ಹ್ಯಾರಿ ಪಾಟರ್‌ ಅಂಡ್‌ ದಿ ಗಾಬ್ಲಿಟ್‌ ಆಫ್‌ ಫೈರ್‌‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹ್ಯಾರಿ ಪಾಟರ್ ಪುಸ್ತಕಗಳು
Harry Potter and the Goblet of Fire
ಚಿತ್ರ:Harry Potter and the Goblet of Fire.jpg
ಲೇಖಕಿಜೆ. ಕೆ. ರೊಲಿಂಗ್
ಚಿತ್ರಲೇಖಕGiles Greenfield (UK)
Mary GrandPré (US)
ಪ್ರಕಾರಕಲ್ಪನೆ
ಪ್ರಕಾಶಕರುಬ್ಲೂಮ್ಸ್ ಬೆರಿ (ಯುಕೆ)
ಆರ್ಥರ್ ಎ. ಲೆವಿನ್/
ಸ್ಕೊಲ್ಯಸ್ಟಿಕ್ (ಯುಎಸ್)
ರೈನ್‌ಕೋಸ್ಟ್ (ಕೆನಡ)
ಬಿಡುಗಡೆ8 July 2000
ಪುಸ್ತಕ ಸಂಖ್ಯೆFourth
ಮಾರಾಟ~ 66 million (worldwide)[ಸೂಕ್ತ ಉಲ್ಲೇಖನ ಬೇಕು]
ಕಥಾ ಕಾಲಕ್ರಮಾಂಕSummer 1942
4 August 1994–25 June 1995
ಅಧ್ಯಾಯಗಳು37 I
ಪುಟಗಳು636 (UK)
734 (US)
ಐಎಸ್‌ಬಿಎನ್074754624X
ಹಿಂದಿನ ಪುಸ್ತಕHarry Potter and the Prisoner of Azkaban
ಮುಂದಿನ ಪುಸ್ತಕHarry Potter and the Order of the Phoenix

ಹ್ಯಾರಿ ಪಾಟರ್‌ ಅಂಡ್‌ ದಿ ಗಾಬ್ಲಿಟ್‌ ಆಫ್‌ ಫೈರ್‌‌ ಎಂಬುದು J. K. ರೌಲಿಂಗ್‌‌‌ಳಿಂದ ಬರೆಯಲ್ಪಟ್ಟ ಹ್ಯಾರಿ ಪಾಟರ್‌ ಸರಣಿಯಲ್ಲಿನ ನಾಲ್ಕನೇ ಕಾದಂಬರಿಯಾಗಿದ್ದು, ಇದು 2000ನೇ ಇಸವಿಯ ಜುಲೈ 8ರಂದು ಪ್ರಕಟಿಸಲ್ಪಟ್ಟಿತು. ಕಥೆಯ ಪಾತ್ರಗಳ ಪೈಕಿ ಒಂದು ಪಾತ್ರವು ಈ ಪುಸ್ತಕದಲ್ಲಿ ಕೊಲೆಯಾಗುತ್ತದೆ ಎಂಬುದಾಗಿ ಲೇಖಕಿ J.K. ರೌಲಿಂಗ್‌ ನೀಡಿದ ಒಂದು ಪ್ರಕಟಣಾ-ಪೂರ್ವ ಮುನ್ಸೂಚನೆಯಿಂದಾಗಿ ಈ ಪುಸ್ತಕವು ಹೆಚ್ಚುವರಿ ಗಮನವನ್ನು ಆಕರ್ಷಿಸಿತು.[ಸೂಕ್ತ ಉಲ್ಲೇಖನ ಬೇಕು] US ಒಂದರಲ್ಲೇ ಮೊದಲ ವಾರಾಂತ್ಯದೊಳಗಾಗಿ ಪುಸ್ತಕದ 3 ದಶಲಕ್ಷ ಪ್ರತಿಗಳು ಮಾರಾಟವಾದವು.[೧]

2001ರಲ್ಲಿ[೨] ಈ ಕಾದಂಬರಿಯು ಹ್ಯೂಗೋ ಪ್ರಶಸ್ತಿಯೊಂದನ್ನು ಗೆದ್ದುಕೊಂಡಿತು ಮತ್ತು ಇದಕ್ಕೆ ಪಾತ್ರವಾದ ಏಕೈಕ ಹ್ಯಾರಿ ಪಾಟರ್‌ ಕಾದಂಬರಿ ಎನಿಸಿಕೊಂಡಿತು. ಈ ಪುಸ್ತಕವನ್ನು ಒಂದು ಚಲನಚಿತ್ರವಾಗಿಯೂ ರೂಪಾಂತರಿಸಲಾಯಿತು ಮತ್ತು ಇದು 2005ರ ನವೆಂಬರ್‌ 18ರಂದು ವಿಶ್ವಾದ್ಯಂತ ಬಿಡುಗಡೆಯಾಯಿತು.

ಸಾರಾಂಶ[ಬದಲಾಯಿಸಿ]

ಕಥಾವಸ್ತುವಿನ ಪರಿಚಯ[ಬದಲಾಯಿಸಿ]

ಹ್ಯಾರಿ ಪಾಟರ್‌ ಸರಣಿಯಲ್ಲಿನ ಹಿಂದಿನ ಮೂರು ಕಾದಂಬರಿಗಳ ಉದ್ದಕ್ಕೂ ಮುಖ್ಯ ಪಾತ್ರವಾದ ಹ್ಯಾರಿ ಪಾಟರ್‌ ಬೆಳೆದು ದೊಡ್ಡವನಾಗುತ್ತಾ ಹೋದಂತೆ ಎದುರಾಗುವ ತೊಡಕುಗಳೊಂದಿಗೆ ಹೆಣಗಾಡುತ್ತಲೇ ಹೋಗುತ್ತಾನೆ ಮತ್ತು ಓರ್ವ ಪ್ರಸಿದ್ಧ ಮಂತ್ರವಾದಿಯಾಗುವ ಸವಾಲು ಇದರೊಂದಿಗೆ ಸೇರ್ಪಡೆಯಾಗುತ್ತದೆ. ಹ್ಯಾರಿಯು ಓರ್ವ ಶಿಶುವಾಗಿದ್ದಾಗ, ಇತಿಹಾಸದಲ್ಲಿನ ಅತ್ಯಂತ ಶಕ್ತಿಶಾಲಿ ಕರಾಳ ಮಂತ್ರವಾದಿ ಎನಿಸಿಕೊಂಡಿದ್ದ ವೋಲ್ಡ್‌ಮಾರ್ಟ್‌ ಹ್ಯಾರಿಯ ಹೆತ್ತವರನ್ನು ಸಾಯಿಸಿರುತ್ತಾನೆ, ಆದರೆ ಹ್ಯಾರಿಯನ್ನು ಸಾಯಿಸಲು ಮಾಡಿದ ಪ್ರಯತ್ನವು ವಿಫಲವಾದ ನಂತರ ಅವನು ನಿಗೂಢವಾಗಿ ಕಣ್ಮರೆಯಾಗಿರುತ್ತಾನೆ. ಹ್ಯಾರಿಯ ತತ್‌ಕ್ಷಣದ ಪ್ರಸಿದ್ಧಿಗೆ ಇದು ಕಾರಣವಾಗುತ್ತದೆ ಮತ್ತು ಅವನ ಮಗಲ್‌, ಅಥವಾ ಮಾಂತ್ರಿಕರಲ್ಲದ ಚಿಕ್ಕಮ್ಮ ಪೆಟೂನಿಯಾ ಮತ್ತು ಚಿಕ್ಕಪ್ಪ ವೆರ್ನಾನ್‌ ಇವರುಗಳ ಪಾಲನೆಯಲ್ಲಿ ಹ್ಯಾರಿ ಇರಬೇಕಾಗಿ ಬರುತ್ತದೆ; ಪೆಟೂನಿಯಾ ಮತ್ತು ವೆರ್ನಾನ್‌ರಿಗೆ ಡ್ಯೂಡ್ಲೆ ಡರ್ಸ್ಲೆ ಎಂಬ ಓರ್ವ ಮಗನಿರುತ್ತಾನೆ.

ಹೊಗ್ವಾರ್ಟ್ಸ್‌ನಲ್ಲಿನ ಮಾಟ ಮತ್ತು ಮಂತ್ರವಾದಿತನದ ಶಾಲೆಯಲ್ಲಿ ದಾಖಲಿಸಿಕೊಳ್ಳುವ ಮೂಲಕ, ತನ್ನ 11ನೇ ವಯಸ್ಸಿನಲ್ಲಿ ಹ್ಯಾರಿ ಮಾಂತ್ರಿಕರ ಪ್ರಪಂಚವನ್ನು ಪ್ರವೇಶಿಸುತ್ತಾನೆ. ರಾನ್‌ ವೀಸ್ಲೆ ಮತ್ತು ಹರ್ಮಿಯೋನ್‌ ಗ್ರ್ಯಾಂಗರ್‌ ಎಂಬಿಬ್ಬರು ಅವನಿಗೆ ಸ್ನೇಹಿತರಾಗುತ್ತಾರೆ ಮತ್ತು ಶಕ್ತಿಯನ್ನು ಮರುಗಳಿಸಲು ಪ್ರಯತ್ನಿಸುತ್ತಿರುವ ಲಾರ್ಡ್‌ ವೋಲ್ಡ್‌ಮಾರ್ಟ್‌ ಅವನಿಗೆ ಮುಖಾಮುಖಿಯಾಗುತ್ತಾನೆ. ಹ್ಯಾರಿಯು ತನ್ನ ಮೊದಲ ವರ್ಷದಲ್ಲಿ, ಹೊಗ್ವಾರ್ಟ್ಸ್‌‌‌ನಲ್ಲಿನ ವೋಲ್ಡ್‌ಮಾರ್ಟ್‌ ಮತ್ತು ಅವನ ವಿಶ್ವಾಸಾರ್ಹ ಅನುಯಾಯಿಗಳ ಪೈಕಿ ಒಬ್ಬನಿಂದ ಸ್ಪರ್ಶಮಣಿಯನ್ನು ಸಂರಕ್ಷಿಸಬೇಕಾಗಿ ಬರುತ್ತದೆ. ಬೇಸಿಗೆಯ ರಜಾಕಾಲದ ನಂತರ ಶಾಲೆಗೆ ಹಿಂದಿರುಗಿದ ಮೇಲೆ, ಐತಿಹ್ಯವನ್ನು ಹೊಂದಿದ್ದ "ರಹಸ್ಯಗಳ ಕೋಣೆ"ಯು (ಚೇಂಬರ್ ಆಫ್‌ ಸೀಕ್ರೆಟ್ಸ್‌) ತೆರೆಯಲ್ಪಟ್ಟ ನಂತರ ಹೊಗ್ವಾರ್ಟ್ಸ್‌ನಲ್ಲಿನ ವಿದ್ಯಾರ್ಥಿಗಳು ದಾಳಿಗೊಳಗಾಗುತ್ತಾರೆ. ಬ್ಯಾಸಿಲಿಸ್ಕ್‌ ಎಂಬ ಭೀಕರ ಸರೀಸೃಪವೊಂದನ್ನು ಸಾಯಿಸುವ ಮೂಲಕ ಹ್ಯಾರಿಯು ದಾಳಿಗಳನ್ನು ಕೊನೆಗೊಳಿಸುತ್ತಾನೆ ಮತ್ತು ಸಂಪೂರ್ಣ ಬಲವನ್ನು ಗಳಿಸಲು ಲಾರ್ಡ್‌ ವೋಲ್ಡ್‌ಮಾರ್ಟ್‌ ಮಾಡಿದ ಮತ್ತೊಂದು ಪ್ರಯತ್ನವನ್ನು ಸೋಲಿಸುತ್ತಾನೆ. ನಂತರದ ವರ್ಷದಲ್ಲಿ, ಸಿರಿಯಸ್‌ ಬ್ಲ್ಯಾಕ್‌ ಎಂಬ ತಪ್ಪಿಸಿಕೊಂಡಿದ್ದ ಕೊಲೆಗಾರನು ತನ್ನನ್ನು ಗುರಿಯಾಗಿರಿಸಿಕೊಂಡು ದಾಳಿನಡೆಸಿದ್ದ ಎಂಬ ಸಂಗತಿಯನ್ನು ಹ್ಯಾರಿ ಕೇಳಿಸಿಕೊಳ್ಳುತ್ತಾನೆ. ಹೊಗ್ವಾರ್ಟ್ಸ್‌ನಲ್ಲಿನ ಕಟ್ಟುನಿಟ್ಟಾದ ಭದ್ರತಾ ವ್ಯವಸ್ಥೆಗಳ ಹೊರತಾಗಿಯೂ, ತನ್ನ ಶಾಲಾ ಶಿಕ್ಷಣದ ಮೂರನೇ ವರ್ಷದ ಅಂತ್ಯದ ವೇಳೆಗೆ ಹ್ಯಾರಿಯು ಬ್ಲ್ಯಾಕ್‌ಗೆ ಮುಖಾಮುಖಿಯಾಗುತ್ತಾನೆ; ಮತ್ತು ಬ್ಲ್ಯಾಕ್‌ ವಾಸ್ತವವಾಗಿ ತನ್ನ ಹಿತಸಾಧಕನಾಗಿದ್ದಾನೆ, ಆದರೆ ಪಿತೂರಿ ಮಾಡಿ ಅವನನ್ನು ಉಪಾಯವಾಗಿ ಈ ಕಾರ್ಯದಲ್ಲಿ ಸಿಕ್ಕಿಹಾಕಿಸಲಾಗಿದೆ ಎಂಬುದನ್ನು ಹ್ಯಾರಿ ಅರಿತುಕೊಳ್ಳುತ್ತಾನೆ. ವಾಸ್ತವವಾಗಿ ಸಿರಿಯಸ್‌ನ, ಲ್ಯೂಪಿನ್‌ನ ಮತ್ತು ಜೇಮ್ಸ್‌ ಪಾಟರ್‌ನ ಸ್ನೇಹಿತನಾದ ಪೀಟರ್‌ ಪೆಟ್ಟಿಗ್ರ್ಯೂ ತನ್ನ ಹೆತ್ತವರಿಗೆ ನಂಬಿಕೆದ್ರೋಹ ಮಾಡಿದ್ದ ಎಂಬುದನ್ನೂ ಹ್ಯಾರಿಯು ಅರಿತುಕೊಳ್ಳುತ್ತಾನೆ.

