ವಿಷಯಕ್ಕೆ ಹೋಗು

ಇಶಾಕ್ ಜಹಾಂಗಿರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಶಾಕ್ ಜಹಾಂಗಿರಿ ಪ್ರಸಕ್ತ ಇರಾನ್ ದೇಶದ ಉಪ ಅಧ್ಯಕ್ಷ ಆಗಿ ಕಾರ್ಯ ನಿರ್ವಹಣೆ ಗೈಯ್ಯುತ್ತಿರುವ ರಾಜಕಾರಣಿ.[]

ಇಶಾಕ್ ೨೧ ಜನವರಿ ೧೯೫೮ರಲ್ಲಿ ಕೆರ್ಮನ್ ಪ್ರಾಂತ್ಯದ ಸಿರ್ಜಾನ್ ಎಂಬ ಊರಿನಲ್ಲಿ ಇಶಾಕ್ ಜಹಾಂಗಿರಿ ಕೌಹ್ಶಾಹಿ ಎಂಬ ಹೆಸರಿನಲ್ಲಿ ಜನಿಸಿದರು. ಇಶಾಕ್ ರಿಗೆ ಬಾಲ್ಯದಿಂದಲೇ ರಾಜಕೀಯ ಚಟುವತಿಕೆ ನಡೆಸಲು ತಂದೆಯೇ ಪ್ರೇರಣೆ. ಇರಾನ್ ದೊರೆ ಮೊಹಮ್ಮದ್ ರೇಜ಼ಾ ಷಾ ಪಹ್ಲವಿ ವಿರುದ್ಧ ಛಟುವಟಿಕೆ ಮಾಡಿದ ಕಾರಣ, ಇರಾನ್ ಸೇನೆಯಿಂದ ಘಾಸಿಗೆ ಒಳಗಾದ ಇಶಾಕ್, ವಿದ್ಯಾಭ್ಯಾಸದ ಕಡೆಗೆ ಗಮನ ಇತ್ತರು. ಟೆಹರಾನಿನ ಇಸ್ಲಾಮಿಕ್ ಆಜ಼ಾದ್ ವಿಶ್ವವಿದ್ಯಾಲಯದಲ್ಲಿ ಔದ್ಯೋಗಿಕ ನಿರ್ವಹನೆ ವಿಷಯದಲ್ಲಿ ಡಾಕ್ಟರೇಟ್ ಪಡೆದ ಇಶಾಕ್, ರಾಜಕೀಯ ಚಟುವಟಿಕೆಯಿಂದ ಹಿಂದೆ ಸರಿಯಲಿಲ್ಲ.

ರಾಜಕೀಯ

[ಬದಲಾಯಿಸಿ]

೧೯೭೯ರ ಇರಾನ್ ಕ್ರಾಂತಿಯಲ್ಲಿ ಸಕ್ರಿಯ ಪಾತ್ರ ನಿರ್ವಹಿಸಿದ ಇಶಾಕ್, ೧೯೮೦ರಲ್ಲಿ ಕೆರ್ಮನ್ ಪ್ರಾಂತ್ಯದ ಕೃಷಿ ವಿಭಾಗದ ಉಪ ನಿರ್ದೇಶಕರಾಗಿ ನಿಯುಕ್ತಿ ಗೊಂಡರು. ೧೯೮೨ರಲ್ಲಿ ನಿರ್ದೇಶಕ ಹುದ್ದೆಗೆ ಏರಿದ ಇಶಾಕ್, ೧೯೮೪ರಲ್ಲಿ ಇರಾನ್ ಸಂಸತ್ ಚುನಾವಣೆಗೆ ನಿಂತರು.೨ ಬಾರಿ ಸಂಸತ್ ಗೆ ಆಯ್ಕೆ ಆದ ಇಶಾಕ್, ೧೯೯೨ರಲ್ಲಿ ಇಸ್ಫಹಾನ್ ಪ್ರಾಂತ್ಯದ ರಾಜ್ಯಪಾಲರಾಗಿ ನೇಮಕ ಗೊಂಡರು. ೫ ವರ್ಷ ಆ ಹುದ್ದೆಯನ್ನು ನಿರ್ವಹಣೆ ಮಾಡಿದ ಇಶಾಕ್, ೧೯೯೭ರಲ್ಲಿ ಮೊಹಮದ್ ಖಟಾಮಿ ಸರ್ಕಾರದ ಗಣಿ ಖಾತೆಯ ಸಚಿವರಾಗಿ ನಿಯುಕ್ತಿಗೊಂಡರು.೨೦೦೫ರವರೆಗೆ ಸತತ್ವಾಗಿ ಅದೇ ಹುದ್ದೆಯಲ್ಲಿ ಮುಂದುವರಿದ ಇಶಾಕ್, ಮಹಮ್ಮದ್ ಅಹ್ಮದಿನಿನೆಜಾದ್ ಅಧ್ಯಕ್ಷರಾಗಿ ಆಯ್ಕೆಯಾದಾಗ ರಾಜೀನಾಮೆ ಇತ್ತರು.

