ಹೇಮ ರಾಜ್ ಕರ್ಕೇರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೇಮರಾಜ್ ಕರ್ಕೇರ, ಒಬ್ಬ ಪತ್ರಕರ್ತರು. 'ಛಾಯಾಕಿರಣ' ವೆಂಬ ಕನ್ನಡ ಮಾಸಿಕದಿಂದ ಹೆಸರುವಾಸಿಯಾಗಿದ್ದಾರೆ. ಅವರನ್ನು 'ಮಾಧ್ಯಮಶ್ರೀ ಪ್ರಶಸ್ತಿ' ಆಯ್ಕೆಮಾಡಲಾಗಿದೆ.[೧] ಹೊರನಾಡು, ಮುಂಬಯಿನಲ್ಲಿ ೩ ದಶಕಗಳ ಅನುಭವಿ.

ಜನನ, ವಿದ್ಯಾಭ್ಯಾಸ[ಬದಲಾಯಿಸಿ]

ಕಕ್ಷಿಣ ಕನ್ನಡ ಜಿಲ್ಲೆಯ 'ಕಾಪು', 'ಪೊಲಿಪು', ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ನಾರಾಯಣ ಕರ್ಕೇರ, ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕಿ ವೇದಾವತಿ ಕರ್ಕೇರ ದಂಪತಿಗಳ ಪುತ್ರನಾಗಿ ಜನಿಸಿದರು. ಉಡುಪಿಯ ಎಂ.ಜಿ.ಎಂ.ಪದವೀಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆದು ಮಂಗಳೂರು ಪಾಲಿಟೆಕ್ನಿಕ್ ನಲ್ಲಿ ಶಿಕ್ಷಣ ಮುಂದುವರೆಸಿದರು. ವೃತ್ತಿಗೋಸ್ಕರ ಮುಂಬಯಿನಗರಕ್ಕೆ ಬಂದರು. ಪತ್ರಿಕಾರಂಗದಲ್ಲಿ ಕೆಲಸ ಮಾಡಿದರು.

ಪ್ರಸರಣಾಧಿಕಾರಿಯಾಗಿ[ಬದಲಾಯಿಸಿ]

ಎಂ. ಮಲ್ಲಿಕಾರ್ಜುನಯ್ಯನವರು ಪೋಲೀಸ್ ನ್ಯೂಸ್, ಕರ್ನಾಟಕ ಮಲ್ಲ ಎಂಬ ಪತ್ರಿಕೆಗಳನ್ನು ಹುಟ್ಟುಹಾಕಿ ನಡೆಸುತ್ತಿದ್ದ ಸಮಯದಲ್ಲಿ ಪ್ರಸರಣಾಧಿಕಾರಿಯಾಗಿ ಸೇವೆ ಸಲ್ಲಿಸಿದರು. ಮುಂದೆ ತಾವು ಗಳಿಸಿದ ಅನುಭವದ ಸಹಾಯದಿಂದ ನಗರದಲ್ಲಿ ಉದಯ ದೀಪವೆಂಬ ಪತ್ರಿಕೆಯನ್ನು ಒಬ್ಬ ಗೆಳೆಯನ ನೆರವಿನಿಂದ ಪ್ರಾರಂಭಿಸಿದರು. ಮುಂಬಯಿನಗರದ ವರದಿಗಳನ್ನು ಕನ್ನಡದಲ್ಲಿ ಸಂಪಾದಿಸಿ, ಪ್ರಕಟಿಸುತ್ತಿದ್ದರು.[೨]

ಹೇಮರಾಜರ ಪರಿವಾರ[ಬದಲಾಯಿಸಿ]

ಹೇಮರಾಜ್ ತಮ್ಮ ಪತ್ನಿ, ಸುಪ್ರೀತಾ ಹೇಮರಾಜ್ ಮತ್ತು ಮಗ ಪ್ರಥಮರಾಜ್, ಜೊತೆಯಲ್ಲಿ ಮುಂಬಯಿನಲ್ಲಿ ವಾಸಿಸುತ್ತಿದ್ದಾರೆ.

