ವಿಷಯಕ್ಕೆ ಹೋಗು

೨೦೦೨ರ ಗುಜರಾತ್ ದಂಗೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ೨೦೦೨ರ ಗುಜರಾತ್ ದಂಗೆಗಳು (೨೦೦೨ರ ಗುಜರಾತ್ ಹಿಂಸಾಚಾರ, ಗುಜರಾತ್ ಹತ್ಯಾಕಾಂಡ)[೧][೨] ಗುಜರಾತ್‍ನಲ್ಲಿ ಕೋಮುಗಳ ನಡುವಿನ ಹಿಂಸಾಚಾರದ ಮೂರು ದಿನದ ಅವಧಿಯಾಗಿತ್ತು. ಆರಂಭಿಕ ಘಟನೆಯ ನಂತರ, ಅಹ್ಮದಾಬಾದ್‍ನಲ್ಲಿ ಮೂರು ತಿಂಗಳವರೆಗೆ ಹಿಂಸಾಚಾರದ ಹೆಚ್ಚಿನ ಆಸ್ಫೋಟನಗಳಾದವು; ರಾಜ್ಯಾದ್ಯಂತ, ಅದರ ಮುಂದಿನ ವರ್ಷದವರೆಗೆ ಅಲ್ಪಸಂಖ್ಯಾತ ಮುಸ್ಲಿಮ್ ಜನತೆಯ ವಿರುದ್ಧ ಹಿಂಸಾಚಾರದ ಹೆಚ್ಚಿನ ಆಸ್ಫೋಟನಗಳಾದವು. ಅಯೋಧ್ಯೆಯಿಂದ ಮರಳುತ್ತಿದ್ದ ೫೮ ಹಿಂದೂ ಯಾತ್ರಿ ಕರಸೇವಕರ ಮರಣಕ್ಕೆ ಕಾರಣವಾದ, ೨೭, ಫ಼ೆಬ್ರುವರಿ ೨೦೦೨ರಂದು ಗೋಧ್ರಾದಲ್ಲಿ ಒಂದು ಟ್ರೇನಿನ ಸುಡುವಿಕೆಯು ಹಿಂಸಾಚಾರವನ್ನು ಪ್ರಚೋದಿಸಿತು ಎಂದು ಉಲ್ಲೇಖಿಸಲಾಗಿದೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, ೧,೦೪೪ ಮರಣಗಳು, ೨೨೩ ಕಾಣೆಯಾದವರು, ಮತ್ತು ೨,೫೦೦ ಗಾಯಗೊಂಡವರೊಂದಿಗೆ ದಂಗೆಗಳು ಕೊನೆಗೊಂಡವು. ಮೃತರಾದವರಲ್ಲಿ, ೭೯೦ ಮುಸ್ಲಿಮರು ಮತ್ತು ೨೫೪ ಹಿಂದೂಗಳಿದ್ದರು. ೧,೯೨೬ ಸಂಖ್ಯೆಯಷ್ಟು ಜನರು ಮೃತರಾಗಿರಬಹುದು ಎಂದು ಕಾಳಜಿಯಿರುವ ನಾಗರಿಕರ ನ್ಯಾಯಾಧಿಕರಣದ ವರದಿಯು ಅಂದಾಜಿಸಿತು. ಇತರ ಮೂಲಗಳು ಮೃತರ ಸಂಖ್ಯೆ ೨,೦೦೦ನ್ನು ಮೀರಿತ್ತು ಎಂದು ಅಂದಾಜಿಸಿದವು. ಅನೇಕ ಕ್ರೂರ ಕೊಲೆಗಳು ಮತ್ತು ಅತ್ಯಾಚಾರಗಳು, ಜೊತೆಗೆ ವ್ಯಾಪಕ ಲೂಟಿ ಹಾಗೂ ಆಸ್ತಿಪಾಸ್ತಿಯ ಧ್ವಂಸದ ವರದಿಯಾಯಿತು. ಆ ಸಮಯದಲ್ಲಿ ಗುಜರಾತ್‍ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ, ಜೊತೆಗೆ ದಂಗೆಕೋರರಿಗೆ ನಿರ್ದೇಶನ ನೀಡಿದರು ಹಾಗೂ ಮುಸ್ಲಿಮ್ ಸ್ವಾಮ್ಯದ ಆಸ್ತಿಗಳ ಪಟ್ಟಿಗಳನ್ನು ನೀಡಿದರು ಎಂದು ಹೇಳಲಾಗಿರುವ ಪೋಲಿಸ್ ಹಾಗೂ ಸರ್ಕಾರಿ ಅಧಿಕಾರಿಗಳು, ಹಿಂಸಾಚಾರವನ್ನು ಆರಂಭಿಸಿ ಅದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ ಎಂದು ಆರೋಪಿಸಲಾಯಿತು.

