ನೆಯ್ಗೆ

ವಿಕಿಪೀಡಿಯ ಇಂದ
Jump to navigation Jump to search
ಸ್ಯಾಟಿನ್ ನೆಯ್ಗೆ, ರೇಷ್ಮೆಗೆ ಸಾಮಾನ್ಯವಾಗಿದೆ.

ನೆಯ್ಗೆಯು ಬಟ್ಟೆ ಉತ್ಪಾದನೆಯ ಒಂದು ವಿಧಾನವಾಗಿದೆ. ಇದರಲ್ಲಿ ಬಟ್ಟೆಯ ರಚನೆ ಮಾಡಲು ಎರಡು ಭಿನ್ನ ನೂಲುಗಳು ಅಥವಾ ದಾರಗಳ ಸಮೂಹಗಳನ್ನು ಸಮಕೋನಗಳಲ್ಲಿ ಹೆಣೆಯಲಾಗುತ್ತದೆ. ಇತರ ವಿಧಾನಗಳೆಂದರೆ ಹೆಣಿಗೆ, ಕ್ರೋಷಾ ಹೆಣಿಗೆ, ಫ಼ೆಲ್ಟಿಂಗ್, ಮತ್ತು ಕಸೂತಿ ಹೆಣಿಗೆ ಅಥವಾ ಪ್ಲೇಯ್ಟಿಂಗ್. ಉದ್ದುದ್ದವಾಗಿ ಹೋಗುವ ದಾರಗಳನ್ನು ಹಾಸು ಎಂದು ಕರೆಯಲಾಗುತ್ತದೆ ಮತ್ತು ಅಡ್ಡಡ್ಡವಾಗಿ ಹೋಗುವ ದಾರಗಳನ್ನು ಹೊಕ್ಕು ಎಂದು ಕರೆಯಲಾಗುತ್ತದೆ. ಈ ದಾರಗಳನ್ನು ಹೆಣೆಯುವ ವಿಧಾನವು ಬಟ್ಟೆಯ ಗುಣಲಕ್ಷಣಗಳ ಮೇಲೆ ಪ್ರಭಾವ ಬೀರುತ್ತದೆ.[೧] ಬಟ್ಟೆಯನ್ನು ಸಾಮಾನ್ಯವಾಗಿ ಮಗ್ಗದ ಮೇಲೆ ಹೆಣೆಯಲಾಗುತ್ತದೆ. ಈ ಸಾಧನವು ಹೊಕ್ಕುದಾರಗಳನ್ನು ಹಾಸುದಾರಗಳ ಮುಖಾಂತರ ಹೆಣೆಯುವಾಗ ಹಾಸುದಾರಗಳನ್ನು ಅದರ ಸ್ಥಳದಲ್ಲಿ ಹಿಡಿದಿಡುತ್ತದೆ. ಬಟ್ಟೆಯ ಈ ವ್ಯಾಖ್ಯಾನವನ್ನು ಪಾಲಿಸುವ ಬಟ್ಟೆಯ ಪಟ್ಟಿಯನ್ನು (ನಡುವೆ ಹೊಕ್ಕುದಾರದ ಸುತ್ತಿರುವ ಹಾಸುದಾರಗಳು) ಇತರ ವಿಧಾನಗಳನ್ನು ಬಳಸಿಯೂ ತಯಾರಿಸಬಹುದು. ಇದರಲ್ಲಿ ಫಲಕ ಹೆಣಿಗೆ, ಹಿಂಬದಿ ಪಟ್ಟಿ ಮಗ್ಗ, ಅಥವಾ ಮಗ್ಗಗಳಿರದ ಇತರ ತಂತ್ರಗಳು ಸೇರಿವೆ.[೨]

ಉಲ್ಲೇಖಗಳು[ಬದಲಾಯಿಸಿ]

  1. Collier 1974, p. 92
  2. Dooley 1914

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ನೆಯ್ಗೆ&oldid=912853" ಇಂದ ಪಡೆಯಲ್ಪಟ್ಟಿದೆ