ವಿಷಯಕ್ಕೆ ಹೋಗು

ಹೈನುಗಾರಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಂದು ಆವರ್ತಕ ಹಾಲುಕರೆಯುವ ಕೋಣೆ

ಹೈನುಗಾರಿಕೆ ಎಂಬುದು ಹಾಲಿನ ದೀರ್ಘಾವಧಿ ಉತ್ಪಾದನೆಗೆ ಸಂಬಂಧಿಸಿದಂತಿರುವ ಕೃಷಿಯ, ಅಥವಾ ಒಂದು ಪಶುಸಂಗೋಪನೆಯ, ಉದ್ಯಮದ ಒಂದು ವರ್ಗವಾಗಿದೆ; ಹಾಲಿನ ಉತ್ಪಾದನೆಯನ್ನು ಸಾಮಾನ್ಯವಾಗಿ ಹೈನು ಹಸುಗಳಿಂದ ಮಾಡಲಾಗುತ್ತದೆಯಾದರೂ, ಮೇಕೆಗಳು ಮತ್ತು ಕುರಿಗಳನ್ನೂ ಸಹ ಇದಕ್ಕಾಗಿ ಬಳಕೆಮಾಡಿಕೊಳ್ಳಲಾಗುತ್ತದೆ. ಹೀಗೆ ಉತ್ಪಾದನೆಯಾದ ಹಾಲು ಸ್ಥಳದಲ್ಲೇ ಸಂಸ್ಕರಿಸಲ್ಪಡಬಹುದು ಅಥವಾ ಸಂಸ್ಕರಿಸುವಿಕೆ ಮತ್ತು ಕೊನೆಯ ಚಿಲ್ಲರೆ ಮಾರಾಟಕ್ಕೆ ಸಂಬಂಧಿಸಿದಂತೆ ಹೈನು ಕಾರ್ಖಾನೆಯೊಂದಕ್ಕೆ ಸಾಗಣೆ ಮಾಡಲ್ಪಡಬಹುದು.

ಬಹುಪಾಲು ಹೈನು ಕೇಂದ್ರಗಳು ತಮ್ಮ ಹಸುಗಳಿಂದ ಹುಟ್ಟಿದ ಗಂಡು ಕರುಗಳನ್ನು ಮಾರಾಟಮಾಡುತ್ತವೆ. ಇದು ಸಾಮಾನ್ಯವಾಗಿ ಕರುವಿನ ಮಾಂಸದ ಉತ್ಪಾದನೆಗಾಗಿ ಬಳಸಲ್ಪಡಬಹುದು, ಅಥವಾ ಹಾಲು-ಉತ್ಪಾದಿಸದ ಪ್ರಾಣಿಗಳಾಗಿ ಅವನ್ನು ಪೋಷಿಸುವ ಬದಲಿಗೆ, ಹೋರಿ ಕರುವಿನ ಗುಣಮಟ್ಟವನ್ನು ಅವಲಂಬಿಸಿ ತಳಿ ಸಾಕುವಿಕೆಗಾಗಿ ಅವು ಬಳಸಲ್ಪಡಬಹುದು.[ಸೂಕ್ತ ಉಲ್ಲೇಖನ ಬೇಕು] ವಿಶಿಷ್ಟವೆಂಬಂತೆ, ಅನೇಕ ಹೈನು ಕೇಂದ್ರಗಳು ತಮ್ಮದೇ ಆದ ಪಶು ಆಹಾರವನ್ನೂ ಬೆಳೆಯುತ್ತವೆ; ಮೆಕ್ಕೆಜೋಳ, ಕುದುರೆ ಮೇವಿನ ಸೊಪ್ಪು, ಮತ್ತು ಒಣಹುಲ್ಲು ಇತ್ಯಾದಿಗಳು ಇದರಲ್ಲಿ ಸೇರಿವೆ. ಇದನ್ನು ಹಸುಗಳಿಗೆ ನೇರವಾಗಿ ತಿನ್ನಿಸಲಾಗುತ್ತದೆ, ಅಥವಾ ಇದನ್ನು ಹಗೇವಿನಲ್ಲಿ ಕೂಡಿಟ್ಟ ಮೇವಿನ ರೀತಿಯಲ್ಲಿ ಸಂಗ್ರಹಿಸಿಟ್ಟು, ಚಳಿಗಾಲದ ಋತುವಿನ ಅವಧಿಯಲ್ಲಿ ಬಳಸಲಾಗುತ್ತದೆ. ಹಾಲಿನ ಉತ್ಪಾದನೆಯ ಗುಣಮಟ್ಟವನ್ನು ಹೆಚ್ಚಿಸುವುದಕ್ಕೋಸ್ಕರ, ಆಹಾರಕ್ರಮದ ಹೆಚ್ಚುವರಿ ಪೂರಕ ಅಂಶಗಳನ್ನು ಪಶು ಆಹಾರಕ್ಕೆ ಸೇರಿಸಲಾಗುತ್ತದೆ.

ಇತಿಹಾಸ

[ಬದಲಾಯಿಸಿ]
ಮಹಿಳೆಯೊಬ್ಬಳು ಕೈಯಿಂದ ಹಸುವೊಂದರ ಹಾಲುಕರೆಯುತ್ತಿರುವುದು

ಹೈನುಗಾರಿಕೆ ಎಂಬುದು ಸಾವಿರಾರು ವರ್ಷಗಳಿಂದಲೂ ವ್ಯವಸಾಯದ ಒಂದು ಭಾಗವಾಗುತ್ತಾ ಬಂದಿದೆ. ಐತಿಹಾಸಿಕವಾಗಿ ಹೇಳುವುದಾದರೆ, ಇದು ಚಿಕ್ಕ, ವೈವಿಧ್ಯಮಯ ಒಕ್ಕಲು ಜಮೀನುಗಳ ಒಂದು ಭಾಗ ಎನಿಸಿಕೊಂಡು ಬಂದಿದೆ. ಕಳೆದ ಶತಮಾನದಲ್ಲಿ ಅಥವಾ ಅದಕ್ಕಿಂತ ಹಿಂದೆ, ಕೇವಲ ಹೈನು ಉತ್ಪಾದನೆಯನ್ನು ಮಾತ್ರವೇ ಮಾಡುತ್ತಿರುವ ದೊಡ್ಡದಾದ ಒಕ್ಕಲು ಜಮೀನುಗಳು ಹೊರಹೊಮ್ಮಿವೆ. ಬೃಹತ್‌‌ ಪ್ರಮಾಣದ ಹೈನುಗಾರಿಕೆಯು ಕಾರ್ಯಸಾಧ್ಯವಾಗಬೇಕೆಂದರೆ ಅಲ್ಲಿ ಎರಡು ರೀತಿಯ ಅನುಕೂಲಕರ ಸನ್ನಿವೇಶಗಳಿರಬೇಕು; ಮೊದಲನೆಯದು, ಗಿಣ್ಣಿನಂಥ ಹೆಚ್ಚು ಬಾಳಿಕೆ ಬರುವ ಹೈನು ಉತ್ಪನ್ನಗಳ ಉತ್ಪಾದನೆಗಾಗಿ ಒಂದು ಬೃಹತ್‌‌ ಪ್ರಮಾಣದ ಹಾಲಿನ ಅಗತ್ಯ ಅಲ್ಲಿ ಕಂಡುಬರಬೇಕು, ಅಥವಾ ಹಾಲನ್ನು ಖರೀದಿಸಲೆಂದು ನಗದು ಹಣವನ್ನು ಹೊಂದಿರುವ, ಆದರೆ ತಮ್ಮದೇ ಆದ ಹಸುಗಳನ್ನು ಹೊಂದಿರದ ಜನರ ಒಂದು ಗಣನೀಯ ಮಾರುಕಟ್ಟೆಯು ಅಲ್ಲಿರಬೇಕು.

ಕೈನಿಂದ ಹಾಲುಕರೆಯುವಿಕೆ

[ಬದಲಾಯಿಸಿ]

ಕೇಂದ್ರೀಕೃತ ಹೈನುಗಾರಿಕೆ ಎಂಬುದಾಗಿ ನಾವು ಅರ್ಥೈಸಿಕೊಳ್ಳುವ ಹೈನುಗಾರಿಕೆಯು ಹಳ್ಳಿಗಳು ಮತ್ತು ನಗರಗಳ ಸುತ್ತ ಪ್ರಧಾನವಾಗಿ ಅಭಿವೃದ್ಧಿ ಹೊಂದಿತು; ಮೇಯಿಸುವ ಹುಲ್ಲು ನೆಲದ ಒಂದು ಕೊರತೆಯಿಂದಾಗಿ ನಗರಗಳ ನಿವಾಸಿಗಳು ತಮ್ಮದೇ ಸ್ವಂತದ ಹಸುಗಳನ್ನು ಹೊಂದಲು ಅಸಮರ್ಥರಾಗಿದ್ದರು. ಹೆಚ್ಚುವರಿ ಪ್ರಾಣಿಗಳನ್ನು ಹೊಂದುವ ಮೂಲಕ ಮತ್ತು ಪಟ್ಟಣದಲ್ಲಿ ಹಾಲನ್ನು ಮಾರಾಟ ಮಾಡುವ ಮೂಲಕ, ಪಟ್ಟಣದ ಸಮೀಪವಿರುವ ರೈತರು ಒಂದಷ್ಟು ಹೆಚ್ಚುವರಿ ಹಣವನ್ನು ಸಂಪಾದಿಸಲು ಸಾಧ್ಯವಿತ್ತು.

ಮುಂಜಾನೆಯಲ್ಲಿ ಹಾಲನ್ನು ಪೀಪಾಯಿಗಳಿಗೆ ತುಂಬಿಸುತ್ತಿದ್ದ ಹೈನು ಕೃಷಿಕರು, ಅದನ್ನು ಹೇರುಬಂಡಿಯೊಂದರ ಮೇಲೆ ಮಾರುಕಟ್ಟೆಗೆ ತರುತ್ತಿದ್ದರು. 1800ರ ದಶಕದ ಅಂತ್ಯದವರೆಗೆ, ಕೈನಿಂದ ಹಸುವಿನ ಹಾಲು ಕರೆಯಲಾಗುತ್ತಿತ್ತು. ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ, ಕೆಲವೊಂದು ಈಶಾನ್ಯದ ಸಂಸ್ಥಾನಗಳು ಹಾಗೂ ಪಶ್ಚಿಮ ಭಾಗದಲ್ಲಿ ಹಲವಾರು ಬೃಹತ್‌‌ ಹೈನು ಕಾರ್ಯಾಚರಣೆಗಳು ಅಸ್ತಿತ್ವದಲ್ಲಿದ್ದವು. ಇವು ಏನಿಲ್ಲವೆಂದರೂ ಹಲವಾರು ನೂರು ಹಸುಗಳನ್ನು ಒಳಗೊಂಡಿದ್ದವಾದರೂ, ಹಾಲು ಕರೆಯುವ ಓರ್ವ ಪ್ರತ್ಯೇಕ ವ್ಯಕ್ತಿಯು ದಿನವೊಂದಕ್ಕೆ ಒಂದು ಡಜನ್‌‌ ಹಸುಗಳಿಗಿಂತ ಹೆಚ್ಚು ಹಸುಗಳಿಂದ ಹಾಲು ಕರೆಯುತ್ತಾನೆ ಎಂದು ನಿರೀಕ್ಷಿಸುವಂತಿರಲಿಲ್ಲ. ಹೀಗಾಗಿ ಚಿಕ್ಕದಾದ ಕಾರ್ಯಾಚರಣೆಗಳು ಮೇಲುಗೈ ಸಾಧಿಸಿದ್ದವು.

ಕೊಟ್ಟಿಗೆಯೊಂದರಲ್ಲಿನ ಒಳಾಂಗಣಗಳಲ್ಲಿ ಹಾಲುಕರೆಯುವಿಕೆಯು ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಹಸುವಿನ ಕುತ್ತಿಗೆಯನ್ನು ಹಗ್ಗಗಳಿಂದ ಕಟ್ಟಲಾಗುತ್ತಿತ್ತು ಅಥವಾ ಕೊಟ್ಟಿಗೆ ಕಂಬಗಳಿಂದ ಅವು ಯುಕ್ತ ಸ್ಥಳದಲ್ಲಿ ಹಿಡಿದಿಡಲ್ಪಟ್ಟಿರುತ್ತಿದ್ದವು. ಹಾಲುಕರೆಯುವಿಕೆಯೊಂದಿಗೆ ಹಸುವಿನ ಪೋಷಣೆಯೂ ಏಕಕಾಲಿಕವಾಗಿ ಕೊಟ್ಟಿಗೆಯಲ್ಲಿ ನಡೆಯುತ್ತಿತ್ತಾದರೂ, ಬಹುಪಾಲು ಹೈನು ಹಸುಗಳನ್ನು ಹಾಲುಕರೆಯುವಿಕೆಯ ಅವಧಿಗಳ ನಡುವೆ ದಿನದ ವೇಳೆ ಮೇಯಿಸಲಾಗುತ್ತಿತ್ತು. ಹೈನುಗಾರಿಕೆಯ ಈ ವಿಧಾನದ ಇಂಥ ಉದಾಹರಣೆಗಳನ್ನು ಪತ್ತೆಹಚ್ಚುವುದು ಕಷ್ಟಕರವಾಗಿದೆಯಾದರೂ, ಈಗಾಗಲೇ ಸರಿದುಹೋಗಿರುವ ದಿನಗಳೆಡೆಗೆ ಒಂದು ನಸುನೋಟನ್ನು ಬೀರುವುದಕ್ಕಾಗಿ ಕೆಲವೊಂದನ್ನು ಒಂದು ಐತಿಹಾಸಿಕ ತಾಣವಾಗಿ ಸಂರಕ್ಷಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮುಕ್ತವಾಗಿರುವ ಇಂಥದೊಂದು ನಿದರ್ಶನವನ್ನು, ಪಾಯಿಂಟ್‌ ರೆಯೆಸ್‌ ನ್ಯಾಷನಲ್‌ ಸೀಷೋರ್‌‌‌‌‌ನಲ್ಲಿ ಕಾಣಬಹುದು.[]

ನಿರ್ವಾತ ಬಕೆಟ್ಟು ಬಳಸಿ ಹಾಲುಕರೆಯುವುದು

[ಬದಲಾಯಿಸಿ]
ಸೋವಿಯೆಟ್‌ನ ಒಂದು ಹೊಸ ಹಾಲು ಕರೆಯುವ ಸಾಧನದ ಪ್ರಾತ್ಯಕ್ಷಿಕೆ. ಪೂರ್ವ ಜರ್ಮನಿ, 1952

ಮೊದಲ ಬಾರಿಗೆ ಪರಿಚಯವಾದ ಹಾಲುಕರೆಯುವ ಯಂತ್ರಗಳು, ಸಾಂಪ್ರದಾಯಿಕ ಹಾಲುಕರೆಯುವ ಕೊಳಗದ ಒಂದು ವಿಸ್ತರಣೆಯಾಗಿದ್ದವು. ಮುಂಚೆಯಿದ್ದ ಹಾಲು ಕರೆಯುವ ಸಾಧನವನ್ನು ಎಂದಿನ ಹಾಲು ಕೊಳಗವೊಂದರ ಮೇಲ್ಭಾಗಕ್ಕೆ ಜೋಡಿಸಿರಲಾಗುತ್ತಿತ್ತು. ಈ ಕೊಳಗವು ಹಸುವಿನ ಅಡಿಯಲ್ಲಿ ನೆಲದ ಮೇಲೆ ಸ್ಥಿತವಾಗಿರುತ್ತಿತ್ತು. ಪ್ರತಿಯೊಂದು ಹಸುವಿನಿಂದಲೂ ಹಾಲು ಕರೆದ ನಂತರ, ತುಂಬಿದ ಬಕೆಟ್ಟನ್ನು ಒಂದು ಸಂಗ್ರಾಹಕ ತೊಟ್ಟಿಯೊಳಗೆ ಸುರಿಯಲಾಗುತ್ತಿತ್ತು. ಏರಿಳಿಯುತ್ತಾ ತೂಗಾಡುವ ಹಾಲು ಕರೆಯುವ ಸಾಧನವಾಗಿ ಇದು ಅಭಿವೃದ್ಧಿ ಹೊಂದಿತು. ಹಸುವೊಂದರಿಂದ ಹಾಲುಕರೆಯುವುದಕ್ಕೆ ಮುಂಚಿತವಾಗಿ, ಜೀನುಪಟ್ಟಿ ಎಂದು ಕರೆಯಲಾಗುತ್ತಿದ್ದ ಒಂದು ದೊಡ್ಡದಾಗಿರುವ ಅಗಲವಾದ ಚರ್ಮದ ಪಟ್ಟಿಯನ್ನು ಹಸುವಿಗೆ ಸುತ್ತಲೂ ಸುತ್ತಿ, ಹಸುವಿನ ಬೆನ್ನಿನ ಕೆಳಭಾಗದಿಂದ ಬರುವಂತೆ ಮಾಡಲಾಗುತ್ತಿತ್ತು. ಹಸುವಿನ ಅಡಿಯಲ್ಲಿ ಬರುವಂತೆ, ಹಾಲು ಕರೆಯುವ ಸಾಧನ ಮತ್ತು ಸಂಗ್ರಹಣಾ ತೊಟ್ಟಿಯನ್ನು ಪಟ್ಟಿಯಿಂದ ನೇತುಹಾಕಲಾಗುತ್ತಿತ್ತು. ನೆಲದ ಮೇಲಿರಿಸಿರುವ ಬಕೆಟ್ಟೊಂದರ ಮೇಲೆ ಹಸುವು ಕರಾರುವಾಕ್ಕಾಗಿ ನಿಲ್ಲುವುದಕ್ಕೆ ಬದಲಾಗಿ, ಹಾಲುಕರೆಯುವ ಪ್ರಕ್ರಿಯೆಯ ಸಂದರ್ಭದಲ್ಲಿ ಅದು ಸ್ವಾಭಾವಿಕವಾಗಿ ಅತ್ತಿತ್ತ ಚಲಿಸುವುದಕ್ಕೆ ಈ ನಾವೀನ್ಯತೆಯು ಅವಕಾಶ ಕಲ್ಪಿಸಿತು.

ವಿದ್ಯುಚ್ಛಕ್ತಿಯ ಮತ್ತು ಹೀರುವ ಮೂಲಕ ಹಾಲುಕರೆಯುವ ಯಂತ್ರಗಳ ಲಭ್ಯತೆಯಿಂದಾಗಿ, ಕೊಟ್ಟಿಗೆಕಂಬವನ್ನೊಳಗೊಂಡ ಕೊಟ್ಟಿಗೆಗಳಲ್ಲಿ ಸಾಧ್ಯವಿದ್ದ ಉತ್ಪಾದನಾ ಮಟ್ಟಗಳು ಹೆಚ್ಚಿಸಲ್ಪಟ್ಟವಾದರೂ, ತೀವ್ರ ಸ್ವರೂಪದ ಪ್ರಯಾಸದಾಯಕ ಹಾಲುಕರೆಯುವ ಪ್ರಕ್ರಿಯೆಯಿಂದಾಗಿ ಕಾರ್ಯಾಚರಣೆಗಳ ಪ್ರಮಾಣವು ಸೀಮಿತಗೊಳಿಸಲ್ಪಡುವುದು ಮುಂದುವರಿಯಿತು. ಹಾಲುಕರೆಯುವ ಯಂತ್ರಗಳನ್ನು ಜೋಡಿಸುವ ಮತ್ತು ತೆಗೆಯುವ ಪ್ರಕ್ರಿಯೆಯಲ್ಲಿ, ತುಂಬಾ ಭಾರವಿದ್ದ ಯಂತ್ರೋಪಕರಣವನ್ನು ಮತ್ತು ಅದರ ವಸ್ತುಗಳನ್ನು ಮತ್ತೆಮತ್ತೆ ಎತ್ತಬೇಕಾಗಿ ಬರುತ್ತಿತ್ತು; ಅಷ್ಟೇ ಅಲ್ಲ, ಈ ಕೆಲಸವು ಪ್ರತಿ ಹಸುವಿಗೂ ಪುನರಾವರ್ತನೆಗೊಳ್ಳುತ್ತಿತ್ತು ಹಾಗೂ ಕರೆಯಲ್ಪಟ್ಟ ಹಾಲನ್ನು ಹಾಲಿನ ಕ್ಯಾನುಗಳಿಗೆ ಮತ್ತೆಮತ್ತೆ ಸುರಿಯಬೇಕಾಗಿ ಬರುತ್ತಿತ್ತು. ಇದರ ಪರಿಣಾಮವಾಗಿ, 50ಕ್ಕೂ ಹೆಚ್ಚಿನ ಹಸುಗಳನ್ನು ಹೊಂದಿದ್ದ ಏಕ-ಕೃಷಿಕ ಕಾರ್ಯಾಚರಣೆಗಳನ್ನು ಕಂಡುಕೊಳ್ಳುವುದು ಅಪರೂಪವಾಗಿತ್ತು.

