ಹಸನ್ ರೌಹಾನಿ
ಹಸನ್ ರೌಹಾನಿ ಇರಾನ್ ದೇಶದ ರಾಷ್ಟ್ರಪತಿ ಆಗಿ ಕಾರ್ಯ ನಿರ್ವಹಣೆ ಗೈಯ್ಯುತ್ತಿರುವ ರಾಜಕಾರಣಿ.
ಜನನ
[ಬದಲಾಯಿಸಿ]ಹಸನ್ ರೌಹಾನಿ ೧೨ ನವೆಂಬರ್ ೧೯೪೮ರಲ್ಲಿ ಸೊರ್ಖೆಹ್ ಎಮ್ಬಲ್ಲಿ ಹಸನ್ ಫೆರೆಯೆದೌನ್ ಎಂಬ ಹೆಸರಿನಲ್ಲಿ ಜನಿಸಿದರು. [೧]ಇವರ ತಂದೆ ಹಜ್ ಅಸಾದುಲ್ಲ ಫೆರೆಯೆದೌನ್ ಮಸಾಲೆ ಪದಾರ್ಥಗಳ ಅಂಗಡಿ ನಡೆಸುತ್ತಿದ್ದರು. ಹಜ್ ಅಸಾದುಲ್ಲ ಫೆರೆಯೆದೌನ್ ಇರಾನಿನ ಷಾ ರಾಜನ ವಿರುದ್ಧ ಪ್ರತಿಭಟನೆ ನಡೆಸಿ ೨೦ಕ್ಕೂ ಹೆಚ್ಚು ಸಲ ಜೈಲು ಸೇರಿದ್ದರು. ರೌಹಾನಿರಿಗೆ ಬಾಲ್ಯದಿಂದಲೇ ರಾಜಕೀಯ ಚಟುವತಿಕೆ ನಡೆಸಲು ತಂದೆಯೇ ಪ್ರೇರಣೆ.
ಓದು
[ಬದಲಾಯಿಸಿ]ಸೆಮ್ನಂ ಮದ್ರಸಾದಲ್ಲಿ ಓದಿದ ಬಾಲಕ ಹಸನ್, ೧೯೬೯ರಲ್ಲಿ ಟೆಹರಾನ್ ವಿಶ್ವವಿದ್ಯಾಲಯದಲ್ಲಿ ಓದಿ ಕಾನೂನು ಪದವಿ ಪಡೆದರು. ೧೯೭ರಲ್ಲಿ ಇರಾನ್ ಸೈನ್ಯ ಸೇರಿದ ಹಸನ್, ನಿಶಾಪುರ ಎಂಬಲ್ಲಿ ನಿಯುಕ್ತಿಗೊಂಡರು. ೧೯೯೫ರಲ್ಲಿ ಸ್ಕಾಟ್ ಲ್ಯಾಂಡ್ ನಲ್ಲಿನ ಗ್ಲಾಸ್ಗೋ ವಿಶ್ವವಿದ್ಯಾಲಯದಲ್ಲಿ ಎಂ. ಫಿಲ್ ಪಡೆದ ಹಸನ್, ೧೯೯೯ರಲ್ಲಿ ಡಾಕ್ಟರೇಟ್ ಪಡೆದರು. ಅವರ ಅಧ್ಯಯನದ ವಿಷಯ ಇರಾನಿನಲ್ಲಿ ಷರಿಯಾ ಆಡಳಿತದ ಅನುಭವ.
