರ್ದೇಶನದ 'ಇಂಗಳೆ ಮಾರ್ಗ' ಭಾಜನವಾಗಿದೆ.
  • ಜೀವಮಾನ ಸಾಧನೆಯ ಪ್ರಶಸ್ತಿಯು 2 ಲಕ್ಷ ನಗದು ಚಿನ್ನದ ಪದಕ ಒಳಗೊಂಡಿದೆ. ಅತ್ಯುತ್ತಮ ನಟ ಪ್ರಶಸ್ತಿಗೆ 20000ರೂ. , ಬೆಳ್ಳಿ ಪದಕ; ಪ್ರಥಮ ಚಿತ್ರ 1 ಲಕ್ಷ ರೂ. ನಗದು ಚಿನ್ನದ ಪದಕ; ದ್ವಿತೀಯ ಚಿತ್ರ 75000ರೂ. ಬೆಳ್ಳಿ ಪದಕ ; ಇತರೆ : 50000ರೂ. ಬೆಳ್ಳಿ ಪದಕ ;
ಜೀವಮಾನ ಸಾಧನೆಯ ಪ್ರಶಸ್ತಿಯು 2 ಲಕ್ಷ ನಗದು ಚಿನ್ನದ ಪದಕ ಒಳಗೊಂಡಿದೆ. ಅತ್ಯುತ್ತಮ ನಟ ಪ್ರಶಸ್ತಿಗೆ 20000ರೂ. , ಬೆಳ್ಳಿ ಪದಕ; ಪ್ರಥಮ ಚಿತ್ರ 1 ಲಕ್ಷ ರೂ. ನಗದು ಚಿನ್ನದ ಪದಕ; ದ್ವಿತೀಯ ಚಿತ್ರ 75000ರೂ. ಬೆಳ್ಳಿ ಪದಕ ; ಇತರೆ : 50000ರೂ. ಬೆಳ್ಳಿ ಪದಕ ;(ಪ್ರಜಾವಾಣಿ/೫-೧-೨೦೧೫)
ಚಾರ್‌ಮಿನಾರ್‌ಗೆ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿ
ಈ ಸಾಲಿನ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿ ಆರ್. ಚಂದ್ರು ನಿರ್ದೇಶನದ 'ಚಾರ್‌ಮಿನಾರ್'ಗೆ ದಕ್ಕಿದೆ. ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಗೆ ವಿ. ನಾಗೇಂದ್ರ ಶಾ ನಿರ್ದೇಶನದ 'ಹಾಡು ಹಕ್ಕಿ ಹಾಡು' ಆಯ್ಕೆಯಾಗಿದೆ. ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ನಿರ್ದೇಶಕ ಮಹಾಂತೇಶ ರಾಮದುರ್ಗ ನಿರ್ದೇಶನದ 'ಅಗಸಿ ಪಾರ್ಲರ್' ಹಾಗೂ ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಪ್ರಶಸ್ತಿಗೆ ತುಳುವಿನ 'ರಿಕ್ಷಾ ಡ್ರೈವರ್' (ಹ.ಸು. ರಾಜಶೇಖರ್- ನಿರ್ದೇಶನ) ಆಯ್ಕೆಯಾಗಿದೆ.
ಶರತ್ ಲೋಹಿತಾಶ್ವ ಅತ್ಯುತ್ತಮ ಪೋಷಕ ನಟ
ಮತ್ತೆ ಸತ್ಯಾಗ್ರಹ' ಚಿತ್ರದ ಅಭಿನಯಕ್ಕಾಗಿ ಶರತ್ ಲೋಹಿತಾಶ್ವ ಅವರಿಗೆ ಅತ್ಯುತ್ತಮ ಪೋಷಕ ನಟ (ಕೆ.ಎಸ್. ಅಶ್ವಥ್ ಪ್ರಶಸ್ತಿ), :ಅಗಸಿ ಪಾರ್ಲರ್' ಚಿತ್ರದ ಅಭಿನಯಕ್ಕಾಗಿ ಭಾಗೀರಥಿ ಬಾಯಿ ಕದಂಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಲಭಿಸಿದೆ.
ಅತ್ಯುತ್ತಮ ಕತೆ ಪ್ರಶಸ್ತಿಗೆ ಶ್ರೀಲಲಿತೆ (ಚಿತ್ರ: ಹಜ್), ಅತ್ಯುತ್ತಮ ಚಿತ್ರ ಕತೆ ಪ್ರಶಸ್ತಿಗೆ ಜಯತೀರ್ಥ (ಟೋನಿ), ಅತ್ಯುತ್ತಮ ಸಂಭಾಷಣೆಗಾಗಿ ನಾಗಶೇಖರ್ (ಮೈನಾ), ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಗೆ ಪಿ.ಕೆ.ಎಚ್. ದಾಸ್ (ಚಂದ್ರ), ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿಗೆ ಪೂರ್ಣಚಂದ್ರ ತೇಜಸ್ವಿ (ಲೂಸಿಯಾ) ಆಯ್ಕೆಯಾಗಿದ್ದಾರೆ.
ಅತ್ಯುತ್ತಮ ಸಂಕಲನ ಪ್ರಶಸ್ತಿಗೆ ಕೆ.ಎಂ. ಪ್ರಕಾಶ್ (ಟೋನಿ), ಅತ್ಯುತ್ತಮ ಬಾಲನಟ ಪ್ರಶಸ್ತಿಗೆ ಮಾಸ್ಟರ್ ಪ್ರದ್ಯುಮ್ನ (ಕರಿಯಾ ಕಣ್‌ಬಿಟ್ಟ), ಅತ್ಯುತ್ತಮ ಬಾಲ ನಟಿ ಪ್ರಶಸ್ತಿಗೆ ಬೇಬಿ ಶ್ರೇಯಾ (ಅತಿ ಅಪರೂಪ), ಅತ್ಯುತ್ತಮ ಕಲಾ ನಿರ್ದೇಶನಕ್ಕಾಗಿ ರವಿ (ಭಜರಂಗಿ), ಅತ್ಯುತ್ತಮ ಗೀತ ರಚನೆಗಾಗಿ ಅರಸು ಅಂತಾರೆ (ಗೀತೆ: ಮಳೆ ಹನಿಯೇ ಕಣ್ಣೀರ ಹಾಕಿದಂತೆ, ಚಿತ್ರ: ಮದರಂಗಿ), ಅತ್ಯುತ್ತಮ ಹಿನ್ನಲೆ ಗಾಯಕ ಪ್ರಶಸ್ತಿಗೆ ನವೀನ್ ಸಜ್ಜು (ಹಾಡು: ಎದೆಯೊಳಗೆ ತಮತಮ ತಮಟೆ, ಚಿತ್ರ: ಲೂಸಿಯಾ) ಹಾಗೂ ಅತ್ಯುತ್ತಮ ಹಿನ್ನಲೆ ಗಾಯಕಿ ಪ್ರಶಸ್ತಿಗೆ ಸಚಿನಾ ಹೆಗ್ಗಾರ್ (ಗೀತೆ: ಹೆದರ್‌ಬ್ಯಾಡ್ರಿ ಅಂತ..., ಚಿತ್ರ: ಕಡ್ಡಿಪುಡಿ) ಭಾಜನರಾಗಿದ್ದಾರೆ. ಅತ್ಯುತ್ತಮ ನಟ-ನಟಿ ಹಾಗೂ ಇತರೆ ಪ್ರಶಸ್ತಿಗಳು ತಲಾ 20 ಸಾವಿರ ರೂಪಾಯಿ ನಗದು ಹಾಗೂ ಬೆಳ್ಳಿಯ ಪದಕ ಒಳಗೊಂಡಿವೆ.