ಸ್ಟೆಪ್‌-ಸೇವರ್‌‌ ಹಾಲು ಸಾಗಣೆ

[ಬದಲಾಯಿಸಿ]

ಹಸುವಿನ ಹಿಂಡಿನ ಗಾತ್ರವು ಹೆಚ್ಚಾಗಲು ಪ್ರಾರಂಭವಾದಂತೆ, ಬಕೆಟ್ಟನ್ನು ಬಳಸಿ ಹಾಲು ಕರೆಯುವ ಪದ್ಧತಿಯು ಪ್ರಯಾಸಕರವಾಗತೊಡಗಿತು. ಸಂಗ್ರಹಣಾ ತೊಟ್ಟಿಗೆ ಹಾಲನ್ನು ಸಾಗಿಸುವುದಕ್ಕಾಗಿ, ಸ್ಟೆಪ್‌-ಸೇವರ್‌‌ ಎಂದು ಕರೆಯಲ್ಪಡುತ್ತಿದ್ದ ನಿರ್ವಾತ ಹಾಲು-ಸಾಗಣೆ ಪದ್ಧತಿಯೊಂದು ಅಭಿವೃದ್ಧಿಯಾಯಿತು. ಸ್ವೀಕರಿಸುವ ಗಾಡಿಯೊಂದರ ಸುತ್ತಲೂ ಸುತ್ತಲ್ಪಟ್ಟ, ಮತ್ತು ಹಾಲಿನಕೇಂದ್ರದಲ್ಲಿನ ನಿರ್ವಾಯುರೋಧಕ ಸಾಧನವೊಂದಕ್ಕೆ ಸಂಪರ್ಕಿಸಲಾದ ಒಂದು ಉದ್ದನೆಯ ನಿರ್ವಾತದ ಮೆದು ನೀರ್ಕೊಳವೆಯನ್ನು ಈ ವ್ಯವಸ್ಥೆಯು ಬಳಸಿಕೊಂಡಿತು; ಇದರಿಂದಾಗಿ ಹಾಲಿನ ಭಾರೀ ಬಕೆಟ್ಟುಗಳನ್ನು ಹೊತ್ತುಕೊಂಡು ಸುದೀರ್ಘ ಅಂತರಗಳವರೆಗೆ ನಡೆಯುವ ಅವಶ್ಯಕತೆಯಿಲ್ಲದೆಯೇ, ಅನೇಕ ಹಸುಗಳ ಹಾಲು ಕರೆಯುವುದಕ್ಕೆ ಕೃಷಿಕರಿಗೆ ಅವಕಾಶ ದೊರೆತಂತಾಯಿತು.

ಹಾಲುಕರೆಯುವ ನಾಳಮಾರ್ಗ

[ಬದಲಾಯಿಸಿ]

ಹಾಲಿನ ನಾಳಮಾರ್ಗವು ಸ್ವಯಂಚಾಲಿತ ಹಾಲುಕರೆಯುವಿಕೆಯಲ್ಲಿನ ಮುಂದಿನ ನಾವೀನ್ಯತೆಯಾಗಿತ್ತು. ಒಂದು ಕಾಯಮ್ಮಾದ ಹಾಲು-ಹಿಂದಿರುಗುವ ಕೊಳವೆಯನ್ನು ಹಾಗೂ ಹಸುಗಳ ಸಾಲುಗಳ ಮೇಲೆ, ಕೊಟ್ಟಿಗೆ ಅಥವಾ ಹಾಲುಕರೆಯುವಿಕೆಯ ಕೋಣೆಯನ್ನು ಸುತ್ತುವರೆಯುವ ಎರಡನೇ ನಿರ್ವಾತ ಕೊಳವೆಯೊಂದನ್ನು ಇದು ಬಳಸುತ್ತದೆ. ಪ್ರತಿಯೊಂದು ಹಸುವಿನ ಮೇಲೆ ಶೀಘ್ರ-ಮೊಹರಿನ ಪ್ರವೇಶ ದ್ವಾರಗಳಿರುತ್ತವೆ. ಹಾಲಿನ ಧಾರಕಕ್ಕೆ ಸಂಬಂಧಿಸಿದ ಅಗತ್ಯವನ್ನು ತೆಗೆದುಹಾಕುವ ಮೂಲಕ, ಹಾಲುಕರೆಯುವ ಸಾಧನವು ಗಾತ್ರ ಮತ್ತು ತೂಕದಲ್ಲಿ ಕುಸಿದಿರುತ್ತದೆ ಮತ್ತು ಹಸುವಿನ ಕೆಳಗೆ ನೇತುಹಾಕಲು ಅನುವಾಗುವಂತೆ ಈ ಗಾತ್ರ-ತೂಕಗಳಿರುತ್ತವೆ; ಹಸುವಿನ ಕೆಚ್ಚಲಿನ ಮೇಲಿನ ಹಾಲುಕರೆಯುವ ತೊಟ್ಟುಗಳ ಹೀರುವ ಬಲದಿಂದ ಮಾತ್ರವೇ ಇವು ಹಿಡಿಯಲ್ಪಟ್ಟಿರುತ್ತವೆ. ನಿರ್ವಾತ ವ್ಯವಸ್ಥೆಯ ನೆರವಿನಿಂದ, ಹಾಲು-ಹಿಂದಿರುಗುವ ಕೊಳವೆಯೊಳಗೆ ಹಾಲು ಮೇಲಕ್ಕೆಳೆಯಲ್ಪಡುತ್ತದೆ, ಮತ್ತು ನಂತರದಲ್ಲಿ ಗುರುತ್ವಬಲದ ನೆರವಿನಿಂದ ಹಾಲಿನಕೇಂದ್ರದ ನಿರ್ವಾಯುರೋಧಕಕ್ಕೆ ಹರಿಯುತ್ತದೆ ಹಾಗೂ ಅದು ಹಾಲನ್ನು ಸಂಗ್ರಹಣಾ ತೊಟ್ಟಿಯಲ್ಲಿ ಸುರಿಯುತ್ತದೆ. ಪ್ರತಿ ಹಸುವಿನಿಂದ ಹಾಲು ಕರೆದಾಗಲೂ ದೊಡ್ಡದಾಗಿರುವ ಭಾರದ ಬಕೆಟ್ಟುಗಳನ್ನು ಹೊತ್ತುಕೊಂಡು ಸುತ್ತುವ ಅಗತ್ಯವು ಕೃಷಿಕರಿಗೆ ಮತ್ತೆಂದೂ ಬರದ ಕಾರಣದಿಂದಾಗಿ, ನಾಳಮಾರ್ಗದ ಪದ್ಧತಿಯು ಹಾಲುಕರೆಯುವಿಕೆಯ ದೈಹಿಕ ಶ್ರಮವನ್ನು ಮಹತ್ತರವಾಗಿ ತಗ್ಗಿಸಿತು.

ಕೊಟ್ಟಿಗೆಯ ಉದ್ದವು ಹೆಚ್ಚಾಗುತ್ತಾ ಮತ್ತು ವಿಸ್ತರಿಸುತ್ತಾ ಹೋಗುವುದಕ್ಕೆ ನಾಳಮಾರ್ಗದ ವ್ಯವಸ್ಥೆಯು ಅವಕಾಶ ಕಲ್ಪಿಸಿತಾದರೂ, ಕೃಷಿಕರು ಒಂದು ಹಂತದ ನಂತರ, ಬೃಹತ್‌‌ ಗುಂಪುಗಳಲ್ಲಿನ ಹಸುಗಳ ಹಾಲು ಕರೆಯಲು ಆರಂಭಿಸಿದರು; ಮಂದೆಯ ಅರ್ಧಭಾಗದಿಂದ ಮೂರನೇ ಒಂದು ಭಾಗದ ಹಸುಗಳನ್ನು ಕೊಟ್ಟಿಗೆಯಲ್ಲಿ ತುಂಬಿಸಿ, ಅವುಗಳ ಹಾಲು ಕರೆದು, ನಂತರದಲ್ಲಿ ಕೊಟ್ಟಿಗೆಯನ್ನು ಖಾಲಿಮಾಡುವ ಮತ್ತು ಮರುತುಂಬಿಸುವ ಪರಿಪಾಠ ಇದಾಗಿತ್ತು. ಹಿಂಡಿನ ಗಾತ್ರಗಳು ಹೆಚ್ಚಾಗುವುದನ್ನು ಮುಂದುವರಿಸಿದಂತೆ, ಇದು ಒಂದು ಹೆಚ್ಚು ಪರಿಣಾಮಕಾರಿಯಾದ ಹಾಲು ಕರೆಯುವ ಕೋಣೆಯಾಗಿ ವಿಕಸನಗೊಂಡಿತು.

ಹಾಲುಕರೆಯುವ ಕೋಣೆಗಳು

[ಬದಲಾಯಿಸಿ]

ಪ್ರತಿ ನಿರ್ವಾಹಕನನ್ನು ಗಮನದಲ್ಲಿಟ್ಟುಕೊಂಡು ಹಸುಗಳಿಗೆ ಬಳಸಲಾದ ಕಚ್ಚಾವಸ್ತುವಿನ ಪ್ರಮಾಣವನ್ನು ಪರಮಾವಧಿಗೇರಿಸುವ ದೃಷ್ಟಿಯಿಂದ, ಹಾಲುಕರೆಯುವಿಕೆಯಲ್ಲಿನ ನಾವೀನ್ಯತೆಯು ಹಾಲುಕರೆಯುವ ಕೋಣೆಯನ್ನು ಯಂತ್ರೀಕರಿಸುವುದರ ಮೇಲೆ ಗಮನಹರಿಸಿತು; ಇದರಿಂದಾಗಿ ಹಸುಗಳು ಒಂದು ಜೋಡಣಾಪಂಕ್ತಿಯಲ್ಲಿ ಇರುವ ರೀತಿಯಲ್ಲಿ ಅವುಗಳಿಂದ ಹಾಲುಕರೆಯುವ ಪ್ರಕ್ರಿಯೆಯು ಸಮರ್ಥವಾಗಿಸಲ್ಪಟ್ಟಂತಾಯಿತು. ಅಷ್ಟೇ ಅಲ್ಲ, ಹಾಲು ಕರೆಯುವಾತನು ನಿರಂತರವಾಗಿ ಬಗ್ಗಿಕೊಂಡೇ ಇರಬೇಕಾದ ಪರಿಸ್ಥಿತಿಯನ್ನು ಇಲ್ಲವಾಗಿಸಲು, ಆತನಿಂದ ಕೊಂಚವೇ ಮೇಲ್ಭಾಗದಲ್ಲಿರುವ ವೇದಿಕೆಯೊಂದರ ಮೇಲೆ ಹಸುಗಳನ್ನು ಇರಿಸುವ ವ್ಯವಸ್ಥೆಯು ಇದರಲ್ಲಿ ಇದ್ದುದರಿಂದ, ಕೃಷಿಕನ ಮೇಲಿನ ಶಾರೀರಿಕ ಒತ್ತಡಗಳು ತಗ್ಗಿದಂತಾದವು. ಅನೇಕ ಹಳೆಯ ಮತ್ತು ಚಿಕ್ಕದಾದ ಕೇಂದ್ರಗಳು ಈಗಲೂ ಸಹ ಕಟ್ಟುವ-ಲಾಯ ಅಥವಾ ಕೊಟ್ಟಿಗೆಕಂಬದ ಕೊಟ್ಟಿಗೆಗಳನ್ನು ಹೊಂದಿವೆಯಾದರೂ, ವಿಶ್ವಾದ್ಯಂತದ ವಾಣಿಜ್ಯೋದ್ದೇಶದ ಬಹುಪಾಲು ಒಕ್ಕಲು ಜಮೀನುಗಳು ಕೋಣೆಗಳನ್ನು ಹೊಂದಿವೆ.

ಒಂದು ಚಿಕ್ಕ ಪ್ರದೇಶದೊಳಗೆ ಹಣವು ಕೇಂದ್ರೀಕರಿಸಲ್ಪಡುವುದಕ್ಕೆ ಹಾಲುಕರೆಯುವ ಕೋಣೆಯು ಅನುವುಮಾಡಿಕೊಟ್ಟಿದ್ದರಿಂದಾಗಿ, ಕೋಣೆಯಲ್ಲಿನ ಪ್ರತಿಯೊಂದು ಹಾಲುಕರೆಯುವ ಕೇಂದ್ರಕ್ಕೆ ಹೆಚ್ಚು ತಾಂತ್ರಿಕವಾಗಿರುವ ನಿಯಂತ್ರಿಸುವ ಮತ್ತು ಅಳೆಯುವ ಉಪಕರಣವನ್ನು ಸಮರ್ಪಿಸಲು ಸಾಧ್ಯವಾಯಿತು. ಉದಾಹರಣೆಗೆ, ಒಂದು ಸಾಮಾನ್ಯ ನಾಳಮಾರ್ಗದೊಳಗೆ ಹಾಗೇ ಸುಮ್ಮನೇ ಹಾಲುಕರೆಯುವುದಕ್ಕೆ ಬದಲಾಗಿ, ನಿಶ್ಚಿತ ಅಳತೆ ಪದ್ಧತಿಗಳೊಂದಿಗೆ ಕೋಣೆಯು ಸಜ್ಜುಗೊಂಡಿರಲು ಸಾಧ್ಯವಾಯಿತು; ಸದರಿ ಅಳತೆ ಪದ್ಧತಿಗಳು ಹಾಲಿನ ಪ್ರಮಾಣವನ್ನು ನಿಯಂತ್ರಿಸುವ ಮತ್ತು ಪ್ರತಿ ಹಸುವಿಗೆ ಸಂಬಂಧಿಸಿದಂತೆ ಹಾಲುಕರೆಯುವಿಕೆಯ ಅಂಕಿ-ಅಂಶಗಳನ್ನು ದಾಖಲಿಸುವ ವಿಶಿಷ್ಟತೆಗಳನ್ನು ಹೊಂದಿದ್ದವು ಎಂಬುದು ಗಮನಾರ್ಹ ಅಂಶ. ಪ್ರತಿ ಹಸುವೂ ಕೋಣೆಯೊಳಗೆ ಪ್ರವೇಶಿಸುತ್ತಿದ್ದಂತೆ ಅದನ್ನು ತಾನೇತಾನಾಗಿ ಗುರುತಿಸುವಲ್ಲಿ, ಸದರಿ ಹಸುಗಳಿಗೆ ಲಗತ್ತಿಸಲಾಗಿದ್ದ ನಮೂದು ಪಟ್ಟಿಗಳು ಕೋಣೆಯ ವ್ಯವಸ್ಥೆಗೆ ಅನುವುಮಾಡಿಕೊಟ್ಟಿದ್ದವು.

ಗೂಡಿನ ಸ್ವರೂಪದ ಕೋಣೆಗಳು

[ಬದಲಾಯಿಸಿ]

ಹೆಚ್ಚು ಆಧುನಿಕವಾಗಿರುವ ಒಕ್ಕಲು ಜಮೀನುಗಳು, ಗೂಡಿನ ಸ್ವರೂಪದ ಕೋಣೆಗಳನ್ನು ಬಳಸುತ್ತವೆ. ಇದರಲ್ಲಿ ಹಾಲು ಕರೆಯುವವನು ಗೂಡೊಂದರಲ್ಲಿ ನಿಲ್ಲುತ್ತಾನೆ ಹಾಗೂ ಅವನ ತೋಳುಗಳು ಹಸುವಿನ ಕೆಚ್ಚಲಿನ ಮಟ್ಟದಲ್ಲಿರುತ್ತವೆ. ಗೂಡಿನ ಸ್ವರೂಪದ ಕೋಣೆಗಳು ಅಂಕುಡೊಂಕು ಜೋಡಣೆಯಾಗಿರಲು ಸಾಧ್ಯವಿದ್ದು, ಇದರಲ್ಲಿ ಎರಡು ಕೋನೀಯ ಸಾಲುಗಳಲ್ಲಿ ಗೂಡಿನ ಎರಡೂ ಪಕ್ಕಗಳಲ್ಲಿ ಹಸುಗಳು ನಿಲ್ಲುತ್ತವೆ ಮತ್ತು ಹಾಲು ಕರೆಯುವವನು ಪಕ್ಕದಿಂದ ಕೆಚ್ಚಲನ್ನು ಸಂಪರ್ಕಿಸುತ್ತಾನೆ; ಸಮಾನಾಂತರವಾಗಿರುವ ಸಾಲುಗಳಲ್ಲಿ ಹಸುಗಳು ಪಕ್ಕಪಕ್ಕದಲ್ಲಿ ನಿಂತಿದ್ದರೆ, ಹಾಲು ಕರೆಯುವವನು ಹಿಂಭಾಗದಿಂದ ಕೆಚ್ಚಲನ್ನು ಸಂಪರ್ಕಿಸುತ್ತಾನೆ; ಅಥವಾ, ತೀರಾ ಇತ್ತೀಚೆಗಿನ ವಿಧಾನದಲ್ಲಿ, ಆವರ್ತಕದ (ಅಥವಾ ತಿರುಗುಚಕ್ರದ) ಶೈಲಿಯಲ್ಲಿನ ಒಂದು ಏರಿಸಲಾದ ವೃತ್ತಾಕಾರದ ವೇದಿಕೆಯ ಮೇಲೆ ಹಸುಗಳು ನಿಂತಿದ್ದು, ವೃತ್ತದ ಮಧ್ಯಭಾಗದೆಡೆಗೆ ಅವು ಮುಖಮಾಡಿಕೊಂಡಿರುವಾಗ, ಮತ್ತು ವೇದಿಕೆಯು ತಿರುಗತೊಡಗಿದಾಗ, ಹಾಲು ಕರೆಯುವವನು ಒಂದು ಜಾಗದಲ್ಲಿ ನಿಲ್ಲುತ್ತಾನೆ ಹಾಗೂ ಹಿಂಭಾಗದಿಂದ ಕೆಚ್ಚಲನ್ನು ಸಂಪರ್ಕಿಸುತ್ತಾನೆ. ಹಾಲುಕರೆಯುವ ಕಟ್ಟಡಗಳ ಇತರ ಅನೇಕ ಶೈಲಿಗಳು ಅಸ್ತಿತ್ವದಲ್ಲಿವೆಯಾದರೂ, ಅವು ಕಡಿಮೆ ಸಾಮಾನ್ಯವಾಗಿವೆ ಎಂದು ಹೇಳಬಹುದು.

ಅಂಕುಡೊಂಕು ಜೋಡಣೆ ಮತ್ತು ಸಮಾನಾಂತರ ಕಟ್ಟಡಗಳು

[ಬದಲಾಯಿಸಿ]

ಅಂಕುಡೊಂಕು ಜೋಡಣೆಯ ಮತ್ತು ಸಮಾನಾಂತರ ಕಟ್ಟಡಗಳಲ್ಲಿ, ಹಾಲು ಕರೆಯುವವನು ಸಾಮಾನ್ಯವಾಗಿ ಒಂದು ಸಲಕ್ಕೆ ಒಂದು ಸಾಲಿನಂತೆ ಹಾಲು ಕರೆಯುತ್ತಾನೆ. ಹಸುಗಳ ಒಂದು ಸಾಲನ್ನು ಅವು ಹಿಡಿದಿಡಲ್ಪಟ್ಟಿರುವ ಅಂಗಳದಿಂದ ಹಾಲುಕರೆಯುವ ಕಟ್ಟಡದೊಳಗೆ ಹಾಲು ಕರೆಯುವವನು ಸಾಗಿಸುತ್ತಾನೆ, ಮತ್ತು ಆ ಸಾಲಿನಲ್ಲಿರುವ ಪ್ರತಿ ಹಸುವಿನಿಂದಲೂ ಹಾಲು ಕರೆಯುತ್ತಾನೆ. ಹಾಲು ಕರೆಯಲ್ಪಟ್ಟ ಸಾಲಿನಿಂದ ಎಲ್ಲಾ ಅಥವಾ ಬಹುಪಾಲು ಹಾಲುಕರೆಯುವ ಯಂತ್ರಗಳನ್ನು ಒಮ್ಮೆಗೆ ತೆಗೆದ ನಂತರ, ಹಾಲು ಕರೆಯುವವನು ಹಸುಗಳನ್ನು ಅವುಗಳ ಆಹಾರ ಸೇವನೆಗಾಗಿ ಬಿಡುಗಡೆಮಾಡುತ್ತಾನೆ. ಈಗ ಖಾಲಿಯಾಗಿರುವ ಪಾರ್ಶ್ವದೊಳಗೆ ನಂತರ ಹಸುಗಳ ಹೊಸ ಸಮೂಹವೊಂದನ್ನು ತುಂಬಿಸಲಾಗುತ್ತದೆ ಮತ್ತು ಎಲ್ಲಾ ಹಸುಗಳಿಂದಲೂ ಹಾಲು ಕರೆಯಲ್ಪಡುವವರೆಗೆ ಈ ಪ್ರಕ್ರಿಯೆಯು ಪುನರಾವರ್ತನೆಯಾಗುತ್ತದೆ. ಪ್ರತಿಬಂಧಕ ಎಂಬುದಾಗಿ ಪರಿಗಣಿಸಲ್ಪಟ್ಟಿರುವ ಹಾಲುಕರೆಯುವಿಕೆಯ ಕಟ್ಟಡದ ಗಾತ್ರವನ್ನು ಅವಲಂಬಿಸಿ, ಹಸುಗಳ ಈ ಸಾಲುಗಳು ಒಂದು ಸಲಕ್ಕೆ ನಾಲ್ಕರಿಂದ ಅರವತ್ತರವರೆಗೆ ಇರಲು ಸಾಧ್ಯವಿದೆ.

