ವಿಷಯಕ್ಕೆ ಹೋಗು

ಹ್ಯೂಗೋ ಪುರಸ್ಕಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೧೯೯೧ರ ಹ್ಯೂಗೋ ಪುರಸ್ಕಾರದ ಟ್ರೋಫಿ

ಹ್ಯೂಗೋ ಪುರಸ್ಕಾರವು ಪ್ರತಿ ವರ್ಷವೂ ಹಿಂದಿನ ವರ್ಷದಲ್ಲಿ ಪ್ರಕಾಶನಗೊಂಡ ಉತ್ತಮೋತ್ತಮ ವೈಜ್ಞಾನಿಕ ಅಥವಾ ಕಲ್ಪನಾತ್ಮಕ ಕಥಾ ಸಾಹಿತ್ಯಗಳಿಗೆ ಕೊಡಲಾಗುವುದು. ಈ ಪುರಸ್ಕಾರವು 'ಅಮೇಜಿಂಗ್ ಸ್ಟೋರೀಸ್' ಎಂಬ ಮೇರು ವೈಜ್ಞಾನಿಕ ಕಥಾ ನಿಯತಕಾಲಿಕಾ ಪತ್ರಿಕೆಯ ಸ್ಥಾಪಕ ಹ್ಯೂಗೋ ಗರ್ನ್ಸ್ ಬ್ಯಾಕ್ನ ಹೆಸರನ್ನು ಪಡೆದುಕೊಂಡಿವೆ. ಪುರಸ್ಕಾರವನ್ನು ೧೯೫೫ರಿಂದ ಪ್ರತಿವರ್ಷವೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೊಡುವ ಪದ್ಧತಿ ನಡೆದು ಬಂದಿದೆ.

ಪುರಸ್ಕಾರಕ್ಕೆ ಅಭ್ಯರ್ಥಿಗಳನ್ನು ಮತ್ತು ವಿಜೇತರನ್ನು ವಾರ್ಷಿಕ ವರ್ಲ್ಡ್ ಕಾನ್ ನ ಸದಸ್ಯರು ಮತ್ತು ಬೆಂಬಲಿಗರು ತೀರ್ಮಾನಿಸುತ್ತಾರೆ. ಜಾಗತಿಕ ವೈಜ್ಞಾನಿಕ ಕಥಾಸಾಹಿತ್ಯ ಸಮಾಜದ ಸಂವಿಧಾನದ ಪ್ರಕಾರ ತತ್ಕಾಲಿಕ ಓಟ ಚುನಾವಣಾ ಪದ್ಧತಿಯಲ್ಲಿ ವಿಜೇತರನ್ನು ತೀರ್ಮಾನಿಸಲಾಗವುದು. ಅಲ್ಲದೆ, ಈ ಪುರಸ್ಕಾರಕ್ಕೆ ಅಸಾಧಾರಣವಾದ ಪದ್ಧತಿಯೆಂದರೆ, "ಪುರಸ್ಕಾರ ಬೇಡ" ಎನ್ನುವ ಅಂಕಣವೂ ಕೊನೆಯ ಐದು ಅಭ್ಯರ್ಥಿ ಅಂಕಣದಲ್ಲಿ ಸೇರಿದ್ದು, "ಪುರಸ್ಕಾರ ಬೇಡ" ಎನ್ನುವ ಅಂಕಣವು ಎಲ್ಲಕ್ಕಿಂತ ಹೆಚ್ಚು ಮತವನ್ನು ಪಡೆದುಕೊಂಡಲ್ಲಿ, ಆ ವರ್ಗದಲ್ಲಿನ ಯಾವುದೇ ಅಭ್ಯರ್ಥಿಗೂ ಪುರಸ್ಕಾರವು ದೊರಕುವುದಿಲ್ಲ.