ಕಥಾವಸ್ತುವಿನ ಸಾರಾಂಶ[ಬದಲಾಯಿಸಿ]

ರಿಡ್ಲ್‌ ಕುಟುಂಬದ ಮಹಲಿನ ಮಾಜಿ-ಗೃಹಪಾಲಕನಾದ ಫ್ರಾಂಕ್‌ ಬ್ರೈಸ್‌ ಎಂಬಾತನ ಕುರಿತಾಗಿ ಹ್ಯಾರಿ ಪಾಟರ್‌ ಒಂದು ಕನಸನ್ನು ಕಾಣುವುದರೊಂದಿಗೆ ಪುಸ್ತಕವು ಪ್ರಾರಂಭವಾಗುತ್ತದೆ; ಆ ಮನೆಯ ಸೂರಿನ ಕೆಳಗೆ ನಿಂತುಕೊಂಡು ಕುರೂಪಿ ಲಾರ್ಡ್‌ ವೋಲ್ಡ್‌ಮಾರ್ಟ್‌ ಮತ್ತು ಅವನ ಸೇವಕ ಪೀಟರ್‌ ಪೆಟ್ಟಿಗ್ರ್ಯೂ ಇವರ ಮಾತನ್ನು ಕದ್ದಾಲಿಸಿದ್ದಕ್ಕಾಗಿ ಸದರಿ ಫ್ರಾಂಕ್‌ ಬ್ರೈಸ್‌ ಹಿಡಿಯಲ್ಪಟ್ಟಂತೆ ಹ್ಯಾರಿ ಪಾಟರ್ ಕನಸು ಕಾಣುತ್ತಾನೆ. ಹ್ಯಾರಿಯ ಕನಸಿನಲ್ಲಿ, ವೋಲ್ಡ್‌ಮಾರ್ಟ್‌ನಿಂದ ಬ್ರೈಸ್‌ ಸಾಯಿಸಲ್ಪಡುತ್ತಾನೆ. ನಂತರ ಬೇಸಿಗೆಯ ಅವಧಿಯಲ್ಲಿ ಹ್ಯಾರಿ, ಹರ್ಮಿಯೋನ್‌ ಗ್ರ್ಯಾಂಗರ್‌‌, ಮತ್ತು ವೀಸ್ಲೆ ಕುಟುಂಬ ಒಟ್ಟಾಗಿ ಕ್ವಿಡಿಚ್‌ ವಿಶ್ವಕಪ್‌ಗೆ ಪ್ರವಾಸವೊಂದನ್ನು ಕೈಗೊಳ್ಳುತ್ತಾರೆ. ಅಲ್ಲಿರುವಾಗ, ಮೃತ್ಯು ಭಕ್ಷಕರಾದ (ಡೆತ್‌ ಈಟರ್ಸ್‌) ವೋಲ್ಡ್‌ಮಾರ್ಟ್‌ನ ಸೇವಕರು ಮೈದಾನದೆಡೆಗೆ ನುಗ್ಗಿಬಂದು, ಒಂದಷ್ಟು ಮಗಲ್‌‌ಗಳಿಗೆ ಕಿರುಕುಳ ಕೊಡುತ್ತಾರೆ; ಆದರೆ ಆಕಾಶದಲ್ಲಿ ಕರಾಳ ಚಿಹ್ನೆಯನ್ನು (ಡಾರ್ಕ್‌ ಮಾರ್ಕ್‌) ಅವರು ನೋಡಿದಾಗ, ಅಲ್ಲಿಂದ ಓಡಿಹೋಗುತ್ತಾರೆ.

‌ಒಂದು ಅಂತರ-ಶಾಲಾ ಸ್ಪರ್ಧೆಯಾದ ತ್ರಿಮಂತ್ರವಾದಿ ಪಂದ್ಯಾವಳಿಯನ್ನು (ಟ್ರೈವಿಜರ್ಡ್‌ ಟೂರ್ನಮೆಂಟ್‌) ಶಾಲೆಯು ಆಯೋಜಿಸಲಿದೆ ಎಂಬುದಾಗಿ ಸ್ವಾಗತ ಭೋಜನಕೂಟದ ಸಂದರ್ಭದಲ್ಲಿ ಆಲ್ಬಸ್ ಡಂಬಲ್‌ಡೋರ್‌ ಪ್ರಕಟಿಸುತ್ತಾನೆ. ಮಂತ್ರವಿದ್ಯೆಯ ಮೂರು ಶಾಲೆಗಳ ಪೈಕಿ ಒಂದೊಂದು ಶಾಲೆಯಿಂದಲೂ ಓರ್ವ ವಿದ್ಯಾರ್ಥಿಯು ಇದರಲ್ಲಿ ಸ್ಪರ್ಧಿಸುವುದಕ್ಕಾಗಿ ಗಾಬ್ಲಿಟ್‌ ಆಫ್‌ ಫೈರ್‌ ವತಿಯಿಂದ ಆರಿಸಲ್ಪಡುತ್ತಾನೆ. ಮಂತ್ರವಿದ್ಯೆಯ ಇತರ ಎರಡು ಸಂಸ್ಥೆಗಳಾದ, ಬ್ಯೂಕ್ಸ್‌ಬೇಟನ್ಸ್‌ ಅಕಾಡೆಮಿ, ಮತ್ತು ಡರ್ಮ್‌ಸ್ಟ್ರಾಂಗ್‌ ಇನ್‌ಸ್ಟಿಟ್ಯೂಟ್ ಇವು ಶಾಲಾವಧಿಗೆ ಎರಡು ತಿಂಗಳುಗಳಿರುವಂತೆಯೇ ಹೊಗ್ವಾರ್ಟ್ಸ್‌ಗೆ ಆಗಮಿಸುತ್ತವೆ. ಗಾಬ್ಲಿಟ್‌ನಿಂದ ಆರಿಸಲ್ಪಟ್ಟ ಚಾಂಪಿಯನ್ನರಲ್ಲಿ ಬ್ಯೂಕ್ಸ್‌ಬೇಟನ್ಸ್‌ಗೆ ಸೇರಿದ ಫ್ಲ್ಯೂರ್‌ ಡೆಲಾಕೌರ್‌, ಡರ್ಮ್‌ಸ್ಟ್ರಾಂಗ್‌ನ ವಿಕ್ಟರ್‌ ಕ್ರಮ್‌, ಮತ್ತು ಹೊಗ್ವಾರ್ಟ್ಸ್‌ನ ಸೆಡ್ರಿಕ್‌ ಡಿಗರಿ ಸೇರಿರುತ್ತಾರೆ. ಹ್ಯಾರಿಯು ತನ್ನ ಹೆಸರನ್ನು ಸಲ್ಲಿಸದಿದ್ದರೂ ಸಹ ನಿಗೂಢವೆಂಬಂತೆ ಅವನೂ ಆರಿಸಲ್ಪಡುತ್ತಾನೆ. ಹ್ಯಾರಿ ಖುದ್ದಾಗಿ ತನ್ನ ಹೆಸರನ್ನು ಸಲ್ಲಿಸಿದ್ದಾನೆ ಎಂದು ಭಾವಿಸಿದ ರಾನ್‌ ವೀಸ್ಲೆಗೆ ಇದ್ದಕ್ಕಿದ್ದಂತೆ ಕೋಪ ಬರುತ್ತದೆ, ಮತ್ತು ಅವರ ಗೆಳೆತನಕ್ಕೆ ಇದರಿಂದ ಧಕ್ಕೆಯಾಗುತ್ತದೆ.

