ಹಿಂದೂಸ್ಥಾನ್ ಪೆಟ್ರೋಲಿಯಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Hindustan Petroleum Corporation Limited
ಸಂಸ್ಥೆಯ ಪ್ರಕಾರState-owned enterprise
Public (ಬಿಎಸ್‌ಇ: 500104, NSEHINDPETRO)
ಸ್ಥಾಪನೆ1974
ಮುಖ್ಯ ಕಾರ್ಯಾಲಯಮುಂಬೈ, ಮಹಾರಾಷ್ಟ್ರ, India
ಪ್ರಮುಖ ವ್ಯಕ್ತಿ(ಗಳು)S Roy Choudhury
(Chairman & MD)
ಉದ್ಯಮOil
ಉತ್ಪನ್ನFuels
Oils
LPG
ಆದಾಯdecrease ೧,೧೨,೫೧೬.೮೮ ಕೋಟಿ (ಯುಎಸ್$೨೪.೯೮ ಶತಕೋಟಿ) (2010) [೧]
ನಿವ್ವಳ ಆದಾಯIncrease ೧,೪೭೫.೧೫ ಕೋಟಿ (ಯುಎಸ್$೩೨೭.೪೮ ದಶಲಕ್ಷ) (2010) [೧]
ಒಟ್ಟು ಆಸ್ತಿIncrease $12.689 billion (2010)[೨]
ಒಟ್ಟು ಪಾಲು ಬಂಡವಾಳIncrease $2.734 billion (2010) [೨]
ಉದ್ಯೋಗಿಗಳು~11,245 (2009)
ಜಾಲತಾಣwww.hindustanpetroleum.com

ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್ ) (ಬಿಎಸ್‌ಇ: 500104, NSEHINDPETRO), ಭಾರತದ ಮುಂಬಯಿ ನಗರದಲ್ಲಿರುವ ಭಾರತದ ಸರ್ಕಾರದ ಒಡೆತನದ ತೈಲ ಕಂಪನಿಯಾಗಿದೆ ಹಾಗೂ ವಿಶ್ವ ದರ್ಜೆಯ 500 ಕಂಪನಿಗಳ ಭಾರತದ ಫಾರ್ಚೂನ್ 500 ಕಂಪನಿಗಳಲ್ಲಿ 311[೩] ನೆಯ ಸ್ಥಾನ ಗಳಿಸಿದೆ, ಹಣಕಾಸು ವರ್ಷ 2008-09ರಂತೆ ವಾರ್ಷಿಕ ವಹಿವಾಟು 1,16,428 ಕೋಟಿಗಳಷ್ಟಿದೆ ಹಾಗೂ ಮಾರಾಟ/ಆದಾಯ 1,31,802 ಕೋಟಿ ರೂಗಳು (ಯುಎಸ್$ 25,618 ಮಿಲಿಯನ್‌ಗಳು), ಭಾರತದಲ್ಲಿ 20% ಮಾರುಕಟ್ಟೆಯ ಶೇರುಗಳು ಇವೆ ಹಾಗೂ ಮಾರುಕಟ್ಟೆಯಲ್ಲಿ ಪ್ರಭಾವಿ ಅಡಿಗಟ್ಟನ್ನು ಹೊಂದಿದೆ. ಕ್ರಮವಾಗಿ ಹಣಕಾಸು ವರ್ಷ 2007-08ರಲ್ಲಿ: ವಹಿವಾಟು- ರೂ 1,03,837 ಕೋಟಿಗಳು, ಹಾಗೂ ಮಾರಾಟ/ಆದಾಯ- 1,12,098 ಕೋಟಿಗಳು (ಯುಎಸ್$ 25,142 ಮಿಲಿಯನ್).

