ಹ್ಯಾರಿ ಹೌದಿನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಪತ್ನಿ ಮತ್ತು ತಾಯಿಯೊಂದಿಗೆ ಹೌದಿನಿ


ಹ್ಯಾರಿ ಹೌದಿನಿಯನ್ನು (ಮಾರ್ಚ್ ೨೪,೧೮೭೪-ಅಕ್ಟೋಬರ್ ೩೧,೧೯೨೬) ಜಾದೂ ಪ್ರಪಂಚದ ಅಪ್ರತಿಮ ಕಲೆಗಾರನೆಂದು ಗುರುತಿಸಲಾಗುತ್ತದೆ.

ಹಂಗರಿ ದೇಶದ ರಾಜಧಾನಿಯಾದ ಬುಡಾಪೆಸ್ಟ್ ನಗರದಲ್ಲಿ ಜನಿಸಿದ ಹೌದಿನಿಯನ್ನು ಅಮೇರಿಕದ ಅಪ್ರತಿಮ ಜಾದೂಗಾರ,ಸಾಹಸ ಕಲಾವಿದ,ನಟ ಮತ್ತು ಚಿತ್ರ ನಿರ್ಮಾಪಕ ನೆಂದು ವಿವರಿಸಬಹುದು.ನೀರಿನಲ್ಲಿ ಕೈಕಾಲು ಕಟ್ಟಿಹಾಕಿದರೂ ಕ್ಷಣಾರ್ಧದಲ್ಲಿ ನೀರಿನಿಂದ ಎದ್ದು ಬರುತ್ತಿದ್ದ ಈತನ ಪ್ರಖ್ಯಾತ ಕೈಕೊಳ ಜಾದೂ ಎಂಥವನಲ್ಲೂ ಮೈ ಜುಮ್ಮೆನ್ನಿಸುವಂತೆ ಮಾಡುತ್ತಿತ್ತು. ಈ ರೀತಿಯಾಗಿ ಹೌದಿನಿ ತನ್ನ ದೇಹಕ್ಕೆಲ್ಲ ಕಬ್ಬಿಣದ ಸರಪಳಿಯಿಂದ ಬೀಗದ ಸಮೇತ ಸ್ವಯಂ ಬಂಧಿತನಾಗಿ ಸಮುದ್ರದಲ್ಲಿ,ನೀರಿನ ಕೊಳದಲ್ಲಿ,ಬೆಂಕಿಯಲ್ಲಿ ಒಂದಿಷ್ಟೂ ಗಾಯ ಮಾಡಿಕೊಳ್ಳದೇ ಪಾರಾಗಿ ಬರುತ್ತಿದ್ದ!