ವಿಷಯಕ್ಕೆ ಹೋಗು

ಹಸ್ತ ಮೈಥುನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಸ್ತಮೈಥುನ ಮನುಷ್ಯರಲ್ಲಿ ಕಂಡುಬರುವ ಒಂದು ಲೈಂಗಿಕಕ್ರಿಯೆ. ಸಂಗಾತಿಯಿಲ್ಲದೆ ಏಕಾಂತದಲ್ಲಿ ಲೈಂಗಿಕ ಇಚ್ಛೆಗಳನ್ನು, ವಾಂಛೆಗಳನ್ನು ಈಡೇರಿಸಿಕೊಳ್ಳಲು ಸ್ವತಃ ತಮ್ಮ ಕೈಯಿಂದ ತಮ್ಮ ಜನನಾಂಗ ಉದ್ರೇಕಿಸಿ ಲೈಂಗಿಕ ಪರಾಕಾಷ್ಠೆ ತಲುಪಿ ಸ್ರವಿಸುವುದನ್ನು ಹಸ್ತಮೈಥುನ ಎನ್ನಲಾಗುತ್ತದೆ. ಒಬ್ಬ ವ್ಯಕ್ತಿ ಲೈಂಗಿಕವಾಗಿ ಉದ್ರೇಕವಾದಾಗ ಸಂಗಾತಿ ಸನಿಹದಲ್ಲಿಲ್ಲದಿದ್ದಾಗ ಅಥವಾ ಲೈಂಗಿಕ ಕ್ರಿಯೆ ನಡೆಸಲು ಅವಕಾಶವಿಲ್ಲದಿದ್ದಾಗ ಸ್ವತಃ ತಮ್ಮ ಕೈಗಳಿಂದ ಅಥವಾ ಲೈಂಗಿಕ ಆಟಿಕೆಗಳಿಂದ ತಮ್ಮ ಜನನಾಂಗಗಳನ್ನು ಮುಟ್ಟಿಕೊಳ್ಳುತ್ತಾ ಉದ್ರೇಕಿಸಿಕೊಂಡು ಸ್ರವಿಸಬಹುದು.

ಸಾಮಾನ್ಯವಾಗಿ ವ್ಯಕ್ತಿಗಳು ಏಕಾಂತದಲ್ಲಿದ್ದಾಗ ಲೈಂಗಿಕ ಕ್ರಿಯೆಯ ಬಯಕೆಯಾಗಿ ಹಸ್ತಮೈಥುನ ದಲ್ಲಿ ತೊಡಗುತ್ತಾರೆ. ಆದರೆ ಸಂಗಾತಿ ಅಥವಾ ಸ್ನೇಹಿತರು ಸನಿಹದಲ್ಲಿದ್ದಾಗ ಪರಸ್ಪರ ಒಪ್ಪಿಗೆ ಇದ್ದರೆ ಪರಸ್ಪರರ ಹಸ್ತಮೈಥುನದಲ್ಲಿ ತೊಡಗಲೂಬಹುದು. ಒಬ್ಬರ ಜನನಾಂಗವನ್ನು ಇನ್ನೊಬ್ಬರು ತಮ್ಮ ಕೈಯಿಂದ ಉಜ್ಜುತ್ತಾ ಉದ್ರೇಕಿಸುತ್ತಾ ಹಸ್ತಮೈಥುನ ಕ್ರಿಯೆ ನಡೆಸಬಹುದು.

ಪುರುಷರಲ್ಲಿ ಹಸ್ತಮೈಥುನ[ಬದಲಾಯಿಸಿ]