ಅಧ್ಯಕ್ಷ

[ಬದಲಾಯಿಸಿ]

೨೦೦೮ರಲ್ಲಿ ಇಶಾಕ್ ಅಧ್ಯಕ್ಷ ಹುದ್ದೆಗೆ ಚುನಾವಣೆಗೆ ನಿಲ್ಲುವರು ಎಂಬ ವದಂತಿ ಹಬ್ಬಿದಾಗ, ಇಶಾಕ್ ಅದನ್ನು ನಿರಾಕರಿಸಿದರು.[] ೨೦೧೩ರಲ್ಲಿ ಅಕ್ಬರ್ ರಫ್ಸಂಜಾನಿ ಪರವಾಗಿ ಪ್ರಚಾರ ಮಾಡಿದ ಹಸನ್, ರಫ್ಸಂಜಾನಿರವರ ರಾಜಕೀಯ ಪ್ರಭಾರಿಯಾಗಿ ಕೆಲಸ ಮಾಡಿದರು.೨೦೧೩ರ ಜುಲೈನಲ್ಲಿ ಅಧ್ಯಕ್ಷರಾಗಿ ಆಯ್ಕೆಗೊಂಡ ಹಸನ್ ರೌಹಾನಿ, ಇಶಾಕ್ ರನ್ನು ಪ್ರಥಮ ಉಪ ಅಧ್ಯಕ್ಷ ಹುದ್ದೆಗೆ ನೇಮಕ ಮಾಡಿದರು.

ಆಡಳಿತ

[ಬದಲಾಯಿಸಿ]

ಆರ್ಥಿಕ ದಿಗ್ಬಂಧನ ಮತ್ತು ತೈಲ ಬೆಲೆ ಇಳಿಕೆಗಳ ಅವಳಿ ಹೊಡೆತಗಳು ಇರಾನ್ ಆರ್ಥಿಕ ಪರಿಸ್ಥಿತಿಯನ್ನು ಘಾಸಿ ಗೊಳಿಸಿವೆ. ಅಣ್ವಸ್ತ್ರ ಕಾರ್ಯಕ್ರಮವನ್ನು ಹಿಂದೆ ಪಡೆಯದ ಹೊರತು ಈ ಯಾವುದೇ ಕ್ರಮಗಳನ್ನು ಹಿಂದೆ ಪಡೆವ ಮಾತೇ ಇಲ್ಲ ಎಂದು ಅಮೇರಿಕಾ ಮತ್ತು ಯುರೋಪ್ ಒಕ್ಕೂಟ ಸರ್ಕಾರಗಳು ಹೇಳುತ್ತಿವೆ. ಉಪ ಅಧ್ಯಕ್ಷರಾಗಿ ಪ್ರಪಂಚದ ಕಣ್ಣಿಗೆ ಇರಾನ್ ನೀತಿ ನಿರೂಪಣೆ ಮಾಡುತ್ತಿರುವ ಇಶಾಕ್, ಆರ್ಥಿಕ ಹೊರೆಯ ಕಾರಣದಿಂದ ಯಾವುದೇ ಕಾರಣಕ್ಕೂ ಅಣ್ವಸ್ತ್ರಗಳನ್ನು ತಯಾರಿಸುವ ಕಾರ್ಯಕ್ರಮಕ್ಕೆ ನಿಲುಗಡೆ ಉಂಟು ಮಾಡುವುದಿಲ್ಲ ಎಂಬ ನಿಲುವಿಗೆ ಅಂಟಿಕೊಂಡಿದ್ದಾರೆ. ತಮ್ಮ ರಾಷ್ತ್ರದ ಸಾರ್ವಭೌಮತೆಯನ್ನು ಪ್ರಶ್ನಿಸುವ ಮತ್ತು ದೇಶದ ಸೈನಿಕ ಕಾರ್ಯಕ್ರಮಗಳನ್ನು ವಿರೊಧಿಸುವ ಯಾವುದೇ ನಡೆಗೆ ತಮ್ಮ ವಿರೋಧ ಇದೆ ಎಂದು ಪ್ರತಿಪಾದನೆ ಮಾಡುವ ಇಶಾಕ್, ತೈಲ ಒಂದೇ ಅಲ್ಲದೆ, ಇರಾನಿನ ಖನಿಜ ಸಂಪತ್ತು ಮತ್ತು ರಾಷ್ಟ್ರದ ಜನತೆಯ ಸ್ವಾಭಿಮಾನವು ಈ ಕಷ್ಟದ ದಿನಗಳ ದುರ್ಭರ ಸ್ಥಿತಿಯಿಂದ ಹೊರತರೆಲಿದೆ ಎಂದು ನುಡಿಯುತ್ತಾರೆ. []