೨೦೧೨ ರಲ್ಲಿ, ಭಾರತದ ಸರ್ವೋಚ್ಛ ನ್ಯಾಯಾಲಯವು ನೇಮಿಸಿದ್ದ ವಿಶೇಷ ತನಿಖಾ ತಂಡವು (ಎಸ್ಐಟಿ) ಹಿಂಸಾಚಾರದಲ್ಲಿ ದುಷ್ಕಾರ್ಯಭಾಗಿತ್ವದಿಂದ ಮೋದಿಯವರನ್ನು ಖುಲಾಸೆ ಮಾಡಿತು. ರಾಜ್ಯ ಸರ್ಕಾರವು ದಂಗೆಗಳನ್ನು ತಡೆಯಲು ಸಾಕಷ್ಟು ಮಾಡಲಿಲ್ಲ ಎಂಬ ವಾದಗಳನ್ನೂ ಎಸ್ಐಟಿ ತಿರಸ್ಕರಿಸಿತು. ಮುಸ್ಲಿಮ್ ಸಮುದಾಯವು ಕೋಪ ಮತ್ತು ಅವಿಶ್ವಾಸದಿಂದ ಪ್ರತಿಕ್ರಿಯಿಸಿತು ಎಂದು ವರದಿ ಮಾಡಲಾಗಿತ್ತು. ಜುಲೈ ೨೦೧೩ರಲ್ಲಿ, ಎಸ್ಐಟಿಯು ಸಾಕ್ಷ್ಯಗಳನ್ನು ಮರೆಮಾಚಿದೆ ಎಂಬ ಆರೋಪಗಳನ್ನು ಮಾಡಲಾಯಿತು. ಆ ಡಿಸೆಂಬರ್‌ನಲ್ಲಿ, ಒಂದು ಭಾರತೀಯ ನ್ಯಾಯಾಲಯವು ಹಿಂದಿನ ಎಸ್ಐಟಿ ವರದಿಯನ್ನು ಎತ್ತಿಹಿಡಿದು ಮೋದಿಯವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿದ ಬೇಡಿಕೆಯನ್ನು ತಿರಸ್ಕರಿಸಿತು. ಎಪ್ರಿಲ್ ೨೦೧೪ರಲ್ಲಿ, ಸರ್ವೋಚ್ಚ ನ್ಯಾಯಾಲಯವು ಹಿಂಸಾಚಾರಕ್ಕೆ ಸಂಬಂಧಿಸಿದ ಒಂಭತ್ತು ಪ್ರಕರಣಗಳಲ್ಲಿ ಎಸ್ಐಟಿಯ ತನಿಖೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿತು, ಮತ್ತು ಎಸ್ಐಟಿ ವರದಿಯನ್ನು ಪ್ರಶ್ನಿಸಿದ ಮನವಿಯನ್ನು "ಆಧಾರರಹಿತ" ಎಂದು ತಿರಸ್ಕರಿಸಿತು.

ಉಲ್ಲೇಖಗಳು[ಬದಲಾಯಿಸಿ]

  1. Bilgrami, Akeel (1 February 2013). Democratic Culture: Historical and Philosophical Essays. Routledge. pp. 143–. ISBN 978-1-136-19777-2.
  2. Indian Social Institute (2002). The Gujarat pogrom: compilation of various reports. Retrieved 2014-12-06.