ಆವರ್ತಕ ಕೋಣೆಗಳು

[ಬದಲಾಯಿಸಿ]

ಆವರ್ತಕ ಕೋಣೆಗಳಲ್ಲಿ, ವೇದಿಕೆಯು ನಿಧಾನವಾಗಿ ತಿರುಗುತ್ತದೆಯಾದ್ದರಿಂದ ಒಮ್ಮೆಗೆ ಒಂದು ಹಸುವಿನಂತೆ ಹಸುಗಳನ್ನು ವೇದಿಕೆಯ ಮೇಲೆ ನಿಲ್ಲಿಸಲಾಗುತ್ತದೆ. ಕೋಣೆಗಿರುವ ಪ್ರವೇಶದ್ವಾರದ ಸಮೀಪದಲ್ಲಿ ಹಾಲು ಕರೆಯುವವ ನಿಲ್ಲುತ್ತಾನೆ ಮತ್ತು ಹಸುಗಳು ವೇಗವಾಗಿ ಸಾಗುತ್ತಿದ್ದಂತೆ ಅವುಗಳ ಮೇಲೆ ಬಟ್ಟಲುಗಳನ್ನು ಇರಿಸುತ್ತಾನೆ. ವೇದಿಕೆಯು ಹೆಚ್ಚೂಕಮ್ಮಿ ಒಂದು ಪೂರ್ಣ ಆವರ್ತನವನ್ನು ಸಂಪೂರ್ಣಗೊಳಿಸುವ ವೇಳೆಗೆ, ಮತ್ತೋರ್ವ ಹಾಲು ಕರೆಯುವವನಿಂದ ಅಥವಾ ಮತ್ತೊಂದು ಯಂತ್ರದಿಂದ ಬಟ್ಟಲುಗಳು ತೆಗೆಯಲ್ಪಡುತ್ತವೆ ಮತ್ತು ಹಸುವು ವೇದಿಕೆಯ ಆಚೆಗೆ ಹಿಂದಕ್ಕೆ ಹೆಜ್ಜೆಯಿಡುತ್ತದೆ ಹಾಗೂ ನಂತರದಲ್ಲಿ ತನ್ನ ಆಹಾರದೆಡೆಗೆ ಸಾಗುತ್ತದೆ. ಆವರ್ತಕ ದನದ ಕೊಟ್ಟಿಗೆಗಳು ಎಂಬುದಾಗಿ ನ್ಯೂಜಿಲೆಂಡ್‌ನಲ್ಲಿ ಕರೆಯಲ್ಪಡುವ ಈ ಸ್ವರೂಪದ ಕೊಟ್ಟಿಗೆಗಳು 1980ರ ದಶಕದಲ್ಲಿ[][] ಆರಂಭಗೊಂಡವಾದರೂ, ನ್ಯೂಜಿಲೆಂಡ್‌ನ ಹಳೆಯ ರೂಢಮಾದರಿಯಾದ ಅಂಕುಡೊಂಕು ಜೋಡಣೆಯ ದನದ ಕೊಟ್ಟಿಗೆಗೆ ಹೋಲಿಸಿದಾಗ ದುಬಾರಿಯಾಗಿವೆ. ವೆಚ್ಚಗಳನ್ನು ಸರಿಹೊಂದಿಸಲೆಂದು ಹಿಂಡುಗಳು ದೊಡ್ಡಗಾತ್ರವನ್ನು ತಳೆದಿದ್ದು, 500-600 ಹಸುಗಳಿರುವ ಹಿಂಡಿಗೆ ಓರ್ವ ಹಾಲುಕರೆಯುವ ವ್ಯಕ್ತಿ ಇರುತ್ತಾನೆ.[ಸೂಕ್ತ ಉಲ್ಲೇಖನ ಬೇಕು] ಇದೇ ಸಂಖ್ಯೆಯ ಹಸುಗಳನ್ನು ಆಧಾರವಾಗಿಟ್ಟುಕೊಂಡು ಹೇಳುವುದಾದರೆ, ಒಂದು ಅಂಕುಡೊಂಕು ಜೋಡಣೆಯ ಕೊಟ್ಟಿಗೆಗಿಂತ ಒಂದು ಆವರ್ತಕವು ಸುಮಾರು 25% ವೇಗವಾಗಿರುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಹಾಲು ಕರೆಯುವ ಸಾಧನದ ಸ್ವಯಂಚಾಲಿತ ಕಳಚುವಿಕೆ

[ಬದಲಾಯಿಸಿ]

ಹಾಲು ನೀಡುವ ಪ್ರಾಣಿಯೊಂದರ ಕೆಚ್ಚಲು ಹಾಲನ್ನು ಬಿಡುಗಡೆಮಾಡುವುದನ್ನು ನಿಲ್ಲಿಸಿದ ಹಂತದಲ್ಲಿದ್ದಾಗಲೂ, ಮಿತಿಮೀರಿ ಹಾಲುಕರೆಯುವುದರಿಂದ ಆ ಪ್ರಾಣಿಗೆ ಅಪಾಯವೊದಗಬಹುದು. ಆದ್ದರಿಂದ, ಹಾಲುಕರೆಯುವ ಪ್ರಕ್ರಿಯೆಯಲ್ಲಿ ಕೆಚ್ಚಲಿಗೆ ಹಾಲು ಕರೆಯುವ ಸಾಧನವನ್ನು ಲಗತ್ತಿಸುವುದು ಮಾತ್ರವೇ ಸೇರಿಕೊಂಡಿರುವುದಿಲ್ಲ; ಸದರಿ ಹಾಲುನೀಡುವ ಪ್ರಾಣಿಯು ಯಾವಾಗ ಹಾಲನ್ನು ನಿಲ್ಲಿಸಿದೆ ಎಂಬುದನ್ನು ನಿರ್ಣಯಿಸಲು ಹಾಲು ಕರೆಯುವ ಪ್ರಕ್ರಿಯೆಯ ಮೇಲ್ವಿಚಾರಣೆಯನ್ನು ವಹಿಸುವುದು ಮತ್ತು ಹಾಲು ಕರೆಯುವ ಸಾಧನವನ್ನು ಕೆಚ್ಚಲಿನಿಂದ ಬೇರ್ಪಡಿಸುವ ಕ್ರಮವೂ ಅದರಲ್ಲಿ ಸೇರಿರುತ್ತದೆ. ಇನ್ನೂ ಹೆಚ್ಚುವೇಗವಾಗಿ ಹೆಚ್ಚಿನ ಸಂಖ್ಯೆಯ ಪ್ರಾಣಿಗಳ ಹಾಲು ಕರೆಯುವಲ್ಲಿ ಕೋಣೆಯ ಕಾರ್ಯಾಚರಣೆಗಳು ಕೃಷಿಕನೋರ್ವನಿಗೆ ಅವಕಾಶಕಲ್ಪಿಸಿರುವ ಜೊತೆಗೇ, ಕೃಷಿಕನಿಂದ ಏಕಕಾಲಿಕವಾಗಿ ನಿಯಂತ್ರಿಸಲ್ಪಡಬೇಕಾಗುವ ಪ್ರಾಣಿಗಳ ಸಂಖ್ಯೆಯನ್ನೂ ಅದು ಹೆಚ್ಚಿಸಿದೆ. ಹಾಲಿನ ಹರಿವು ಒಂದು ಪೂರ್ವನಿಯೋಜಿತ ಮಟ್ಟವನ್ನು ತಲುಪಿದಾಗ, ಹಾಲು ಕರೆಯುವ ಸಾಧನವನ್ನು ಹಸುವಿನಿಂದ ತೆಗೆಯುವ ದೃಷ್ಟಿಯಿಂದ ಸ್ವಯಂಚಾಲಿತ ಕಳಚುವಿಕೆಯ ವ್ಯವಸ್ಥೆಯು ಅಭಿವೃದ್ಧಿಪಡಿಸಲ್ಪಟ್ಟಿತು; ಒಂದೇ ಸಮಯದಲ್ಲಿ 20 ಅಥವಾ ಅದಕ್ಕೂ ಹೆಚ್ಚಿನ ಪ್ರಾಣಿಗಳ ಹಾಲನ್ನು ಕರೆಯುತ್ತಿರುವಾಗ, ಜಾಗರೂಕವಾಗಿ ವೀಕ್ಷಿಸುತ್ತಾ ಕೂರಬೇಕಾಗಿ ಬರುತ್ತಿದ್ದ ಕೃಷಿಕನ ಹೊಣೆಗಾರಿಕೆಗಳನ್ನು ಇದು ಇಲ್ಲವಾಗಿಸಿತು ಎಂದು ಹೇಳಬಹುದು.ಇದು ನ್ಯೂಜಿಲೆಂಡ್‌ನಲ್ಲಿ ಒಂದು ಪ್ರಮಾಣಕ ಕಾರ್ಯವಿಧಾನವಾಗಿದೆ.

ಸಂಪೂರ್ಣವಾಗಿ ಸ್ವಯಂಚಾಲಿತವಾಗಿರುವ ರೊಬಾಟ್‌ ಶೈಲಿಯ ಹಾಲುಕರೆಯುವ ವ್ಯವಸ್ಥೆ

[ಬದಲಾಯಿಸಿ]

ರೊಬಾಟ್‌ ಶೈಲಿಯ ಹಾಲುಕರೆಯುವ ವ್ಯವಸ್ಥೆಗಳು 1980ರ ದಶಕ ಮತ್ತು 1990ರ ದಶಕಗಳಲ್ಲಿ ಅಭಿವೃದ್ಧಿ ಹೊಂದಿದವು ಮತ್ತು ಪರಿಚಯಿಸಲ್ಪಟ್ಟವು [ಪ್ರಧಾನವಾಗಿ ಐರೋಪ್ಯ ಒಕ್ಕೂಟದ (EU) ವಲಯದಲ್ಲಿ]. ಇಂಥ ಸಾವಿರಾರು ವ್ಯವಸ್ಥೆಗಳು ಈಗ ವಾಡಿಕೆಯ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ಈ ವ್ಯವಸ್ಥೆಗಳಲ್ಲಿನ ವಿಶೇಷತೆಯೇನೆಂದರೆ, ಪೂರ್ವ-ನಿರ್ಧಾರಿತ ಕಾಲಾವಕಾಶಗಳೊಳಗಾಗಿ ಹಸುವು ತನ್ನ ಹಾಲುಕರೆಯುವ ಸಮಯವನ್ನು ಆಯ್ದುಕೊಳ್ಳುವ ಒಂದು ಉನ್ನತ ಮಟ್ಟದ ಸ್ವಾತಂತ್ರ್ಯವನ್ನು ಹೊಂದಿರುತ್ತದೆ. ತೀವ್ರಸ್ವರೂಪದಲ್ಲಿ ನಿರ್ವಹಿಸಲ್ಪಟ್ಟ ವ್ಯವಸ್ಥೆಗಳಾಗಿ ಈ ವ್ಯವಸ್ಥೆಗಳು ಸಾಮಾನ್ಯವಾಗಿ ಸೀಮಿತಗೊಳಿಸಲ್ಪಟ್ಟಿರುತ್ತವೆಯಾದರೂ, ಮೇಯುತ್ತಿರುವ ಹಸುವಿನ ಅವಶ್ಯಕತೆಗಳಿಗೆ ಅವನ್ನು ಹೊಂದಿಸಲು ಮತ್ತು ತಾನೇತಾನಾಗಿ ಪ್ರಾಣಿಯ ಆರೋಗ್ಯ ಮತ್ತು ಫಲವತ್ತತೆಯನ್ನು ಪತ್ತೆಹಚ್ಚುವ ಸಲುವಾಗಿ, ಸಂವೇದಕಗಳನ್ನು ಅಭಿವೃದ್ಧಿಪಡಿಸಲು ಅನುವಾಗುವಂತೆ ಸಂಶೋಧನೆಯು ಮುಂದುವರಿಯುತ್ತದೆ.

ಹಾಲಿನ ಸಂರಕ್ಷಣಾ ವಿಧಾನಗಳ ಇತಿಹಾಸ

[ಬದಲಾಯಿಸಿ]

ತಂಪು ತಾಪಮಾನವು ಇಲ್ಲಿ ಪ್ರಮುಖ ವಿಧಾನವಾಗಿದ್ದು, ಇದರಿಂದ ಹಾಲಿನ ತಾಜಾತನದ ಅವಧಿಯು ವಿಸ್ತರಿಸಲ್ಪಡುತ್ತದೆ. ಗಾಳಿಯಂತ್ರಗಳು ಮತ್ತು ಬಾವಿಯ ಪಂಪುಗಳ ಆವಿಷ್ಕಾರವಾದಾಗ, ಒಕ್ಕಲು ಜಮೀನಿನಲ್ಲಿನ ಪ್ರಾಣಿಗಳಿಗಾಗಿ ನೀರನ್ನು ಒದಗಿಸುವುದರ ಜೊತೆಗೆ, ಹಾಲನ್ನು ತಂಪಾಗಿಸುವುದಕ್ಕಾಗಿಯೂ ಅವನ್ನು ಬಳಸುತ್ತಿದ್ದುದು ಅವುಗಳ ಮೊದಲ ಬಳಕೆಗಳಲ್ಲಿ ಒಂದಾಗಿತ್ತು; ಪಟ್ಟಣದ ಮಾರುಕಟ್ಟೆಗೆ ಸಾಗಣೆ ಮಾಡಲ್ಪಡುವುದಕ್ಕೆ ಮುಂಚಿತವಾಗಿ ಹಾಲಿನ ಸಂಗ್ರಹಣಾ ಅವಧಿಯನ್ನು ವಿಸ್ತರಿಸುವ ಸಲುವಾಗಿ ಈ ಕ್ರಮವನ್ನು ಅನುಸರಿಸಲಾಗುತ್ತಿತ್ತು.

ಒಂದು ತೊಟ್ಟಿಯೊಳಗೆ ಅಥವಾ ಹಾಲುಕರೆದ ನಂತರ ತಂಪಾಗಿಸಲು ತೊಟ್ಟಿಯೊಳಗೆ ಸಜ್ಜುಗೊಳಿಸಲಾದ ಇತರ ಧಾರಕಗಳೊಳಗೆ, ಸ್ವಾಭಾವಿಕವಾಗಿ ತಣ್ಣಗಿರುವ ಅಂತರ್ಜಲವನ್ನು ನಿರಂತರವಾಗಿ ಪಂಪುಮಾಡಲಾಗುತ್ತದೆ. ಹಾಲನ್ನು ತಂಪಾಗಿಸುವ ಈ ವಿಧಾನವು, ವಿದ್ಯುಶ್ಚಕ್ತಿ ಮತ್ತು ಶೈತ್ಯೀಕರಣದ ಆಗಮನಕ್ಕೆ ಮುಂಚೆ ಅತೀವವಾಗಿ ಜನಪ್ರಿಯವಾಗಿತ್ತು.

ಶೈತ್ಯೀಕರಣ

[ಬದಲಾಯಿಸಿ]

ಶೈತ್ಯೀಕರಣ ವ್ಯವಸ್ಥೆಯು (19ನೇ ಶತಮಾನದಲ್ಲಿ) ಮೊದಲು ಆಗಮಿಸಿದಾಗ, ಕೈನಿಂದ ಹಾಲುಕರೆದು ತುಂಬಿಸಲ್ಪಡುತ್ತಿದ್ದ ಹಾಲಿನ ಕ್ಯಾನುಗಳನ್ನು ತಂಪಾಗಿಸಲು ಸದರಿ ಉಪಕರಣವು ಆರಂಭಿಕವಾಗಿ ಬಳಸಲ್ಪಟ್ಟಿತು. ಶಾಖವನ್ನು ತೆಗೆಯಲು ಮತ್ತು ಒಂದು ಸಂಗ್ರಹಣಾ ಸೌಲಭ್ಯಕ್ಕೆ ಕ್ಯಾನುಗಳು ಸಾಗಣೆಗೊಳ್ಳುವವರೆಗೂ ಅವನ್ನು ತಂಪಾಗಿಡಲು, ಈ ಕ್ಯಾನುಗಳನ್ನು ಒಂದು ತಂಪಾಗಿಸಿದ ನೀರಿನ ಬೋಗುಣಿಯೊಳಗೆ ಇರಿಸಲಾಗುತ್ತಿತ್ತು. ಹಾಲನ್ನು ಜೋಪಾನ ಮಾಡಿಡುವುದಕ್ಕೆ ಸಂಬಂಧಿಸಿದ ಸ್ವಯಂಚಾಲಿತ ವಿಧಾನಗಳು ಹೆಚ್ಚೆಚ್ಚು ಅಭಿವೃದ್ಧಿ ಹೊಂದಿದಂತೆ, ಕೈನಿಂದ ಹಾಲುಕರೆಯುವ ಪದ್ಧತಿಯು ಬದಲಾಯಿಸಲ್ಪಟ್ಟಿತು ಮತ್ತು, ಇದರ ಫಲವಾಗಿ, ಒಂದು ಭಾರೀಗಾತ್ರದ ಹಾಲಿನ ಶೀತಕವು ಹಾಲಿನ ಕ್ಯಾನನ್ನು ಪಲ್ಲಟಗೊಳಿಸಿತು. 'ಮಂಜುಗಡ್ಡೆಯ ಬ್ಯಾಂಕುಗಳು' ಭಾರೀಗಾತ್ರದ ಹಾಲಿನ ಶೀತಕದ ಮೊದಲ ಬಗೆಯಾಗಿದ್ದವು. ಇದು ಬಾಷ್ಪೀಕರಣ ಕೋಶದ ಸುರುಳಿಗಳೊಂದಿಗಿನ ಒಂದು ಜೋಡಿ ಗೋಡೆಯುಳ್ಳ ಪಾತ್ರೆಯಾಗಿದ್ದು, ತೊಟ್ಟಿಯ ತಳಭಾಗದಲ್ಲಿನ ಹಾಗೂ ಪಕ್ಕಗಳಲ್ಲಿನ ಗೋಡೆಗಳ ನಡುವೆ ನೀರನ್ನು ಒಳಗೊಂಡಿತ್ತು. ಬಾಷ್ಪೀಕರಣ ಕೋಶದ ಸುರುಳಿಗಳಿಂದ ಶಾಖವನ್ನು ತೆಗೆಯಲೆಂದು, ಒಂದು ಸಣ್ಣ ಶೈತ್ಯೀಕರಣದ ಸಂಪೀಡಕವನ್ನು ಇದರಲ್ಲಿ ಬಳಸಲಾಗಿತ್ತು. ಅಂತಿಮವಾಗಿ, ಸುರುಳಿಗಳ ಸುತ್ತಲೂ ಮಂಜುಗಡ್ಡೆಯು ರೂಪುಗೊಳ್ಳುತ್ತದೆ ಹಾಗೂ ಸುಮಾರು ಮೂರು ಇಂಚುಗಳಷ್ಟಿರುವ ಒಂದು ಮಂದವಾಗಿರುವಿಕೆಯು ಪ್ರತಿ ಕೊಳವೆಯನ್ನು ಸುತ್ತುವರೆಯುವವರೆಗೂ ಇದು ಮುಂದುವರೆಯುತ್ತದೆ, ಮತ್ತು ತಂಪಾಗಿಸುವ ವ್ಯವಸ್ಥೆಯು ಮುಚ್ಚಿಕೊಳ್ಳುತ್ತದೆ. ಹಾಲುಕರೆಯುವ ಕಾರ್ಯಾಚರಣೆಯು ಆರಂಭವಾದಾಗ, ಕೇವಲ ಹಾಲು-ಕ್ಷೋಭಕ ಸಾಧನದ ಮತ್ತು ಮಂಜುಗಡ್ಡೆ ಹಾಗೂ ತೊಟ್ಟಿಯ ಉಕ್ಕಿನ ಗೋಡೆಗಳಿಗೆ ಅಡ್ಡಲಾಗಿ ನೀರನ್ನು ಹರಿಸುವ ನೀರು ಪ್ರಸರಣ ಪಂಪಿನ ಅಗತ್ಯ ಕಂಡುಬರುತ್ತದೆ; 40 ಡಿಗ್ರಿಗಳಿಗಿಂತ ಕಡಿಮೆಯಿರುವ ಒಂದು ತಾಪಮಾನಕ್ಕೆ ಒಳಬರುವ ಹಾಲನ್ನು ತಗ್ಗಿಸುವ ಸಲುವಾಗಿ ಈ ಅಗತ್ಯ ಕಂಡುಬರುತ್ತದೆ ಎಂದು ಹೇಳಬಹುದು.