ಕರಾಳ ಕಲೆಗಳ ವಿರುದ್ಧದ ರಕ್ಷಣೆಗೆ ಸಂಬಂಧಿಸಿದ ಹೊಸ ಪ್ರಾಧ್ಯಾಪಕನಾದ ಅಲಾಸ್ಟರ್‌ "ಮ್ಯಾಡ್‌-ಐ" ಮೂಡಿ ಎಂಬಾತ, ಓರ್ವ ಹಿಂದಿನ ಆರರ್‌ ಮತ್ತು ಡಂಬಲ್‌ಡೋರ್‌ನ ಸ್ನೇಹಿತನಾಗಿರುತ್ತಾನೆ. ತರಗತಿಯಲ್ಲಿ ಆತ ಅಕ್ರಮವಾಗಿ ಗುಲ್ಲೆಬ್ಬಿಸುತ್ತಾನೆ ಮತ್ತು ಮೂರು ಕ್ಷಮಿಸಲಾಗದ ಅಭಿಶಾಪಗಳನ್ನು ನಿರೂಪಿಸುತ್ತಾನೆ. ಅವೆಂದರೆ: ಲೆಕ್ಕಿಗನ ಆಜ್ಞೆಯನ್ನು ಮಾಡುವಂತೆ ಬಲಿಪಶುವನ್ನು ಒತ್ತಾಯಿಸುವ ಅಧಿಕಾರ-ಗರ್ವದ ಅಭಿಶಾಪ; ತನ್ನ ಬಲಿಪಶುವಿಗೆ ಚಿತ್ರಹಿಂಸೆಯನ್ನು ನೀಡುವ ಒಂದು ಮಂತ್ರವಾದ ಶಿಲುಬೆಗೇರಿಸುವ ಅಭಿಶಾಪ; ಮತ್ತು ಅವಡ ಕದವ್ರ ಎಂಬ ಸಾಯಿಸುವ ಅಭಿಶಾಪ. ತಾನು ಓರ್ವ ಶಿಶುವಾಗಿದ್ದಾಗ ತನ್ನ ವಿರುದ್ಧವಾಗಿ ಪಿತೂರಿ ಮಾಡಿ ಹೂಡಲ್ಪಟ್ಟಿದ್ದ ಸಾಯಿಸುವಿಕೆಯ ಅಭಿಶಾಪದಿಂದ ತಪ್ಪಿಸಿಕೊಂಡು ಬದುಕುಳಿದವರಲ್ಲಿ ತಾನು ಮತ್ತು ವೋಲ್ಡ್‌ಮಾರ್ಟ್‌ ಮಾತ್ರವೇ ತಿಳಿದಿರುವ ವ್ಯಕ್ತಿಗಳು ಎಂಬುದಾಗಿ ಹ್ಯಾರಿ ಅರಿತುಕೊಳ್ಳುತ್ತಾನೆ. ತನ್ನ ತಾಯಿಯ ಪ್ರೇಮಮಯವಾದ ತ್ಯಾಗದಿಂದಾಗಿ ಹ್ಯಾರಿಯು ಅಭಿಶಾಪದಿಂದ ಬದುಕುಳಿದಿರುತ್ತಾನೆ ಮತ್ತು ಲಾರ್ಡ್‌ ವೋಲ್ಡ್‌ಮಾರ್ಟ್‌ ಮೇಲೆಯೇ ಅಭಿಶಾಪವು ಮರಳುತ್ತದೆ.

ತ್ರಿಮಂತ್ರವಾದಿ ಪಂದ್ಯಾವಳಿಯ ಮೂರು ನಿಯೋಜಿತ ಕಾರ್ಯಗಳ ಪೈಕಿ ಮೊದಲನೆಯದರಲ್ಲಿ, ಒಂದು ಪೆಡಂಭೂತದಿಂದ ಕಾವಲು ಕಾಯಲ್ಪಟ್ಟ ಬಂಗಾರದ ಮೊಟ್ಟೆಯೊಂದನ್ನು ಚಾಂಪಿಯನ್ನರು ಸಂಗ್ರಹಿಸಬೇಕಿರುತ್ತದೆ. ರೂಬಿಯಸ್‌ ಹೇಗ್ರಿಡ್‌ ಮತ್ತು ಮೂಡಿಯಿಂದ ದೊರೆತ ಸುಳುಹುಗಳ ನೆರವಿನಿಂದ ಈ ನಿಯೋಜಿತ ಕಾರ್ಯವನ್ನು ಹ್ಯಾರಿ ಸಂಪೂರ್ಣಗೊಳಿಸುತ್ತಾನೆ. ಮೊದಲ ನಿಯೋಜಿತ ಕಾರ್ಯದ ಅನುಸರಣೆಯಲ್ಲಿ, ರಾನ್‌ ಮತ್ತು ಹ್ಯಾರಿ ತಮ್ಮ ಮುರಿದುಬಿದ್ದ ಗೆಳೆತನವನ್ನು ಸರಿಪಡಿಸಿಕೊಳ್ಳುತ್ತಾರೆ. ಪ್ರತಿಯೊಬ್ಬ ಚಾಂಪಿಯನ್‌ನಿಂದ ಪಡೆಯಲಾದ ಏನೋ ಒಂದು ವಸ್ತುವನ್ನು ಹೊಗ್ವಾರ್ಟ್ಸ್‌ ಸರೋವರದಲ್ಲಿ ಅಡಗಿಸಿಡಲಾಗುತ್ತದೆ ಮತ್ತು ಅದನ್ನು ಅವರು ಅಲ್ಲಿಂದ ಮರುಸಂಪಾದಿಸುವುದೇ ಎರಡನೇ ನಿಯೋಜಿತ ಕಾರ್ಯವಾಗಿರುತ್ತದೆ. ನಿಯೋಜಿತ ಕಾರ್ಯಕ್ಕೆ ಹತ್ತು ನಿಮಿಷಗಳು ಮುಂಚಿತವಾಗಿ, ಡಾಬಿಯು ಹ್ಯಾರಿಗೆ ಜಿಲಿಯ ಕದಿರುಕಡ್ಡಿಯನ್ನು ನೀಡಿರುತ್ತಾನೆ; ಅವನು ನೀರೊಳಗೆ ಉಸಿರಾಡಲು ಸಾಧ್ಯವಾಗಲಿ ಎಂಬುದು ಇದರ ಹಿಂದಿನ ಉದ್ದೇಶವಾಗಿರುತ್ತದೆ. ಪಂದ್ಯಾವಳಿಯ ಸ್ಪರ್ಧಿಗಳ ನಾಲ್ಕು "ಮುಖ್ಯ ಉದ್ದೇಶಿತ ವಸ್ತುಗಳನ್ನು" ಹ್ಯಾರಿ ಕಂಡುಕೊಳ್ಳುತ್ತಾನೆ: ರಾನ್‌, ಹರ್ಮಿಯೋನ್‌, ಚೋ ಚಾಂಗ್‌, ಮತ್ತು ಫ್ಲ್ಯೂರ್‌ಳ ಪುಟ್ಟ ತಂಗಿಯಾದ ಗೇಬ್ರಿಯೆಲ್‌ ಡೆಲಾಕೌರ್‌ ಇವರೇ ಆ ನಾಲ್ವರಾಗಿರುತ್ತಾರೆ. ಫ್ಲ್ಯೂರ್‌ ಬರದೇ ಇದ್ದಾಗ ಅವನು ರಾನ್‌ ಜೊತೆಗೆ ಗೇಬ್ರಿಯೆಲ್‌ಳನ್ನೂ ರಕ್ಷಿಸಬೇಕಾಗಿ ಬರುತ್ತದೆ; ಇದರಿಂದಾಗಿ ಅವನು ಸವಾಲಿನಲ್ಲಿ ಸೋತರೂ ಸಹ 'ನೈತಿಕ ಸ್ವಭಾವ'ದ ಕಾರಣದಿಂದಾಗಿ ಅಂಕಗಳನ್ನು ಗಳಿಸುತ್ತಾನೆ.

ಒಂದು ರಾತ್ರಿ, ಅಸ್ತವ್ಯಸ್ತವಾದ ರೀತಿಯಲ್ಲಿರುವ ಬಾರ್ಟಿ ಕ್ರೌಚ್‌, ಸೀನಿಯರ್‌ ಅಸಂಬದ್ಧವಾದ ಮಾತುಗಳನ್ನು ಮಣಗುಟ್ಟುತ್ತಾ ಮತ್ತು ಡಂಬಲ್‌ಡೋರ್‌ನನ್ನು ನೋಡಬೇಕೆಂದು ಒತ್ತಾಯಪೂರ್ವಕವಾಗಿ ಕೇಳುತ್ತಾ ಅರಣ್ಯದಿಂದ ಹೊರಬರುವುದನ್ನು ಕಂಡ ಹ್ಯಾರಿ ಮತ್ತು ಕ್ರಮ್‌ ಬೆಚ್ಚಿಬೀಳುತ್ತಾರೆ. ನೆರವಿಗಾಗಿ ಹ್ಯಾರಿ ಓಡುತ್ತಾನಾದರೂ, ಡಂಬಲ್‌ಡೋರ್‌ ಜೊತೆಗೆ ಅವನು ಹಿಂದಿರುಗಿದಾಗ, ಕ್ರಮ್‌ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಹಾಗೂ ಕ್ರೌಚ್‌ ತಪ್ಪಿಸಿಕೊಂಡಿರುವುದು ಅವರಿಗೆ ಕಂಡುಬರುತ್ತದೆ. ನೆನಪು-ಸಂಗ್ರಹಿಸಿಟ್ಟುಕೊಳ್ಳುವ ಒಂದು ಸಾಧನವಾದ ಪೆನ್ಸೀವ್‌ನಲ್ಲಿ ಡಂಬಲ್‌ಡೋರ್‌ನ ನೆನಪುಗಳ ಪೈಕಿ ಒಂದನ್ನು ಹ್ಯಾರಿಯು ನೋಡಿದಾಗ, ದೇಹವನ್ನು ಮುದುರಿಕೊಂಡಿರುವವರ ಕುರಿತಾಗಿ ಅವನು ಹೆಚ್ಚಾಗಿ ಅರಿತುಕೊಳ್ಳುತ್ತಾನೆ. ನೆನಪು ತೋರಿಸಿದ ವಿವರಗಳ ಪ್ರಕಾರ, ಓರ್ವ ಮೃತ್ಯು ಭಕ್ಷಕನಾದ ಬಾರ್ಟಿ ಕ್ರೌಚ್‌, ಜೂನಿಯರ್‌, ಅವನ ತಂದೆಯಿಂದ ದಂಡನೆಗೊಳಗಾಗಿ ಅಝ್‌ಕಬಾನ್‌ಗೆ ಕಳಿಸಲ್ಪಟ್ಟಿರುತ್ತಾನೆ; ನೆವಿಲ್ಲೆಯ ಹೆತ್ತವರಾದ ಫ್ರಾಂಕ್‌ ಮತ್ತು ಅಲೀಸ್‌ ಲಾಂಗ್‌ಬಾಟಮ್‌ಗೆ ಬೆಲ್ಲಾಟ್ರಿಕ್ಸ್‌ ಲೆಸ್ಟ್ರೇಂಜ್‌ ಚಿತ್ರಹಿಂಸೆ ನೀಡಿ, ಅವರಿಗೆ ಬುದ್ಧಿಭ್ರಮಣೆಯಾಗುವಂತಾಗುವಲ್ಲಿ ನೆರವಾಗಿದ್ದಕ್ಕಾಗಿ ಅವನಿಗೆ ಈ ಶಿಕ್ಷೆ ಸಿಕ್ಕಿರುತ್ತದೆ.