ಎಚ್‌ಪಿಸಿಎಲ್ ಕಂಪನಿಯು ಪೆಟ್ರೋಲಿಯಂ ಇಂಧನ & ವಿಶೇಷ ಉತ್ಪನ್ನಗಳನ್ನು ತಯಾರಿಸುವಂತಹ 2 ಪ್ರಮುಖ ಸಂಸ್ಕರಣಾಗಾರಗಳನ್ನು ಹೊಂದಿದೆ[೪], ವಾರ್ಷಿಕ 6.5 ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯವಿರುವ (ಎಮ್‌ಎಮ್‌ಪಿಟಿಎ) ಒಂದು ಮುಂಬಯಿ (ಪಶ್ಚಿಮ ಕರಾವಳಿ)ಯಲ್ಲಿ ಹಾಗೂ 8.3 ಎಮ್‌ಎಮ್‌ಪಿಟಿಎ ಸಾಮರ್ಥ್ಯವಿರುವ ಇನ್ನೊಂದು ವಿಶಾಖಪಟ್ಟಣಂ‌ (ಪೂರ್ವ ಕರಾವಳಿ)ನಲ್ಲಿ ಇವೆ.[೫] ಮಂಗಳೂರಿನಲ್ಲಿರುವ ರಾಜ್ಯ ಸರ್ಕಾರದ ಒಡೆತನದ 9 ಎಮ್‌ಎಮ್‌ಪಿಟಿಎ ಸಾಮರ್ಥ್ಯದ ಮಂಗಳೂರು ರೀಫೈನರಿ & ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಮ್‌ಆರ್‌ಪಿಎಲ್) ಕಂಪನಿಯಲ್ಲಿ 16.95% ಷೇರುಗಳನ್ನು ಹೊಂದಿದೆ. ಎಚ್‌ಎಮ್‌ಇಎಲ್ ಸ್ವಾಮ್ಯದಲ್ಲಿ ಪಂಜಾಬ್‌ನ ಬಟಿಂಡಾದಲ್ಲಿ 9 ಎಮ್‌ಎಮ್‌ಪಿಟಿಎ ಸಾಮರ್ಥ್ಯದ ಇನ್ನೊಂದು ಸಂಸ್ಕರಣಾಗಾರವು ನಿರ್ಮಾಣವಾಗುತ್ತಿದೆ, ಇದು ಮಿತ್ತಲ್ ಎನರ್ಜಿ ಇನ್ವೆಸ್ಟ್‌ಮೆಂಟ್ಸ್ ಪ್ರೈವೇಟ್ ಲಿಮಿಟೆಡ್‌ನ ಸಹಭಾಗಿತ್ವದಲ್ಲಿದೆ.

ಅಂತರರಾಷ್ಟ್ರೀಯ ಗುಣಮಟ್ಟದ ಲ್ಯೂಬ್ ಆಧಾರದ ತೈಲಗಳನ್ನು ಉತ್ಪಾದಿಸುವ ಭಾರತದ ಅತಿ ದೊಡ್ಡ ಲ್ಯೂಬ್ ಸಂಸ್ಕರಣಾಗಾರವನ್ನು ಎಚ್‌ಪಿಸಿಎಲ್ ಹೊಂದಿದ್ದು ಅದನ್ನು ನಿರ್ವಹಿಸುತ್ತಿದೆ.[೬] 335 ಟಿಎಮ್‌ಟಿ ಸಾಮರ್ಥ್ಯವುಳ್ಳ ಈ ಲ್ಯೂಬ್ ರೀಫೈನರಿಯು ಭಾರತದ ಒಟ್ಟು ಲ್ಯೂಬ್ ತೈಲ ಉತ್ಪಾದನೆಯ 40% ರಷ್ಟು ಉತ್ಪಾದಿಸುತ್ತದೆ. ಪ್ರಸ್ತುತ ಎಚ್‌ಪಿಸಿಎಲ್ ಸುಮಾರು 300+ ಗ್ರೇಡ್‌ಗಳ ಲ್ಯೂಬ್‌ಗಳನ್ನು, ವಿಶೇಷತೈಲಗಳು ಹಾಗೂ ಗ್ರೀಸ್‌ಗಳನ್ನು ತಯಾರಿಸುತ್ತದೆ.

ಎಚ್‌ಪಿಸಿಎಲ್‌ನ ಮಾರುಕಟ್ಟೆ ವಿಭಾಗವು 13 ಝೋನಲ್ ಆಫೀಸ್‌ಗಳನ್ನು ಪ್ರಮುಖ ನಗರಗಳಲ್ಲಿ ಹಾಗೂ 101 ಪ್ರಾದೇಶಿಕ ಕಛೇರಿಗಳನ್ನು[೭] ಹೊಂದಿದ್ದು ಸಪ್ಲೈ & ಡಿಸ್ಟ್ರಿಬ್ಯೂಶನ್ ಇನ್ಫ್ರಾಸ್ಟ್ರಕ್ಚರ್ ಕಾಂಪ್ರೈಸಿಂಗ್ ಟರ್ಮಿನಲ್ಸ್, ಏವಿಯೇಶನ್ ಸರ್ವಿಸ್ ಫೆಸಿಲಿಟೀಸ್, ಎಲ್‍ಪಿಜಿ ಬಾಟ್ಲಿಂಗ್ ಪ್ಲ್ಯಾಂಟ್ಸ್, ಲ್ಯೂಬ್ ಫಿಲ್ಲಿಂಗ್ ಪ್ಲ್ಯಾಂಟ್ಸ್, ಇನ್ಲ್ಯಾಂಡ್ ರಿಲೇ ಡಿಪೋಸ್, ರೀಟೈಲ್ ಔಟ್‌ಲೆಟ್‌ಗಳು (ಪೆಟ್ರೋಲ್ ಪಂಪು) ಹಾಗೂ ಎಲ್‌ಪಿಜಿ & ಲ್ಯೂಬ್ ಡಿಸ್ಟ್ರಿಬ್ಯೂಟರ್ಷಿಪ್‌ಗಳಿಂದ ಮನ್ನಣೆ ಪಡೆದಿದೆ.