ಪುರುಷ ಹಸ್ತಮೈಥುನದಲ್ಲಿ ತೊಡಗಿರುವುದು

ವೈಜ್ಞಾನಿಕ ಅಧ್ಯಯನಗಳ ಪ್ರಕಾರ ಸ್ತ್ರೀಯರಿಗಿಂತ ಹೆಚ್ಚು ಹಸ್ತಮೈಥುನದಲ್ಲಿ ತೊಡಗಿಕೊಳ್ಳುವುದು ಪುರುಷರು. ಸ್ತ್ರೀಯರಿಗಿಂತ ಹೋಲಿಸಿದರೆ ಪುರುಷರು ಲೈಂಗಿಕವಾಗಿ ಆಕರ್ಷಿತರಾಗುವುದಕ್ಕೆ ಬಹಳ ಕಡಿಮೆ ಸಮಯ ತೆಗೆದುಕೊಳ್ಳುತ್ತಾರೆ. ಲೈಂಗಿಕ ಆಕರ್ಷಣೆಗೆ ಒಳಗಾಗಿ ಕಾಮ ವಾಂಛೆ ಪುರುಷನಲ್ಲಿ ಕೆರಳಿದಾಗ ಪುರುಷ ಹಸ್ತಮೈಥುನದಲ್ಲಿ ತೊಡಗಿಕೊಳ್ಳುತ್ತಾನೆ. ಹಸ್ತಮೈಥುನದಲ್ಲಿ ತೊಡಗುವ ಮುನ್ನ ಏಕಾಂತ ಸ್ಥಳ ಬಯಸುವ ಪುರುಷ ಅದಕ್ಕಾಗಿ ಹಾತೊರೆಯುತ್ತಾನೆ. ಏಕಾಂತ ಸ್ಥಳದಲ್ಲಿ ತನ್ನ ಲೈಂಗಿಕ ಕಲ್ಪನೆಗೆ ಜಾರುವ ಮೂಲಕ ಮತ್ತಷ್ಟು ಲೈಂಗಿಕವಾಗಿ ಉದ್ರೇಕಿತನಾಗುತ್ತಾನೆ. ತಾನು ನೋಡಿದ ಲೈಂಗಿಕ ಕ್ರಿಯೆಯ ದೃಶ್ಯಾವಳಿಗಳನ್ನೋ ಅಥವಾ ಅಂದುನೋಡಿದ ಸುಂದರ ಸ್ತ್ರೀಯನ್ನೋ ಅಥವಾ ಮತ್ತಾವುದೇ ಲೈಂಗಿಕವಾಗಿ ಕೆರಳುವ ವಿಚಾರಗಳನ್ನು ಯೋಚಿಸುತ್ತಾ ತನ್ನ ಶಿಶ್ನವನ್ನು ಕೈಯಲ್ಲಿ ಹಿಡಿದು ಹಿಂದೆಮುಂದೆ ಆಡಿಸಿಕೊಳ್ಳಲು ಶುರು ಮಾಡುತ್ತಾನೆ.ಕೈ ಆಡಿಸುವ ವೇಗ ಆರಂಭದಲ್ಲಿ ಕಡಿಮೆಯಿರುತ್ತದೆ ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ಲೈಂಗಿಕ ಪರಾಕಾಷ್ಠೆ ತಲುಪುವಷ್ಟರಲ್ಲಿ ಆ ವೇಗ ಗರಿಷ್ಟ ಮಟ್ಟದಲ್ಲಿರುತ್ತದೆ. ಪರಾಕಾಷ್ಠೆ ತಲುಪಿದ ನಂತರ ಬಿಳಿಯ ಬಣ್ಣದ ವೀರ್ಯ ಪುರುಷನ ಶಿಶ್ನದಿಂದ ಹೊರ ಧುಮುಕುತ್ತದೆ. ಕೆಲವರಿಗೆ ವೀರ್ಯ ರಭಸವಾಗಿ ಹೊರ ಚಿಮ್ಮಿದರೆ ಇನ್ನು ಕೆಲವರಿಗೆ ಸಾಮಾನ್ಯವಾಗಿ ಲೋಳೆಯಂತೆ ಹೊರಬರುತ್ತದೆ. ೧೬-೧೮ ವಯಸ್ಸಿನ ಕೆಳಗಿರುವರಿಗೆ ಹಸ್ತಮೈಥುನದ ನಂತರ ವೀರ್ಯ ಬರದಿದ್ದರೆ ಅದು ಯಾವುದೇ ತೊಂದರೆಯ ಲಕ್ಷಣವಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ವೀರ್ಯ ಉತ್ಪಾದನೆ ಆರಂಭವಾಗುವುದು ಬದಲಾಗಿರುತ್ತದೆ. ೧೮ ರ ನಂತರವೂ ಹಸ್ತಮೈಥುನವಾದ ನಂತರ ವೀರ್ಯ ಬರದಿದ್ದರೆ ವೈದ್ಯರನ್ನು ಭೇಟಿಯಾಗಿ ಸೂಕ್ತ ಸಲಹೆ ಪಡೆಯುವುದು ಒಳಿತು.