ಮರಳುಗೊಳಿಸುವಂಥ ಅಡಚಣೆಗಳಿಂದ ತುಂಬಿಕೊಂಡಿರುವ ಚಕ್ರವ್ಯೂಹದಂಥ ಜಟಿಲವ್ಯವಸ್ಥೆಯೊಂದರಲ್ಲಿನ ಸಂಚಾರ ನಿರ್ದೇಶಿಸುವಿಕೆಯು ಪಂದ್ಯಾವಳಿಯ ಮೂರನೇ ಮತ್ತು ಅಂತಿಮ ನಿಯೋಜಿತ ಕಾರ್ಯದಲ್ಲಿ ಸೇರಿರುತ್ತದೆ. ಜಟಿಲ ಮಾರ್ಗಜಾಲದಲ್ಲಿ ಸಂಚಾರ ನಿರ್ದೇಶಿಸುವಲ್ಲಿ ಹ್ಯಾರಿ ಮತ್ತು ಸೆಡ್ರಿಕ್‌ ಪರಸ್ಪರ ಯಶಸ್ವಿಯಾಗಿ ನೆರವಾಗುತ್ತಾರೆ. ತ್ರಿಮಂತ್ರವಾದಿ ಕಪ್‌ನ್ನು ಅವರು ತಲುಪುತ್ತಾರೆ ಮತ್ತು ಏಕಕಾಲದಲ್ಲಿ ಅದರ ಮೇಲೆ ಹಿಡಿತವನ್ನಿಟ್ಟುಕೊಂಡು ಭದ್ರವಾಗಿ ನೆಲೆಗೊಳ್ಳಲು ಅವರಿಬ್ಬರೂ ಒಪ್ಪುತ್ತಾರೆ ಹಾಗೂ ಅವರಿಬ್ಬರೂ ಈ ಮೂಲಕ ವಿಜಯಶಾಲಿಗಳೆನಿಸಿಕೊಳ್ಳುತ್ತಾರೆ. ಸದರಿ ಕಪ್‌ ಒಂದು ಪೋರ್ಟ್‌ಕೀ ಸಾಗಾಟ-ಸಾಧನವಾಗಿ ಮಾರ್ಪಡುತ್ತದೆ ಮತ್ತು ಲಿಟ್ಲ್‌ ಹ್ಯಾಂಗಲ್‌ಟನ್‌‌ನಲ್ಲಿರುವ ಒಂದು ಹಳೆಯ ಹೂಳುಗಾಡಿಗೆ ಅವರನ್ನು ಅದು ಸಾಗಣೆ ಮಾಡುತ್ತದೆ; ಅಲ್ಲಿ ಅವರು ಪೆಟ್ಟಿಗ್ರ್ಯೂ ಮತ್ತು ಓರ್ವ ಕುರೂಪಿ ಲಾರ್ಡ್‌ ವೋಲ್ಡ್‌ಮಾರ್ಟ್‌‌ನನ್ನು ಕಾಣುತ್ತಾರೆ. ಸೆಡ್ರಿಕ್‌ನನ್ನು ಪೆಟ್ಟಿಗ್ರ್ಯೂ ಸಾಯಿಸುತ್ತಾನೆ ಮತ್ತು ಹ್ಯಾರಿಯನ್ನು ರಿಡ್ಲ್‌ನ ಗೋರಿಕಲ್ಲಿಗೆ ಕಟ್ಟುತ್ತಾನೆ. ನಂತರ ಅವನು ವೋಲ್ಡ್‌ಮಾರ್ಟ್‌ನ ತಂದೆಯ ಸಮಾಧಿಯಿಂದ ಪಡೆದ ಒಂದು ಮೂಳೆ, ಹ್ಯಾರಿಯ ಒಂದಷ್ಟು ರಕ್ತ, ಮತ್ತು ತನ್ನದೇ ಕೈನ ಕತ್ತರಿಸಿದ ಭಾಗವನ್ನು ಬಳಸಿಕೊಂಡು ಮಂತ್ರವಿದ್ಯೆಯ ಆಚರಣೆಯೊಂದನ್ನು ನಡೆಸುತ್ತಾನೆ. ಆ ಆಚರಣೆಯು ಲಾರ್ಡ್‌ ವೋಲ್ಡ್‌ಮಾರ್ಟ್‌ನನ್ನು ಒಂದು ಹೊಸ ದೇಹವಾಗಿ ಪುನರ್‌ರೂಪಿಸುತ್ತದೆ.

ಮೃತ್ಯು ಭಕ್ಷಕರಿಗೆ ವೋಲ್ಡ್‌ಮಾರ್ಟ್‌ ಆಜ್ಞೆಮಾಡುತ್ತಾನೆ; ಮತ್ತು ಪಂದ್ಯಾವಳಿಯಲ್ಲಿ ಹ್ಯಾರಿಯು ಭಾಗವಹಿಸುತ್ತಾನೆ, ಅದರಲ್ಲಿ ಗೆಲ್ಲುತ್ತಾನೆ ಹಾಗೂ ಈ ರೀತಿಯಲ್ಲಿ ಅವನನ್ನು ಹೂಳುಗಾಡಿಗೆ ತರಬಹುದೆಂದು ಹೊಗ್ವಾರ್ಟ್ಸ್‌ನಲ್ಲಿರುವ ತನ್ನ ಒಬ್ಬ ಸೇವಕನು ಖಾತ್ರಿಪಡಿಸಿದ್ದ ಎಂಬ ವಿಷಯವನ್ನು ವೋಲ್ಡ್‌ಮಾರ್ಟ್‌ ಹೊರಗೆಡಹುತ್ತಾನೆ. ಸಾಯಿಸುವಿಕೆಯ ಅಭಿಶಾಪವನ್ನು ವೋಲ್ಡ್‌ಮಾರ್ಟ್‌ ವೋಲ್ಡ್‌ಮಾರ್ಟ್‌ ಬಳಸಿಕೊಳ್ಳುವ ಅದೇ ಸಮಯದಲ್ಲಿಯೇ ನಿಖರವಾಗಿ, ಹ್ಯಾರಿಯು ಉಚ್ಚಾಟಿಸುವ ಮಂತ್ರವನ್ನು ಬಳಸಿಕೊಳ್ಳುವ ಮೂಲಕ ವೋಲ್ಡ್‌ಮಾರ್ಟ್‌ನನ್ನು ನಿಶ್ಯಸ್ತ್ರಗೊಳಿಸಲು ಪ್ರಯತ್ನಿಸುತ್ತಾನೆ. ಅವಳಿ ಮಂತ್ರದಂಡಗಳ ಕಾರಣದಿಂದಾಗಿ, ಎರಡು ಮಂತ್ರಗಳು ಸಂಧಿಸುತ್ತವೆ ಮತ್ತು ಪರಸ್ಪರ ಬಂಧಿಸುತ್ತವೆ; ಇದರಿಂದಾಗಿ ಮಂತ್ರದಂಡಗಳ ನಡುವೆ ಒಂದು ಬಂಧವು ಏರ್ಪಟ್ಟು, ಅದು ಫ್ರಾಂಕ್‌ ಬ್ರೈಸ್‌, ಸೆಡ್ರಿಕ್‌, ಬೆರ್ಥಾ ಜೋರ್ಕಿನ್ಸ್‌, ಜೇಮ್ಸ್‌ ಪಾಟರ್‌, ಮತ್ತು ಲಿಲಿ ಪಾಟರ್‌ ಮೊದಲಾದವರನ್ನು ಒಳಗೊಂಡಂತೆ ವೋಲ್ಡ್‌ಮಾರ್ಟ್‌ನ ತೀರಾ ಇತ್ತೀಚಿನ ಬಲಿಪಶುಗಳ "ಪ್ರತಿಧ್ವನಿಗಳನ್ನು" ಪ್ರದರ್ಶಿಸುತ್ತದೆ. ಈ ಪ್ರತಿಧ್ವನಿಗಳು ಹ್ಯಾರಿಗೆ ಸಂರಕ್ಷಣೆಯನ್ನು ಒದಗಿಸುತ್ತವೆ ಹಾಗೂ ಸೆಡ್ರಿಕ್‌ನ ದೇಹದೊಂದಿಗೆ ತಪ್ಪಿಸಿಕೊಳ್ಳಲು ಅವನಿಗೆ ಅವಕಾಶ ನೀಡುತ್ತವೆ; ಇದರಿಂದ ವೋಲ್ಡ್‌ಮಾರ್ಟ್‌ ಕ್ರೋಧಾವೇಶದಲ್ಲಿ ಕುದಿಯತೊಡಗುತ್ತಾನೆ.

ಸೆಡ್ರಿಕ್‌ನ ದೇಹವನ್ನು ಹೊತ್ತುಕೊಂಡು ಬರುವ ಹ್ಯಾರಿಯು, ಪೋರ್ಟ್‌ಕೀ ಸಾಗಣೆ-ಸಾಧನವನ್ನು ಬಳಸಿಕೊಂಡು ಶಾಲೆಯ ಮೈದಾನಕ್ಕೆ ಹಿಂದಿರುಗುತ್ತಾನೆ. ಮೂಡಿಯು ಹ್ಯಾರಿಯನ್ನು ಅವನ ಕಚೇರಿಗೆ ಅವಸರವಾಗಿ ಸಾಗಿಸುತ್ತಾನೆ. ಅಲ್ಲಿ ಆತ, ತಾನು ವೋಲ್ಡ್‌ಮಾರ್ಟ್‌ನ ಸೇವಕನೆಂಬ ವಿಷಯವನ್ನು ಹೊರಗೆಡಹುತ್ತಾನೆ ಮತ್ತು ಹ್ಯಾರಿಯನ್ನು ಸ್ವತಃ ಸಾಯಿಸಲು ಪ್ರಯತ್ನಿಸುತ್ತಾನೆ. ಮೂಡಿಯನ್ನು ಡಂಬಲ್‌ಡೋರ್‌, ಸೆವೆರಸ್‌ ಸ್ನೇಪ್‌, ಮತ್ತು ಮಿನರ್ವಾ ಮೆಕ್‌ಗೊನಗಾಲ್‌ ತಡೆದು ನಿಲ್ಲಿಸುತ್ತಾರೆ. ಮೂಡಿಗೆ ವೆರಿಟಾಸೀರಮ್‌ ಎಂಬ ದ್ರವಪದಾರ್ಥವನ್ನು ಡಂಬಲ್‌ಡೋರ್‌ ಉಣಿಸುತ್ತಾನೆ, ಮತ್ತು "ಮೂಡಿ"ಯು ವಾಸ್ತವವಾಗಿ ಬಾರ್ಟಿ ಕ್ರೌಚ್‌ ಜೂನಿಯರ್‌ ಆಗಿದ್ದು, ಅವನನ್ನು ಅಝ್‌ಕಬಾನ್‌ನಿಂದ ಆಚೆಗೆ ಕಳ್ಳತನದಲ್ಲಿ ಸಾಗಿಸಲಾಗಿದೆ ಎಂಬ ಸಂಗತಿಯನ್ನು ಅವರು ಪತ್ತೆಮಾಡುತ್ತಾರೆ; ಅಷ್ಟೇ ಅಲ್ಲ, ನಿಜವಾದ ಅಲಾಸ್ಟರ್‌ ಮೂಡಿಯಂತೆ ಸೋಗುಹಾಕಿ ನಟಿಸುವುದಕ್ಕಾಗಿ ಅವನು ಒಂದು ಅನೇಕ ರಸಸಾರದ ಗುಟುಕನ್ನು ಬಳಸುತ್ತಿದ್ದ ಎಂಬ ಅಂಶವೂ ಈ ಸಂದರ್ಭದಲ್ಲಿ ಹೊರಬೀಳುತ್ತದೆ. ‌ಯಕ್ಷಿಣಿಯ ನಿರ್ವಾಹಕನಾದ ಕಾರ್ನೇಲಿಯಸ್ ಫಡ್ಜ್‌ ಹೊಗ್ವಾರ್ಟ್ಸ್‌ಗೆ ಆಗಮಿಸುತ್ತಾನೆ, ಆದರೆ ವೋಲ್ಡ್‌ಮಾರ್ಟ್‌ ವಾಪಸ್ಸಾಗಿದ್ದಾನೆ ಎಂಬ ಡಂಬಲ್‌ಡೋರ್‌ನ ಮತ್ತು ಹ್ಯಾರಿಯ ಮಾತನ್ನು ನಂಬಲು ಅವನು ನಿರಾಕರಿಸುತ್ತಾನೆ.