ಈ ತಂಪಾಗಿಸುವ ವಿಧಾನವು ಚಿಕ್ಕದಾದ ಹೈನುಗಾರಿಕಾ ತಾಣಗಳಿಗೆ ಸಂಬಂಧಿಸಿದಂತೆ ಚೆನ್ನಾಗಿ ಹೊಂದಿಕೊಂಡಿತಾದರೂ, ಅಷ್ಟೊಂದು ಪರಿಣಾಮಕಾರಿಯಾಗಿರಲಿಲ್ಲ ಮತ್ತು ದೊಡ್ಡದಾದ ಹಾಲುಕರೆಯುವ ಕೋಣೆಗಳಿಗೆ ಅಗತ್ಯವಿರುವ ಸಾಕಷ್ಟು ಹೆಚ್ಚಿನ ಮಟ್ಟದ ತಂಪಾಗಿಸುವ ಬೇಡಿಕೆಯನ್ನು ಈಡೇರಿಸುವಲ್ಲಿ ಅಸಮರ್ಥವಾಗಿತ್ತು. 1950ರ ದಶಕದ ಮಧ್ಯಭಾಗದಲ್ಲಿ, ನೇರ ವಿಸ್ತರಣೆಯ ಶೈತ್ಯೀಕರಣವನ್ನು ಭಾರೀ ಗಾತ್ರದ ಹಾಲಿನ ಶೀತಕಕ್ಕೆ ನೇರವಾಗಿ ಮೊದಲಿಗೆ ಪ್ರಯೋಗಿಸಲಾಯಿತು. ಹಾಲಿನಿಂದ ಶಾಖವನ್ನು ತೆಗೆಯಲೆಂದು ಸಂಗ್ರಹಣಾ ತೊಟ್ಟಿಯ ಒಳಗಿನ ಗೋಡೆಯೊಳಗೆ ನೇರವಾಗಿ ನಿರ್ಮಿಸಲಾದ ಒಂದು ಬಾಷ್ಪೀಕರಣ ಕೋಶವನ್ನು ಈ ಬಗೆಯ ತಂಪಾಗಿಸುವಿಕೆಯು ಬಳಸಿಕೊಳ್ಳುತ್ತದೆ. ಹಿಂದೆ ಅಸ್ತಿತ್ವದಲ್ಲಿದ್ದ ಮಂಜುಗಡ್ಡೆ ಬ್ಯಾಂಕಿನ ಬಗೆಯ ಶೀತಕಗಳಿಗಿಂತ ಸಾಕಷ್ಟು ವೇಗವಾಗಿರುವ ಒಂದು ಪ್ರಮಾಣದಲ್ಲಿ ಹಾಲನ್ನು ತಂಪಾಗಿಸುವ ಸಾಮರ್ಥ್ಯವನ್ನು ನೇರ ವಿಸ್ತರಣೆಯು ಹೊಂದಿದೆ ಮತ್ತು ಇಂದು ಸಣ್ಣದರಿಂದ ಮಧ್ಯಮ ಗಾತ್ರದವರೆಗಿನ ಕಾರ್ಯಾಚರಣೆಗಳಲ್ಲಿ ಭಾರೀ ಗಾತ್ರದ ತೊಟ್ಟಿಯನ್ನು ತಂಪಾಗಿಸುವುದಕ್ಕೆ ಸಂಬಂಧಿಸಿದಂತೆ ಇದು ಈಗಲೂ ಪ್ರಧಾನ ವಿಧಾನವಾಗಿದೆ.

ಫಲಕ ಶಾಖ ವಿನಿಮಯಕಾರಿಯು (ಪ್ಲೇಟ್‌ ಹೀಟ್‌ ಎಕ್ಸ್‌ಚೇಂಜರ್‌-PHE) ಹಾಲಿನ ಗುಣಮಟ್ಟಕ್ಕೆ ಗಣನೀಯವಾಗಿ ಕೊಡುಗೆ ನೀಡಿದ ಮತ್ತೊಂದು ಸಾಧನವಾಗಿದೆ. ತಮ್ಮ ನಡುವೆ ಚಿಕ್ಕ ಸ್ಥಳಾವಕಾಶಗಳನ್ನು ಹೊಂದಿರುವ, ವಿಶೇಷವಾಗಿ ವಿನ್ಯಾಸಗೊಳಿಸಲಾದ ಸ್ಟೇನ್‌ಲೆಸ್‌‌ನ ಅನೇಕ ಉಕ್ಕಿನ ಫಲಕಗಳನ್ನು ಈ ಸಾಧನವು ಬಳಸಿಕೊಳ್ಳುತ್ತದೆ.

ಇತರ ಪ್ರತಿ ಜೋಡಿ ಫಲಕಗಳ ನಡುವೆ ಹಾಲನ್ನು ಹಾಯಿಸಲಾಗುತ್ತದೆ ಮತ್ತು ಹಾಲಿನಿಂದ ಶಾಖವನ್ನು ತೆಗೆಯುವ ಸಲುವಾಗಿ, ಫಲಕಗಳ ಸಮತೋಲನದ ನಡುವೆ ನೀರನ್ನು ಹಾಯಿಸಲಾಗುತ್ತದೆ. ತಂಪಾಗಿಸುವ ಈ ವಿಧಾನವು ಅತ್ಯಂತ ಅಲ್ಪಾವಧಿಯಲ್ಲಿ ಹಾಲಿನಿಂದ ಶಾಖವನ್ನು ಬೃಹತ್‌‌ ಪ್ರಮಾಣಗಳಲ್ಲಿ ತೆಗೆಯಬಲ್ಲದು; ಹೀಗಾಗಿ ಬ್ಯಾಕ್ಟೀರಿಯಾದ ಬೆಳವಣಿಗೆಯು ತೀವ್ರವಾಗಿ ನಿಧಾನಗೊಳಿಸಲ್ಪಡುತ್ತದೆ ಹಾಗೂ ಅದರಿಂದಾಗಿ ಹಾಲಿನ ಗುಣಮಟ್ಟವು ಸುಧಾರಿಸುತ್ತದೆ. ಈ ಸಾಧನಕ್ಕೆ ಸಂಬಂಧಿಸಿದಂತೆ, ಅಂತರ್ಜಲವು ತಂಪಾಗಿಸುವ ಮಾಧ್ಯಮದ ಅತ್ಯಂತ ಸಾಮಾನ್ಯ ಮೂಲವಾಗಿದೆ. ಉತ್ಪಾದನೆಯಾದ ಪ್ರತಿ ಗ್ಯಾಲನ್‌ ಹಾಲಿಗೆ ಸರಿಸುಮಾರಾಗಿ 3 ಗ್ಯಾಲನ್ನುಗಳಷ್ಟು ನೀರನ್ನು ಹೈನು ಹಸುಗಳು ಸೇವಿಸುತ್ತವೆ ಮತ್ತು ಕುಡಿಯಲು ತಣ್ಣಗಿನ ಅಂತರ್ಜಲಕ್ಕೆ ಪ್ರತಿಯಾಗಿ ಕೊಂಚವೇ ಬೆಚ್ಚಗಿನ ನೀರಿಗೆ ಆದ್ಯತೆ ನೀಡುತ್ತವೆ. ಈ ಕಾರಣಕ್ಕಾಗಿಯೇ, ತೀವ್ರವಾಗಿ ಸುಧಾರಿಸಲ್ಪಟ್ಟ ಹಾಲಿನ ಗುಣಮಟ್ಟವನ್ನು ನೀಡುವಲ್ಲಿ PHEಗಳು ಸಮರ್ಥವಾಗಿರುತ್ತವೆ; ಅಷ್ಟೇ ಅಲ್ಲ, ಹೈನುಗಾರರ ಭಾರೀ ಗಾತ್ರದ ಹಾಲು ಶೀತಕದ ಮೇಲಿನ ಶೈತ್ಯೀಕರಣದ ಹೊರೆಯನ್ನು ತಗ್ಗಿಸುವ ಮೂಲಕ ಅವರಿಗೆ ಸಂಬಂಧಿಸಿದ ನಿರ್ವಹಣಾ ವೆಚ್ಚಗಳನ್ನು ತಗ್ಗಿಸಬಲ್ಲ, ಮತ್ತು ಬೆಚ್ಚಗಿರುವ ಸಿಹಿನೀರಿನ ಒಂದು ಮೂಲವನ್ನು ಹಸುಗಳಿಗೆ ಪೂರೈಕೆ ಮಾಡುವ ಮೂಲಕ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಬಲ್ಲ ಸಾಮರ್ಥ್ಯವನ್ನು PHEಗಳು ಹೊಂದಿವೆ.

USನಲ್ಲಿನ ಹೈನು ಕೇಂದ್ರದ ಹಿಂಡಿನ ಗಾತ್ರಗಳ ಹೆಚ್ಚಳದ ಒಂದು ಫಲವಾಗಿ, ಫಲಕ ಶಾಖ ವಿನಿಮಯಕಾರಿಗಳು ವಿಕಸನಗೊಂಡಿವೆ. ಹೈನುಗಾರನೊಬ್ಬನು ತನ್ನ ಹಿಂಡಿನ ಗಾತ್ರವನ್ನು ಹೆಚ್ಚಿಸಿದಂತೆ, ಹೆಚ್ಚುವರಿ ಹಾಲನ್ನು ಜೋಪಾನ ಮಾಡುವ ದೃಷ್ಟಿಯಿಂದ ಅವನು ತನ್ನ ಹೈನು ಕೇಂದ್ರದ ಹಾಲುಕರೆಯುವ ಕೋಣೆಯ ಸಾಮರ್ಥ್ಯವನ್ನೂ ಹೆಚ್ಚಿಸಬೇಕಾಗುತ್ತದೆ. ಕೋಣೆಯ ಗಾತ್ರಗಳಲ್ಲಿನ ಈ ಹೆಚ್ಚಳವು ಹಾಲಿನ ಕಚ್ಚಾವಸ್ತುವಿನ ಪ್ರಮಾಣ ಮತ್ತು ತಂಪಾಗಿಸುವ ವ್ಯವಸ್ಥೆಯ ಬೇಡಿಕೆಯಲ್ಲಿನ ಪ್ರಚಂಡ ಹೆಚ್ಚಳಗಳಿಗೆ ಕಾರಣವಾಗಿದೆ. ಭಾರೀ ಗಾತ್ರದ ಹಾಲು ಶೀತಕಗಳಲ್ಲಿನ ನೇರ ವಿಸ್ತರಣೆಯ ಶೈತ್ಯೀಕರಣ ವ್ಯವಸ್ಥೆಗಳು ಒಂದು ಸಕಾಲಿಕ ವಿಧಾನದಲ್ಲಿ ತಂಪಾಗಿಸಲು ಸಾಧ್ಯವಾಗದ ಒಂದು ಪ್ರಮಾಣದಲ್ಲಿ, ಇಂದಿನ ದೊಡ್ಡದಾದ ಹೈನುಕೇಂದ್ರಗಳು ಹಾಲನ್ನು ಉತ್ಪಾದಿಸುತ್ತವೆ. ಭಾರೀ ಗಾತ್ರದ ಹಾಲಿನ ತೊಟ್ಟಿಯನ್ನು ಹಾಲು ತಲುಪುವುದಕ್ಕೆ ಮುಂಚಿತವಾಗಿ ಬಯಸಿದ ತಾಪಮಾನಕ್ಕೆ (ಅಥವಾ ಅದಕ್ಕೆ ಸನಿಹವಿರುವ ಮಟ್ಟಕ್ಕೆ) ಅದನ್ನು ಕ್ಷಿಪ್ರವಾಗಿ ತಂಪಾಗಿಸಲೆಂದು ಇರುವ ಈ ನಿದರ್ಶನದಲ್ಲಿ, PHEಗಳು ವಿಶಿಷ್ಟವಾದ ರೀತಿಯಲ್ಲಿ ಬಳಸಲ್ಪಟ್ಟಿವೆ. ವಿಶಿಷ್ಟವೆಂಬಂತೆ, 55 ಮತ್ತು 70 ಡಿಗ್ರಿಗಳ ಫ್ಯಾರನ್‌ಹೀಟ್‌ (F) ನಡುವಿನ ಮಟ್ಟಕ್ಕೆ ಹಾಲನ್ನು ತರಲು, ಒಂದಷ್ಟು ಆರಂಭಿಕ ತಂಪಾಗಿಸುವ ವ್ಯವಸ್ಥೆಯನ್ನು ಒದಗಿಸುವ ದೃಷ್ಟಿಯಿಂದ, ಅಂತರ್ಜಲವನ್ನು ಈಗಲೂ ಬಳಸಲಾಗುತ್ತದೆ. ಶೀತಲವಾಗಿರುವ ಅಪ್ಪಟ ನೀರು ಮತ್ತು ಪ್ರಾಪಿಲೀನ್‌‌ ಗ್ಲೈಕಾಲ್‌‌ನ ಒಂದು ಮಿಶ್ರಣವನ್ನು ಬಳಸಿಕೊಂಡು ಉಳಿದಿರುವ ಶಾಖವನ್ನು ತೆಗೆಯಲು, PHEಯ ಒಂದು ಎರಡನೇ (ಮತ್ತು ಕೆಲವೊಮ್ಮೆ ಮೂರನೇ) ವಿಭಾಗವನ್ನು ಸೇರಿಸಲಾಗುತ್ತದೆ. ಹಾಲಿನ ಹೆಚ್ಚಿನ ಹರಿವಿನ ಪ್ರಮಾಣಗಳನ್ನು ತಂಪಾಗಿಸುವ ಸಲುವಾಗಿ ಬೃಹತ್‌‌ ಗಾತ್ರದ ಬಾಷ್ಪೀಕರಣ ಕೋಶದ ಮೇಲ್ಮೈ ಪ್ರದೇಶಗಳು ಮತ್ತು ಹೆಚ್ಚು ಶೀತಲವಾಗಿರುವ ನೀರು ಹರಿವಿನ ಪ್ರಮಾಣಗಳನ್ನು ಅಳವಡಿಸಲು, ಈ ತಣ್ಣಗಿರಿಸುವ ವ್ಯವಸ್ಥೆಗಳನ್ನು ರೂಪಿಸಬಹುದಾಗಿದೆ.

ಹಾಲುಕರೆಯುವ ಕಾರ್ಯಾಚರಣೆ

[ಬದಲಾಯಿಸಿ]

15 to 21 pounds per square inch (100 to 140 kPa)ನಷ್ಟಿರುವ ನಿರ್ವಾತದಿಂದ ಕೆಳಗಿರುವ ಸುತ್ತುವರೆದಿರುವ ಗಾಳಿಯ ಒತ್ತಡವನ್ನು ಸೆಳೆಯುವ ಒಂದು ನಿರ್ವಾತ ವ್ಯವಸ್ತೆಯಿಂದ ಹಾಲುಕರೆಯುವ ಯಂತ್ರಗಳು ತಾನೇತಾನಾಗಿ ಯುಕ್ತ ಸ್ಥಳದಲ್ಲಿ ಹಿಡಿದಿಡಲ್ಪಟ್ಟಿರುತ್ತವೆ. ಚಿಕ್ಕ ವ್ಯಾಸದ ಮೆದು ನೀರ್ಕೊಳವೆಗಳ ಮೂಲಕ ಹಾಲನ್ನು ಲಂಬವಾಗಿ ಮೇಲಕ್ಕೆತ್ತಿ, ಸ್ವೀಕರಿಸುವ ಕ್ಯಾನ್‌ನೊಳಗೆ ಹರಿಸಲೆಂದೂ ಸಹ ನಿರ್ವಾತವು ಬಳಸಲ್ಪಡುತ್ತದೆ. ಸ್ವೀಕರಿಸುವ ಕ್ಯಾನ್‌ನಿಂದ ಹಾಲನ್ನು ಮೇಲೆತ್ತುವ ಒಂದು ಪಂಪು ಹಾಲನ್ನು ಸೆಳೆಯುತ್ತದೆ; ಫಲಕ ಶೀತಕದ ಮೂಲಕ, ಬೃಹತ್‌‌ ವ್ಯಾಸದ ಸ್ಟೇನ್‌ಲೆಸ್‌‌ ಉಕ್ಕಿನ ಕೊಳವೆ ವ್ಯವಸ್ಥೆಯ ಮೂಲಕ ಇದು ನೆರವೇರುತ್ತದೆ ಮತ್ತು ನಂತರದಲ್ಲಿ ಶೀತಕಗೊಳಿಸಲಾದ ಒಂದು ಭಾರೀ ತೊಟ್ಟಿಗೆ ಅದು ತಲುಪುತ್ತದೆ.

ಒಳಪದರದ ಆಸ್ತರಿಯ ಸಾಮಗ್ರಿಗಳು ಅಥವಾ ಉಬ್ಬುಗಳು ಎಂದು ಕರೆಯಲ್ಪಡುವ ಹೊಂದಿಕೊಳ್ಳುವ ರಬ್ಬರಿನ ಕೋಶಗಳ ನೆರವಿನಿಂದ ಹಸುವಿನ ಕೆಚ್ಚಲಿನಿಂದ ಹಾಲು ಸೆಳೆಯಲ್ಪಡುತ್ತದೆ. ಈ ಉಬ್ಬುಗಳು ಒಂದು ಬಾಗದ ಗಾಳಿಕೋಣೆಯಿಂದ ಸುತ್ತುವರೆಯಲ್ಪಟ್ಟಿರುತ್ತವೆ. ಹಾಲುಕರೆಯುವ ಪ್ರಕ್ರಿಯೆಯ ಸಂದರ್ಭದಲ್ಲಿ ಉಬ್ಬಿದ ಸ್ಥಿತಿಯ ಗಾಳಿ ಕೋಣೆಗೆ, ಸುತ್ತುವರೆದಿರುವ ಗಾಳಿ ಮತ್ತು ನಿರ್ವಾತದ ಒಂದು ಅದಿರಾಡುವ ಹರಿವನ್ನು ಪ್ರಯೋಗಿಸಲಾಗುತ್ತದೆ. ಕೋಣೆಯನ್ನು ಪ್ರವೇಶಿಸಲು ಸುತ್ತುವರೆದಿರುವ ಗಾಳಿಗೆ ಅವಕಾಶ ನೀಡಿದಾಗ, ಉಬ್ಬಿನೊಳಗಿನ ನಿರ್ವಾತವು ಹಸುವಿನ ಕೆಚ್ಚಲಿನ ಸುತ್ತಲೂ ಕುಸಿತವನ್ನು ಉಂಟುಮಾಡುತ್ತದೆ; ಹೀಗಾದಾಗ ಒಂದು ಮರಿಕರುವು ಕೆಚ್ಚಲಿಗೆ ಬಾಯಿ ಉಜ್ಜುವ ಶೈಲಿಯ ಸ್ಥಿತಿ ನಿರ್ಮಾಣವಾಗಿ, ಕೆಚ್ಚಲಿನಿಂದ ಹಾಲು ಹೊರಗೆ ಹಿಂಡಲ್ಪಡುತ್ತದೆ. ಕೋಣೆಯಲ್ಲಿ ನಿರ್ವಾತವನ್ನು ಮರು ಪ್ರಯೋಗಿಸಿದಾಗ, ಹೊಂದಿಕೊಳ್ಳುವ ರಬ್ಬರಿನ ಉಬ್ಬಿದ ಸ್ಥಿತಿಯು ಸಡಿಲವಾಗಿ ತೆರೆದುಕೊಳ್ಳುತ್ತದೆ ಹಾಗೂ ಹಾಲುಹಿಂಡುವ ಮುಂದಿನ ಆವರ್ತನಕ್ಕೆ ಸಜ್ಜುಗೊಳ್ಳುತ್ತದೆ.