೨೦೧೭ರ ಅಧ್ಯಕ್ಷ ಚುನಾವಣೆ

[ಬದಲಾಯಿಸಿ]

೨೦೧೭ರಲ್ಲಿ ಇಶಾಕ್ ಅಧ್ಯಕ್ಷ ಹುದ್ದೆಗೆ ಚುನಾವಣೆಗೆ ನಿಲ್ಲುವ ಮಾತುಗಳು ಕೇಳಿ ಬಂದಾಗ, ಅದನ್ನು ತಳ್ಳಿ ಹಾಕದ ಇಶಾಕ್, ಏಪ್ರಿಲ್ ೨೦೧೭ರ ವರೆಗೆ ಉನಾವಣೆಗೆ ಸ್ಪರ್ಧಿಸುವ ಉಮೇದಿನಲ್ಲಿಯೇ ಇದ್ದರು.[] ಆದರ, ಅವರ ವಿರೋಧಿಗಳು, ಇದು ಹಸನ್ ರೌಹಾನಿಯವರಿಗೆ ವಿರೋಧ ವ್ಯಕ್ತ ಮಾಡಿ, ಕಡೆ ಘಳಿಗೆಯಲ್ಲಿ ಅವರ ಪರ ನಿಂತು, ಉಮೇದುವಾರಿಕೆ ಹಿಂಪಡೆವ ತಂತ್ರ ಎಂದು ಟೀಕಿಸಿದರು. ಈ ಸಂದೇಹ ನಿಜವಾಯಿತು. ಇಶಾಕ್, ಮೇ ೨೦೧೭ರಲ್ಲಿ ತಾವು ಹಸನ್ ಪುನರಾಯ್ಕೆಗೆ ಬದ್ಧ ಆಗಿ ಇರುವುದಾಗಿಯೂ, ತಮ್ಮ ಉಮೇದುವಾರಿಕೆಯನ್ನು ಹಿಂಪಡೆಯುವುದಾಗಿಯೂ ಘೋಷಣೆ ಮಾಡಿದರು.[] ೨೦೧೭ರಲ್ಲಿ ಹಸನ್ ರೌಹಾನಿ ಚುನಾವಣೆ ಗೆದ್ದು ಮತ್ತೊಂದು ಅವಧಿಗೆ ಇಶಾಕ್ ರನ್ನೇ ಪ್ರಥಮ ಉಪ ಅಧ್ಯಕ್ಷ ಹುದ್ದೆಗೆ ಮರು ನೇಮಕ ಮಾಡಿದರು.[]


ಉಲ್ಲೇಖಗಳು

[ಬದಲಾಯಿಸಿ]