ಹ್ಯಾರಿಗೆ ತ್ರಿಮಂತ್ರವಾದಿ ಚಾಂಪಿಯನ್‌ ಎಂಬ ಕಿರೀಟವನ್ನು ತೊಡಿಸಲಾಗುತ್ತದೆ ಮತ್ತು 1,000 ಗ್ಯಾಲಿಯನ್‌ಗಳನ್ನು ಬಹುಮಾನವಾಗಿ ನೀಡಲಾಗುತ್ತದೆ. ಕೆಲವು ದಿನಗಳ ನಂತರ, ಗೆಲುವಿಲ್ಲದ ಬೀಳ್ಕೊಡುಗೆಯ ಭೋಜನಕೂಟದಲ್ಲಿ ಡಂಬಲ್‌ಡೋರ್‌ ಒಂದು ಪ್ರಕಟಣೆಯನ್ನು ಮಾಡುತ್ತಾ, ಪ್ರತಿಯೊಬ್ಬರಿಗೂ ವೋಲ್ಡ್‌ಮಾರ್ಟ್‌ ಕುರಿತಾಗಿ ಹೇಳುತ್ತಾ ಹೋಗುತ್ತಾನೆ. ಹ್ಯಾರಿಯು ಕಿಂಗ್‌‌'ಸ್‌ ಕ್ರಾಸ್‌ ನಿಲ್ದಾಣದಲ್ಲಿ ಹೊಗ್ವಾರ್ಟ್ಸ್‌ ಎಕ್ಸ್‌ಪ್ರೆಸ್‌ನ್ನು ಬಿಟ್ಟು ತೆರಳುವಾಗ, ಫ್ರೆಡ್‌ ಮತ್ತು ಜಾರ್ಜ್‌ ಒಂದು ವಿನೋದ ಮಳಿಗೆಯನ್ನು ಆರಂಭಿಸುವಂತಾಗಲೆಂದು ತಾನು ಗೆದ್ದಹಣವನ್ನು ಅವರಿಗೆ ನೀಡುತ್ತಾನೆ.

ರೀಟಾ ಸ್ಕೀಟರ್‌ ಉಪ-ಪ್ರಸಂಗ[ಬದಲಾಯಿಸಿ]

ಡೇಲಿ ಪ್ರೊಫೆಟ್‌ಗೆ ಸಂಬಂಧಿಸಿದ ಓರ್ವ ಬರಹಗಾರ್ತಿಯಾದ ರೀಟಾ ಸ್ಕೀಟರ್‌, ಸುಳ್ಳುಗಳನ್ನು ಬರೆಯುವುದಕ್ಕಾಗಿ ಕಥನ-ನಿರೂಪಣೆಯ ಬಹುಭಾಗವನ್ನು ವಿನಿಯೋಗಿಸುತ್ತಾಳೆ; ಅಂದರೆ ಹ್ಯಾರಿಯ ಕುರಿತಾಗಿ (ಭವಿಷ್ಯಜ್ಞಾನದಲ್ಲಿ ಒಂದು ವಿಚಿತ್ರ ಕನಸನ್ನು ಕಂಡನಂತರ ಅವನಿಗೆ ತಾಗಿದ ಮರೆಯಲಾಗದ ನೋವಿನ ಸಮಯದ ಕುರಿತಾಗಿ), ಹೇಗ್ರಿಡ್‌ ಕುರಿತಾಗಿ (ತನ್ನ ತಾಯಿಯ ಕುರಿತಾಗಿ ಮ್ಯಾಡಮ್‌ ಮ್ಯಾಕ್ಸೈಮ್‌‌ಗೆ ಅವನು ಹೇಳಿದ ಸಮಯದ ಕುರಿತಾಗಿ), ಮತ್ತು ಹರ್ಮಿಯೋನ್‌ಳ ಕುರಿತಾಗಿ (ವಿಕ್ಟರ್‌ ಕ್ರಮ್‌ ಜೊತೆಗೆ ಪ್ರೀತಿಗೆ ಸಿಲುಕಿರುವುದರ ಕುರಿತಾಗಿ) ಅವಳು ಸುಳ್ಳುಗಳನ್ನು ಬರೆಯುತ್ತಿರುತ್ತಾಳೆ. ತನ್ನ ಒಂದಷ್ಟು ಕಥನ-ನಿರೂಪಣೆಗಳಿಗಾಗಿ ಗ್ರಾಸವನ್ನು ಪಡೆಯಲೆಂದು ಸ್ಲೈಥೆರಿನ್‌ ವಿದ್ಯಾರ್ಥಿಗಳೊಂದಿಗೆ ಸ್ಕೀಟರ್‌ ರಹಸ್ಯ ಸಂದರ್ಶನಗಳನ್ನು ನಡೆಸುತ್ತಾಳೆ, ಆದರೆ ಇತರರಿಗೆ ಸಂಬಂಧಿಸಿದ ಮೂಲಗಳು ವಿವರಿಸಲಾಗದ ರೀತಿಯಲ್ಲಿರುತ್ತವೆ. ಅವಳು ಒಂದು ಅಗೋಚರತೆಯ ವೇಷದ ಹೊದಿಕೆಯನ್ನೇನಾದರೂ ಹೊಂದಿರಬಹುದೇ ಎಂಬುದಾಗಿ ಹ್ಯಾರಿಯು ಆರಂಭದಲ್ಲಿ ಶಂಕಿಸುತ್ತಾನೆ; ಆದರೆ "ಮ್ಯಾಡ್‌-ಐ" ಮೂಡಿಯು ತನ್ನ ಮಂತ್ರವಿದ್ಯೆಯ ಕಣ್ಣಿನ ನೆರವಿನೊಂದಿಗೆ ಸದರಿ ವೇಷದ ಹೊದಿಕೆಯ ಮೂಲಕ ಅವಲೋಕಿಸಬಲ್ಲ ಎಂಬುದನ್ನು ಹರ್ಮಿಯೋನ್‌ ಅರಿತಿರುತ್ತಾಳೆ. ಮುಂದೆ, ಶಾಲೆಯ ಒಂದಷ್ಟು ಪ್ರದೇಶಗಳಲ್ಲಿ ಗುಪ್ತವಾಗಿ ಧ್ವನಿಮುದ್ರಿಸಿಕೊಳ್ಳುವ ಉಪಕರಣಗಳನ್ನು ಅವಳು ಇರಿಸಿರಬಹುದು ಎಂದು ಹ್ಯಾರಿ ಭಾವಿಸುತ್ತಾನೆ. ಆದಾಗ್ಯೂ, ಗಾಳಿಯಲ್ಲಿ ಹಬ್ಬಿರುವ ಯಕ್ಷಿಣಿಯ ಕಾರಣದಿಂದಾಗಿ ಸದರಿ ವಿದ್ಯುನ್ಮಾನ ಸಾಧನಗಳು ಹೊಗ್ವಾರ್ಟ್ಸ್‌ನಲ್ಲಿ ಕೆಲಸ ಮಾಡುವುದಿಲ್ಲ ಎಂಬುದಾಗಿ ಹರ್ಮಿಯೋನ್‌ ಅವರಿಗೆ ಹೇಳುತ್ತಾಳೆ. ಪುಸ್ತಕವು ಅಂತ್ಯಭಾಗವನ್ನು ಸಮೀಪಿಸುತ್ತಿದ್ದಂತೆ, ಸ್ಕೀಟರ್‌ ಇದನ್ನು ಹೇಗೆ ಮಾಡುತ್ತಿದ್ದಳು ಎಂಬುದನ್ನು ಹರ್ಮಿಯೋನ್‌ ಅಂತಿಮವಾಗಿ ಅರಿತುಕೊಳ್ಳುತ್ತಾಳೆ: ಅವಳು ಓರ್ವ ಗಮನಕ್ಕೆಬಾರದ ಅಥವಾ ಪ್ರಕಟವಾಗದ ಅನಿಮ್ಯಾಗಸ್‌ ಆಗಿದ್ದು, ಒಂದು ಜೀರುಂಡೆಯ ರೂಪವನ್ನು ತಾಳಬಲ್ಲವಳಾಗಿರುತ್ತಾಳೆ ಎಂಬುದೇ ನಿಜಸಂಗತಿಯಾಗಿರುತ್ತದೆ. ಹೇಗ್ರಿಡ್‌ನ ಗುಡಿಸಲಿನ ಸಮೀಪದಲ್ಲಿನ ಪ್ರತಿಮೆಯ ಮೇಲೆ, ಹಾಗೂ ನಂತರದಲ್ಲಿ ಎರಡನೇ ನಿಯೋಜಿತ ಕಾರ್ಯದ ನಂತರ ಹರ್ಮಿಯೋನ್‌ಳ ಕೂದಲಿನಲ್ಲಿ ಒಂದು ಜೀರುಂಡೆಯು ಕಂಡುಬಂದಿದ್ದನ್ನು ಹ್ಯಾರಿ ಮತ್ತು ರಾನ್‌ ಅರಿತುಕೊಳ್ಳುತ್ತಾರೆ; ಅಷ್ಟೇ ಅಲ್ಲ, ಹ್ಯಾರಿಗೆ ಮರೆಯಲಾಗದ ನೋವು ತಾಕಿದ ಸಂದರ್ಭದಲ್ಲಿ ಭವಿಷ್ಯಜ್ಞಾನದ ತರಗತಿಯ ಕಿಟಕಿಯ ಮೇಲೂ ಈ ಜೀರುಂಡೆಯು ಕೂತಿದ್ದನ್ನು, ಹಾಗೂ ಸ್ಲೈಥೆರಿನ್‌ ವಿದ್ಯಾರ್ಥಿಗಳಿಗೆ ಅಷ್ಟುದಿನವೂ ಇದರ ಬಗ್ಗೆ ಗೊತ್ತಿತ್ತು ಎಂಬುದನ್ನು ಹ್ಯಾರಿ ಮತ್ತು ರಾನ್‌ ಮನಗಾಣುತ್ತಾರೆ. ಹರ್ಮಿಯೋನ್‌ ಅಂತಿಮವಾಗಿ ಸ್ಕೀಟರ್‌ಳನ್ನು ಜೀರುಂಡೆಯ ಸ್ವರೂಪದಲ್ಲಿ ಒಂದು ಜಾಡಿಯೊಳಗೆ ಸಿಕ್ಕಿಬೀಳಿಸುತ್ತಾಳೆ ಹಾಗೂ ಟ್ರೇನು ಲಂಡನ್‌ನ್ನು ತಲುಪುವವರೆಗೂ ಅದನ್ನು ಬಿಡುಗಡೆ ಮಾಡುವುದಿಲ್ಲ (ಆದರೆ ಸ್ಕೀಟರ್‌ ಮತ್ತಷ್ಟು ಕಥನ-ನಿರೂಪಣೆಗಳನ್ನು ಬರೆದಿದ್ದೇ ಆದಲ್ಲಿ ಅಧಿಕಾರಿ ವರ್ಗದವರಿಗೆ ತಿಳಿಸುವುದಾಗಿ ಅವಳು ಬೆದರಿಸುತ್ತಾಳೆ).