ಎಲ್ಲಾ ಕ್ಷೇತ್ರಗಳಲ್ಲೂ ವರ್ಷಕಳೆದಂತೆ ಎಚ್‌ಪಿಸಿಎಲ್‌ನ ಸಾಮರ್ಥ್ಯ ಹೆಚ್ಚಾಗುತ್ತಿದೆ. 1984/85 ರಲ್ಲಿ ಸಂಸ್ಕರಣಾ ಸಾಮರ್ಥ್ಯವು 5.5 ಮಿಲಿಯನ್ ಮೆಟ್ರಿಕ್ ಟನ್ನುಗಳಷ್ಟಿದ್ದು ಈಗ 13.00 ಮಿಲಿಯನ್ ಮೆಟ್ರಿಕ್ ಟನ್ನುಗಳಷ್ಟಾಗಿದೆ. 1984-85ರಲ್ಲಿ ವಾರ್ಷಿಕ ಹಣಕಾಸು ವಹಿವಾಟು 2687 ಕೋಟಿಗಳಷ್ಟಿದ್ದು 2008-09ರ ಹಣಕಾಸು ವರ್ಷದಲ್ಲಿ ರೂ 1,31,802 ಕೋಟಿಗಳಷ್ಟಕ್ಕೆ ಹೆಚ್ಚಾಯಿತು.

ಉತ್ಪನ್ನಗಳು[ಬದಲಾಯಿಸಿ]

