ದಶಮಾನ ಪದ್ಧತಿ
Jump to navigation
Jump to search
![]() | ಈ ಲೇಖನವು ಅಪೂರ್ಣವಾಗಿದೆ. |
ದಶಮಾನ ಪದ್ಧತಿ ಸಂಖ್ಯೆಗಳನ್ನು ಬರೆಯುವ ಒಂದು ಪದ್ಧತಿ. ಇದರಲ್ಲಿ ಹತ್ತು ಅಂಕೆಗಳು ಇರುತ್ತವೆ. ಅವುಗಳೆಂದರೆ ೧,೨,೩,೪,೫,೬,೭,೮,೯ ಮತ್ತು ೦. ಇವುಗಳನ್ನು ಉಪಯೋಗಿಸಿ ಸಣ್ಣ ಭಿನ್ನರಾಶಿಯಿಂದ ಎಷ್ಟೇ ದೊಡ್ಡ ಸಂಖ್ಯೆಯನ್ನಾದರೂ ಬರೆಯಬಹುದು.ಈ ಸಂಖ್ಯೆಗಳ ಮೌಲ್ಯವು ಅವುಗಳನ್ನು ಇರಿಸಿದ ಸ್ಥಾನದ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ ೩ರ ಮೌಲ್ಯವು ೩೮೦ ಮತ್ತ್ತು ೧೧೩ ರಲ್ಲಿ ಸಂಪೂರ್ಣವಾಗಿ ಬೇರೆ ಬೇರೆಯಾಗಿರುತ್ತದೆ ಏಕೆಂದರೆ ಈ ಎರಡೂ ಸಂಖ್ಯೆಗಳಲ್ಲಿ ೩ರ ಸ್ಥಾನ ಬೇರೆ ಬೇರೆಯಾಗಿದೆ. ಆದುದರಿಂದ ಇದನ್ನು "ಸ್ಥಾನ ಮೌಲ್ಯ ವ್ಯವಸ್ಥೆ" ಎಂದೂ ಕರೆಯುತ್ತಾರೆ. ದಶಮಾನ ಪದ್ಧತಿಯು ಆಧುನಿಕ ಜಗತ್ತು ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸುವ ಸಂಖ್ಯಾಪದ್ಧತಿಯಾಗಿದೆ.ಇದನ್ನು ಹಿಂದೂ ಅರೆಬಿಕ್ ಪದ್ಧತಿ ಎಂದೂ ಕರೆಯುತ್ತಾರೆ.