ಮುನ್ಸೂಚಿಸುವಿಕೆ[ಬದಲಾಯಿಸಿ]

 • ಗಾಬ್ಲಿಟ್‌ ಆಫ್‌ ಫೈರ್‌ನಿಂದ ಹ್ಯಾರಿಯ ಹೆಸರನ್ನು ಹೊರಸೆಳೆಯುತ್ತಿದ್ದಂತೆ, ರಾನ್‌ನ ಅಸೂಯೆಯು ಎಲ್ಲರ ಕಣ್ಣಿಗೂ ಕಾಣತೊಡಗುತ್ತದೆ. ಸ್ಪರ್ಧೆಗಾಗಿ ತನ್ನ ಹೆಸರನ್ನು ಸಲ್ಲಿಸುವುದರ ಕುರಿತು ಹ್ಯಾರಿಯು ಸುಳ್ಳು ಹೇಳುತ್ತಿದ್ದಾನೆ ಎಂದು ಅವನು ಭಾವಿಸುತ್ತಾನೆ, ಮತ್ತು ತನ್ನ ಸ್ನೇಹಿತನನ್ನು ಅವನು ಬಿಟ್ಟುಬಿಡುತ್ತಾನೆ. ಸ್ಪರ್ಧೆಯು ಎಷ್ಟೊಂದು ಅಪಾಯಕಾರಿಯಾಗಿದೆ ಎಂಬುದನ್ನು ನೋಡಿದ ಮೇಲೆ, ನಂತರದಲ್ಲಿ ರಾನ್‌ ಹಿಂದಿರುಗುತ್ತಾನೆ. ಅಷ್ಟೇ ಅಲ್ಲ, ಗಾಬ್ಲಿಟ್‌ ಆಫ್‌ ಫೈರ್‌ಗೆ ಮುಂಚಿತವಾಗಿ ಹೆಚ್ಚು ನವಿರಾವಾಗಿದ್ದು ಗ್ರಹಿಕೆಗೆ ಸಿಕ್ಕದಂತಿದ್ದ, ಹರ್ಮಿಯೋನ್‌ ಕಡೆಗಿನ ರಾನ್‌ನ ಭಾವನೆಗಳು ಈಗ ಸ್ಪಷ್ಟವಾಗತೊಡಗುತ್ತವೆ; ಹಾಫ್‌-ಬ್ಲಡ್‌ ಪ್ರಿನ್ಸ್‌‌ ನಲ್ಲಿ ಅವರ ಸಂಬಂಧವು ವಿಕಸನಗೊಳ್ಳುತ್ತಿರುವುದು ಮತ್ತು ಡೆತ್ಲಿ ಹ್ಯಾಲೋಸ್‌‌‌ ನಲ್ಲಿನ ಅವರ ಮೊದಲ ಚುಂಬನದಿಂದ ಇದು ಅಂತಿಮವಾಗಿ ನೆರವೇರಿಸಲ್ಪಡುವುದು ಇದಕ್ಕೆ ಸಾಕ್ಷಿಯಾಗುತ್ತದೆ. ಈ ಇಬ್ಬರೂ ಸಹ ಏಳನೇ ಪುಸ್ತಕದಲ್ಲಿ ಮುಖಾಮುಖಿಯಾಗುತ್ತಾರೆ; ಹ್ಯಾರಿಯು ಒಂದು ನಿರ್ದಿಷ್ಟವಾದ ಯೋಜನೆಯನ್ನು ಹೊಂದದಿರುವುದು ಹಾಗೂ ಮನೆಯ ವಾಡಿಕೆಯ ಅನುಕೂಲತೆಗಳಲ್ಲಿ ಕಂಡುಬರುವ ಕೊರತೆಯಿಂದ ಕೋಪಾವಿಷ್ಠನಾದ ರಾನ್‌, ಹರ್ಮಿಯೋನ್‌ ಮತ್ತು ಹ್ಯಾರಿಯನ್ನು ಬಿಟ್ಟುಹೋಗುತ್ತಾನೆ (ಆದರೂ ಈ ಕುರಿತಾಗಿ ತತ್‌ಕ್ಷಣದಲ್ಲಿ ವಿಷಾದಿಸುತ್ತಾನೆ).
 • ಬಿಲ್‌ ವೀಸ್ಲೆಯಲ್ಲಿ ಫ್ಲ್ಯೂರ್‌ ಆಸಕ್ತಿ ತಳೆದಂತೆ ಕಾಣುತ್ತದೆ; ನಂತರದಲ್ಲಿ ಅವನೊಂದಿಗೆ ಆಕೆ ಪ್ರೇಮ-ವಿಹಾರ ನಡೆಸುತ್ತಾಳೆ (ಆರ್ಡರ್‌ ಆಫ್‌ ದಿ ಫೀನಿಕ್ಸ್‌ ), ಆಕೆಗೆ ಅವನೊಂದಿಗೆ ನಿಶ್ಚಿತಾರ್ಥವಾಗುತ್ತದೆ (ಹಾಫ್‌-ಬ್ಲಡ್‌ ಪ್ರಿನ್ಸ್‌ ), ಅವನೊಂದಿಗೆ ಮದುವೆಯಾಗುತ್ತದೆ (ಡೆತ್ಲಿ ಹ್ಯಾಲೋಸ್‌ ) ಮತ್ತು ಅವನಿಂದ ಮಕ್ಕಳಾಗುತ್ತವೆ (ನೈಂಟೀನ್‌ ಇಯರ್ಸ್‌ ಲೇಟರ್‌ ).
 • ಕ್ರಿಸ್ಮಸ್‌ ಹಬ್ಬದ ನೃತ್ಯಗೋಷ್ಠಿಯ ಸಂದರ್ಭದಲ್ಲಿ ಡಂಬಲ್‌ಡೋರ್‌ ಮಾತನಾಡುತ್ತಾ, ಸ್ನಾನಗೃಹವೊಂದನ್ನು ಹುಡುಕಿಕೊಂಡು ತಾನು ಚಾವಣಿದಾರಿಗಳ ಮೂಲಕ ಅಲೆದಾಡುತ್ತಿರುವಾಗ, ಒಂದು ಜಾಗದಲ್ಲಿ ಮೂತ್ರ-ಪಾತ್ರೆಗಳಿಂದ ತುಂಬಿಹೋಗಿದ್ದ ಕೋಣೆಯೊಂದು ತನಗೆ ಹಠಾತ್ತನೆ ಕಾಣಿಸಿಕೊಂಡಿತೆಂದೂ ಹಾಗೂ ಸದರಿ ಜಾಗವು ಹಿಂದೆ ಅಸ್ತಿತ್ವದಲ್ಲಿದ್ದುದು ತನಗೆ ಗೊತ್ತಿರಲಿಲ್ಲವೆಂದೂ ಉಲ್ಲೇಖಿಸುತ್ತಾನೆ. ಇದು ಅವಶ್ಯಕತೆಯ ಕೋಣೆ ಎಂಬುದು ಆರ್ಡರ್‌ ಆಫ್‌ ದಿ ಫೀನಿಕ್ಸ್‌‌ ನಲ್ಲಿ ನಮಗೆ ಅರಿವಾಗುತ್ತದೆ.
 • ಗಾಬ್ಲಿಟ್‌ ಆಫ್‌ ಫೈರ್‌‌ ನ ಅಂತ್ಯದ ವೇಳೆಗೆ, "ಹಳೆಯ ಗುಂಪನ್ನು" ಸೇರಿಸುವಂತೆ ಸಿರಿಯಸ್‌ನನ್ನು ಡಂಬಲ್‌ಡೋರ್‌ ಕೇಳುತ್ತಾನೆ. ಮೊದಲ ಪುಸ್ತಕದ ಎರಡನೇ ಅಧ್ಯಾಯದಷ್ಟು ಮುಂಚಿತವಾಗಿಯೇ ಈ ಕಥಾಸರಣಿಯಲ್ಲಿ ಉಲ್ಲೇಖಿಸಲ್ಪಟ್ಟಿರುವ ಅರಬೆಲ್ಲಾ ಫಿಗ್‌‌ಳನ್ನೂ ಈ ಗುಂಪು ಒಳಗೊಂಡಿರುತ್ತದೆ. ಆದಾಗ್ಯೂ, ಪ್ರೈವೆಟ್‌ ಡ್ರೈವ್‌ನಿಂದ ಒಂದು ಅಥವಾ ಎರಡು ಬೀದಿಯಷ್ಟು ಆಚೆಗೆ ವಾಸಿಸುವ ಓರ್ವ ವಿಲಕ್ಷಣವಾದ ಹಳೆಯ ಮಗಲ್‌ಳಂತೆ ಅವಳು ಪರಿಚಯಿಸಲ್ಪಡುತ್ತಾಳೆ. ಅವಳೊಬ್ಬ ವಿಡಂಬನಗಾರ್ತಿಯಾಗಿದ್ದು, ಹ್ಯಾರಿಯ ಮೇಲೆ ಒಂದು ಕಣ್ಣಿಡಲೆಂದು ಅವಳನ್ನು ನಿಯೋಜಿಸಲಾಗಿರುತ್ತದೆ ಎಂಬ ಅಂಶವು ಆರ್ಡರ್‌ ಆಫ್‌ ದಿ ಫೀನಿಕ್ಸ್‌‌ ನಲ್ಲಿ ಅನಾವರಣಗೊಳ್ಳುತ್ತದೆ. ಹ್ಯಾರಿಯು ಅವಳ ಮನೆಯಲ್ಲಿರುವಾಗ ತಮಾಷೆಯಾಗಿರಲು ಅವಳು ಎಂದೂ ಅವಕಾಶ ನೀಡಿರುವುದಿಲ್ಲ. ಇದಕ್ಕಿದ್ದ ಏಕೈಕ ಕಾರಣವೆಂದರೆ, ಅವನು ಅಲ್ಲಿ ಸಂತೋಷವಾಗಿರುವುದು ಡರ್ಸ್ಲೆ-ದಂಪತಿಗಳಿಗೆ ಗೊತ್ತಾದದ್ದೇ ಆದಲ್ಲಿ, ಅವರು ಬೇರೊಬ್ಬ ಶಿಶುಪಾಲಕಿಯನ್ನು ಹುಡುಕಿಕೊಳ್ಳಬಹುದು ಎಂಬ ಭಯ ಅವಳನ್ನು (ಮತ್ತು ಡಂಬಲ್‌ಡೋರ್‌ನನ್ನು) ಕಾಡುತ್ತಿರುತ್ತದೆ.
 • ಪುಸ್ತಕದ ಅಂತ್ಯದ ವೇಳೆಗೆ, ರಾತ್ರಿಯಲ್ಲಿ ಹೂಳುಗಾಡಿನಲ್ಲಿ ತಾನು ರಾತ್ರಿಯನ್ನು ಕಳೆದ ಸಂದರ್ಭವನ್ನು ಡಂಬಲ್‌ಡೋರ್‌ ಮತ್ತು ಸಿರಿಯಸ್‌ರಿಗೆ ಹ್ಯಾರಿ ಹೇಳುತ್ತಾನೆ. ಪೆಟ್ಟಿಗ್ರ್ಯೂನಿಂದ ಕತ್ತರಿಸಲ್ಪಟ್ಟ ತನ್ನ ತೋಳಿನ ಕುರಿತಾಗಿ ಅವನು ಉಲ್ಲೇಖಿಸುತ್ತಾನೆ; ಡಂಬಲ್‌ಡೋರ್‌ನ ಕಣ್ಣುಗಳಲ್ಲಿ 'ವಿಜಯೋತ್ಸಾಹದ ಒಂದು ಹೊಳಪು' ಕಾಣಿಸಿಕೊಳ್ಳುತ್ತದೆ. ಏಕೆಂದರೆ, ವೋಲ್ಡ್‌ಮಾರ್ಟ್‌ನನ್ನು ಮತ್ತೆ ಬದುಕಿಸಲು ಹ್ಯಾರಿಯ ರಕ್ತವನ್ನು ಬಳಸುವುದರಿಂದಾಗಿ, ಹ್ಯಾರಿಯು ಜೀವಂತವಾಗಿರುತ್ತಾನೆ ಮತ್ತು ವೋಲ್ಡ್‌ಮಾರ್ಟ್‌ ಜೀವಂತವಿರುವವರೆಗೂ ಈ ಸ್ಥಿತಿಯು ಮುಂದುವರಿಯುತ್ತದೆ ಎಂಬುದನ್ನು ಡಂಬಲ್‌ಡೋರ್‌ ಅರಿತಿರುತ್ತಾನೆ.
 • ಪುಸ್ತಕದ ಅಂತ್ಯಭಾಗದಲ್ಲಿ, ಡಂಬಲ್‌ಡೋರ್‌ ಸ್ನೇಪ್‌ ಜೊತೆಗೆ ಮಾತನಾಡುತ್ತಾ, ಒಂದು ವೇಳೆ ಅವನು ಸಿದ್ಧವಿದ್ದರೆ ಏನು ಮಾಡಬೇಕೆಂಬುದು ತನಗೆ ಗೊತ್ತು ಎಂದು ತಿಳಿಸುತ್ತಾನೆ. ಇದು ಡಂಬಲ್‌ಡೋರ್‌ಗೆ ಸಂಬಂಧಿಸಿದಂತೆ ಸ್ನೇಪ್‌ ಓರ್ವ ಉಭಯ ಗುಪ್ತಚಾರನಾಗಿರುವುದನ್ನು ಮುನ್ಸೂಚಿಸುತ್ತದೆ (ದರ್ಜೆಗಾಗಿ ಅಲ್ಲ).

