ಹಸೀನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಸೀನ, ಗಿರೀಶ್ ಕಾಸರವಳ್ಳಿಯವರು ೨೦೦೪ರಲ್ಲಿ ನಿರ್ದೇಶಿಸಿದ ಚಲನಚಿತ್ರ. ತಾರಾರವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ ಪಾತ್ರಕ್ಕೆ ಅತ್ಯುತ್ತಮ ನಟಿ  ರಾಷ್ಟ್ರ ಪ್ರಶಸ್ತಿ ದೊರೆಯಿತು.  ಈ ಚಿತ್ರಕಥೆಯು ಗಂಡನಿದ ದೂರವಾದ  ಹಸೀನ ಎಂಬ ಹೆಣ್ಣು ಮಗಳ ಬಗ್ಗೆಯಾಗಿದೆ.

ಕಥಾಹಂದರ[ಬದಲಾಯಿಸಿ]

ಈ ಚಲನಚಿತ್ರದ ಕಥೆಯು ಬಾನು ಮುಸ್ತಕ್ ಅವರ ಕರಿ ನಗರಗಳು ಎಂಬ ಕಥೆಯದ್ದಾಗಿದೆ. ಹಸೀನ(ತಾರಾ) ತನ್ನ ತಾಯಿಯ ವಿರೋಧದ ನಡುವೆಯೂ ಯಾಕುಬ್ ಎಂಬ ಒಬ್ಬ ಆಟೋ ಚಾಲಕನನ್ನು ಮದುವೆಯಾಗುತ್ತಾಳೆ. ದಂಪತಿಗಳಿಗೆ ಮೂರು ಹೆಣ್ಣು ಮಕ್ಕಳು ಮುನ್ನಿ, ಶುಬ್ಬಿ ಹಾಗೂ ಹಬೀಬ್ ಜನಿಸುತ್ತಾರೆ.  ತನ್ನ ನಾಲ್ಕನೆ ಮಗುವಿಗೆ ಗರ್ಭಿಣಿಯಾದ ಸಂದರ್ಭದಲ್ಲಿ ಹಸೀನ ಲಿಂಗಪತ್ತೆ ಪರೀಕ್ಷೆ ಮಾಡಿಸುತ್ತಾಳೆ. ಪರೀಕ್ಷೆಯಿಂದ ತನ್ನ ಹುಟ್ಟಲಿರುವ  ಮಗು ಹೆಣ್ಣೆಂದು  ತಿಳಿದ ಹಸೀನಾಳ ಗಂಡ, ಮುಂದೆ ತನ್ನ ಹೆಂಡತಿಯ ಮೇಲೆ ದೌರ್ಜನ್ಯವೆಸಗಲು ಶುರುಮಾಡುತ್ತಾನೆ. ಮುಂದೆ ಒಂದು ದಿನ ತನ್ನ ಸಂಸಾರವನ್ನು ಬಿಟ್ಟು ಹೊಗುತ್ತಾನೆ.

ಪಾತ್ರ[ಬದಲಾಯಿಸಿ]

ಹಸೀನಳಾಗಿ ತಾರಾ.

ಪ್ರಶಸ್ತಿಗಳು[ಬದಲಾಯಿಸಿ]

ಈ ಚಲನಚಿತ್ರವು ಬಿಡುಗಡೆಯಾದ ನಂತರದಿಂದ ಈ ಕೆಳಗಿನ ಪ್ರಶಸ್ತಿಗಳನ್ನು ಪಡೆದಿದೆ.

೨೦೦೪ ರಾಷ್ಟ್ರ ಚಲನಚಿತ್ರ ಪ್ರಶಸ್ತಿ (ಭಾರತ)

  • ಗೆಲುವು - ರಜತ ಕಮಲ ಪ್ರಶಸ್ತಿ - ಅತ್ಯುತ್ತಮ ನಟಿ - ತಾರಾ [೧]
  • ಗೆಲುವು - ರಜತ ಕಮಲ ಪ್ರಶಸ್ತಿ - ಅತ್ಯುತ್ತಮ ವಸ್ತ್ರ ವಿನ್ಯಾಸ - ಇಶ್ರತ್ ನಿಸಾರ್ [೧]
  • ಗೆಲುವು - ರಜತ ಕಮಲ ಪ್ರಶಸ್ತಿ - ಅತ್ಯುತ್ತಮ ಕುಟುಂಬ ಕಲ್ಯಾಣ ಚಲನಚಿತ್ರ  [೧]

ಉಲ್ಲೇಖ[ಬದಲಾಯಿಸಿ]

  1. ೧.೦ ೧.೧ ೧.೨ Awards for Hasina. IMDb.

ಬಾಹ್ಯಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಹಸೀನ&oldid=1168682" ಇಂದ ಪಡೆಯಲ್ಪಟ್ಟಿದೆ