ಪುರಸ್ಕಾರ ವರ್ಗಗಳು[ಬದಲಾಯಿಸಿ]

೧೯೬೦ರವರೆಗೆ, ಸಾಮಾನ್ಯವಾಗಿ ಬಹಳಷ್ಟು ವರ್ಗಗಳು ವರ್ಷಾನುವರ್ಷ ಬದಲಾಗುತ್ತಿದ್ದವು. ಜಾಗತಿಕ ವೈಜ್ಞಾನಿಕ ಕಥಾಸಾಹಿತ್ಯ ಸಮಾಜದ ಸಂವಿಧಾನದಲ್ಲಿ ಅಂಕಿತ ಪ್ರಸ್ತುತ ಪುರಸ್ಕಾರ ವರ್ಗಗಳನ್ನು ಕೆಳಗೆ ಪಟ್ಟಿಮಾಡಲಾಗಿದೆ:

 • ಉತ್ತಮೋತ್ತಮ ಕಾದಂಬರಿ
 • ಉತ್ತಮೋತ್ತಮ ಕಿರು ಕಾದಂಬರಿ
 • ಉತ್ತಮೋತ್ತಮ ಚುಟುಕು ಕಾದಂಬರಿ
 • ಉತ್ತಮೋತ್ತಮ ಸಣ್ಣ ಕಥೆ
 • ಉತ್ತಮೋತ್ತಮ ಸಂಗತಿ ಸಾಹಿತ್ಯ ಕೃತಿ (೧೯೮೦ರಿಂದ ೧೯೯೮ರವರೆಗೆ)
  • ಉತ್ತಮೋತ್ತಮ ಸಂಬಂಧಿತ ಕೃತಿ (೧೯೯೯ರಿಂದ)
 • ಉತ್ತಮೋತ್ತಮ ಚಿತ್ರಾತ್ಮಕ ಕಥೆ (೨೦೦೮ರಿಂದ)
 • ಉತ್ತಮೋತ್ತಮ ನಾಟಕ ಘಟನಾವಳಿಯ ಪ್ರಸ್ತುತಿ (೧೯೬೦ರಿಂದ ೨೦೦೨)
  • ಉತ್ತಮೋತ್ತಮ ನಾಟಕ ಘಟನಾವಳಿಯ ಪ್ರಸ್ತುತಿ: ದೀರ್ಘ ರೂಪ (೨೦೦೩ರಿಂದ)
  • ಉತ್ತಮೋತ್ತಮ ನಾಟಕ ಘಟನಾವಳಿಯ ಪ್ರಸ್ತುತಿ: ಹ್ರಸ್ವ ರೂಪ (೨೦೦೩ರಿಂದ)
 • ಉತ್ತಮೋತ್ತಮ ಆಂಶಿಕ ವೃತ್ತಿಪರ ಪತ್ರಿಕೆ
 • ಉತ್ತಮೋತ್ತಮ ವೃತ್ತಿನಿರತ ಕಲಾಕಾರ
  • ಉತ್ತಮೋತ್ತಮ ಸ್ವಂತಸ್ತಿಕೆಯ ಕಲಾಕೃತಿ (೧೯೯೦ರಿಂದ ೧೯೯೬)
 • ಉತ್ತಮೋತ್ತಮ ವೃತ್ತಿನಿರತ ಸಂಪಾದಕ (೧೯೭೩ರಿಂದ ೨೦೦೩ರವರೆಗೆ)
  • ಉತ್ತಮೋತ್ತಮ ವೃತ್ತಿನಿರತ ಸಂಪಾದಕ: ದೀರ್ಘರೂಪ (೨೦೦೪ರಿಂದ)
  • ಉತ್ತಮೋತ್ತಮ ವೃತ್ತಿನಿರತ ಸಂಪಾದಕ: ಹ್ರಸ್ವರೂಪ(೨೦೦೪ರಿಂದ)
   • ಉತ್ತಮೋತ್ತಮ ವೃತ್ತಿನಿರತ ಪತ್ರಿಕೆ (೧೯೫೩ರಿಂದ ೧೯೭೨ರವರೆಗೆ)
 • ಉತ್ತಮೋತ್ತಮ ಅಭಿಮಾನಿ ಪತ್ರಿಕೆ (೧೯೬೨ರಿಂದ ೧೯೭೮ರವರೆಗೆ, ಒಮ್ಮೊಮ್ಮೆ)
 • ಉತ್ತಮೋತ್ತಮ ಅಭಿಮಾನಿ ಕಲಾಕಾರ
 • ಉತ್ತಮೋತ್ತಮ ಅಭಿಮಾನಿ ಲೇಖಕ