ಬಿಡುಗಡೆಯ ಇತಿಹಾಸ[ಬದಲಾಯಿಸಿ]

2000ರ ಜೂನ್‌ 27ರಂದು ಅಧಿಕೃತ ಶೀರ್ಷಿಕೆಯ ಪ್ರಕಟಣೆಯಾಗುವವರೆಗೂ, ನಾಲ್ಕನೇ ಪುಸ್ತಕವು ಹ್ಯಾರಿ ಪಾಟರ್‌ ಅಂಡ್‌ ದಿ ಡೂಮ್‌ಸ್ಪೆಲ್‌ ಟೂರ್ನಮೆಂಟ್‌ ಎಂಬ ಅದರ ಕಾರ್ಯಾಧಾರ ಶೀರ್ಷಿಕೆಯಿಂದಲೇ ಕರೆಯಲ್ಪಡುತ್ತಿತ್ತು.[೩] ಎಂಟರ್‌ಟೈನ್‌ಮೆಂಟ್‌ ವೀಕ್ಲಿ ಯ ಸಂದರ್ಶನವೊಂದರಲ್ಲಿ ಶೀರ್ಷಿಕೆಯ ಕುರಿತಾದ ತನ್ನ ಸಂದಿಗ್ಧತೆಯನ್ನು J.K. ರೌಲಿಂಗ್‌ ವ್ಯಕ್ತಪಡಿಸಿದಳು. "ಶೀರ್ಷಿಕೆಯು ಯಾವುದಿರಬೇಕು ಎಂಬ ಕುರಿತಾಗಿ ನಾನು ಎರಡು ಸಲ ನನ್ನ ಮನಸ್ಸನ್ನು ಬದಲಾಯಿಸಿದೆ. ಹ್ಯಾರಿ ಪಾಟರ್‌ ಅಂಡ್‌ ದಿ ಡೂಮ್‌ಸ್ಪೆಲ್‌ ಟೂರ್ನಮೆಂಟ್‌ ಎಂಬ ಕಾರ್ಯಾಧಾರ ಶೀರ್ಷಿಕೆಯು ಆಯ್ಕೆಯಿಂದ ಹೊರಬಿತ್ತು. ನಂತರ ನಾನು ಡೂಮ್‌ಸ್ಪೆಲ್‌ ಎಂಬುದನ್ನು ಟ್ರೈವಿಜರ್ಡ್‌ ಟೂರ್ನಮೆಂಟ್‌ ಎಂಬುದಕ್ಕೆ ಬದಲಾಯಿಸಿದೆ. ನಂತರ, ಗಾಬ್ಲಿಟ್‌ ಆಫ್‌ ಫೈರ್‌ ಮತ್ತು ಟ್ರೈವಿಜರ್ಡ್‌ ಟೂರ್ನಮೆಂಟ್‌ ಎಂಬ ಪದಗುಚ್ಛಗಳಲ್ಲಿ ಯಾವುದನ್ನು ಉಳಿಸಿಕೊಳ್ಳಬೇಕು ಎಂಬ ಬಗ್ಗೆ ಹಿಂದೆ-ಮುಂದೆ ನೋಡುತ್ತಿದ್ದೆ. ಕೊನೆಗೆ ನಾನು ಗಾಬ್ಲಿಟ್‌ ಆಫ್‌ ಫೈರ್‌ ಎಂಬುದಕ್ಕೆ ಆದ್ಯತೆ ನೀಡಿದೆ; ಏಕೆಂದರೆ, ಅದು ಹೊಂದಿರಬೇಕಾದ ವಿಧಿಯ ಬಟ್ಟಲು ಎಂಬಂಥ ಅನುಭೂತಿಯನ್ನು ಅದು ಹೊಂದಿತ್ತು, ಮತ್ತು ಅದು ಪುಸ್ತಕದ ವಿಷಯವೂ ಆಗಿದೆ" ಎಂದು ಅವಳು ಸದರಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಳು.[೪] ಆ ಸಮಯದಲ್ಲಿ ನಾಲ್ಕನೇ ಪುಸ್ತಕವನ್ನು ಬರೆಯುವುದು ಅತ್ಯಂತ ಕಷ್ಟಕರವಾಗಿತ್ತು ಎಂಬುದನ್ನೂ ಸಹ ರೌಲಿಂಗ್‌ ಒಪ್ಪಿಕೊಂಡಳು; ಏಕೆಂದರೆ, ಬರಹದ ಸಂದರ್ಭದಲ್ಲಿ ಅರೆಹಾದಿಯನ್ನು ಕ್ರಮಿಸಿದಾಗ, ಕಥಾವಸ್ತುವಿನಲ್ಲಿ ಹುಳುಕೊಂದು ಬೃಹತ್ತಾಗಿ ಅವಳಿಗೆ ಕಂಡುಬಂದಿತ್ತು.[೫] ಅದರಲ್ಲೂ ನಿರ್ದಿಷ್ಟವಾಗಿ, ಒಂಬತ್ತನೇ ಅಧ್ಯಾಯವಾದ "ದಿ ಡಾರ್ಕ್‌ ಮಾರ್ಕ್‌ "ನ್ನು ಬರೆಯುವಾಗ ಅವಳು ತೊಡಕಿಗೆ ಸಿಕ್ಕಿಕೊಂಡಿದ್ದಳು ಮತ್ತು ಅದನ್ನವಳು 13 ಬಾರಿ ಮತ್ತೆ ಬರೆದಳು.[೬]

UK/U.S.ನಲ್ಲಿನ ಬಿಡುಗಡೆ[ಬದಲಾಯಿಸಿ]

ಯುನೈಟೆಡ್‌ ಕಿಂಗ್‌ಡಂನಲ್ಲಿ 2000ನೇ ಇಸವಿಯ ಜುಲೈ 8ರಂದು ಬಿಡುಗಡೆಯಾದ ದಿನದಂದೇ ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿಯೂ ಬಿಡುಗಡೆಯಾದ, ಹ್ಯಾರಿ ಪಾಟರ್‌ ಸರಣಿಯಲ್ಲಿನ ಮೊದಲ ಪುಸ್ತಕ ಎಂಬ ಕೀರ್ತಿಗೆ ಗಾಬ್ಲಿಟ್‌ ಆಫ್‌ ಫೈರ್‌ ಪಾತ್ರವಾಯಿತು. ಹಿಂದಿನ ಮೂರು ಪುಸ್ತಕಗಳು U.S. ಆವೃತ್ತಿಯು ಬಿಡುಗಡೆಯಾಗುವುದಕ್ಕಿಂತ ಹಲವಾರು ತಿಂಗಳುಗಳು ಮುಂಚಿತವಾಗಿ ಯುನೈಟೆಡ್‌ ಕಿಂಗ್‌ಡಂನಲ್ಲಿ ಬಿಡುಗಡೆಯಾಗಿದ್ದವು. ಪರಿಷ್ಕರಿಸುವ ಸಂದರ್ಭದಲ್ಲಿದ್ದ ಒತ್ತಡದಿಂದಾಗಿ ಒಂದು ತಪ್ಪು ಉಂಟಾಯಿತು; ಹ್ಯಾರಿಯ ತಂದೆಯು ವೋಲ್ಡ್‌ಮಾರ್ಟ್‌ನ ಮಂತ್ರದಂಡದಿಂದ ಮೊದಲು ಹೊರಹೊಮ್ಮುವಂತೆ ಈ ತಪ್ಪು ತೋರಿಸಿತ್ತು; ಆದಾಗ್ಯೂ, ಪ್ರಿಸನರ್‌ ಆಫ್‌ ಅಝ್‌ಕಬಾನ್‌‌ ನಲ್ಲಿ ದೃಢೀಕರಿಸಲ್ಪಟ್ಟಂತೆ, ಜೇಮ್ಸ್‌ ಮೊದಲಿಗೆ ಸಾಯುತ್ತಾನೆ, ಆದ್ದರಿಂದ ಹ್ಯಾರಿಯ ತಾಯಿಯು ಮೊದಲು ಹೊರಬರಬೇಕಿರುತ್ತದೆ.[೭] ಇದನ್ನು ನಂತರದ ಆವೃತ್ತಿಗಳಲ್ಲಿ ಸರಿಪಡಿಸಲಾಯಿತು.[೮]

ಬಿಡುಗಡೆಯ ಪ್ರಚಾರ[ಬದಲಾಯಿಸಿ]

