ವಿಷಯಕ್ಕೆ ಹೋಗು

ಹೊಲಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೊಲಿಗೆಯು[] ಸೂಜಿ ಮತ್ತು ದಾರದಿಂದ ಮಾಡಿದ ಕುಣಿಕೆಗಳನ್ನು ಬಳಸಿ ವಸ್ತುಗಳನ್ನು ಭದ್ರಪಡಿಸುವ ಅಥವಾ ಲಗತ್ತಿಸುವ ಕರಕೌಶಲ. ಹೊಲಿಗೆಯು ಅತ್ಯಂತ ಹಳೆಯ ಬಟ್ಟೆ ಕಲೆಗಳಲ್ಲಿ ಒಂದು ಮತ್ತು ಪೂರ್ವ ಶಿಲಾಯುಗದಲ್ಲಿ ಹುಟ್ಟಿಕೊಂಡಿತು. ನೂಲು ಅಥವಾ ನೆಯ್ಗೆ ಬಟ್ಟೆಯ ಆವಿಷ್ಕರಣದ ಮೊದಲು, ಯೂರೋಪ್ ಹಾಗೂ ಏಷ್ಯಾದಾದ್ಯಂತದ ಶಿಲಾಯುಗದ ಜನರು ತುಪ್ಪಳ ಹಾಗೂ ತೊಗಲಿನ ಉಡುಗೆಗಳನ್ನು ಮೂಳೆ, ಕವಲ್ಗೊಂಬು ಅಥವಾ ದಂತದ ಸೂಜಿಗಳು ಮತ್ತು ಸ್ನಾಯುಗಳು, ಕರುಳು, ಹಾಗೂ ಸಿರೆಗಳು ಸೇರಿದಂತೆ ಪ್ರಾಣಿಗಳ ದೇಹದ ವಿವಿಧ ಭಾಗಗಳಿಂದ ತಯಾರಿಸಿದ ದಾರವನ್ನು ಬಳಸಿ ಹೊಲಿಯುತ್ತಿದ್ದರು ಎಂದು ಪುರಾತತ್ವಶಾಸ್ತ್ರಜ್ಞರು ನಂಬುತ್ತಾರೆ.

ಸಾವಿರಾರು ವರ್ಷಗಳವರೆಗೆ, ಎಲ್ಲ ಹೊಲಿಗೆಯನ್ನು ಕೈಯಿಂದ ಮಾಡಲಾಗುತ್ತಿತ್ತು. ೧೯ನೇ ಶತಮಾನದಲ್ಲಿ ಹೊಲಿಗೆಯಂತ್ರದ ಆವಿಷ್ಕಾರ ಮತ್ತು ೨೦ನೇ ಶತಮಾನದಲ್ಲಿ ಗಣಕೀರಣದ ಏಳಿಗೆಯು ಹೊಲಿದ ವಸ್ತುಗಳ ರಾಶಿ ತಯಾರಿಕೆ ಹಾಗೂ ರಫ್ತಿಗೆ ಕಾರಣವಾಯಿತು, ಆದರೆ ಈಗಲೂ ಕೈಹೊಲಿಗೆಯನ್ನು ವಿಶ್ವದಾದ್ಯಂತ ಅಭ್ಯಾಸ ಮಾಡಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "Sewing". The Free Dictionary By Farlex. Retrieved 2012-05-25.



"https://kn.wikipedia.org/w/index.php?title=ಹೊಲಿಗೆ&oldid=1253376" ಇಂದ ಪಡೆಯಲ್ಪಟ್ಟಿದೆ