ಒಂದು ಸಾಧಾರಣ ಹಸುವು ತನ್ನ ಹಾಲನ್ನು ನೀಡಬೇಕೆಂದರೆ ಅದಕ್ಕೆ ಮೂರರಿಂದ ಐದು ನಿಮಿಷಗಳವರೆಗಿನ ಅವಧಿ ಹಿಡಿಯುತ್ತದೆ. ಕೆಲವೊಂದು ಹಸುಗಳು ವೇಗವಾಗಿರುತ್ತವೆ ಅಥವಾ ನಿಧಾನವಾಗಿರುತ್ತವೆ. ನಿಧಾನವಾಗಿ-ಹಾಲುಕರೆಯುವ ಹಸುಗಳು ತಮ್ಮೆಲ್ಲಾ ಹಾಲಿನ ಪ್ರಮಾಣವನ್ನು ಕೆಳಗಿಳಿಸಲು ಹದಿನೈದು ನಿಮಿಷಗಳವರೆಗಿನ ಕಾಲಾವಕಾಶವನ್ನು ತೆಗೆದುಕೊಳ್ಳಬಹುದು. ಹಾಲುಕರೆಯುವ ವೇಗವು ಹಸುವು ಉತ್ಪಾದಿಸುವ ಹಾಲಿನ ಪ್ರಮಾಣಕ್ಕೆ ಕೇವಲ ಗೌಣವಾಗಿ ಸಂಬಂಧಿಸಿದೆ- ಹಾಲುಕರೆಯುವ ವೇಗವು ಹಾಲಿನ ಪ್ರಮಾಣದಿಂದ ಪ್ರತ್ಯೇಕಿಸಲ್ಪಟ್ಟ ಒಂದು ಅಂಶವಾಗಿದೆ; ಹಾಲಿನ ಪ್ರಮಾಣವು ಹಾಲುಕರೆಯುವ ವೇಗದ ನಿರ್ಣಾಯಕ ಅಂಶವಲ್ಲ. ಏಕೆಂದರೆ, ಬಹುಪಾಲು ಹಾಲು ಕರೆಯುವ ಸಾಧನಗಳು ಗುಂಪುಗಳಲ್ಲಿರುವ ಹಸುಗಳಿಂದ ಹಾಲು ಕರೆಯುತ್ತವೆ; ಹೀಗಾಗಿ ಅತ್ಯಂತ ನಿಧಾನವಾಗಿ-ಹಾಲುಕರೆಯುವ ಹಸುವಿನ ವೇಗದಲ್ಲಿ ಮಾತ್ರವೇ, ಹಾಲು ಕರೆಯುವ ಸಾಧನಗಳು ಹಸುಗಳ ಒಂದು ಸಮೂಹದಲ್ಲಿ ತಮ್ಮ ಪ್ರಕ್ರಿಯೆಯನ್ನು ನಡೆಸಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಅನೇಕ ಕೃಷಿಕರು ನಿಧಾನವಾಗಿ ಹಾಲುಕರೆಯುವ ಹಸುಗಳನ್ನು ತೆಗೆದುಹಾಕುತ್ತಾರೆ.

ಸೆಳೆಯಲ್ಪಟ್ಟ ಹಾಲು ತೊಟ್ಟಿಗೆ ಪ್ರವೇಶಿಸುವುದಕ್ಕೆ ಮುಂಚಿತವಾಗಿ ಒಂದು ಜರಡಿ ಮತ್ತು ಫಲಕ ಶಾಖ ವಿನಿಮಯಕಾರಿಗಳ ಮೂಲಕ ಹಾದುಹೋಗುತ್ತದೆ; ಸದರಿ ತೊಟ್ಟಿಯಲ್ಲಿ ಸರಿಸುಮಾರಾಗಿ 42 °F (6 °C)ನಷ್ಟು ತಾಪಮಾನದಲ್ಲಿ ಹಾಲನ್ನು ಕೆಲವು ದಿನಗಳವರೆಗೆ ಸುರಕ್ಷಿತವಾಗಿ ಸಂಗ್ರಹಿಸಿಡಲು ಸಾಧ್ಯವಿದೆ. ಪೂರ್ವ-ವ್ಯವಸ್ಥಿತ ಸಮಯಗಳಲ್ಲಿ, ಹಾಲಿನ ಟ್ರಕ್ಕೊಂದು ಆಗಮಿಸುತ್ತದೆ ಮತ್ತು ತೊಟ್ಟಿಯಿಂದ ಹಾಲನ್ನು ಪಂಪ್‌ಮಾಡಿಕೊಂಡು ಸಂಗ್ರಹಿಸಿ ಹೈನು ಕಾರ್ಖಾನೆಯೊಂದಕ್ಕೆ ಸಾಗಿಸುತ್ತದೆ. ಹಾಲು ಅಲ್ಲಿ ಪಾಶ್ಚರೀಕರಿಸಲ್ಪಟ್ಟು, ಅನೇಕ ಉತ್ಪನ್ನಗಳಾಗಿ ಸಂಸ್ಕರಿಸಲ್ಪಡುತ್ತದೆ.

ಬೃಹತ್‌‌ ಹೈನುಗಾರಿಕಾ ತಾಣಗಳಿಂದ ಬರುವ ಪ್ರಾಣಿ ತ್ಯಾಜ್ಯ

[ಬದಲಾಯಿಸಿ]
ಡೈರಿ CAFO - EPA

ರಂಜಕದ ಪ್ರಮಾಣದಲ್ಲಿ ಅಳೆಯಲಾದಂತೆ, ಸರಿಸುಮಾರು 70,000 ಜನರನ್ನು ಹೊಂದಿರುವ ಒಂದು ಪುರಸಭಾ ವ್ಯಾಪ್ತಿಯಲ್ಲಿ ಕಂಡುಬರಬಹುದಾದ ತ್ಯಾಜ್ಯದ ಪ್ರಮಾಣಕ್ಕೆ 5,000 ಹಸುಗಳಿಂದ ಹೊರಬರುವ ತ್ಯಾಜ್ಯದ ಪ್ರಮಾಣವು ಸಮನಾಗಿರುತ್ತದೆ.[] U.S.ನಲ್ಲಿ, 1,000ಕ್ಕೂ ಹೆಚ್ಚು ಸಂಖ್ಯೆಯ ಹಸುಗಳನ್ನು ಹೊಂದಿರುವ ಹೈನು ಕಾರ್ಯಾಚರಣೆಗಳು, ಒಂದು CAFOಗೆ (ಕಾನ್ಸೆಂಟ್ರೇಟೆಡ್‌ ಅನಿಮಲ್‌ ಫೀಡಿಂಗ್‌ ಆಪರೇಷನ್‌‌) ಸಂಬಂಧಿಸಿದ EPA ವ್ಯಾಖ್ಯಾನವನ್ನು ಈಡೇರಿಸುತ್ತವೆ, ಮತ್ತು ಅವು EPA ಕಟ್ಟುಪಾಡುಗಳಿಗೆ ಒಳಪಟ್ಟಿವೆ.[] ಉದಾಹರಣೆಗೆ, ಕ್ಯಾಲಿಫೋರ್ನಿಯಾದ ಸ್ಯಾನ್‌‌ ಜೊವಾಕ್ವಿನ್‌‌ ವ್ಯಾಲಿಯಲ್ಲಿ, ಒಂದು ಅತ್ಯಂತ ಬೃಹತ್ತಾದ ಪ್ರಮಾಣದಲ್ಲಿ ಅನೇಕ ಹೈನುಗಾರಿಕಾ ತಾಣಗಳು ಸ್ಥಾಪಿಸಲ್ಪಟ್ಟಿವೆ. ಒಂದು ಏಕ ಉದ್ಯಮವಾಗಿ ನಿರ್ವಹಿಸಲ್ಪಟ್ಟ ಹಲವಾರು ಆಧುನಿಕ ಹಾಲುಕರೆಯುವ ಕೋಣೆಗಳ ಸಜ್ಜಿಕೆಗಳನ್ನು ಪ್ರತಿ ಹೈನುಕೇಂದ್ರವೂ ಒಳಗೊಂಡಿರುತ್ತದೆ. ಪ್ರತಿ ಹಾಲುಕರೆಯುವ ಕೋಣೆಯೂ ಸಪಾಟಾಗಿರುವ 3 ಅಥವಾ 4 ಕೊಟ್ಟಿಗೆಗಳಿಂದ ಸುತ್ತುವರೆಯಲ್ಪಟ್ಟಿದ್ದು, 1,500 ಅಥವಾ 2,000 ಹಸುಗಳನ್ನು ಅವು ಒಳಗೊಂಡಿರುತ್ತವೆ. ಕೆಲವೊಂದು ದೊಡ್ಡದಾದ ಹೈನುಗಾರಿಕಾ ತಾಣಗಳು, ಸಪಾಟಾಗಿರುವ ಕೊಟ್ಟಿಗೆಗಳು ಮತ್ತು ಹಾಲುಕರೆಯುವ ಕೋಣೆಗಳ 10 ಅಥವಾ ಅದಕ್ಕೂ ಹೆಚ್ಚಿನ ಸರಣಿಯನ್ನು ಈ ವ್ಯವಸ್ಥೆಯಲ್ಲಿ ಯೋಜಿಸಿದ್ದು, ಒಟ್ಟು ಕಾರ್ಯಾಚರಣೆಯು 15,000 ಅಥವಾ 20,000 ಹಸುಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ. ಈ ಹೈನುಗಾರಿಕಾ ತಾಣಗಳಿಗೆ ಸಂಬಂಧಿಸಿದ ಹಾಲುಕರೆಯುವ ಪ್ರಕ್ರಿಯೆಯು, ಹಾಲುಕರೆಯುವ ಏಕ ಕೋಣೆಯನ್ನು ಹೊಂದಿದ್ದರೂ ಹಲವಾರು ಬಾರಿ ಪುನರಾವರ್ತಿಸಲ್ಪಡುವ ಒಂದು ಚಿಕ್ಕದಾದ ಹೈನುಕೇಂದ್ರದ ರೀತಿಯಲ್ಲೇ ಇರುತ್ತದೆ. ಹಸುಗಳ ಸಂಖ್ಯೆ ಮತ್ತು ಕೇಂದ್ರೀಕರಿಸುವಿಕೆಯು, ಗೊಬ್ಬರದ ನಿರ್ವಹಣೆ ಮತ್ತು ವಿಲೇವಾರಿಗೆ ಸಂಬಂಧಿಸಿದ ಪ್ರಮುಖ ಪರಿಸರೀಯ ಸಮಸ್ಯೆಗಳನ್ನು ಸೃಷ್ಟಿಸುತ್ತದೆ; ಗೊಬ್ಬರದ ಹರಡುವಿಕೆ ಮತ್ತು ಚೆದರಿಕೆಗೆ ಸಂಬಂಧಿಸಿದಂತೆ, ಅಥವಾ ಹಲವಾರು-ಎಕರೆಯಷ್ಟಿರುವ ಮೀಥೇನ್‌‌ ಸಂಗ್ರಾಹಕಗಳಿಗೆ ಸಂಬಂಧಿಸಿದಂತೆ ಈ ನಿಟ್ಟಿನಲ್ಲಿ ಗಣನೀಯ ಪ್ರಮಾಣದ ಬೆಳೆ ಭೂಮಿಯ ಪ್ರದೇಶಗಳ (ಎಕರೆಗೆ 5 ಅಥವಾ 6 ಹಸುಗಳಷ್ಟಿರುವ ಒಂದು ಅನುಪಾತದಲ್ಲಿ, ಅಥವಾ ಈ ಗಾತ್ರದ ಹೈನುಗಾರಿಕಾ ತಾಣಗಳಿಗೆ ಸಂಬಂಧಿಸಿದಂತೆ ಹಲವಾರು ಸಾವಿರ ಎಕರೆಗಳಷ್ಟು) ಅಗತ್ಯವು ಕಂಡುಬರುತ್ತದೆ. ಗೊಬ್ಬರ ನಿರ್ವಹಣೆಯೊಂದಿಗೆ ಸಂಬಂಧಿಸಿದ ಮೀಥೇನ್‌‌ ಅನಿಲದಿಂದ ಉಂಟಾಗುವ ವಾಯು ಮಾಲಿನ್ಯವೂ ಸಹ ಕಳವಳದ ಒಂದು ಪ್ರಮುಖ ವಿಷಯವಾಗಿದೆ. ಇದರ ಫಲವಾಗಿ, ಈ ಗಾತ್ರದ ಹೈನುಗಾರಿಕಾ ತಾಣಗಳನ್ನು ಅಭಿವೃದ್ಧಿಪಡಿಸುವುದರ ಕುರಿತಾದ ಪ್ರಸ್ತಾವನೆಗಳು ವಿವಾದಾಸ್ಪದವಾಗಬಲ್ಲವು ಮತ್ತು ಸಿಯೆರಾ ಕ್ಲಬ್‌‌ ಹಾಗೂ ಸ್ಥಳೀಯ ಕ್ರಿಯಾವಾದಿಗಳನ್ನು ಒಳಗೊಂಡಂತೆ ಪರಿಸರ ವಾದಿಗಳಿಂದ ಬರಬಹುದಾದ ಗಣನೀಯ ವಿರೋಧಕ್ಕೆ ಅವು ಪ್ರಚೋದನೆಯನ್ನು ನೀಡಬಹುದು.[][]

5,000 ಹಸುಗಳನ್ನು ಒಳಗೊಂಡಿರುವ ಹೈನುಕೇಂದ್ರವೊಂದು ನ್ಯೂಯಾರ್ಕ್‌ನ ಉತ್ತರಭಾಗದಲ್ಲಿ ಒಂದು ಭಾರೀ ಪ್ರಮಾಣದ ಗೊಬ್ಬರದ ಸುರಿತಕ್ಕೆ ಕಾರಣವಾಗಿ, ಅದರಿಂದ ಬ್ಲ್ಯಾಕ್‌ ರಿವರ್‌‌‌ನ 20-mile (32 km)ನಷ್ಟು ವ್ಯಾಪ್ತಿಯ ಪ್ರದೇಶವು ಮಲಿನಗೊಂಡು ಹಾಗೂ 375,000ದಷ್ಟು ಮೀನುಗಳು ಸತ್ತಾಗ, ಬೃಹತ್‌‌ ಹೈನುಗಾರಿಕಾ ತಾಣಗಳ ಸಂಭಾವ್ಯ ಪ್ರಭಾವವು ನಿರೂಪಿಸಲ್ಪಟ್ಟಂತಾಯಿತು. 2005ರ ಆಗಸ್ಟ್‌‌ 10ರಂದು, ಗೊಬ್ಬರ ಸಂಗ್ರಹಣೆಯ ಕೃತಕ ಕೊಳವೊಂದು ಕುಸಿದು, 3,000,000 US gallons (11,000,000 L; 2,500,000 imp gal)ನಷ್ಟು ಗೊಬ್ಬರವನ್ನು ಬ್ಲ್ಯಾಕ್‌ ರಿವರ್‌ಗೆ ಬಿಡುಗಡೆಮಾಡಿತು. ತರುವಾಯದಲ್ಲಿ, ಸದರಿ ಹೈನುಕೇಂದ್ರದ ವಿರುದ್ಧ ನ್ಯೂಯಾರ್ಕ್‌ನ ಪರಿಸರೀಯ ಸಂರಕ್ಷಣಾ ಇಲಾಖೆಯು 2.2 ದಶಲಕ್ಷ $ನಷ್ಟು ಮೊತ್ತದ ಒಂದು ಫೈಸಲಾತಿಯ ಅಥವಾ ಇತ್ಯರ್ಥದ ಪರಿಹಾರವನ್ನು ನೀಡುವಂತೆ ಆದೇಶ ನೀಡಿತು.[]

ನ್ಯೂಜಿಲೆಂಡ್‌ನಲ್ಲಿ, ಸಾಧಾರಣ ಹೈನು ಕೃಷಿಕನು 500 ಹಸುಗಳನ್ನು ಹೊಂದಿದ್ದು ದಿನವೊಂದಕ್ಕೆ ಅವುಗಳಿಂದ ಎರಡುಬಾರಿ ಹಾಲುಕರೆಯಲಾಗುತ್ತದೆ ಹಾಗೂ ಪ್ರತಿ ಹಾಲುಕರೆಯುವ ಅವಧಿಗೆ ಸುಮಾರು 2 ಗಂಟೆಗಳು ಹಿಡಿಯುತ್ತವೆ.[ಸೂಕ್ತ ಉಲ್ಲೇಖನ ಬೇಕು] ಎಲ್ಲಾ ಹಸುಗಳನ್ನು ಹುಲ್ಲುಗಾವಲಿನಲ್ಲಿ ಮೇಯಿಸಲಾಗುತ್ತದೆ.[clarification needed] ಹಾಲುಕರೆಯುವ ಕೊಟ್ಟಿಗೆಯಿಂದ ಬರುವ ಸಗಣಿ ಮತ್ತು ಮೂತ್ರವನ್ನು ಅಧಿಕ ಒತ್ತಡದ ಬೃಹತ್ತಾದ ನೀರ್ಕೊಳವೆಗಳ ಮೂಲಕ ಚರಂಡಿಗಳಿಗೆ ಹರಿಸಲಾಗುತ್ತದೆ ಮತ್ತು ಈ ಚರಂಡಿಗಳು ತೆರೆದ ತಿಪ್ಪೆಗಳೆಡೆಗೆ ಸಾಗುತ್ತವೆ. ಕಾಲಕ್ರಮೇಣ ಘನವಸ್ತುವು ತಳಭಾಗದಲ್ಲಿ ನೆಲೆಗೊಳ್ಳುತ್ತದೆ ಮತ್ತು ವರ್ಷಕ್ಕೊಮ್ಮೆ ಇದು ಟ್ರಕ್ಕಿನಿಂದ ತೆಗೆಯಲ್ಪಡುತ್ತದೆ. ಪ್ರಮುಖ ನದಿಗಳಿಗೆ ಮರಳಲೆಂದು ಸ್ವಾಭಾವಿಕ ಜೌಗು ಭೂಮಿ ಮತ್ತು ಉಪನದಿಗಳ ಮೂಲಕ ಜಿನುಗಲು ತುಲನಾತ್ಮಕವಾಗಿ ಶುದ್ಧವಾಗಿರುವ ನೀರಿಗೆ ಅವಕಾಶ ಕಲ್ಪಿಸಲಾಗುತ್ತದೆ. ನದಿಗಳನ್ನು ಪ್ರವೇಶಿಸುತ್ತಿರುವ ಆ ನೀರು ಕನಿಷ್ಟ ಪ್ರಮಾಣಕ-ದರ್ಜೆಗಳನ್ನು ಈಡೇರಿಸುತ್ತಿವೆಯೇ ಇಲ್ಲವೇ ಎಂಬುದನ್ನು ಸ್ಥಳೀಯ ಪ್ರಾಧಿಕಾರಗಳು ಪರೀಕ್ಷಿಸುತ್ತವೆ. ಪ್ರಮಾಣಕ-ದರ್ಜೆಗಳನ್ನು ಕೃಷಿಕರು ಈಡೇರಿಸಲಿ ಎಂಬ ಉದ್ದೇಶದಿಂದ, ಅವರ ಮೇಲೆ ದಂಡವಿಧಿಸಲಾಗುತ್ತದೆ ಮತ್ತು ಅವರ ವ್ಯವಸ್ಥೆಗಳನ್ನು ಬದಲಾಯಿಸಿಕೊಳ್ಳುವಂತೆ ಒತ್ತಾಯಿಸಲಾಗುತ್ತದೆ. ನಿಯಮಗಳು ಪದೇಪದೇ ಉಲ್ಲಂಘಿಸಲ್ಪಟ್ಟರೆ ಅಂಥ ಹೈನುಕೇಂದ್ರವು ಮುಚ್ಚಿಸಲ್ಪಡುತ್ತದೆ. ಸ್ಥಳೀಯ ಪರಿಷತ್ತುಗಳು ತಮ್ಮದೇ ಸ್ವಾಮ್ಯದ ಸಸಿತೋಟಗಳಲ್ಲಿ ಬೆಳೆದ ಸ್ಥಳೀಕ ಜೌಗುಭೂಮಿಯ ಸಸ್ಯಗಳನ್ನು ಬೃಹತ್‌ ಪ್ರಮಾಣದಲ್ಲಿ ಕಡಿಮೆ ಬೆಲೆಯಲ್ಲಿ ಅನೇಕ ವೇಳೆ ಪೂರೈಕೆ ಮಾಡುತ್ತವೆ. ಪರಿಸರೀಯ ಸಮೂಹಗಳು, ಮತ್ತು ಶಾಲೆಗಳು ತಮ್ಮ ವಿಜ್ಞಾನ ಕಾರ್ಯಸೂಚಿಯ ಅಂಗವಾಗಿ ಗಿಡಗಳನ್ನು ನೆಡುತ್ತವೆ. ಈ ನಿಟ್ಟಿನಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನಿರುದ್ಯೋಗಿಗಳ ಸಮೂಹಗಳೂ ತೊಡಗಿಸಿಕೊಳ್ಳುತ್ತವೆ.[ಸೂಕ್ತ ಉಲ್ಲೇಖನ ಬೇಕು]

ಹಾರ್ಮೋನುಗಳ ಬಳಕೆ

[ಬದಲಾಯಿಸಿ]

ರೀಕಾಂಬಿನೆಂಟ್‌ BST ಅಥವಾ rBGH ಎಂಬುದಾಗಿ ಕರೆಯಲ್ಪಡುವ ಬೆಳವಣಿಗೆ ಹಾರ್ಮೋನುಗಳನ್ನು ಹಸುಗಳ ಒಳಹೊಗಿಸುವ ಮೂಲಕ ಹೆಚ್ಚಿನ ಪ್ರಮಾಣದ ಹಾಲಿನ ಉತ್ಪಾದನೆಯನ್ನು ಕಾಯ್ದುಕೊಂಡು ಹೋಗುವುದು ಸಾಧ್ಯವಿದೆಯಾದರೂ, ಪ್ರಾಣಿಯ ಮೇಲೆ ಮತ್ತು ಪ್ರಾಯಶಃ ಮಾನವನ ಆರೋಗ್ಯದ ಮೇಲೆ ಅದು ಬೀರುವ ಪರಿಣಾಮಗಳ ಕಾರಣದಿಂದಾಗಿ ಇದು ವಿವಾದಾಸ್ಪದವಾಗಿದೆ. ಈ ಕಾಳಜಿಗಳನ್ನು ಗಮನದಲ್ಲಿಟ್ಟುಕೊಂಡೇ ಐರೋಪ್ಯ ಒಕ್ಕೂಟ, ಜಪಾನ್‌‌, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಮತ್ತು ಕೆನಡಾ ಮೊದಲಾದವುಗಳು ಇದರ ಬಳಕೆಯನ್ನು[][] ನಿಷೇಧಿಸಿವೆ.