ಪುಸ್ತಕವನ್ನು ಪ್ರಚಾರಗೊಳಿಸಲೆಂದು ಹೊಗ್ವಾರ್ಟ್ಸ್‌ ಎಕ್ಸ್‌ಪ್ರೆಸ್‌ ಎಂದು ಹೆಸರಿಸಲ್ಪಟ್ಟ ಒಂದು ವಿಶೇಷ ಟ್ರೇನನ್ನು ಬ್ಲೂಮ್ಸ್‌ಬರಿಯಿಂದ ವ್ಯವಸ್ಥೆಗೊಳಿಸಲಾಗಿತ್ತು ಹಾಗೂ ಇದು ಕಿಂಗ್‌‌'ಸ್‌ ಕ್ರಾಸ್‌‌‌ನಿಂದ ಪರ್ತ್‌‌‌ಗೆ ಓಡುವಂತೆ ಸಜ್ಜುಗೊಳಿಸಲಾಗಿತ್ತು; J.K. ರೌಲಿಂಗ್‌ ಪುಸ್ತಕಗಳಿಗೆ ಸಹಿಹಾಕಿ ಅವನ್ನು ಮಾರಲು ಅನುವಾಗುವಂತೆ ಅವಳನ್ನು ಒಳಗೊಂಡಂತೆ ಪುಸ್ತಕಗಳ ಒಂದು ಸರಕನ್ನೇ ಅದು ಸಾಗಿಸುತ್ತಾ ಹೋಯಿತು ಹಾಗೂ ಜೊತೆಯಲ್ಲಿ ಬ್ಲೂಮ್ಸ್‌ಬರಿಯ ಮತ್ತು ಪತ್ರಿಕೆಗಳ ಪ್ರತಿನಿಧಿಗಳೂ ಇದ್ದರು ಎಂಬುದು ಗಮನಾರ್ಹ ಸಂಗತಿ. 2000ನೇ ಇಸವಿಯ ಜುಲೈ 8ರಂದು, ಕಿಂಗ್‌‌'ಸ್‌ ಕ್ರಾಸ್‌ನಲ್ಲಿನ 1ನೇ ಅಂಕಣದ (ಪ್ಲ್ಯಾಟ್‌ಫಾರಂ) ಮೇಲೆ ಈ ಪುಸ್ತಕವು ಬಿಡುಗಡೆಯಾಯಿತು. ಈ ಸಂದರ್ಭಕ್ಕಾಗಿ ಸದರಿ ಅಂಕಣಕ್ಕೆ "ಪ್ಲ್ಯಾಟ್‌ಫಾರಂ 9+34" ಎಂಬ ಸಂಜ್ಞೆಗಳನ್ನು ನೀಡಲಾಗಿತ್ತು. ಇದಾದ ನಂತರ ಟ್ರೇನು ಹೊರಟಿತು. ಮಾರ್ಗದಲ್ಲಿ ಇದು ಕೆಲವೊಂದು ನಿರ್ದಿಷ್ಟ ಸ್ಥಳಗಳಿಗೆ ಭೇಟಿನೀಡಿತು. ಅವುಗಳೆಂದರೆ: ಡಿಡ್‌ಕಾಟ್‌ ರೈಲ್ವೆ ಸೆಂಟರ್‌, Kidderminster, ಸೆವರ್ನ್‌ ವ್ಯಾಲಿ ರೈಲ್ವೆ, Crewe (ಒಂದುರಾತ್ರಿಯ ಅವಧಿಯ ನಿಲುಗಡೆ), ಮ್ಯಾಂಚೆಸ್ಟರ್‌, ಬ್ರಾಡ್‌ಫೋರ್ಡ್‌, York, ನ್ಯಾಷನಲ್‌ ರೈಲ್ವೆ ಮ್ಯೂಸಿಯಂ (ಒಂದುರಾತ್ರಿಯ ಅವಧಿಯ ನಿಲುಗಡೆ), ನ್ಯೂಕ್ಯಾಸಲ್‌, ಎಡಿನ್‌ಬರ್ಗ್‌; ಹಾಗೂ ಕೊನೆಗೆ ಜುಲೈ 11ರಂದು ಇದು ಪರ್ತ್‌‌ಗೆ ಆಗಮಿಸಿತು. ವೆಸ್ಟ್‌ ಕಂಟ್ರಿ ತರಗತಿಯ ಉಗಿ ಎಂಜಿನ್‌‌ನ್ನು ಇದು ಹೊಂದಿತ್ತು; ಅದರ ಸಂಖ್ಯೆಯು 34027 ಟಾವ್‌ ವ್ಯಾಲಿ ಎಂದಾಗಿತ್ತು; ಈ ಪ್ರವಾಸಕ್ಕಾಗಿಯೇ ಅದಕ್ಕೆ ವಿಶೇಷವಾಗಿ ಮತ್ತೆ ಕೆಂಪು ಬಣ್ಣವನ್ನು ಹೊಡೆಯಲಾಗಿತ್ತು; ನಂತರದಲ್ಲಿ ಅದು ತನ್ನ ಎಂದಿನ ಹಸಿರು ವಿಶಿಷ್ಟ ವರ್ಣಕ್ಕೆ ಹಿಂದಿರುಗಿತು (ಪುನಃ ಬಣ್ಣ ಬಳಿಯುವುದಕ್ಕೆಂದು ಬ್ಲೂಮ್ಸ್‌ಬರಿ ವತಿಯಿಂದ ಮನವಿ ಸಲ್ಲಿಸಲಾಗಿತ್ತು ಮತ್ತು ಇದಕ್ಕಾಗಿ ಹಣವನ್ನೂ ಬ್ಲೂಮ್ಸ್‌ಬರಿ ವತಿಯಿಂದ ಪಾವತಿಸಲಾಯಿತು). ಟ್ರೇನಿನ ಡಬ್ಬಿಗಳಲ್ಲಿ ಒಂದು ಮಲಗುವ ಡಬ್ಬಿಯೂ ಸೇರಿತ್ತು. ಟ್ರೇನಿನ ಮತ್ತೊಂದು ತುರಿಯಲ್ಲಿ ಒಂದು ಡೀಸೆಲ್‌ ಎಂಜಿನನ್ನು ಜೋಡಿಸಲಾಗಿತ್ತು; Hornseyಯ ಸ್ವಲ್ಪವೇ ದಕ್ಷಿಣಕ್ಕಿರುವ ಫರ್ಮೆ ಪಾರ್ಕ್‌‌ನಷ್ಟು ದೂರದ ಪ್ರಯಾಣದ ಮೊದಲ ಹಂತದಂಥ, ಹಿಮ್ಮೊಗ ಚಲನೆಗಳು ಅವಶ್ಯಕವೆಂದು ಕಂಡುಬರುವ ಪ್ರಯಾಣದಲ್ಲಿ ಬಳಸಲೆಂದು ಇದರ ಸೇರ್ಪಡೆಯಾಗಿತ್ತು. ಅದೇ ವಾರಾಂತ್ಯದಲ್ಲಿ ಲಂಡನ್‌ನಲ್ಲಿ ಪೂರ್ವಪ್ರದರ್ಶನ ಕಂಡಿದ್ದ, ಥಾಮಸ್‌ ಅಂಡ್‌ ದಿ ಮ್ಯಾಜಿಕ್‌ ರೈಲ್‌ರೋಡ್‌ ಎಂಬ ಚಲನಚಿತ್ರದ ಬಿಡುಗಡೆಗಿಂತಲೂ ಈ ಪ್ರವಾಸವು ಗಮನಾರ್ಹವಾಗಿ ಹೆಚ್ಚಿನ ಮಟ್ಟದಲ್ಲಿ ಪತ್ರಿಕಾ ವಲಯದಲ್ಲಿ ಆಸಕ್ತಿಯನ್ನು ಸೃಷ್ಟಿಸಿತು.[೯][೧೦][೧೧]

ಚಲನಚಿತ್ರ[ಬದಲಾಯಿಸಿ]

ಹ್ಯಾರಿ ಪಾಟರ್‌ ಅಂಡ್‌ ದಿ ಗಾಬ್ಲಿಟ್‌ ಆಫ್‌ ಫೈರ್‌‌ ಕೃತಿಯನ್ನು ಒಂದು ಚಲನಚಿತ್ರವಾಗಿ ರೂಪಾಂತರಿಸಲಾಯಿತು; ಇದನ್ನು ಮೈಕ್‌ ನೆವೆಲ್‌ ನಿರ್ದೇಶಿಸಿದರೆ, ಸ್ಟೀವ್‌ ಕ್ಲೋವ್ಸ್‌ ಚಿತ್ರಕಥೆಯನ್ನು ಬರೆದಿದ್ದ. ಈ ರೂಪಾಂತರವು 2005ರ ನವೆಂಬರ್‌ 18ರಂದು ವಿಶ್ವಾದ್ಯಂತ ಬಿಡುಗಡೆಯಾಯಿತು.

ಇವನ್ನೂ ಗಮನಿಸಿ‌[ಬದಲಾಯಿಸಿ]

Page ಮಾಡ್ಯೂಲ್:Portal/styles.css has no content.

ಉಲ್ಲೇಖಗಳು‌[ಬದಲಾಯಿಸಿ]

 1. "2000-2009--The Decade of Harry Potter Gives Kids and Adults a Reason to Love Reading". Marketwire. 15 ಡಿಸೆಂಬರ್ 2009. Archived from the original on 16 ಜೂನ್ 2011. Retrieved 3 ಡಿಸೆಂಬರ್ 2010. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
 2. "2001 Award Winners & Nominees". Worlds Without End. Retrieved 23 ಜುಲೈ 2009.
 3. Hartman, Holly (20 ಜನವರಿ 2000). "Harry Potter and the Goblet of Fire: Pre-release". Infoplease. Retrieved 3 ಡಿಸೆಂಬರ್ 2010.
 4. Jenson, Jeff (4 ಆಗಸ್ಟ್ 2000). ""Rowling Thunder" transcript on Accio Quote!". Entertainment Weekly. Retrieved 3 ಡಿಸೆಂಬರ್ 2010. {{cite web}}: Italic or bold markup not allowed in: |publisher= (help)
 5. Jensen, Jeff (7 ಸೆಪ್ಟೆಂಬರ್ 2000). "'Fire' Storm". Entertainment Weekly. Archived from the original on 23 ಸೆಪ್ಟೆಂಬರ್ 2018. Retrieved 3 ಡಿಸೆಂಬರ್ 2010. {{cite web}}: Italic or bold markup not allowed in: |publisher= (help); More than one of |archivedate= and |archive-date= specified (help); More than one of |archiveurl= and |archive-url= specified (help)
 6. "Comic Relief live chat transcript". Accio Quote!. ಮಾರ್ಚ್ 2001. Retrieved 3 ಡಿಸೆಂಬರ್ 2010.
 7. Rowling, J.K. "J.K. Rowling Official Site". Archived from the original on 26 ನವೆಂಬರ್ 2011. Retrieved 20 ಅಕ್ಟೋಬರ್ 2010. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
 8. "HPL: Edits and Changes- Goblet of Fire". Harry Potter Lexicon. Retrieved 20 ಅಕ್ಟೋಬರ್ 2010.
 9. Pigott, Nick, ed. (2000). "Headline News: Red livery for Taw Valley?". The Railway Magazine. London: IPC Magazines. 146 (1191): 17. ISSN 0033-8923. {{cite journal}}: Unknown parameter |month= ignored (help)
 10. Pigott, Nick, ed. (2000). "Headline News: Taw Valley set for four-day tour in EWS red". The Railway Magazine. London: IPC Magazines. 146 (1192). p. 5, photo; p. 14. ISSN 0033-8923. {{cite journal}}: Unknown parameter |month= ignored (help)
 11. Pigott, Nick, ed. (2000). "Headline News: 'Hogwarts Express' shunts 'Thomas' into a siding". The Railway Magazine. London: IPC Magazines. 146 (1193): 15. ISSN 0033-8923. {{cite journal}}: Unknown parameter |month= ignored (help)

ಬಾಹ್ಯ ಕೊಂಡಿಗಳು‌[ಬದಲಾಯಿಸಿ]

Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಹ್ಯಾರಿ ಪಾಟರ್‌ ಅಂಡ್‌ ದಿ ಗಾಬ್ಲಿಟ್‌ ಆಫ್‌ ಫೈರ್‌‌]]

ಟೆಂಪ್ಲೇಟು:Hpw

ಟೆಂಪ್ಲೇಟು:Hugo Award Best Novel 2001-2020