ಇಲೆಕ್ಟ್ರಾನಿಕ್ ಹಸ್ತಮೈಥುನ ಉಪಕರಣದ ಮೂಲಕ ಹಸ್ತಮೈಥುನ

ಪ್ರಪಂಚದ ಪುರುಷರಲ್ಲಿ ಶೇ.೯೫ ಕ್ಕೂ ಮೀರಿ ಹಸ್ತಮೈಥುನದಲ್ಲಿ ತೊಡಗುತ್ತಾರೆ. ಆದರೂ ಎಲ್ಲಾ ಪುರುಷರ ಹಸ್ತಮೈಥುನ ಶೈಲಿ ಒಂದೇ ಆಗಿರುವುದಿಲ್ಲ . ಕೆಲವರು ತಮ್ಮ ಶಿಶ್ನವನ್ನು ಮುಷ್ಟಿಯಲ್ಲಿ ಹಿಡಿದು ಹಿಂದೆ ಮುಂದೆ ಆಡಿಸಿಕೊಳ್ಳುತ್ತಾ ಲೈಂಗಿಕ ಉದ್ರೇಕ ತಲುಪುತ್ತಾರೆ, ಇದನ್ನೇ ಮುಷ್ಠಿ ಮೈಥುನ ಎಂದು ಕರೆಯಲಾಗುತ್ತದೆ. ಮತ್ತೆ ಕೆಲವರು ಕೈ ಉಪಯೋಗಿಸುವ ಬದಲು ತಲೆದಿಂಬು ಅಥವಾ ಇನ್ನಿತರ ನಯವಾದ ವಸ್ತುಗಳಿಗೆ ತಮ್ಮ ಶಿಶ್ನವನ್ನು ಉಜ್ಜುತ್ತಾ ಮೈಥುನ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಮಾರುಕಟ್ಟೆಯಲ್ಲಿ ಇತ್ತೀಚಿಗೆ ದೊರೆಯುವ ಲೆಂಗಿಕ ಆಟಿಕೆಗಳು, ವೈಬ್ರೇಟರ್ ಗಳನ್ನೂ ಬಳಸಿ ಕೂಡ ಹಸ್ತಮೈಥುನ ಮಾಡಿಕೊಳ್ಳಲು ಸಾಧ್ಯವಿದೆ.

ಪುರುಷರು ಲೈಂಗಿಕ ವಿಚಾರಗಳೆಡೆಗೆ ಸ್ತ್ರೀಯರಿಗಿಂತ ಹೆಚ್ಚು ಬೇಗ ಆಕರ್ಷಿತರಾಗುವ ಕಾರಣ ಹೆಚ್ಚು ಬಾರಿ ಹಸ್ತಮೈಥುನದಲ್ಲಿ ತೊಡಗುತ್ತಾರೆ. ಶೇ.೪೫ ರಷ್ಟು ಪುರುಷರು ವಾರದಲ್ಲೊಮ್ಮೆಯಾದರೂ ಹಸ್ತಮೈಥುನದಲ್ಲಿ ತೊಡಗುತ್ತಾರೆ. ನೀಲಿಚಿತ್ರ, ಅಥವಾ ಇನ್ನಿತರ ಕಾಮಾಸಕ್ತಿ ಕೆರಳಿಸುವಂತಹ ವಿಷಯಗಳನ್ನು ನೋಡುತ್ತಾ ಹಸ್ತಮೈಥುನದಲ್ಲಿ ತೊಡಗುವರ ಸಂಖ್ಯೆ ಹೆಚ್ಚಿರುವುದು ತಂತ್ರಜ್ಞಾನ ಬೆಳೆದಿದೆ ಎನ್ನುವುದಕ್ಕೆ ಪ್ರಬಲ ಪುರಾವೆ.

ದಿನವೊಂದಕ್ಕೆ ಎರಡು ಅಥವಾ ಹೆಚ್ಚಿಗೆ ಬಾರಿ ಹಸ್ತಮೈಥುನ ಮಾಡಿಕೊಳ್ಳುವ ರೂಡಿಯಾಗಿದ್ದರೆ ಅದು ಹಸ್ತ ಮೈಥುನ ಚಟವೆಂದೇ ಪರಿಗಣಿತವಾಗುವುದು. ಇದು ಪುರುಷರ ಪುರುಷತ್ವದ ಮೇಲೆ ಋಣಾತ್ಮಕ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿನ ಪ್ರಮಾಣದಲ್ಲಿದೆ.

ಸ್ತ್ರೀಯರಲ್ಲಿ ಹಸ್ತಮೈಥುನ[ಬದಲಾಯಿಸಿ]

ಶಿಶ್ನದಂತಹ ವಸ್ತುವನ್ನು ಯೋನಿಯೊಳಗೆ ಆಡಿಸುವ ಮೂಲಕ ಹಸ್ತಮೈಥುನದಲ್ಲಿ ತೊಡಗಿರುವ ಸ್ತ್ರೀ
ಅವಳ ಕೈಯಿಂದ ಹಸ್ತಮೈಥುನ ಮಾಡುವ ಮಹಿಳೆ