ರಾಜಕೀಯ ಚಟುವಟಿಕೆ
[ಬದಲಾಯಿಸಿ]೧೯೬೫ರಲ್ಲಿ ಇರಾನ್ ದೊರೆ ಮೊಹಮ್ಮದ್ ರೇಜ಼ಾ ಷಾ ಪಹ್ಲವಿ ವಿರುದ್ಧ ಭಾಷಣ ಮಾಡಿದ ಹಸನ್, ಜೈಲು ಸೇರಿದರು. ಅಯಾತುಲ್ಲಾ ರುಹೋಲ್ಲಾ ಖೊಮೇನಿ ಜೊತೆಗೂಡಿ ಇರಾನ್ ಇಸ್ಲಾಂ ಚಳುವಳಿಯನ್ನು ಮೊದಲು ಮಾಡಿದ ಹಸನ್, ಅದಾಗಲೇ ಮೌಲ್ವಿಯಾಗಿ ಕೆಲಸ ಮಾಡುತ್ತಿದ್ದರು. ೧೯೭೭ರ ನವೆಂಬರ್ ನಲ್ಲಿ ಅಯಾತುಲ್ಲಾ ರುಹೋಲ್ಲಾ ಖೊಮೇನಿ ರ ಹಿರಿ ಮಗ ಮುಸ್ತಫ಼ಾ ಖೊಮೇನಿ ಹತ್ಯೆಯನ್ನು ಖಂಡಿಸುವ ಸಮಾರಂಭದಲ್ಲಿ ಮೊದಲ ಬಾರಿಗೆ ಅಯಾತುಲ್ಲಾ ರುಹೋಲ್ಲಾ ಖೊಮೇನಿ ಅವರಿಗೆ ಇಮಾಂ ಎಂದು ಸಂಭೋದನೆ ಮಾಡಿದರು. ಈ ಕೃತ್ಯ, ಹಸನ್ ರಿಗೆ ಜನಪ್ರಿಯತೆ ತಂದು ಕೊಟ್ಟಿತು. ಇರಾನ್ ದೇಶದ ಬೇಹುಗಾರಿಕೆ ದಳವು ಈ ಘಟನೆಯ ನಂತರ ಹಸನ್ ಮೇಲೆ ನಿಗಾ ಇಡಲು ಶುರು ಮಾಡಿತು. ಅಯಾತುಲ್ಲಾ ರುಹೋಲ್ಲಾ ಖೊಮೇನಿ ದೇಶಭ್ರಷ್ಟರಾಗಿದ್ದಾಗಿಯೂ, ಅವರ ಬೆಂಬಲಿಗರಾಗಿ ಕಾಣಿಸಿಕೊಂಡ ಹಸನ್, ಅದಾಗ ಇರಾನ್ ದೊರೆಯ ವಿರೋಧ ಕಟ್ಟಿಕೊಂಡರು. ಗೆಳೆಯರ ಸಲಹೆ ಮೇರೆಗೆ ಫ್ರಾನ್ಸ್ ದೇಶಕ್ಕೆ ಪಲಾಯನ ಮಾಡಿದರು. ಅಲ್ಲಿ ಕೂಡಾ ಸುಮ್ಮ್ನೆ ಇರದೆ, ಇರಾನ್ ವಿದ್ಯಾರ್ಥಿಗಳು ಮತ್ತು ದೇಶವಾಸಿಗಳ ಮನ ಸೆಳೆದರು.
ಇರಾನ್ ಕ್ರಾಂತಿ ಮತ್ತು ಅಂತರ
[ಬದಲಾಯಿಸಿ]೧೯೭೯ರ ಇರಾನ್ ಕ್ರಾಂತಿಯ ನಂತರ ಇರಾನ್ ಸೇನೆಯಲ್ಲಿ ಶಿಸ್ತು ತರುವ ಕೆಲಸಕ್ಕೆ ಷುರುವಿಟ್ಟರು. ಅಯಾತುಲ್ಲಾ ರುಹೋಲ್ಲಾ ಖೊಮೇನಿ ಸರ್ವೋಚ್ಛ ನಾಯಕರಾದ ಕಾರಣ, ಈ ಹೊಣೆ ಹಸನ್ ರಿಗೆ ದೊರಕಿತು. ೧೯೮೦ರಲ್ಲಿ ಇರಾನ್ ಸಂಸತ್ ಆದ ಮಜ್ಲಿಸ್ ಗೆ ಹಸನ್ ಆಯ್ಕೆಯಾದರು. ೧೯೮೦ರಿಂದ ೨೦೦೦ದವರೆಗೆ ಸತತ ೫ ವರ್ಷ ಸಂಸದರಾದ ಹಸನ್, ಮಜ್ಲಿಸ್ ನ ಉಪ ಸಭಾಪತಿಯಾಗಿ, ವಿದೇಶಾಂಗ ಸಮಿತಿ, ರಕ್ಷಣಾ ಸಮಿತಿಯ ಸದಸ್ಯರಾಗಿ ನೀತಿ ನಿರೂಪಣೆಯ ಕೆಲಸ ಮಾಡಿದರು. ೧೯೮೦-೮೩ರ ಅವಧಿಯಲ್ಲಿ ಇರಾನ್ ಸರ್ಕಾರಿ ಟಿವಿಯ ಹೊಣೆ ಹೊತ್ತ ಹಸನ್, ಇರಾನ್ ಅನ್ನು ಇಸ್ಲಾಂ ಗಣರಾಜ್ಯ ಮಾಡುವಲ್ಲಿ ದೊಡ್ಡ ಪಾತ್ರ ನಿರ್ವಣೆ ಮಾಡಿದರು.
