ಹೀಕ್ ಕಮೆರ್ಲಿಂಗ್ ಒನ್ನೆಸ್
ಹೀಕ್ ಕಮೆರ್ಲಿಂಗ್ ಒನ್ನೆಸ್ | |
---|---|
ಜನನ | Heike Kamerlingh Onnes ೨೧ ಸೆಪ್ಟೆಂಬರ್ ೧೮೫೩ Groningen, Netherlands |
ಮರಣ | 21 February 1926 Leiden, Netherlands | (aged 72)
ರಾಷ್ಟ್ರೀಯತೆ | Netherlands |
ಕಾರ್ಯಕ್ಷೇತ್ರ | ಭೌತಶಾಸ್ತ್ರ |
ಸಂಸ್ಥೆಗಳು | University of Leiden Delft Polytechnic |
ಅಭ್ಯಸಿಸಿದ ವಿದ್ಯಾಪೀಠ | Heidelberg University University of Groningen |
ಡಾಕ್ಟರೇಟ್ ಸಲಹೆಗಾರರು | Rudolf Adriaan Mees |
Other academic advisors | Robert Bunsen Gustav Kirchhoff Johannes Bosscha |
ಡಾಕ್ಟರೇಟ್ ವಿದ್ಯಾರ್ಥಿಗಳು | Jacob Clay Claude Crommelin Wander de Haas Gilles Holst Johannes Kuenen Remmelt Sissingh Ewoud van Everdingen Jules Verschaffelt Pieter Zeeman |
ಪ್ರಸಿದ್ಧಿಗೆ ಕಾರಣ | Onnes-effect Superfluidity Superconductivity Virial Equation of State |
ಗಮನಾರ್ಹ ಪ್ರಶಸ್ತಿಗಳು | Matteucci Medal (1910) Rumford Medal (1912) Nobel Prize in Physics (1913) Franklin Medal (1915) |
ಹೀಕ್ ಕಮೆರ್ಲಿಂಗ್ ಒನ್ನೆಸ್ ೨೧ ಸೆಪ್ಟೆಂಬರ್ ೧೮೫೩ – ೨೧ ಫೆಬ್ರುವರಿ ೧೯೨೬) ನೆದರ್‍ಲ್ಯಾಂಡ್ದೇಶದ ಭೌತಶಾಸ್ತ್ರಜ್ಞ ಹಾಗೂ ನೋಬೆಲ್ ಪ್ರಶಸ್ತಿಪಡೆದ ವಿಜ್ಞಾನಿ.ಅಧಿವಾಹಕತೆ(superconductivity)ಯ ಪರಿಶೋಧನೆಗಾಗಿ ಇವರಿಗೆ ೧೯೧೩ನೆಯ ಸಾಲಿನ ಭೌತಶಾಸ್ತ್ರ ನೋಬೆಲ್ ಪ್ರಶಸ್ತಿಯನ್ನು ನೀಡಲಾಯಿತು.[೧]
ಬಾಲ್ಯ ಮತ್ತು ಜೀವನ
[ಬದಲಾಯಿಸಿ]ಹುಟ್ಟಿದ್ದು ಹಾಲೆಂಡಿನ ಗ್ರ್ಯೂನಿಂಗೆನ್ ನಗರದಲ್ಲಿ, 1853 ಸೆಪ್ಟೆಂಬರ್ 21ರಂದು. ಅಲ್ಲೇ ಬೆಳೆದು ಭೌತವಿಜ್ಞಾನ ಮತ್ತು ಗಣಿತ ವಿಜ್ಞಾನಗಳನ್ನು ಓದಿದ. 1871ರಂದು ಜರ್ಮನಿಯ ಹೈಡೆಲ್ ಬರ್ಗ್ ನಗರಕ್ಕೆ ಹೋಗಿ ಬುನ್ಸೆನ್ ಮತ್ತು ಕಿರ್ಕಾಫರೊಂದಿಗೆ ಓದಿ ಮತ್ತೆ ಗ್ರ್ಯೂನಿಂಗಿಗೆ ಹಿಂತಿರುಗಿ ಅಲ್ಲಿ 1879ರಂದು ಡಾಕ್ಟೊರೇಟನ್ನು ಪಡೆದ.