ರಾಜ್ಯ ಚಲನಚಿತ್ರ ಸಾಹಿತ್ಯ ಪ್ರಶಸ್ತಿ

[ಬದಲಾಯಿಸಿ]
೨೦೧೩ ಸಾಲಿನ ಅತ್ಯುತ್ತಮ ಚಲನಚಿತ್ರ ಸಾಹಿತ್ಯ ಪ್ರಶಸ್ತಿ ಲೇಖಕ ಶ್ರೀ ಆರ್. ಶ್ರೀನಾಥ್ ಅವರಿಗೆ ಲಭಿಸಿದೆ. ಖ್ಯಾತ ಹಿನ್ನೆಲೆಗಾಯಕ ಡಾ|| ಪಿ.ಬಿ. ಶ್ರೀನಿವಾಸ್ ಅವರ ಜೀವನ ಸಾದನೆ ಕುರಿತಾದ `ಮಾದುರ್ಯ ಸಾರ್ವಭೌಮ ಡಾ|| ಪಿ.ಬಿ. ಶ್ರೀನಿವಾಸ್ - ನಾದಯೋಗಿಯ ಸುನಾದಯಾನ - ಕೃತಿ ಈ ಗೌರವಕ್ಕೆ ಪಾತ್ರವಾಗಿದೆ.

ಸಂಕ್ಷಿಪ್ತ ಸೂಚಿ

[ಬದಲಾಯಿಸಿ]
  1. ಪ್ರಥಮ ಶ್ರೇಷ್ಠ ಚಿತ್ರ: ಹಜ್
  2. ಎರಡನೇ ಅತ್ಯುತ್ತಮ ಚಿತ್ರ: ಜಟ್ಟ
  3. ಮೂರನೇ ಶ್ರೇಷ್ಠ ಚಿತ್ರ: ಪ್ರಕೃತಿ
  4. ಮನರಂಜನಾ ಚಿತ್ರ: ಚಾರ್‌ಮಿನಾರ್
  5. ಪ್ರಾದೇಶಿಕ ಸಿನಿಮಾ: ರಿಕ್ಷಾ ಡ್ರೈವರ್ (ತುಳು)
  6. ಡಾ.ರಾಜ್‌ಕುಮಾರ್ ಪ್ರಶಸ್ತಿ: ಶ್ರೀನಾಥ್
  7. ಪುಟ್ಟಣ್ಣ ಕಣಗಾಲ್ ಪ್ರಶಸ್ತಿ: ಪಿ ಎಚ್ ವಿಶ್ವನಾಥ್‌ಗೆ
  8. ಕೆ ಎಸ್ ಅಶ್ವಥ್ ಪ್ರಶಸ್ತಿ: ಶರತ್ ಲೋಹಿತಾಶ್ವ