 1. ತೈಲ ಉದ್ಯಮದಲ್ಲಿ ಪೆಟ್ರೋಲ್ ಅನ್ನು ಮೋಟಾರ್ ಸ್ಪಿರಿಟ್ (ಎಮ್‌ಎಸ್) ಎಂದು ಕರೆಯುತ್ತಾರೆ. ಭಾರತದೆಲ್ಲೆಡೆ ಇರುವ ಚಿಲ್ಲರೆ ವ್ಯಾಪರದ ಪಂಪುಗಳಿಂದ ಎಚ್‌ಪಿಸಿಎಲ್ ತನ್ನ ಉತ್ಪನ್ನವನ್ನು ಮಾರಾಟ ಮಾಡುತ್ತದೆ. ಇದನ್ನು ಹೆಚ್ಚಾಗಿ ಖರೀದಿಸುವ ಗ್ರಾಹಕರೆಂದರೆ ದಿನನಿತ್ಯ ತಮ್ಮ ಸ್ವಂತ ವಾಹನಗಳನ್ನು ಬಳಸುವವರು.
 2. ತೈಲ ಉದ್ಯಮದಲ್ಲಿ ಡೀಸಲ್ ಅನ್ನು ಹೈ ಸ್ಪಿರಿಟ್ ಡೀಸಲ್(ಎಚ್‌ಎಸ್‌ಡಿ) ಎಂದು ಕರೆಯುತ್ತಾರೆ. ತಮ್ಮ ಚಿಲ್ಲರೆ ವ್ಯಾಪಾರದ ಪಂಪುಗಳು ಅಲ್ಲದೆ ಟರ್ಮಿನಲ್ಲುಗಳು ಹಾಗೂ ಡಿಪೋಗಳಲ್ಲಿ ಎಚ್‌ಪಿಸಿಎಲ್ ಈ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಇದನ್ನು ಬಳಸುವ ಗ್ರಾಹಕರಲ್ಲಿ ದಿನನಿತ್ಯದ ಆಟೋ ಮಾಲೀಕರೂ ಸೇರಿದಂತೆ ಟ್ರಾನ್ಸ್‌ಪೋರ್ಟ್ ಏಜೆನ್ಸಿಗಳು, ಹಾಗೂ ಕೈಗಾರಿಕೆಗಳು ಮುಂತಾದವು ಸೇರಿವೆ.
 3. ಲುಬ್ರಿಕೆಂಟ್ಸ್ [೮] ಎಚ್‌ಪಿಸಿಎಲ್ ಕಂಪನಿಯು ಲುಬ್ರಿಕೆಂಟ್ ಹಾಗೂ ಅದಕ್ಕೆ ಸಂಬಂಧಿಸಿದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಮೊದಲ ಸ್ಥಾನಗಳಿಸಿದೆ. ಈ ಕ್ಷೇತ್ರದಲ್ಲಿ ಸುಮಾರು 30% ನಷ್ಟು ಮಾರುಕಟ್ಟೆಯ ಷೇರುಗಳನ್ನು ಹೊಂದಿದೆ. ಎಚ್‌ಪಿ ಲ್ಯೂಬ್ಸ್‌ನ ಜನಪ್ರಿಯ ಬ್ರ್ಯಾಂಡುಗಳೆಂದರೆ ಲಾಲ್ ಘೋಡಾ, ಮಿಲ್ಸೀ, ಥಂಡಾ ರಾಜಾ, ಕೂಲ್ಗರ್ದ್ ಮುಂತಾದವು.
 4. ಎಲ್‌ಪಿಜಿ [೯] ನಗರ ಪ್ರದೇಶಗಳಲ್ಲಿರುವ ಒಂದು ಜನಪ್ರಿಯ ಬ್ರ್ಯಾಂದ್.
 5. ಭಾರತದ ಎಲ್ಲಾ ಪ್ರಮುಖ ಏರ್‌ಪೋರ್ಟ್‌ಗಳಲ್ಲಿರುವ ಎ‌ಎಸ್‌ಎಫ್ (ಏಸ್ ಸರ್ವೀಸ್ ಫೆಸಿಲಿಟಿ) ಜೊತೆಗೆಏವಿಯೇಷನ್ ಟರ್ಬೈನ್ ಫ್ಯುಯಲ್ [೧೦], ಪ್ರಮುಖ ಏರ್‌ಲೈನ್ಸ್‌ಗಳಿಗೆ ಈ ಎಟಿಎಫ್ ಪೂರೈಸುವಲ್ಲಿ ಎಚ್‌ಪಿಸಿಎಲ್ ಪ್ರಮುಖ ಪಾತ್ರ ವಹಿಸುತ್ತದೆ. ಯುಎಸ್ ಏರ್ ಫೋರ್ಸ್ 1ಗೆ ಇಂಧನ ಪೂರೈಸುವುದಕ್ಕೆ ವಿವಿಧ ಬಗೆಯ ಬೇಡಿಕೆಗಳನ್ನು ಹೊಂದಿದೆ.
 6. ಬಿಟುಮೆನ್
 7. ಫರ್ನೇಸ್ ಆಯಿಲ್

ಸಂಸ್ಕರಣಾಗಾರಗಳು[ಬದಲಾಯಿಸಿ]

ಎಚ್‌ಪಿಸಿಎಲ್ ಕಂಪನಿಯು ಭಾರತದಲ್ಲಿ ಹಲವಾರು ಸಂಸ್ಕರಣಾಗಾರಗಳನ್ನು ಹೊಂದಿದೆ. ಕೆಲವು ಕೆಳಗಿನ ಪಟ್ಟಿಯಲ್ಲಿವೆ:

 1. ಮುಂಬಯಿ ರೀಫೈನರಿ - 5.5 ಮಿಲಿಯನ್ ಮೆಟ್ರಿಕ್ ಟನ್‌ಗಳ (ಎಮ್‌ಎಮ್‌ಟಿ) ಸಾಮರ್ಥ್ಯ
 2. ವಿಶಾಖಪಟ್ಟಣಂ ನಲ್ಲಿರುವ ವಿಶಾಖಪಟ್ಟಣಂ ರೀಫೈನರಿ - 7.5 ಎಮ್‌ಎಮ್‌ಟಿ
 3. ಕರ್ನಾಟಕದ ಮಂಗಳೂರಿನಲ್ಲಿರುವ ಮಂಗಳೂರು ರೀಫೈನರಿ ಪ್ರೈವೇಟ್ ಲಿಮಿಟೆಡ್ - 9.69 ಎಮ್‌ಎಮ್‌ಟಿ (ಎಚ್‌ಪಿಸಿಎಲ್ ಇದರಲ್ಲಿ 16.65 % ಷೇರುಗಳನ್ನು ಹೊಂದಿದೆ).
 4. ಪಂಜಾಬ್‌ನ ಭಟಿಂಡಾದಲ್ಲಿ ಗುರು ಗೋವಿಂದ್ ಸಿಂಗ್ ರೀಫೈನರಿ ಪ್ರಾಜೆಕ್ಟ್ - 9 ಎಮ್‌ಎಮ್‌ಟಿ (ಎಚ್‌ಪಿಸಿಎಲ್ & ಮಿತ್ತಲ್ ಎನರ್ಜಿ ಎರಡೂ ಕಂಪನಿಗಳು ತಲಾ 49% ಷೇರುಗಳನ್ನು ಹೊಂದಿವೆ).

