ವಿಷಯಕ್ಕೆ ಹೋಗು

ಕಮ್ಮರಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಮ್ಮರಡಿ ಎಂಬ ಊರು ಕರ್ನಾಟಕ ರಾಜ್ಯದಲ್ಲಿದೆ. ಈ ಊರು ಅರ್ಧ ಕೊಪ್ಪ ಹಾಗೂ ಇನ್ನರ್ಧ ತೀರ್ಥಹಳ್ಳಿ ತಾಲ್ಲೂಕಿಗೆ ಸೇರುತ್ತದೆ.

ಕಮ್ಮರಡಿಯು ಕೊಪ್ಪ ತಾಲೂಕಿನ ಚಾವಲ್ಮನೆ ಗ್ರಾಮ ಪಂಚಾಯ್ತಿ ಹಾಗು ಭಾಗಶಃ ಅರೇಹಳ್ಳಿ ಗ್ರಾಮ ಪಂಚಾಯ್ತಿ ತೀರ್ಥಹಳ್ಳಿ ತಾಲ್ಲೂಕಿನ ವ್ಯಾಪ್ತಿಗೆ ಸೇರುತ್ತದೆ. ಕಮ್ಮರಡಿಯ ಸುತ್ತಮುತ್ತ ಹತ್ತಾರು ಸಣ್ಣ ಪುಟ್ಟ ಹಳ್ಳಿಗಳಿವೆ.ಇಲ್ಲಿಯ ಜನರ ಮುಖ್ಯ ಉದ್ಯೋಗ ಕೃಷಿ ಹಾಗೂ ವ್ಯಾಪಾರ. ಕಮ್ಮರಡಿಯಲ್ಲಿ ಒಂದು ಸರ್ಕಾರಿ ಆಸ್ಪತ್ರೆ ಇದೆ. ಒಂದು ಸರ್ಕಾರಿ ಹಾಗೂ ಒಂದು ಅನುದಾನಿತ ಪ್ರಾಥಮಿಕ ಶಾಲೆ, ಒಂದು ಸರ್ಕಾರಿ ಹಾಗೂ ಒಂದು ಅನುದಾನಿತ ಪ್ರೌಢ ಶಾಲೆ ಮತ್ತು ಒಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಇದೆ. ಇಲ್ಲಿನ ಮುಖ್ಯ ದೇವಸ್ಥಾನಗಳು ಗಣಪತಿ, ಅಂತರಘಟ್ಟಮ್ಮ ಮತ್ತು ರಾಘವೇಂದ್ರಸ್ವಾಮೀ ದೇವಾಲಯಗಳು.

ಸಂಪರ್ಕ

[ಬದಲಾಯಿಸಿ]

ತೀರ್ಥಹಳ್ಳಿಯಿಂದ ಶೃಂಗೇರಿಗೆ ಹೋಗುವ ಮಾರ್ಗದಲ್ಲಿ ಸುಮಾರು ಇಪ್ಪತ್ತೈದು ಕಿಲೋಮೀಟರ್ ಸಾಗಿದರೆ ಕಮ್ಮರಡಿ ಸಿಗುತ್ತದೆ. ಅಲ್ಲಿಂದ ಕೊಪ್ಪಕ್ಕೆ ಬೇರೆ ರಸ್ತೆ ಇದೆ. ರಾಜಧಾನಿ ಬೆಂಗಳೂರಿನಿಂದ ಕಮ್ಮರಡಿಗೆ ತಲುಪಲು ಎರಡು ಸರ್ಕಾರಿ ಬಸ್‌‌ಗಳಿವೆ. ಉಳಿದಂತೆ ಶಿವಮೊಗ್ಗ, ತೀರ್ಥಹಳ್ಳಿ ಮೂಲಕ ಕಮ್ಮರಡಿ ತಲುಪಬಹುದು. ಕೊಪ್ಪ ಹಾಗೂ ಶೃಂಗೇರಿಗಳಿಂದಲೂ ನೇರ ಬಸ್ ಸೌಲಭ್ಯವಿದೆ.

"https://kn.wikipedia.org/w/index.php?title=ಕಮ್ಮರಡಿ&oldid=752063" ಇಂದ ಪಡೆಯಲ್ಪಟ್ಟಿದೆ