ಆದಾಗ್ಯೂ, USನಲ್ಲಿ ಇಂಥ ಯಾವುದೇ ನಿಷೇಧವೂ ಅಸ್ತಿತ್ವದಲ್ಲಿಲ್ಲ, ಮತ್ತು ಸರಿಸುಮಾರಾಗಿ 17.2%ನಷ್ಟು ಹೈನು ಹಸುಗಳು ಈ ವಿಧಾನದಲ್ಲಿ ಉಪಚರಿಸಲ್ಪಡುತ್ತವೆ.[೧೦] U.S.ನ ಫುಡ್‌ ಅಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಷನ್‌‌ ಇಲಾಖೆಯು ತಿಳಿಸುವ ಪ್ರಕಾರ, ಉಪಚರಿಸಲಾದ ಮತ್ತು ಉಪಚರಿಸಲ್ಪಡದ ಹಸುಗಳಿಂದ[೧೧] ಪಡೆಯಲಾದ ಹಾಲುಗಳ ನಡುವೆ ಯಾವುದೇ "ಗಣನೀಯ ವ್ಯತ್ಯಾಸ"ವು ಕಂಡುಬಂದಿಲ್ಲ; ಆದರೆ, ಗ್ರಾಹಕರ ಕುರಿತಾದ ಕಾಳಜಿಗಳನ್ನು ಆಧರಿಸಿ, ಹಲವಾರು ಹಾಲು ಖರೀದಿದಾರರು ಮತ್ತು ಮರು-ಮಾರಾಟಗಾರರು rBSTಯನ್ನು ಬಳಕೆಮಾಡಿಕೊಂಡು ಉತ್ಪಾದಿಸಲ್ಪಟ್ಟ ಹಾಲನ್ನು ಖರೀದಿಸದಿರಲು ನಿರ್ಧರಿಸಿದ್ದಾರೆ. [೧೨][೧೩] [೧೩] [೧೪] [೧೫]

ಹಿಂಡಿನ ನಿರ್ವಹಣೆ

[ಬದಲಾಯಿಸಿ]

ಪ್ರತಿದಿನವು ಎರಡು ಅಥವಾ ಮೂರು ಬಾರಿ ಸಾಮಾನ್ಯವಾಗಿ ಹಾಲನ್ನು ನೀಡುವ ಹಸುಗಳಿಂದ ಪಡೆಯಲಾದ ಹಾಲನ್ನು ಜೋಪಾನಮಾಡಲು ಮತ್ತು ಸಂಗ್ರಹಿಸಿಟ್ಟುಕೊಳ್ಳಲು, ಆಧುನಿಕ ಹೈನು ಕೃಷಿಕರು ಹಾಲುಕರೆಯುವ ಯಂತ್ರಗಳನ್ನು ಮತ್ತು ಅತ್ಯಾಧುನಿಕವಾದ ಹಾಗೂ ಸಂಕೀರ್ಣವಾದ ಕೊಳಾಯಿ ವ್ಯವಸ್ಥೆಗಳನ್ನು ಬಳಸುತ್ತಾರೆ.ನ್ಯೂಜಿಲೆಂಡ್‌ನಲ್ಲಿ, ಒಂದು ಅತ್ಯುತ್ತಮ ಜೀವನ ಶೈಲಿಯನ್ನು ಅರಸುತ್ತಿರುವ ಕೆಲವೊಂದು[clarification needed] ಕೃಷಿಕರು ಪ್ರತಿದಿನ ಕೇವಲ ಒಂದುಬಾರಿ ಮಾತ್ರವೇ ಹಾಲುಕರೆಯುವ ಪರಿಪಾಠವನ್ನಿಟ್ಟುಕೊಂಡಿದ್ದು, ಹೆಚ್ಚಿನ ವಿರಾಮ ಸಮಯವನ್ನು ಹೊಂದುವ ಸಲುವಾಗಿ ಉತ್ಪಾದನೆಯಲ್ಲಿ ಕೊಂಚವೇ[ಸೂಕ್ತ ಉಲ್ಲೇಖನ ಬೇಕು] ಕಡಿತಮಾಡಿದ ಫಲವಾಗಿ ಲಭ್ಯವಾದ ಹಾಲನ್ನು ಮಾರಾಟಮಾಡುತ್ತಿದ್ದಾರೆ. ಬೇಸಿಗೆ ತಿಂಗಳುಗಳ ಅವಧಿಯಲ್ಲಿ, ದಿನ ಹಾಗೂ ರಾತ್ರಿಯ ಎರಡೂ ವೇಳೆಗಳಲ್ಲಿ ಹಸುಗಳನ್ನು ಹುಲ್ಲುಗಾವಲುಗಳಲ್ಲಿ ಮೇಯಿಸಲು ಬಿಡಲಾಗುತ್ತದೆ, ಮತ್ತು ನಂತರದಲ್ಲಿ ಹಾಲು ಕರೆಯಲೆಂದು ಕೊಟ್ಟಿಗೆಯೊಳಗೆ ಕರೆತರಲಾಗುತ್ತದೆ.

ಅನೇಕ[clarification needed] ಕೊಟ್ಟಿಗೆಗಳು ಕೊಟ್ಟಿಗೆಯ ರಚನೆಯ ವಾಸ್ತುಶೈಲಿಗೆ ಸುರಂಗ ಮಾರ್ಗದ ಗಾಳಿ-ಬೆಳಕಿನ ವ್ಯವಸ್ಥೆಯನ್ನೂ ಅಳವಡಿಸುತ್ತವೆ. ಈ ಗಾಳಿ-ಬೆಳಕಿನ ವ್ಯವಸ್ಥೆಯು ಅತೀವವಾಗಿ ಪರಿಣಾಮಕಾರಿಯಾಗಿದ್ದು, ರಚನೆಯ ಎರಡೂ ತುದಿಗಳನ್ನು ತೆರೆದಿರಿಸುತ್ತದೆ. ಇದರಿಂದಾಗಿ ತಂಪು ಗಾಳಿಯು ಕಟ್ಟಡದ ಮೂಲಕ ಪಸರಿಸಲು ಅವಕಾಶ ಸಿಕ್ಕಂತಾಗುತ್ತದೆ. ಈ ಬಗೆಯ ರಚನೆಯನ್ನು ಹೊಂದಿರುವ ಕೃಷಿಕರು ಬೇಸಿಗೆ ತಿಂಗಳುಗಳಲ್ಲಿ ಕಂಡುಬರುವ ಬಿಸಿಲುಗಂದು[clarification needed] ಸಮಸ್ಯೆ ಮತ್ತು ಕೆಚ್ಚಲುಗಳಿಗೆ ಆಗುವ ಹಾನಿಯನ್ನು ತಡೆಗಟ್ಟಲು, ಹಸುಗಳನ್ನು ಒಳಗಡೆ ಇರಿಸುತ್ತಾರೆ. ಚಳಿಗಾಲದ ತಿಂಗಳುಗಳ ಅವಧಿಯಲ್ಲಿ ಹಸುಗಳನ್ನು ಕೊಟ್ಟಿಗೆಯಲ್ಲಿ ಇರಿಸಬಹುದು. ಹೀಗೆ ಮಾಡುವುದರಿಂದ ಅವುಗಳ ಒಟ್ಟಾರೆ ಶರೀರ-ಶಾಖದಿಂದ ಕೊಟ್ಟಿಗೆಯು ಬೆಚ್ಚಗಾಗುತ್ತದೆ. ಚಳಿಗಾಲದಲ್ಲಿಯೂ ಸಹ, ಹಸುಗಳಿಂದ ಶಾಖವು ಉತ್ಪಾದಿಸಲ್ಪಡುವುದರಿಂದಾಗಿ ಕೊಟ್ಟಿಗೆಗಳನ್ನು ತಂಪಾಗಿಸುವ ಉದ್ದೇಶಗಳಿಗಾಗಿ ಗಾಳಿ-ಬೆಳಕಿನ ಅಗತ್ಯವು ಕಂಡುಬರುತ್ತದೆ. ಅನೇಕ[clarification needed] ಆಧುನಿಕ ಸೌಕರ್ಯಗಳು, ಮತ್ತು ನಿರ್ದಿಷ್ಟವಾಗಿ ಉಷ್ಣವಲಯದ ಪ್ರದೇಶಗಳಲ್ಲಿನ ಸೌಕರ್ಯಗಳು, ಹಿಂಡಿನ ನಿರ್ವಹಣೆಯನ್ನು ಸರಾಗಗೊಳಿಸುವ ದೃಷ್ಟಿಯಿಂದ ಎಲ್ಲಾ ಪ್ರಾಣಿಗಳನ್ನು ಒಳಗಡೆಯೇ ಇರಿಸುತ್ತವೆ.

ಆಶ್ರಯವು ಮಳಿಗೆಗಳ ಸ್ವರೂಪದಲ್ಲಿ ವಿರಳವಾಗಿರಬಹುದು (UKಯಲ್ಲಿ ಇವನ್ನು ಹಸುವಿನ ಕಿರುಕೋಣೆಗಳು ಎಂದು ಕರೆಯಲಾಗುತ್ತದೆ). ಹಸುವಿನ ಮಳಿಗೆಗಳಿಗೆ ಸಂಬಂಧಿಸಿ ಅಗತ್ಯವಿರುವ ಪರಿಮಾಣ ಅಥವಾ ಆಯಾಮಗಳ ಕುರಿತಾಗಿ ಅಲ್ಪ ಪ್ರಮಾಣದ ಸಂಶೋಧನೆಯು ಲಭ್ಯವಿದೆ, ಮತ್ತು ಬಹುಪಾಲು ಆಶ್ರಯವು ಗತಕಾಲದ್ದಾಗಿರಬಹುದು; ಆದಾಗ್ಯೂ, ಪ್ರಯೋಜನಗಳ ಕುರಿತಾಗಿ ಕಂಪನಿಗಳು ಹೆಚ್ಚಿನ ರೀತಿಯಲ್ಲಿ ಕೃಷಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಅದು ಪ್ರಾಣಿಗಳ ಯೋಗಕ್ಷೇಮ, ಆರೋಗ್ಯ ಮತ್ತು ಹಾಲಿನ ಉತ್ಪಾದನೆಯ ಸ್ವರೂಪದಲ್ಲಿದೆ.[ಸೂಕ್ತ ಉಲ್ಲೇಖನ ಬೇಕು]

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಂಥ ದಕ್ಷಿಣಾರ್ಧ ಗೋಳದ ಪ್ರದೇಶಗಳಲ್ಲಿ, ಹಸುಗಳು ತಮ್ಮ ಬಹುಪಾಲು ಸಮಯವನ್ನು ಹೊರಗಡೆ ಮೇಯುವಲ್ಲಿಯೇ ಕಳೆಯುತ್ತವಾದರೂ, ಹುಲ್ಲಿನ ಲಭ್ಯತೆಯು ಕಡಿಮೆಯಿದ್ದಂಥ ಸಂದರ್ಭಗಳಲ್ಲಿ ಅವುಗಳಿಗೆ ಕೊರತೆಯನ್ನು ತುಂಬಿಕೊಡಲಾಗುತ್ತದೆ.[೧೬] NZನಲ್ಲಿರುವ ವಿಶಿಷ್ಟವಾದ ಪೂರಕ-ಪಶು ಆಹಾರಗಳೆಂದರೆ ಒಣಹುಲ್ಲು, ಹಗೇವಿನಲ್ಲಿ ಕೂಡಿಟ್ಟ ಮೇವು ಅಥವಾ ಬೀಸಿದ ಮೆಕ್ಕೆಜೋಳ.NZನಲ್ಲಿ, ತುಳಿದುಹಾಕುವಿಕೆಯಿಂದಾಗಿ ಪಶು ಆಹಾರದ ನಷ್ಟವಾಗುವುದನ್ನು ತಡೆಗಟ್ಟಲು, ಒಂದು ಕಾಂಕ್ರೀಟಿನ ಪಟ್ಟಿಯ ಮೇಲೆ ಹಸುಗಳನ್ನು ಪೋಷಿಸುವ ಪ್ರವೃತ್ತಿ ಕಂಡುಬರುತ್ತದೆ.NZನಲ್ಲಿ, ನಿಧಾನವಾಗಿ ಬೆಳೆಯುವ ಚಳಿಗಾಲದ ಹಸಿಹುಲ್ಲನ್ನು ನಿಗದಿತ ಪ್ರಮಾಣದಲ್ಲಿ ನೀಡಲಾಗುತ್ತದೆ. ಹಗುರ ತೂಕದ, ಒಯ್ಯಬಹುದಾದ ವಿದ್ಯುತ್‌‌ ಬ್ರೇಕ್‌ನ ಪೋಷಕ ಬೇಲಿಗಳಿಂದ ಇದು ಜಾಗರೂಕವಾಗಿ ನಿಯಂತ್ರಿಸಲ್ಪಡುತ್ತದೆ ಹಾಗೂ ಅವು ಕೆಲವೇ ನಿಮಿಷಗಳಲ್ಲಿ ಕೃಷಿಕನಿಂದ ಚಾಲಿಸಲ್ಪಡಬಹುದಾದ ಕೇಂದ್ರೀಯ ವಿತರಣಾ ವ್ಯವಸ್ಥೆಯ ವಿದ್ಯುತ್‌ ಬಲದಿಂದ ಓಡುತ್ತವೆ.

ಹಾಲಿನ ಉತ್ಪಾದನೆಯಾಗಬೇಕೆಂದರೆ ಹಸುವು ಕ್ಷೀರೋತ್ಪತ್ತಿಯ ಸ್ಥಿತಿಯಲ್ಲಿ (ಕೆಚ್ಚಲಿನಲ್ಲಿ ಹಾಲು ಒಸರುವಿಕೆಯ ಸ್ಥಿತಿಯಲ್ಲಿ) ಇರುವುದು ಅಗತ್ಯವಾಗಿರುತ್ತದೆ; ಈ ಸ್ಥಿತಿಯು ಹಸುವು ಕರುವೊಂದಕ್ಕೆ ಜನ್ಮ ನೀಡಿದ್ದರ ಫಲವಾಗಿ ಒದಗಿಸ ಸ್ಥಿತಿಯಾಗಿರುತ್ತದೆ. ಗರ್ಭಾಧಾನ, ಗರ್ಭಾವಸ್ಥೆ, ಹೆರಿಗೆ, ಮತ್ತು ಮೊಲೆಹಾಲು ಒಸರುವುದರ ಆವರ್ತನ ಹಾಗೂ ಇದನ್ನು ಅನುಸರಿಸಿಕೊಂಡು ಬರುವ, ಕರುಹಾಕುವಿಕೆಯ ಮುಂಚಿನ ಕೆಲವು ವಾರಗಳ "ಶುಷ್ಕ" ಅವಧಿಯು ಕೆಚ್ಚಲು ಅಂಗಾಂಶವು ಪುನರುತ್ಪತ್ತಿಯಾಗಲು ಅವಕಾಶ ಮಾಡಿಕೊಡುತ್ತದೆ. ಆದ್ದರಿಂದ ಹೈನುಕೇಂದ್ರದ ಕಾರ್ಯಾಚರಣೆಗಳು ಹಾಲಿನ ಉತ್ಪಾದನೆ ಹಾಗೂ ಕರುಗಳ ಉತ್ಪಾದನೆ ಈ ಎರಡನ್ನೂ ಒಳಗೊಂಡಿರುತ್ತವೆ. ಹೋರಿ ಕರುಗಳು ಒಂದೋ ಬೀಜ ಒಡೆಯಲ್ಪಟ್ಟ ಮತ್ತು ದನದ ಮಾಂಸದ ಉತ್ಪಾದನೆಗಾಗಿ ಬೆಳೆಸಲ್ಪಟ್ಟ ಹೋರಿಗರುಗಳಾಗಿರುತ್ತದೆ ಅಥವಾ ಕರುವಿನ ಮಾಂಸಕ್ಕಾಗಿ ಬೆಳೆಸಲಾದವುಗಳಾಗಿರುತ್ತವೆ.