ಇರಾಕ್ ಯುದ್ಧ
[ಬದಲಾಯಿಸಿ]೧೯೮೦-೮೮ರ ಇರಾನ್-ಇರಾಕ್ ಯುದ್ಧದ ಸಮಯದಲ್ಲಿ ರಕ್ಷಣಾ ಖಾತೆಯ ಹಲವು ಹೊಣೆಗಳನ್ನು ಹೆಗಲಿಗೆ ಹೊತ್ತ ಹಸನ್, ೧೯೮೮ರಲ್ಲಿ ಸೈನ್ಯದ ಉಪ ಮುಖ್ಯ ದಂಡನಾಯಕರಾದರು. ಮೇ ೧೯೮೬ರಲ್ಲಿ ಅಮೇರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಮೆಕ್ ಫರ್ಲೇನ್ ಸಂಧಾನಕ್ಕೆ ಟೆಹರಾನ್ ಗೆ ಬಂದಾಗ, ಶಸ್ತ್ರಾಸ್ತ್ರ ಖರೀದಿ ಒಪ್ಪಂದಕ್ಕೆ ಹಸನ್ ಮಾತುಕತೆ ನಡೆಸಿದರು. ಇರಾನ್-ಕಾಂಟ್ರಾ ಒಪ್ಪಂದ ಎಂದೇ ಪ್ರಸಿದ್ಧವಾದ ಈ ಒಪ್ಪಂದವನ್ನು ಇರಾನ್ ಕಡೆಯಿಂದ ನಡೆಸಿದ ಮೂವರು ಧುರೀಣರಲ್ಲಿ ಹಸನ್ ಒಬ್ಬರು.
ಇರಾಕ್ ಯುದ್ಧದ ನಂತರ
[ಬದಲಾಯಿಸಿ]೧೯೮೯ರಿಂದ ಸತತವಾಗಿ ೧೬ ವರ್ಷ ಇರಾನಿನ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ದುಡಿದ ಹಸನ್, ಈ ಅವಧಿಯ ಅಧ್ಯಕ್ಷರುಗಳಾದ ಹಷಾಮಿ, ಖಟಾಮಿ ಇಬ್ಬರ ಜೊತೆಗೆಯೂ ಸಮನ್ವಯದಿಂದ ಕಾರ್ಯ ಗೈದರು.
ಅಣ್ವಸ್ತ್ರ ಕಾರ್ಯಕ್ರಮ
[ಬದಲಾಯಿಸಿ]ಹಸನ್ ಇರಾನಿನ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಹೆಚ್ಚು ಜನಪ್ರಿಯರಾದದ್ದು ತಮ್ಮ ಅಣ್ವಸ್ತ್ರದ ನಿಲುವುಗಳಿಗಾಗಿ. ಪಾಶ್ಚಿಮಾತ್ಯ ದೇಶಗಳು ಇರಾನ್, ತನ್ನ ಅಣ್ವಸ್ತ್ರ ಕಾರ್ಯಕ್ರಮವನ್ನು ನಿಲ್ಲಿಸಬೇಕು ಎಂದು ಇರಾನ್ ಮೇಲೆ ಹಲವು ಬಗೆಯ ಒತ್ತಡ, ದಿಗ್ಬಂಧನ ಮತ್ತು ಠರಾವುಗಳನ್ನು ಹೇರಿದರೂ ಸಹಿತ, ಹಸನ್ ಅವೆಲ್ಲವನ್ನೂ ಎದುರಿಸಿದರು. ಹಸನ್, ಸ್ವತಃ ಇರಾನ್ ಅಣ್ವಸ್ತ್ರ ಕಾರ್ಯಕ್ರಮದ ಹೊಣೆ ಹೊತ್ತರು.ಅಲಿ ಲಾರಿಜಾನಿ ಜೊತೆ ಸೇರಿ ಅಣ್ವಸ್ತ್ರ ಪ್ರಸರಣ ನಿಷೇಧ ಒಪ್ಪಂದವನ್ನು ಕಟುವಾಗಿ ವಿರೋಧಿಸಿದ ಹಸನ್, ಪ್ರಪಂಚದ ಪಾಲಿಗೆ ದುಃಸ್ವಪ್ನವಾದರೂ ಸಹಿತ, ಇರಾನಿಗರ ಕಣ್ಣಲ್ಲಿ ಹೀರೋ ಆದರು.