ಪುರುಷರಿಗೆ ಹೋಲಿಸಿದರೆ ಸ್ತ್ರೀಯರು ಬೇಗ ಲೈಂಗಿಕತೆಗೆ ಆಕರ್ಷಿತರಾಗುವುದಿಲ್ಲ. ಹಾಗಾಗಿ ಸ್ತ್ರೀಯರಲ್ಲಿ ಹಸ್ತಮೈಥುನದಲ್ಲಿ ತೊಡಗುವರ ಸಂಖ್ಯೆ ಕಡಿಮೆಯೇ ಇದೆ. ಆದರೂ ಅಧ್ಯಯನವೊಂದರ ಪ್ರಕಾರ ಗರಿಷ್ಟ ಶೇ.೫೦ ರಷ್ಟು ಸ್ತ್ರೀಯರು ಹಸ್ತಮೈಥುನ ದಲ್ಲಿ ತೊಡಗುತ್ತಾರೆ. ಪುರುಷರಂತೆ ನಿಗದಿತವಾಗಿ ಹಸ್ತಮೈಥುನ ಮಾಡಿಕೊಳ್ಳದಿದ್ದರೂ ತಿಂಗಳಿಗೊಮ್ಮೆಯಾದರೂ ಮಾಡಿಕೊಳ್ಳುತ್ತಾರೆ.

ಈ ಕ್ರಿಯೆಯಲ್ಲಿ ಸ್ತ್ರೀಯರು ತಮ್ಮ ಯೋನಿಯೊಳಗೆ ಶಿಶ್ನದಂತಹ ವಸ್ತುವನ್ನು(ಉದಾ:ಬದನೆಕಾಯಿ, ಬಾಳೆಕಾಯಿ ಅಥವಾ ಇತ್ತೀಚಿನ ಮಾರುಕಟ್ಟೆಯಲ್ಲಿ ಲಭ್ಯವಿರುವ ಲೈಂಗಿಕ ಆಟಿಕೆಗಳನ್ನು), ಅಥವಾ ತಮ್ಮ ಕೈಬೆರಳನ್ನೋ ಹಾಕಿ ಹಿಂದೆ ಮುಂದೆ ಆಡಿಸಿಕೊಳ್ಳುತ್ತಾರೆ. ಇದರಿಂದ ಯೋನಿಸ್ರಾವವಾಗಿ ಸಂಭೋಗದಂತಹ ಸುಖ ದೊರೆಯುತ್ತದೆ.

ಲೈಂಗಿಕವಾಗಿ ಉದ್ರೇಕವಾಗುವಾಗ ಜನನಾಂಗದಲ್ಲಿ ಕೆಲವು ಲೈಂಗಿಕ ಗ್ರಂಥಿಗಳು ಸ್ರವಿಸಿ ಯೋನಿಯ ಒಳಭಾಗ ಒದ್ದೆಯಾಗುತ್ತದೆ. ಈ ಒದ್ದೆಯೇ ಎಣ್ಣೆಯಂತೆ ಇದ್ದು ಯೋನಿಯೊಳಗೆ ತೋರಿಸಿಕೊಳ್ಳುವ ವಸ್ತುಗಳಿಂದ ಯೋನಿಯ ಒಳಭಾಗ ತರಚುವುದು ಅಥವಾ ನೋವಾಗುವುದನ್ನು ತಡೆಯುತ್ತದೆ. ನಿಜವಾದ ಲೈಂಗಿಕ ಕ್ರಿಯೆಯಲ್ಲಿಯೂ ಪುರುಷರ ಶಿಶ್ನ ಸ್ತ್ರೀಯರ ಯೋನಿಯೊಳಗೆ ಹೋಗುವಾಗ ಈ ಗ್ರಂಥಿಗಳ ಸ್ರಾವವೇ ಎಣ್ಣೆಯಂತೆ ಕಾರ್ಯನಿರ್ವಹಿಸಿ ನೋವಾಗುವುದನ್ನು ತಪ್ಪಿಸುತ್ತದೆ. ಆದರೆ ಲೈಂಗಿಕ ಕ್ರಿಯೆಯಲ್ಲಿ ಪುರುಷರ ಶಿಶ್ನ ಸ್ತ್ರೀಯರ ಕನ್ಯಾಪೊರೆಯನ್ನು ದಾಟಿ ಮುಂದೆ ಹೋಗುತ್ತಿರುತ್ತದೆ. ಈ ಸಂಧರ್ಭದಲ್ಲಿ ಕನ್ಯಾಪೊರೆ ಹರಿದು ನೋವು ಅಥವಾ ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ.

ಆಕರಗಳು[ಬದಲಾಯಿಸಿ]