ಆರೋಗ್ಯ ಮತ್ತು ಯೋಗಕ್ಷೇಮ

[ಬದಲಾಯಿಸಿ]

ಹೈನು ಹಸುಗಳಿಗೆ ಹಾನಿಯುಂಟುಮಾಡುವ ಸಾಮಾನ್ಯ ಅಸ್ವಸ್ಥತೆಗಳಲ್ಲಿ ಇವು ಸೇರಿವೆ: ಸಾಂಕ್ರಾಮಿಕ ಕಾಯಿಲೆ (ಉದಾಹರಣೆಗೆ: ಕೆಚ್ಚಲಿನ ಉರಿಯೂತ, ಗರ್ಭಕೋಶದ ಒಳಪೊರೆಯ ಉರಿಯೂತ ಮತ್ತು ಬೆರಳಿನ ಚರ್ಮದ ಉರಿಯೂತ), ಚಯಾಪಚಯಿ ಕಾಯಿಲೆ (ಉದಾಹರಣೆಗೆ: ಹಾಲು ಜ್ವರ ಮತ್ತು ಕೀಟೋನ್‌ ಹೆಚ್ಚಳ) ಮತ್ತು ಅವುಗಳ ಪರಿಸರದಿಂದ ಉಂಟಾದ ಗಾಯಗಳು (ಉದಾಹರಣೆಗೆ: ಗೊರಸು ಮತ್ತು ಚಂಚುಕೀಲಿನ ಅಂಗಹಾನಿಗಳು).[೧೭]

ಕುಂಟುವಿಕೆಯು ಹೈನು ಹಸುಗಳಿಗೆ ಸಂಬಂಧಿಸಿದಂತೆ ಇರುವ, ಅತ್ಯಂತ ಗಮನಾರ್ಹವಾದ ಪ್ರಾಣಿ ಯೋಗಕ್ಷೇಮದ ಸಮಸ್ಯೆಗಳ ಪೈಕಿ ಒಂದು ಎಂಬುದಾಗಿ ಸಾಮಾನ್ಯವಾಗಿ ಪರಿಗಣಿಸಲ್ಪಟ್ಟಿದೆ.[೧೮][೧೯][೨೦][೨೧] ಅನೇಕ ಮೂಲಗಳಿಂದ ಇಂದು ಉಂಟಾಗಲು ಸಾಧ್ಯವಿದ್ದು, ಗೊರಸು ಅಂಗಾಂಶದ ಸೋಂಕುಗಳು (ಉದಾಹರಣೆಗೆ: ಚರ್ಮದ ಉರಿಯೂತವನ್ನು ಉಂಟುಮಾಡುವ ಶಿಲೀಂಧ್ರ ಸೋಂಕುಗಳು) ಮತ್ತು ಮೂಗೇಟಾಗುವಿಕೆ ಅಥವಾ ಅಂಗಹಾನಿಗಳನ್ನು (ಉದಾಹರಣೆಗೆ: ಗೊರಸಿನ ಹುಣ್ಣುಗಳು ಅಥವಾ ರಕ್ತಸ್ರಾವ) ಉಂಟುಮಾಡುವ ಶಾರೀರಿಕ ಹಾನಿಯು ಇವುಗಳಲ್ಲಿ ಸೇರಿವೆ.[೧೮] ಆಧುನಿಕ ಸಾಂಪ್ರದಾಯಿಕ ಹೈನು ಕೇಂದ್ರಗಳಲ್ಲಿ ಸಾಮಾನ್ಯವಾಗಿರುವ ಆಶ್ರಯದ ಮತ್ತು ನಿರ್ವಹಣೆಯ ಲಕ್ಷಣಗಳು (ಕೊಟ್ಟಿಗೆಯ ಕಾಂಕ್ರೀಟಿನ ನೆಲಗಳು, ಮೇಯಿಸುವುದಕ್ಕಿರುವ ಸೀಮಿತ ಸಂಪರ್ಕ ಮತ್ತು ಗರಿಷ್ಟತೆಗಿಂತ ಕೆಳಗಿರುವ ತಳದ-ಮಳಿಗೆ ವಿನ್ಯಾಸದಂಥವು) ಅಪಾಯಕ್ಕೆ ಕೊಡುಗೆ ನೀಡುವ ಅಂಶಗಳೆಂದು[೨೨] ಗುರುತಿಸಲ್ಪಟ್ಟಿರುವ ಸಂದರ್ಭದಲ್ಲೇ, ಅಭಿವೃದ್ಧಿಶೀಲ ದೇಶಗಳಲ್ಲಿನ ಚಿಕ್ಕ ಹೈನುಕೇಂದ್ರಗಳೂ ಸಹ ಉನ್ನತ ಪ್ರಮಾಣಗಳನ್ನು ನಿರೂಪಿಸಬಲ್ಲವಾಗಿವೆ.[೨೩]

ಮಾರುಕಟ್ಟೆ

[ಬದಲಾಯಿಸಿ]
ನ್ಯೂ ಸೌತ್‌ವೇಲ್ಸ್‌ನ ಕೊಂಬೊಯ್ನ್‌ನ ಹೈನು ಕೇಂದ್ರವೊಂದರಲ್ಲಿರುವ ಹಾಲ್‌‌ಸ್ಟೀನ್‌ ಹಸುಗಳು

ವಿಶ್ವಾದ್ಯಂತದ ಹೈನು ಉತ್ಪಾದನೆಯ ಮಾದರಿಯಲ್ಲಿ ಒಂದು ಭಾರೀ ಪ್ರಮಾಣದ ಬದಲಾವಣೆಯು ಕಂಡುಬಂದಿದೆ. ಬೃಹತ್‌‌ ಉತ್ಪಾದಕರೆನಿಸಿಕೊಂಡಿರುವ ಅನೇಕ ದೇಶಗಳು ಇದರ ಬಹುಪಾಲನ್ನು ಆಂತರಿಕವಾಗಿ ಬಳಕೆಮಾಡಿದರೆ, ಇತರ ದೇಶಗಳು (ನಿರ್ದಿಷ್ಟವಾಗಿ ಹೇಳುವುದಾದರೆ ನ್ಯೂಜಿಲೆಂಡ್‌) ತಮ್ಮ ಉತ್ಪಾದನೆಯ ಒಂದು ಬೃಹತ್‌‌ ಶೇಕಡಾವಾರು ಭಾಗವನ್ನು ರಫ್ತುಮಾಡುತ್ತವೆ. ಆಂತರಿಕ ಬಳಕೆಯು ಅನೇಕವೇಳೆ ದ್ರವ ಹಾಲಿನ ಸ್ವರೂಪದಲ್ಲಿದ್ದರೆ, ಅಂತರರಾಷ್ಟ್ರೀಯ ವ್ಯಾಪಾರದ ಬಹುಭಾಗವು ಹಾಲಿನ ಪುಡಿಯಂಥ ಸಂಸ್ಕರಿಸಲ್ಪಟ್ಟ ಹೈನು ಉತ್ಪನ್ನಗಳಲ್ಲಿದೆ.

ವಿಶ್ವವ್ಯಾಪಿ ಆಧಾರದ ಮೇಲೆ ಹೇಳುವುದಾದರೆ, ಭಾರತವು ಅತ್ಯಂತ ದೊಡ್ಡ ಉತ್ಪಾದಕನಾಗಿದ್ದರೆ, ನ್ಯೂಜಿಲೆಂಡ್‌,[೨೪][೨೫] ಅತ್ಯಂತ ದೊಡ್ಡ ರಫ್ತುದಾರನಾಗಿದೆ ಮತ್ತು ಜಪಾನ್‌‌ ಅತ್ಯಂತ ದೊಡ್ಡ ಆಮದುದಾರನಾಗಿದೆ.

ಪ್ರಪಂಚದ ಉತ್ಪಾದನೆ
ಶ್ರೇಣಿ ದೇಶ ಉತ್ಪಾದನೆ (109ಕಿ.ಗ್ರಾಂ./ವರ್ಷಕ್ಕೆ)[೨೬]
1  ಭಾರತ 114.4
2  ಅಮೇರಿಕ ಸಂಯುಕ್ತ ಸಂಸ್ಥಾನ 79.3
3  ಪಾಕಿಸ್ತಾನ 35.2 (ಊರ್ಜಿತಗೊಳಿಸುವಿಕೆಯ ಅಗತ್ಯವಿದೆ)
4  ಚೀನಾ 32.5
5  Germany 28.5
6  ರಷ್ಯಾ 28.5
7  Brazil 26.2
8  France 24.2
9  ನ್ಯೂ ಜೀಲ್ಯಾಂಡ್ 17.3
10  ಯುನೈಟೆಡ್ ಕಿಂಗ್ಡಂ 13.9
11  ಉಕ್ರೇನ್ 12.2
12  Poland 12
13  ನೆದರ್ಲ್ಯಾಂಡ್ಸ್ 11.5
14  ಇಟಲಿ 11.0
15  ಟರ್ಕಿ 10.6
16  ಮೆಕ್ಸಿಕೋ 10.2
17  ಆಸ್ಟ್ರೇಲಿಯಾ 9.6
18  ಈಜಿಪ್ಟ್ 8.7
19  ಅರ್ಜೆಂಟೀನ 8.5
20  ಕೆನಡಾ 8.1

ಐರೋಪ್ಯ ಒಕ್ಕೂಟ

[ಬದಲಾಯಿಸಿ]

ಐರೋಪ್ಯ ಒಕ್ಕೂಟವು ಪ್ರಪಂಚದಲ್ಲಿನ ಅತ್ಯಂತ ದೊಡ್ಡ ಹಾಲು ಉತ್ಪಾದಕ ಎನಿಸಿಕೊಂಡಿದ್ದು, 2003ರ ವರ್ಷದಲ್ಲಿ 143.7 ದಶಲಕ್ಷ ಟನ್ನುಗಳಷ್ಟು ಉತ್ಪಾದನೆಯನ್ನು ಅದು ದಾಖಲಿಸಿದೆ. ಈಗಿನ 25 ಸದಸ್ಯ ದೇಶಗಳನ್ನು ಒಳಗೊಂಡಿರುವ ಈ ದತ್ತಾಂಶವನ್ನು 122 ದಶಲಕ್ಷ ಟನ್ನುಗಳಷ್ಟನ್ನು ದಾಖಲಿಸಿರುವ ಮೂಲ 15 ಸದಸ್ಯ ದೇಶಗಳ ಉತ್ಪಾದನೆಗಳಾಗಿ, ಹಾಗೂ 21.7 ದಶಲಕ್ಷ ಟನ್ನುಗಳಷ್ಟನ್ನು ದಾಖಲಿಸಿರುವ ಹೊಸ 10 ದೇಶಗಳ, ಅದರಲ್ಲೂ ಮುಖ್ಯವಾಗಿ, ಹಿಂದಿನ ಐರೋಪ್ಯ ದೇಶಗಳ ಉತ್ಪಾದನೆಗಳಾಗಿ ಮತ್ತೆ ವಿಭಜಿಸಲು ಸಾಧ್ಯವಿದೆ.

ಸಾಮಾನ್ಯ ಕೃಷಿಯ ಕಾರ್ಯನೀತಿಯ ಕಾರಣದಿಂದಾಗಿ ಹೈನು ಉತ್ಪಾದನೆಯು ಅತೀವವಾಗಿ ಆಕಾರಗೆಟ್ಟಿದೆ; ಸದರಿ ಕೃಷಿಯ ಕಾರ್ಯನೀತಿಗೆ ಕೆಲವೊಂದು ಪ್ರದೇಶಗಳಲ್ಲಿ ಅನುದಾನವು ಸಿಕ್ಕಿದ್ದರೆ, ಇತರ ಪ್ರದೇಶಗಳಲ್ಲಿ ಅದು ಉತ್ಪಾದನೆಯ ಪಾಲುಗಳಿಗೆ ಈಡಾಗಿದೆ.

ಶ್ರೇಣಿ ದೇಶ ಉತ್ಪಾದನೆ (109ಕಿ.ಗ್ರಾಂ./ವರ್ಷಕ್ಕೆ)[೨೭]
1  Germany 28.5
2  France 24.6
3  ಯುನೈಟೆಡ್ ಕಿಂಗ್ಡಂ 15.0
4  Poland 11.9
5  ನೆದರ್ಲ್ಯಾಂಡ್ಸ್ 11.0
6  ಇಟಲಿ 10.8
7  Spain 6.6
8  ಐರ್ಲೆಂಡ್‌ ಗಣರಾಜ್ಯ 5.4
9  ಡೆನ್ಮಾರ್ಕ್ 4.7
10  Sweden 3.2
11  Austria 3.2
12  Belgium 3.1
13  Czech Republic 2.7
14  Finland 2.5
15  Hungary 1.9
16  ಪೋರ್ಚುಗಲ್ 1.9
17  Lithuania 1.8

ಅಮೆರಿಕಾ ಸಂಯುಕ್ತ ಸಂಸ್ಥಾನಗಳು

[ಬದಲಾಯಿಸಿ]

ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಒಟ್ಟು ಹಾಲು ಉತ್ಪಾದನೆಯ ಆಧಾರದ ಮೇಲಿರುವ ಐದು ಅಗ್ರಗಣ್ಯ ಹೈನು ಸಂಸ್ಥಾನಗಳೆಂದರೆ, ಕ್ಯಾಲಿಫೋರ್ನಿಯಾ,[೨೮] ವಿಸ್ಕಾನ್ಸಿನ್‌‌, ನ್ಯೂಯಾರ್ಕ್‌, ಪೆನ್ಸಿಲ್ವೇನಿಯಾ ಮತ್ತು ಇದಾಹೊ.[೨೯] ಫ್ಲೋರಿಡಾ, ಮಿನ್ನೆಸೊಟಾ, ಓಹಿಯೊ ಮತ್ತು ವೆರ್ಮಾಂಟ್‌ ಇವೇ ಮೊದಲಾದ ಪ್ರದೇಶಗಳಲ್ಲಿ ಹೈನುಗಾರಿಕೆಯೂ ಸಹ ಒಂದು ಪ್ರಮುಖ ಉದ್ಯಮವಾಗಿದೆ.[೩೦] ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ 65,000 ಹೈನು ಕೇಂದ್ರಗಳು ಅಸ್ತಿತ್ವದಲ್ಲಿವೆ.[೩೧]

ಆದಾಗ್ಯೂ, ಪೆನ್ಸಿಲ್ವೇನಿಯಾ ಸಂಸ್ಥಾನದಲ್ಲಿ ಹೈನುಗಾರಿಕೆಯ ಮೇಲೆ ಅತೀವವಾದ ಅವಲಂಬನೆಯು ಕಂಡುಬರುತ್ತದೆ; ಅಲ್ಲಿ ಇದು ಮೊದಲ ಸ್ಥಾನದಲ್ಲಿರುವ ಉದ್ಯಮವಾಗಿದೆ. ಪೆನ್ಸಿಲ್ವೇನಿಯಾದಲ್ಲಿ ಸುಮಾರು 8,500 ಹೈನುಕೇಂದ್ರಗಳು ಮತ್ತು 555,000 ಹೈನು ಹಸುಗಳಿವೆ. ಪೆನ್ಸಿಲ್ವೇನಿಯಾದಲ್ಲಿ ಉತ್ಪಾದಿಸಲ್ಪಡುವ ಹಾಲಿನಿಂದ ಪ್ರತಿ ವರ್ಷವೂ ಸುಮಾರು 1.5 ಶತಕೋಟಿ US$ನಷ್ಟು ಹೈನು ಆದಾಯವು ಸಂಗ್ರಹವಾಗುತ್ತದೆ, ಮತ್ತು ಪೂರ್ವತೀರದ ಮೇಲ್ಭಾಗ ಹಾಗೂ ಕೆಳಭಾಗದಲ್ಲಿರುವ ಹಲವಾರು ಸಂಸ್ಥಾನಗಳಿಗೆ ಇಲ್ಲಿನ ಹಾಲು ಮಾರಲ್ಪಡುತ್ತದೆ.[೩೨]

2009ರಲ್ಲಿ ಹಾಲಿನ ಬೆಲೆಗಳು ಕುಸಿದವು. ದೇಶದ ಹಾಲಿನ ಮಾರುಕಟ್ಟೆಯ 40%ನಷ್ಟು ಭಾಗವನ್ನು ಡೀನ್‌ ಫುಡ್ಸ್‌ ಸಂಸ್ಥೆಯು ನಿಯಂತ್ರಿಸುತ್ತಿದೆ ಎಂಬುದಾಗಿ ಬರ್ನೀ ಸ್ಯಾಂಡರ್ಸ್‌ ಎಂಬ ಸೆನೆಟ್‌ ಸದಸ್ಯ ಆರೋಪಿಸಿದ. ಟ್ರಸ್ಟ್‌ ವಿರೋಧಿ ತನಿಖೆಯೊಂದನ್ನು ಮುಂದುವರಿಸುವಂತೆ ಆತ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ನ್ಯಾಯಾಂಗ ಇಲಾಖೆಗೆ ಮನವಿ ಮಾಡಿದ.[೩೩] ದೇಶದ ಕಚ್ಚಾ ಹಾಲಿನ ಪೈಕಿಯ 15%ನಷ್ಟು ಭಾಗವನ್ನು ತಾನು ಖರೀದಿಸುವುದಾಗಿ ಡೀನ್‌ ಫುಡ್ಸ್‌ ಸಂಸ್ಥೆಯು ಹೇಳುತ್ತದೆ.[೩೪]

ಸ್ಪರ್ಧೆ

[ಬದಲಾಯಿಸಿ]

ಹಾಲಿನ ಬಳಕೆಮಾಡುವ ಬಹುಪಾಲು ದೇಶಗಳು ಒಂದು ಸ್ಥಳೀಯವಾದ ಹೈನುಗಾರಿಕಾ ಉದ್ಯಮವನ್ನು ಹೊಂದಿವೆ. ಹಾಲನ್ನು ಉತ್ಪಾದಿಸುವ ಬಹುಪಾಲು ದೇಶಗಳು, ವಿದೇಶಿ ಸ್ಪರ್ಧೆಯಿಂದ [ಸೂಕ್ತ ಉಲ್ಲೇಖನ ಬೇಕು] ಸ್ವದೇಶಿ ಉತ್ಪಾದಕರನ್ನು ಸಂರಕ್ಷಿಸುವ ಸಲುವಾಗಿ, ಗಣನೀಯ ಅನುದಾನಗಳು ಮತ್ತು ವ್ಯಾಪಾರ ನಿರ್ಬಂಧಗಳನ್ನು ಕಾಯ್ದುಕೊಂಡು ಹೋಗುತ್ತವೆ; ಆದರೆ, ಹೈನು ಉತ್ಪನ್ನವನ್ನು ಅಗಾಧವಾಗಿ ರಫ್ತುಮಾಡುತ್ತಿರುವ ದೇಶವಾದ ನ್ಯೂಜಿಲೆಂಡ್‌, ಹೈನು ಉತ್ಪಾದನೆಗೆ ಯಾವುದೇ ಅನುದಾನಗಳನ್ನು ಒದಗಿಸುತ್ತಿಲ್ಲ.[೩೫]

ಸಾಂಪ್ರದಾಯಿಕವಾಗಿ ಹೇಳುವುದಾದರೆ, ಹಸುಗಳ ಹಾಲುಕರೆಯುವಿಕೆಯು ಒಂದು ತೀವ್ರ-ಪ್ರಯಾಸದ ಕಾರ್ಯಾಚರಣೆಯಾಗಿತ್ತು ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಈ ಪರಿಸ್ಥಿತಿಯು ಈಗಲೂ ಮುಂದುವರೆದಿದೆ. ಕೇವಲ ಕೆಲವೇ ಡಜನ್‌‌ನಷ್ಟಿರುವ ಹಸುಗಳ ಹಾಲುಕರೆಯಲು ಮತ್ತು ಅವುಗಳ ನಿಗಾವಣೆಯನ್ನು ಮಾಡಲು ಚಿಕ್ಕ ಹೈನುಕೇಂದ್ರಗಳಿಗೆ ಹಲವಾರು ಜನರ ಅಗತ್ಯ ಕಂಡುಬರುತ್ತದೆ. ಆದರೂ, ಅನೇಕ ಹೈನುಕೇಂದ್ರಗಳ ವಿಷಯದಲ್ಲಿ ಈ ನೌಕರರು ಸಾಂಪ್ರದಾಯಿಕ ಸ್ವರೂಪದಲ್ಲಿ ಹೈನುಕೇಂದ್ರದವರ ಕುಟುಂಬದ ಮಕ್ಕಳೇ ಆಗಿರುತ್ತಾರೆ; ಹೀಗಾಗಿ "ಕುಟುಂಬದ ಹೈನುಕೇಂದ್ರ" ಎಂಬ ಪರಿಭಾಷೆಯು ಹುಟ್ಟಿಕೊಂಡಿದೆ.