ವೃತ್ತಿ ಜೀವನ ಮತ್ತು ಸಂಶೋಧನೆಗಳು
[ಬದಲಾಯಿಸಿ]ಅನಂತರ ಹಾಲೆಂಡಿನ ಲೈಡನ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಯೋಗಿಕ ಭೌತವಿಜ್ಞಾನದ ಪ್ರಾಧ್ಯಾಪಕನಾಗಿ(1882-1923) ಸಾಯುವುದಕ್ಕೆ ಕೆಲವು ವರ್ಷ ಮುಂಚಿನವರೆಗೂ ಇದ್ದ. ಅಲ್ಲಿ 1894ರಂದು ಉಪಕರಣಗಳಿಂದ ಸಜ್ಜಿತವಾದ ಒಂದು ಪ್ರಯೋಗಶಾಲೆಯನ್ನು ಸ್ಥಾಪಿಸಿ ದ್ರವ ಮತ್ತು ಅನಿಲಗಳ ಮೇಲೆ ಒತ್ತಡದ ಮತ್ತು ಅಲ್ಪತಾಪದ ಪರಿಣಾಮಗಳನ್ನು ಕಂಡುಹಿಡಿಯಲು ಪ್ರಾರಂಭಿಸಿದ ನೋಡಿ-(ಅಲ್ಪತಾಪ ಮತ್ತು ಅತಿವಾಹಕತ್ವ). ಇದರ ಫಲವಾಗಿ 1908ರಂದು ಹೀಲಿಯಂ ಅನಿಲವನ್ನು ದ್ರವೀಕರಿಸಿದ (ನೋಡಿ-ಅನಿಲ ದ್ರವೀಕರಣ) ಮತ್ತು 269ಲಿ ಸೆಂ. ಅಥವಾ 1ಲಿ ಏ ತಾಪವನ್ನು ಉಂಟುಮಾಡಿದ. ಇಂಥ ಅಲ್ಪತಾಪದಲ್ಲಿ ಲೋಹಗಳ ಮೇಲೆ ಪ್ರಯೋಗಗಳನ್ನು ನಡೆಸಿ ಅತಿವಾಹಕತ್ವವನ್ನು ಕಂಡುಹಿಡಿದ.
ಪ್ರಶಸ್ತಿಗಳು
[ಬದಲಾಯಿಸಿ]ಈ ರೀತಿ ಓನ್ಸ್ ನಡೆಸಿದ ಅತ್ಯುತ್ತಮ ಅಲ್ಪತಾಪ ಭೌತವಿಜ್ಞಾನದ ಪ್ರಯೋಗಗಳಿಗಾಗಿ ಮತ್ತು ಹೀಲಿಯಂ ಅನಿಲವನ್ನು ದ್ರವೀಕರಿಸಿದ್ದಕ್ಕಾಗಿ ಅವನಿಗೆ 1913ರಂದು ಭೌತವಿಜ್ಞಾನದ ನೊಬೆಲ್ ಪಾರಿತೋಷಕವನ್ನು ಕೊಡಲಾಯಿತು. ಓನ್ಸ್ ಭೌತವಿಜ್ಞಾನದ ವಿಷಯಗಳ ಮೇಲೆ ಅನೇಕ ಪುಸ್ತಕಗಳನ್ನು ಬರೆದಿದ್ದಾನೆ.
ನಿಧನ
[ಬದಲಾಯಿಸಿ]1926 ಫೆಬ್ರವರಿ 21ನೆಯ ತಾರೀಖು ಲೈಡನ್ ನಗರದಲ್ಲಿ ಈತ ಅಸುನೀಗಿದ.
ಉಲ್ಲೇಖಗಳು
[ಬದಲಾಯಿಸಿ]- ↑ "ನೋಬೆಲ್ ಪ್ರಶಸ್ತಿ ೧೯೧೩". Retrieved 2 August 2015.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Nobel Prize, Physics 1913—official site.
- About Heike Kamerlingh Onnes, Nobel-winners.com.
- J. van den Handel, Kamerlingh Onnes, Heike (1853–1926), in Biografisch Woordenboek van Nederland. (In Dutch).
- Leiden University historical web site
- Correspondence with James Dewar, the main competitor in the race to liquid helium.
- Communications from the Kamerlingh Onnes Laboratory (1885–1898).
- Ph.D. students of Kamerlingh Onnes (1885-1924).