ವಿಷಯಕ್ಕೆ ಹೋಗು

ಸಂತಾನೋತ್ಪತ್ತಿ ಅಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಜನನಾಂಗ ಇಂದ ಪುನರ್ನಿರ್ದೇಶಿತ)

ಸಂತಾನೋತ್ಪತ್ತಿ ಅಂಗ ಎಂದರೆ ಲೈಂಗಿಕ ಸಂತಾನೋತ್ಪತ್ತಿಯಲ್ಲಿ ತೊಡಗಿಸಲ್ಪಡುವ ಒಂದು ಪ್ರಾಣಿಯ ದೇಹದ ಯಾವುದೇ ಭಾಗ. ಒಟ್ಟಾರೆಯಾಗಿ ಎಲ್ಲ ಸಂತಾನೋತ್ಪತ್ತಿ ಅಂಗಗಳು ಸಂತಾನೋತ್ಪತ್ತಿ ವ್ಯವಸ್ಥೆಯನ್ನು ರೂಪಿಸುತ್ತವೆ. ಗಂಡಿನಲ್ಲಿ ವೃಷಣ ಮತ್ತು ಹೆಣ್ಣಿನಲ್ಲಿ ಅಂಡಾಶಯವನ್ನು ಪ್ರಧಾನ ಸಂತಾನೋತ್ಪತ್ತಿ ಅಂಗಗಳು ಎಂದು ಕರೆಯಲಾಗುತ್ತದೆ.[] ಇತರ ಎಲ್ಲ ಅಂಗಗಳನ್ನು ದ್ವಿತೀಯಕ ಸಂತಾನೋತ್ಪತ್ತಿ ಅಂಗಗಳು ಎಂದು ಕರೆಯಲಾಗುತ್ತದೆ. ಇವುಗಳನ್ನು ಎರಡು ವರ್ಗಗಳಾಗಿ ವಿಭಜಿಸಲಾಗುತ್ತದೆ—ಎರಡೂ ಲಿಂಗಗಳಲ್ಲಿ ಜನನದಿಂದಲೇ ಕಾಣಿಸುವ ಜನನಾಂಗಗಳು ಅಥವಾ ಜನನೇಂದ್ರಿಯಗಳು ಮತ್ತು ಆಂತರಿಕ ಸಂತಾನೋತ್ಪತ್ತಿ ಅಂಗಗಳು.

ಪ್ರಧಾನ ಸಂತಾನೋತ್ಪತ್ತಿ ಅಂಗಗಳು ಗೋನ್ಯಾಡ್‍ಗಳಾಗಿರುತ್ತವೆ, ಅಂದರೆ ಸಂತಾನೋತ್ಪತ್ತಿ ಅಂಗಗಳ ಯುಗ್ಮ. ಇವು ವಂಶಾನುಕ್ರಮವಾಗಿ ಪಡೆಯಬಲ್ಲ ಡಿ.ಎನ್.ಎ ಇರುವ ಸಂತಾನೋತ್ಪತ್ತಿ ಜಂಪತಿಗಳನ್ನು ಉತ್ಪಾದಿಸುತ್ತವೆ. ಜೊತೆಗೆ ಇವು ಬಹುತೇಕ ಪ್ರಮುಖ ಹಾರ್ಮೋನುಗಳನ್ನು ಉತ್ಪಾದಿಸುತ್ತವೆ.

ಸಸ್ತನಿಗಳಲ್ಲಿ ದ್ವಿತೀಯಕ ಸಂತಾನೋತ್ಪತ್ತಿ ಅಂಗಗಳೆಂದರೆ, ಗಂಡುಗಳಲ್ಲಿ ತುಣ್ಣಿ ಮತ್ತು ವೃಷಣ ಕೋಶ; ಮತ್ತು ಹೆಣ್ಣುಗಳಲ್ಲಿ ತುಲ್ಲು ಹಾಗೂ ಅದರ ಅಂಗಗಳು.

ಉಲ್ಲೇಖಗಳು

[ಬದಲಾಯಿಸಿ]
  1. Clark, Robert K. (2005). Anatomy and Physiology: Understanding the Human Body (in ಇಂಗ್ಲಿಷ್). Jones & Bartlett Learning. ISBN 9780763748166. Retrieved 19 February 2018.