ಮುಂಬಯಿನ್ಯೂಸ್[ಬದಲಾಯಿಸಿ]

ಹೇಮರಾಜರು, ಮುಂಬಯಿ ಮಹಾನಗರದ ವಿದ್ಯುನ್ಮಾದ ದೃಷ್ಯವಾಹಿನಿ 'ಮುಂಬಯಿ ನ್ಯೂಸ್ ವಾಹಿನಿ'ಯನ್ನು ನಡೆಸುತ್ತಿದ್ದಾರೆ. ಹೇಮರಾಜರನ್ನು ಮುಂಬಯಿಯಲ್ಲಿ ಸನ್ಮಾನಿಸಲಾಗಿತ್ತು[೩]

ಸನ್ಮಾನ[ಬದಲಾಯಿಸಿ]

  1. ಮುಂಬಯಿ ಮಹಾನಗರದ ಪತ್ರಿಕೋದ್ಯಮದಲ್ಲಿ ೩ ದಶಕಗಳ ಸೇವೆಸಲ್ಲಿಸಿದ 'ಹೇಮರಾಜ್ ಕರ್ಕೇರ' ಹಾಗೂ ಐದು ಸಾಧಕರನ್ನು ಗೌರವಿಸಲಾಯಿತು. [೪],[೫]
  2. ಹಿರಿಯ ಪತ್ರಕರ್ತ ಹೇಮರಾಜ್ ಕರ್ಕೇರರನ್ನು "ಮಾಧ್ಯಮಶ್ರೀ ಗೌರವ"ಕೊಟ್ಟು ಪುರಸ್ಕರಿಸಲಾಯಿತು. [೬], [೭]

ಉಲ್ಲೇಖಗಳು[ಬದಲಾಯಿಸಿ]

  1. Mumbai: Senior journalist Hemaraj N Karkera selected for 'Madhyamashree' award, Sat, Apr 8 2017 05:07
  2. ಚಂದ್ರಶೇಖರ ಪಾಲೆತ್ತಾಡಿಯವರ ಜೀವನ ವಿವರಗಳ ಆಕರ : "ನಾನು..ನನ್ನ ಸ್ವಗತ"..(ಚಂದ್ರಶೇಖರ ಪಾಲೆತ್ತಾಡಿ ಆತ್ಮ ಕಥೆ) ಪ್ರಕಟಣೆ : ಪಾಲೆತ್ತಾಡಿ ಅಭಿನಂದನ ಸಮಿತಿ, ಹಾಗೂ ಮುಂಬೈ,ಕನ್ನಡವಿಭಾಗ, ಮುಂಬೈವಿಶ್ವವಿದ್ಯಾಲಯ
  3. kannadiga worl, Nov, 11, 2014, Journalist Hemraj karkera and Four others felicitated in Mumbai metro
  4. ಕನ್ನಡಿಗ ವರ್ಲ್ಡ್ ಪತ್ರಿಕೆ, ೧೧, ನವೆಂಬರ್ ೨೦೧೪, 'ನಗರದಲ್ಲಿ ಪತ್ರಕರ್ತರಾದ ಹೇಮರಾಜ್ ಕರ್ಕೇರ ಸಹಿತ ಐವರು ಸಾಧಕರಿಗೆ ಸನ್ಮಾನ'
  5. ಹಿರಿಯ ಪತ್ರಕರ್ತ ಹೇಮರಾಜ್‌ ಕರ್ಕೇರ ಅವರಿಗೆ ಮಾಧ್ಯಮಶ್ರೀ ಪ್ರಶಸ್ತಿ ಪ್ರದಾನ, April, 2017, News kannada[ಶಾಶ್ವತವಾಗಿ ಮಡಿದ ಕೊಂಡಿ]
  6. Mumbai: Senior journalist Hemaraj N Karkera selected for 'Madhyamashree' award, April 8, 2017
  7. [http://canaranews.com/kannada/3820/#.XCeRpEpuJNA ಹಿರಿಯ ಪತ್ರಕರ್ತ ಹೇಮರಾಜ್ ಕರ್ಕೇರ ಅವರಿಗೆ `ಮಾಧ್ಯಮಶ್ರೀ' ಪ್ರಶಸ್ತಿ ಪ್ರದಾನ, Canara news, 11 Apr 2017, By : Ronida Mumbai]