ಅಂತರರಾಷ್ಟ್ರೀಯ ಶ್ರೇಯಾಂಕಗಳು[ಬದಲಾಯಿಸಿ]

 1. 2009ರಲ್ಲಿ ಎಚ್‌ಪಿಸಿಎಲ್ ಫಾರ್ಚೂನ್ ಗ್ಲೋಬಲ್ 500 ಕಂಪನಿ ಪಟ್ಟಿಯಲ್ಲಿ ದರ್ಜೆ ಪಡೆಯಿತು ಹಾಗೂ ಇದು 311 ನೇ ಶ್ರೇಯಾಂಕದಲ್ಲಿತ್ತು.
 1. 2009ರಲ್ಲಿ 1002 ನೇ ಸ್ಥಾನ ಪಡೆದು ಎಚ್‌ಪಿಸಿಎಲ್ ಫೋರ್ಬ್ಸ್ ಗ್ಲೋಬಲ್ 2000 ಪಟ್ಟಿಯಲ್ಲಿ ಸೇರಿತು
 1. 2010ರಲ್ಲಿ ಬ್ರ್ಯಾಂಡ್ ಫೈನಾನ್ಸ್ ಮತ್ತು ದಿ ಎಕನಾಮಿಕ್ಸ್ ಟೈಮ್ಸ್ ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಇದು 10ನೆಯ ಅತಿ ಬೆಲೆಬಾಳುವ ಬ್ರ್ಯಾಂಡ್ ಆಗಿದೆ.[೧೧]

ಗೌರವಗಳು ಹಾಗೂ ಪ್ರಶಸ್ತಿಗಳು 2008[ಬದಲಾಯಿಸಿ]

 1. ಎನ್‌ಡಿಟಿವಿ ಪಾಫಿಟ್ ಬ್ಯುಸಿನೆಸ್ ಲೀಡರ್‌ಶಿಪ್ ಪ್ರಶಸ್ತಿ
 2. ರೀಡರ್ಸ್ ಡೈಜೆಸ್ಟ್ ‘ಟ್ರಸ್ಟೆಡ್ ಬ್ರ್ಯಾಂಡ್ ಏಷಿಯಾ ಪ್ಲಾಟಿನಂ’ ಪ್ರಶಸ್ತಿ
 3. ಗೋಲ್ಡನ್ ಪೀಕಾಕ್ ಕಾರ್ಪೊರೇಟ್ ಗವರ್ನೆನ್ಸ್ ಪ್ರಶಸ್ತಿ 2008
 4. ಸಿಐಒ 100 ಪ್ರಶಸ್ತಿ 2008
 5. ಇಂಡಿಯಾ ಸ್ಟಾರ್ ಪ್ರಶಸ್ತಿ
 6. ಒಐಎಸ್‌ಡಿ ಸೇಫ್ಟಿ ಪ್ರಶಸ್ತಿ
 7. ಹಣಕಾಸು ನಿರ್ವಹಣೇಯಲ್ಲಿ ನ್ಯಾಷನಲ್ ಅವಾರ್ಡ್ ಫಾರ್ ಎಕ್ಸಲೆನ್ಸ್
 8. ಗ್ರೀನ್‌ಟೆಕ್ ಎನ್ವಿರಾನ್ಮೆಂಟ್ ಎಕ್ಸಲೆನ್ಸ್ ಪ್ರಶಸ್ತಿ 2008
 9. ‘ಪೀಪಲ್ ಮ್ಯಾನೇಜ್‌ಮೆಂಟ್’ ನಲ್ಲಿ ಅತ್ಯುತ್ತಮ ಎಚ್‌ಆರ್ ಪ್ರಾಕ್ಟೀಸಸ್