[]

ಕರ್ನಾಟಕ ಚಲನಚಿತ್ರ ವಾರ್ಷಿಕ ಪ್ರಶಸ್ತಿ ೨೦೧೬-೨೦೧೭

[ಬದಲಾಯಿಸಿ]
  • ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ‘ಕನ್ನಡ ವಾಕ್ಚಿತ್ರದ ಹುಟ್ಟುಹಬ್ಬ’ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಪುರಭವನದಲ್ಲಿ ಶುಕ್ರವಾರ ನಡೆಯಿತು.
  • ಚಲನಚಿತ್ರ ರಂಗದ 14 ಸಾಧಕರಿಗೆ ವಸತಿ ಸಚಿವ ಎಂ. ಕೃಷ್ಣಪ್ಪ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ತಲಾ ₹50 ಸಾವಿರ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿಪತ್ರ ಒಳಗೊಂಡಿದೆ. ಸಿ. ಜಯರಾಂ (ಡಿ.ಶಂಕರ್‌ ಸಿಂಗ್‌ ಪ್ರಶಸ್ತಿ) ಪರವಾಗಿ ಪುತ್ರಿಯರು, ಎಸ್‌.ವಿ. ಶ್ರೀಕಾಂತ್‌ ( ಬಿ.ಎಸ್‌. ರಂಗ ಪ್ರಶಸ್ತಿ) ಪರವಾಗಿ ಛಾಯಾಗ್ರಾಹಕ ಬಸವರಾಜು ಪ್ರಶಸ್ತಿ ಸ್ವೀಕರಿಸಿದರು.

ಪ್ರಶಸ್ತಿ ವಿಜೇತರು

[ಬದಲಾಯಿಸಿ]
  • ಪ್ರಶಸ್ತಿ ಪುರಸ್ಕೃತರು: ಮೊದಲ ಸಾಲು: ಎಸ್‌. ದೊಡ್ಡಣ್ಣ (ತೂಗುದೀಪ ಶ್ರೀನಿವಾಸ ಪ್ರಶಸ್ತಿ), ಬಿ.ಕೆ. ಸುಮಿತ್ರಾ (ಜಿ.ವಿ. ಅಯ್ಯರ್‌ ಪ್ರಶಸ್ತಿ), ಬಿ.ವಿ. ರಾಧಾ (ಪಂಡರೀಬಾಯಿ ಪ್ರಶಸ್ತಿ), ಆದವಾನಿ ಲಕ್ಷ್ಮಿದೇವಿ (ಎಂ.ವಿ. ರಾಜಮ್ಮ ಪ್ರಶಸ್ತಿ), ದೇವಿ (ಎಂ.ಪಿ. ಶಂಕರ್ ಪ್ರಶಸ್ತಿ), ಪಾಲ್‌ ಎಸ್‌. ಚಂದಾನಿ (ಎನ್‌. ವೀರಸ್ವಾಮಿ ಪ್ರಶಸ್ತಿ), ಕುಮಾರ್‌ ಶೆಟ್ಟರ್‌ (ಬಿ. ಜಯಮ್ಮ ಪ್ರಶಸ್ತಿ). ಹಿಂಬದಿ ಸಾಲು: ಎನ್‌.ಎಲ್‌. ರಾಮಣ್ಣ (ಶಂಕರ್‌ನಾಗ್‌ ಪ್ರಶಸ್ತಿ), ಜೆ.ಕೆ. ಶ್ರೀನಿವಾಸಮೂರ್ತಿ (ಆರ್‌. ನಾಗೇಂದ್ರ ರಾವ್‌ ಪ್ರಶಸ್ತಿ), ಬಿ.ಎಲ್‌. ವೇಣು (ಹುಣಸೂರು ಕೃಷ್ಣಮೂರ್ತಿ ಪ್ರಶಸ್ತಿ), ಎಂ.ಎಸ್‌. ಉಮೇಶ್‌ (ಟಿ.ಎನ್‌. ಬಾಲಕೃಷ್ಣ ಪ್ರಶಸ್ತಿ), ರಾಮ್‌ ಶೆಟ್ಟಿ (ಕೆ.ಎನ್‌. ಟೇಲರ್‌ ಪ್ರಶಸ್ತಿ).[]
  • ಸುದ್ದಿ ಲೋಕ:ವಿಜಯ ಕರ್ನಾಟಕ - ೫-೧-೨೦೧೫

ಉಲ್ಲೇಖಗಳು

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]