ವಿಷಯಕ್ಕೆ ಹೋಗು

ಹಾಲ್ಮುತ್ತೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಾಲ್ಮುತ್ತೂರು ಗ್ರಾಮ ಕರ್ನಾಟಕ ರಾಜ್ಯದ ಕೊಪ್ಪ ತಾಲ್ಲೂಕಿನಲ್ಲಿದೆ. ಹಾಲ್ಮುತ್ತೂರಿನಲ್ಲಿ ಲೋಕಪರಮೇಶ್ವರಿ ಅಮ್ಮನವರ ದೇವಸ್ಥಾನವಿದೆ. ಆ ದೇವಸ್ಥಾನದಲ್ಲಿ ಏಷ್ಯಾದಲ್ಲಿಯೇ ಎರಡನೇ ಅತೀ ಎತ್ತರದ ಹುತ್ತವಿದೆ. ಇಲ್ಲಿ ಪ್ರತೀ ವರ್ಷ ರಥೋತ್ಸವ ನಡೆಯುತ್ತದೆ.

ಹಾಲ್ಮುತ್ತೂರನ್ನು ತಲುಪಲು ಮಾರ್ಗ: ಕೊಪ್ಪದಿಂದ ಕಮ್ಮರಡಿಗೆ ಹೋಗುವ ಬಸ್ಸುಗಳೆಲ್ಲವೂ ಹಾಲ್ಮುತ್ತೂರಿನ ಮೂಲಕ ಸಾಗುತ್ತವೆ. ಶೃಂಗೇರಿಯಿಂದ ಹೋಗುವುದಾದರೆ ಕಮ್ಮರಡಿಯಲ್ಲಿ ಮಾರ್ಗ ಬದಲಿಸಬೇಕು. ಉಳಿದಂತೆ ಶಿವಮೊಗ್ಗ, ತೀರ್ಥಹಳ್ಳಿ, ಕಮ್ಮರಡಿ ಮೂಲಕ ಹಾಲ್ಮುತ್ತೂರನ್ನು ತಲುಪಬಹುದು.