ಪ್ರಗತಿಯಲ್ಲಿರುವ ಪ್ರಮುಖ ಯೋಜನೆಗಳು[ಬದಲಾಯಿಸಿ]

 • ಮುಂಬಯಿ ರಿಫೈನರಿಯಲ್ಲಿ ಹೊಸ ಎಫ್‌ಸಿಸಿಯು
 • ಮುಂಬಯಿ ರಿಫೈನರಿಯಲ್ಲಿ ಲ್ಯೂಬ್ ಆಯಿಲ್ ಬೇಸ್ ಸ್ಟಾಕ್ (ಎಲ್‌ಒಬಿಎಸ್) ಅಪ್ ಗ್ರಡೇಶನ್ ಪ್ರಾಜೆಕ್ಟ್
 • ಮುಂಬಯಿ & ವಿಶಾಖಪಟ್ಟಣಂ ಸಂಸ್ಕರಣಾಗಾರಗಳಲ್ಲಿ ಡೀಸೆಲ್ ಹೈಡ್ರೊ ಟ್ರೀಟಿಂಗ್ (ಡಿಎಚ್‌ಟಿ)
 • ಮುಂಬಯಿ ಸಂಸ್ಕರಣಾಗಾರದಲ್ಲಿ ಹೊಸ ಇಂಟಿಗ್ರೇಟೆಡ್ ಎಫ್ಲುಯೆಂಟ್ ಟ್ರೀಟ್ಮೆಂಟ್ ಪ್ಲ್ಯಾಂಟ್
 • ಸಿಲ್ವೇಸಿಯಾದಲ್ಲಿ ನ್ಯೂ ಗ್ರೀಸ್ & ಸ್ಪೆಶಾಲಿಟಿ ಪ್ರಾಡಕ್ಟ್ಸ್ ಪ್ಲ್ಯಾಂಟ್ ಗ್ರೀಸ್, ಕೂಲೆಂಟ್‌ಗಳು & ಬ್ರೇಕ್ ಫ್ಲುಯಿಡ್‌ಗಳನ್ನು ಉತ್ಪಾದಿಸುವ ಉತ್ತಮ ಮಟ್ಟದ ಕಾರ್ಖಾನೆ. ಸೆಪ್ಟೆಂಬರ್, 2010ರ ಹೊತ್ತಿಗೆ ಕಾರ್ಯಾಚರಣೆ ಪ್ರಾರಂಭ.
 • ಪಂಜಾಬ್‌ನ ಭಟಿಂಡಾದ ಗುರು ಗೋವಿಂದ ರಿಫೈನರಿ ಪ್ರಾಜೆಕ್ಟ್. ಉತ್ಪಾದನೆ - 9 ಎಮ್‌ಎಮ್‌ಪಿಟಿಎ. 2012ರ ಹೊತ್ತಿಗೆ ಕಾರ್ಯಾಚರಣೆ ಪ್ರಾರಂಭವಾಗುತ್ತದೆ.
 • ವಿಶಾಖಪಟ್ಟಣಂನಲ್ಲಿ ವ್ಹೈಟ್ ಆಯಿಲ್ ಟರ್ಮಿನಲ್.

ಉಲ್ಲೇಖಗಳು[ಬದಲಾಯಿಸಿ]

 1. ೧.೦ ೧.೧ "BSE 2010 Data". www.bseindia.com. Retrieved 2010-07-26.
 2. ೨.೦ ೨.೧ Fortune Global 500 2010 Rankings - State Bank of India
 3. ಸಿಎನ್‌ಎನ್ ಮನಿ
 4. "Hindustan Petroleum Corporation Limited Relies on Oracle Database Security Solutions" (PDF). /www.indiaprwire.com. Archived from the original (PDF) on 2016-03-04. Retrieved 2010-07-26.
 5. http://www-03.ibm.com/press/us/en/pressrelease/25041.wss
 6. "HPCL - Company Profile". Companyin.com. Retrieved 2010-07-26.
 7. "Buy HPCL With Target Of Rs 490 | TopNews". Topnews.in. 2010-05-07. Retrieved 2010-07-26.
 8. http://www.hplubes.com HP Lubes
 9. http://www.hpgas.com HP GAS
 10. http://www.hpaviation.in Archived 2019-04-23 at the Wayback Machine. HP Aviation
 11. "India's top 10 brands". business.rediff.com. Retrieved 26 Oct 2010.

ಬಾಹ್ಯ ಕೊಂಡಿಗಳು[ಬದಲಾಯಿಸಿ]