ಹೆನ್ರಿ ಬ್ರಿಗ್ಸ್
ಹೆನ್ರಿ ಬ್ರಿಗ್ಸ್ (1561-1630) ಒಬ್ಬ ಇಂಗ್ಲಿಷ್ ಗಣಿತವಿದ.
ಜೀವನ
[ಬದಲಾಯಿಸಿ]ಉತ್ತರ ಹ್ಯಾಲಿಫ್ಯಾಕ್ಸಿನ ವಾರ್ಲಿವುಡ್ ಎಂಬಲ್ಲಿ ಜನನ. ಆಕ್ಸ್ಫರ್ಡಿನಲ್ಲಿ ಮರಣ (29 ಜನವರಿ 1630). ವಿದ್ಯಾಭ್ಯಾಸ ಕೇಂಬ್ರಿಜಿನಲ್ಲಿ ನಡೆಯಿತು. ಈತ 1596 ರ ತನಕ ಅಲ್ಲಿಯೇ ಪಾಠಪ್ರವಚನ ನಡೆಸುತ್ತಿದ್ದ. ಅನಂತರ ಲಂಡನ್ ಮತ್ತು ಆಕ್ಸ್ಫರ್ಡ್ಗಳಲ್ಲಿ ಗಣಿತವಿಜ್ಞಾನದ ಪ್ರಾಧ್ಯಾಪಕನಾಗಿ ಕೆಲಸಮಾಡಿದ. ಲಘುಗಣಕಗಳ ಬಗ್ಗೆ ಈತ ವಿಶೇಷ ಪರಿಶ್ರಮ ವಹಿಸಿ, ಸ್ಕಾಟ್ಲೆಂಡಿನ ಗಣಿತವಿದ ಜಾನ್ ನೇಪಿಯರ್ (1550-1617) ಸೂಚಿಸಿದ್ದ ಆಧಾರದ ಕೋಷ್ಟಕಗಳ (base tables) ಬದಲಿಗೆ 10 ಆಧಾರದ ಲಘುಗಣಕ ಕೋಷ್ಟಕಗಳನ್ನು ರಚಿಸಿದ. ಲೆಕ್ಕಾಚಾರಗಳಿಗೆ ಸಂಬಂಧಿಸಿದಂತೆ ದಶಮಾಂಶದ 14ನೆಯ ಸ್ಥಾನದವರೆಗೂ (14 decimal places) ನಿಖರತೆ ನೀಡಬಲ್ಲ ಕೋಷ್ಟಕದ ರಚನೆಯಲ್ಲೂ ಶ್ರಮವಹಿಸಿದ.[೧] ಪ್ರಚಲಿತವಾಗಿರುವ ದೀರ್ಘ ಭಾಗಾಹಾರದ ಕ್ರಮವನ್ನು ರೂಪಿಸಿದವ ಈತ.[೨] ಇವನು ರಚಿಸಿದ ಅರಿತ್ಮೆಟಿಕ ಲಾಗರಿತಮಿಕ ಗ್ರಂಥ 1624ರಲ್ಲಿ ಪ್ರಕಟವಾಯಿತು; ಮತ್ತೊಂದು ಕೃತಿ ಟ್ರಿಗೊನೊಮೆಟ್ರಿಕ್ ಬ್ರಿಟಾನಿಕ ಇವನ ಮರಣಾನಂತರ ಪ್ರಕಟವಾಯಿತು.
ಬ್ರಿಗ್ಸ್ (ಅರ್ಧಕೋನ) ಸೂತ್ರಗಳು
[ಬದಲಾಯಿಸಿ]a, b, c ಗಳು ಯಾವುದೇ ತ್ರಿಭುಜವೊಂದರ ಬಾಹುಗಳಾಗಿದ್ದು (sides) p ಅದರ ಅರ್ಧಪರಿಧಿಯಾಗಿರಲಿ (half perimeter). ಬಾಹುಗಳ ಅಭಿಮುಖ ಕೋನಗಳು (opposite angles) ಅನುಕ್ರಮವಾಗಿ ಮತ್ತು ಗಳಾಗಿರಲಿ. ಬಾಹು, ಅಭಿಮುಖ ಕೋನ ಮತ್ತು ಅರ್ಧಪರಿಧಿ ಇವುಗಳಿಗೆ ಇರುವ ತ್ರಿಕೋಣಮಿತೀಯ ಸಂಬಂಧ:
ಇದೇ ರೀತಿ ಮತ್ತು ಗಳಿಗೆ ಕೂಡ. ಜೊತೆಗೆ
ಮತ್ತು ಎಂಬ ಸಂಬಂಧಗಳೂ ಇವೆ. ಇವಕ್ಕೆ ಬ್ರಿಗ್ಸ್ ಸೂತ್ರಗಳೆಂದು ಹೆಸರಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ One or more of the preceding sentences incorporates text from a publication now in the public domain: Chisholm, Hugh, ed. (1911). . Encyclopædia Britannica. Vol. 4 (11th ed.). Cambridge University Press. p. 566.
{{cite encyclopedia}}
: Cite has empty unknown parameters:|separator=
and|HIDE_PARAMETER=
(help); Invalid|ref=harv
(help) - ↑ "Henry Briggs - Oxford Reference".
{{cite journal}}
: Cite journal requires|journal=
(help)
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಹೆನ್ರಿ ಬ್ರಿಗ್ಸ್ at Encyclopædia Britannica
- 400 Years of Geometry at Gresham College, lecture by Robin Wilson on Henry Briggs, given at Gresham College, 14 May 2008 (available for video, audio and text download)
- O'Connor, John J.; Robertson, Edmund F., "Henry Briggs", MacTutor History of Mathematics archive, University of St Andrews
- Pages using duplicate arguments in template calls
- Pages using the JsonConfig extension
- CS1 errors: empty unknown parameters
- CS1 errors: invalid parameter value
- 1911 ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ
- Wikipedia articles incorporating text from the 1911 Encyclopædia Britannica
- CS1 errors: missing periodical
- ಗಣಿತಜ್ಞರು
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