[೨] ೨೦೦೫ರಲ್ಲಿ ಮಹಮ್ಮದ್ ಅಹ್ಮದಿನಿನೆಜಾದ್ ಅಧ್ಯಕ್ಷರಾಗಿ ಆಯ್ಕೆಯಾದಾಗಿ, ಹಸನ್ ತಮ್ಮ ಹುದ್ದೆಗೆ ರಾಜೀನಾಮೆ ಇತ್ತರು.೨೦೦೭ರಲ್ಲಿ ಅವರನ್ನು ಮತ್ತೆ ಈ ಹುದ್ದೆಗೆ ನೇಮಕ ಮಾಡಲಾಯಿತು.
ಅಧ್ಯಕ್ಷ ಹುದ್ದೆ
[ಬದಲಾಯಿಸಿ]೨೦೧೩ರ ಚುನಾವಣೆಯಲ್ಲಿ ಹಲವು ಮಂದಿ ಉದಾರವಾದಿ ನಾಯಕರ ಬೆಂಬಲ ಪಡೆದ ಹಸನ್ ಅಧ್ಯಕ್ಷ ಹುದ್ದೆಗೆ ಏರಿದರು.[೩]ಇಶಾಕ್ ಜಹಾಂಗಿರಿರನ್ನು ಉಪ ಅಧ್ಯಕ್ಷರನ್ನಾಗಿಸಿ, ೪ ವರ್ಷದ ಅವಧಿಯ ನಂತರ ೨೦೧೭ರಲ್ಲಿ ಮತ್ತೆ ಬಹುಮತ ಪಡೆದು ಅಧ್ಯಕ್ಷ ಹುದ್ದೆಯನ್ನು ಏರಿದರು. ಅಮೇರಿಕಾದ ದಿಗ್ಬಂಧನಗಳನ್ನು ಮೆಟ್ಟಿ ನಿಂತು, ತೈಲ ವ್ಯಾಪಾರದ ಮೂಲಕ ಇರಾನಿನ ಆರ್ಥಿಕ ಬಿಕ್ಕಟ್ಟನ್ನು ಕಡಿಮೆ ಮಾಡಲು ಹಸನ್ ಪ್ರಯತ್ನ ನಡೆಸಿದರು.[೪] ಭಾರತ ಜೊತೆ ಚಾಬಹಾರ್ ಬಂದರು ನಿರ್ವಹಣೆ ಹಸನ್ ರೌಹಾನಿಯವರ ದಿಟ್ಟ ಯತ್ನವಾಗಿದೆ.ರಷ್ಯಾ, ತರ್ಕಿ ಮತ್ತು ಸಿರಿಯ ಜೊತೆ ಮಧುರ ಸಂಬಂಧ ಏರ್ಪಡಿಸಿ, ಇರಾಕ್ ಅನ್ನೂ ಒಳಗೊಂಡ ಕೂಟವನ್ನು ರಚಿಸುವುದು ಹಸನ್ ರ ಗುರಿ.
ಉಲ್ಲೇಖಗಳು
[ಬದಲಾಯಿಸಿ]- ↑ https://web.archive.org/web/20130515060959/http://www.csr.ir/departments.aspx?lng=en&abtid=09&&depid=106&&semid=283
- ↑ Morello, Carol (26 March 2015). "Final make-or-break moment for Iran nuclear talks". Washington Post.
- ↑ "Hassan Rouhani wins Iran presidential election". BBC News. 14 June 2013.
- ↑ http://www.rajanews.com/detail.asp?id=160319