ತಂತ್ರಜ್ಞಾನದಲ್ಲಿನ ಪ್ರಗತಿಗಳ ಕಾರಣದಿಂದಾಗಿ, ಅಮೆರಿಕಾ ಸಂಯುಕ್ತ ಸಂಸ್ಥಾನದಂಥ ಕೈಗಾರಿಕೀಕೃತ ದೇಶಗಳಲ್ಲಿ, "ಕುಟುಂಬದ ಹೈನು ಕೇಂದ್ರಗಳ" ಆಮೂಲಾಗ್ರ ಮರುವ್ಯಾಖ್ಯಾನವು ಬಹುಪಾಲು ಕಂಡುಬಂದಿದೆ. ನೂರಾರು ಹಸುಗಳನ್ನು ಒಳಗೊಂಡಿರುವ ಹೈನುಕೇಂದ್ರಗಳು ಬೃಹತ್‌‌ ಪ್ರಮಾಣಗಳಲ್ಲಿ ಹಾಲನ್ನು ಉತ್ಪಾದಿಸುತ್ತಿರುವುದರಿಂದ, ದೊಡ್ಡದಾದ ಮತ್ತು ಹೆಚ್ಚು ಪರಿಣಾಮಕಾರಿಯಾಗಿರುವ ಹೈನು ಕೇಂದ್ರಗಳು ಹಾಲಿನ ಬೆಲೆಯಲ್ಲಿ ಕಂಡುಬರುವ ತೀವ್ರ ಬದಲಾವಣೆಗಳನ್ನು ಸಹಿಸಿಕೊಳ್ಳಲು ಸಮರ್ಥವಾಗಿವೆ ಮತ್ತು ಅವು ಲಾಭದಾಯಕವಾಗಿ ನಡೆದುಕೊಂಡು ಹೋಗುತ್ತಿವೆ; ಅದೇ ವೇಳೆಗೆ, "ಸಾಂಪ್ರದಾಯಿಕ" ಸ್ವರೂಪದ ಅತ್ಯಂತ ಚಿಕ್ಕ ಹೈನು ಕೇಂದ್ರಗಳು ಹಾಗೆ ಮಾಡಲು ಅಗತ್ಯವಿರುವ ಇಕ್ವಿಟಿ ಅಥವಾ ನಗದು ಹರಿವನ್ನು ಸಾಮಾನ್ಯವಾಗಿ ಹೊಂದಿಲ್ಲ. ಬೃಹತ್‌‌ ಸಾಂಸ್ಥಿಕ ಹೈನುಕೇಂದ್ರಗಳು ಚಿಕ್ಕದಾದ ಹೈನುಕೇಂದ್ರಗಳನ್ನು ಆಕ್ರಮಿಸಿ ಅವುಗಳ ಸ್ಥಾನದಲ್ಲಿ ಕುಳಿತುಕೊಳ್ಳುತ್ತವೆ ಎಂಬಂಥ ಸಾರ್ವಜನಿಕರ ಸಾಮಾನ್ಯ ಗ್ರಹಿಕೆಯು ಸಾರ್ವತ್ರಿಕವಾಗಿ ಒಂದು ತಪ್ಪುಗ್ರಹಿಕೆಯಾಗಿದೆ. ಏಕೆಂದರೆ, ಪ್ರಮಾಣದ ಮಿತವ್ಯಯಗಳ ಪ್ರಯೋಜನವನ್ನು ಪಡೆದುಕೊಳ್ಳಲು ಅನೇಕ ಚಿಕ್ಕ ಕುಟುಂಬದ ಹೈನುಕೇಂದ್ರಗಳು ವಿಸ್ತರಿಸುತ್ತವೆ. ಅಷ್ಟೇ ಅಲ್ಲ, ಮಾಲೀಕರ ಶಾಸನಬದ್ಧ ಹೊಣೆಗಾರಿಕೆಗಳನ್ನು ಸೀಮಿತಗೊಳಿಸುವ ಮತ್ತು ತೆರಿಗೆ ನಿರ್ವಹಣೆಯಂಥ ವಿಷಯಗಳನ್ನು ಸರಳೀಕರಿಸುವ ನಿಟ್ಟಿನಲ್ಲಿ ವ್ಯವಹಾರವನ್ನು ಅವು ಒಗ್ಗೂಡಿಸುತ್ತವೆ.[ಸೂಕ್ತ ಉಲ್ಲೇಖನ ಬೇಕು]

1950ರ ದಶಕದಲ್ಲಿ ಆಗಮಿಸಿದ ಬೃಹತ್‌‌ ಪ್ರಮಾಣದ ಯಂತ್ರೀಕರಣಕ್ಕೆ ಮುಂಚಿತವಾಗಿ, ಹಾಲಿನ ಮಾರಾಟಕ್ಕಾಗಿ ಒಂದು ಡಜನ್‌‌ನಷ್ಟು ಹಾಲುಕರೆಯುವ ಹಸುಗಳನ್ನು ಇಟ್ಟುಕೊಳ್ಳುವುದು ಲಾಭದಾಯಕವಾಗಿತ್ತು.[ಸೂಕ್ತ ಉಲ್ಲೇಖನ ಬೇಕು] ಇಂದು ಹಾಲಿನ ವ್ಯವಹಾರವು ಲಾಭದಾಯಕವಾಗಿ ನಡೆಯಬೇಕೆಂದಿದ್ದರೆ, ಬಹುಪಾಲು ಹೈನುಗಾರಿಕಾ ತಾಣಗಳು ಏಕಕಾಲಕ್ಕೆ ಹಾಲುಕರೆಯಲ್ಪಡುವ ಒಂದು ನೂರಕ್ಕಿಂತ ಹೆಚ್ಚು ಹಸುಗಳನ್ನು ಹೊಂದಿರುವುದು ಅತ್ಯಗತ್ಯವಾಗಿದೆ; ಇಂಥ ಸನ್ನಿವೇಶದಲ್ಲಿ ಇತರ ಹಸುಗಳು ಮತ್ತು ಹೆಣ್ಣುಕರುಗಳು "ಹಾಲುಕೊಡಲು ಪ್ರಾರಂಭಿಸಿದ" ಸ್ಥಾನಮಾನವನ್ನು ಪಡೆದುಕೊಳ್ಳಲು ಹಾಲುಕರೆಯುವ ಹಿಂಡನ್ನು ಸೇರಿಕೊಳ್ಳಲೆಂದು ಕಾಯುತ್ತಿರುತ್ತವೆ. ನ್ಯೂಜಿಲೆಂಡ್‌ನಲ್ಲಿ, ಪ್ರದೇಶವನ್ನು ಅವಲಂಬಿಸಿ ಹಿಂಡಿನ ಸರಾಸರಿ ಗಾತ್ರವು ಸುಮಾರು 350 ಹಸುಗಳಷ್ಟಿರುತ್ತದೆ.[ಸೂಕ್ತ ಉಲ್ಲೇಖನ ಬೇಕು]

USನಲ್ಲಿ ಹಿಂಡಿನ ಗಾತ್ರವು ಬದಲಾಗುತ್ತಾ ಹೋಗುತ್ತದೆ; ಪಶ್ಚಿಮ ತೀರಪ್ರದೇಶ ಮತ್ತು ನೈಋತ್ಯ ಭಾಗದಲ್ಲಿ ಇದು 1,200 ಹಸುಗಳನ್ನು ಒಳಗೊಂಡಿದ್ದು, ಇಲ್ಲಿ ಬೃಹತ್‌‌ ಹೈನುಕೇಂದ್ರಗಳು ಸಾಧಾರಣ ವಿಷಯವಾಗಿದೆ. ಇನ್ನು ಈಶಾನ್ಯ ಭಾಗಕ್ಕೆ ಬಂದರೆ, ಹಿಂಡಿನ ಗಾತ್ರವು ಸರಿಸುಮಾರು 50ರಷ್ಟಿದ್ದು, ಇಲ್ಲಿನ ಭೂನೆಲೆಯು ಹಿಂಡಿನ ಗಾತ್ರಕ್ಕೆ ಸಂಬಂಧಿಸಿದಂತೆ ಒಂದು ಗಮನಾರ್ಹವಾದ ಸೀಮಿತಗೊಳಿಸುವ ಅಂಶವಾಗಿದೆ. U.S.ನಲ್ಲಿನ ಸರಾಸರಿ ಹಿಂಡಿನ ಗಾತ್ರವು ಪ್ರತಿ ಹೈನುಕೇಂದ್ರಕ್ಕೂ ಸುಮಾರು ಒಂದು ನೂರು ಹಸುಗಳಷ್ಟಿರುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಪ್ರಸಕ್ತವಾಗಿ, ಚಿಕಾಗೊ ಮರ್ಕೆಂಟೈಲ್‌ ಎಕ್ಸ್‌ಚೇಂಜ್‌ ಕೇಂದ್ರದಲ್ಲಿನ ಭಾರೀ ಹೈನು ಉತ್ಪನ್ನಗಳ ಪ್ರಮುಖ ಖರೀದಿದಾರರು ಎನಿಸಿಕೊಂಡಿರುವ ಡೀನ್‌ ಫುಡ್ಸ್‌, ಕ್ರಾಫ್ಟ್‌‌, ಮತ್ತು ಇತರರಿಂದ ಸೃಷ್ಟಿಸಲ್ಪಟ್ಟಿರುವ ಏಕಸ್ವಾಮ್ಯಗಳ ಕುರಿತಾದ ಕಾಳಜಿಗಳು ಹುಟ್ಟಿಕೊಂಡಿವೆ; ಸಂಸ್ಕರಣೆಗಾರರು ಮತ್ತು ಚಿಲ್ಲರೆ ವ್ಯಾಪಾರಿಗಳು ದಾಖಲಾರ್ಹ ಲಾಭಗಳನ್ನು ದಾಖಲಿಸಿದ ಸಂದರ್ಭದಲ್ಲೇ, ಅಮೆರಿಕಾದ ಹೈನು ಕೇಂದ್ರಗಳು ಅತೀವವಾದ ಬೆಲೆ ಕುಸಿತ ಮತ್ತು ಅಸ್ತವ್ಯಸ್ತವಾಗಿರುವ ಏರಿಳಿತಗಳಿಂದ ನರಳಿದ್ದೇ ಈ ಕಾಳಜಿಗಳಿಗೆ ಕಾರಣವಾಗಿವೆ. ಅನೇಕರು ಊಹೆ ಕಟ್ಟುವ ಪ್ರಕಾರ, ಗಿಣ್ಣಿನ ಇಳುವರಿಯನ್ನು ವರ್ಧಿಸುವ ಸಲುವಾಗಿ, ಸಂಸ್ಕರಣೆಗಾರರಿಂದ ಬಳಸಲ್ಪಟ್ಟ ಹಾಲು ಪ್ರೋಟೀನು ಸಾಂದ್ರಣದ ಅನಿಯಂತ್ರಿತ ಆಮದುಗಳು ಕೃತಕವಾಗಿ ಮತ್ತು ಅಯುಕ್ತವಾಗಿ ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರಿವೆ; ಐತಿಹಾಸಿಕವಾಗಿ, ಒಂದು ಅತೀವವಾಗಿ ವೈವಿಧ್ಯಗೊಳಿಸಲ್ಪಟ್ಟ ಉದ್ಯಮ ಎಂದು ಕರೆಸಿಕೊಂಡ ಈ ವ್ಯವಹಾರ ವಲಯದಲ್ಲಿ, ಬಲವರ್ಧನೆ ಮತ್ತು ಆದ್ಯಂತ ಸಂಘಟನೆಗಾಗಿ ಒತ್ತಾಯಿಸುವ ಒಂದು ಪ್ರಯತ್ನವಾಗಿ ಇದು ಹೊರಹೊಮ್ಮಿದೆ ಎನ್ನಬಹುದು.

ಇವನ್ನೂ ಗಮನಿಸಿ

[ಬದಲಾಯಿಸಿ]
  • ಆಲ್ಫ ಲಾವಲ್‌‌
  • ಡೆಲಾವಲ್‌‌
  • ಪಶುಸಂಗೋಪನೆ
  • ಹೈನು
  • ಹೈನು ಹಸುಗಳು
  • ಹೈನು ಉತ್ಪನ್ನಗಳು
  • ಕಾರ್ಖಾನೆಯ ಹೈನುಗಾರಿಕೆ
  • ಕುಟುಂಬದ ಹೈನುಕೇಂದ್ರ
  • ಹಾಲು
  • ನಿರ್ವಹಿಸಲ್ಪಟ್ಟ ತೀವ್ರಸ್ವರೂಪದ ಮೇಯಿಸುವಿಕೆ
  • ಉಬ್ರೆ ಬ್ಲಾಂಕಾ: ದಾಖಲೆಯ ಪ್ರಮಾಣದಲ್ಲಿ ಹಾಲನ್ನು-ಉತ್ಪಾದಿಸುವ ಒಂದು ಹಸು
  • ಕರುವಿನ ಮಾಂಸ
  • ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಪಶುಪಾಲನ ಕೇಂದ್ರಗಳ ಮೇಲಿನ ವಿದ್ಯುಚ್ಚಕ್ತಿಯ ಕಾರ್ಯಕಾರಿತ್ವ

ಉಲ್ಲೇಖಗಳು

[ಬದಲಾಯಿಸಿ]
  1. "ಸಾರ್ವಜನಿಕ ಪ್ರವಾಸಗಳು". Archived from the original on 2007-07-13. Retrieved 2010-10-14.
  2. "ಎಲ್ಥಾಮ್‌ ಮ್ಯಾನ್‌ ಟರ್ನ್ಸ್‌ ಮಿಲ್ಕಿಂಗ್‌ ಅರೌಂಡ್‌" Archived 2011-04-02 ವೇಬ್ಯಾಕ್ ಮೆಷಿನ್ ನಲ್ಲಿ., ಪ್ಯೂಕ್‌ ಅರಿಕಿ ಮ್ಯೂಸಿಯಂ ವೆಬ್‌ಸೈಟ್‌
  3. "ಮಿಲ್ಕಿಂಗ್‌ ಷೆಡ್ಸ್‌", ಟೆ ಅರಾ ವೆಬ್‌ಸೈಟ್‌, NZ
  4. ೪.೦ ೪.೧ "DEC Reports: Progress since Marks Dairy Spill". New York State Department of Environmental Conservation. 2007-08-09. Archived from the original on 2011-03-15. Retrieved 2008-09-26. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  5. "Regulatory Definitions of Large CAFOs, Medium CAFO, and Small CAFOs" (PDF). United States Environmental Protection Agency. Archived from the original (PDF) on 2015-09-24. Retrieved 2008-09-26.
  6. "Joseph Gallo Dies". Merced Sun-Star. Archived from the original on May 31, 2008. Retrieved 2008-09-26. {{cite web}}: Italic or bold markup not allowed in: |publisher= (help)
  7. "Total Integration". Joseph Farms. Archived from the original on 2016-06-10. Retrieved 2008-09-26. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  8. "Say No to rBGH!". Fodd and Water Watch. Archived from the original on 2008-05-17. Retrieved 2008-09-26. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  9. "We're drinking WHAT? U.S. consumers reject milk adulterated with Monsanto's rBST". Onlinejournal.com. Archived from the original on 2009-06-10. Retrieved 2009-08-10. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  10. "Dairy 2007 Part II: Changes in the U.S. Dairy Cattle Industry, 1991–2007" (PDF). Animal and Plant Health Inspection Service. 2007. Archived from the original (PDF) on 2010-01-13. Retrieved 2010-01-27. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help); Unknown parameter |month= ignored (help)
  11. "FDA Warns Milk Producers to Remove "Hormone Free" Claims From the Labeling Of Dairy Products". U.S. Food and Drug Administration. 2003-02-12. Archived from the original on February 21, 2008. Retrieved 2008-09-26.
  12. "Safeway milk free of bovine hormone". Seattle Post-Intelligencer (via AP). 2007-01-22. Retrieved 2008-04-04.
  13. ೧೩.೦ ೧೩.೧ North, R (2007-01-10). "Safeway & Chipotle Chains Dropping Milk & Dairy Derived from Monsanto's Bovine Growth Hormone". Oregon Physicians for Social Responsibility. Archived from the original on 2014-10-03. Retrieved 2008-01-29. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  14. "Kroger to complete transition to certified rBST-free milk by early 2008 (press release)". Kroger. 2007. Archived from the original on 2019-08-30. Retrieved 2008-01-29. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  15. "Statement and Q&A-Starbucks Completes its Conversion – All U.S. Company-Operated Stores Use Dairy Sourced Without the Use of rBGH". Starbucks Corporation. Archived from the original on 2008-03-29. Retrieved 2008-04-04. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  16. ಷಾ, ಜಾನ್‌ H., ಕಾಲಿನ್ಸ್‌‌, ಆಸ್ಟ್ರೇಲಿಯನ್‌ ಎನ್‌ಸೈಕ್ಲೋಪೀಡಿಯಾ, ಕಾಲಿನ್ಸ್‌‌, ಸಿಡ್ನಿ, 1984, ISBN 000217315-8
  17. ‌‌ರುಶೆನ್, J., ಡೆ ಪ್ಯಾಸಿಲ್ಲೆ, A. M., ವಾನ್‌‌ ಕೇಸರ್‌‌ಲಿಂಕ್‌‌, M. A. G., & ವೆಯರಿ, D. M. (2008). ದಿ ವೆಲ್‌ಫೇರ್‌ ಆಫ್‌ ಕ್ಯಾಟ್ಲ್‌‌. ಅನಿಮಲ್‌ ವೆಲ್‌ಫೇರ್‌,‌ ಸಂಪುಟ 5. ಬರ್ಲಿನ್‌‌: ಸ್ಪ್ರಿಂಗರ್‌‌ ವೆರ್ಲಾಗ್‌‌. ಪುಟಗಳು 21-35.
  18. ೧೮.೦ ೧೮.೧ ಇಬಿಡ್‌
  19. ‌‌ಫ್ರೇಸರ್, A.F. ಮತ್ತು D.M/ ಬ್ರೂಮ್‌‌. 1990. ಫಾರ್ಮ್‌ ಅನಿಮಲ್‌ ವೆಲ್‌ಫೇರ್‌ ಅಂಡ್‌ ಬಿಹೇವಿಯರ್‌ (3ನೇ ಆವೃತ್ತಿ) ಲಂಡನ್‌‌: ಬೈಲಿಯೆರೆ ಟಿಂಡಾಲ್‌‌. ಪುಟಗಳು 355-356.
  20. ಗ್ರೀನೌ, P.R. ಬೊವೀನ್‌ ಲ್ಯಾಮಿನೈಟಿಸ್‌ ಅಂಡ್‌ ಲೇಮ್‌ನೆಸ್‌: ಎ ಹ್ಯಾಂಡ್ಸ್‌-ಆನ್‌ ಅಪ್ರೋಚ್‌. 2007. ಎಡಿನ್‌ಬರ್ಗ್‌: ಸೌಂಡರ್ಸ್‌‌. ಪುಟ 3.
  21. ‌ಇನ್‌ವೈಟೆಡ್‌ ರಿವ್ಯೂ: ದಿ ವೆಲ್‌ಫೇರ್‌ ಆಫ್‌ ಡೈರಿ ಕ್ಯಾಟ್ಲ್‌- ಕೀ ಕಾನ್ಸೆಪ್ಟ್ಸ್‌ ಅಂಡ್‌ ದಿ ರೋಲ್‌ ಆಫ್‌ ಸೈನ್ಸ್. M.A.G. ವಾನ್‌‌ ಕೇಸರ್‌‌ಲಿಂಕ್‌‌, J. ರುಶೆನ್‌‌, A.M. ಡೆ ಪ್ಯಾಸಿಲ್ಲೆ, ಮತ್ತು D.M. ವೆಯರಿ. J. ಡೈರಿ ಸೈನ್ಸ್‌ 92 :4101–4111.
  22. ‌‌ಕುಕ್, N.B., ಮತ್ತು K.V. ನೋರ್ಡ್‌ಲಂಡ್‌. 2009. ರಿವ್ಯೂ: ದಿ ಇನ್‌ಫ್ಲುಯೆನ್ಸ್‌ ಆಫ್‌ ದಿ ಎನ್ವಿರಾನ್ಮೆಂಟ್‌ ಆನ್‌ ಡೈರಿ ಕೌ ಬಿಹೇವಿಯರ್‌, ಕ್ಲಾ ಹೆಲ್ತ್‌ ಅಂಡ್‌ ಹರ್ಡ್‌ ಲೇಮ್‌ನೆಸ್‌ ಡೈನಮಿಕ್ಸ್‌. ವೆಟ್. J. 179:360–369.
  23. ‌‌ಗಿತಾವ್, T, ಮೆಕ್‌ಡರ್ಮಾಟ್‌, J.J. ಮತ್ತು ಬಿಯುಕಿ, S.M. 1996. ಪ್ರವೇಲೆನ್ಸ್‌, ಇನ್ಸಿಡೆನ್ಸ್‌ ಅಂಡ್‌ ರಿಸ್ಕ್‌ ಫ್ಯಾಕ್ಟರ್ಸ್‌ ಫಾರ್‌ ಲೇಮ್‌ನೆಸ್‌ ಇನ್‌ ಡೈರಿ ಕ್ಯಾಟ್ಲ್‌ ಇನ್‌ ಸ್ಮಾಲ್‌-ಸ್ಕೇಲ್‌ ಫಾರ್ಮ್ಸ್‌ ಇಂಕಿಕುಯು ಡಿವಿಷನ್‌, ಕೀನ್ಯಾ. ಪ್ರಿವೆಂಟಿವ್‌ ವೆಟರ್ನರಿ ಮೆಡಿಸಿನ್‌. 28: 101-115.
  24. Evans, Gavin (2008-08-04). "N.Z. Forecasts Fall in Dairy Prices Through 2009". Bloomberg.com. Retrieved 2008-09-26.
  25. ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು%5d%5d%5b%5bವರ್ಗ:ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from July 2009%5d%5d%5b%5bವರ್ಗ:Articles with invalid date parameter in template%5d%5d[ಮಡಿದ ಕೊಂಡಿ] "New Zealand Dairy Industry". MarketNewZealand.com. Retrieved 2008-09-26. {{cite web}}: Check |url= value (help) [ಮಡಿದ ಕೊಂಡಿ]
  26. [೧][ಮಡಿದ ಕೊಂಡಿ]
  27. "Production of cow's milk and milk deliveries to dairies, European union by country". MDC Datum. 2003. Archived from the original on October 16, 2007. Retrieved 2007-10-29. {{cite journal}}: Cite journal requires |journal= (help)
  28. "California: Leading the nation in dairy production". Dairy Field. 2003.
  29. [೨]
  30. "Facts and Figures". Dairy Farming Today. 2010. Archived from the original on May 27, 2008. Retrieved 2010-07-17.
  31. "Congressional caucus formed to address dairy policy". Southwest Farm Press. April 6, 2006. Archived from the original on ಆಗಸ್ಟ್ 13, 2010. Retrieved ಅಕ್ಟೋಬರ್ 14, 2010.
  32. "Overview of Pennsylvania's Dairy Industry". Center for Dairy Excellence. Archived from the original on 2008-11-21. Retrieved 2008-09-26. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  33. McLean, Dan (28 July 2009). "Dean Foods snubs Sanders". Burlington, Vermont: Burlington Free Press. pp. 1A.
  34. "Milk processors under fire". Burlington, Vermont: Burlington Free Press. 20 September 2009. pp. 1B. {{cite news}}: |first= missing |last= (help)
  35. http://www.cato.org/pub_display.php?pub_id=3411

ಬಾಹ್ಯ ಕೊಂಡಿಗಳು

[ಬದಲಾಯಿಸಿ]